ಮರೆಲಾಗದ ಮಹಾನುಭಾವರು ತಲ್ಲೂರ ರಾಯನಗೌಡರು: ವೈ. ಬಿ. ಕಡಕೋಳ

“ನಿಮಗೇಕೆ ಕೊಡಬೇಕು ಕಪ್ಪ. ನೀವೇನು ನಮ್ಮ ನೆಂಟರೋ ಬಂಧುಗಳೋ. ನಮ್ಮ ಭೂಮಿಯನ್ನು ಉತ್ತಿ ಬಿತ್ತಿ ಬೆಳೆದವರೋ. ನಿಮಗೇಕೆ ಕೊಡಬೇಕು ಕಪ್ಪ. ” ಎಂಬ ಈ ಸಾಲುಗಳನ್ನು ಬಿ. ಸರೋಜಾದೇವಿ ಹೇಲುವ ಕಿತ್ತೂರು ಚನ್ನಮ್ಮ ಚಲನಚಿತ್ರದ ಈ ಸಂಭಾಷಣೆ ಇಂದಿಗೂ ಕಿತ್ತೂರು ಚನ್ನಮ್ಮ ಚಲನಚಿತ್ರ ವೀಕ್ಷಿಸಿದವರಿಗೆ ರೋಮಾಂಚನೆ ಉಂಟು ಮಾಡುತ್ತವೆ ಅಲ್ಲವೇ. ? ದೇಶಭಕ್ತಿಯ ಕಿಚ್ಚನ್ನು ಹಚ್ಚುವ ಸಾಲುಗಳ ಕತೆಯಾಧಾರಿತ ಕಿತ್ತೂರು ಚನ್ನಮ್ಮ ಚಲನಚಿತ್ರವಾಗಲು ಒಂದು ವ್ಯಕ್ತಿಯ ಶಕ್ತಿ ಬಹಳ ಶ್ರಮಿಸಿದ್ದು. ಕಿತ್ತೂರ ಚನ್ನಮ್ಮ ಚಲನಚಿತ್ರ ನಿರ್ದೇಶಕ ಬಿ. … Read more

ಪ್ರಸ್ತುತ ವಿಜ್ಞಾನ ತಂತ್ರಜ್ಞಾನದ ಬಳಕೆ: ಪ್ರಿಯಾಂಕಾ ಬನ್ನೆಪ್ಪಗೋಳ

ಭಾರತವು ಕೃಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಅಧಿಕ ಬೆಳೆ ಹಾನಿ ಸಂಭವಿಸಿ ರೈತನು ಆತಂಕಕ್ಕೀಡಾಗಿದ್ದಾನೆ. ರೈತನು ಕೃಷಿಯಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ತನ್ನ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳಿಸಿ ತನ್ನ ಜೀವನಮಟ್ಟವನ್ನು ಸುಧಾರಿಸಬಹುದು. ಇದರಿಂದಾಗಿ ರೈತರ ಜೀವನಮಟ್ಟ ಹೆಚ್ಚಾಗಿ ದೇಶದ ಆದಾಯವೂ ಸಹ ಹೆಚ್ಚಾಗುವುದು. ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯುವರು. ರೈತರು ಬೆಳೆಗಳನ್ನು ಬೆಳೆದರೆ ಮಾತ್ರ ನಮಗೆಲ್ಲರಿಗೂ ಆಹಾರ ದೊರೆಯುವುದು. ಇಲ್ಲದಿದ್ದರೆ ಅಧೋಗತಿ. … Read more

ಮೊಬೈಲ್ ಸೆಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು: ಚಂದ್ರಿಕಾ ಆರ್ ಬಾಯಿರಿ

” ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಮಿಗಿಲು”. ಆನೆಯ ಬಗ್ಗೆ ಸಾವಿರ ಪದಗಳಲ್ಲಿ ಬಣ್ಣಿಸುವುದಕ್ಕಿಂತಲೂ ಆನೆಯ ಒಂದು ಚಿತ್ರವನ್ನು ತೋರಿಸುವುದು ಉತ್ತಮ ಎಂದು ಹೇಳುವುದುಂಟು. ಚಿಕ್ಕ ಮಕ್ಕಳಿಗೆ ಪಾಠ ಮಾಡುವಾಗ ಕೇವಲ ವಿವರಣೆ ನೀಡುವುದಕ್ಕಿಂತಲೂ ಚಾರ್ಟ್ ಗಳನ್ನು ತೋರಿಸಿ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈಗಿನ ಕಂಪ್ಯೂಟರ್ ಯುಗದಲ್ಲಿ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ತೋರಿಸುವುದರಿಂದ ಪಾಠವು ನೈಜ ಅನುಭವವನ್ನು ನೀಡುತ್ತದೆ. ಇನ್ನು ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ರೇಡಿಯೋಗಳಿತ್ತು. ಜನರು ವಾರ್ತೆಗಳನ್ನು, ಚಿತ್ರಗೀತೆಗಳನ್ನು ಕೇಳುತ್ತಲೇ ದಿನದ ಕೆಲಸಗಳನ್ನು ಲವಲವಿಕೆಯಿಂದ ಮಾಡು … Read more

ಜೋಕರ್ ಮತ್ತು ಅವನ ಹಿಂದಿನ ತಲೆಮಾರಿನವರು!!: ಸಂತೋಷ್ ಕುಮಾರ್ ಎಲ್.ಎಂ.

೨೦೧೯ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದು, ವಿಮರ್ಶಕರಿಂದ ಶಹಬ್ಬಾಷ್ ಅನ್ನಿಸಿಕೊಂಡ ಇಂಗ್ಲೀಷ್ ಸಿನಿಮಾ “ಜೋಕರ್”. ಈ ಸಿನಿಮಾ ನೋಡಿದ ಮೇಲೆಯೂ ಸಿಕ್ಕಾಪಟ್ಟೆ ಕಾಡುತ್ತದೆ. ಅಸಹಾಯಕತೆ, ಅವಮಾನ, ಹಿಂಸೆ, ತಾನು ಬೆಳೆದ ರೀತಿ, ಕೆಟ್ಟ ಬಾಲ್ಯ.. ಎಲ್ಲವೂ ಒಬ್ಬನನ್ನು ಹೇಗೆ ಹಿಂಸೆಗೆ ತಳ್ಳುತ್ತದೆ ಅನ್ನುವ ಸಿನಿಮಾ. ಗಮನಿಸಿದರೆ ಜೋಕರ್ ಮಾಡುವ ಪ್ರತೀ ಕೊಲೆಗೂ ಒಂದೊಂದು ಕಾರಣವಿದೆ ಈ ಸಿನಿಮಾ ನೋಡಿದ ಮೇಲೆ ಅದರ ವಿವರಗಳ ಬಗ್ಗೆ ಕಣ್ಣಾಯಿಸಿದಾಗ ಸಿಕ್ಕ ಎರಡು ಸಿನಿಮಾಗಳು “ಟ್ಯಾಕ್ಸಿ ಡ್ರೈವರ್(೧೯೭೬)” ಮತ್ತು “ದ ಕಿಂಗ್ … Read more

ಏಳನೇ ಬಾರಿಗೆ ಕಸ ರವಾನೆ: ಸಂತೋಷ್‌ ಗುಡ್ಡಿಯಂಗಡಿ

ಇತ್ತೀಚಿಗಷ್ಟೆ ಹೆಗ್ಗಡಹಳ್ಳಿಯ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿ ಇದೊಂದು ಶ್ಲಾಘನೀಯ ಕೆಲಸ, ನಿಮ್ಮ ಪರಿಸರ ಕಾಳಜಿಯನ್ನು ನಾವು ಮೆಚ್ಚಿಕೊಂಡಿದ್ದೇವೆ, ನಾವೂ ಕೂಡ ಈ ಪರಿಸರವನ್ನು ಉಳಿಸಲು ಮತ್ತು ನಮ್ಮ ಕಂಪೆನಿಯಿಂದ ಈ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ ಬೆನ್ನಲ್ಲೆ ಮಕ್ಕಳು ಮತ್ತೆ ಹನ್ನೊಂದು ಕಂಪೆನಿಗಳಿಗೆ ಇಂದು ಕಸ ರವಾನೆ ಮಾಡಿದ್ದಾರೆ. ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳು 2019ರ ಏಪ್ರಿಲೆ ತಿಂಗಳಿಂದ ನಿಮ್ಮ ಕಸ ನಿಮಗೆ ಎಂಬ ದೇಶದಲ್ಲೇ … Read more

ಮಂಗಳತ್ತೆಯ ಮಿ ಟೂ ಅಭಿಯಾನ!: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಟಿ.ವಿ. ಚಾನೆಲ್‍ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿರುವ ‘ಮಿ ಟೂ’ ಅಭಿಯಾನ ದೇಶದೆಲ್ಲೆಡೆ ಭಾರೀ ಸಂಚಲನವನ್ನೇ ಸೃಷ್ಟಿಸಿತು. ಕೆಲವರು ರಾಜಕೀಯ ಮುಖಂಡರ ಕೈಗೆ ಕರವಸ್ತ್ರ ಕೊಡಿಸಿದರು; ಮಂತ್ರಿಗಳು ಮನೆಯ ಹಾದಿ ಹಿಡಿಯುವಂತಹ ಕಳವಳಕಾರೀ ಸನ್ನಿವೇಶÀವನ್ನೇ ಸೃಷ್ಟಿಸಿಬಿಟ್ಟರು. ಇನ್ನೂ ಕೆಲವು ಚಲನಚಿತ್ರ ರಂಗದ ಮಹಿಳೆಯರು ಹೆಸರು ಮಾಡಿದ ನಿರ್ದೇಶಕರು, ಸುಪ್ರಸಿದ್ಧ ನಾಯಕ ನಟರನ್ನು ಪಿಶಾಚಿಯಂತೆ ಬೆನ್ನತ್ತಿ ಕಾಡಿದರು. ಅವರು ಇವರ ಮೇಲೆ ಗೂಬೆ ಕೂಡ್ರಿಸಿದರು; ಇವರು ಅವರ ಮುಖಕ್ಕೆ ಮಸಿ ಬಳಿದರು. ಚಾನೆಲ್‍ಗಳಿಗಂತೂ ರೊಟ್ಟಿಯಲ್ಲ, ಹೋಳಿಗೆಯೇ ತುಪ್ಪದಲ್ಲಿ ಜಾರಿಬಿದ್ದಂತಾಗಿತ್ತು. … Read more

ಸಂಗಾತಿ ಬ್ಲಾಗ್‌ ನ ಸಂಪಾದಕರಾದ ಕು.ಸ.ಮಧುಸೂದನರವರ ಒಂದೆರಡು ನುಡಿ

‘ಸಂಗಾತಿ’ ಸಾಹಿತ್ಯದ ಬ್ಲಾಗ್ ಶುರುವಾಗಿ ಕೇವಲ ಎರಡು ತಿಂಗಳು ಮಾತ್ರ ಆಗಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬರೆಯಲು ನಾನು ಅರ್ಹನೆಂದು ಭಾವಿಸಿಲ್ಲ.ಪತ್ರಿಕೋಧ್ಯಮ ನನ್ನ ಕಾಲೇಜು ದಿನಗಳ ಕನಸಾಗಿತ್ತು.ಆದರೆ ನನ್ನ ವೈಯುಕ್ತಿಕ ಬದುಕಿನ ಸಮಸ್ಯೆಗಳಿಂದ ಅನಿವಾರ್ಯವಾಗಿ ಸರಕಾರಿ ನೌಕರಿಗೆ ಸೇರಬೇಕಾಯಿತು. ಆಗೀಗ ಕತೆ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿ ಕಾಯುವಷ್ಟಕ್ಕೆ ನನ್ನ ಸಾಹಿತ್ಯದ ಆಸಕ್ತಿ ಸೀಮಿತವಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಯಂನಿವೃತ್ತಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದು ಕವನಸಂಕಲನ ಒಂದು ಕಥಾ ಸಂಕಲನ ಎರಡು ರಾಜಕೀಯ … Read more

ಹುಟ್ಟು ಹಬ್ಬದ ಶುಭಾಶಯಗಳು ಪಂಜು: ವರದೇಂದ್ರ ಕೆ.

ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು … Read more

ಒಂಟಿತನ – ಪರಿಣಾಮ – ಮುಕ್ತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು? ಯಾರ ಅಗತ್ಯ ನಮಗೆ ಹೆಚ್ಚು? ಒಂಟಿತನ ಕಾಡುವುದು ಯಾವಾಗ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ? ಇದರಿಂದ ಹೇಗೆ ಮುಕ್ತಿ ಹೊಂದಬೇಕು? ಇವೆಲ್ಲ ಆಗಾಗ ಕಾಡುವ ಪ್ರಶ್ನೆ. ಇವೆಲ್ಲವೂ ಸತ್ಯವಾಗಿ ಅರಿವಾಗಬೇಕು ಅಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ. ಹಾಗಾದರೆ ಇನ್ಯಾವಾಗ? ; … Read more

“ಅಪ್ಪನಿಲ್ಲದ ಈ ಮೂರು ವರ್ಷದ ನಂತರ….. . . . . .”: ಧನರಾಜ್ ಪಾತ್ರೆ

ನಾನು ನೋಡಿದ ಮೊದಲ ವೀರ. ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸುವ ಜಾದೂಗಾರ ಅಪ್ಪ, ಹಾಡು ಕೇಳಿದಾಗೆಲ್ಲಾ.. ಅಪ್ಪ ಕಣ್ಣೆದುರು ನಿಲ್ಲುತ್ತಾರೆ. ಸಾಲುಗಳು ಮಾತ್ರ ಒಂದು ಕುಟುಂಬದಲ್ಲಿ ತಂದೆಯ ಪಾತ್ರ ಪ್ರತಿಬಿಂಬಿಸುತ್ತದೆ. ನನ್ನ ತಂದೆಗೆ “ಬಾಬಾ” ಎಂತಲೇ ಕರೀತಿದ್ದೆ ನನ್ನ ಇಬ್ಬರು ಅಣ್ಣಂದಿರು (ಜಗನ್ನಾಥ, ದಶರಥ) “ದಾದಾ” ಅಂತ ಕರೀತಿದ್ದರು. ನನ್ನ ತಂದೆ ತಾಯಿ ಹೊಟ್ಟೆ ಪಾಡಿಗಾಗಿ ಕೂಲಿ ಹುಡುಕಿಕೊಂಡು ಸತಾರಕ್ಕೆ (ಮಹಾರಷ್ಟ್ರ) ಹೋದಾಗ ಅಲ್ಲಿ ನನ್ನ ಇಬ್ಬರು ಅಣ್ಣಂದಿರು ಹುಟ್ಟಿದ್ದು ಮಾಹಾರಾಷ್ಟ್ರದಲ್ಲಿ ತಂದೆಗೆ ದಾದಾ ಅಂತಾ … Read more

ಪಂಜುಗೆ ಶುಭಹಾರೈಕೆಗಳು: ಗಿರಿಜಾ ಜ್ಞಾನಸುಂದರ್

ಅದೊಂದು ದಿನ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರನ್ನು ಭೇಟಿಮಾಡುವ ಸದವಕಾಶ ಸಿಕ್ಕಿತ್ತು ನನಗೆ. ತಮ್ಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಮಾಡಿದ್ದವರು. ಅವರ ಒಡನಾಟವೇ ಒಂದು ಆನಂದ. ನನ್ನ ಗುರುಗಳಾದ ಉದಯ ಶಂಕರ್ ಪುರಾಣಿಕ್ ರವರು, ಅವರ ಸಹೃದಯೀ ಸ್ನೇಹಿತರು, ಪಂಜು ಪತ್ರಿಕೆಯ ಸಂಪಾದಕರಾದ ನಟರಾಜ್ ಸೀಗೇಕೋಟೆಯವರು ಎಲ್ಲರನ್ನು ಭೇಟಿಯಾದ ಸಮಯ. ನಟರಾಜುರವರು ಮಾತನಾಡುತ್ತ “ನೀವೇಕೆ ಬರೆಯಬಾರದು?” ಎಂದರು. ಅಲ್ಲಿಯವರೆಗೂ ಅದರ ಬಗ್ಗೆ ಯೋಚನೆಯನ್ನು ಮಾಡದ ನನಗೆ ಅದು ಒಂದು ತಮಾಷೆ ಎನ್ನಿಸಿತು. ಕೇವಲ ಸಾಹಿತ್ಯವನ್ನು ಓದಲು ತಿಳಿದಿದ್ದ ನನಗೆ … Read more

ಆದರ್ಶ ಶಿಕ್ಷಕ, ವಿರಳ ಯುವ ಬರಹಗಾರ ವೈ. ಬಿ. ಕಡಕೋಳ: ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ

ಇದೇ ಜನೇವರಿ 21 ರಂದು ಹಾರೂಗೇರಿಯ ಅಜೂರ ಪ್ರತಿಷ್ಠಾನದವರು ಕೊಡಮಾಡುವ ಜಿಲ್ಲಾ ಮಟ್ಟದ ಸಾಹಿತ್ಯ ಕೃತಿಗೆ ವೈ. ಬಿ. ಕಡಕೋಳರ ಪಯಣಿಗ ಕೃತಿ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಸೇಡಂ ತಾಲೂಕಿನ ಮೇದಕ ಗ್ರಾಮದ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ(ರಿ) ವತಿಯಿಂದ ಶ್ರೀ ಚನ್ನಕೇಶ್ವರ ಉತ್ಸವದ ಅಂಗವಾಗಿ ಪೆಬ್ರುವರಿ 1 ರಂದು ಜರಗುವ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ 15ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ವೈ. ಬಿ. ಕಡಕೋಳರ … Read more

ಸೃಷ್ಟಿಯೆಂದರೆ ಸ್ತ್ರೀ ತಾನೆ….: ಸಿಂಧು ಭಾರ್ಗವ್. ಬೆಂಗಳೂರು

ಹೆಣ್ಣಿನ ವಿವಿಧ ರೂಪಗಳನ್ನು ನಾವು ಕಾಣಬಹುದು. ಅದರಲ್ಲಿ ತಾಯಿಗೆ ಮೊದಲ ಸ್ಥಾನ . ಕಾರಣ ಅವಳೇ ಜನನಿ. ಹಡೆದವ್ವ. ಅವಳು ಒಂದು ಮಗುವನ್ನು ಹೆತ್ತು ಈ ಜಗತ್ತಿಗೆ ಪರಿಚಯಿಸಿದರೆ ಮಾತ್ರವೇ ನಾವು ಲೋಕ ನೋಡಬಹುದು. ನಂತರ ಅಕ್ಕ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಮಡದಿ, ಮಗಳು, ಗೆಳತಿ. ಆದರೆ ಹೆಣ್ಣನ್ನು ಪ್ರತಿಯೊಬ್ಬರೂ ತಾಯಿಯಾಗಿ ನೋಡುತ್ತಾರೆಯೇ? ತಮ್ಮ ಮನೆಯ ಅಕ್ಕನೋ ಇಲ್ಲವೇ ತಂಗಿಯಂತೆ ಸ್ವೀಕರಿಸುತ್ತಾರೆಯೇ? ಅವಳಿಗೆ ಗೌರವದ ಸ್ಥಾನ ನೀಡಲಾಗುತ್ತಿದೆಯೇ? ಮೋಹ, ಮೋಸ, ಕಾಮ, ಕಾಸಿನ ವ್ಯಾಮೋಹ, … Read more

ಮಹಿಳೆಯರ ಅಭ್ಯುದಯಕ್ಕಾಗಿ ದುಡಿದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ: ಆದಿತ್ಯಾ ಮೈಸೂರು

ಭಾರತವು ಅಂದು ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಅಸಮಾನತೆ, ಲಿಂಗ ತಾರತಮ್ಯ, ಸತಿ ಸಹಗಮನ, ಬಾಲ್ಯ ವಿವಾಹ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಇನ್ನೂ ಮುಂತಾದ ಮೌಢ್ಯತೆ, ಕಂದಾಚಾರಗಳ ಬಿತ್ತುವ ಆಗರವಾಗಿತ್ತು. ಅಂದಿನ ಸಮಾಜ ಶೂದ್ರ ಅತಿಶೂದ್ರ ಮತ್ತು ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲವದು. ವರ್ಣಾಶ್ರಮದ ನೆಲೆಗಟ್ಟಿನಲ್ಲೆ ನಿಂತಿದ್ದವು. ಮೇಲ್ವರ್ಗದವರೆ ಸರ್ವಶ್ರೇಷ್ಠರೆನಿಸಿಕೊಂಡಿದ್ದರು. ಶಿಕ್ಷಣವೆಂಬುದು ಅವರಿಗೆ ಮಾತ್ರ ಸೀಮಿತವಾಗಿತ್ತು. ಶೂದ್ರರು ಅದರಿಂದ ದೂರವೇ ಉಳಿಯಬೇಕಾಗಿತ್ತು ಇದಕ್ಕೆ ಅರ್ಹರಾಗಿರಲಿಲ್ಲ. ಇನ್ನೂ ಮಹಿಳೆಯರ ಶಿಕ್ಷಣವೆಲ್ಲಿ ? ಧರ್ಮದ ಹೆಸರಿನಲ್ಲಿ ಇವರ ಶಿಕ್ಷಣವನ್ನು ಮೊಟಕುಗೊಳಿಸಲಾಗಿತ್ತು. ಮನುಸ್ಮೃತಿಯಲ್ಲಿ … Read more

ಝಕೀರ್ ನದಾಫ್ ಗೆ ರಂಗ ಪ್ರಶಸ್ತಿ: ವೈ. ಬಿ. ಕಡಕೋಳ

ಇತ್ತೀಚಿಗಷ್ಟೇ ರಂಗ ಸಾಹಿತ್ಯಕ್ಕಾಗಿ ಸವದತ್ತಿ ತಾಲೂಕಿನ ಹೂಲಿ ಶೇಖರ್ ಅವರಿಗೆ ಪ್ರಶಸ್ತಿ ಗೌರವವನ್ನು ರಾಜ್ಯೋತ್ಸವ ಸಂಭ್ರಮದಲ್ಲಿ ನೀಡಿರುವ ಬೆನ್ನಲ್ಲೇ ಹೊಸ ವರ್ಷದ ಮೊದಲ ವಾರ ಮತ್ತೊಂದು ಪ್ರತಿಭೆ ಝಕೀರ್ ನದಾಫ್ ರಿಗೆ ರಂಗ ಪ್ರಶಸ್ತಿ ಪ್ರಕಟವಾಗಿರುವುದು ಸವದತ್ತಿ ತಾಲೂಕಿನ ಹೆಮ್ಮೆ. ಏಣಗಿ ಬಾಳಪ್ಪನವರ ಮೂಲಕ ತಾಲೂಕು ತನ್ನದೇ ವಿಶೇಷತೆಯನ್ನು ರಂಗಪರಂಪರೆಯಲ್ಲಿ ಬೆಳಗಿದೆ. ಇಂತಹ ತಾಲೂಕಿನ ಹೂಲಿ ಶೇಖರ್ ಹುಟ್ಟೂರು ಹೂಲಿಯಾದರೆ ರಂಗ ಚಟುವಟಿಕೆಗಳಿಗೆ ಕರ್ಮ ಭೂಮಿಯಾಗಿದ್ದು ಉತ್ತರ ಕನ್ನಡ. ಬೆಂಗಳೂರು. ಆದರೆ ಏಣಗಿ ಬಾಳಪ್ಪನವರು ಸವದತ್ತಿ ತಾಲೂಕಿನಿಂದಲೇ … Read more

ಮಕ್ಕಳ ಆರೈಕೆ ಹೆತ್ತವರಿಗೊಂದು ಸವಾಲೇ ಸರಿ: ಸಿಂಧು ಭಾರ್ಗವ್

ಒಂದೇ ಬಳ್ಳಿಯ ಎರಡು ಸುಮಗಳ ನೋಡಲು ಎಲ್ಲರಿಗೂ ಇಷ್ಟ. ಅಂದರೆ ದಂಪತಿಗಳಿಗೆ ಮುದ್ದು ಮುದ್ದಾದ ಎರಡು ಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ನೋಡಲು ಬಲುಸೊಗಸು. ಕೆಲವರು ಉದ್ಯೋಗ,ಬಡ್ತಿ ಮೇಲೆ ಬಡ್ತಿ ,ಲಕ್ಷ ಲಕ್ಷ ಸಂಬಳ , ಆಸ್ತಿ ಮಾಡಿಕೊಳ್ಳುವುದು ಎಂಬ ಆಸೆಯ ಪಾಶಕ್ಕೆ ಸಿಲುಕಿ ಒಂದು ಮಗುವನ್ನು ಹೆರಲು ಕೂಡ ಮನಸ್ಸು ಮಾಡುವುದಿಲ್ಲ. ಇನ್ನೂ ಕೆಲವರು “ಅಯ್ಯೋ.. ಈಗಿನ ಖರ್ಚು ದುಬಾರಿ ಜೀವನಕ್ಕೆ ಒಂದೇ ಮಗು ಸಾಕಪ್ಪ… ಎರಡೆರಡು ಮಕ್ಕಳನ್ನು ಯಾರು ನೋಡಿಕೊಳ್ತಾರೆ…”ಎಂದು ರಾಗ ಎಳೆಯುತ್ತಾರೆ. ಒಂದು … Read more

ಜಿಪುಣಾಗ್ರೇಸರರು: ವೈ. ಬಿ. ಕಡಕೋಳ

ದೈನಂದಿನ ಬದುಕಿನಲ್ಲಿ ಜಿಪುಣತನ ಇರಕೂಡದು. ಹಾಗೆ ಇದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಹೊಂದಿಕೊಳ್ಳಲಾರರು. ಅಂತವರನ್ನು ಯಾರೂ ಕೂಡ ಇಷ್ಟ ಪಡಲಾರರು. ಕಾಗೆ ಒಂದಗುಳ ಕಂಡರೆ ಕರೆಯುವುದು ತನ್ನ ಬಳಗವನ್ನು ಕಾಕಾ ಎಂದು. ಎಂಬ ಮಹತ್ವವನ್ನು ಪಕ್ಷಿ ಪ್ರಾಣಿಗಳಿಂದ ಕಲಿಯುವ ನಾವು ಕನಿಷ್ಟರಾಗಿ ಬದುಕುವುದು ತರವೇ. ? ಒಂದು ಸಲ ಯೋಚಿಸಿ. ಒಂದು ಸಲ ಒಬ್ಬ ವ್ಯಕ್ತಿ ಮರಭೂಮಿಯಲ್ಲಿ ತನ್ನ ನಾಯಿಯೊಂದಿಗೆ ಪ್ರವಾಸ ಆರಂಭಿಸಿದ್ದ. ಬೇಸಿಗೆ ಕಾಲ ಬೇರೆ ಅಂತಹ ಸ್ಥಳದಲ್ಲಿ ನೀರನ ಕೊರತೆ ಇತ್ತು. ಆತ ತನ್ನ … Read more

ಕಣ್ಮರೆಯಾದ ಗೆಳತಿಯರು: ಸಿಂಧು ಭಾರ್ಗವ್.

ಕಾಲೇಜು ದಿನಗಳಲ್ಲಿ ಲವಲವಿಕೆಯಿಂದ ತುಂಟತನ ತರಲೆ ಮಾಡಿಕೊಂಡು ದಿನಕಳೆಯುತ್ತಿದ್ದ ನಾವು ಎಷ್ಟು ಸಂತೋಷದಿಂದ ಇರುತ್ತಿದ್ದೆವು. ಓದು , ಆಟದ ಜೊತೆಗೆ ಜಗಳ, ಗಲಾಟೆ, ಮುಷ್ಕರ, ಪ್ರೀತಿ-ಪ್ರೇಮ ಸಂತೆ ಎಲ್ಲವನ್ನೂ ಅಲ್ಲಿ ಇಲ್ಲಿ ನೋಡಿ, “ನಾವೆಲ್ಲ ಹಾಗಿಲ್ಲಪ್ಪ…” ನಮ್ಮದು “ಓನ್ಲೀ ಫ್ರೆಂಡ್ ಶಿಪ್ ” ಓದು, ಮನೆ… ಅಷ್ಟೇ ಎಂದು ಎಂಜಾಯ್ ಮಾಡುತ್ತಿದ್ದೆವು. ರಕ್ತ ಸಂಬಂಧಗಳ ಮೀರಿದ ಬಂಧವಿದು ಎಂದು ಹಾಡು ಹೇಳುತ್ತ ಖುಷಿ-ಖುಷಿಯಾಗಿದ್ದೆವು. ಆಮೇಲೆ? ಮುಂದೇನು? ಕಾಲೇಜು ಜೀವನದ ಕೊನೆಯ ವರುಷ ಎರಡು ಸೆಮಿಸ್ಟರ್, ಪ್ರೊಜೆಕ್ಟ್ ಮಾಡಿ … Read more

ಹೃದಯ ಸ್ಪರ್ಶಿ ಬರಹಗಳಿಂದ ಮಾತ್ರ ಸುಂದರವಾದ ಸಮತಾ ಸಮಾಜ ನಿರ್ಮಾಣ: ಈಶ್ವರ ಚ ಮಗದುಮ್ಮ

ಹೌದು! ಎಷ್ಟೋಬಾರಿ ಆತನ ಬಗ್ಗೆ ಬರೆದಿದ್ದೇನೆ. ಆದರೂ ಮತ್ತೇ ಮತ್ತೇ ಅವನ ವ್ಯಕ್ತಿತ್ವದ ಕುರಿತು ಬರೆಯಬೇಕೆನಿಸುತ್ತದೆ. ಅವನ ಬಗ್ಗೆ ಎಷ್ಟು ಬರೆದರೂ ಕಮ್ಮಿ ಅನಿಸಲು ಕಾರಣವೂ ಇದೆ. ಅವನ ಮತ್ತು ನನ್ನ ಸ್ನೇಹ-ಒಡನಾಟ ಹಾಗೇ ಇದೆ. ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದ್ದರೆ ಬಹುಶಃ ನಾನು ಅವನ ಕುರಿತು ಪದೆ ಪದೆ ಬರೆಯುತ್ತಿರಲಿಲ್ಲವೇನೋ? ಆದರೂ ಸ್ನೇಹಕ್ಕೂ ಮೀರಿದ ಅದ್ಯಾವುದೋ ಒಂದು ಶಕ್ತಿ ನಮ್ಮನ್ನು ಬೆಸೆದಿದೆ ಎನಿಸಿತ್ತದೆ. ಅದ್ಯಾವದೋ ಒಂದು ತಂತು ನಮ್ಮ ಮನಗಳಲ್ಲಿ ಸಮಾನವಾಗಿ ಮಿಡಿಯುತ್ತಿದೆ ಅನಿಸುತ್ತದೆ. ಅದಕ್ಕಾಗಿಯೇ … Read more

ಕೌಟುಂಬಿಕ ಮೌಲ್ಯ ಮತ್ತು ವಿಶ್ವಭ್ರಾತೃತ್ವ: ಡಿ. ಪಿ. ಭಟ್, ಪುತ್ತೂರು.

ಅನೇಕ ತೀರ್ಥ ಕ್ಷೇತ್ರಗಳನ್ನು, ಹಲವು ಪರಿಶುದ್ಧ ಪಾವಿತ್ರ್ಯತೆಯಿಂದ ಕೂಡಿದ ಕಲ್ಯಾಣಿಗಳನ್ನು, ಮಠ ಮಂದಿರಗಳನ್ನು, ವಿದ್ಯಾ ದೇಗುಲಗಳನ್ನು ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಳಗೊಂಡಿರುವ ಹಲವು ಪ್ರಕೃತಿ ವಿಸ್ಮಯಾತ್ಮಕ ರಮಣೀಯ ಸ್ಥಳಗಳ ಮೂಲಕ ಪ್ರವಹಿಸುತ್ತಿರುವ ಆಧ್ಯಾತ್ಮಿಕತೆಯ ಅಭಿವ್ಯಕ್ತಿಯಿಂದ ನಮ್ಮ ಭಾರತವು ಕಂಗೊಳಿಸುತ್ತಿದೆ. ಪರಮೋತ್ಕಟ ಭಕ್ತಿಭಾವೋನ್ಮಾದಸ್ನಾತರಾದ ರಾಮ, ಸೀತಾ, ಕೃಷ್ಣ,  ಶಂಕರರು, ರಾಮಾನುಜರು, ಮಾಧ್ವರು, ಶೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮೀ ವಿವೇಕಾನಂದರಂತಹ ಭಗವದ್ ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು ಓಡಾಡಿದ ದೇಶವಿದು. ಆಧ್ಯಾತ್ಮಿಕ ಶಕ್ತಿಯ ಪ್ರಬಲತೆಯಿಂದ ಕೂಡಿದ ಭರತ ಭೂಮಿಯಲ್ಲಿಂದು ಕೊಲೆ, … Read more