ಅಲ್ಲಿ ಫುಕೋಕಾ-ಇಲ್ಲಿ ಚೇರ್ಕಾಡಿ: ಅಖಿಲೇಶ್ ಚಿಪ್ಪಳಿ ಅಂಕಣ

ಬೀಳು ಭೂಮಿಯ ಭೀಷ್ಮ-ಕರ್ನಾಟಕದ ಹೆಮ್ಮೆಯ ಕೃಷಿ ಋಷಿ – ಚೆರ್ಕಾಡಿ ರಾಮಚಂದ್ರರಾವ್ ಭವ್ಯ ಭಾರತದ ಹೆಮ್ಮೆಯ ಕರ್ನಾಟಕದ ಕರಾವಳಿ ತೀರದಲ್ಲಿ ಬರೀ ಎರಡೂಕಾಲು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸಿದ, ದೇಶಕ್ಕೇ ಮಾದರಿಯಾಗಬಲ್ಲ, ಯಾವುದೇ ಕೃಷಿ-ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಮಾಡಿ ಸ್ವಾವಲಂಬಿ ಬದುಕನ್ನು ಬದುಕಿದ ವ್ಯಕ್ತಿ ಆಗಿ ಹೋಗಿದ್ದಾರೆ. ಸರ್ಕಾರದ ಭಿಕ್ಷೆಯಾದ ಸಬ್ಸಿಡಿಯನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಯಾವ ಆಧುನಿಕ ಉಪಕರಣಗಳನ್ನೂ ಬಳಸದೆ, ವಿದ್ಯುತ್ ಇಲ್ಲದೇ ಕೃಷಿಯಿಲ್ಲ, ರಾಸಾಯನಿಕಗಳಿಲ್ಲದೆ ಕೃಷಿ ಅಸಾಧ್ಯ ಎಂಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ

ಅಂದು ಮಧ್ಯಾಹ್ನ ಊಟ ಮಾಡಿ ಟಿ.ವಿ ಅನ್ ಮಾಡಿ ಕುಳಿತೆ.ಸಿಟಿ ಚಾನಲವೊಂದರಲ್ಲಿ ಕಿಚ್ಚ ಸುದೀಪನ 'ಸವಿ ಸವಿ ನೆನೆಪು' ಹಾಡು ಬರುತ್ತಿದ್ದಂತೆ ಕೆ.ಇ.ಬಿ ಯವರು ವಿದ್ಯುತ್ ಶಾಕ್ ಕೊಟ್ಟರು, ಏನ್ಮಾಡೋದು? ಅದೇ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಲಗುತ್ತಿದ್ದಂತೆಯೇ ನನಗರಿವಿಲ್ಲದಂತೆ ನನ್ನ. ಕಾಲೇಜು ದಿನಗಳ ನೆನಪುಗಳಿಗೆ ಜಾರಿಕೊಂಡೆ … ಹದಿಹರೆಯದ ದಿನಗಳು ಬಲು ಸೊಗಸು..! ಆಗಿನ ಆಕರ್ಷಣೆ-ವಿಕರ್ಷಣೆಗಳು, ಆಸೆ-ನಿರಾಸೆಗಳು, ಧಿಡೀರ್ ಬದಲಾಗುವ ಚಿತ್ತವೃತ್ತಿಗಳು, ಜಗತ್ತನ್ನೇ ಗೆಲ್ಲುವೆನೆಂಬ ಮನೋಇಚ್ಛೆಗಳು, ಸ್ನೇಹಿತರ ಒಡನಾಟಗಳು….ಹೀಗೆ ಎಲ್ಲವೂ ಅವಿಸ್ಮರಣೀಯ… 'ಹುಚ್ಚು ಕೋಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-20) : ಹಿಪ್ಪರಗಿ ಸಿದ್ದರಾಮ್, ಧಾರವಾಡ

                ಇಲ್ಲಿಯವರೆಗೆ   ಆತ್ಮೀಯ ಓದುಗಪ್ರಭುಗಳೇ,   ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಕಳೆದ ಸಂಚಿಕೆಯಲ್ಲಿ ನಾವು ನೋಡಿದ ಚಿಣ್ಣರಿಗಾಗಿ ರಚಿಸಿದ ‘ಮೋಡಣ್ಣನ ತಮ್ಮ’ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಲ್ರೆ ಸಮಸ್ಯೆಯೂ, ಗುಂಡಣ್ಣನ ಗ್ಯಾಂಗೂ:ಪ್ರಶಸ್ತಿ ಅಂಕಣ

ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ "ಏನ್ ಚಿಲ್ರೆ ಸಮಸ್ಯೆ ಗುರೂ, ಥೂ..!" ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು. "ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ" ಅಂದ ಮಂಜ. "ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ, ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 11): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ ಯಾರೋ ಬಾಗಿಲು ಬಡಿದಂತಾಗಿ ಅವಸರವಾಗಿ ಮೇಲೆದ್ದು, ಮಲಗಿದ್ದ ಮಗುವನ್ನು ಎತ್ತುಕೊಂಡು ಹೊರ ಬಂದೆ. ಒಂದಿಬ್ಬರು ಗಿರಾಕಿ ಬಂದಿದ್ದರು. ಈ ಸಲ ವಠಾರದ ಮುಂದಿರುವ ಗಲ್ಲೆ ಮೇಲೆ ರತ್ನಮ್ಮ ಕುಳಿತಿದ್ದಳು. ನಾನು ಮಗುವನ್ನು ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿದ್ದೆ. ರತ್ನಮ್ಮ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದುದರಿಂದ ನನಗೆ ಮುಜುಗರವಾಗುತ್ತಿತ್ತು.    ಗಿರಾಕಿ ತಮ್ಮಿಷ್ಟದ ಹುಡುಗಿಯರನ್ನು ಆಯ್ದುಕೊಂಡು ರೂಮಿನೊಳಕ್ಕೆ ಮಾಯವಾದರು. ಅವರು ಒಳ ಹೋದ ತಕ್ಷಣ ನನ್ನಲ್ಲಿಗೆ ಬರಬರನೆ ಬಂದ ರತ್ನಮ್ಮ ನನ್ನ ರಟ್ಟೆಯನ್ನು ಹಿಡಿದುಕೊಂಡು ದರ ದರ ಎಳೆಯುತ್ತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ್: ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ. ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ. ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.  ಮರೆಯದಿರಿ ನಮ್ಮ ಮಕ್ಕಳ ಮುಂದೆ ಮಾತಾಡುವ ಸಮಯದಲ್ಲಿ ಹುಷಾರಾಗಿರಿ ಈಗ ನಮ್ಮ ಮಕ್ಕಳಿಗೂ ಒಂದು ಕಾನೂನು ಇದ್ದು ಅದು ಎಲ್ಲರ ಗಮನ ಸೆಳೆದಿದೆ. ಅದರ ಹಿನ್ನಲೆಯಲ್ಲಿ ನಾವೆಲ್ಲ ವಿಚಾರಿಸಬೇಕಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನನ್ನದಲ್ಲ…?: ಜಯರಾಮ ಚಾರಿ

 ಹಾಳು ಜಯಂತ ಮತ್ತೆ ಕಾಣೆಯಾಗಿದ್ದಾನೆ. ಆತನಿಗೆ ಕಾಣೆಯಾಗುವ ಕಾಯಿಲೆ ಹೊಕ್ಕಿಬಿಟ್ಟಿದೆ ಇತ್ತೀಚೆಗೆ. ಇದು ನಾಲ್ಕನೇ ಬಾರಿ ಕಾಣೆಯಾಗುತ್ತಿರುವುದು. ಅವನ ಅಮ್ಮ ದಿಗಿಲಾಗಿದ್ದಾಳೆ. ಆಕೆಗೊಂದು ಸಾಂತ್ವನ ಹೇಳಿ ಬರುವಾಗ ಆತನ ಸ್ಟಡಿ ಟೇಬಲ್ ಮೇಲಿನ ಬಿಳಿಹಾಳೆಗಳ ಗೊಂಚಲೊಂದು ಸಿಕ್ಕಿದೆ. ಅದಕ್ಕೆ "ನನ್ನದಲ್ಲ" ಎಂಬ ಶೀರ್ಷಿಕೆಯಿದೆ. ಅದನ್ನು ಅಲ್ಲಿಯೇ ಓದದೇ ರೂಮಿಗೆ ಬಂದು ಓದಲು ಬಿಚ್ಚಿದರೆ ಅದೊಂದು ಕತೆ. ಒಬ್ಬ ಕತೆಗಾರನ ಕತೆಯಲ್ಲಿ ಆತ ಹೊಕ್ಕುವುದು ತೀರ ಸಾಮಾನ್ಯ. ಅವನು ಬಾರದಿದ್ದರೂ ಆತನ ಜಂಭ,ಸ್ವಾರ್ಥ,ದಿಗಿಲು,ದ್ವಂದ್ವ,ಹುಚ್ಚು ಆದರ್ಶಗಳು, ಅವನ ಸ್ನೇಹಿತರು, ಆತನನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಜ್ವಲ್ ಫೋಟೋಗ್ರಾಫಿ

ನೀರ್ಗನ್ನಡಿ !   ನಮ್ಮ ಬೆಳಕು ಅಲ್ಲೇ ಇರತ್ತೆ, ಹೇಗೆ ನೋಡ್ತೀವಿ ಅನ್ನೋದು ಮುಖ್ಯ ಸೂರ್ಯ  – ಕಣ್ಣಾ ಮುಚ್ಚಾಲೆ ಆಟದ ಗುರು ಮ್ಯಾಜಿಕ್ ಬಣ್ಣಗಳು – ಸೂರ್ಯ ತನ್ನ ಇನ್ನೊಂದು ರೂಪದಲ್ಲಿ ಸ್ಟ್ರೀಟ್ ಸೂರ್ಯ – ಬೆಳಗಿನ ಜಾವದ ಸೂರ್ಯ, ಆಫ್ ಆಗಿರೋ ಸ್ಟ್ರೀಟ್ ಲೈಟ್ ಒಳಗಿನಿಂದ ಸೌತ್  ಇಂಡಿಯಾ ಮ್ಯಾಪ್ ಬಾರ್ಡರ್ !  ಪ್ರಕೃತಿ ನಮಗೆ ಏನನ್ನು ಬೇಕಾದರೂ ತೋರಿಸುತ್ತೆ, ಎಲ್ಲವನ್ನೂ ತೋರಿಸುತ್ತೆ 🙂 ಸಿಹಿನೀರಿನ ಬಸವನ ಹುಳು ಸಿರಿಮನೆ ಜಲಪಾತ – ಶೃಂಗೇರಿ, ಕರ್ನಾಟಕ ದ್ರಾಕ್ಷಿ ಹಣ್ಣಿನ ಗೊಂಚಲಿನಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಯಂತಿಲ್ಲೆ’:ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕದಿಂದೊಂದು ಕತೆ

ಹಾಸ್ಯಪ್ರಿಯ ಓದುಗರಿಗೆ ಹಿರಿಯ ಸಾಹಿತಿ ಸೂರಿ ಹಾರ್ದಳ್ಳಿ  (ಸೂರ್ಯನಾರಾಯಣ ಕೆದಿಲಾಯ ಎಚ್) ಅವರು ಚಿರಪರಿಚಿತ. ಹಾಸ್ಯವಷ್ಟೇ ಅಲ್ಲ ಕತೆ, ಕಾದಂಬರಿ, ಟಿ.ವಿ.ಧಾರಾವಾಹಿಗಳ ಸಂಭಾಷಣೆ ಹೀಗೆ ಸದಾ ಕ್ರಿಯಾಶೀಲರಾದ ಇವರು ಈವರೆಗೆ ತ್ರಸ್ತ, ವಧುಪರೀಕ್ಷೆ (ಕಥಾಸಂಕಲನ); ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ (ಕಾದಂಬರಿ); ಬಾಸನ್ನಿಬಾಯ್ಸೋದ್ಹೇಗೆ?(ಹಾಸ್ಯನಾಟಕ); ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ(ಹಾಸ್ಯ ಸಂಕಲನಗಳು) ಮೊದಲಾದ ಸಮೃದ್ದ ಸಾಹಿತ್ಯವನ್ನ ಓದುಗರಿಗೆ ನೀಡಿದ್ದಾರೆ.  ಪ್ರಕಾಶ ಸಾಹಿತ್ಯ ಪ್ರಕಟಿಸಿರುವ ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕ 'ಸೊಂಡಿಲೇಶ್ವರ'ದಿಂದ ಆಯ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುದೀಪ್ ನಾಯಗನ್, ಇಳಯರಾಜಾ ಟ್ಯೂನುಗಳು ಮತ್ತು ನನ್ನ ಲೈನುಗಳು: ಹೃದಯಶಿವ ಅಂಕಣ

ನನ್ನನ್ನು ಸದಾ ಕಾಡುವ ಅನೇಕ ತಮಿಳು ಚಿತ್ರಗಳಲ್ಲಿ ನಾಯಗನ್ ಚಿತ್ರಕ್ಕೆ ಮೊದಲ ಸ್ಥಾನ ಕೊಡಬಯಸುತ್ತೇನೆ. ೧೯೮೭ರಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು. ಕಮಲಾ ಹಾಸನ್ ಅತ್ಯದ್ಭುತ ಅಭಿನಯವಿತ್ತು. ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆಸ್ಕರ್ಸ್ ವರೆಗೂ ಹೋಗಿತ್ತು. ಸುದೀಪ್ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಟಿಸುವ ಆಸಕ್ತಿ ತೋರಿದ್ದ ಕಾಲದಲ್ಲಿ ನಾನು ಒಂದೇ ಒಂದು ಚಿತ್ರಗೀತೆ ಬರೆಯುವ ಹೋರಾಟದಲ್ಲಿದ್ದೆ. ಈ ಕಾರಣದಿಂದ ಸುದೀಪ್ ತಂದೆ ಸರೋವರ್ ಸಂಜೀವರನ್ನು ಒಂದೆರಡು ಸಲ ಭೇಟಿಯಾಗಿದ್ದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೆಜ್ಜೆಪೂಜೆ: ವಾಸುಕಿ ರಾಘವನ್ ಅಂಕಣ

  ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿರುವ ಬಸುರಿ ಪಿಟೀಲಿನಲ್ಲಿ ವಿಷಾದಗೀತೆ ನುಡಿಸುತ್ತಿರುತ್ತಾಳೆ. ಕೆಳಮಹಡಿಯಲ್ಲಿ ಅವಳ  ಅಮ್ಮ ತಲೆಯ ಮೇಲೆ ಕೈ ಹೊತ್ತುಕೊಂಡು “ಅಯ್ಯೋ ಗಂಡು ಮಗು ಹುಟ್ಟಿಬಿಟ್ಟರೆ ಹೆಂಗಪ್ಪಾ?” ಅಂತ ಚಿಂತಾಕ್ರಾಂತಳಾಗಿ ಕುಳಿತಿರುತ್ತಾಳೆ. ಆಗಿನ ಕಾಲದ ಚಿತ್ರಗಳಲ್ಲಿ ಹೆಣ್ಣುಮಗು ಹುಟ್ಟಿದಾಕ್ಷಣ ಕುಟುಂಬದ ಕೆಲವರಾದರೂ ನಿರಾಶರಾಗುವ, ತಾಯಿ ಸಂತಸಗೊಂಡಿದ್ದರೂ ಸಂಭ್ರಮ ಪಡಲಾಗದೆ ಒದ್ದಾಡುವ ಸನ್ನಿವೇಶಗಳು ಅಪರೂಪವೇನಲ್ಲ. ಆದರೆ ಆಶ್ಚರ್ಯ ಅನ್ನುವಂತೆ ಇಲ್ಲಿನ ಸನ್ನಿವೇಶ ಅದಕ್ಕೆ ತದ್ವಿರುದ್ಧ. ನಂತರ ಹೆಣ್ಣುಮಗು ಚಂದ್ರಾ ಹುಟ್ಟಿದಾಗ ಅದರ ಅಜ್ಜಿ ಸಂಭ್ರಮಿಸುತ್ತಾಳೆ, ತಾಯಿ ಬೇಸರದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್

  ೧. ಚರಿತ್ರೆಯ ತತ್ವವ ತಿಳಿಯ ಹೊರಟು ಜಗದ ಜಟಿಲ ದ್ವಂದ್ವಗಳ ಗೋಜಲಿನಲ್ಲಿ ಸಿಗೆಬಿದ್ದ ತತ್ವಜ್ಞಾನಿ ಹಾಲುಗಲ್ಲದ ಮೊಮ್ಮಗಳ ನಗೆಯ ಮಡುವಿನಲ್ಲಿ ಸುಳಿತಿರುಗಿ ಮುಗುಳ್ನಕ್ಕ   ೨. ಇಂದಿನ ನಡುಹಗಲ ಕಾಡಿನ ಮೌನ ಮನುಕುಲದ ಶೈಶವದ ಸಕಲ ತೊಳಲಾಟ ಕಳವಳ ದಿಗ್ಭ್ರಮೆ ನಲಿವು ಹಸಿ ಹಸಿ ಕಾಮ ಎಲ್ಲ ಮೇಳೈಸಿದ ಆದಿಮ ಸಂಗೀತ   ೩. ಶಬ್ದಗಳ ಭಾಷೆ, ಹೆಜ್ಜೆ – ಗೆಜ್ಜೆಗಳ ಭಾಷೆ ಲಯಗಳ, ರೇಖೆ ಬಣ್ಣಗಳ ಭಾಷೆ ಎಲ್ಲದರ ಹಂಗ ಹರಕೊಂಡು ಎರಡು ಜೋಡಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚೌತಿ ಹಬ್ಬ: ವೆಂಕಟೇಶ್ ಪ್ರಸಾದ್

ಕಳೆದ ನಾಲ್ಕು ದಿನಗಳಿಂದ ಮಳೆಯಿಲ್ಲದೆ ಬೇಸಿಗೆಯಂತಾಗಿದ್ದ ನನ್ನೂರು ಮೊನ್ನೆ ಶನಿವಾರ ಸುರಿದ ಹಠಾತ್ ಮಳೆಗೆ ಮತ್ತೆ ಮಳೆಗಾಲವನ್ನು ನೆನಪಿಸಿತ್ತು. ಚಹಾ ಕುಡಿಯುತ್ತ ಟೆರೆಸ್ನಲ್ಲಿ ಅಡ್ದಾಡುತ್ತಿದ್ದ ನನಗೆ ಪಕ್ಕದ ಶಾಲೆಯಿಂದ ತೇಲಿಬಂದ  ಗಜಮುಖನೇ ಗಣಪತಿಯೇ ನಿನಗೆ ವಂದನೇ ನಂಬಿದವರ ಬಾಳಿನ ಕಲ್ಪತರು ನೀನೇ ……. ಹಿನ್ನೆಲೆ ಸಂಗೀತ  ರಹಿತ ಎಸ್. ಜಾನಕಿ ಹಾಡು ಕ್ಷಣಕಾಲ ಆಶ್ಚರ್ಯವನ್ನುಂಟುಮಾಡಿತ್ತು. ಇದರ ಬೆನ್ನಿಗೆ ಬಂದ ಶರಣು ಶರಣಯ್ಯ …..  ಪಿ. ಬಿ . ಶ್ರೀನಿವಾಸ್ ಹಾಡು ಆಶ್ಚರ್ಯವನ್ನು ಇಮ್ಮಡಿಗೊಳಿಸಿತ್ತು!! ಇದೇನಪ್ಪಾ ನೋಡಿಬಿಡೋಣ ಎಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಧ್ಯಾಪಕನಾಗಿ ನನ್ನ ಅನುಭವ…: ಪ್ರಶಾ೦ತ ಕಡ್ಯ

ನನ್ನ ಮನಸ್ಸಿನಲ್ಲಿ ಬಾಲ್ಯದಲ್ಲೇ ನಾನೊಬ್ಬ ಶಿಕ್ಷಕನಾಗುವವನು ಎ೦ದು ಠಸೆ ಒತ್ತಿ ಆಗಿತ್ತು. ಚಿಕ್ಕ೦ದಿನಲ್ಲಿ ನನಗೆ ಗೋವಿ೦ದ ಮಾಸ್ಟರು ಆದರ್ಷರಾಗಿದ್ದರು. ಅವರು ಪಾಠಮಾಡುವ ರೀತಿ, ಬಯ್ಯುವ ರೀತಿ, ಮಕ್ಕಳು ಅವರನ್ನು ಗೌರವಿಸುವ ರೀತಿ ಎಲ್ಲವೂ ನನಿಗೆ ತು೦ಬಾ ಇಷ್ಟವಾಗಿದ್ದವು. ಆಗಲೇ ನಿರ್ಧಾರ ಮಾಡಿ ನಾನು ಅಧ್ಯಾಪಕ ವೃತ್ತಿಯನ್ನು ಆಯ್ಕೆಮಾಡಿದ್ದೆನು. ಬಾಲ್ಯದಿ೦ದಲೇ ಅದಕ್ಕೆ ಅನುಕೂಲವಾಗುವ೦ತೆಯೇ ನನ್ನ ತಯಾರಿಗಳಿದ್ದವು. ಅದಕ್ಕೆ ಸರಿಯಾಗುವ೦ತೆ ಒಳ್ಳೇ ಅ೦ಕಗಳನ್ನು ಪಡೆದು, ಅಧ್ಯಾಪಕನಾಗಲು ಬೇಕಾಗುವ ದಿಶೆಯಲ್ಲೇ ವ್ಯಾಸ೦ಗವನ್ನು ನಡೆಸಿದೆನು.   ವ್ಯಾಸ೦ಗ ಮಾಡಬೇಕಿದ್ದರೆ ಮನದಲ್ಲಿ ತು೦ಬಾ ಅಳುಕಿತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋಪಾಗ್ನಿಕುಂಡ: ಪ್ರಶಸ್ತಿ ಬರೆವ ಅಂಕಣ

  ಓದುಗ ಮಿತ್ರರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನೀವು ಈ ಲೇಖನ ಓದೋ ಹೊತ್ತಿಗೆ ನಿಮ್ಮ ಮನೆಗೆ ಗಣಪತಿ ಬಂದಿರಬಹುದು. ಮನೆಯಲ್ಲಿ ಗಣಪತಿ ತರದಿದ್ದರೂ ನೆಂಟರ ಮನೆಯ, ಬೀದಿಯಲ್ಲಿಟ್ಟ ಗಣಪತಿ ಪೆಂಡಾಲಿನ, ಮೈಕಿನ , ಟೀವಿಗಳ ಕಲರ್ ಕಲರ್ ವಾರ್ತೆ, ಶುಭಾಶಯ, ಸ್ನೇಹಿತರ ಶುಭ ಹಾರೈಕೆಗಳಿಂದ, ಮಕ್ಕಳಿಗೆ ಸಿಕ್ಕಿರೋ ಹಬ್ಬದ ರಜೆಯಿಂದ.. ಹೀಗೆ ತರಹೇವಾರಿ ತರದಿಂದ ಹಬ್ಬದ ಕಳೆ ಮೂಡಿರಬಹುದು.ಹಬ್ಬಕ್ಕೆ ಬಸ್ ಬುಕ್ ಮಾಡಲಾಗದೇ, ಸಿಕ್ಕಾಪಟ್ಟೆ ರಶ್ಷಿನ ಬಸ್ಸು, ಟ್ರೈನುಗಳಲ್ಲಿ ಎದ್ದೂ ಬಿದ್ದು ಬೇರೆ ಊರಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನರಾಗದ ನೆನಪ ಜೋಗುಳದಲಿ: ದಿವ್ಯ ಟಿ.

ಯಾಕೋ ಬೇಸರವಾಗುತ್ತಿದೆ ಎಂದು ರಾತ್ರಿ ಬೇಗ ಮಲಗಿದವಳಿಗೆ ನಿದ್ರೆಯೂ ಬರುತ್ತಿರಲಿಲ್ಲ. ಒಂದೆರೆಡು ಹಾಡು ಕೇಳುತ್ತಾ ಹಾಗೆಯೇ ಮಲಗಿಬಿಟ್ಟಿದ್ದೆ. ಒಂದು ಗಂಟೆಯ ನಂತರ ಸರಿಯಾಗಿ 12.10ಕ್ಕೆ ಎಚ್ಚರಿಕೆಯಾಯಿತು. ನಿಶ್ಚಿಂತೆಯಿಂದ ಮಲಗಿದ ಕೊಠಡಿಯಲ್ಲಿ ಗಡಿಯಾರದ ಟಿಕ್ ಟಿಕ್ ಸದ್ದು, ಫ್ಯಾನ್ ಗಾಳಿಯ ಸದ್ದು ಬಿಟ್ಟರೆ ಬೇರೆನೂ ಇಲ್ಲ. ವಾಹನಗಳ ಸದ್ದಿನಿಂದ ಗಿಜಿ ಗಿಜಿ ಎನ್ನುತ್ತಿದ್ದ ರಸ್ತೆಯೂ ಮೌನವಾಗಿದೆ. ಅಲ್ಲೆಲ್ಲೋ ಇರುವ ರೈಲ್ವೆ ಹಳಿಯ ಮೇಲೆ ಸಂಚರಿಸುತ್ತಿರುವ ರೈಲಿನ ಸದ್ದು ಗಾಳಿಯಲ್ಲಿ ತೇಲಿ ಬರುತ್ತಿದೆ. ಇತ್ತೀಚಿಗೆ ಎಚ್ಚರವಾಗುವುದು ನಿದ್ರೆಯಿಲ್ಲದೆ ಹೊರಳಾಡುವುದು ಸಾಮಾನ್ಯವಾಗಿದ್ದರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುರಿಯುವ ಫುಕೊಶಿಮ-ಎರವಾಗಲಿರುವ ಕೊಡಂಕುಳಂ: ಅಖಿಲೇಶ್ ಚಿಪ್ಪಳಿ ಅಂಕಣ

ಫುಕೊಶಿಮ ಅಣು ದುರಂತದ ಬೆನ್ನಲ್ಲೆ ಬಹಳಷ್ಟು ಅವಘಡಗಳು ಅಲ್ಲಿ ಸಂಭವಿಸುತ್ತಿವೆ. ಇದೀಗ ಹೊಸದಾಗಿ ಸೇರ್ಪಡೆಯೆಂದರೆ, ಅಣು ರಿಯಾಕ್ಟರ್‍ಗಳ ಬಿಸಿಯನ್ನು ತಣ್ಣಗಾಗಿಸುವ ನೀರಿನ ಭದ್ರವಾದ ಟ್ಯಾಂಕ್‍ಗಳ ಸೋರಿಕೆ. ಬಳಕೆಯಾದ ವಿಕಿರಣಯುಕ್ತ ನೀರಿನ ಟ್ಯಾಂಕ್ ಸೋರಿಕೆಗೊಂಡು ಪೆಸಿಫಿಕ್ ಸಮುದ್ರಕ್ಕೆ ಸೇರಿದೆ. 2011ರ ಬೀಕರ ಸುನಾಮಿ ಮತ್ತು ಭೂಕಂಪ ಜಪಾನಿನ ಪುಕೊಶಿಮಾದ ಅಣು ಸ್ಥಾವರಗಳನ್ನು ಹಾಳುಗೆಡವಿ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನುಂಟುಮಾಡಿತ್ತು. ಈಗಾಗಲೇ 8 ಟ್ಯಾಂಕಿನಿಂದ ಸುಮಾರು 300 ಟನ್‍ಗಳಷ್ಟು ವಿಕಿರಣಯುಕ್ತ ನೀರು ಸೋರಿಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೋರಿಕೆಯಾದ ಜಾಗದಿಂದ 50 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 10): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ   ಅವತ್ತು ಹಾಗೆ ಆತ್ಮೀಯಳಾದ ಅವಳು ಸ್ವಲ್ಪ ದಿನಗಳವರೆಗೆ ಆಶ್ರಯದಾತಳು ಆದಳು. ತನ್ನ ಕಥೆಯನ್ನೆಲ್ಲ ಹೇಳಿಯಾದ ಮೇಲೆ ನನ್ನ ಕಥೆಯನ್ನು ಕೇಳಿದ ಅವಳು, ನಾನು ಕೂಡ ದಂಧÉಗೆ ಹಳಬಳೇ ಎಂಬುದನ್ನು ಅರ್ಥ ಮಾಡಿಕೊಂಡಾದ ಮೇಲೆ ‘ನಮ್ಮ ರತ್ನಮ್ಮನ ದಂಧೆಮನೆಗೆ ನೀನು ಸೈತ ಬರುವುದಾದರೆ ಬಾ' ಎಂದು ಕರೆದಳು. ಮರುಕ್ಷಣ ‘ಬೇಡ ಬೇಡ ನನ್ನ ಮಗನಿಗಾದ ದುರ್ಗತಿಯೇ ನಿನ್ನ ಮಗಳಿಗೂ ಆಗಬಹುದು, ಇಲ್ಲವೇ ನಿನ್ನ ಮಗಳನ್ನು ಸ್ವಲ್ಪ ದೊಡ್ಡವಳಾದ ತಕ್ಷಣವೆ ದಂಧೆಗೆ ಇಳಿಸಿಬಹುದು. ಈ ಕೂಪದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-19) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ಓದುಗಪ್ರಭುಗಳೇ, ಇಲ್ಲಿಯವರೆಗೆ ನಾವು ಕವಿ ಹೃದಯದ ಮಹಾಕವಿ ಕುವೆಂಪುರವರ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಕಥಾವಸ್ತುಗಳೊಂದಿಗೆ ಅವರ ವಾಙ್ಮಯದ ವಿಸ್ತಾರತೆಯಲ್ಲಿ ಅರಳಿದ ರಂಗ(ಕೃತಿ)ಕುಸುಮಗಳು ಕರುನಾಡಿನ ಸಾಹಿತ್ಯದ ಸಂದರ್ಭದಲ್ಲಿ ಮಹತ್ವಪೂರ್ಣವಾಗಿರುವುದನ್ನು ನಾವೀಗಾಗಲೇ ಗಮನಿಸಿದ್ದೇವೆ. ಅವರ ರಂಗಕೃತಿಗಳು ರಚನೆಯಾದಂದಿನಿಂದ (ಶತಮಾನದುದ್ದಕ್ಕೂ) ವಿಶ್ವದ ಹಲವೆಡೆ ಅನೇಕ ಸಾಂಸ್ಕೃತಿಕ ವಾಗ್ವಾದಗಳಿಗೆ ಎಡೆಮಾಡಿಕೊಡುವುದರೊಂದಿಗೆ ತಮ್ಮ ತಾಜಾತನವನ್ನು ಕಾಪಿಟ್ಟುಕೊಂಡಿವೆ. ಹಾಗೆಯೇ ರಂಗಕೃತಿಗಳ ವಸ್ತು, ಭಾಷೆ, ಪಾತ್ರ, ಸನ್ನಿವೇಶಗಳನ್ನು ಮಾತ್ರ ಗಮನಿಸದೆ ಅವುಗಳ ರೂಪಕ, ಅರ್ಥ, ಅನುಸಂಧಾನ ಮತ್ತು ಮುನ್ನೋಟಗಳನ್ನು ನಾವು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಂತೆಲ್ಲ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸುಮನ್ ದೇಸಾಯಿ ಅಂಕಣದಲ್ಲಿ ನೆನಪಿನ ಲಹರಿ…

ಒಂದ ವಾರ ಹಚ್ಚಿ ಹೊಡದ ಮಳಿ ಅವತ್ತ ಒಂದ ಸ್ವಲ್ಪ ಹೊರಪಾಗಿತ್ತು. ಇಡಿ ದಿನಾ ಬಿದ್ದ ಬಿಸಲಿಂದ ಹಸಿಯಾಗಿದ್ದ ನೆಲ ಎಲ್ಲ ಒಣಗಿ ಬೆಚ್ಚಗಿನ ವಾತಾವರಣ ಇತ್ತು. ಒಂದ ವಾರದಿಂದ ಮನ್ಯಾಗ ಕೂತು ಕೂತು ಬ್ಯಾಸರಾಗಿತ್ತು. ಸಂಜಿಮುಂದ ವಾಕಿಂಗ್ ಹೋಗಬೇಕನಿಸಿ ನಮ್ಮ ಕಾಲೋನಿಯೊಳಗಿದ್ದ ಪಾರ್ಕಿಗೆ ಮಕ್ಕಳನ್ನ ಕರಕೊಂಡು ಹೋದೆ. ಅದೊಂದು ಸಣ್ಣ ಪಾರ್ಕು. ಅಷ್ಟರೊಳಗನ ಮಕ್ಕಳಿಗೆ ಆಡಲಿಕ್ಕೆ ಜಾರಬಂಡಿ, ಜೋಕಾಲಿ, ಒಂದ ಸಣ್ಣ ಪರ್ಣಕುಟಿರ, ಹೆಣ್ಣಮಕ್ಕಳಿಗೆ ಒಂದ ಕಡೆ ಗುಂಪಾಗಿ ಕೂತು ಹರಟಿಹೊಡಿಲಿಕ್ಕೆ ಹೇಳಿ ಮಾಡಿಸಿದಂಗ ಸುತ್ತಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಳು!: ಗುರುಪ್ರಸಾದ ಕುರ್ತಕೋಟಿ

  ಇವತ್ತಿಗೆ ಸರಿಯಾಗಿ ಆರು ವರುಷಗಳ ಹಿಂದೆ ನಾನವಳ ಭೇಟಿಯಾಗಿದ್ದೆ. ಮೊದಲ ನೋಟದಲ್ಲೇ ಅವಳಲ್ಲಿ ಅನುರಕ್ತನಾದೆ. ಅವಳಲ್ಲಿ ತುಂಬಾ ಇಷ್ಟವಾಗಿದ್ದು ಅವಳ ಸ್ನಿಗ್ಧ ಸೌಂದರ್ಯ ಹಾಗು ಅವಳ ಬಣ್ಣ! ಅವತ್ತೇ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಅಪ್ಪ ಎಂದಿನಂತೆ ಬೈದಿದ್ದ. ನಾನವಳನ್ನು ಕರೆದುಕೊಂಡು ಬಂದಿದ್ದು ಅವನಿಗೆ ಸುತಾರಾಮ್ ಇಷ್ಟವಿರಲಿಲ್ಲ. ಆತ ನನ್ನ ಮೇಲೆ ಕೋಪಗೊಂಡಿದ್ದು ಸ್ಪಷ್ಟವಾಗಿತ್ತು. ಆದರೆ ಮುಂದೆ ಎಲ್ಲಾ ಸರಿ ಹೋಗುವುದೆಂಬ ಭರವಸೆ ನನಗೆ. ಅವತ್ತಿಗೆ ಅವನಿಗೆ ಎದುರು ಮಾತನಾಡದೇ ಸುಮ್ಮನಿದ್ದೆ. ಆದರೆ ನನಗಿದ್ದ ದೊಡ್ಡ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನೆ ನೆನೆ ಮನವೆ: ಟಿ.ಕೆ.ನಾಗೇಶ್

ತೊದಲು ನುಡಿಯಿಂದ ಮೊದಲುಗೊಂಡು ನನ್ನ ಜೀವನ ರೂಪಿಸಿಕೊಳ್ಳುವವರೆಗೂ ನನ್ನನ್ನು ತಿದ್ದಿ ತೀಡಿ ನನಗೆ ವಿದ್ಯಾದಾನ ಮಾಡಿದ ನನ್ನ ಎಲ್ಲಾ ಶಿಕ್ಷಕರಿಗೂ ಹಾಗು ತಂದೆ ತಾಯಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ಒಬ್ಬ ಶಿಕ್ಷಕನಾಗಿ ಈ ದಿನ ನನ್ನ ನೆಚ್ಚಿನ ಶಿಕ್ಷಕರೊಬ್ಬರನ್ನು ನೆನೆ ನೆನೆದು ನನ್ನ ಪೂಜ್ಯ ಪ್ರಣಾಮಗಳನ್ನು ತಿಳಿಸಲು ಇಚ್ಚಿಸುತ್ತೇನೆ.  ಸಾವಿರದ ಒಂಬೈನೂರ ಎಂಬತ್ತೇಳರಲ್ಲಿ ನಾನು ಶಾಲೆಗೆ ಸೇರಿದ್ದು. ಶಿಕ್ಷಕರು ನಿವೃತ್ತಿಯ ಹಂತ ತಲುಪಿದ್ದರೂ ಬೆಳಿಗ್ಗೆ ನನ್ನ ಸ್ಲೇಟಿನಲ್ಲಿ ಮೂರು ಅಕ್ಷರಗಳನ್ನು ಬರೆದುಕೊಟ್ಟರೆ ಸಂಜೆಯವರೆಗೂ ಅದೇ ಅಕ್ಷರಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಂಗಾರದಕ್ಕಿ ಮತ್ತು ಇತರೆಗಳು:ಅಖಿಲೇಶ್ ಚಿಪ್ಪಳಿ ಅಂಕಣ

 ವಿಟಮಿನ್ ಎ ಕೊರತೆಯಿಂದ ಪ್ರಪಂಚದಲ್ಲಿ ಪ್ರತಿವರ್ಷ ೨೦ ಲಕ್ಷ ಜನ ಸಾಯುತ್ತಾರೆ ಮತ್ತು ೫ ಲಕ್ಷ ಮಕ್ಕಳು ಕುರುಡರಾಗುತ್ತಿದ್ದಾರೆ ಎಂಬುದೊಂದು ಅಂಕಿ-ಅಂಶ. ವಿಟಮಿನ್ ಎ ಮನುಷ್ಯ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವ. ವಿಟಮಿನ್ ಎ ಕೊರತೆಯು ಮುಖ್ಯವಾಗಿ ಕಣ್ಣಿನ ಮೇಲಾಗುತ್ತದೆ ಎಂಬುದು ಆರೋಗ್ಯ ವಿಜ್ಞಾನ ಕಂಡುಕೊಂಡಿರುವ ಸತ್ಯ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಕಾರಣಗಳಿಂದಾಗಿ ಬಡವರ ಮಕ್ಕಳಿಗೆ ವಿಟಮಿನ್ ಎ ಕೊರತೆಯಾಗಿ ಕಾಡುತ್ತದೆ ಮತ್ತು ಇದರಿಂದಾಗಿ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮವಾಗುತ್ತದೆ. ಹೆಚ್ಚಿನ ಬಡ ಮಕ್ಕಳು ದೃಷ್ಟಿಮಾಂದ್ಯರಾದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೂಪಾಯಿ, ಪೆಟ್ರೋಲು ಮತ್ತು ಸ್ವದೇಶಿ:ಪ್ರಶಸ್ತಿ ಬರೆವ ಅಂಕಣ

ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? ! ರಫ್ತೆಂದರೆ ಚೀನಾದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಾಣೇಶ-ಕಲ್ಲೋಳ ಹಾಸ್ಯದ್ವಯರ ಸಂಗಮ:ಗುಂಡೇನಟ್ಟಿ ಮಧುಕರ ಕುಲಕರ್ಣಿ

ಸುಮಾರು ಹತ್ತು ವರ್ಷಗಳ ಹಿಂದೆ ಹಾಸ್ಯಲೇಖಕ ಅನಂತ ಕಲ್ಲೋಳರಿಂದ ಒಂದು ಕಾಗದ ನನಗೆ ಬಂದಿತ್ತು. ನಾನೊಂದು ಕಾರ್‍ಯಕ್ರಮದಲ್ಲಿ ಯುವಕನೊಬ್ಬನ ಹಾಸ್ಯ ಭಾಷಣವನ್ನು ಕೇಳಿದೆ, ತುಂಬಾ ಚನ್ನಾಗಿ ಮಾತನಾಡುತ್ತಾರೆ. ಜನ ಬಿದ್ದು ಬಿದ್ದು ನಕ್ಕರು. ನೀವು ’ಕ್ರಿಯಾಶೀಲ ಬಳಗ’ದಿಂದ ಆ ಯುವ ಹಾಸ್ಯಭಾಷಣಕಾರನ ಕಾರ್‍ಯಕ್ರಮವನ್ನಿಟ್ಟುಕೊಳ್ಳಬೇಕು. ಬೆಳಗಾವಿ ಜನರಿಗೆ ಅವರ ಭಾಷಣವನ್ನು ಕೇಳುವ ಅವಕಾಶ ಮಾಡಿಕೊಡಿ ಎಂದು ಕಾಗದ ಬರೆದಿದ್ದರು. ಅನಂತ ಕಲ್ಲೋಳರ ಪತ್ರದಲ್ಲಿ ಬರೆದಿರುವಂತೆ ಮುಂದೆ ನಗರದ ಸಾಹಿತ್ಯ ಭವನದಲ್ಲಿ ಆ ನಗೆಭಾಷಣಕಾರನ ಭಾಷಣವನ್ನಿಟ್ಟುಕೊಂಡಿದ್ದೆವು. ಅಂದು ಸಾಹಿತ್ಯ ಭವನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರತ್ನನ ಪರ್ಪಂಚದಲ್ಲಿ ಉಪ್ಪಿ ಚಪ್ಪರಿಸಿದ ಉಪ್ಗಂಜಿ:ಹೃದಯಶಿವ ಅಂಕಣ

ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ… ಟಿ.ಪಿ. ಕೈಲಾಸಂ ಗ್ರಾಮ್ಯಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸಾರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ 1904ರಲ್ಲಿ ಮೈಸೂರಿನಲ್ಲಿ ಜನಿಸಿ 1938 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು 1979 ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಗ್ಧತೆ, ಭೀಕರತೆಯ ನಡುವಿನ ಬೇಲಿ:ವಾಸುಕಿ ರಾಘವನ್ ಅಂಕಣ

ಆರು ಮಿಲಿಯನ್. ಅಂದರೆ ಅರವತ್ತು ಲಕ್ಷ! ಅರವತ್ತು ಲಕ್ಷದಲ್ಲಿ ಎಷ್ಟು ಸೊನ್ನೆ ಎಂದು ಥಟ್ ಅಂತ ಕೇಳಿದರೆ ಒಂದು ಕ್ಷಣ ನೀವೂ ತಡವರಿಸುತ್ತೀರ. ಈ ಸಂಖ್ಯೆಯ ಅಗಾಧತೆ ಗೊತ್ತಾಗಬೇಕಾದರೆ ಅರವತ್ತು ಲಕ್ಷ ಜನರನ್ನು ಊಹಿಸಿಕೊಳ್ಳಿ. ಅದು ಎರಡನೇ ವಿಶ್ವಮಹಾಯುದ್ಧದಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ! ಒಂದು ಅಣುಬಾಂಬು ಹಾಕಿ ಅಷ್ಟೂ ಜನರನ್ನು ಕೊಂದಿದ್ದರೆ ಅದನ್ನು ಯುದ್ಧಕಾಲದ ವಿವೇಚನಾರಹಿತ ನಿರ್ಧಾರ ಅನ್ಕೊಬೋದಿತ್ತು. ಆದರೆ ವ್ಯವಸ್ಥಿತವಾಗಿ ಯಹೂದಿಗಳ ಮನೆ, ಆಸ್ತಿ ಎಲ್ಲವನ್ನೂ ವಶಪಡಿಸಿಕೊಂಡು, ಅವರನ್ನು ಸ್ಥಳಾಂತರಿಸಿ, ಸರಿಯಾಗಿ ಊಟ ಕೊಡದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ