ವರ್ಕ್ ಫ್ರಂ ಹೋಂ ಮತ್ತದರ ಸಮಸ್ಯೆಗಳು: ಪ್ರಶಸ್ತಿ ಪಿ.

ಪೇಟೆಯಲ್ಲಿನ ಸಾಫ್ಟವೇರ್ ಕಂಪೆನಿಗಳಲ್ಲಿ ಕೆಲಸ ಮಾಡ್ತಿದ್ದ ಹುಡುಗರೆಲ್ಲಾ ಈಗ ಹಳ್ಳಿ ಸೇರಿದ್ದಾರೆ. ಮನೇಲೇ ಕೂತ್ಕೊಂಡು ಅದೇನೋ ವರ್ಕ್ ಫ್ರಂ ಹೋಂ ಮಾಡ್ತಿದ್ದಾರೆ ಅನ್ನೋ ಮಾತನ್ನ ಸುಮಾರು ಕಡೆ ಕೇಳಿರ್ತೀರ . ಮುಂಚೆಯೆಲ್ಲಾ ಆಫೀಸಿಗೆ ಅಂತ ಬೆಂಗಳೂರಿಗೆ ಹೋಗ್ತಿದ್ದೆ. ಈಗ ಇಲ್ಲೇ ಇದ್ದೀಯಲ್ಲ. ರಜೆಯೇನಪ್ಪ ನಿಂಗೆ ಅಂತಾರೆ ನಮ್ಮಜ್ಜಿ. ಇಲ್ಲಜ್ಜಿ ಮನೆಯಿಂದ್ಲೇ ಕೆಲಸ ಮಾಡ್ಬೋದು ಲ್ಯಾಪ್ಟಾಪಲ್ಲಿ, ಕಂಪ್ಯೂಟರಲ್ಲಿ ಅಂದ್ರೆ ಏನ್ಮಾಡ್ತೀಯ ಅದ್ರಲ್ಲಿ ? ಲೆಕ್ಕ ಮಾಡೋದಿರುತ್ತಾ ಅಂತಾರೆ. ನಾವು ಏನ್ಮಾಡ್ತೀವಿ ಅಂತ ಹೊರಗೆ ಹೇಳದ ಹಾಗೆ ನಮ್ಮ ಅನ್ನದಾತರಾದ … Read more

ಮೆಕ್ಸಿಕೋ ಮೈತ್ರಿ: ಪ್ರಶಸ್ತಿ ಪಿ.

ಕೆಲಸದ ನಿಮಿತ್ತ ಮೆಕ್ಸಿಕೋಗೆ ಬಂದ ಮೊದಲ ದಿನಗಳಲ್ಲಿ ಕಾಡಿದ ದಿಗಿಲುಗಳು ಅಷ್ಟಿಷ್ಟಲ್ಲ. ಭಾರತದ ಮಾಧ್ಯಮಗಳಲ್ಲಿ ಕಂಡ ಹಾದಿಬೀದಿಯಲ್ಲೆಲ್ಲಾ ಡ್ರಗ್ಸ್ ಮಾಡೋ ನಾಡೆಂಬ ಸುದ್ದಿಗಳಾಗಿರಬಹುದು, ರಾತ್ರಿ ಏಳರ ಮೇಲೆ ಹೊರಗೆ ಕಾಲಿಡಬೇಡವೆಂದು ಎಚ್ಚರಿಸುತ್ತಿದ್ದ ಹೋಟೇಲು ರೂಂಮೇಟಾಗಿರಬಹುದು, ಗೊತ್ತಿಲ್ಲದ ಸ್ಪಾನಿಷ್ ಭಾಷೆಯಾಗಿರಬಹುದು, ಇಂಟರ್ ನ್ಯಾಷನಲ್ ರೋಮಿಂಗ್ ಇದ್ದರೂ ಸಿಗ್ನಲ್ ಸಿಗದ ಸಿಮ್ಮಾಗಿರಬಹುದು, ಎಲ್ಲೆಡೆಯೂ ಮಾಂಸದ ಸಾಮ್ರಾಜ್ಯವಾಗಿ ವೆಜ್ಜಿಗಳಿಗೆ ಸಿಗದ ಊಟವಾಗಿರಬಹುದು, ತಮ್ಮ ಕೆಲಸವನ್ನೇ ನೋಡಿಕೊಳ್ಳುತ್ತಾ ಹೆಚ್ಚೇನೂ ನೆರವಾಗದ ಈಗಾಗಲೇ ಅಲ್ಲಿಗೆ ಹೋಗಿದ್ದ ಸಹೋದ್ಯೋಗಿಗಳಾಗಿರಬಹುದು. ಸಿಮ್ಮು ತಗೊಳ್ಳೋಕೆ ನಾಲ್ಕು ದಿನ, ಬ್ಯಾಂಕ್ … Read more

ಸುಂದರ ಸಿಯಾಟೆಲ್: ಪ್ರಶಸ್ತಿ

ನಮಗೆ ಅದೇ ಹೆಸರೇಕೆ ಇಟ್ಟರು ಅನ್ನೋದರ ಹಿಂದೆ ನಮ್ಮಪ್ಪ ಹೇಳೋ ತರ ಪ್ರಸಿದ್ಧ ನಗರಗಳಿಗೂ ಆ ಹೆಸರುಗಳೇ ಯಾಕೆ ಬಂದವು ಅಂತ ಎಷ್ಟು ಸಲ ಯೋಚನೆ ಮಾಡಿರೋಲ್ಲ ನಾವು ? ಹೆಸರಲ್ಲೇನಿದೆ ಅಂದ್ರಾ ? ಪ್ರತೀ ನಗರಕ್ಕೂ ತನ್ನದೇ ಆದೊಂದು ಹೆಸರಿರುತ್ತೆ. ಆ ಹೆಸರೇಕೆ ಬಂತು ಅನ್ನೋದರ ಹಿಂದೊಂದು ಸುಂದರ ಕಥೆಯಿರುತ್ತೆ. ಹೆಸರ ಇತಿಹಾಸ ಥಟ್ಟನೆ ಗೋಚರಿಸದಿದ್ದರೂ ಕಾಲಗರ್ಭದಲ್ಲೆಲ್ಲೋ ಮರೆಯಾಗಿ ಕೆದಕುವವರಿಗಾಗಿ ಕಾದು ಕೂತಿರುತ್ತೆ. ದೇಶ ಸುತ್ತೋ ಜೋಶಿನಲ್ಲಿ ಸಿಕ್ಕಿದ್ದ ಸಿಯಾಟೆಲ್ಲಿಗೆ ಆ ಹೆಸರೇಕೆ ಬಂತೆನ್ನೋ ಪ್ರಶ್ನೆಯ … Read more

ಸಂತಾ ರನ್: ಪ್ರಶಸ್ತಿ

ವಾರಕ್ಕೊಮ್ಮೆ ಆಗೋ ಸಂತೆ ಗೊತ್ತು. ,ಸಂತಾ-ಬಂತಾ ಜೋಕುಗಳಲ್ಲಿಯ ಸಂತಾ ಗೊತ್ತು. ಕ್ರಿಸ್ಮಸ್ಸಿನಲ್ಲಿ ಗಿಫ್ಟ್ ಕೊಡ್ತಾನೆ ಅಂತ ಮಕ್ಕಳು ಕಾಯೋ ಸಂತಾ ಕ್ಲಾಸೂ ಗೊತ್ತು. ಇದೇನಿದು ಸಂತಾ ರನ್ ಅಂದ್ರಾ ? ಮೆಕ್ಸಿಕೋದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ಮಸ್ ಸಮಯದಲ್ಲಿ ಆಗೋ ಓಟದ ಸ್ಪರ್ಧೆಯೇ "ಸಂತಾ ರನ್". ನಮ್ಮ ಬೆಂಗಳೂರಲ್ಲೂ ತಿಂಗಳಿಗೊಂದರಂತೆ ಓಟಗಳು ನಡೀತಿರತ್ತೆ. ನೈಸ್ ರೋಡ್ ಮ್ಯಾರಥಾನ್, ಟಿಸಿಎಸ್ ೧೦ಕೆ ಓಟಕ್ಕೆ ವಿದೇಶೀ ಅಥ್ಲೀಟುಗಳೂ ಬರುತ್ತಾರೆ ಇದ್ರಲ್ಲೇನು ವಿಶೇಷ ಅಂದ್ರಾ ? ಹೆಸರೇ ಹೇಳುವಂತೆ ಓಟಕ್ಕೆ ಬರೋ ಎಲ್ಲಾ ಸ್ಪರ್ಧಿಗಳೂ … Read more

ಮತ್ತೆ ಮಳೆಯಾಗಿದೆ: ಪ್ರಶಸ್ತಿ

ಮಳೆಗಾಲ ಮುಗೀತು. ಇನ್ನೇನು ಚಳಿಗಾಲ ಬರ್ಬೇಕಿತ್ತಲ್ಲ ಅಂತ ಕಾಯ್ತಾ ಇದ್ದವರಿಗೆ ಡಿಸೆಂಬರ್ ಐದಾದರೂ ಚಳಿಯ ದರ್ಶನವಾಗಿರಲಿಲ್ಲ. ಕಡಿಮೆಯೆಂದರೆ ಹದಿನೈದು , ಹೆಚ್ಚೆಂದರೆ ಇಪ್ಪತ್ತೈದು ಡಿಗ್ರಿಯಿರುತ್ತಿದ್ದ ದಿನಗಳಲ್ಲಿ ಗ್ಲಾಸ ಕಿಟಕಿಯ ಪಕ್ಕದಲ್ಲಿ ಕುಳಿತು ಕೆಲಸ ಮಾಡೋದೊಂತರ ಖುಷಿ. ಎದುರಿಗಿರೋ ಬೆಟ್ಟಗಳ ಮೇಲೆ ಕವಿಯುತ್ತಿದ್ದ ಮೋಡಗಳು, ಪಕ್ಕದ ಗಗನಚುಂಬಿಗಳ ನಡುವೆ ಕೂಕೆನ್ನುತ್ತಾ ಸಂಜೆ ಕಳೆಯೋ ಮುಳುಗುರವಿ, ಡಿಸೆಂಬರ್ ಬಂತೆಂದು ನೆನಪಿಸುತ್ತಾ ರಸ್ತೆಯಲ್ಲಿ ಆಗಾಗ ಕಾಣುವ ಮೆರವಣಿಗೆಗಳು ಕ್ರಿಸ್ ಮಸ್ ರಜೆ ಬರುತ್ತಿರೋ ಸೂಚನೆ ಕೊಡುತ್ತಿದ್ದವು. ಆಗಾಗ ಎದುರಿಗಿರೋ ಪರ್ವತಗಳನ್ನೇ ಮುಚ್ಚುವಂತಹ … Read more

ಮಹಾವಲಸೆ: ಪ್ರಶಸ್ತಿ

  ಚಳಿಗಾಲ ಬಂತಂದ್ರೆ ಮನೆಯಿಂದ ಹೊರಗೆ ಹೊರಡೋಕೆ ಮನಸ್ಸಾಗಲ್ಲ. ಹೊರಗಡೆ ಚುಮುಚುಮು ಚಳಿ ಕೊರಿತಾ ಇರುವಾಗ  ಮನೆಯೊಳಗೆ ಬೆಚ್ಚಗೆ ಹೊದ್ದು ಕೂತು ಬಿಸಿ ಬಿಸಿ ಬಜ್ಜಿಯೋ, ಬೋಂಡಾವೋ ತಿನ್ನುತ್ತಾ ಚಹಾ ಹೀರೋ ಸವಿಯಿದ್ಯಲ್ಲಾ ? ಆಹಾ. ಬಾಳೇಕಾಯಿ ಚಿಪ್ಸೋ, ಹಲಸಿನ ಕಾಯಿ ಚಿಪ್ಸೋ ಸಿಕ್ಕಿಬಿಟ್ಟರೆ ಅದೇ ಸ್ವರ್ಗ. ನಮ್ಮಲ್ಲಿನ ಚಳಿಯೆಂದರೆ ಎಷ್ಟಿದ್ದೀತು ? ಅಬ್ಬಬ್ಬಾ ಅಂದರೆ ಹದಿನೈದು ಡಿಗ್ರಿಯವರೆಗೆ ಇಳಿಯಬಹುದೇನೋ ? ಆದರೆ ಆ ಚಳಿ ಹಾಗೇ ಹತ್ತಕ್ಕಿಂತಲೂ ಕಡಿಮೆಯಾಗುತ್ತಾ ಹೋದರೆ ? ರಾತ್ರಿ ಹೋಗಲಿ, ಹಗಲಲ್ಲೂ … Read more

ಅನ್ನದಾತ ಕ್ಯಾಂಟೀನ್: ಪ್ರಶಸ್ತಿ

ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳವು. ಎರಡು ದಿನ ನೆಂಟರ ಮನೆಯಲ್ಲಿದ್ದರೂ ಮೂರನೇ ದಿನದೊತ್ತಿಗೆ ಪೀಜಿಯೋ ರೂಮೋ ಹುಡುಕಲೇ ಬೇಕೆನ್ನೋ ಹಠ. ಹಠವೆನ್ನಬೇಕೋ, ಸ್ವಾಭಿಮಾನವೆನ್ನಬೇಕೋ ಗೊತ್ತಿಲ್ಲ. ಹಿಂದೊಮ್ಮೆ ಬಂದಾಗಿನ ಊಟವಿಲ್ಲದ ಉರಿಬಿಸಿಲ ದಿನಗಳಿಲ್ಲದಿದ್ದರೂ ಆದಷ್ಟು ಬೇಗ ಸ್ವಂತದ್ದೊಂದು ನೆಲ ಹುಡುಕೋ ಹವಣಿಕೆ. ಸಂಬಳ ಕೊಡೋ ಕಂಪೆನಿ ಕೆಲಸ ಕೊಡಲು ಶುರುಮಾಡದಿದ್ದರೂ ಗೊತ್ತಿಲ್ಲದ ಊರಲ್ಲಿ ಪರಕೀಯನಾಗದಿರಲು ಒದ್ದಾಟ. ನೆಂಟರ ಮನೆಯಲ್ಲಿದ್ದಷ್ಟು ದಿನವೂ ತಾನು ಈ ಊರಿಗೆ ನೆಂಟನೇ ತಾನೇ ? ಈ ಊರಲ್ಲೊಬ್ಬನಾಗಬೇಕೆಂದರೆ ಇಲ್ಲಿಯ ಸಾಮಾನ್ಯರಲ್ಲೊಬ್ಬನಾಗಬೇಕೆಂಬ ಕನವರಿಕೆ. ಅಂತದ್ದೇ ಕನಸಿನ … Read more

ಅಗೋಚರ: ಪ್ರಶಸ್ತಿ

ಏಳ್ಬೇಕು ಅಂತಷ್ಟೊತ್ತಿಗೆ ಏಳ್ಬೇಕು, ಮಲಗ್ಬೇಕು ಅಂದಷ್ಟೊತ್ತಿಗೆ ಮಲಗಿ ಬಿಡ್ಬೇಕು. ಈ ಫೇಸ್ಬುಕ್ಕು,ವಾಟ್ಸಾಪು, ಜೀಮೆಲುಗಳನ್ನೆಲ್ಲ ಡಿಲಿಟ್ ಮಾಡಿ ಎಲ್ಲಾದ್ರೂ ದೂರ ಹೋಗಿ ಬಿಡಬೇಕು ಗುರೂ ಅಂತಿದ್ದವ ಅದರಲ್ಲೇ ಮೂರೊತ್ತೂ ಮುಳುಗಿರುತ್ತಿದ್ದ. ರಾಶಿ ರಾಶಿ ಪುಸ್ತಕಗಳ ಗುಡ್ಡೆ ಹಾಕಿಕೊಂಡವ ಕ್ಲಾಶ್ ಆಫ್ ಕ್ಲಾನ್ಸು, ಫ್ಯೂಚರ್ ಫೈಟಗಳಲ್ಲಿ ಕಳೆದುಹೋಗಿರುತ್ತಿದ್ದ. ಆಟಗಳಲ್ಲಿ ಸಿಗುವ ಕಾಲ್ಪನಿಕ ಕಾಸ ಹಿಂದೆ ಆತನ ಇಂದು ಕಾಣದಷ್ಟು ಕುರುಡನಾಗಿದ್ದವ ಒಮ್ಮೆ ಇದನ್ನೆಲ್ಲಾ ಪಟ್ಟನೆ ಬಿಟ್ಟು ಎಲ್ಲೋ ಮರೆಯಾಗಿಬಿಡುವನೆಂದು ಯಾರೂ ಎಣಿಸಿರಲಿಲ್ಲ. ಬೆಳಗಿಂದ ರಾತ್ರೆಯವರೆಗೂ ಆಫೀಸಲ್ಲೇ ಕೊಳೆಯುತ್ತಾನೆ ಎಂದು ಹೀಗಳೆಯೋ … Read more

ಐದ್ಸಾವರ ಫ್ರೆಂಡ್ಸು ಮತ್ತು ನಾವು: ಪ್ರಶಸ್ತಿ

ಈ ಫೇಸ್ಬುಕ್ಕಿನ ಸಾಹಿತಿಗಳೆಲ್ಲಾ, ಅಥವಾ ಬೇರೆಡೆ ಸಾಹಿತ್ಯ ಬರೆಯುತ್ತಿದ್ದು ಸದ್ಯ ಫೇಸ್ಬುಕ್ಕಿನಲ್ಲಿ ಸಕ್ರಿಯರಾಗಿರೋ ಸ್ನೇಹಿತರೆಲ್ಲಾ ಯಾವುದೋ ಪಕ್ಷದ ವಕ್ತಾರರಂತೆ, ಮತ್ಯಾವುದೋ ಕೋಮಿನ ಹರಿಕಾರರಂತೆ ಯದ್ವಾ ತದ್ವಾ ಪೋಸ್ಟುಗಳನ್ನ ಹರಿಬಿಡೋದನ್ನು ನೋಡಿದಾಗ ಖೇದವಾಗುತ್ತೆ. ಮೋದಿಯೊಬ್ಬ ಸರ್ವಾಧಿಕಾರಿಯೆಂದಾಗ್ಲೋ, ಟಿಪ್ಪು ಜಯಂತಿ ಬೇಡವೆನ್ನುವವರಿಗೆ ಬುದ್ಧಿಯಿಲ್ಲವೆಂದಾಗ್ಲೋ , ಉರುಳು ಸೇವೆಗೋ, ಉಡುಪಿ ಚಲೋಗೋ ಪ್ರಶಂಸೆ, ಧಿಕ್ಕಾರಗಳನ್ನ ಬರೆದಾಗಾದ ಬೇಸರವಲ್ಲವದು. ಆದರೆ ಎಡವೇ ಸರಿಯೆಂದೋ, ಬಲವೇ ಸರ್ವೋತ್ತಮವೆಂದೋ ದಿನಂಪ್ರತಿ ಜಗಳ ಕಾಯೋ ಪರಿಗೆ ಕಸಿವಿಸಿಯಾಗುತ್ತೆ. ವೈಯುಕ್ತಿಕವಾಗಿ ಇಷ್ಟವಾಗೋ ಅವರು ಫೇಸ್ಬುಕ್ಕಿಗೆ ಬಂದಾಗ ಹಿಂಗ್ಯಾಕೆ ಅನ್ನೋದು … Read more

ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ

ಸುಮಾರಷ್ಟು ಜನರಿಗೆ ಸುಬ್ರಹ್ಮಣ್ಯ ಅಂದ್ರೆ ಅಲ್ಲಿ ನಡೆಯೋ ನಾಗಪ್ರತಿಷ್ಟೆ, ಆಶ್ಲೇಷ ಬಲಿಗಳು ನೆನಪಾಗುತ್ತೆ. ಟ್ರೆಕ್ಕಿಂಗು ಅಂತ ಹೋಗೋರಿಗೆ ಅದಕ್ಕೆ ಸಮೀಪದಲ್ಲಿರೋ ಕುಮಾರ ಪರ್ವತ ನೆನಪಾಗಬಹುದು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿರುವ ಮರಕತ ಪರ್ವತ ಗೊತ್ತಾ ಎಂದರೆ, ಆದಿ ಸುಬ್ರಹ್ಮಣ್ಯ, ಕಾಶಿ ಕಟ್ಟೆ ಗಣಪತಿ, ಅಭಯ ಗಣಪತಿ, ವನದುರ್ಗಾ ದೇವಿ ನೋಡಿದ್ದೀರಾ ಎಂದರೆ ಎಲ್ಲಿದೆಯಪ್ಪಾ ಇವು ಎನ್ನಬಹುದು. ಸುಬ್ರಹ್ಮಣ್ಯದಿಂದ ೨೦ ಕಿಮೀ ದೂರದ ಒಳಗಿರುವ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಬನವನ ಮೂಲೆ ಈಶ್ವರ … Read more

ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ: ಪ್ರಶಸ್ತಿ

ಹೋಗೋದು ಹೇಗೆ ?  ಸಾಗರ ತಾಲ್ಲೂಕಿನ ಸುತ್ತಮುತ್ತಲಿರೋ ಕೆಳದಿ,ಇಕ್ಕೇರಿ,ಕಲಸೆ, ಹೊಸಗುಂದ ಮುಂತಾದ ಇತಿಹಾಸ ಪ್ರಸಿದ್ಧ ತಾಣಗಳ ಬಗ್ಗೆ ಕೇಳಿರುತ್ತೀರಿ. ಆದರೆ ಸಾಗರಕ್ಕೆ ಹತ್ತಿರದಲ್ಲೇ ಹನ್ನೊಂದನೇ ಶತಮಾನದ ದೇವಸ್ಥಾನವೊಂದಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಾರದು. ಅದೇ ಸಾಗರದಿಂದ ಸುಮಾರು ೨೦ ಕಿ.ಮೀ ದೂರದಲ್ಲಿರುವ ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ. ಸಾಗರದಿಂದ ಚಿಕ್ಕಬಿಲಗುಂಜಿಗೆ ಹೋಗೋಕೆ ಎರಡು ಮಾರ್ಗಗಳಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೋಗೋ ಮಾರ್ಗದಲ್ಲಿ ಸಿಗೋ ತ್ಯಾಗರ್ತಿ ಕ್ರಾಸಿನಲ್ಲಿ ಹೋಗೋದು ಮೊದಲನೇ ಮಾರ್ಗವಾದರೆ ನಂತರ ಸಿಗೋ ಕಾಸ್ಪಾಡಿ ಎಂಬ ಊರಿನ ಬಳಿ ಎಡಕ್ಕೆ … Read more

ಕತೆಯಾಗದ ಕತೆ: ಪ್ರಶಸ್ತಿ

ಅದೆಷ್ಟೋ ಕಥೆಗಳು ಹುಟ್ಟೋ ಮೊದಲೇ ಸತ್ತಿರುತ್ತವೆ. ಒಂಚೂರು ಕಾಯೋ ತಾಳ್ಮೆಯಿಲ್ಲದ ಕತೃವಿನಿಂದ,ಖ್ಯಾತಿಯ ಹಿಂದೇ ಕಳೆದು ಹೋದ ಸ್ಪೂರ್ತಿಯಿಂದ. ಒಮ್ಮೆ ವಾವೆನಿಸಿದ್ದನ್ನೇ ಮತ್ತೆ ಮರುಸೃಷ್ಠಿಸೋ ಧಾವಂತದಲ್ಲಿ,ಹೊಸ ಪ್ರಯತ್ನ ಮತ್ತೆ ಸೋಲಿನತ್ತ ದೂಕಬಹುದೇನೋ ಎಂಬ ಆತಂಕದಲ್ಲಿ,ಬಾರದ ಬಹುಮಾನಗಳ ಕನವರಿಕೆಯಲ್ಲಿ, ಹಾರ-ತುರಾಯಿಗಳ, ಸನ್ಮಾನದ ಶಾಲುಗಳ ಮತ್ತೆ ಮತ್ತೆ ಹೊಚ್ಚಿಕೊಳ್ಳೋ ಹಪಾಹಪಿಯಲ್ಲಿ ಮುಂಚಿನ ಕತೆಗಾರ ಕಳೆದುಹೋಗಿರುತ್ತಾನೆ. ಬಹುಪರಾಕುಗಳ ಪಟಾಕಿಯ ಸದ್ದು ಕಿವಿಯ ಕಿವುಡಾಗಿಸೋ ಮುನ್ನ ಪ್ರಸಿದ್ದಿಯ ನಗರಿಯಿಂದ ಒಂದಿಷ್ಟು ದೂರ ಬಂದು ಒಂದಿಷ್ಟು ತಣ್ಣಗಿರೋ ಬೆಟ್ಟ ಹತ್ತಿ ಒಂದರೆಗಳಿಗೆ ಕೂತರೆ, ದೂರದೂರದ ದೃಶ್ಯ … Read more

ಕುರುಡುಮಲೆ ಪ್ರವಾಸ: ಪ್ರಶಸ್ತಿ

ಸ್ಥಳವೊಂದರ ಹೆಸರು ಕಾಲಕಾಲಕ್ಕೆ ಹೇಗೆ ಬದಲಾಗುತ್ತಾ ಸಾಗುತ್ತೆ ಅನ್ನೋದಕ್ಕೆ ಕೋಲಾರ ಮತ್ತು ಕುರುಡುಮಲೆ ಒಳ್ಳೆಯ ಉದಾಹರಣೆ ಅನಿಸುತ್ತೆ. ಮೂರನೆಯ ಶತಮಾನದಲ್ಲಿ ಗಂಗರ ಅಧೀನದಲ್ಲಿದ್ದ ಒಂದು ನಗರಿ ಕೂವಲಾಲಪುರ. ಅದು ನಂತರ ಚೋಳ,ಹೊಯ್ಸಳ, ವಿಜಯನಗರ ಅರಸರಿಂದ ಆಳಲ್ಪಡುತ್ತಾ ಕೋಲಾರಮ್ಮನ ದೇವಸ್ಥಾನವನ್ನು ಹೊಂದಿ ಕೋಲಾರವಾಯಿತಂತೆ. ಅದೇ ರೀತಿ ಬ್ರಹ್ಮ, ವಿಷ್ಣು, ಮಹೇಶ್ವರರು ಧರೆಗಿಳಿದು ಬಂದು ಕೂಡಿ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪ್ರತೀತಿಯಿದ್ದರಿಂದ ಕೋಲಾರದ ಹತ್ತಿರದ ಸ್ಥಳವೊಂದಕ್ಕೆ ಕೂಟುಮಲೆಯೆಂದು ಹೆಸರಾಯಿತಂತೆ. ಕೂಟುಮಲೆ, ಕೂಡುಮಲೆ ಜನರ ಬಾಯಲ್ಲಿ ಕುರುಡುಮಲೆಯಾಗಿದೆಯೀಗ. ಹೋಗುವುದು ಹೇಗೆ ?  ಕೋಲಾರದಿಂದ … Read more

ಅವನಿ: ಪ್ರಶಸ್ತಿ

ಅರಳಗುಪ್ಪೆಯ ಹೊಯ್ಸಳರ ಕಾಲದ ಚನ್ನಕೇಶವ ದೇವಸ್ಥಾನ ನೋಡಹೋದಾಗ ಅಲ್ಲಿ ಅದಕ್ಕಿಂತ ಹಳೆಯದಾದ ಒಂಭತ್ತನೇ ಶತಮಾನದ ಆಸುಪಾಸಿನಲ್ಲಿ ಕಟ್ಟಿಸಿದ ಕಲ್ಲೇಶ್ವರ ದೇವಾಲಯವಿದೆ ಅಂತ ಗೊತ್ತಾಯ್ತು. ಅದನ್ನು ಕಟ್ಟಿಸಿದವರು ನೋಲಂಬ ಅರಸರು ಅಂತಲೂ ತಿಳಿಯಿತು. ಚಾಲುಕ್ಯರು ಗೊತ್ತು. ಅವರಿಗಿಂತ ಮುಂಚೆ ಬಂದ ನೆರೆ ರಾಜ್ಯಗಳಲ್ಲಿದ್ದ ಚೋಳರು, ರಾಷ್ಟ್ರಕೂಟರ ಬಗ್ಗೆ ಗೊತ್ತು. ಅದಕ್ಕಿಂತಲೂ ಮುಂಚೆ ಬಂದ ಗಂಗರು, ಕದಂಬರು ಕಟ್ಟಿಸಿದ ದೇವಾಲಯಗಳ ಬಗ್ಗೆಯೂ ಚೂರ್ಚೂರು ಗೊತ್ತು. ಇದ್ಯಾರು ನೋಲಂಬ ಅರಸರು ಅಂದರಾ ? ರಾಷ್ಟ್ರಕೂಟರ ಸಾಮಂತರಾಜರಾಗಿದ್ದ ಇವರು ಒಂಭತ್ತರಿಂದ ಹನ್ನೆರಡನೆಯ ಶತಮಾನದವರೆಗೆ … Read more

ಕೋಲಾರಮ್ಮ ದೇವಸ್ಥಾನ: ಪ್ರಶಸ್ತಿ ಪಿ.

ಕರ್ನಾಟಕದಲ್ಲಿನ ಪುರಾತನ ದೇವಾಲಯಗಳಲ್ಲಿ ಹೆಚ್ಚಿರುವುದು ಹೊಯ್ಸಳರ ದೇಗುಲಗಳು. ಅವುಗಳಿಗಿಂತಲೂ ಹಿಂದಿನ ದೇಗುಲಗಳು ಅಂದರೆ ನೆನಪಾಗೋದು ಚೋಳರ ಕಾಲದ್ದು ಮತ್ತು ಅದಕ್ಕಿಂತಲೂ ಹಿಂದೆ ಅಂದರೆ ಕದಂಬರ, ಗಂಗರ ಕಾಲದ ಅಳಿದುಳಿದ ದೇಗುಲಗಳು. ಕೋಲಾರದಲ್ಲಿ ೧೦೧೨ರಲ್ಲಿ ಕಟ್ಟಿಸಲಾದ ದೇವಸ್ಥಾನವೊಂದಿದೆ, ಇನ್ನೂ ಒಳ್ಳೆಯ ಸ್ಥಿತಿಯಲ್ಲಿಯೇ ಇದೆಯೆಂಬ ಸುದ್ದಿ ಕೇಳಿದಾಗ ಅಲ್ಲಿಗೆ ಹೋಗದಿರಲಾಗಲಿಲ್ಲ. ಆ ದೇಗುಲವೇ ಕೋಲಾರಕ್ಕೆ ಇಂದಿನ ಹೆಸರು ಬರಲು ಕಾರಣವಾದ ಕೋಲಾರಮ್ಮ ದೇವಸ್ಥಾನ.  ಇತಿಹಾಸ: ಮೂರನೇ ಶತಮಾನದ ಶುರುವಿನಿಂದಲೂ ಕೂವಲಾಲಪುರ(ಇಂದಿನ ಕೋಲಾರವು) ಗಂಗರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಶಾಸನಗಳು ತಿಳಿಸುತ್ತದೆ. … Read more

ಜಾಲ: ಪ್ರಶಸ್ತಿ ಪಿ.

ಆಗಾಗ ಒಳಸೇರೋ ಶುದ್ಧ ನೀರು ಖುಷಿ ಕೊಡುತ್ತೆ, ಆರೋಗ್ಯವನ್ನೂ. ಆದ್ರೆ ಆ ನೀರೊಳಗೇ ನಾವು ಸೇರಿದ್ರೆ ? ಕಚ್ಚೋ ಸೊಳ್ಳೆಯ ಸಾವಾಗೋ ಚಪ್ಪಾಳೆ ಹಿತವೀಯುತ್ತೆ. ಆದ್ರೆ ಸಾವೇ ಚಪ್ಪಾಳೆ ಹೊಡೆದು ನಮ್ಮ ಕರೆದ್ರೆ ? ಓದೋ ಕಥೆಯೊಂದು ಖುಷಿ ಕೊಡುತ್ತೆ. ಆದ್ರೆ ಅದೇ ಜಾಲವಾಗಿ ನಮ್ಮ ಸೆಳೆದ್ರೆ ?  ಊರಲ್ಲೊಂದು ಹೊಸ ಅಂಗಡಿ. ಹೆಸರು ಊರಾಗಿದ್ರೂ ಅದು ಹಳ್ಳಿಯೇನಲ್ಲ.ಹಂಗಂತ ಮಹಾನಗರಿಯೂ ಅಲ್ಲ. ಸಾವಿರದ ಸುಮಾರಿಗೆ ಜನರಿದ್ದ ಜಾಗವದು. ಅಲ್ಲಿನ ಜನಕ್ಕೆ ಅಂಗಡಿಗಳು ಹೊಸದಲ್ಲದಿದ್ದರೂ ತಮ್ಮೂರಿಗೆ ಪುಸ್ತಕದಂಗಡಿಯೊಂದು ಬಂದಿದ್ದು … Read more

ಕಾಪಿ: ಪ್ರಶಸ್ತಿ ಪಿ.

ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ … Read more

ಕರ್ಚೀಫ್ ಕಹಾನಿ: ಪ್ರಶಸ್ತಿ

ತಿಂಗಳ ಹಿಂದೆ ಕಳೆದೇಹೋಗಿದ್ದನೆಂದು ಹುಡುಕುಡುಕಿ ಬೇಸತ್ತು ಕೊನೆಗೆ ಹುಡುಕೋದನ್ನೇ ಮರೆಸಿಬಿಟ್ಟಂತ ಮಾಲೀಕನೆದುರು ಇವತ್ತು ಇದ್ದಕ್ಕಿದ್ದಂತೆ ಪ್ರತ್ಯಕ್ಷನಾಗಿದ್ದೆ ! ಒಗೆದು ಒಣಗಿಸಿ ಮಡಚದೇ ಬಿದ್ದಿದ್ದ ರಾಶಿಯಲ್ಲೊಂದು ಪ್ಯಾಂಟನ್ನು ಇಸ್ತ್ರಿ ಮಾಡಲು ತೆಗೆದ್ರೆ ಅದರೊಳಗಿಂದ ನನ್ನ ಇರುವಿಕೆಯ ಅರಿವಾಗಬೇಕೇ ? ನಾ ಯಾರು ಅಂತ ಇಷ್ಟ್ರಲ್ಲೇ ಗೊತ್ತಾಗಿರಬೇಕಲ್ಲಾ ? ಹೂಂ. ಅದೇ. ಕರವಸ್ತ್ರ ಎನ್ನಿ ಕರ್ಚೀಫು ಎನ್ನಿ, ಹ್ಯಾಂಕಿ ಎನ್ನಿ. ಏನೇ ಅಂದ್ರೂ ಥ್ಯಾಂಕ್ಸೆನ್ನುವವ ನಾನೇ ನಾನು. ಕರ್ಚೀಫ್ ಕಹಾನಿ ಅಂದಾಕ್ಷಣ ಕರುಣಾಜನಕ ಕಥೆ ಅಂತೆಲ್ಲಾ ಅಂದ್ಕೋಬೇಡಿ. ಅಷ್ಟಕ್ಕೂ ಹಂಗ್ಯಾಕೆ … Read more

ವರದಾಮೂಲ: ಪ್ರಶಸ್ತಿ

ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರಗಳ ಮಾಹಿತಿ ಕಲೆಹಾಕಿ ಅದನ್ನು ವಿಕಿಪೀಡಿಯಾದಲ್ಲಿ ಎಲ್ಲರಿಗೂ ತಲುಪುವಂತೆ ದಾಖಲಿಸೋ ಒಂದು ಕಾರ್ಯಕ್ರಮ ವಿಕಿಪೀಡಿಯಾ ಫೋಟೋವಾಕ್.ಸಾಗರದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕೆಂದುಕೊಂಡಾಗ ನಾವು ಅದನ್ನು ಶುರುಮಾಡಿದ್ದು ವರದಾಮೂಲದಿಂದ. ವರದಾಮೂಲವೆನ್ನೋ ಸ್ಥಳದ ಬಗ್ಗೆ ಸಾಗರದ ಸುತ್ತಮುತ್ತಲಿನವರಿಗೆ ಹೊಸದಾಗಿ ಹೇಳೋ ಅವಶ್ಯಕತೆಯಿಲ್ಲದಿದ್ದರೂ ಈ ಭಾರಿಯ ಭೇಟಿಯಲ್ಲಿ ಸಿಕ್ಕ ಒಂದಿಷ್ಟು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಳ್ಳಲೇಬೇಕೆಂಬ ಹಂಬಲ ಹುಟ್ಟಿದ್ದು ಸಹಜ. ಅದರ ಫಲವೇ ಈ ಲೇಖನ.  ಹೋಗೋದು ಹೇಗೆ ?  ವರದಾಮೂಲಕ್ಕೆ ಸಾಗರದಿಂದ ೬ ಕಿ.ಮೀ. … Read more

ಭಾವಗಳ ಬಂಡಿಯೇರಿ: ಪ್ರಶಸ್ತಿ

ಭಾವಲಹರಿಯೆನ್ನೋದೇ ಹಾಗೆ. ಈ ಭಾವಗಳ ಮಡಿಲಲ್ಲಿದ್ದಾಗ ಶಬ್ದಗಳ ಹಂಗಿಲ್ಲ, ಕಾಲದ ಅರಿವಿಲ್ಲ,ಸುತ್ತಣ ಪರಿಸರದ ಪರಿವೆಯೂ ಇಲ್ಲದ ಪರಿಸ್ಥಿತಿ. ಪಕ್ಕದ ಯಾವುದೋ ಘಟನೆ ನಮ್ಮ ತಟ್ಟೆಬ್ಬಿಸೋ ತನಕ ಕಲ್ಪನಾಲೋಕದಲ್ಲಿ ನಮಗೆ ನಾವಲ್ಲದೆ ಇನ್ಯಾರೂ ಇಲ್ಲ.ಭಾವಗಳ ಬಂಡಿಯೇರಿದ ಆ ಪಯಣ ಸಾಗೋ ಪರಿಯೇ ಅದಮ್ಯ.ಆ ಕ್ಷಣಕ್ಕೆ ಮೂಡೋ ಭಾವಕ್ಕೊಂದು ಆಕಾರವಿಲ್ಲದಿದ್ದರೆ ಕಳೆದೇ ಹೋದೀತೆಂದು ಸಿಕ್ಕ ಮೊಬೈಲಲ್ಲೋ ಪೇಪರಲ್ಲೋ ಕಂಪ್ಯೂಟರಲ್ಲೋ ಗೀಚುವವರದು ಒಂದು ಲಹರಿ.ಕಡಲಲೆಗಳಲ್ಲಿ ಕಂಡ ಸುಂದರ ಅಲೆಯೊಂದು ಕಾಲದ ಗರ್ಭದಲ್ಲಿ ಕರಗಿಹೋಗೋ ಹಾಗೆ ಮುಂಬರುವ ಭಾವ ಪ್ರವಾಹದಲ್ಲಿ ಈಗಿನ ಭಾವ … Read more