ಮಂಗಳ ಗ್ರಹದ ಕಕ್ಷೆ ಪ್ರವೇಶಿಸಿದ ’ಮಂಗಳಯಾನ’ : ಜೈಕುಮಾರ್.ಹೆಚ್.ಎಸ್,

ಮಂಗಳ ಗ್ರಹದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆ ಜೀವಿಗಳು ಇದ್ದುವೇ? ಜೀವಿಗಳ ಇರುವಿಕೆಗೆ ಕಾರಣವಾಗಿರುವ ಮಿಥೇನ್ ಯಾವ ಪ್ರಮಾಣದಲ್ಲಿ ಅಲ್ಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೇರಿದಂತೆ ಭೂಮಿಯಿಂದ ಇತರೆ ಗ್ರಹಗಳಿಗೆ ಉಪಗ್ರಹ ರವಾನಿಸಲು ಅವಶ್ಯವಿರುವ ತಂತ್ರಜ್ಞಾನವನ್ನು ಸ್ವತ: ಅಭಿವೃದ್ಧಿಪಡಿಸುವುದನ್ನು ಭಾರತ ಖಾತರಿಪಡಿಸಿಕೊಳ್ಳುವುದು ಮಂಗಳಯಾನ ಉಡಾವಣೆಯ ಉದ್ದೇಶ.  ಭಾರತಕ್ಕೆ ಮೊದಲ ಯತ್ನದಲ್ಲೇ ಯಶಸ್ಸು: ಇದೀಗ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ) ತಯಾರಿಸಿದ್ದ ’ಮಂಗಳಯಾನ’ ಉಪಗ್ರಹವು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ ಎಲ್ಲೆಡೆ ಹರ್ಷ ಮೂಡಿಸಿದೆ. ಭೂಮಿಯಿಂದ … Read more

ಗಡಿನಾಡ ಕನ್ನಡ: ನಾಗೇಶ್ ಟಿ.ಕೆ.

ನನ್ನ ಹೆಸರು ನಾಗೇಶ್ ಟಿ.ಕೆ. ಮೂಲತ: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬನ್ನಿಮರದಕೊಪ್ಪಲು ನಿವಾಸಿ. ಪ್ರಸ್ತುತ ಗೌರಿಬಿದನೂರು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ೨೦೦೭ರಲ್ಲಿ ಶಿಕ್ಷಕನಾಗಿ ತೆಲುಗು ಪ್ರಭಾವವಿರುವ ಗಡಿನಾಡಿನ ಶಾಲೆಯಲ್ಲಿ ನಿಯೋಜನೆಗೊಂಡು ಕೆಲಸ ಪ್ರಾರಂಭಿಸಿದಾಗ ನನಗಾದ ಭಾಷಾ ಸಮಸ್ಯೆ ಹಾಗೂ ಇಲ್ಲಿನ ಜನರಿಗೆ ಕನ್ನಡ ಭಾಷೆಯ ಬಗ್ಗೆ ಆಳವಾದ ಜ್ಞಾನ ಅಥವಾ ಮಾತೃಭಾಷಾ ಅಭಿಮಾನ ಇಲ್ಲದಿರುವುದನ್ನು ನೋಡಿ ಈ ೮ ವರ್ಷದಲ್ಲಿ ನನಗಾದ ಎಲ್ಲಾ ಅನುಭವಗಳನ್ನು ಕ್ರೋಢೀಕರಿಸಿ ಈ ಲೇಖನವನ್ನು … Read more

ಬದುಕ ಕಟ್ಟಿಕೊಳ್ಳಲು ಬಂದವರು ಭಾಷೆಯನ್ನು ಕಟ್ಟಿದ್ದರು: ನಿಶಾಂತ್. ಜಿ.ಕೆ

ಯಾವ ಟಿ.ವಿ, ಚಾನೆಲ್ ಹಾಕಿದ್ರೂ ಈಗ ಸ್ವಲ್ಪ ದಿನದಿಂದ ಬರೀ ಅಮ್ಮನದೇ ಸುದ್ದಿ, ಓ ಕನ್‌ಫ್ಯೂಸ್ ಆದ್ರ ಸಾರಿ ನಾನ್ ಹೇಳಿದ್ದು ನಮ್ಮ ನೆರೆಯ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಿ ಜೆ. ಜಯಲಲಿತಾ ಅವರ ಬಗ್ಗೆ ಅವರ ಅವ್ಯವಹಾರ, ಅದು ಇದು ಸದ್ಯಕ್ಕೆ ಬೇಡ ಆದ್ರೆ ನಾನು ಈಗ ಹೇಳ್ಬೇಕು ಅಂತ ಹೊರಟಿರೋ ವಿಷಯ ತಮಿಳರ ಅಭಿಮಾನದ ಬಗ್ಗೆ, ಅದು ಕೇವಲ ಜಯಲಲಿತಾ ಅವರ ವಿಷಯವಾಗಿ ಅಲ್ಲ ಮುಖ್ಯವಾಗಿ ಅವರ ಭಾಷಾಬಿಮಾನ, ನಾಡಿನ ಬಗೆಗಿರುವ ಅತಿಯಾದ ಕಾಳಜಿಯ … Read more

ದೇಹವೆಂಬೋ ಮೋಟುಗೋಡೆಯ ಮೀರಿ..: ಮೌಲ್ಯ ಎಂ.

                                                       ಕವಿತೆ ಆತ್ಮದ ನಾದ. ಅದ್ಯಾಕೆ ದೇಹದ ಮೇಲೆಯೇ ಉರುಳಿಸುತ್ತಾರೋ.? ಅಂಗಾಂಗಕ್ಕೂ, ಅಂತರಂಗಕ್ಕೂ ಪರದೆ ತೀರ ಕಲಸಿ ಹೋಗುವಷ್ಟು ತೆಳುವಾ..? ಯಾಕೆ ಈವತ್ತಿನ ಪದ್ಯಗಳು ಕೇವಲ Anotomical description ಗಳಾಗುತ್ತಿವೆ? ಲಜ್ಜೆ ಈವತ್ತಿನ ದಿನಮಾನಕೆ ಒಂದು ಅನಗತ್ಯ ಸಂಗತಿಯೇ? ಅಥವಾ … Read more

ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

"ನಲಿವ ಗುಲಾಬಿ ಹೂವೇ…" ಎಂದು ಪಕ್ಕದಲ್ಲಿದ್ದ ಗೆಳೆಯ ಒಂದೇ ಸಾಲನ್ನು ಮಂತ್ರದಂತೆ ಪಠಿಸುತ್ತಿದ್ದ. ನಾನು ಅವನನ್ನು ಎಚ್ಚರಿಸಿ, "ಕೇಳಿಸಿಕೊಳ್ಳೋ, ಶಂಕರಣ್ಣನ ಹೆಂಡ್ತಿ ಮಾತಾಡ್ತಿದ್ದಾರೆ" ಎಂದೆ. ಅವನಿಗೆ ನನ್ನ ಮಾತು, ಅರುಂಧತಿನಾಗ್ ರವರ ಮಾತು ಎರಡೂ ಬೇಡವಾಗಿತ್ತು. ಅವನಿಗೆ ಶಂಕರ್ ನಾಗ್ ನೆನಪು ಆ ಸಂಜೆಗೆ ಸಾಕಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಡಿವಿಸ್ ಕಾಲೇಜಿನಲ್ಲಿ ಹುಡುಗ-ಹುಡುಗಿಯರನ್ನು ಉದ್ದೇಶಿಸಿ, "ಆ ಹುಡುಗನ ಹೆಸರಲ್ಲಿ ಒಂದು ರಂಗಮಂದಿರವನ್ನು ಕಟ್ಟಬೇಕು. ನನ್ನ ಹತ್ತಿರ ಯೋಜನೆ ತಯಾರಾದ ಮೇಲೆ ಮತ್ತೆ ನಿಮ್ಮ ಮುಂದೆ ಬಂದು, … Read more

ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್.

ಭೌತವಿಜ್ಞಾನ: ನೀಲಿ ವರ್ಣದ ಬೆಳಕು ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ದೀಪಗಳಿಗಾಗಿ ಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ. ೨೦ ನೇ ಶತಮಾನದಲ್ಲಿ ಇನ್‌ಕ್ಯಾಂಡಿಸೆಂಟ್ ಎಂದು ಕರೆಯಲಾಗುವ ಬಲ್ಬ್ ಗಳದೇ ಪಾರುಪತ್ಯ. ಇಂದಿಗೂ ನಮ್ಮ ಬಹುತೇಕ ಮನೆಗಳಿಂದ ಇವು ಕಣ್ಮರೆಯಾಗಿಲ್ಲ. ಇದರಲ್ಲಿ ಟಂಗಸ್ಟನ್ ಫಿಲಮೆಂಟ್ ಇದ್ದು, ಫಿಲಮೆಂಟ್ ಕಾದ ನಂತರ ಬೆಳಕನ್ನು ನೀಡಲಾರಂಭಿಸುತ್ತವೆ. ಆಮೇಲೆ ಟ್ಯೂಬ್‌ಲೈಟ್ (ಪ್ಲೋರೋಸೆಂಟ್) ದೀಪಗಳು ಬಂದವು. ಇದರಲ್ಲಿ ಪಾದರಸದ ಅನಿಲದ ಬಾಷ್ಪಗಳು ವಿದ್ಯುತ್ ಸರಬರಾಜಿನಿಂದ ಕಾದು ರಂಜಕದ ಕೋಟಿಂಗ್‌ನ್ನು … Read more

ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಮಾದಕ ವಸ್ತುಗಳು: ಸುವರ್ಣ ಶಿ. ಕಂಬಿ

  "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", "ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ. ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದಾನೆ. ಅನೇಕ ಸಂಶೋಧನೆಗಳನ್ನು … Read more

ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಯಾರು? ೨.    ಅಲ್ಯೂಮಿನಿಯಂ ಲೋಹದ ಅದಿರು ಯಾವುದು? ೩.    ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಅಳವಡಿಸಿಕೊಂಡ ವರ್ಷ ಯಾವುದು? ೪.    ರಘುಪತಿ ಇದು ಯಾರ ಅಂಕಿತನಾಮವಾಗಿದೆ? ೫.    ಮೇಣದ ಬತ್ತಿಯನ್ನು ತಯಾರಿಸಲು ಬಳಸುವ ಮೇಣ ಯಾವುದು? ೬.    ಮೈಸೂರು – ಕರ್ನಾಟಕ ಎಂದು ನಾಮಕರಣಗೊಂಡ ವರ್ಷ ಯಾವುದು? ೭.    ಜೀವಿಗಳ ಮೂಲಘಟಕವನ್ನು ಜೀವಕೋಶ ಎಂದು ಹೆಸರಿಸಿದ ವಿಜ್ಞಾನಿ ಯಾರು? ೮.    ಅಸ್ಸಾಮಿ ಲೇಖಕ ಬಿ.ಕೆ.ಭಟ್ಟಾಚಾರ್ಯರವರ ಯಾವ ಕೃತಿಗೆ ಜ್ಞಾನಪೀಠ … Read more

ಮಾಲಿನ್ಯದ ವಿರುದ್ಧ ಧ್ವನಿ ಏರಿಸಿ…ಪರಿಸರ ಉಳಿಸಿ!!: ನಾರಾಯಣ ಬಾಬಾನಗರ, ವಿಜಾಪುರ

1972ನೇ ವರ್ಷ. ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ಸಂರಕ್ಷಣೆ, ನೈರ್ಮಲ್ಯ, ಪರಿಸರ ಮಹತ್ವವನ್ನು ಸಾರುವ ದಿನವನ್ನು ಆಚರಿಸುವ ಅಗತ್ಯವಿದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಹೀಗಾಗಿ ಪ್ರತಿ ವರ್ಷ ಜೂನ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಪ್ರಥಮ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದು 1973 ರಲ್ಲಿ.  ಪ್ರಸ್ತುತ ದಿನಗಳಲ್ಲಿಯೂ ಅದರ ಪ್ರಸಕ್ತತೆಯಿದೆ.  ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಒಂದು ಕೇಂದ್ರ ವಿಷಯ ಹಾಗೂ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ. 2014 ರ ಕೇಂದ್ರ … Read more

ಗೂಡು ಕಟ್ಟುವ ಸಂಭ್ರಮದಲ್ಲಿ: ಶ್ರೀದೇವಿ ಕೆರೆಮನೆ

ಮನೆಯ ಮುಂದಿನ ಬಟ್ಟೆ ಒಣ ಹಾಕುವ ತಂತಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಹಳದಿ ಕಪ್ಪು ಬಣ್ಣ ಮಿಶ್ರಿತ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಲು ಬರುತ್ತಿತ್ತು. ಅದರ ಪುಟ್ಟ ಚುಂಚಿನಲ್ಲಿ ಇಷ್ಟಿಷ್ಟೆ ಕಸ ಕಡ್ಡಿ, ಮರದ ತೊಗಟೆ, ಒಣಗಿದ ಎಲೆ ಎಲ್ಲವನ್ನೂ ಕಚ್ಚಿಕೊಂಡು ಬಂದು ಆ ಗೂಡಿಗೆ ಅಂಟಿಸುತ್ತಿತ್ತು. ಅದರ ಪುಟ್ಟ ಬಾಯಿಗೆ ನಿಲುಕುತ್ತಿದ್ದುದೆಷ್ಟೋ… ಕಚ್ಚಿಕೊಂಡು ಹಾರಿ ಬರುವಾಗ ಅದರ ಬಾಯಲ್ಲಿ ಇರುತ್ತಿದ್ದುದು ಎಷ್ಟೋ… ಗೂಡಿಗೆ ಅಂಟಿಸುವಾಗ ಕೆಳಗೆ ಬೀಳದೇ ಅಂಟಿಕೊಳ್ಳುತ್ತಿದ್ದುದು  ಎಷ್ಟೋ… ಒಟ್ಟನಲ್ಲಿ ನಿಮಿಷಕ್ಕೆ … Read more

ಮೇರಿ ಕೋಮ್‌ಳ ಹಾದಿಯಲ್ಲಿ: ಗಿರಿಜಾಶಾಸ್ತ್ರಿ, ಮುಂಬಯಿ

ಹೆಣ್ಣುಮಕ್ಕಳು ತಮ್ಮ ಪರ್ಸುಗಳಲ್ಲಿ ಪೆಪ್ಪರ್- ಸ್ಪ್ರೇ ಗಳನ್ನೋ ಖಾರದ ಪುಡಿಗಳನ್ನೋ ಸದಾ ಇಟ್ಟುಕೊಂಡು ಓಡಾಡಬೇಕು ಎಂದು ಮಹಾರಾಷ್ಟ್ರದ ಮಂತ್ರಿಯೊಬ್ಬರು ಸಲಹೆಯಿತ್ತಿದ್ದರು. ಗಾಂಧೀಜಿಯವರೂ ಕೂಡ ರಾಷ್ಟ್ರೀಯ ಆಂದೋಳನದ ಸಮಯದಲ್ಲಿ ಹೆಣ್ಣುಮಕ್ಕಳನ್ನು ಉದ್ದೇಶಿಸಿ, ನಿಮಗೆ ದೇವರು ಹಲ್ಲು ಮತ್ತು ಉಗುರುಗಳನ್ನು ಕೊಟ್ಟಿಲ್ಲವೇ? ನಿಮ್ಮ ಮರ್ಯಾದೆಗೆ ಸಂಚಕಾರ ಒದಗಿ ಬರುವ ಸಂದರ್ಭದಲ್ಲಿ ನೀವು ಅಹಿಂಸಾ ತತ್ವವನ್ನು ಪಾಲಿಸಬೇಕಾದ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಮರಾಠಿಗರಲ್ಲಿ ಬಹಳ ಜನಪ್ರಿಯರಾದ, ಕನ್ನಡದ ಬಹುದೊಡ್ಡ ಕಾದಂಬರಿಕಾರರೊಬ್ಬರು, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ ವಿಚಾರ ಸಂಕಿರಣವೊಂದರಲ್ಲಿ ’ಗಂಡಸು … Read more

ಗಾಂಧೀ ಬಾಂಧವ್ಯ: ಎಸ್. ಜಿ. ಸೀತಾರಾಮ್, ಮೈಸೂರು.

ಗಾಂಧೀ ಎಂದೊಡನೆ ಜನರು ಗಾಂಧೀಜೀಯವರನ್ನು ನೆನೆದು ಸುಮ್ಮನಾಗುವರೇ ಹೊರತು, ಅವರ ಗಾಂಧೀ ನಾಮಧಾರಿ ಬಂಧುಗಳನ್ನಾಗಲೀ ಅಥವಾ ಗಾಂಧೀ ನಾಮದ ಮೂಲವನ್ನಾಗಲೀ ಸಾಮಾನ್ಯವಾಗಿ ಹುಡುಕಲೆತ್ನಿಸುವುದಿಲ್ಲ. ಹಾಗೆ ಹುಡುಕಲು ಹೊರಟಲ್ಲಿ, ಗಾಂಧೀ ಎಂಬುವ ಪದ ಗಂಧ ಎಂಬ ಶಬ್ದದಿಂದ ಬಂದಿದ್ದು, ಗಂಧದ ವ್ಯಾಪಾರಿಗಳನ್ನು ಹೀಗೆ ಕರೆಯುತ್ತಿದ್ದರೆಂಬುದನ್ನು ತಿಳಿದು ಶುರುವಿನಲ್ಲೇ ಅಚ್ಚರಿಯಾಗುತ್ತದೆ. ಹಾಗೆಯೇ ಮುಂದುವರಿದರೆ, ಗಾಂಧೀಜೀಯವರಿಗೆ ಮುಂಚೆಯೇ ಇನ್ನೊಬ್ಬ ವಿಶ್ವವಿಖ್ಯಾತ ಗಾಂಧೀ ಇದ್ದರೆಂದು ತಿಳಿದು ಕುತೂಹಲ ಮತ್ತಷ್ಟು ಕೆರಳುತ್ತದೆ. ಇವರೇ ಬ್ಯಾರಿಸ್ಟರ್ ಮತ್ತು ಬಹುಧರ್ಮ ವಿದ್ವಾಂಸ ವೀರ್‌ಚಂದ್ ರಾಘವ್‌ಜೀ ಗಾಂಧೀ (೧೮೬೪-೧೯೦೧). … Read more

ಜನಪದ ಸಾಹಿತ್ಯದ ಸ್ಥಿತಿಗತಿ. ಏನು..? ಎತ್ತ..?: ರಕ್ಷಿತ್ ಶೆಟ್ಟಿ

 ಜನಪದ ಎಂಬುವುದು ಕೇವಲ ಒಂದೆರಡು ಪ್ರಕಾರಗಳಿಗೆ ಸೀಮಿತವಾದುದಲ್ಲ ಜನಜೀವನದ ಪ್ರತಿಯೊಂದು ಮಜಲಿನಲ್ಲಿಯೂ ಹಾಸುಹೊಕ್ಕಾಗಿ ನಿಂತಿರುವಂತದ್ದು. ಪ್ರತೀ ಪ್ರದೇಶದ ಪರಿಧಿಯೊಳಗೂ ತನ್ನದೇ ಆದ ವಿವಿದ ರೀತಿಯ ಜಾನಪದ ಚಿತ್ರಣ ಇದ್ದೇ ಇರುತ್ತದೆ. ಅನಕ್ಷರಸ್ಥ ಸಮಾಜದಲ್ಲಿ ಕೇವಲ ಮೌಖಿಕವಾಗಿ ಹರಿದು ಬಂದ ಸಾಹಿತ್ಯ ಪ್ರಕಾರಗಳಿಗೆ ಜಾತಿ, ಧರ್ಮ, ಮತ, ಪಂಥಗಳ ಹಿಡಿತವಿಲ್ಲ. ನಂಬಿಕೆ ಪುರಾಣ ನಡವಳಿಕೆ ಸಮಾಜದ ಆಗುಹೋಗುಗಳೇ ಒಳಗೊಂಡಿರುವುದು ಸರ್ವೇಸಾಮಾನ್ಯ. ಈ ರೀತಿಯಲ್ಲಿ ಕಂಠಸ್ಥ ಸಂಪ್ರದಾಯದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಕಲಾಪ್ರಕಾರಗಳು ನಿರಂತರವಾಗಿ ಹೊಸ ರೀತಿ … Read more

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು:ಅಶೋಕ್ ಕುಮಾರ್ ವಳದೂರು

"ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು" ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತ ಶ್ರೀ ನಾರಾಯಣ ಸ್ವಾಮಿ. "ಯಾರನ್ನೂ ದ್ವೇಷಿಸ ಬೇಡಿ, ಸಂಘಟನೆಯಿಂದ, ಶಿಕ್ಷಣದಿಂದ, ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೋಣ" ಎಂದು ಒಂದು ಶತಮಾನಗಳ ಹಿಂದೆ ಈ ಜನಕ್ಕೆ ಸಾರಿದ ಗುರು ನಾರಾಯಣರ ಸಂದೇಶವು ವಾಸ್ತವದ ಅರ್ಥವನ್ನು ಪಡೆಯುವುದು ನಾವು ಕಾಣುತ್ತೇವೆ. ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳು ಈ ನಾಡಿನಲ್ಲಿ ಐರೋಪ್ಯರು ವಸಾಹತುಗಳನ್ನು … Read more

ಆ ಆಕೃತಿ…!: ಬಸವರಾಜು ಕ್ಯಾಶವಾರ

ಸಮಯ: ರಾತ್ರಿ 9.10 ಸ್ಥಳ: ಕಸ್ತೂರಬಾ ರಸ್ತೆ, ಕಂಠೀರವ ಕ್ರೀಡಾಂಗಣದ ಹತ್ತಿರ “ಧಗ್” ಅಂತು. ಥೇಟ್ ಬಂಡೆ ಕವನದಂತೆ; ಒಂದು ಬೆಂಕಿ ಕಡ್ಡಿ ತಲೆ ಸುಟ್ಟುಕೊಂಡು ಸತ್ತಿತ್ತು, ಕತ್ತಲಿನ ಜೊತೆ. ತೆಳು ಬಿಳಿ ಬಟ್ಟೆ ಸುತ್ತಿಕೊಂಡಿದ್ದ ಅಪ್ಸರೆಗೆ ಬೆಂಕಿ ಹಚ್ಚಲಾಗಿತ್ತು. ಆ ಅಪ್ಸರೆಯ ತಲೆ ಆ ಕೆಂದುಟಿಗಳನ್ನು ನುಂಗಿ ಹಾಕಿದ್ದವು. ಆ ಎರಡು ಕಣ್ಣುಗಳು ತಣ್ಣಗೆ ರೆಪ್ಪೆ ಬಡಿಯುತ್ತಿದ್ದವು. ಕತ್ತಲಿನ ಮಧ್ಯೆ ಆ ಬಿಳಿಗುಡ್ಡೆಗಳು  ಕಬ್ಬನ್ ಪಾರ್ಕ್ ನ ಕಬ್ಬಿಣದ ಬೇಲಿಯ ಹಿಂದಿನಿಂದ ನನ್ನನ್ನೇ ನೋಡುತ್ತಿದ್ದವು. ಆ … Read more

ಗುಡುಗಿನಂಥ ಮೇಷ್ಟ್ರು, ಮಳೆಯಂಥ ಮೇಡಮ್ಮು: ಅಜ್ಜಿಮನೆ ಗಣೇಶ್

                                     ಒಳಗೆ ಆವೇಶದಲ್ಲಿ ಗುಡುಗುತ್ತಿರುವ ಮೇಷ್ಟ್ರು, ಅದರ ಪರಿಣಾಮ ಎಂಬಂತೆ ಹೊರಗೆ ಜೋರು ಮಳೆ, ಎರಡಕ್ಕೂ ಸಾಕ್ಷಿಯಾಗಿ ತಾರಸಿಯಿಂದ ಸುರಿಯುತ್ತಿದ್ದ ನೀರಿನಡಿ ನಿಂತಿದ್ದೆ..ಮಳೆಗಾಲದ ಆರಂಭವೇ ಕಾಯಿಲೆ ಹಿಡಿಸುತ್ತಾದ್ದರಿಂದ ಸುಮ್ಮಸುಮ್ಮನೆ ಮಲೆನಾಡಿನಲ್ಲಿ  ನೆನೆಯೋ ಸಾಹಸ ಯಾರು ಮಾಡುತ್ತಿರಲಿಲ್ಲ.. ಅಂತಹದ್ದರಲ್ಲಿ ಸರಿಸುಮಾರು ಅರ್ಧಗಂಟೆ ನಿಸರ್ಗದ ಷವರ್ನಡಿಯಲ್ಲಿ ಸುಮ್ಮನೆ ನಿಂತಿದ್ದೆ..ಕಾರಣ ನಿಂತಿದ್ದು ಸ್ವಇಚ್ಛೆಯಿಂದಾಗಿರದೇ ಮೇಷ್ಟ್ರು ವಿಧಿಸಿದ ಶಿಕ್ಷೆಯಿಂದಾಗಿತ್ತು.  … Read more

ಸ್ವಾತಂತ್ರ್ಯವೋ ಸ್ವಾತಂತ್ರ್ಯ! : ಎಸ್.ಜಿ.ಸೀತಾರಾಮ್, ಮೈಸೂರು.

ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಹಚ್ಚಿದ ಸ್ವಾತಂತ್ರ್ಯದ ಕಿಚ್ಚು ಈಗ ಯಾವ ಆಳ-ಅಗಲಕ್ಕೆ ಹಬ್ಬಿದೆ ಎಂಬುದನ್ನು, ಸ್ವತಂತ್ರ ಭಾರತ ಜನನದ ಮಹಾಮಹೋತ್ಸವಕ್ಕೆಂದು ಇಂದು ನಾವು ಹಚ್ಚುವ ೬೭ ಹಣತೆಗಳ ಬೆಳಕಿನಲ್ಲಿ ಒಮ್ಮೆ ನಿಟ್ಟಿಸಿ ನೋಡುವುದು ಒಳಿತು. ಅಂದು ರಾಷ್ಟ್ರಸ್ವಾತಂತ್ರ್ಯಕ್ಕೆಂದು ಎಬ್ಬಿಸಿದ್ದ ಆ ಕಿಚ್ಚು ತಡವಿಲ್ಲದೇ ರಾಜ್ಯಸ್ವಾತಂತ್ರ್ಯಗಳೆಡೆಗೆ ತಿರುಗಿ, ಎಲ್ಲ ರಾಜ್ಯಗಳೂ ತಂತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡತೊಡಗಿದವು. ೧೯೫೬ರಲ್ಲಿ ಪುನರ್ವಿಂಗಡನೆಯ ಕಾರಣ ಕೇವಲ ಹದಿನಾಲ್ಕು ಆಗಿದ್ದ ರಾಜ್ಯಗಳ ಸಂಖ್ಯೆ ಇಂದು ಇಪ್ಪತ್ತೊಂಬತ್ತಾಗಿದೆ. ಬೋಡೋಲ್ಯಾಂಡ್, ಗೋರ್ಖಾಲ್ಯಾಂಡ್, ಪೂರ್ವಾಂಚಲ, ಬುಂದೇಲ್‌ಖಂಡ್, ವಿಂಧ್ಯದೇಶ, ವಿದರ್ಭ ಮತ್ತು … Read more

ಸಮರ್ಥ ಶಿಕ್ಷಕ, ರಾಷ್ಟ್ರ ರಕ್ಷಕ: ಹೊರಾ.ಪರಮೇಶ್

ನಮ್ಮ ಭೂಮಂಡಲದಲ್ಲಿ ಜೀವಿಗಳು ಸೃಷ್ಟಿಯಾದಾಗಿನಿಂದಲೂ 'ಚಿಂತನ-ಮಂಥನ' ಕ್ರಿಯೆಯು ನಡೆಯುತ್ತಲೇ ಬಂದಿದೆ. ಅಂದರೆ, ಹೊಸ ವಿಷಯಗಳ ಬಗ್ಗೆ ಕುತೂಹಲ, ಹುಡುಕಾಟ, ಆವಿಷ್ಕಾರಗಳು ಸಾಗುತ್ತಲೇ ಸಾಮಾನ್ಯ ಬುದ್ಧಿ ಶಕ್ತಿಯು ಅಸಾಮಾನ್ಯ ಅನ್ವೇಷಣೆಗಳಿಗೆ ನಾಂದಿ ಹಾಡಿರುವುದರಿಂದಲೇ ಇಂದು ಜಗತ್ತು ಅತ್ಯಾಧುನಿಕ ಕಾಲ ಘಟ್ಟಕ್ಕೆ ತಲುಪಿದೆ. ಒಂದು ವೇಳೆ ಮಾನವನಲ್ಲಿ ಈ "ಮಂಥನ" ಕಾರ್ಯ ಆಗದೇ ಇದ್ದಿದ್ದರೆ, ಇಂದು ವಿದ್ಯುತ್ ಸೌಲಭ್ಯವಾಗಲೀ, ಸಾರಿಗೆ-ಸಂಪರ್ಕ ಸಾಧನಗಳಾಗಲೀ, ಹರಿಯುವ ನೀರಿನ ಸದುಪಯೋಗವಾಗಲೀ, ಐಷಾರಾಮೀ ಬದುಕಿನ ಸೌಕರ್ಯಗಳಾಗಲೀ, ವೈಜ್ಞಾನಿಕ ಆವಿಷ್ಕಾರಗಳಾಗಲೀ ಯಾವುವೂ ಆಗುತ್ತಿರಲಿಲ್ಲ. ಇತಿಹಾಸದ ಪುಟಗಳು ನಮಗೆ … Read more

ಮಹಿಳೆ, ಮಗು , ಕಾನೂನು..: ಮಮತಾ ದೇವ

ಮಹಿಳೆಯರಿಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದರೂ ಹೆಣ್ಣು ಮಕ್ಕಳ ಸ್ಥಿತಿ ಗತಿ ಸಮಾಜದ ಎಲ್ಲಾ ವರ್ಗದಲ್ಲೂ, ಎಲ್ಲಾ ದೇಶಗಳಲ್ಲೂ ಸುಧಾರಣೆಯನ್ನು ಕಂಡಿಲ್ಲ.ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಪುಟ್ಟ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಹೆಚ್ಚುತ್ತಿರುವುದು  ಅಪಾಯಕಾರಿಯೆನಿಸುತ್ತಿದೆ. ಮಹಿಳೆ ಇನ್ನೂ ಎರಡನೇ ದರ್ಜೆ ಪ್ರಜೆಯಾಗಿಯೇ ಉಳಿದಿದ್ದಾಳೆ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಪುರುಷನಿಗೆ ಸಮಾನಳಾಗಿದ್ದರೂ, ಮಹಿಳೆಗೆ ಸುರಕ್ಷತೆಯ ವಾತಾವರಣ ಎಲ್ಲೆಲ್ಲೂ ಇಲ್ಲ.ಇಂದಿನ 21ನೇ ಶತಮಾನದಲ್ಲೂ ಹೆಣ್ಣು ಮಕ್ಕಳು ಭದ್ರತೆ, ಸುರಕ್ಷತೆಗಳಿಂದ ವಂಚಿತರಾಗುತ್ತಿದ್ದಾರೆ.ಕಾನೂನು ಎಲ್ಲ ದೇಶದಲ್ಲೂ ಒಂದೇ ಆಗಿಲ್ಲ. ಕೆಲವು ದೇಶಗಳಲ್ಲಿ  ಮಹಿಳೆಯರಿಗೆ … Read more

ಬಾಡಿಗೆ ಮನೆಗಾಗಿ ಬಾಡಿದ ಮನಗಳು….: ಸಂತೋಷ ಗುಡ್ಡಿಯಂಗಡಿ

೧೯೧೮ರಲ್ಲಿ ನಾನು ಭಾರತಕ್ಕೆ ಮರಳಿ ಬಂದೆ. ನಾನು ಬರೋಡಾ ರಾಜ್ಯದ ಹಣಕಾಸಿನ ಸಹಾಯದಿಂದ ಉಚ್ಛ ಶಿಕ್ಷಣ ಪಡೆದವನಾದ್ದರಿಂದ ಒಪ್ಪಂದಕ್ಕೆ ಅನುಗುಣವಾಗಿ ಆ ರಾಜ್ಯಕ್ಕೆ ನನ್ನ ಸೇವೆಯನ್ನು ಸಲ್ಲಿಸಬೇಕಾಗಿತ್ತು. ಹೀಗಾಗಿ ಭಾರತಕ್ಕೆ ಮರಳಿದ ಕೂಡಲೇ ನೇರವಾಗಿ ಬರೋಡಾಕ್ಕೆ ಬಂದೆ. ಯುರೋಪ್ ಮತ್ತು ಅಮೆರಿಕೆಯಲ್ಲಿನ ಐದು ವರುಷಗಳ ವಾಸ್ತವ್ಯವು ನಾನು ಅಸ್ಪೃಶ್ಯನೆಂಬ ಪ್ರಜ್ಞೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿತ್ತು. ಬರೋಡಾದಲ್ಲಿ ’ವಿಶಿ’ ಎಂದು ಕರೆದುಕೊಳ್ಳುವ ಹಿಂದೂ ಹೋಟೆಲ್ಲುಗಳು ಇದ್ದದ್ದು ನನಗೆ ತಿಳಿದಿದ್ದವು. ಅವು ನನಗೆ ಪ್ರವೇಶ ನೀಡಲಾರವು. ಅವುಗಳಲ್ಲಿ ಪ್ರವೇಶಿಸಲು ಇದ್ದ ಒಂದೇ … Read more