ಕನ್ನಡ ರಾಜ್ಯೋತ್ಸವದ ದಿನ ಸಿಕ್ಕಿದ ಗೆಳೆತನ: ನಟರಾಜು ಎಸ್ ಎಂ

ಕಳೆದ ವರ್ಷದ ಅಕ್ಟೋಬರ್ ತಿಂಗಳ ಕೊನೆಯ ದಿನ ಅಂತರ್ಜಾಲ ಪತ್ರಿಕೆಯೊಂದರಲ್ಲಿ “ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..” ಎಂಬ ಲೇಖನ ಓದಲು ಸಿಕ್ಕಿತ್ತು. ಆ ಲೇಖನ ಓದುತ್ತಿದ್ದಂತೆ ಯಾಕೋ ಆ ಲೇಖಕನ ಭಾಷಾ ಶೈಲಿ ಸಿಕ್ಕಾಪಟ್ಟೆ ಇಷ್ಟವಾಯಿತು. ಆ ಲೇಖನಕ್ಕೆ”ತುಂಬಾ ಚಂದದ ಲೇಖನ.. ಶುಭವಾಗಲಿ” ಎಂದು ಪ್ರತಿಕ್ರಿಯೆ ನೀಡಿದ್ದೆ. ನನ್ನ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ ಲೇಖಕನಿಂದ ಆ ದಿನವೇ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದು ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು. ಮಾರನೆಯ … Read more

ಮಗು ಹುಟ್ಟಿದ ಖುಷಿಗೋ, ಸತ್ತವರ ನೆನಪಿಗೋ ಒಂದೊಂದು ಗಿಡ ನೆಡುತ್ತಾ ಬಂದಿದ್ದರೆ…

  ಅರಳೀ, ಹೊಂಗೆ, ಮಾವು, ಬೇವು, ನೇರಳೆ, ತೆಂಗು, ಹುಣಸೇ, ಸೀಬೆ, ಹೀಗೆ ಸಾಮಾನ್ಯವಾಗಿ ಕಾಣಸಿಗುವ ಕಾಣ ಸಿಗುತ್ತಿದ್ದ ಮರಗಳನ್ನು ಹೆಸರಿಸುತ್ತಾ ಹೋದರೆ ಆ ಮರಗಳ ಬರೀ ಚಿತ್ರಗಳಷ್ಟೇ ನಮ್ಮ ಕಣ್ಣ ಮುಂದೆ ಬರುವುದಿಲ್ಲ. ಬದಲಿಗೆ ಅವುಗಳ ಎಲೆ ಹೂವು ಹಣ್ಣು ನೆರಳು ತಂಪು ಹೀಗೆ ಏನೆಲ್ಲಾ ನಮ್ಮ ಅನುಭವಕ್ಕೆ ಬರುತ್ತದೆ. ಮರಗಳು ನಮ್ಮ ಬಾಲ್ಯದಲ್ಲಿ ನಮ್ಮೊಡನೆ ಬೆರೆತು ಹೋಗಿದ್ದ ಅನನ್ಯ ಜೀವಿಗಳು. ಮರಕೋತಿ ಆಟಗಳಿಂದ ಹಿಡಿದು ದೆವ್ವದ ಕತೆಗಳವರೆಗೆ, ಪಠ್ಯ ಪುಸ್ತಕದ ಪಾಠಗಳಲ್ಲಿ "ಅಶೋಕನು ಸಾಲು … Read more

ಕ್ಯಾನ್ಸರ್ ಕಾಯಿಲೆ ಹಾಗೆಯೇ ಇದೆ ಅದರ ವೈದ್ಯನಿಗೆ ಪ್ರಶಸ್ತಿ ಸಿಕ್ಕಿದೆ…

ಜಾತೀಯತೆ ನಮ್ಮ ಸಮಾಜಕ್ಕಂಟಿದ ಕ್ಯಾನ್ಸರ್ ತರಹದ ಮಾರಕ ಕಾಯಿಲೆ ಎಂದು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಆ ಕಾಯಿಲೆಯನ್ನು ನಮ್ಮ ಸಮಾಜದಿಂದ ನಿರ್ಮೂಲನೆ ಮಾಡಬೇಕು ಎಂದು ಪಣತೊಟ್ಟವರಿಗಿಂತ ಈ ಸಮಾಜದ ತುಂಬ ಜನರ ಬುದ್ದಿ ಮತ್ತು ಮನಸ್ಸುಗಳಲ್ಲಿ ಅದನ್ನು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು ಎನ್ನುವವರ ಸಂಖ್ಯೆ ಈ ದಿನಗಳಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು. ಒಂದೆಡೆ ಹಾಗೆ ಜಾತೀಯತೆಯನ್ನು ಹರಡಿ ಇಡೀ ಸಮಾಜವನ್ನೇ ರೋಗಗ್ರಸ್ತ ಸಮಾಜವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುವವರ ಮಧ್ಯೆ ಈ … Read more

ಹಂಚದ ಹೊರತು ಹರಡುವುದು ಕಷ್ಟ….

ಇತ್ತೀಚೆಗೆ ತುಂಬು ಲೇಖನವೊಂದನ್ನು ಬರೆದು ಎಷ್ಟೋ ದಿನಗಳಾಗಿಬಿಟ್ಟಿದೆ. ಒಂದೆರಡು ಗಂಟೆ ಒಂದೆಡೆ ಕುಳಿತು ಶ್ರದ್ಧೆಯಿಂದ ಬರೆದರೆ ಚಂದವಾದ ಬರಹಗಳನ್ನು ಕಟ್ಟಿಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಆ ರೀತಿ ಕುಳಿತು ಬರೆಯುವ ಶ್ರದ್ದೆಯನ್ನು ನಮ್ಮದಾಗಿಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ನಮ್ಮೊಳಗಿನ ಶ್ರದ್ಧೆ, ಸೃಜನಶೀಲತೆ ಒಂದು ದಿನ ಹಠಾತ್ತನೆ ಮಾಯವಾಗಿ “ಏನು ಬರೆಯೋದು ಏನು ಮಾಡೋದು” ಎಂಬ ಭಾವನೆ ತುಂಬಿದ ಶೂನ್ಯತೆಯ ದಿನಗಳು ನಮ್ಮಲ್ಲಿ ಹುಟ್ಟಿಸಿಬಿಡುತ್ತವೆ. ಕೆಲವು ದಿನಗಳ ಹಿಂದೆ ಆ ರೀತಿ ಶೂನ್ಯತೆ ನನ್ನೊಳಗೆ ಮೂಡಿದ ಒಂದು ದಿನ … Read more

ವಾರ ಮೂರು….. :)))

  ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ … Read more

ದ್ವಿತೀಯ ಸಂಚಿಕೆ ನಿಮ್ಮ ಮಡಿಲಿಗೆ….

  ಸಹೃದಯಿಗಳೇ, ಪಂಜುವಿನ ದ್ವಿತೀಯ ಸಂಚಿಕೆಯನ್ನು ನಿಮ್ಮ ಮಡಿಲಿಗೆ ಹಾಕುವ ಮೊದಲು ಪಂಜುವಿನ ಮೊದಲ ಸಂಚಿಕೆಗೆ ನೀವು ತೋರಿದ ಪ್ರೀತಿ ಪ್ರೋತ್ಸಾಹ ಸಹಕಾರಕ್ಕೆ ನಾನು ತುಂಬು ಹೃದಯದ ವಂದನೆಗಳನ್ನು ಸಲ್ಲಿಸಬೇಕು. ನಿಮ್ಮ ಪ್ರೀತಿ ಪಂಜುವಿನ ಮೇಲೆ ಹೀಗೆಯೇ ಇರಲಿ. ಒಮ್ಮೆ ಅಂತರ್ಜಾಲ ತಾಣವೊಂದರಲ್ಲಿ ಲೇಖನವೊಂದನ್ನು ಬರೆದಿದ್ದಾಗ ಆತ್ಮೀಯರೊಬ್ಬರು ಕರೆ ಮಾಡಿ "ನೀವು ಬರೆದಿರೋದನ್ನು ಓದುಗರು ಓದ್ತಾ ಇರ್ತಾರೆ. ಸುಮ್ಮಸುಮ್ಮನೆ ಏನೇನೋ ಬರೆಯಲು ಹೋಗಬೇಡಿ." ಎಂದು ಎಚ್ಚರಿಸಿದ್ದರು. ಅಂತರ್ಜಾಲ ತಾಣದಲ್ಲಿ ಬರೆಯುವ ಪ್ರಕಟಿಸುವ ಸ್ವಾತಂತ್ರ್ಯವಿದೆಯೆಂದು ನಮ್ಮಿಚ್ಚೆಯಂತೆ ಬರೆಯುತ್ತಾ ಪ್ರಕಟಿಸುತ್ತಾ … Read more

ಪಂಜು ಕುರಿತು…

  ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ. ದೂರದೂರಿನಲ್ಲಿ ಕುಳಿತು ಒಬ್ಬ ಸಾಮಾನ್ಯ ಓದುಗನಂತೆ ಕನ್ನಡದ ಸಾಹಿತ್ಯ ತಾಣಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುವಾಗ, ಕೇವಲ ಸಾಹಿತ್ಯ ಸಂಬಂಧಿತ ಬರಹಗಳಷ್ಟೇ ತುಂಬಿರುವ ಅಂತರ್ಜಾಲ ತಾಣ ಕಣ್ಣಿಗೆ ಕಂಡಿದ್ದು ಅಪರೂಪ. ದಿನ ನಿತ್ಯ ಹೆಚ್ಚು ಓದಿಗೆ ಸಿಕ್ಕುವ ಫೇಸ್ ಬುಕ್ ನಂತಹ ಪ್ರಭಾವಿ ಅಂತರ್ಜಾಲ ತಾಣದಲ್ಲಿ ಸಾಹಿತ್ಯವೆಂದರೆ ಬರೀ ಕವನಗಳು ಚುಟುಕಗಳು ಎನ್ನುವಂತಹ ವಾತಾವರಣ ಇಂದಿನ ದಿನಗಳಲ್ಲಿ … Read more