ಮಕ್ಕಳ ಪದ್ಯಗಳು: ಹೃದಯಶಿವ
೧)ಶುಭೋದಯ __________________ ದಿನಾ ನಾನು ಶಾಲೆಗೆ ಹೋಗುವಂಥ ವೇಳೆಗೆ ಹಾದಿಬದಿಯ ಬೇಲಿಯು ಮುಡಿದು ನಿಂತ ಹೂವಿಗೆ ಹೇಳುವೆ ಶುಭೋದಯ ಹೊಳೆದಂಡೆಯ ಬಂಡೆಗೆ ಒರಗಿನಿಂಥ ಜೊಂಡಿಗೆ ರೆಕ್ಕೆಗೆದರಿ ಹಾರುವ ಹಚ್ಚಹಸಿರು ಮಿಡತೆಗೆ ಹೇಳುವೆ ಶುಭೋದಯ ಎತ್ತರೆದೆಳನೀರಿಗೆ ಹತ್ತುವಂಥ ಅಳಿಲಿಗೆ ಪುಟ್ಟ ಮೂರುಗೆರೆಗಳ ಅದರ ಮುದ್ದುಬೆನ್ನಿಗೆ ಹೇಳುವೆ ಶುಭೋದಯ ಹಾಲ್ದುಂಬಿದ ತೆನೆಗೆ ಕೊಕ್ಕಿಡುವಾ ಹಕ್ಕಿಗೆ ತೊಟ್ಟಿಲಾಗಿ ತೂಗುವ ತಾಯಿಯಂಥ ಪೈರಿಗೆ ಹೇಳುವೆ ಶುಭೋದಯ ಬೆಳ್ಳಿಯಂಥ ಬೆಳಗಿಗೆ ಚಿನ್ನದಂಥ ಕಿರಣಕೆ ಬದುಕಿರುವ ತನಕವೂ ಬದುಕುಳಿಯುವ ಚಿತ್ರಕೆ ಹೇಳುವೆ ಶುಭೋದಯ ೨)ಗುಂಡನ … Read more