ಸಾಮಾನ್ಯ ಜ್ಞಾನ (ವಾರ 39): ಮಹಾಂತೇಶ್ ಯರಗಟ್ಟಿ

೧)    ೨೦೧೨ ರಲ್ಲಿ ಎಚ್.ಎಸ್ ಶಿವಪ್ರಕಾಶ ಅವರ ಯಾವ ಕೃತಿಗೆ  ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೨)    ಸತ್ಯಕಾಮ ಇದು ಯಾರ ಕಾವ್ಯನಾಮ ? ೩)    ಬಾ೦ಗ್ಲಾದೇಶದ ರಾಷ್ಟ್ರೀಯ ಕ್ರೀಡೆ ಯಾವುದು ? ೪)    ಕೃಷ್ಣನದಿಯ ಉಗಮಸ್ಥಳ ಯಾವುದು ? ೫)    ಮಣ್ಣಿನಲ್ಲಿ ಎರೆಹುಳುವಿನ ಮಹತ್ವವನ್ನು ಕ೦ಡುಹಿಡಿದವರು ಯಾರು ? ೬)    ಐಎಸ್‌ಐ (ಇ೦ಡಿಯನ್ ಸ್ಟಾಂಡರ್ಡ್ ಇನ್ಸ್ಟಿಟ್ಯೂಷನ್) ಆಸ್ತಿತ್ವಕ್ಕೆ ಬಂದವರ್ಷ ಯಾವುದು? ೭)    ನೀರಿನಲ್ಲಿ ಆಮ್ಲಜನಕವವನ್ನು ಹೀರಿಕೊಳ್ಳಲು ಮೀನಿಗೆ ಸಹಾಯ ಮಾಡುವ ಅ೦ಗ ಯಾವುದು ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಕಟಣೆ

ಕನ್ನಡ ನಾಡು ನುಡಿಯ ಸೇವೆ ಮಾಡುವ ನಿಟ್ಟಿನಲ್ಲಿ ಸ್ವಯಂ ಇಚ್ಚೆಯಿಂದ ಕನ್ನಡ ನಾಡು ನುಡಿಯ  ಬಗ್ಗೆ ಕವನ ಸಂಕಲನವೊಂದು ಹೊರತರಲು ಯೋಚಿಸಲಾಗಿದೆ. ಅದಕ್ಕಾಗಿ ತಾವು ಕನ್ನಡ ನಾಡು, ನುಡಿ, ಕನ್ನಡಕ್ಕಾಗಿ ದುಡಿದ ಮಹಿಳೆ/ಪುರುಷ, ಕನ್ನಡ ನೆಲ, ಜಲ, ಕನ್ನಡದ ವೈವಿಧ್ಯತೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಇತ್ತೀಚಿನ ಎರಡು ಕವನಗಳನ್ನು ಆಹ್ವಾನಿಸಲಾಗುತ್ತಿದೆ. ಆಯ್ದ ಕವಿಗಳಿಗೆ ಸನ್ಮಾನಿಸಲಾಗುವುದು. ಪುಸ್ತಕ ರೂಪದಲ್ಲಿ ಕವನಗಳನ್ನು ಪ್ರಕಟಿಸಲಾಗುವುದು.  ಕವನ ಕಳುಹಿಸಲು ಕೊನೆಯ ದಿನ ಆಗಷ್ಟ್ ೨೩, ಕವನ ಸ್ವತಂತ್ರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ

ಕಗ್ಗಲಿಪುರದಲ್ಲಿ 'ಕರುನಾಡ ಗಜಕೇಸರಿ ಸೇನೆ'ಯ ಉದ್ಘಾಟನೆ ಇವತ್ತಷ್ಟೇ (ಜುಲೈ 27) ನಡೆಯಿತು. ನನಗೆ ಅಲ್ಲಲ್ಲಿ ಆಗಾಗ ಕಂಡಂಥ ಕೆಲವು ಮುಖಗಳು ಅಲ್ಲಿ ಎದುರಾದವು. ನನಗೆ ಇದ್ದಕ್ಕಿದ್ದಂತೆಯೇ ಒಂದಿಷ್ಟು ನೆನಪುಗಳು ಆವರಿಸಿದವು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವ್ವನ ಅವ್ವ ಹಾಗೂ ಅವ್ವನ ಅಣ್ಣನೊಂದಿಗೆ ಮೊದಲಬಾರಿ ಬೆಂಗಳೂರಿಗೆ ಬರುವಾಗ ಕಗ್ಗಲಿಪುರದ ಮಾರ್ಗವಾಗಿಯೇ ಹಾದುಬಂದಿದ್ದೆ; ಗವಿಪುರದಲ್ಲಿ ನಡೆದ ಸಂಬಂಧಿಕರೆನ್ನಿಸಿಕೊಳ್ಳುವ ಯಾರದೋ ಮದುವೆಗೆ; ಈಗ ಅದೆಲ್ಲ ಅದೇಕೋ ನೆನಪಾಯಿತು. ಅಲ್ಲೇ ಇದ್ದ ಇಬ್ಬರು ಹಳ್ಳಿ ಯುವಕರಲ್ಲಿ ಒಬ್ಬ, "ಪಂಪ್ ಸನ್ಗ್ ಬಂದ್ರಾ ಸಾ?" … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣುಮಕ್ಕಳು ನಿರ್ಭಯರಾಗಿ ಓಡಾಡುವ ಕಾಲ ಮುಗಿದೇ ಹೋಯಿತೇ?: ಕೆ. ಉಷಾ ಪಿ. ರೈ

ನಿರ್ಭಯಳ ಭೀಕರ ಬಲತ್ಕಾರ ನಡೆದ ನಂತರ ’ಬಲಾತ್ಕಾರ’ ಎನ್ನುವ ಪದ ಅಂಕೆ ಸಂಖ್ಯೆಗಳ ಮಿತಿಯನ್ನೂ ಮೀರಿ ಯಾವುದೇ ಸಂಕೋಚವಿಲ್ಲದೆ ಅದೂ ಒಂದು ದಿನ ನಿತ್ಯದ ಬಳಕೆಯ ಶಬ್ಧದಂತೆ ಕಿವಿಗೆ ಬೀಳುತ್ತಲೇ ಇರುತ್ತದೆ. ಇದೇನೂ ಚರಿತ್ರೆಯಲ್ಲೇ ಮೊದಲ ’ಬಲತ್ಕಾರ’ದ ಕೇಸ್ ಅಲ್ಲ. ಆದರೆ ಇಡೀ ದೇಶದ ಜನರು ಒಗ್ಗಟ್ಟಾಗಿ ಪ್ರತಿಭಟಿಸಿದ್ದು ಈ ಘಟನೆಯನ್ನು. ಹಾಗಾಗಿ ಈ ಕೇಸಿಗೆ ಬಲ ಬಂದಿತ್ತು. ಇಡೀ ದೇಶದ ಜನರ ಪ್ರತಿಭಟನೆಯ ನಂತರವೂ ಬಲತ್ಕಾರಗಳು ನಿಲ್ಲಲಿಲ್ಲ. ಅದರ ನಂತರ ಮುಂಬಯಿಯಲ್ಲಿ ನಡೆದ ಶಕ್ತಿಮಿಲ್ ಬಲಾತ್ಕಾರದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೀಪದ ದೆವ್ವ (ದೆವ್ವದ ಕಥೆಗಳು – ಭಾಗ ೩):ಗುರುಪ್ರಸಾದ್ ಕುರ್ತಕೋಟಿ

(ಇದು ಸಂಗೀತಾ ಕೇಶವ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದ ಕತೆ) ನಾನಾಗ ಪೀಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ನಾವಿದ್ದದ್ದು ನನ್ನ ಊರಾದ ಚಿಕ್ಕೋಡಿಯಲ್ಲಿ. ಅದು ಬೆಳಗಾವಿ ಜಿಲ್ಲೆಯಲ್ಲಿದೆ. ಹವಾಮಾನದ ವಿಷಯದಲ್ಲಿ ಅದಕ್ಕೂ ಬೆಳಗಾವಿಗೂ ಏನೂ ವ್ಯತ್ಯಾಸವಿರಲಿಲ್ಲ. ಅದು ಆಗಿನ ಸಂಗತಿ. ಈಗ ಬಿಡಿ ಬೆಳಗಾವಿಯ ಹವಾಮಾನವೂ ಪ್ರಕೃತಿ ವೈಪರಿತ್ಯಕ್ಕೆ ಬಲಿಯಾಗಿ ಹದಗೆಟ್ಟಿದೆ. ಆಗೆಲ್ಲಾ ಬೆಳಗಾವಿಯಲ್ಲಿ ಮಳೆ ಯಾವ ಪರಿ ಸುರಿಯುತ್ತಿತ್ತೆಂದರೆ… ಸುರಿಯುತ್ತಿತ್ತು ಅಷ್ಟೆ! ಒಮ್ಮೆ ಶುರುವಾಯಿತೆಂದರೆ ನಿಲ್ಲುವ ಮಾತೆ ಇರಲಿಲ್ಲ. ಚಿಕ್ಕೋಡಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ

ಹೊರಗೆ ಜೋರು ಮಳೆ.  ಮನೆ ತುಂಬಾ ತಟಕ್ ತಟಕ್ ಎಂದು ಸೋರಿದ ಮಳೆ ಹನಿಗಳು ಹೊರಡಿಸುವ ಪ್ಯಾಥೋ ಸಾಂಗಿನ ತುಣುಕು ಸಂಗೀತ.  ಮನೆ ಮಾಳಿಗೆಯ  ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚುವುದನ್ನು ಮರೆತಿದ್ದಳು ಮುದುಕಿ.  ಫಕ್ಕನೇ ನೋಡಿ ಮೊಮ್ಮಗನಿಗೆ ಹೇಳಿದಳು.  ಹುಡುಗ ಹತ್ತಲೋ ಬೇಡವೋ ಎಂಬಂತೆ ನೋಡಿದ; ಹಣ್ಣಣ್ಣು  ಮುದುಕಿ ತನ್ನ ಅಳಿದುಳಿದ ಹಲ್ಲುಗಳನ್ನು ಜೋಪಾನ ಮಾಡಿಟ್ಟು ಕೊಂಡು ದಿನ ದೂಡುವಂತೆ ಗೋಚರಿಸುತ್ತಿದ್ದ ಏಣಿಯ ಪರಿಸ್ಥಿತಿ.   ಹಂಗೂ ಹಿಂಗೂ ಸವ್ಕಾಶಿ ಹತ್ತಿ ಮಾಳಿಗೆ ನೋಡಿದರೆ ಏನಿತ್ತು? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೈಭವದ ಕೂಟ-ಪ್ಯಾಶನ್ನಿನ ಊಟ ? :ಪಾ.ಮು.ಸುಬ್ರಮಣ್ಯ

ಹಾಗೇ ಸುಮ್ಮನೇ ಏನಾದರೊಂದು ಬರೆಯಬೇಕೆಂದು ಮನಸ್ಸು ತವಕಪಡುತ್ತಿತ್ತು. ವಿಷಯಕ್ಕಾಗಿ ಮನದ ಗಾಳಿಪಟವನ್ನು ಹರಿಯಬಿಟ್ಟೆ.  ಪಟ ನೇರವಾಗಿ ಒಂದು ಅದ್ದೂರಿ ಕಾರ್ಯಕ್ರಮವೊಂದರ ನಡುವೆ ನಿಂತಿತು.  ಸುತ್ತಲೂ ಕಣ್ಣಾಡಿಸಿದೆ.  ವೈಭವಪೂರ್ಣವಾದ ಕಾರ್ಯಕ್ರಮ. ಯಾರೋ ಹಣದಧಿಪತಿಗಳೇ ಈ ಕಾರ್ಯಕ್ರಮದ ಆಯೋಜಕರೆಂದು ಮೇಲ್ನೋಟಕ್ಕೆ ಅನ್ನಿಸಿತು.  ಯಾರಾದರೆ ನನಗೇನು?  ನನಗೆ ಬೇಕಾಗಿರುವ ವಿಷಯ ಸಿಕ್ಕರೆ ಸಾಕು, ಎಂದಂದುಕೊಂಡು ಹುಡುಕತೊಡಗಿದೆ.  ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ವಿಚಾರಗಳಲ್ಲಿ ತೊಡಗಿದ್ದಾರೆನ್ನಿಸಿತು.  ನನ್ನನ್ನಾರು ಗಮನಿಸಲಿಲ್ಲ.  ಮನದ ಪಟ ಅಲೆದಾಟಕ್ಕಿಳಿದಾಗ ಕೇಳಿಯೇಬಿಟ್ಟಿ.  ’ಇಲ್ಲಿ ನನಗೇನು ಕೆಲಸ? ನನ್ನನ್ನು ಇಲ್ಲಿಗೇಕೆ ಕರೆತಂದೆ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವನಗಳು: ಸಂತೇಬೆನ್ನೂರು ಫೈಜ್ನಟ್ರಾಜ್, ಜಾನ್ ಸುಂಟಿಕೊಪ್ಪ, ಎಸ್. ಕಲಾಲ್

ದ್ವಿಪದಿಗಳು ಕುಡಿದ ಅಮಲಿನಲ್ಲಿಲ್ಲ ಸಖಿ ನೀನಿಲ್ಲ ಎಂಬುದೊಂದು ನೋವೆನಿಸಿಲ್ಲ ನನಗೆ         ಹೆಜ್ಜೆ ಇಟ್ಟಲ್ಲೆಲ್ಲಾ ಮುರಿದ ಹಪ್ಪಳ         ಸದ್ದು ಪುಡಿಯಾದ ಕನಸುಗಳು ಜೀವ ಬಿಟ್ಟವು ನನಗೂ ಎಚ್ಚರ ಇದೆ ನೆನಪಿರಲಿ ಕುಡಿದರೇನು ಮರೆವಲ್ಲ ಹಳೇ ಮೆಲುಕು!         ನಡೆ ನಡೆದಂತೆ ದಾರಿ ಹಿಂದೆ ಅಷ್ಟೆ;         ಹಿಂದಿನದು ಬಿಟ್ಟಿಲ್ಲ ಜೊತೆಗೆ ಅಚ್ಚರಿ ಕನಸ ಚರಂಡಿ ದಾಟಲು ದರ್ದಿದೆ ಸಭ್ಯರೆಲ್ಲಾ ನನ್ನ ಅವಸ್ಥೆಯೆಡೆ ಕಣ್ ನೆಟ್ಟಿದ್ದಾರೆ!         ಹಗಲಿನಲಿ ಹಾಡಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಶಸ್ತಿ ಪಿ. ಸಾಗರ ಬರೆದ ಕತೆ: ಸುದೇಷ್ಣೆ

ಏ ಎಲ್ಲಾದ್ರೂ ಟ್ರಿಪ್ ಹೋಗೋಣ್ವಾ ? ಬೆಂಗ್ಳೂರಿಗೆ ಬಂದು ತುಂಬಾ ದಿನ ಆಯ್ತು ಕಣೋ. ಏನೂ ನೋಡಿಲ್ಲ ಸರಿಯಾಗಿ.  ಹೂಂ. ಸರಿ. ಎಲ್ಲಿಗೆ ?  ಅರೆ, ವಾರ ವಾರ ಕಾಲಿಗೆ ಚಕ್ರ ಕಟ್ಕೊಂಡವ್ನ ತರ ತಿರ್ಗೋದು ನೀನು. ಬೈಕಂತೆ, ಕಾರಂತೆ. ಬಸ್ಸಂತೆ. ಆ ಫೇಸ್ಬುಕ್ಕನ್ನೇ ಮಿನಿ ಹಾರ್ಡುಡಿಸ್ಕು ಮಾಡೋ ಅಷ್ಟು ಫೋಟೋ ತುಂಬ್ಸಿದ್ದೀಯ. ನಂಗೆ ಕೇಳ್ತಿಯಲ್ಲೋ ಎಲ್ಲೋಗದು ಅಂತ. ನೀನು ಹೋಗಿರೋ ಜಾಗಗಳಲ್ಲೇ ಯಾವ್ದಾದ್ರೂ ಹೇಳೋ. ಊಂ… ನಿಂಗೆ ಎಷ್ಟೊತ್ತಿನ ಪ್ರಯಾಣ ಆಗಿರ್ಬೇಕು ? ಒಂದೆರಡು ಘಂಟೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಾಂಧಿ: ನಾ.ಧನಪಾಲ

ಮೂಲ: ತೆಲುಗು ಕತೆ ಲೇಖಕರು: ಸಲೀಂ, ಕನ್ನಡಕ್ಕೆ: ನಾ. ಧನಪಾಲ ಪ್ರಮುಖ ಸಾಪ್ತಾಹಿಕದಲ್ಲಿ ಗಾಂಧಿ ಬರೆದ ಲೇಖನವನ್ನು ಓದಿ ಮುಗಿಸಿದೊಡನೆ ಕಣ್ಣುಗಳು ಒದ್ದೆಯಾದವು.  ಅರಣ್ಯವನ್ನು ನಂಬಿಕೊಂಡು ಬದುಕುತ್ತಿರುವ ಬುಡಕಟ್ಟಿನವರ ಏಳು ಬೀಳುಗಳನ್ನು ಎಷ್ಟು ಚೆನ್ನಾಗಿ ಬರೆದಿದ್ದನೋ ?  ಬಹಳ ಹೃದ್ಯವಾಗಿ. . . !  ಮನಸ್ಸನ್ನು ಕಲಕುವಂತಿದೆ. ಹಾಗೆ ಬರೆಯಲು ಗಾಂಧಿಯಂತಹ ಮಾನವತಾವಾದಿಗೆ ಮಾತ್ರವೇ ಸಾಧ್ಯ.  ಗಾಂಧಿ ತಾನು ನಂಬಿರುವ ತನ್ನ ಸಿದ್ಧಾಂತಗಳಿಗಾಗಿ ಪ್ರಾಣಾರ್ಪಣೆಗಾದರೂ ಸಿದ್ಧನಿರುವ ಧೀಮಂತ ವ್ಯಕ್ತಿ.  ಕರ್ನಾಟಕದಲ್ಲಿ ಆತನಿಗೆ ಬಹಳ ಅಭಿಮಾನಿಗಳಿದ್ದಾರೆ.   ಮಾನವತೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಚಮಹಾಸಾಗರದ ಐದು ಕೊಳೆಗುಂಡಿಗಳು: ಅಖಿಲೇಶ್ ಚಿಪ್ಪಳಿ ಅಂಕಣ

(ಭೂಮಂಡಲದ ಶೇ ೭೦ ಭಾಗ ನೀರಿನಿಂದ ಸುತ್ತುವರೆದಿದೆಯಾದ್ದರಿಂದ ಅಷ್ಟೂ ನೀರನ್ನೂ ಸೇರಿಸಿ ಒಂದೇ ಮಹಾಸಾಗರ ಎನ್ನಬಹುದು. ಆದರೂ ದೇಶಗಳು ತಮ್ಮ ಗಡಿಗಳಿಗೆ ಅನುಸಾರವಾಗಿ ೫ ಮಹಾಸಾಗರಗಳನ್ನು ಗುರುತಿಸಿಕೊಂಡಿದ್ದಾರೆ. ೧. ಪೆಸಿಫಿಕ್ ಮಹಾಸಾಗರ ೨. ಅಟ್ಲಾಂಟಿಕ್ ಮಹಾಸಾಗರ ೩. ಹಿಂದೂ ಮಹಾಸಾಗರ ೪. ಅಂಟಾರ್ಟಿಕ್ ಮಹಾಸಾಗರ ಮತ್ತು ಆರ್ಕ್‌ಟಿಕ್ ಮಹಾಸಾಗರ) ಮೊನ್ನೆ ಸೋಮವಾರ ಅಂದರೆ ದಿನಾಂಕ:೨೧/೦೭/೨೦೧೪ರ ಬೆಳಗ್ಗೆ ತೋಟದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುವಾಗ ಅಪ್ಪಟ ಭೂಮಿಪುತ್ರನ ಜಂಗಮವಾಣಿಯಿಂದ ಕರೆ ಬಂತು ಎಂದು ಮನೆಯಿಂದ ಕೂಗಿದರು. ಈ ಭೂಮಿಪುತ್ರನ ದೂರವಾಣಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಡಗಿರುವ ರಾಜಕೀಯ…! : ನಂದಿಕೇಶ್. ಬಾದಾಮಿ

         ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರೆಂದು ಪಿಂಚಣಿ ಪಡೆಯುತ್ತಿರುವವರ ವಿವರವನ್ನು ಗಮನಿಸಿದರೆ, ಕಲೆಯ ಗಾಳಿ;ಗಂಧ ಗೊತ್ತಿರದವರೆ ಬಹುಪಾಲು ಆ ಪಟ್ಟಿಯಲ್ಲಿ ತುಂಬಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ/ಕಿ ಪ್ರಶಸ್ತಿ ಪಡೆದವರ ವಿವರವನ್ನು ಪರಿಶೀಲಿಸಿದರೆ ಅದರಲ್ಲೂ ಕೂಡಾ ರಾಜಕೀಯ ದುರ್ವಾಸನೆಯ ಘಾಟು ಮೂಗಿಗೆ ಅಮರಿಕೊಳ್ಳುತ್ತದೆ. ಇನ್ನು ಬಹುತೇಕ ಪ್ರಶಸ್ತಿ ಪುರಸ್ಕಾರಗಳಂತೂ ರಾಜಕೀಯ ಕರಿನೆರಳಿನಲ್ಲಿಯೇ ವಿತರಣೆಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಹಿರಿಯ ಸಾಹಿತಿ ಕುಂ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮರೆವು: ವೆಂಕಟೇಶ್ ಪ್ರಸಾದ್

ಹಿ೦ದಿನ ದಿನ ಅಲರಾ೦ ಇಡಲು ಮರೆತ ತಪ್ಪಿಗೆ ಇ೦ದು ತಡವಾಗಿ ಏಳುವ೦ತಾಗಿತ್ತು.ಎದ್ದವನೇ ದೈನ೦ದಿನ ಕೆಲಸ ಕಾರ್ಯಗಳನ್ನು ಪೂರೈಸಿ ಆಫೀಸಿಗೆ ಹೊರಟು ಈ ಮರೆವಿಗೆ ಶಪಿಸುತ್ತಾ ಬಸ್ ಹತ್ತಿದ ನ೦ತರವೇ ಧೀರ್ಘವಾಗಿ ಉಸಿರು ತೆಗೆದುಕೊ೦ಡದ್ದು. ಅತ್ತ ತಿರುಗಿದರೆ ಕ೦ಡಕ್ಟರ್ ಟಿಕೆಟ್ ಟಿಕೆಟ್ ಎ೦ದು ನಿ೦ತಿದ್ದ. ಪಾಸ್ ತೋರಿಸೋಣ ಕಿಸೆ ಬ್ಯಾಗ್ ತಡಕಾಡಿದರೆ ಎಲ್ಲಿದೇ?? ಪಾಸ್ ಮನೆಯಲ್ಲೇ ಮರೆತಿದ್ದೆ. ಮತ್ತೆ ಮರೆವಿಗೊ೦ದಷ್ಟು ಶಾಪ ಹಾಕಿ ಪೂಒರ್ತಿ ಬಸ್ ಚಾರ್ಜ್ ಕೊಟ್ಟು ಕಿಟಕಿಯತ್ತ ಮುಖ ಮಾಡಿದೆ.  ಈ ಮರೆವಿನ ವಿಷಯ ಬ೦ದಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದಿಷ್ಟು ಪುಟ್ಟ ಕತೆಗಳು:ಸುಚಿತ್ರ ಕೆ. ಕಾವೂರು.

ಎರಡು ಕೋಮಿನ ಜನರ ನಡುವೆ ಜಗಳ ಆರಂಭವಾಗಿತ್ತು..  ಕಾರಣ ತಮ್ಮ ಧರ್ಮದ ಭಿತ್ತಿ ಪತ್ರ ಅಂಟಿಸಿ ಅಪ ಪ್ರಚಾರ ಮಾಡಿದರೆಂದು… ಒಂದು ಆಡು ಬಂದು ಆ ಭಿತ್ತಿಪತ್ರವನ್ನು ನಿಧಾನವಾಗಿ ಹರಿದು ಮೆಲ್ಲತೊಡಗಿತು..  ***** ಅಣ್ಣ ತನ್ನ ತಂಗಿಯ ಗಂಡನ ಮನೆಯ ಪರಿಸ್ಥಿತಿ ಬಗ್ಗೆ ಹೆಂಡತಿ ಜೊತೆ ಹೇಳಿ ವ್ಯಥೆ ಪಡುತ್ತಿದ್ದ…ಆದರೆ ಹೆಂಡತಿ ತನ್ನ ಮನೆಯಲ್ಲಿ ನರಕ ಅನುಭವಿಸುವುದ ಕಂಡೂ ಕಾಣದಂತೆ ನಟಿಸುತ್ತಿದ್ದ. ***** ಅಮ್ಮ ನಿನ್ನ ಸೊಸೆಯನ್ನು ಹದ್ದುಬಸ್ತಿನಲ್ಲಿಡು ಇಲ್ಲಾಂದ್ರೆ ನಿನ್ನ ಮೂಲೆಗೆ ಹಾಕಿಯಾಳು ಎಂದು ಅತ್ತೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶರಧಿಯ ದಡದಲ್ಲಿ ಪ್ರೀತಿಯ ಕನಸು:ಪದ್ಮಾ ಭಟ್ ಇಡಗುಂದಿ

ಮುಸ್ಸಂಜೆಯ ಸೂರ್ಯನ ಅಂತಿಮ ಹೊತ್ತು, ಕೆಂಪು ಕಿರಣ ಮೊಗದಲ್ಲಿ ಬೀಳುತ್ತಿರಲು, ಬೇಡವೆಂದರೂ ಕಂಗಳು ಮುಚ್ಚಿದವು. ಅದೇ ತಾಮುಂದು ತಾಮುಂದೆ ಎಂದು ಓಡಿ ಬರುತ್ತಿರುವ ಅಲೆಗಳು. ಸಮುದ್ರದಂಡೆಯ ಮೇಲೊಂದು ಪುಟ್ಟ ಸ್ವರ್ಗಲೋಕ.. ಹಕ್ಕಿಗಳ ಇಂಚರಕ್ಕೆ ಧ್ವನಿಯಾಗುವ ಹೃದಯಗೀತೆ. ಕನಸುಗಳನೆಲ್ಲ ಬಿಚ್ಚಿ ಹರವಿ ಹಾಕಿಕೊಂಡ ಕಂಗಳಿಗೆ ನಕ್ಷತ್ರದಂತಹ ಹೊಳಪು. ಯೌವನದ ಬೆಚ್ಚಗಿನ ಕನಸುಗಳು. ತಂಪು ತಂಗಾಳಿ ಮಿಶ್ರಿತ ಆ ಇಳಿಸಂಜೆಯಲ್ಲಿ ತುಸು ಬೆಳಕು ಕಂಡಂತೆ ಮತ್ತಷ್ಟು ಸೊಗಸು. ಸಿಹಿತನದಲ್ಲಿ ಬೊಂಬಾಯಿ ಮಿಠಾಯಿ ಮಾರುವವನ ಗಾಡಿಯ ಗಂಟೆಯ ಸದ್ದು… ಇತ್ತ ಇನ್ನೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯಜ್ಞಾನ ಪ್ರಶ್ನೋತ್ತರಗಳು: ಮಹಂತೇಶ್ ಯರಗಟ್ಟಿ

ಪ್ರಶ್ನೆಗಳು : ೧.    ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು? ೨.    ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು? ೩.    ಉಪಲಬ್ಧವಿರುವ ಕನ್ನಡದ ಮೊದಲ ಶಾಸನ ಯಾವುದು? ೪.    ೧೯೮೩ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೫.    ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು? ೬.    ಕನ್ನಡದ ಜಾನಪದ ಕ್ಷೇತ್ರದಲ್ಲಿ ಪ್ರಥಮ ಡಾಕ್ಟರೇಟ್ ಪದವಿ ಪಡೆದವರು ಯಾರು? ೭.    ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅತಿಥಿ ಸಂಪಾದಕರ ನುಡಿ

ನಮಗೆ ನಾಳೆಗಳಿಲ್ಲ, ಏಕೆಂದರೆ ಈ ನೆಲದಲ್ಲಿ ಮಕ್ಕಳಿಗೆ ನಾವು ಭವಿಷ್ಯ ಉಳಿಸುತ್ತಿಲ್ಲ. ಮಹಾಮಾರಿಯೊಂದರಂತೆ ಈ ದಿನಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ’ ಮಕ್ಕಳ ಮೇಲಿನ ದೌರ್ಜನ್ಯ’ ಎನ್ನುವ ಮನೋಭಾವದೆಡೆಗೆ ನನ್ನ ಧಿಕ್ಕಾರವಿರಿಸಿಯೇ ಈ ಸಂಚಿಕೆಯನ್ನು ನಿಮ್ಮ ಮುಂದೆ ಇರಿಸಲಾಗಿದೆ. ಜಗತ್ತಿನ ಯಾವ ಮಗುವಿನ ಯಾವುದೇ ನೋವಿಗೂ ಕುಳಿತಲ್ಲೇ ಮಮ್ಮಲ ಮರುಗುವ, ಮಾತ್ರವಲ್ಲ ಮಕ್ಕಳ ಕಣ್ಣೀರು ಒರೆಸಲು ತನ್ನ ಕೈಲಾದಷ್ಟು ಕೆಲಸವನ್ನೂ ಮಾಡುವ ಪಪ್ಪನ ಮಗಳಾಗಿ ಇಂತಹ ವಿಷಯದ ಬಗ್ಗೆ ಸಂಚಿಕೆಯ ಸಂಪಾದಕತ್ವ ನನ್ನ ಪಾಲಿಗೆ ಬಂದದ್ದನ್ನು ಹೆಮ್ಮೆಯಿಂದಲೇ ಸ್ವೀಕರಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ