ಕೊಲ್ಲುವ ರಸ್ತೆಗಳ ಪುರಾಣ: ಅಖಿಲೇಶ್ ಚಿಪ್ಪಳಿ

ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಕಾನಳ್ಳಿಯಿಂದ ತನ್ನ ಗಂಡ ಮತ್ತು ಎರಡು ಮುದ್ದು ಮಕ್ಕಳನ್ನು ಕರೆದುಕೊಂಡು ಹೈಸ್ಕೂಲ್ ಮಾಸ್ತರಾದ ತನ್ನ ಅಣ್ಣನಿಗೆ ರಾಖಿ ಕಟ್ಟಲು ಮೊಬೈಕಿನಲ್ಲಿ ಹೊರಟಿದ್ದ ಅಂಗನವಾಡಿ ಟೀಚರ್ ದಾರಿ ಮಧ್ಯದಲ್ಲಿ ಗುಂಡಿ ಹಾರಿದ ಬೈಕಿನಿಂದ ಬಿದ್ದು ತಲೆಗೆ ಏಟಾಗಿ ಸತ್ತೇ ಹೋದಳು. ಹಾಲು ಕುಡಿಯುವ ಮಗುವಿಗೆ ಏನೂ ಆಗಲಿಲ್ಲ. ಆಕೆಗಿನ್ನೂ ಇಪ್ಪತ್ತೇಳು ವರ್ಷವಾಗಿತ್ತಷ್ಟೆ. ಕಳಪೆ ಕಾಮಗಾರಿಯಿಂದಾದ ಹೊಂಡ ಚಿಕ್ಕ ಮಕ್ಕಳನ್ನು ತಬ್ಬಲಿ ಮಾಡಿತು. ಹೀಗೆ ದೇಶದಲ್ಲಿ ನಿತ್ಯವೂ ಸಾವಿರಾರು ಸಾವು ಸಂಭವಿಸುತ್ತದೆ. ಇದರಲ್ಲಿ ದೂರುವುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ

ಮಸಣದ ಹೂವು:   1.ವಿಕೃತ ಕಾಮಿಗಳ ಕಾಮದಾಹಕೆ ಬಲಿಯಾದ ಹುಡುಗಿಯ ಗೋರಿಯ ಮೇಲಿನ ಹೂವಲ್ಲೂ ಅದೇ ಮುಗ್ಧ ನಗು… ಆದರೆ ಇಲ್ಯಾರೂ ಹೊಸಕುವವರಿಲ್ಲ. 2.ಇಂದು  ಮಸಣದಲ್ಲೂ ನೀರವ ಮೌನ ಆಕೆ ಬಂದಿದ್ದಾಳೆ ಕಾಮುಕರ ಕಾಮಕ್ರೀಡೆಗೆ ಪ್ರಾಣತೆತ್ತು. 3.ಹೆಣ್ಣೊಡಲ ಮಾತು… ಯಾರ ಭಯವಿಲ್ಲ ನನಗೆ ಹುಟ್ಟಿಬಂದರೆ ಮಸಣದ ಹೂವಾಗಿ. 4.ಹೆಣ್ಣು ಸುರಕ್ಷಿತ ಒಂದು ತಾಯಿಯ  ಗರ್ಭದಲ್ಲಿ, ಇನ್ನೊಂದು  ಮಸಣದ  ಗೋರಿಗಳಲ್ಲಿ. 5.ಮಸಣದಲ್ಲಿ  ನನ್ನವಳ  ಗೋರಿಯ ಮೇಲೆ ಅರಳಿದ್ದ ಹೂವೂ ನನ್ನ ನೋಡಿ ನಕ್ಕಿತ್ತು ಅವಳು ನಕ್ಕಂತೆ. 6.ಎಷ್ಟಿದ್ದರೂ ಏನಿದ್ದರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪುಗಳೆಂಬ ಬುತ್ತಿಗಳು: ಪದ್ಮಾ ಭಟ್, ಇಡಗುಂದಿ.

                          ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ  ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಕ್ಕೆ ಮುದ ನೀಡಿದ ’ಚಮ್ಮಾರನ ಹೆಂಡತಿ’: ಹಿಪ್ಪರಗಿ ಸಿದ್ಧರಾಮ

ಸೃಜನಶೀಲ ಸಮಾನ ಮನಸ್ಸುಗಳು ಒಂದೇಡೆ ಸೇರಿಕೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಬೇಕೆಂಬ ತೀವ್ರ ಹಂಬಲದೊಂದಿಗೆ ಭವಿಷ್ಯದ ಜಾಗೃತಿಯ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಉದಯೋನ್ಮುಖ ಪ್ರತಿಭೆಗಳ ಸಂಗಮವಾಗಿ ’ಥಿಯೇಟರ್ ಸಮುರಾಯ್’ ಉದಯವಾಗಿ ನಾಲ್ಕು ವರ್ಷಗಳು ಸರಿದು ಸರಿಯಾಗಿ ಐದನೇ ವರ್ಷಕ್ಕೆ ಮುಂದಡಿಯಿಡುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಪಲ್ಲಟಗಳು, ಸ್ಥಿತ್ಯಂತರಗಳು ಘಟಿಸಿವೆ. ಇಂತಹ ನಿರಂತರ ಬದಲಾವಣೆಯ ಪ್ರಸ್ತುತ ಪ್ರಸಂಗದಲ್ಲಿ ತಮ್ಮ ಹಲವಾರು ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿರುವ ’ಥಿಯೇಟರ್ ಸಮುರಾಯ್’ ತಂಡವು ಈ ಸಲ ಸ್ಪೇನ್ ರಂಗಕರ್ಮಿ ಫೆಡರಿಯೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 42): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧.    ಪರ್ವ ಕೃತಿಯ ಕರ್ತೃ ಯಾರು? ೨.    ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ? ೩.    ವಿಸೀ ಇದು ಯಾರ ಕಾವ್ಯನಾಮ? ೪.    ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? ೫.    ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ? ೬.    ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು? ೭.    ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ? ೮.    ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು? ೯.    ಕುವೆಂಪುರವರ ಆತ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ತಲ್ಲಣದ ಸಂಜೆ: ಹೃದಯಶಿವ

ಅದೊಂದು ಮಾಮೂಲಿ ದಿನ… ಆ ಸಂಜೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಎಂದೋ ಹಾಡು ಬರೆದು ಮರೆತು ಹೋಗಿದ್ದ ಸಿನಿಮಾವೊಂದರ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕಾಗಿ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಆ ಚಿತ್ರದ ನಿರ್ದೇಶಕರು ಫೋನ್ ಮಾಡಿ ಆಹ್ವಾನಿಸಿದ್ದರು; ಪತ್ರಕರ್ತರ, ಟಿವಿ ಮಾಧ್ಯಮದವರ ಮುಂದೆ ನಿಂತು ಆ ಚಿತ್ರಕ್ಕಾಗಿ ನಾನು ಬರೆದಿದ್ದ ಹಾಡುಗಳ ಬಗ್ಗೆ ಒಂದೆರಡು ಮಾತಾಡಿ ವೇದಿಕೆ ಮೇಲೆ ಇರಬಹುದಾದವರ ಜೊತೆ ಸಿಡಿ ಹಿಡಿದುಕೊಂಡು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಕೆಲಸ. ಇಷ್ಟಕ್ಕೂ ನಾನು ನೆಟ್ಟಗೆ ಸಿನಿಮಾ ಹಾಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೊದಲು ಮಾನವನಾಗು: ಅನಿತಾ ನರೇಶ್ ಮಂಚಿ

ಶಾಲೆಯಿಂದ ಫೋನ್ ಬಂದಿತ್ತು. ಇವತ್ತು ಶಾಲಾವಾಹನ ಹಾಳಾದ ಕಾರಣ ಸರ್ವಿಸ್ ಬಸ್ಸಿನಲ್ಲೇ ಮಕ್ಕಳನ್ನು ಕಳಿಸ್ತಾ ಇದ್ದೀವಿ.. ಟಕ್ಕನೆ ಫೋನ್ ಕಟ್ಟಾಯಿತು.  ಅಯ್ಯೋ.. ಪಾಪ ಸಣ್ಣವನು.. ಸರ್ವಿಸ್ ಬಸ್ಸಿನಲ್ಲಿ ಹೇಗೆ ಬರ್ತಾನೆ ಎಂಬ ಆತಂಕ ನನ್ನದು. ನಾನೇ ಹೋಗಿ ಕರೆತರಬಹುದು ಆದರೆ ಅಷ್ಟರಲ್ಲೇ ಅವನು ಬೇರೆ ಬಸ್ಸಿನಲ್ಲಿ ಹೊರಟು ಬಿಟ್ಟಿದ್ದರೆ..  ಶಾಲೆಗೆ ಫೋನ್ ಮಾಡಿ ವಿಚಾರಿಸೋಣ ಅಂತ ಡಯಲ್ ಮಾಡಿದರೆ ಅದು ಎಂಗೇಜ್ ಸ್ವರ ಬರುತ್ತಿತ್ತು. ಎಲ್ಲಾ ಮಕ್ಕಳ ಮನೆಗಳಿಗೂ ಸುದ್ದಿ ಮುಟ್ಟಿಸುವ ಅವಸರದಲ್ಲಿ ಅವರಿದ್ದರೇನೋ..  ಮನೆಯಿಂದ ಶಾಲೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಿಮ್ಮನ ಹುಚ್ಚು!: ಮಂಜು ಹಿಚ್ಕಡ್

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹಿಳೆ, ಮಗು , ಕಾನೂನು..: ಮಮತಾ ದೇವ

ಮಹಿಳೆಯರಿಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿ ಗತಿ ಸಮಾಜದ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶಗಳಲ್ಲೂ ಸುಧಾರಣೆಯನ್ನು ಕಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಹೆಚ್ಚುತ್ತಿರುವುದು  ಅಪಾಯಕಾರಿಯೆನಿಸುತ್ತಿದೆ. ಮಹಿಳೆ ಇನ್ನೂ ಎರಡನೇ ದರ್ಜೆ ಪ್ರಜೆಯಾಗಿಯೇ ಉಳಿದಿದ್ದಾಳೆ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಪುರುಷನಿಗೆ ಸಮಾನಳಾಗಿದ್ದರೂ, ಮಹಿಳೆಗೆ ಸುರಕ್ಷತೆಯ ವಾತಾವರಣ ಎಲ್ಲೆಲ್ಲೂ ಇಲ್ಲ.ಇಂದಿನ 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳು ಭದ್ರತೆ, ಸುರಕ್ಷತೆಗಳಿಂದ ವಂಚಿತರಾಗುತ್ತಿದ್ದಾರೆ.ಕಾನೂನು ಎಲ್ಲ ದೇಶದಲ್ಲೂ ಒಂದೇ ಆಗಿಲ್ಲ. ಕೆಲವು ದೇಶಗಳಲ್ಲಿ  ಮಹಿಳೆಯರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ;  "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ"  ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ.  ಆದರೆ, ನಾನು ನೋಡಿದ ಸ್ವತಃ ನೋಡಿ  ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ.  ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ  ದಡ್ಡರ ಸಾಲಿಗೆ.  ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು.  ಈ ಮಧ್ಯೆ ಓದಿನ ಹಂತದಲ್ಲೇ  ಚೂರು ಮೈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಕು ಕವಿತೆಗಳು: ವೆಂಕಟೇಶ್ ನಾಯಕ್, ಶಿವಕುಮಾರ ಚನ್ನಪ್ಪನವರ, ಗುರು ಪ್ರಸಾದ್, ರಾಣಿ ಪಿ.ವಿ.

ಬೆಳೆ ಕಳೆ ನನ್ನ ಬೆಳೆ, ನನ್ನ ಕಳೆ ನನ್ನದೇ ಹೊಲದಲ್ಲಿ ನಾನೇ ಭಿತ್ತಿದ ಬೀಜ ಸದಾವಕಾಶದಲ್ಲಿ ಬೆಳೆದು ಕಳೆ ಇಲ್ಲದ ಬೆಳೆ ಕನಸು ಕಂಡಿದ್ದು ನಿಜ ಮಣ್ಣಿದು, ಕಪ್ಪಿರಲಿ ಕೆಂಪಿರಲಿ ಖಂಡಿತ ಚಿಗುರುವುದು ಕಳೆ ನೀರಾಕಿದ್ದು ನಾನೇ ಬೆಳೆಗೆ, ಇಂಗಿತ. ಅದರೊಡನೆ ಬೆಳೆದದ್ದು ಕಳೆ ಇಂದು, ಬೆಳೆಗಾತ್ರಕ್ಕೆ ಬೆಳೆದ ಕಳೆ ಅಲ್ಲಿ ಕೆಸರು ತುಂಬಿದ ಕೊಳೆ ಈಗ ಪಿಕಾಸಿ ಹಿಡಿದು ಹೊಲದ ಬದಿಯಲ್ಲಿ ನಿಂತ ನಾನು ತಲೆಯಲ್ಲಿ ಸಾಕದಿದ್ದರೂ ಬದುಕುವ ಹೇನು   ರಭಸದಲಿ ತೆಗೆಯ ಬೇಕೆಂದಿರುವೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೋಸೆ ದೋಸ್ತಿ : ಪ್ರಶಸ್ತಿ ಅಂಕಣ

  ರಜಾ ದಿನ ಭಾನುವಾರ ಅಂದ್ರೆ ಎಚ್ಚರಾಗೋದು ಹೊಟ್ಟೆಯಿಂದ್ಲೇ. ಮುಖಕ್ಕೆ ಬಿಸಿಲು ಬಿದ್ರೂ ಎಚ್ಚರಾಗದ ದೇಹವನ್ನ ಹುಟ್ಟೋ ಹೊಟ್ಟೆ ಹಸಿವು ಎಬ್ಬಿಸಿಬಿಡುತ್ತೆ. ಹಂಗೇ ಎದ್ದು ಹೊರಗಿಣುಕಿದ್ರೆ ಎದುರಿನ  ತೆಂಗಿನ ಮರದ ಮೇಲಿನ ಕಾಗೆ ಗುಡ್ಮಾರ್ನಿಂಗ್ ಅಂತ ಕೂಗ್ತಾ ಇದ್ದುದು ನಂಗೇನಾ ಅನಿಸುತ್ತೆ. ತಿರುಗೋ ಭೂಮಿಗಿಲ್ಲದ ರಜೆ, ಸುತ್ತೋ ಬಸ್ಸಿಗಿಲ್ಲದ ರಜೆ , ಅಹಮಿಗಿಲ್ಲದ , ಹಸಿವಿಗಿಲ್ಲದ ರಜೆ ನಿಂಗೇಕೋ ಬೆಪ್ಪೇ ? ಜಗವೆಲ್ಲ ಎದ್ದಿರಲು ಮಲಗಿರುವೆ ಸಿದ್ದ ಅಂತ ನಂಗೆ ಬಯ್ಯೋಕೆ ಶುರು ಮಾಡಿತ್ತಾ ಗೊತ್ತಿಲ್ಲ. ಎಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಳೆ ಅಂಗಿ ತೆಗೆದು ಹೊಸ ಅಂಗಿ ಹಾಕ್ಕಂಡಂಗೆ!: ಸಂತೆಬೆನ್ನೂರು ಫೈಜ್ನಟ್ರಾಜ್

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ…… ಸಾಹಿತ್ಯ ಅರ್ಥವಾಗದೇ ಇದ್ದ ವಯಸ್ಸಿನಲ್ಲಿ ಗುನುಗಿಕೊಳ್ಳುತ್ತಿದ್ದ ಹಾಡು.ವಸಂತ ಒಬ್ಬ ವ್ಯಕ್ತಿ, ಆತ ಎಲೆ ಮೇಲೆ ಲೆಟರ್ ಬರೆದ ಅಂತಾನೆ ಅರ್ಥೈಸಿಕೊಂಡಿದ್ದು! ವಸಂತ ಬಂದ ಚೈತ್ರಾಳ ಜೊತೆ….ವಾವ್ ಏನು ಖುಷಿ ಅಲ್ವಾ?ಮರ-ಗಿಡ-ಬಳ್ಳಿಗಳೆಲ್ಲವೂ ಮೈ ಚಕ್ಳ ಬಿಟ್ಕಂಡು ಬಕ್ಕಬರ್ಲಾಗಿ ಬಾಳೋ ಅಥವಾ ಸಾಯೋ ಟೈಮಿಗೆ ಈ ಜೋಡೀನ್ ನೋಡಿ ಮತ್ತೆ ಮೈಕೈ ತುಂಬ್ಕಂಡ್ ಮೊದಲ್ನೇ ಸರ್ತೀ ಮದ್ವೆಯಾಗೋ ಹುಡುಗ್ನಂಗೆ ಸಿಂಗಾರಗೊಳ್ತವೆ ಅಂದ್ರೆ ಅದಕ್ಕೆ ಚೈತ್ರ ಕಾರಣನೋ,ವಸಂತನೋ ಗೊತ್ತಿಲ್ಲ! ಎದೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಿಥೇನ್ ಎಂಬ ಟೈಬಾಂಬ್ ಟಿಕ್.. ಟಿಕ್…: ಅಖಿಲೇಶ್ ಚಿಪ್ಪಳಿ

ತೇನವಿನಾ ತೃಣಮಪಿ ನ ಚಲತಿ ಎನ್ನುವ ಮಾತು ಭಗವಂತನಿಗಿಂತ ಚೆನ್ನಾಗಿ ವಿದ್ಯುಚ್ಛಕ್ತಿಗೇ ಅನ್ವಯವಾಗುತ್ತದೆ. ಯಾಕೆಂದರೆ ವಿದ್ಯುತ್ತಿಲ್ಲದಿದ್ದರೆ ಇಂದು ಜೀವನವೇ ಇಲ್ಲ. ಮನುಷ್ಯ ಇದ್ದೂ ಸತ್ತಂತೆ. ಮನೆಯೊಳಗಿನ ತೃಣವೂ ಕಸದ ಬುಟ್ಟಿಗೆ ರವಾನೆಯಾಗಲು ವಿದ್ಯುತ್ ಬೇಕು. ಇಂದು ವಿದ್ಯುತ್ ಎಂಬ ಮಹಾಮಾಂತ್ರಿಕನಿಲ್ಲದೆ ಜೀವಪ್ರವಾಹವೇ ನಿಶ್ಚಲ. ಶಿಶುವಾಗಿ ಹುಟ್ಟುವಾಗಿನಿಂದ ಹಿಡಿದು ಹೆಣವಾಗಿ ಉರಿದು ಬೂದಿಯಾಗುವವರೆಗೂ ವಿದ್ಯುತ್ ಬೇಕೇಬೇಕು. ಶಿಶು ಹುಟ್ಟುವಾಗ, ಅದು ಆಪರೇಷನ್ ಥಿಯೇಟರ್ ಆಗಿರಲಿ, ಬಾಣಂತಿ ಕೋಣೆಯಗಿರಲಿ ವಿದ್ಯುತ್ ಬೇಕು. ಹುಟ್ಟಿದ ಮಗುವೂ ಕೂಡ ಅಮ್ಮ, ನೀನಲ್ಲದಿದ್ದರೆ ನಾನಿದ್ದೇನು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಾಯಿಯ ಮಮತೆ: ಲೋಕೇಶಗೌಡ ಜೋಳದರಾಶಿ

ಕಮಲಮ್ಮನಿಗೆ ಮೋಹನ ಒಬ್ಬನೆ ಮಗ. ಚಿಕ್ಕ ವಯಸ್ಸಿನಲ್ಲೆ ಗಂಡನ ಕಳೆದುಕೊಂಡ ಕಮಲಮ್ಮ ತನ್ನ ಮಗನನ್ನು ತುಂಬ ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವನನ್ನಾಗಿ ಬೆಳೆಸಿದಳು. ಅವಳು ಕೂಲಿ ಕೆಲಸದ ಜೊತೆ ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸಗಳನ್ನ ಮಾಡಿ ಮೋಹನನನ್ನು ಹತ್ತನೆಯ ತರಗತಿಯವರೆಗೆ ಓದಿಸಿ ನಂತರ, ಅವನನ್ನು ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಓದಲು ಸೇರಿಸಿದಳು. ಮೋಹನ ಕಾಲೇಜು ಸೇರಿದ ನಂತರ ತಾಯಿಗೆ ವಾರಕ್ಕೆ ಒಂದು ಪತ್ರ ಬರೆಯುತ್ತಿದ್ದ. ಕಾಲಕ್ರಮೇಣ ತಾಯಿಗೆ ಪತ್ರ ಬರುವುದು ಕಮ್ಮಿಯಾಯಿತು. ಇದರಿಂದ ತಾಯಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 41): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ನೊಬೆಲ್ ಬಹುಮಾನವನ್ನು ಎರಡು ಬಾರಿ ಪಡೆದ ಏಕೈಕ ಮಹಿಳೆ ಯಾರು? ೨.    ಚದುರಂಗ ಇದು ಯಾರ ಕಾವ್ಯ ನಾಮ? ೩.    ೧೯೬೦ರಲ್ಲಿ ವಿ.ಕೃ.ಗೋಕಾಕರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ? ೪.    ಹೆಲಿಕ್ಟಾಪ್ಟರ್‌ನ ಸಂಶೋಧಕರು ಯಾರು? ೫.    ಟೈಲ್ಸ್ ಸ್ವಚ್ಛಗೊಳಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು? ೬.    ’ಸೆಕೆಂಡ್’ ಗ್ರಂಥದ ಕರ್ತೃ ಯಾರು?  ೭.    ವಿದ್ಯುತ್ಕಾಂತೀಯ ಪರಿಣಾಮವನ್ನು ಮೊದಲು ಆವಿಷ್ಕರಿಸಿದವರು ಯಾರು? ೮.    ತಮಿಳು ಸಾಹಿತ್ಯದಲ್ಲಿ ’ತಮಿಳು ತಾತಾ’ ಎಂದೂ ಹೆಸರಾದವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನವದಂಪತಿಗಳನ್ನು ಉದ್ದೇಶಿಸಿ: ಹೃದಯಶಿವ ಅಂಕಣ

ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ, ಇನ್ನಷ್ಟೇ ದಾಂಪತ್ಯ ಬದುಕಿಗೆ ಪ್ರವೇಶ ಪಡೆಯುತ್ತಿರುವ, ಆದರೆ ಹುಡುಗುತನದ ಗಡಿಯನ್ನು ಮೀರಿದ, ಕುಂಟೋಬಿಲ್ಲೆ, ಮರಕೋತಿ ಆಟಗಳನ್ನು ಬಿಟ್ಟು ಈಗಷ್ಟೇ ಮದುವೆಯಾಗಿರುವ ತರುಣ ಅಥಾ ತರುಣಿ. ನೀವು ಜನ ತುಂಬಿದ ಎಲ್ಲಾ ಊರುಗಳಲ್ಲಿ, ಚಿತ್ರಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಕಣ್ಣಿಗೆ ಬೀಳುತ್ತೀರಿ. ಮುಂಬಯಿಯ ಇಂಡಿಯಾ ಗೇಟಿನ ಬಳಿ, ಊಟಿಯ ಚಳಿಯ ನಡುವೆ, ಕೇರಳದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ