ಇಬ್ಬರೂ ಪರಸ್ಪರ ಪ್ರೀಸುತ್ತಿದ್ದರು. ಸುಮಾರು, ಮೂರು ವರ್ಷಗಳಿಂದಾ ಅವರಿಬ್ಬರ ಪ್ರೀತಿ, ಪ್ರೇಮ, ಪ್ರಣಯ ಸಾಗಿತ್ತು! ಮುಖೇಶ ನೋಡಲು ಸುಂದರವಾಗಿದ್ದ. ಅವನ ಪ್ರೀತಿಯ ಬಲೆಗೆ ಬಿದ್ದಿದ್ದ, ಸವಿತಾ ಕೂಡಾ ನೋಡಲು ಸುಂದರಿಯಾಗಿದ್ದಳು.
ಬಿಕಾಂ ಓದುತ್ತಿದ್ದ ಈ ಜೋಡಿಗಳು ಒಬ್ಬರನೊಬ್ಬರು ಪರಿಚಿತರಾಗಲು ಆರು ತಿಂಗಳು ಬೇಕಾಯಿತು. ಅದೇ ತಾನೇ ಪಿಯುಸಿ ಪೂರ್ಣ ಮಾಡಿ ಪದವಿ ಕಾಲೇಜಿಗೋಸ್ಕರ ಆ ಊರನ್ನು ಬಿಟ್ಟು ಸಾತನೂರಿಗೆ ಹೋಗುವ ಅನಿವಾರ್ಯತೆ ಇತ್ತು! ಹೆಣ್ಣು ಮಗಳನ್ನು ಹೆಚ್ಚಿನ ವಿದ್ಯಾಬ್ಯಾಸ ಮಾಡಿಸಲು ಒಪ್ಪದ ಸವಿತಾಳ ಅಮ್ಮ ರಾಜೇಶ್ವರಿ ಮಗಳನ್ನು ಮನೆಯಲ್ಲಿ ಇಟ್ಟುಕೊಂಡು ಅಡುಗೆ ಮನೆ ಕೆಲಸ ಕಲಿಸಿ ಸಭ್ಯ ಗೃಹಣಿ ಮಾಡುವ ಉದ್ದೇಶ ರಾಜೇಶ್ವರಿಯದಾಗಿತ್ತು.
ಆದರೆ ತಂದೆ ಮಹದೇವಯ್ಯ ಮಗಳನ್ನು ಉನ್ನತ ವ್ಯಾಸಂಗ್ ಮಾಡಿಸಿ ಅವಳಿಗೊಬ್ಬ ತಕ್ಕ ಸರಕಾರಿ ನೌಕರಿ ಮಾಡುವ ಅಳಿಯನನ್ನ ಹುಡುಕುವ ತವಕ ಅವನದಾಗಿತ್ತು.
ಈಗೇ ತಂದೆ ತಾಯಿಯರ ಬೇರೆ ಬೇರೆ ವಿಚಾರಗಳಿಂದ ಸವಿತಾ ತನ್ನ ವಿದ್ಯಾಬ್ಯಾಸಕ್ಕೆ ತೊಂದರೆಯಾಗುವದು ಎಂದು ಅರಿತು ತಂದೆಯನ್ನು ಬೇಟಿ ಮಾಡಿ ಪಧವಿ ಪೂರ್ಣಗೋಳಿಸಲು ಅನುಮತಿ ನೀಡಬೇಕು ಎಂದು ಒಪ್ಪಿಗೆ ಪಡೆದು ಬಿಕಾಂ ಮಾಡಲು ಸಾತನೂರಿನ ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆಯುತ್ತಾಳೆ.
ಕಾಲೇಜು ಆರಂಭಗೊಂಡು ಕ್ಲಾಸ್ ಗಳು ಕೂಡಾ ನಡೆಯುತ್ತಾ ಅಬ್ಯಾಸದ ಕಡೆಗೆ ಹೆಚ್ಚಿನ ಒಲವನ್ನು ತೋರಿದ್ದಳು ಸವಿತಾ.
ಈಗಿರವಾಗ ಒಂದು ದಿನಾ ಉಪನ್ಯಾಸಕರಾದ ಡಾ ಕಳಕೇಶ ಪಾಠ ಮಾಡುತ್ತಾ ನಿನ್ನೆ ನಡೆದ ಪಾಠದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದಾಗ ಪ್ರತಿಯೊಂದು ಪ್ರಶ್ನೆಗೂ ಕೂಡಲೇ ಉತ್ತರಿಸುತ್ತಿದ್ದಳು ಸವಿತಾ. ಇದನ್ನು ಕಂಡ ಅದೇ ತರಗತಿಯ ಸಹ ವಿದ್ಯಾರ್ಥಿ ಮುಖೇಶ ಅವಳ ಜಾಣತನವನ್ನು ಮೆಚ್ಚಿ ಕೊಂಡಿದ್ದ. ತರಗತಿ ಮುಗಿದ ಬಳಿಕ ಊಟದ ಸಲುವಾಗಿ ಅರ್ದ ಗಂಟೆಯ ವಿರಾಮದ ಸಮಯದಲ್ಲಿ ಸವಿತಾಳನ್ನು ಕಂಡ ಮುಖೇಶ, ಏನ್ರೀ ಪಕ್ಕಾ ಸ್ಡಡೀ ತಮ್ಮದೂ ಉಪನ್ಯಾಸಕರು ಕೇಳುವ ಪ್ರತಿಯೊಂದಕ್ಕೂ ಕೂಡಾ ತಮ್ಮಲ್ಲಿ ಉತ್ತರ ಸಿದ್ದ, ನೀವು ತುಂಬಾನೇ ಟ್ಯಾಲೇಂಟ್ ಇದ್ದಿರಿ. ಎನ್ನುತ್ತಾ ಮಾತಿಗಿಳಿದಾ ಸವಿತಾ ಅವನ ಮಾತನ್ನು ಕೇಳಿಸಿಕೊಂಡರೂ ಪ್ರತಿಕ್ರೀಯೇ ನೀಡದೆ ಮೌನಕ್ಕೆ ಜಾರಿದ್ದಳು. ಆದರೂ ಅವಳನ್ನು ಮಾತಾಡಿಸಲೇ ಬೇಕೆಂಬ ಹಠಕ್ಕೆ ಬಿದ್ದ ಮುಖೇಶ ಯಾಕ್ರೀ. ಮಾತಾಡಿ ಎಂದು ಬೆಂಬತ್ತಿದ್ದಾ.
ಇತ್ತ ಸವಿತಾಳ ತಾಯಿ ರಾಜೇಶ್ವರಿಗೆ ಮಗಳದೆ ಚಿಂತೆ ಸಾದ್ಯವಾದಷ್ಟು ಬೇಗ ಮಗಳನ್ನು ಮದುವೇ ಮಾಡಿ ಜವಬ್ದಾರಿ ಕಳೆದುಕೊಳ್ಳಬೇಕು ಈಗಿನ ದಿನದಲ್ಲಿ ಹೆಣ್ಣು ಮಕ್ಕಳಿಗೆ ಯಾಕೇ ಬೇಕು ಹೆಚ್ಚಿನ ಅಬ್ಯಾಸ. ಸಾಕು ಓದಲು ಬರೆಯಲು ಬಂದರೆ. ಎಂದು ಹೇಳಿದರೂ ಕೂಡಾ ನಮ್ಮವರು ಮಗಳನ್ನು ಅದೇನೊ ಕಾಲೇಜಿಗೆ ಹಚ್ಚಿದ್ದು ಸುತಾರಾಂ ಇಷ್ಟ ಇರಲಿಲ್ಲಾ. ಅನ್ನುವ ಗೊಣಗುವಿಕೆ ಅವರಲ್ಲಿತ್ತು. ಕಾರಣ ವಯಸ್ಯಿಗೆ ಬಂದ ಮಗಳನ್ನು ಎಷ್ಟು ದಿನಾ ಅಂತ ಕಾಯೋದು. ಎನ್ನುವ ಚಿಂತೆ ಅವಳಾದಾಗಿತ್ತು!
ಕಾಲೇಜಿನಲ್ಲಿ ಪ್ರತಿಯೊಂದು ಸಬ್ಜೆಕ್ಟ್ ನಲ್ಲಿ ತನ್ನದೆಯಾದ ಛಾಪು ಮೂಡಿಸಿದ ವಿದ್ಯಾರ್ಥಿಯಾದ ಸವಿತಾಳನ್ನು ಮುಖೇಶ ಮನದಲ್ಲಿಯೇ ಪ್ರೀತಿ ಮಾಡುತ್ತಿದ್ದ. ಕ್ಲಾಸ್ ಮುಗಿದ ಕೂಡಲೇ ಅವಳನ್ನು ಕಂಡು ಹೋಗಳುತ್ತಿದ್ದ ಹಾಗೂ ಅವಳು ಹಾಕಿಕೊಂಡು ಬರುವ ಡ್ರೇಸ್ ಬಗ್ಗೆ ಮತ್ತು ಅವಳ ಗುಣಗಾನ ಮಾಡುತ್ತಾ ಸವಿತಾಳಿಗೆ ಹತ್ತಿರವಾಗಲು ಹವಣಿಸುತ್ತಿದ್ದ.
ಮುಖೇಶ ಸಾತನೂರಿನ ಶ್ರೀಮಂತ ಮನೆತನದ ಬೀರಪ್ಪಗೌಡರ ಏಕೈಕ ಪುತ್ರ ಅವನ ತಂದೆ ಮಗನ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಕಾಲೇಜಿಗೆ ಹೋದ ಮೇಲೆ ಮಗ ಕೇಳಿದಾ ಎಂದು ಒಂದು ವರೇ ಲಕ್ಷ ರೂಪಾಯಿ ಬೈಕ್ ಖರದೀಸಿ ನೀಡಿದ್ದ ಮಗನ ಸಂತೋಷವೇ ನನ್ನ ಸಂತೋಷ, ಮಗ ಡಿಗ್ರಿ ಪೂರ್ಣಗೋಳಿಸಿ ಉನ್ನತ ಮಟ್ಟದ ಅಧಿಕಾರಿಯಾಗಿ ಬರಬೇಕು ಅಂದಾಗ ನನಗೆ ಸಮಾಧಾನ ಎಂದು ಕೊಳ್ಳುತ್ತಿದ್ದ ಬೀರಪ್ಪಗೌಡಾ. ಮಗನ ಅಬ್ಯಾಸದ ಕುರಿತು ಕಾಲೇಜಿನ ಉಪನ್ಯಾಸಕರಿಗೆ ಬೇಟಿಯಾಗಿ ಕೇಳುತ್ತಿದ್ದ.
ಈಗೀರುವಾಗ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಸವಿತಾ ಕಾಲೇಜಗೆ ಮೋದಲ ಸ್ಥಾನ ಪಡೆದು ಪಾಸ ಆಗಿದ್ದಳು. ಆದರೆ ಮುಖೇಶ ಮಾತ್ರ ಜಸ್ಟ್ ಪಾಸಾಗಿದ್ದ. ಪರೀಕ್ಷೆಯ ಪಲಿತಾಂಶ ಕಂಡು ಮುಖೇಶ ಸವಿತಾಳನ್ನು ಕಂಡು ಅಭಿನಂದನೆ ತಿಳಿಸಿ ಪೇಡೆ ನೀಡಿ ಖುಷಿ ಪಟ್ಟಿದ್ದ ಅಷ್ಟಕಷ್ಟೇ ಇದ್ದ ಸವಿತಾ ಅವನ ಪ್ರೀತಿಗೆ ಸೋತು ಅವನ ಬೈಕ್ ನಲ್ಲಿ ಒಂದು ಸುತ್ತು ಸವಾರಿ ಮಾಡಿದಳು.
ಮಹದೇವಯ್ಯ ಮಗಳು ಪ್ರಥಮ ವರ್ಷದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸುದ್ದಿಯನ್ನು ತಿಳಿದು ಊರಿನ ಹನಮಪ್ಪನ ಗುಡಿಗೆ ಹೋಗಿ ಜೋಡ ಕಾಯಿ ಹೊಡಿಸಿ ಮಗಳ ಮುಂದಿನ ಪರೀಕ್ಷೆಗಳು ಕೂಡಾ ಇದೇ ರೀತಿ ಪಲಿತಾಂಶ ಬರಲಿ ಅಂದರೆ ನಿನ್ನ ಗುಡಿಗೆ ಒಂದು ದೊಡ್ಡ ಗಂಟೆಯನ್ನು ಕಾಣಿಕೆಯಾಗಿ ನೀಡುತ್ತೇನೆ ಎಂದು ಹರಿಕೆ ಕಟ್ಟಿಕೊಂಡು ಹೆಂಡತಿ ರಾಜೇಶ್ವರಿಗೆ ಮನೆಯಲ್ಲಿ ಸಿಹಿ ಅಡುಗೆ ಮಾಡಲು ಹೇಳಿ ಸವಿತಾಳಿಗೆ ಊರಿಗೆ ಬರಲು ಪೊನ ಮಾಡಿ ತಿಳಿಸಿದಾ.
ಇತ್ತ ಕಾಲೇಜಿನಿಂದ ಹಾಸ್ಟೇಲಗೆ ಬಂದಿದ್ದ ಸವಿತಾ ಊರಿಗೋಗಲು ಸಿದ್ದತೆ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಬರುತ್ತಾಳೆ. ಈ ವಿಷಯ ತಿಳಿದ ಮುಖೇಶ ಅವಳನ್ನು ಕಳಿಸಲು ಅವಳಿದ್ದಲ್ಲಿಗೆ ಬಂದು ನಗು ಮೋಗದಿಂದಾ ಬೀಳ್ಕೊಟ್ಟು ಅವಳಿಗೆ ಅದೇನೋ. ಪ್ಯಾಕ್ ಮಾಡಿದ್ದ ಒಂದು ಪುಸ್ತಕ ನೀಡಿ ಶುಭ ಕೋರಿ ಕಳಿಸಿದಾ.
ಮಗಳು ಮನೆಗೆ ಬರುತ್ತಾಳೆ ಎಂದು ತಂದೆ ಕಾಯುತ್ತಾ ನಿಂತಿದ್ದ ಸಾತನೂರಿನಿಂದ ಬಂದ ಬಸ್ ನಿಂದ ಇಳಿದ ಮಗಳನ್ನು ಬರಮಾಡಿಕೊಂಡು ಮನೆಗೆ ಕರೆತಂದಾಗ. ಆ ಓಣಿಯಲ್ಲಿದ್ದ ನಾಗವ್ವ ಮತ್ತು ನೀಲವ್ವ. ಸವಿತಾಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾತನಾಡುತ್ತಾ. ಅಂತೂ ಇಂತು. ನಮ್ಮ ಸವಿತಾ ಪಸ್ಟ್ ಕ್ಲಾಸನಲ್ಲಿ ಪಾಸಾಗಿದ್ದು ನಮಗೆಲ್ಲಾ ಸಂತೋಷ ಎನ್ನುತ್ತಾ ನಮಗೇನವ್ವ ಪೇಡೆ ತಂದು ಕೋಡು ಎಂದು ಸವಿತಾಳಿಗೆ ಕೇಳಿದಾಗ ಪೇಡೆ ಯಾಕ ಮನೆಯೋಳಗ ಸಿಹಿ ಅಡುಗೆ ಹಾಗೈತಿ ಊಟನ ಮಾಡ್ರಲ್ಲಾ ಅಂತ ಮಹೇವಯ್ಯ ಅವರಿಬ್ಬರನು ಊಟಕ್ಕ ಕರೆದು. ಮಗಳ ಕರಕೊಂಡು ಓಳಗ ಕಾಲ ಹಿಡದ್ರಾಗನ. ರಾಜೇಶ್ವರಿ ತಡಿ. ತಡೀ. ಯಾರ ಕಣ್ಣ ಬಿದ್ದೈತೆನು ನಿನಗ ನೇದರ್ ತೆಗಿತಿನಿ ಅಂತ ಮಗಳನ್ನ ಬಾಗಲದಾಗ ನಿಂದ್ರಿಸಿ ಕಸಬರಿಗಿ ಮತ್ತ ಒಣ ಮೇಣಸಿನಕಾಯಿ. ಉಪ್ಪು ತೋಗೊಂಡು ನಿವಾಳಿಸಿ ಥೂ. ಥೂ. ಥೂ. ಅಂತ ಉಗಳಿ ಒಲ್ಯಾಗ ಹಾಕಿದಳು ಚಟ್ಟ ಪಟ್ಟಂತ ಒಂದ ಸಮನೆ ಸಿಡಿಯಾಕತ್ತಿತು. ಅಬ್ಬಬ್ಬಾ ಬಾಳಾ ನೇದರ್ ಹಾಗೈತಿ ನನ್ನ ಮಗಳಿಗೆ ಅದಕ್ಕ ಅಷ್ಟೊಂದು ಚಟ್ಟ. ಪಟ್ಟಂತ ಸಿಡಿತು. ಕೈ ಕಾಲು ತೋಳಕೊಂಡು ಬಾ ಓಳಗ ಅಂತೇಳಿದಳು.
ತಂದೆ ತಾಯಿಯ ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ ಎಂದು ಮನದಲ್ಲಿಯೇ ಹೇಳಿದ ಸವಿತಾ ಲಗೇಜ್ ತನ್ನ ಕೋಣಿಯಲ್ಲಿಟ್ಟು ಸ್ನಾನಕ್ಕೆ ಹೋದಳು.
ಆಗ ಮಹದೇವಯ್ಯ ಮಗಳ ಲಗೇಜ್ ಸರಿ ಮಾಡಲು ಎತ್ತಿ ಇಡುತ್ತಾನೆ ಆಗ ಒಂದು ಬ್ಯಾಗ್ ನಲ್ಲಿಂದ ಪ್ಯಾಕ್ ಮಾಡಿದ ಪುಸ್ತಕ ಹೊರಗೆ ಬೀಳುತ್ತದೆ. ಕೂತೂಹಲಕ್ಕೆ ಪುಸ್ತಕವನ್ನು ತೆರದು ನೋಡಿದಾಗ ಅದರಲ್ಲಿ ಒಂದು ಚೀಟಿ ಇರುವದನ್ನು ಗಮನಿಸುತ್ತಾನೆ.
ಅದರಲ್ಲಿ ಮುಖೇಶನ ಹಸ್ತಾಕ್ಷರದಲ್ಲಿ ಪ್ರೀತಿಯ ನಿವೇದನೆಯ ಕುರಿತು ಬರೆದ ಸಾಲುಗಳು ಕಂಡು ಮಹಾದೇವಯ್ಯ ಮಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಈಡಬೇಕು ಎಂದು ಅದನ್ನ ಹಾಗೇ ಎಲ್ಲಿತ್ತೋ. ಅಲ್ಲಿಟ್ಡು ಮುಚ್ಚಿ ಬರುತ್ತಾನೆ. ಅಷ್ಟರಲ್ಲಿ ಸ್ನಾನ ಮುಗಿಸಿಕೊಂಡು ಮಗಳು ರಡಿಯಾಗಿ ತಂದೆ, ತಾಯಿಯರ ಕ್ಷೇಮ ಸಮಾಚಾರ ವಿಚಾರಿಸುತ್ತಾ ತಮ್ಮ ಕಾಲೇಜಿನ ಬಗ್ಗೆ ಮಾತಾಡುತ್ತಾ ಇದ್ದಾಗ ತಂದೆ ಅವಳ ಮಾತಿನ ಕಡೆ ಲಕ್ಷ್ಯ ನೀಡದೆ ಮನದಲ್ಲಿ ಮುಖೇಶ ಬರೆದ ಪತ್ರದ ಬಗ್ಗೆ ಚಿಂತಿತನಾಗಿರತ್ತಾನೆ.
ಆಯಿತಮ್ಮ ಮನೆ ಊಟ ಮಾಡದೆ ಎಷ್ಟು ದಿನಗಳಾತೋ ಏನೋ. ಬಾ ಎಂದು ಅಮ್ಮ ಅಡಗೆ ಮನೆಯತ್ತ ಹೋಗಿ ಎಲ್ಲರಿಗೂ ಊಟದ ತಟ್ಟೆ ರಡಿ ಮಾಡಿಕೊಂಡು ಬರುತ್ತಾಳೆ. ಬಿಸಿ. ಬಿಸಿಯಾದ ಹೋಳಿಗೆ ಮತ್ತು ತುಪ್ಪ. ಅಮ್ಮನ ಕೈ ರುಚಿಯೇ ಹಾಗೆ ಅಲ್ಲವೇ. ಎಂದು ಸವಿತಾ ಊಟಕ್ಕೆ ಅಣಿಯಾಗುತ್ತಾಳೆ. ತೋಗೋ ಇನ್ನೊಂದು ಹೋಳಿಗೆ ಎಂದು ಅಮ್ಮ ಬಲವಂತ ಮಾಡಿ ಮಗಳ ಹೊಟ್ಟೆ ತುಂಬಾ ಊಣ್ಣಿಸಿ ಸಂತಸ ವ್ಯಕ್ತಪಡಿಸುತ್ತಾಳೆ.
ಒಂದು ತಿಂಗಳ ಕಾಲೇಜು ರಜೆ ಇದ್ದದ್ದರಿಂದಾ ಅವಳಿಗೆ ಕಾಲ ಕಳೆಯುವದು ಸ್ವಲ್ಪ ಬೇಸರವಾಗುತ್ತಿತ್ತು. ಒಂದು ದಿನ ರಾಜೇಶ್ವರಿಯ ತಮ್ಮ ಪ್ರಸನ್ನ ಅಕ್ಕನ ಮಗಳಾದ ಸವಿತಾಳನ್ನು ಕಾಣಲು ಬಂದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಕ್ಕೆ ಕಿವಿಯೋಲೆಯನ್ನು ತಂದು ಸವಿತಾಳ ಕೈಗೆ ಇಟ್ಟಾ. ಅದಕ್ಕವಳು. ಮಾಮಾ ಇದೆಲ್ಲಾ ಯಾಕೇ. ನನಗೆ ಬೇಡಾ ಎಂದಾಗ ಒಳಗಿದ್ದ ರಾಜೇಶ್ವರಿ. ಪ್ರೀತಿಯಿಂದ ಕೊಟ್ಟಿದ್ದು ತೊಗೋಬೇಕು ಎಂದು ತಮ್ಮನ ಪರವಾಗಿ ಮಾತಾಡಿದಳು. ಆಗ ಪ್ರಸನ್ನ ಕಿವಿಯೋಲೆ ಹಾಕಿಕೋ ನೋಡೋಣ ಎಂದು ಅವಳ ಕಿವಿಗೆ ಒಲೆಯನ್ನು ಹಾಕಿಸಿ ಬಿಟ್ಟ ಪರ್ವಾ ಇಲ್ಲಾ ಪ್ರಸನ್ನ ನನ್ನ ಮಗಳು ಯಾವತ್ತಿದ್ದರೂ ನಿನ್ನ ಸ್ವತ್ತು ಎಂದು ರಾಜೇಶ್ವರಿ ಹೇಳಿದಾಗ ಪ್ರಸನ್ನನಿಗೆ ಸ್ವರ್ಗವೇ ಧರೆಗಿಳಿದ ಅನುಭವವಾಗಿತ್ತು. ಇದರಿಂದ ವಿಚಲಿತಳಾದ ಸವಿತಾ ಅಮ್ಮನ ಮಾತಿಗೆ ಬೇಸರ ಮಾಡಿಕೊಂಡಳು.
ಅಲ್ಲಿಂದಾ ನೇರವಾಗಿ ತನ್ನ ರೂಮಿನತ್ತ ಬಂದ ಸವಿತಾ ತಾನು ತಂದಿದ್ದ ಬ್ಯಾಗ್ ತೆಗೆದು. ಮುಖೇಶ ನೀಡಿದ್ದ ಪುಸ್ತಕವನ್ನು ತೆರದಾಗ ಆ ಪುಸ್ತಕದ ಮದ್ಯದಲ್ಲಿರುವ ಒಂದು ಲೇಟರ್ ಕಣ್ಣಿಗೆ ಬಿತ್ತು, ಅದನ್ನು ಓದುತ್ತಾ.
ಪ್ರೀತಿ ಎಂದರೆ. ನನಗೆ ತಿಳಿದಿರಲಿಲ್ಲಾ.
ನಿನ್ನ ನೋಡಿದ ಮರುಕ್ಷಣವೇ.
ಅದರ ಪರಿಚಯವಾಯಿತು.
ಮೋದಲನೇ ನೋಟದಲ್ಲಿ ನನ್ನ ನೋಡಿ. ಸಿಟ್ಟು ಮಾಡಿಕೊಂಡು ಕಾಡಿಸಿದ್ದು.
ಇನ್ನೂ ನಿನ್ನ ಮೇಲಿನ ಪ್ರೀತಿಗೆ ಮುನ್ನುಡಿಯಾಯಿತು.
ನಿನ್ನ ಬಿಟ್ಟು ಅರೆಕ್ಷಣ ಬದುಕುವದು ಕಷ್ಟ ನನಗೆ.
ಕಾರಣ ನನ್ನ ಪ್ರೀತಿಯ ದೇವತೆಯಾದ ನೀನು.
ನನ್ನ ಬಾಳ ಸಂಗಾತಿಯಾಗಿ.
ನನ್ನ ಜೀವನವನ್ನು ಬೆಳಗಬೇಕು.
ಸವಿತಾ. ನೀನೆ ನನ್ನ ಕವಿತಾ.
ಕೂಡಲೇ ಪತ್ರ ಓದಿದ ಮೇಲೆ.
ಪೋನ್ ಮೂಲಕ ನಿನ್ನ ಅಭಿಪ್ರಾಯ ತಿಳಿಸು.
ನಿನ್ನ ದರ್ಶನದಿಂದಾ. ನಿದ್ದೇ. ನೀರಡಕೆ. ಮಾಯವಾಗಿ.
ಕಣ್ಣು. ಮುಚ್ಚಿದರೂ. ನಿನ್ನದೆ ಚಿತ್ರ ಪಟ ಕಣ್ಣುತುಂಬಿದೆ.
ಮನದ ಮಾತು. ಇಷ್ಟು ಸಾಕಲ್ಲವೇ.
ನಿನ್ನ ಪ್ರೀತಿಯ ನೀರೀಕ್ಷೆಯಲ್ಲಿ.
ಮುಖೇಶ.
ಈ ಪತ್ರವನ್ನು ಪೂರ್ಣವಾಗಿ ಓದಿದ ಸವಿತಾ ಮುಖೇಶನ ಪ್ರೀತಿಯ ಮಾತಿಗೆ ಮರುಳಾಗಿ.
ಕೂಡಲೇ ಅವನಿಗೆ ಪೋನ್ ಮಾಡಿ.
ಪತ್ರದ ಒಕ್ಕಣಿಯನ್ನು ಅವನ ಪ್ರೇಮ ನಿವೇದನೆಯನ್ನು ಒಪ್ಪಿ. ಮನೆಯಲ್ಲಿ ತನ್ನ ಮದುವೆಯ ಬಗ್ಗೆ ಪ್ರಸ್ತಾಪವಾಗಿರುವ ಕುರಿತು ಆತಂಕ ವ್ಯಕ್ತ ಪಡಿಸಿದಳು.
ಈ ವಿಚಾರವನ್ನು ತಿಳಿದು ಕೊಂಡ ಮುಖೇಶ ಅವಳಿಗೆ ಸಮಾಧಾನ ಹೇಳಿ ಎಲ್ಲಾದರೂ ಹೋಗಿ ಮದುವೆ ಆಗುವಾ ಎಂದು ಬರುವ ಸಂಕ್ರಮಣದ ದಿನ ನೀನು ಕಲ್ಲಿನಾಥ ದೇವಸ್ಥಾನಕ್ಕೆ ಬಂದು ಬಿಡು. ಅಲ್ಲಿಯೇ ನಮ್ಮ ಮದುವೇ ಎಂದು ಹೇಳಿ. ಪ್ರೀತಿಯಿಂದಾ ಮುತ್ತು ನೀಡಿದಾಗ. ನಾಚಿದ ಸವಿತಾ. ಸರಿ ಅಪ್ಪಾ. ಬಂದ್ರೂ. ಪೋನ್ ಇಡುತ್ತೇನೆ ಎಂದಳು.
ಅದಾಗಲೇ ಮಹದೇವಯ್ಯನವರು ಮಗಳಗೆ ಬಂದ ಪತ್ರವನ್ನು ಓದಿ ಅವಳ ನಡೆಯ ಬಗ್ಗೆ ಸಂಶಯದ ಹುಳು ಬಿಟ್ಟು ಕೊಂಡ ಪರಿಣಾಮ. ಸವಿತಾಳ ರೂಮಿಗೆ ಬಂದು. ಯಾಕಮ್ಮ ಕಾಲೇಜು ಹೇಗಿದೆ? ಎಲ್ಲಾ, ಸರೀನಾ. ಎಂದಾಗ. ಅಪ್ಪಾ, ಹೂಂ. ತುಂಬಾ ಚೆನ್ನಾಗಿದೆ ಎಂದು ಮುಗಳ್ನಕ್ಕಳು,. ಆಗ ಮಹದೇವಯ್ಯ ಆ ಪತ್ರದ ಬಗ್ಗೆ ಪ್ರಸ್ತಾಪ ಮಾಡಿ ಏನಮ್ಮ, ಮಗಳೆ. ನೀನ್ನ ಮೇಲೆ ಸಾಕಷ್ಟು ಬರವಸೇ ಇಟ್ಟು ಕೊಂಡಿದ್ದೇನೆ. ಮನೆಯ ಮರಿಯಾದಿ ಹೋಗುವ ಕೆಲಸ ಮಾಡಬೇಡಾ. ಅದ್ಯಾವನೋ. ಮುಖೇಶ ನಿನಗೆ ಬರೆದ ಪತ್ರ ಆಕಶ್ಮೀಕ ನನ್ನ ಕಣ್ಣಿಗೆ ಬಿದ್ದಿತು, ಇದೆಲ್ಲಾ. ಬಿಟ್ಟು ಬಿಡು, ನಿನ್ನ ತಾಯಿಯ ಕಡೆಯ ಸಂಬಂಧ ಪ್ರಸನ್ನ ನಿನಗೆ ತಕ್ಕ ಜೋಡಿ. ಅವನು ತುಂಬಾ ಬುದ್ದಿವಂತ ಕೂಡಾ. ಊರಲ್ಲಿ ಐವತ್ತು ಏಕರೆ ತೋಟದ ಜಮೀನು ಇದೇ. ಇದೆಲ್ಲವೂ. ಬಿಟ್ಟು ನಿಮ್ಮ ಅಮ್ಮ ಹೇಳಿದಂತೆ ಪ್ರಸನ್ನನೆ ನಿನಗೆ ತಕ್ಕ ಜೋಡಿ, ಎಂದು ಹೇಳಿದಾಗ,. ಸವಿತಾ ತನ್ನ ತಂದೆಗೆ ಎಲ್ಲಾ ವಿಷಯ ತಿಳಿದಿರುವದು ನೋಡಿ ಆ ಕ್ಷಣಕ್ಕೆ ತಂದೆಯ ಮಾತಿಗೆ ಎದುರಾಗದೆ, ಆಯಿತು, ಬಿಡಪ್ಪ ನಿಮ್ಮ ಇಷ್ಟನೇ. ನನ್ನ ಇಷ್ಟಾ! ಎಂದು ಹೇಳಿ ಅಲ್ಲಿಂದಾ ಅಡುಗೆ ಮನೆಯತ್ತ ಹೋಗುತ್ತಾಳೆ.
ಇತ್ತ ಮಹದೇವಯ್ಯ ಮಗಳ ಜೀವನ ಹಾಳಾಗದಂತೆ ರೂಪಿಸಬೇಕು ಎಂದು ಕೊಂಡು ಅವಳಿಗೆ ಬಂದ ಪತ್ರದ ಬಗ್ಗೆ ತಲೆ ಕೆಡಿಸಿಕೊಂಡು. ಮರುದಿನ ಮುಖೇಶನಿಗೆ ಬೇಟಿಯಾಗಿ ಮಗಳ ತಲೆ ಕೆಡಿಸದಂತೆ ಎಚ್ಚರಿಕೆ ನೀಡಿ ಬರಬೇಕೆಂದು ಅಂದುಕೊಳ್ಳುತ್ತಾರೆ.
ಸಾತುನೂರಿನತ್ತ ಪ್ರಯಾಣ ಬೆಳಸಿದ ಮಹದೇವಯ್ಯ ಮುಖೇಶನ ವಿಳಾಸ ಪತ್ತೆ ಮಾಡಿ ಅವನ ಮನೆಗೆ ಹೋಗುತ್ತಾರೆ, ವಿಶಾಲವಾದ ವಠಾರದಲ್ಲಿ ಪತ್ರಿಕೆಯನ್ನು ಓದುತ್ತಾ ಚಹಾ ಸೇವನೆ ಮಾಡುತ್ತಾ ಕುಳಿತಿದ್ದ ಬೀರಪ್ಪಗೌಡರು, ಮತ್ತವನ ಮಗ ಮುಖೇಶ ಬೆಳಗಿನ ವರ್ಕೌಟ್ ಮಾಡುತ್ತಾ ದೇಹ ದಂಡನೆ ಮಾಡುತ್ತಿದ್ದ.
ಓಳಗಡೆ ಬಂದ ಮಹದೇವಯ್ಯನವರು. ನಮಸ್ಕಾರ ಎಂದು ಬೀರಪ್ಪಗೌಡರನ್ನು ಕಂಡಾಗ. ಯಾರೂ, ತಾವೂ. ಬನ್ನಿ, ಎಂದು ಬೀರಪ್ಪ ಗೌಡರು ಮಹದೇವಯ್ಯನವರನ್ನು ಪಕ್ಕದ ಚೇರಮೇಲೆ ಕುಳಿತು ಕೊಳ್ಳಲು ಹೇಳುತ್ತಾರೆ.
ವರ್ಕೌಟ್ ಮಾಡುತ್ತಿದ್ದ ಮುಖೇಶ ಇದನ್ನ ಗಮನಿಸಿ ಯಾರಿರಬಹುದು? ಎನ್ನುತ್ತಾ ತನ್ನ ಕೆಲಸದಲ್ಲಿ ಮುಂದೋರಿಯುತ್ತಾನೆ,
ಸ್ವಾಮಿ ನಾನು ಮಹದೇವಯ್ಯ ಅಂತ, ರಿಟೈಡ್ ಸಹಕಾರಿ ಇಲಾಖೆಯ ನಿಬಂಧಕ, ನಿಮ್ಮನ್ನು ಬೇಟಿಯಾಗಿ ಕೆಲವು ವಿಷಯ ಅಂದರೆ ನಿಮ್ಮ ಮಗನ ಬಗ್ಗೆ. ಎಂದಾಗ, ಅಲ್ಲಿಯೇ ಇದ್ದ ಮುಖೇಶ ಒಂದು ಕ್ಷಣ ಗರಬಡಿದವನಂತೆ ನಿಂತು, ನೋಡುತ್ತಾನೆ, ಯಾರವರು? ಅಷ್ಟಕ್ಕೂ ನನ್ನ ವಿಷಯ, ಏನಿರಬಹುದು, ಎನ್ನುತ್ತಿರುವಾಗಲೇ.
ನನ್ನ ಮಗಳು ಸವಿತಾ ಇದೇ ಊರಿನಲ್ಲಿ ಬಿಕಾಂ ಓದುತ್ತಿದ್ದಾಳೆ ಅವಳ ತಲೆ ಕೆಡಿಸಿ ಪ್ರೀತಿ ಪ್ರೇಮ ಎಂದು ಪತ್ರ ಬರೆದ ನಿಮ್ಮ ಮಗ ಮುಖೇಶನಿಗೆ ಬುದ್ದಿ, ಹೇಳಿ ನನ್ನ ಮಗಳ ತಂಟೆಗೆ ಬರದಂತೆ ತಡೆಯಬೇಕು ಎಂದು ಹೇಳಿದಾಗ,
ಮುಖೇಶ ಸವಿತಾಳ ತಂದೆ ಬಂದಿರುವ ಬಗ್ಗೆ ಅದು, ನನ್ನ ವಿರುದ್ದ ಆರೋಪ ಮಾಡುತ್ತಿರುವದು, ನನ್ನ ಸವಿತಾಳ ಪ್ರೀತಿ ಅವರಿಗೆ ಹೇಗೆ ತಿಳಿಯಿತು, ಎಂಬುದ ಕುರಿತು, ಆಲೋಚನೆ ಮಾಡುತ್ತಾ ಕಳ್ಳ ಹೆಜ್ಜೆಯನ್ನಿಡುತ್ತಾ ಮರಿಯಲ್ಲಿ ನಿಂತು ಅವರ ಮಾತುಗಳನ್ನು ಆಲಿಸುತ್ತಾನೆ,
ಮಹೆದೇವಯ್ಯನವರ ಮಾತು ಕೇಳಿದ ಬೀರಪ್ಪ ಗೌಡರು, ಏನ್ರೀ ನನ್ನ ಮಗಾ ಪೊಲಿ ಅಲ್ಲಾ ಅವನು ಕಾಲೇಜಿಗೆ ಹೊಗುದು, ಓದೋಕೆ ನೀವು ತಪ್ಪಾಗಿ ಇಲ್ಲಿ ಬಂದದ್ದಿರಿ, ಎಂದು ಮಗನ ಪರವಾಗಿ, ಮಹದೇವಯ್ನವರ ಮೇಲೆ ಗದರುತ್ತಾರೆ.
ಅದಲ್ಲಾ. ನನ್ನ ಮಗಳಿಗೆ ಲವ್ ಲೇಟರ್ ಬರೆದು ಅದರ ವಿಳಾಸ ಕೂಡಾ ಹಾಕಿದ್ದು ನಾನು ಸರಿಯಾದ ವಿಳಾಸಕ್ಕೆ ಬಂದಿದ್ದೇನೆ, ಬೇಕಾದರೆ ನಿಮ್ಮ ಮಗ ಮುಖೇಶನಿಗೆ ಬರಹೇಳಿ, ಎಂದು ಜೋರು ಮಾಡಿದಾಗ, ಬೀರಪ್ಪಗೌಡರಿಗೆ ಸಿಟ್ಟು ಬಂದು ಲೇ. ಮುಖೇಶ ಬಾರೊ ಇಲ್ಲಿ ಎಂದು ಮಗನನ್ನ ಕರೆಯುತ್ತಾರೆ.
ಅಲ್ಲಿಯೇ ಮರಿಯಲ್ಲಿ ನಿಂತಿದ್ದ ಮುಖೇಶ ತಂದೆಯ ಸಿಟ್ಟು ಕಂಡು ಬೇವರುತ್ತಾ. ಬಂದೆ ಅಪ್ಪಾ, ಎಂದು ಪ್ರತ್ಯಕ್ವಾಗುತ್ತಾನೆ,
ಲೇ ಮುಖೇಶ, ಏನಪ್ಪ ಇದು, ಕಾಲೇಜಿಗೆ ಇದಕ್ಕೇನೋ. ಹೋಗುದು, ಅವರು ಹೇಳಿದ್ದು, ನಿಜಾನಾ. ಎಂದಾಗ ತಡವರಿಸುರತ್ತಾ. ಹೌದು, ಅಪ್ಪಾ ನಿಜ ಅವರ ಮಗಳು ಸವಿತಾ ಅಂದ್ರೇ ನನಗೆ ಪ್ರಾಣ, ಎಂದು ಬಿಟ್ಟಾ,
ಮಗನ ಬಾಯಿಂದಾ ಬಂದ ಮಾತಿಗೆ, ಬೀರಪ್ಪಗೌಡರು ಮುಖ ಸಣ್ಣದು ಮಾಡಿ, ಮಹದೇವಯ್ಯನವರಿಗೆ ಕ್ಷಮೇ ಕೇಳಿ, ಆಯಿತು, ಬಿಡಿ ಇನ್ನೂ ಮುಂದೆ ನಮ್ಮ ಹುಡುಗಾ ನಿಮ್ಮ ಮಗಳ ತಂಟೆಗೆ ಬರುವದಿಲ್ಲಾ. ನಾನವನಿಗೆ ಬುದ್ದಿ ಹೇಳುತ್ತೇನೆ, ಎಂದು ಮತ್ತೊಂದು ಬಾರೀ. ಮಗನ ತಪ್ಪಿಗೆ ಕ್ಷಮೇ ಕೇಳಿದ,
ತಂದೆಯ ಮಾತಿಗೆ ಎದುರಾಡದ, ಮುಖೇಶ ಹಾಗೇ ಮನೆಯೊಳಗೆ ಹೊದಾ,
ಇತ್ತ ಮಹದೇವಯ್ಯ ಬಂದ ಕೆಲಸ ಮುಗಿಯಿತೆಂದು ಅಲ್ಲಿಂದಾ ನಿರ್ಗಮಿಸಿದ,
ಈ ವಿಷಯ ಸವಿತಾಳಿಗೆ ತಿಳಿದು ತಂದೆಗೆ ಎದುರಾಡುವ ಶಕ್ತಿ ಇಲ್ಲದೆ ತನ್ನ ಪ್ರೀತಿಯನ್ನು ಬಿಟ್ಟು ಕೊಡಲು ಸಾದ್ಯವಿಲ್ಲದೆ, ಮುಖೇಶನನ್ನ ಬೇಟಿಯಾಗಲು ಬರಹೇಳಿದಳು.
ಇಬ್ಬರೂ ಒಂದೆಡೆ ಸೇರಿ ತಮ್ಮ ಪ್ರೀತಿಗೆ ಮನೆಯವರ ವಿರೋದ ಇರುವದನ್ನು ಕಂಡು ಒಬ್ಬರನ್ನೊಬ್ಬರು ಸಂತೈಸುತ್ತಾ, ಈ ಜೀವನಕ್ಕೆ ಇಷ್ಟು ಸಾಕು, ಬಾ. ಎಂದು ಸವಿತಾಳನ್ನು ಕಲ್ಲಿನಾಥನ ಸನ್ನಿಧಾನಕ್ಕೆ ಕರೆದುಕೊಂಡು ಹೋಗಿ. ಸವಿತಾಳಿಗೆ ತಾಳಿಯನ್ನು ಕಟ್ಟಿ ಒಂದು ರಾತ್ರಿ ಪಾಳು ಬಿದ್ದ ಊರ ಹೋರಗಿನ ಮನೆಯಲ್ಲಿ ಮೊದಲ ರಾತ್ರಿಯ ಮಧುರ ಕ್ಷಣಗಳ ಕಳೆದು, ಮುಂಜಾನೆ ಇಬ್ಬರೂ ಎದ್ದು, ಹೆತ್ತವರಿಗೆ ಪತ್ರವ ಬರೆದು, ಒಬ್ಬರನ್ನೊಬ್ಬರು ಆಲಂಗಿಸಿ ಕೊಂಡು, ದೊಡ್ಡ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೆ ಶರಣಾಗುತ್ತಾರೆ.
–ರವೀಂದ್ರ ಬಾಕಳೆ, ಕುಷ್ಟಗಿ
