ಅಳುವಿನಲ್ಲಡಗಿದೆ ಬಾಳು: ಸಂಗೀತ ರವಿರಾಜ್

ಹೀಗೊಂದು ಶುಭನುಡಿಯಿದೆ " ಒಂದೇ ಹಾಸ್ಯದ ಬಗ್ಗೆ ಮತ್ತೆ ಮತ್ತೆ ನಗುವುದಿಲ್ಲವಾದರೆ, ಒಂದೇ ಸಂಗತಿ ಬಗ್ಗೆ ಮತ್ತೆ ಮತ್ತೆ ಅಳುವುದ್ಯಾಕೆ?  ಮತ್ತೆ ಮತ್ತೆ ತೇಲಿ ಬರುವ ಅಳು ಒಂದು ರೀತಿಯಲ್ಲಿ ಅಪ್ಯಾಯಮಾನವಾದ ಸಂಗತಿ. ಅಳುವೆನ್ನುವುದು ಮನುಷ್ಯನ ಎಲ್ಲಾ ಮೂಲಭೂತ ಕ್ರಿಯೆಗಳಂತೆ ಸಹಜವೋ? ಅದೊಂದು ಕಲೆಯೋ? ಸಾಂಧರ್ಭಿಕವೋ? ತಿಳಿಯಲೊಲ್ಲುದು. ಆದರು ಬೇಸರವಾದಾಗ ಅಳುವುದು ಮಾತ್ರ ಸಹಜ. ಅಳುವ ಗಂಡಸರನ್ನು ನಂಬಬೇಡ ಎನ್ನುತ್ತದೆ ಗಾದೆ. ಈ ಗಾದೆ ಚಾಲ್ತಿಗೆ ಹೇಗೆ ಬಂತೆಂದು ಯೋಚಿಸಿದರೆ ಅಳು ಯಾವಾಗಲೂ ಹೆಣ್ಣಿಗೆ ಕಟ್ಟಿಟ್ಟ ಬುತ್ತಿ … Read more

ಕಾಣದ ಅಪ್ಪನಿಗೆ: ಲಾವಣ್ಯ ಆರ್.

ಅಪ್ಪ, ಚಿಕ್ಕಂದಿನಲ್ಲಿ ಈ ಎರಡು ಅಕ್ಷರಗಳು ನನ್ನ ಮನಸ್ಸಿನಲ್ಲಿ ನೆಲೆಯೂರುವಂತೆ ನೀನು ಮಾಡಲಿಲ್ಲ, ನಾ ತೊದಲು ನುಡಿವಾಗ ನೀ ಬಂದು ಮುದ್ದಾಡಲಿಲ್ಲ, ನಡಿಗೆ ಕಲಿವ ಬರದಲ್ಲಿ ಬಿದ್ದಾಗ ನೀ ಬಂದು ನನ್ನ ಎತ್ತಿ ಸಂತೈಸಲಿಲ್ಲ, ಅಮ್ಮ ನನ್ನ ಹೊಡೆವಾಗ ನೀ ಬಂದು ಬಿಡಿಸಲು ಇಲ್ಲ, ಹಾಗೆಂದು ನಾನೆಂದಿಗೂ ನೀನು ಬೇಕೆಂದು ಬಯಸಲಿಲ್ಲ, ಒಂದುವೇಳೆ ಮನಸ್ಸು ನಿನ್ನ ಬಯಸಿದರು ಅದರ ಆಸೆಯನ್ನು ಶಮನಗೊಳಿಸುವಲ್ಲಿ ನಾನು ಯಶಸ್ವಿಯಾದೆ.  ಆದರೂ ಅಪ್ಪ ನಿನ್ನಿಂದ ಅನುಭವಿಸಿದ ನೋವುಗಳಿಗೆ ಲೆಕ್ಕವಿಲ್ಲ, ಹೇಗೆಂದು ಕೇಳುವೆಯ? ಪುಟ್ಟ … Read more

ಚೌತಿಯ ಚಂದ್ರ ಎನಗೆ ಅಪವಾದ ತಂದ: ಲಕ್ಷ್ಮೀಶ ಜೆ. ಹೆಗಡೆ

                                  ಈ ಘಟನೆ ನಡೆದಿದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಆಗ ನಾನು ಐದನೇ ತರಗತಿಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದೆ. ಏಪ್ರಿಲ್, ಮೇ ತಿಂಗಳಿನ ಬೇಸಿಗೆ ರಜೆಯಲ್ಲಿ ಮಗ ಕಂಪ್ಯೂಟರ್ ಕಲಿಯಲಿ ಎಂದು ನನ್ನಪ್ಪ ನನ್ನನ್ನು ಒಂದು ಕಂಪ್ಯೂಟರ್ ಕೋಚಿಂಗ್ ಸೆಂಟರ್ ಗೆ ಸೇರಿಸಿದರು. ಜೊತೆಗೆ ನನಗಿಂತ ಒಂದು ವರ್ಷ ದೊಡ್ಡವನಾಗಿದ್ದ ನನ್ನೊಬ್ಬ ಮಿತ್ರನೂ … Read more

ಅವಳು ನಮ್ಮವಳಲ್ಲವೆ?: ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ.

ದೇಶ ನನಗೇನು ಮಾಡಿದೇ ಎನ್ನುವುದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದು ಮುಖ್ಯವಾದ ವಿಚಾರ. ನಮ್ಮ ದೇಶದಲ್ಲಿ ಮಹಿಳೆ ಎಂದಾಕ್ಷಣ ಗೌರವ, ಭಕ್ತಿ, ಶಕ್ತಿ ಎಂಬ ಪದಗಳು ಬಳಕೆಯಾಗುತ್ತವೆ. ಅವಳ ಸೇವೆ ಈ ದೇಶಕ್ಕೆ ಅನನ್ಯ ಎಂಬ ಮಾತು ಎಲ್ಲರ ಮನದೊಳಗೆ ಮನೆಮಾಡಿದೆ. ಮಹಿಳಾ ಸಬಲೀಕರಣ ಎನ್ನುವ ವಿಚಾರ, ಹಿರಿಯರ ತಲೆಯೊಳಗೆ ಇದೆ ಆದರೆ ಪಾಲನೆಯಲ್ಲಿ ಕಾರ್ಯಗತಿಯಲ್ಲಿ ಹೊರಬರುತ್ತಿಲ್ಲ. ನಮ್ಮ ಮಹಿಳೆಯನ್ನು ಸೂಕ್ತವಾಗಿ ಸಬಲೀಕರಣ ಮಾಡುತ್ತೇವೆ ಎಂದು ಬರಿ ಮಾತಿನಲ್ಲಿ ಬರವಣಿಗೆಯಲ್ಲಿ ಹೇಳುತ್ತಿದ್ದೇವೆ. ನೈಜ ಬದುಕಿನಲ್ಲಿ ಅವಳನ್ನು ಸಬಲೀಕರಣವನ್ನು … Read more

ನಂಬಿಕೆ ಮತ್ತು ಜೀವನ: ಜಯಪ್ರಕಾಶ್ ಪುತ್ತೂರು

ಜೀವಿಗಳಲೆಲ್ಲಾ ಶ್ರೇಷ್ಠ ಮಾನವ, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯಲ್ಲೂ ಈ ನಂಬಿಕೆ ಅನ್ನುವುದು ಇದ್ದೇ ಇದೆ. ಮತ್ತೆ ಮನುಷ್ಯರಾದ ನಮಗೆ ಇದು ಸಾಮಾನ್ಯವೇ ಅಲ್ಲವೇ. ಜೀವನ ನಿಂತಿರುವುದೇ ನಂಬಿಕೆಯ ಮೇಲೆ ಹಾಗಂತ ನಂಬಿಕೆಯೇ ಜೀವನ ಆಗಲಾರದು ಅನ್ನೋದು ಸತ್ಯ. ಮನುಷ್ಯ ಸಂಘ ಜೀವಿ ಅದಕ್ಕೆ ಕಾರಣ ಹಲವಾರು ಇದ್ದರೂ ನಂಬಿಕೆಯೇ ಮೊದಲು ಹೊರತು ಬೇರಾವ ಮ್ಯಾಜಿಕ್ ಅಂತೂ ಅಲ್ಲ ಅನ್ನೋದು ಸತ್ಯ. ಸಾಮಾಜಿಕವಾಗಿ ಬದುಕುವುದು ಅವಶ್ಯಕವೇ ಆಗಿದ್ದರೂ ಅನಿವಾರ್ಯವೇನಲ್ಲ. ನಂಬಿಕೆಯು ಸೃಷ್ಟಿಸಿರುವ ಬುನಾದಿಯ ಮೇಲೆ … Read more

ಹಳೆ ಅಂಗಿ ತೆಗೆದು ಹೊಸ ಅಂಗಿ ಹಾಕ್ಕಂಡಂಗೆ!: ಸಂತೆಬೆನ್ನೂರು ಫೈಜ್ನಟ್ರಾಜ್

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ…… ಸಾಹಿತ್ಯ ಅರ್ಥವಾಗದೇ ಇದ್ದ ವಯಸ್ಸಿನಲ್ಲಿ ಗುನುಗಿಕೊಳ್ಳುತ್ತಿದ್ದ ಹಾಡು.ವಸಂತ ಒಬ್ಬ ವ್ಯಕ್ತಿ, ಆತ ಎಲೆ ಮೇಲೆ ಲೆಟರ್ ಬರೆದ ಅಂತಾನೆ ಅರ್ಥೈಸಿಕೊಂಡಿದ್ದು! ವಸಂತ ಬಂದ ಚೈತ್ರಾಳ ಜೊತೆ….ವಾವ್ ಏನು ಖುಷಿ ಅಲ್ವಾ?ಮರ-ಗಿಡ-ಬಳ್ಳಿಗಳೆಲ್ಲವೂ ಮೈ ಚಕ್ಳ ಬಿಟ್ಕಂಡು ಬಕ್ಕಬರ್ಲಾಗಿ ಬಾಳೋ ಅಥವಾ ಸಾಯೋ ಟೈಮಿಗೆ ಈ ಜೋಡೀನ್ ನೋಡಿ ಮತ್ತೆ ಮೈಕೈ ತುಂಬ್ಕಂಡ್ ಮೊದಲ್ನೇ ಸರ್ತೀ ಮದ್ವೆಯಾಗೋ ಹುಡುಗ್ನಂಗೆ ಸಿಂಗಾರಗೊಳ್ತವೆ ಅಂದ್ರೆ ಅದಕ್ಕೆ ಚೈತ್ರ ಕಾರಣನೋ,ವಸಂತನೋ ಗೊತ್ತಿಲ್ಲ! ಎದೆಯ … Read more

ತಾಯಿಯ ಮಮತೆ: ಲೋಕೇಶಗೌಡ ಜೋಳದರಾಶಿ

ಕಮಲಮ್ಮನಿಗೆ ಮೋಹನ ಒಬ್ಬನೆ ಮಗ. ಚಿಕ್ಕ ವಯಸ್ಸಿನಲ್ಲೆ ಗಂಡನ ಕಳೆದುಕೊಂಡ ಕಮಲಮ್ಮ ತನ್ನ ಮಗನನ್ನು ತುಂಬ ಕಷ್ಟದಲ್ಲಿ ಸಾಕಿ ಸಲುಹಿ ದೊಡ್ಡವನನ್ನಾಗಿ ಬೆಳೆಸಿದಳು. ಅವಳು ಕೂಲಿ ಕೆಲಸದ ಜೊತೆ ಅಕ್ಕಪಕ್ಕದ ಮನೆಗಳಲ್ಲಿ ಮನೆಕೆಲಸಗಳನ್ನ ಮಾಡಿ ಮೋಹನನನ್ನು ಹತ್ತನೆಯ ತರಗತಿಯವರೆಗೆ ಓದಿಸಿ ನಂತರ, ಅವನನ್ನು ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಓದಲು ಸೇರಿಸಿದಳು. ಮೋಹನ ಕಾಲೇಜು ಸೇರಿದ ನಂತರ ತಾಯಿಗೆ ವಾರಕ್ಕೆ ಒಂದು ಪತ್ರ ಬರೆಯುತ್ತಿದ್ದ. ಕಾಲಕ್ರಮೇಣ ತಾಯಿಗೆ ಪತ್ರ ಬರುವುದು ಕಮ್ಮಿಯಾಯಿತು. ಇದರಿಂದ ತಾಯಿಯ … Read more

“ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ “: ಶುಭ.ಆರ್ ದೀಪು

ಆರೋಗ್ಯವೇ ಭಾಗ್ಯ  ಎಂಬ ನಾಣ್ನುಡಿಯಂತೆ  ಮನುಜನಾದವನ  ದೇಹಕ್ಕೆ  ಉತ್ತಮ ಆರೋಗ್ಯ ಮುಖ್ಯ. ಎಷ್ಟೇ ಸಿರಿಸಂಪತ್ತಿದ್ದರೂ  ಅದನ್ನು ಅನುಭವಿಸಲು ಉತ್ತಮ ಆರೋಗ್ಯಬೇಕು. ಉತ್ತಮ ಆರೋಗ್ಯವನ್ನು  ಹೊಂದಿರಲು, ಚೈತನ್ಯವನ್ನು  ಪಡೆಯಲು ನಾವು ಸೇವಿಸುವ ಗಾಳಿ, ಕುಡಿಯುವ ಶುದ್ದನೀರು,ವಾಸಿಸುವ  ಶುದ್ದ ವಾತಾವರಣ ಹಾಗೂ  ಪೌಷ್ಟಿಕ ಆಹಾರ ಹೇಗೆ ಮುಖ್ಯವೋ  ಅದೇರೀತಿಯಲ್ಲಿ  ಮನುಷ್ಯನಲ್ಲಿ ಸಕಾರಾತ್ಮಕ ಮನೋಭಾವನೆ ಕೂಡಾ ಅತಿ ಮುಖ್ಯ.  ಸಕಾರಾತ್ಮಕ ಮನೋಭಾವನೆ ಎಂದರೆ ಸದಾ ಒಳಿತನ್ನೇ ಆಲೋಚಿಸುವುದು. ಜೀವನದಲ್ಲಿ ಎಷ್ಟೇ  ಬೆಟ್ಟ ಗುದ್ದದಂತಹ ಕಷ್ಟಗಳೂ ಎದುರಾದರೂ ಅದಕ್ಕಾಗಿ ದೃತಿಗೆಡದೆ  ಸಕಾರಾತ್ಮಕವಾಗಿ ಯೋಚಿಸಿ … Read more

“ಕೇಳಿ ಕಥೆಯ” ಅನ್ನುವ ಒಂದು ವಿನೂತನ ಪ್ರಯತ್ನ: ವಾಸುಕಿ ರಾಘವನ್

ಕೆಲವು ಸಲ ನಮ್ಮ ಊಹೆ ಸರಿಯಿರಲಿಲ್ಲ ಅಂತ ಪ್ರೂವ್ ಆದಾಗ ಒಂದು ಥರಾ ಖುಷಿ ಆಗುತ್ತೆ… ವಿಷಯ ಇಷ್ಟೇ…ನಾನು ಮತ್ತು ಗೆಳೆಯ ಮುಕುಂದ್ ಒಂದು ಸಲ ಹರಟೆ ಹೊಡೆಯುತ್ತಾ ನಿಂತಿರುವಾಗ ಅವರು “ನಾನು ಒಂದು ಆಡಿಯೋ ಬುಕ್ ಪ್ರಾಜೆಕ್ಟ್ ಮಾಡ್ತಿದೀನಿ ಕಣೋ” ಅಂತಂದ್ರು. ನಾನು “ಒಹ್ ಹೌದಾ, ಏನದು?” ಅಂತ ಕೇಳಿದೆ ಕುತೂಹಲದಿಂದ. ಮುಕುಂದ್ ತಮ್ಮದೇ ಶೈಲಿಯಲ್ಲಿ “ನೋಡೋ, ಏನು ಗೊತ್ತಾ, ಇವತ್ತು ಯಾರಿಗೂ ಟೈಮ್ ಇಲ್ಲ, ಹಾಗಾಗಿ ಪುಸ್ತಕ ಓದೋರೇ ಕಮ್ಮಿ ಆಗಿಬಿಟ್ಟಿದ್ದಾರೆ, ಹಾಗಾಗಿ ಕಥೆಗಳನ್ನ … Read more

ಪ್ರಕಟಣೆ

ಕನ್ನಡ ನಾಡು ನುಡಿಯ ಸೇವೆ ಮಾಡುವ ನಿಟ್ಟಿನಲ್ಲಿ ಸ್ವಯಂ ಇಚ್ಚೆಯಿಂದ ಕನ್ನಡ ನಾಡು ನುಡಿಯ  ಬಗ್ಗೆ ಕವನ ಸಂಕಲನವೊಂದು ಹೊರತರಲು ಯೋಚಿಸಲಾಗಿದೆ. ಅದಕ್ಕಾಗಿ ತಾವು ಕನ್ನಡ ನಾಡು, ನುಡಿ, ಕನ್ನಡಕ್ಕಾಗಿ ದುಡಿದ ಮಹಿಳೆ/ಪುರುಷ, ಕನ್ನಡ ನೆಲ, ಜಲ, ಕನ್ನಡದ ವೈವಿಧ್ಯತೆ, ಕರ್ನಾಟಕದ ಪ್ರಾಕೃತಿಕ ಸೌಂದರ್ಯ ಇತ್ಯಾದಿ ವಿಷಯಗಳ ಕುರಿತು ತಮ್ಮ ಇತ್ತೀಚಿನ ಎರಡು ಕವನಗಳನ್ನು ಆಹ್ವಾನಿಸಲಾಗುತ್ತಿದೆ. ಆಯ್ದ ಕವಿಗಳಿಗೆ ಸನ್ಮಾನಿಸಲಾಗುವುದು. ಪುಸ್ತಕ ರೂಪದಲ್ಲಿ ಕವನಗಳನ್ನು ಪ್ರಕಟಿಸಲಾಗುವುದು.  ಕವನ ಕಳುಹಿಸಲು ಕೊನೆಯ ದಿನ ಆಗಷ್ಟ್ ೨೩, ಕವನ ಸ್ವತಂತ್ರ … Read more

ವೈಭವದ ಕೂಟ-ಪ್ಯಾಶನ್ನಿನ ಊಟ ? :ಪಾ.ಮು.ಸುಬ್ರಮಣ್ಯ

ಹಾಗೇ ಸುಮ್ಮನೇ ಏನಾದರೊಂದು ಬರೆಯಬೇಕೆಂದು ಮನಸ್ಸು ತವಕಪಡುತ್ತಿತ್ತು. ವಿಷಯಕ್ಕಾಗಿ ಮನದ ಗಾಳಿಪಟವನ್ನು ಹರಿಯಬಿಟ್ಟೆ.  ಪಟ ನೇರವಾಗಿ ಒಂದು ಅದ್ದೂರಿ ಕಾರ್ಯಕ್ರಮವೊಂದರ ನಡುವೆ ನಿಂತಿತು.  ಸುತ್ತಲೂ ಕಣ್ಣಾಡಿಸಿದೆ.  ವೈಭವಪೂರ್ಣವಾದ ಕಾರ್ಯಕ್ರಮ. ಯಾರೋ ಹಣದಧಿಪತಿಗಳೇ ಈ ಕಾರ್ಯಕ್ರಮದ ಆಯೋಜಕರೆಂದು ಮೇಲ್ನೋಟಕ್ಕೆ ಅನ್ನಿಸಿತು.  ಯಾರಾದರೆ ನನಗೇನು?  ನನಗೆ ಬೇಕಾಗಿರುವ ವಿಷಯ ಸಿಕ್ಕರೆ ಸಾಕು, ಎಂದಂದುಕೊಂಡು ಹುಡುಕತೊಡಗಿದೆ.  ಪ್ರತಿಯೊಬ್ಬರೂ ತಮ್ಮದೇ ಆದ ವೈಯಕ್ತಿಕ ವಿಚಾರಗಳಲ್ಲಿ ತೊಡಗಿದ್ದಾರೆನ್ನಿಸಿತು.  ನನ್ನನ್ನಾರು ಗಮನಿಸಲಿಲ್ಲ.  ಮನದ ಪಟ ಅಲೆದಾಟಕ್ಕಿಳಿದಾಗ ಕೇಳಿಯೇಬಿಟ್ಟಿ.  ’ಇಲ್ಲಿ ನನಗೇನು ಕೆಲಸ? ನನ್ನನ್ನು ಇಲ್ಲಿಗೇಕೆ ಕರೆತಂದೆ? … Read more

ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಡಗಿರುವ ರಾಜಕೀಯ…! : ನಂದಿಕೇಶ್. ಬಾದಾಮಿ

         ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರೆಂದು ಪಿಂಚಣಿ ಪಡೆಯುತ್ತಿರುವವರ ವಿವರವನ್ನು ಗಮನಿಸಿದರೆ, ಕಲೆಯ ಗಾಳಿ;ಗಂಧ ಗೊತ್ತಿರದವರೆ ಬಹುಪಾಲು ಆ ಪಟ್ಟಿಯಲ್ಲಿ ತುಂಬಿಕೊಂಡಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕ/ಕಿ ಪ್ರಶಸ್ತಿ ಪಡೆದವರ ವಿವರವನ್ನು ಪರಿಶೀಲಿಸಿದರೆ ಅದರಲ್ಲೂ ಕೂಡಾ ರಾಜಕೀಯ ದುರ್ವಾಸನೆಯ ಘಾಟು ಮೂಗಿಗೆ ಅಮರಿಕೊಳ್ಳುತ್ತದೆ. ಇನ್ನು ಬಹುತೇಕ ಪ್ರಶಸ್ತಿ ಪುರಸ್ಕಾರಗಳಂತೂ ರಾಜಕೀಯ ಕರಿನೆರಳಿನಲ್ಲಿಯೇ ವಿತರಣೆಯಾಗುತ್ತಿವೆ. ಮೊನ್ನೆಮೊನ್ನೆಯಷ್ಟೆ ಹಿರಿಯ ಸಾಹಿತಿ ಕುಂ. … Read more

ಒಂದಿಷ್ಟು ಪುಟ್ಟ ಕತೆಗಳು:ಸುಚಿತ್ರ ಕೆ. ಕಾವೂರು.

ಎರಡು ಕೋಮಿನ ಜನರ ನಡುವೆ ಜಗಳ ಆರಂಭವಾಗಿತ್ತು..  ಕಾರಣ ತಮ್ಮ ಧರ್ಮದ ಭಿತ್ತಿ ಪತ್ರ ಅಂಟಿಸಿ ಅಪ ಪ್ರಚಾರ ಮಾಡಿದರೆಂದು… ಒಂದು ಆಡು ಬಂದು ಆ ಭಿತ್ತಿಪತ್ರವನ್ನು ನಿಧಾನವಾಗಿ ಹರಿದು ಮೆಲ್ಲತೊಡಗಿತು..  ***** ಅಣ್ಣ ತನ್ನ ತಂಗಿಯ ಗಂಡನ ಮನೆಯ ಪರಿಸ್ಥಿತಿ ಬಗ್ಗೆ ಹೆಂಡತಿ ಜೊತೆ ಹೇಳಿ ವ್ಯಥೆ ಪಡುತ್ತಿದ್ದ…ಆದರೆ ಹೆಂಡತಿ ತನ್ನ ಮನೆಯಲ್ಲಿ ನರಕ ಅನುಭವಿಸುವುದ ಕಂಡೂ ಕಾಣದಂತೆ ನಟಿಸುತ್ತಿದ್ದ. ***** ಅಮ್ಮ ನಿನ್ನ ಸೊಸೆಯನ್ನು ಹದ್ದುಬಸ್ತಿನಲ್ಲಿಡು ಇಲ್ಲಾಂದ್ರೆ ನಿನ್ನ ಮೂಲೆಗೆ ಹಾಕಿಯಾಳು ಎಂದು ಅತ್ತೆಯನ್ನು … Read more

ನನ್ನ ಮೊದಲ ಲೇಖನ: ಶ್ರೀನಿಧಿ ಜೋಯ್ಸ್

ನನ್ನ ಹೆಸರು ಶ್ರೀನಿಧಿ. ನಾನು ಹುಟ್ಟಿದು ಶಿವಮೊಗ್ಗದಲ್ಲಿ. ಬಾಲ್ಯ, ವಿದ್ಯಾಭ್ಯಾಸ ಎಲ್ಲಾ ಶಿವಮೊಗ್ಗಾದಲ್ಲೇ. ಇಂಜಿನಿಯರಿಂಗ್ ಪದವೀಧರ.  ಕಳೆದ 4 ವರ್ಷಗಳಿಂದ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ. ತಂದೆ ತಾಯಿ ಹಾಗೂ ಒಬ್ಬ ಅವಳಿ ಸಹೋದರನಿದ್ದು ಸದ್ಯಕ್ಕೆ ಅವಿವಾಹಿತ. ನನ್ನ ಮೊದಲ ಲೇಖನಕ್ಕೆ ಈ ಕಿರು ಪರಿಚಯ ಸಾಕು ಎಂದು ನನ್ನ ಅನಿಸಿಕೆ.    ಕನ್ನಡ ಬ್ಲಾಗ್ ಬರೆಯುವ ಚಾಳಿ ಶುರುವಾದದ್ದು ಒಂದು ಸಣ್ಣ ಕಥೆ.    ಆಗ ನಾನಿದದ್ದು ಚನ್ನೈನಲ್ಲಿ. ಸ್ನೇಹಿತರೊಂದಿಗಿದ್ದ ನನಗೆ ಮನೆಯಲ್ಲಿ ಕನ್ನಡ ಬಳಕೆ ಇತ್ತೇ … Read more

ಮಿಂಚುಳ: ಪ್ರಜ್ವಲ್ ಕುಮಾರ್

  ನವೀನ್ ಸಾಗರ್ ಅವ್ರು ಬರ್ದಿರೋ 'ಣವಿಣ – ಅಂಗಾಲಲ್ಲಿ ಗುಳುಗುಳು' ಓದ್ತಾ ಇದ್ದೆ. ಅದ್ರಲ್ಲಿರೋ ರೇಷ್ಮೆ ಹುಳದ ಕಥೆ ಅಥವಾ ಘಟನೆ ಓದಿ ನಂ ಮಿಂಚುಳದ ಘಟನೆ ನೆನಪಾಯ್ತು! 'ಸಿಲ್ಲಿ-ಲಲ್ಲಿ' ಸೀರಿಯಲ್ಲಿನ ಡೈಲಾಗ್ ನೆನಪಿಸಿಕೊಂಡು 'ಜೇಡ ಕಟ್ಟಿರೋ ಮೂಲೆ ನೋಡ್ದೆ'. ನಾನವಾಗ ಎರಡೋ, ಮೂರೋ, ನಾಲ್ಕನೇದೋ ಕ್ಲಾಸು. ಒಟ್ನಲ್ಲಿ ಹಾಕ್ಕೊಳೋ ಚಡ್ಡಿ ಎಲಾಸ್ಟಿಕ್ಕಿಂದೇ ಆಗ್ಲಿ, ಗುಂಡೀದೇ ಆಗ್ಲಿ; ಜೇಬು ಮಾತ್ರ ಇರ್ಲೇ ಬೇಕು ಅಂತ ಹಟ ಮಾಡ್ತಿದ್ದ ವಯಸ್ಸು. ನಮ್ದು ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಲ್ಲಿರೋ … Read more

ಕಿರು ಪ್ರಬಂಧಗಳು: ರುಕ್ಮಿಣಿ ಮಾಲ, ಸಿರಾ ಸೋಮಶೇಖರ್

    ಬೆನ್ನಚೀಲ ೧೯೭೫ರ ದಶಕದಲ್ಲಿ ಬೆನ್ನಿಗೆ ಹಾಕುವ ಚೀಲ ಅಷ್ಟಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರಲಿಲ್ಲ. ಶಾಲೆಗೆ ಮಕ್ಕಳು ಉದ್ದಕೈ ಇರುವ ಬಟ್ಟೆಚೀಲ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೇ ಕೆಲವು ಮಂದಿ ಬಳಿ ಬೆನ್ನಚೀಲ ಇರುತ್ತಿದ್ದ ಕಾಲವದು. ನನಗೆ ಆಗ ಬೆನ್ನಿಗೆ ಹಾಕುವ ಚೀಲ ಬೇಕು ಎಂಬ ಆಸೆ ಪ್ರಬಲವಾಗಿ ಇತ್ತು. ಅದರಲ್ಲಿ ಪುಸ್ತಕ ಹಾಕಿ ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ನನ್ನಲ್ಲಿ ಆ ಚೀಲವೇ ಇರಲಿಲ್ಲ. ಉದ್ದ ಕೈ ಇರುವ ಬಟ್ಟೆ ಚೀಲವನ್ನೇ … Read more

ಭವಿಷ್ಯ ಭಾರತದಲ್ಲಿ ವಿಜ್ಞಾನದ ಏಳಿಗೆ: ಪ್ರಸನ್ನ ಗೌಡ

ಪ್ರೊ. ಸಿ. ಎನ್. ಆರ್. ರಾವ್ ಭಾಷಣ ಆಧಾರಿತ ಲೇಖನ  ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ನಾಯಕರನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯ ವಾದುದ್ದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ದೇಶದ ಭವಿಷ್ಯ ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಚೀನಾದ ಜೊತೆ ನಮ್ಮ ದೇಶವನ್ನು ಹೋಲಿಸಿ ನೋಡಿದರೆ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆ ತುಂಬಾ ಕಡಿಮೆ ಇದೆ. ದಿನೆ ದಿನೆ ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹೆಚ್ಚಿದಂತೆಲ್ಲ ದೇಶದ ಅಭಿವೃದ್ದಿ ತನಗೆ … Read more

ನಮಸ್ಕಾರ….ನಮಸ್ಕಾರ: ಹೊರಾ.ಪರಮೇಶ್

'ನಮಸ್ಕಾರ' ಈ ಸಂಬೋಧನಾ ಶಬ್ದವನ್ನು ಬಳಸದಿರುವ ಅಥವಾ ಕೇಳದಿರುವ ಯಾವುದೇ ವ್ಯಕ್ತಿ ಅಥವಾ ಕನ್ನಡಿಗ ಇಲ್ಲವೆಂದೇ ಭಾವಿಸಿದ್ದೇನೆ.ಆಂಗ್ಲ ಭಾಷಾ ಪ್ರೇಮಿಗಳು ಗುಡ್ ಮಾರ್ನಿಂಗ್ ; ಆಫ್ಟರ್ ನೂನ್, ಗುಡ್ ನೈಟ್ ಎಂದು ಹೇಳಿದರೂ ಅದರ ಅಂತರಾರ್ಥದ ಭಾವ 'ನಮಸ್ಕಾರ'ವೇ ಆಗಿದೆ.ಈ ಶಬ್ದದ ಹರವು ಸಾಗರದಷ್ಟು ವಿಶಾಲವಾದುದಾಗಿದೆ.ವಿವಿಧ ಸಂದರ್ಭಗಳಲ್ಲಿ ವಿಧ ವಿಧ ಅರ್ಥವಂತಿಕೆಯನ್ನು ಹೇಗೆಯ ಪಡೆದುಕೊಂಡಿದೆ ಎಂಬುದರ ಸುತ್ತ ಮುತ್ತ ಸುತ್ತಾಡಿ ಬರುವ ಉದ್ದೇಶ ನನ್ನದು.ಅದಕ್ಕೂ ಮುಂಚೆ ನಮಸ್ಕಾರ ಎಂದರೇನು? ಎಂದು ನೋಡಿಬಿಡೋಣ. ಸಾಕು ಸುಮ್ನಿರ್ರಿ, 'ನಮಸ್ಕಾರ' ಅಂದ್ರೆ … Read more

ಮಳೆಯೆ೦ಬ ಮಧುರ ಆಲಾಪ: ಸ್ಮಿತಾ ಅಮೃತರಾಜ್.

ಒ೦ದು ಬರಸಿಡಿಲು, ಕಿವಿಗಡಚಿಕ್ಕುವ ಗುಡುಗು,ಕಣ್ಣು ಕೋರೈಸುವ ಮಿ೦ಚು. ಇವೆಲ್ಲ ಮಳೆ ಬರುವ ಮುನ್ನಿನ ಪೀಠಿಕೆಯಷ್ಟೆ. ಮತ್ತೆ ಇದ್ಯಾವುದೇ ತಾಳ ಮೇಳಗಳಿಲ್ಲದೆ, ಅ೦ಜಿಕೆ ಅಳುಕಿಲ್ಲದೆ ದಿನವಿಡೀ ಸುರಿಯುತ್ತಲೇ ಇರುತ್ತದೆ ಒ೦ದು ಧ್ಯಾನಸ್ಥ ಸ್ಥಿತಿಯ೦ತೆ. "ಮಳೆ" ಇದು ಬರೇ ನೀರ ಗೆರೆಯಲ್ಲ.ಕೂಡಿಟ್ಟ ಬಾನಿನ ಭಾವದ ಸೆಲೆ.ಬಾನ ಸ೦ಗೀತ ಸುಧೆ ಮಳೆಯಾಗಿ ಹಾಡುತ್ತಿದೆ.ಎ೦ಥ ಚೆ೦ದದ ಆಲಾಪವಿದು.. ಮಳೆ ಶುರುವಾದಾಗ ಒ೦ದು ತರಹ, ನಿಲ್ಲುವಾಗ ಮತ್ತೊ೦ದು,ಬಿರುಸಾಗಿ ಸುರಿಯುವಾಗ  ಇನ್ನೊ೦ದು, ಮಳೆ ಪೂರ್ತಿ ನಿ೦ತ ಮೇಲೂ ಕೊನೆಯದಾಗಿ ಉರುಳುವ ಟಪ್ ಟಪ್ ಹನಿಯ ರಾಗವೇ … Read more

ಕಿರು ಲೇಖನಗಳು: ಕಿರಣ್ ಕುಮಾರ್ ರೆಖ್ಯಾ, ಶರತ್ ಹೆಚ್. ಕೆ.

ಸದಾ ನೆನಪಿನಲ್ಲಿ ಉಳಿಯುವ ರಾಕೆಟ್.. ಪಿಯುಸಿ ವ್ಯಾಸಂಗದ ದಿನಗಳವು. ಮಧ್ಯಾಹ್ನದ ನಂತರ ಯಾವಾಗಲು ಒಂದು ತರಗತಿ ಪಠ್ಯೇತರ ಚಟುವಟಿಕೆಗೆ ಮೀಸಲು. ಕನ್ನಡ ಸರ್ ಬಿತ್ತಿಪತ್ರಿಕೆಗೆ ಲೇಖನ ಬರೆಯುದರ ಬಗ್ಗೆ ಮಾಹಿತಿ ನೀಡಿ ಎಲ್ಲರಿಗು ಒಂದೊಂದು ಲೇಖನವನ್ನು ಅಸೈನ್ ಮಾಡಿ ತೆರಳಿದರು. ಅ ದಿನಗಳಲ್ಲಿ ಹುಡುಗಿಯರ ಹೆಸರನ್ನು ಹುಡುಗರ ಹೆಸರಿನೊಂದಿಗೆ ಸೇರಿಸಿ ಹಾಸ್ಯ ಮಾಡುವ ಹುಚ್ಚು. ಲೇಖನ ಬರೆಯುತ್ತಿದ್ದ ನಾನು ತಕ್ಷಣ ನನ್ನ ನೋಟ್ಸ್‌ನ ಒಂದು ಕಾಗದ ಹರಿದು "ಐ ಲವ್ ಯೂ.." ಜೊತೆಗೆ ತರಗತಿಯ ಒಂದು ಹುಡುಗಿಯ … Read more