ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ..?: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಭಕ್ತಿಯೇ ತುಂಬಿತುಳುಕಬೇಕಿರುವ ಭಗವಂತನ ಸನ್ನಿಧಿಯಲ್ಲಿ ಮಧ ಮತ್ಸರ ಲೋಬ ವಿಷಯಾದಿಗಳು ತುಂಬಿ ತುಳುಕುತ್ತಿರಬೇಕಾದರೆ ಅಲ್ಲಿ ಭಗವಂತ ನೆಲೆಸಲು ಹೇಗೆ ಸಾಧ್ಯ? ಸುಳ್ಳು ಕಪಟಗಳು ನನ್ನಲ್ಲಿ ನೆಲೆಸಲು ನಾನೇ ಆಶ್ರಯ ನೀಡಿ ಭಗವಂತ ನನ್ನಲ್ಲಿ ನೆಲೆಸಲು ಆಗದಂತೆ ನಾನೇ ಮಾಡಿದೆನಲ್ಲಾ ಎಂಬ ವಿಷಾದದ ದನಿಯೊಂದಿಗೆ ಕೆಳಗಿನ ಬಸವಣ್ಣನವರ ವಚನ ಕೊನೆಯಾಗುತ್ತದೆ. ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯಲ್ಲಿ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲಾ ಕೂಡಲಸಂಗಮದೇವಾ … Read more

ಪ್ರಜೆಗಳ ಕೈಯಲ್ಲಿ ಕೊರೋನ ನಿಯಂತ್ರಣ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಈ ಮೇಲಿನ ಬಸವಣ್ಣನವರ ಮಾತ ನೆನಪಿಸುವಂತೆ ಮಾಡಿದೆ ಇಟಲಿಯ ಇಂದಿನ ಪರಿಸ್ಥಿತಿ. ಕರೋನ ರೋಗಕ್ಕೆ ಚಿಕಿತ್ಸೆ ಕೊಡಲು ಆಗದಂತೆ ಇಟಲಿಯಲ್ಲಿ ರೋಗ ಹರಡಿದೆ. ದಿನ ದಿನಕ್ಕೂ ಹೆಚ್ಚು ಹರಡುತ್ತಾ ಹೆಚ್ಚು ಬಲಿಗಳ ಪಡೆಯುತ್ತಿದೆ. ಚಿಕಿತ್ಸೆ ದೊರೆಯದೆ ರೋಗಿಗಳು ಬೀದಿ ಬೀದಿಗಳಲ್ಲಿ ಓಡುವುದು ಬೀಳವುದು ಒಬ್ಬ ರೋಗಿಗಳ ಮೇಲೆ ಮತ್ತೊಬ್ಬರೋಗಿ ಬಿದ್ದು ಒದ್ದಾಡುವ ಕೆಲವರು ಬಿದ್ದು ಎದ್ದು ಓಡುವ, ಇನ್ನು ಕೆಲವರು ಮಿಸುಕಾಡದೆ ಮಲಗಿರುವ, ಚಿಕಿತ್ಸೆಗಾಗಿ ಅಂಗಲಾಚುವ, ಆರೋಗ್ಯವಂತರು ಇವರ ಕಂಡು ಓಡುವ ದೃಶ್ಯಗಳ ಕಂಡು ತನ್ನ ಪ್ರಜೆಗಳಿಗೆ … Read more

ಯುಗಾದಿಯೋ ಯುಗಾಂತ್ಯವೋ?: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಯುಗಾದಿ ಬರುತ್ತಿದ್ದಂತೆ ” ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ” ಎಂಬ ದ ರಾ ಬೇಂದ್ರೆಯವರ ಪ್ರಸಿದ್ದ, ಜನಪ್ರಿಯ ನಿತ್ಯನೂತನ ಗೀತೆ ಪ್ರತಿ ವರುಷ ನೆನಪಾಗುವುದು. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತಂದು ಹೊಸತೆಂಬಂತೆ ಯುಗಾದಿ ಗೋಚರಿಸಿದರೆ ಈ ಗೀತೆಯೂ ಹೊಸತೆಂಬಂತೆ ಹಾಡಿಸಿಕೊಳ್ಳುವುದು. ಹೊಸತೆಂಬ ಯುಗಾದಿ ಸುಂದರವೂ ಹಿತಕಾರಿಯೂ ಮನಮೋಹಕವು ಆಗಿರುವುದರಿಂದ ಇಷ್ಟವಾಗುವುದು! ಚೈತ್ರಮಾಸದಲ್ಲಿ ಇಡೀ ಪ್ರಕೃತಿಯೇ ಹರಿದ ಹಾಳಾದ ತೂತುಬಿದ್ದ ಅಂದಗೆಟ್ಟ ಎಲೆಗಳೆಂಬ ಹಳೆ ಕೊಳೆ ಮಲಿನ ಉಡುಪು ಇಲ್ಲವಾಗಿಸಿಕೊಂಡು ಹೊಸ … Read more

ಜೀವನ ಕೌಶಲ್ಯಗಳು: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ತಗ್ಗು ದಿಬ್ಬ ಗುಂಡಿ ಗೊಟರು ಸರೋವರ ಸಂದುಗೊಂದುಗಳಲಿ ಬದುಕಿನಬಂಡಿ ಅಪಾಯಕ್ಕೆ ಸಿಲುಕದಂತೆ ಉಪಾಯವಾಗಿ ಪಾರುಮಾಡಿ ಮುಟ್ಟಬೇಕಾದ ಗುರಿ ತಲುಪುವಂತೆ ಮಾಡುವ ಜೀವನ ಕೌಶಲ್ಯಗಳು ಎಲ್ಲರಿಗೂ ಅವಶ್ಯ ಅಮೂಲ್ಯ! ಬದುಕಿನಲ್ಲಿ ಶಾಲೆ, ಶಾಲೆಯಲ್ಲಿ ಪಠ್ಯಪುಸ್ತಕ, ಪಠ್ಯ ಪುಸ್ತಕದಲ್ಲಿ ಸ್ವಲ್ಪ ಬದುಕು ಇರುವುದು. ಪಠ್ಯಕ್ಕಿಂತ ಪಠ್ಯದಿಂದ ಹೊರಗಡೆಯೇ ಹೆಚ್ಚು ಬದುಕು ವ್ಯಾಪಿಸಿರುವುದು! ಶಾಲೆ, ಪಠ್ಯ ಪುಸ್ತಕ, ಅದರಲ್ಲಿನ ಜ್ಞಾನ ಏಕೆ ಬೇಕು! ಅವಿಲ್ಲದೆ ಬದುಕಲು ಆಗುವುದಿಲ್ಲವೆ? ಆಗುತ್ತದೆ! ಆದರೆ ಪಠ್ಯದಿಂದ ಹೊರಗಿರುವ ಬದುಕನ್ನು ವ್ಯವಸ್ಥಿತವಾಗಿ ಬದುಕುವಂತಾಗಲು, ಈಗ ಇರುವ ಬದುಕನ್ನು … Read more

ಸಹಜ ನಗು ಆರೋಗ್ಯದ ಆಗರ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ

‘ ನಗು ‘ ಎಂಬುದು ಮುಖದಲ್ಲಿ ಪ್ರಕಟವಾಗುವ ಒಂದು ಭಾವ! ಮನಸ್ಸು ಒಳಗಿರುವುದರಿಂದ ಅದರ ನೇರ ಸಾಕ್ಷಾತ್ ದರುಶನ ಕಷ್ಟ. ಮನ ಭಾವಗಳ ಮೂಲಕ ತನ್ನ ಸಾಕ್ಷಾತ್ ದರುಶನ ಮಾಡಿಸುವುದು! ಮುಖದಲ್ಲೆ ಮನದ ಭಾವಗಳು ಮೇಳೈಸುವುದು! ಮುಖದಲ್ಲೆ ಮನ ಬಂದು ನರ್ತಿಸಿ ತನ್ನ ಖುಷಿಯ ಪ್ರಕಟಿಸುವುದು! ದುಃಖವ ಅನಾವರಣಗೊಳಿಸುವುದು. ಮುಖವೆ ಮನದ ಆಡೊಂಬಲ. ಮುಖ ಎಂಬುದು ಆತ್ಮದ ಭಾವಗಳನ್ನು ಪ್ರಕಟಿಸುವ ಜೀವಂತ ಸ್ವಾಭಾವಿಕ ಕಿರು ಪರದೆ! ಮುಖದಲ್ಲೇ ನಗುವೆಂಬ ಅಮೂಲ್ಯ ಆಭರಣ ಮೈದೋರಿ ಮುಖದ ಸೊಗಸು ಹೆಚ್ಚಿಸುವುದು! … Read more

ತ್ಯಾಗದಲ್ಲಿ ಅಪರಿಮಿತ ಆನಂದ ಅಡಗಿದೆ!: ಕೆ. ಟಿ. ಸೋಮಶೇಖರ್ ಹೊಳಲ್ಕೆರೆ

 ತ್ಯಾಗ ಎಂಬುದು ಉತ್ತಮ ಮೌಲ್ಯಗಳಲ್ಲಿ ಉತ್ತಮವಾದುದು. ಮಾನವನ ಗುಣಗಳಲ್ಲಿ ಅತಿ ಮುಖ್ಯವಾದುದು. ಮಾನವರೆಲ್ಲರಲ್ಲೂ ಇರಬೇಕಾದಂತಹದ್ದು. ಆದರ್ಶ ವ್ಯಕ್ತಿಗಳಲ್ಲಿ ಹೆಚ್ಚೇ ಇರಬೇಕಾದುದು. ಮಾನವನ ಬದುಕಿಗೆ ಮಾನವತೆಗೆ ಉತ್ತಮ ಸಮಾಜದ ನಿರ್ಮಾಣಕ್ಕೆ ಅವಶ್ಯವಾದುದು. ಬಹಳ ಶ್ರೀಮಂತರು ತ್ಯಾಗಿಗಳಲ್ಲ! ಕೆಲವು ಸಿರಿವಂತರು ತನಗೆ ಅವಶ್ಯವಲ್ಲದ್ದನ್ನು ಯಥೇಚ್ಛವಾಗಿ ಇರುವಂತಹುದನ್ನು ತ್ಯಾಗ ಮಾಡುವರು. ಅದು ತ್ಯಾಗ! ಆದರೆ ತನಗೆ ಅವಶ್ಯವಾಗಿ ಬೇಕಾದುದನ್ನು ಬೇರೊಬ್ಬರ ಕಷ್ಟ ಅಥವಾ ನೋವು ನಿವಾರಣೆಗಾಗಿ ತ್ಯಾಗ ಮಾಡುವುದು ಶ್ರೇಷ್ಠ ತ್ಯಾಗ! ತ್ಯಾಗ ಮಾಡಿದುದನ್ನು ಸ್ವೀಕರಿಸಿದವ ಬಳಸಿಕೊಂಡು ಕಷ್ಟ ನಿವಾರಿಸಿಕೊಂಡು ನಗುಬೀರಿದವನ … Read more

ಮನಸ್ಸು ಒಂದು ಅದ್ಬುತ ಶಕ್ತಿ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಮನಸ್ಸು ಅದ್ಭುತವಾದುದು! ಅತ್ಯದ್ಬುತವಾದುದು! ಯಾರೂ ಅವರವರ ಮನಸ್ಸಿನ ಬಗ್ಗೆ ಚಿಂತಿಸಿದರೆ ಮನಸ್ಸಿನ ಅದ್ಭುತ ಶಕ್ತಿ ಗಮನಕ್ಕೆ ಬರುವುದು. ಅದರ ಬಗ್ಗೆ ಚಿಂತಿಸದಿರುವುದರಿಂದ ಅದರ ಅದ್ಭುತ ಶಕ್ತಿ ಗಮನಕ್ಕೆ ಬರುವುದಿಲ್ಲ! ಆದ್ದರಿಂದ ಯಾರೂ ಮನಸ್ಸಿನ ಅದ್ಭುತ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವುದೇ ಇಲ್ಲ! ಆದನ್ನು ಬಳಸಿದರೆ ಅದಕ್ಕೆ ಇರುವ ಅದ್ಬುತ ಶಕ್ತಿ ತಿಳಿಯುವುದು! ಈಗ ಮನಸ್ಸಿಗೆ ಅದ್ಭುತ ಶಕ್ತಿ ಇದೆ ಎಂದು ಹೇಗೆ ನಂಬಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಹೌದು! ಅದಕ್ಕಿರುವ ಶಕ್ತಿ ಗೊತ್ತಾಗುವುದಿಲ್ಲ! ಅದು ಜೀವಂತ ಮಾನವನಲ್ಲಿದ್ದರೂ … Read more

ಬೇಂದ್ರೆಯವರ ಸಿರಿವಂತಳೆನಿಸುವ ‘ ನಾನು ಬಡವಿ ‘ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಯುಗದ ಕವಿ ಜಗದ ಕವಿ ಶಬ್ದ ಗಾರುಡಿಗ ನಾದಬ್ರಹ್ಮ ನಾಕು ತಂತಿಯಿಂದ ಜ್ಞಾನಪೀಠಕ್ಕೇರಿದವರೂ ಆದ ಡಾ. ದ ರಾ ಬೇಂದ್ರೆಯವರ ‘ ನಾನು ಬಡವಿ ‘ ಎಂಬ ಪ್ರೀತಿಯ ಮಹತ್ವ ಸಾರುವ ಒಲವಿನ ಗೀತೆ ನನ್ನ ಮಿತಿಯೊಳಗೆ ನಾನು ಕಂಡಂತೆ! ಈ ಗೀತೆಯನ್ನು ಕವಿ ಬಡವಿಯ ಮೂಲಕ ತನ್ನ ಒಲವಿನ ದಾಂಪತ್ಯದ ವರ್ಣನೆ ಮಾಡುತ್ತಿರುವಂತೆ ರಚಿಸಿದ್ದಾರೆ. ಬಡವಿಯ ಸ್ವಗತದಂತಿದೆ. ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು. ಹತ್ತಿರಿರಲಿ … Read more

ಶಾಲಾ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆ ಎಂಬ ಮಾನದಂಡದ ಪ್ರಸ್ತುತತೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಶಾಲಾ ಕಾಲೇಜುಗಳಲ್ಲಿ ವರ್ಷವೆಲ್ಲಾ ವಿದ್ಯಾರ್ಥಿಗಳು ಕಲಿತಿದ್ದನ್ನು, ಶಿಕ್ಷಕರು ಕಲಿಸಿದ್ದನ್ನು ಎಷ್ಟು ಕಲಿತ್ತಿದ್ದಾರೆ? ಹೇಗೆ ಕಲಿತ್ತಿದ್ದಾರೆ? ಹೇಗೆ ಉತ್ತರಿಸಿದ್ದಾರೆ? ಎಂಬುದನ್ನು ಅಳೆದು ತಿಳಿಯುವ ವಿಧಾನವೇ ಪರೀಕ್ಷೆ! ವರ್ಷವೆಲ್ಲಾ ಕಲಿತ್ತದ್ದನ್ನು, ಕಲಿಸಿದ್ದನ್ನು ಮೂರು ಗಂಟೆಯಲ್ಲಿ ಅಳೆಯುವ ವಿಧಾನ ನಮ್ಮಲ್ಲಿ ಪ್ರಸಿದ್ದವಾದ, ಬಹು ಮಾನ್ಯವಾದ, ಸಾಮೂಹಿಕವಾಗಿ, ಒಮ್ಮೆಗೆ ಬಹುಜನರ ಪರೀಕ್ಷಿಸುವ ವಿಧಾನವಾಗಿದೆ! ಸಾಮಾನ್ಯವಾಗಿ ಬರವಣಿಗೆ ಮೂಲಕ ಪರೀಕ್ಷಿಸಲಾಗುತ್ತದೆ. ಪ್ರಾಕ್ಟಿಕಲ್ ಕಾಮನ್ನಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಇರುವುದಿಲ್ಲ! ಕೆಲವರಿಗೆ ಪ್ರಾಕ್ಟಿಕಲ್ ಬಹು ಮುಖ್ಯವಾಗಿರುತ್ತದೆ. ಹಾಗೆ ಕೆಲವರಿಗೆ ಈ ಪರೀಕ್ಷೆಗಳ ಜತೆಗೆ ಮೌಕಿಖ ಪರೀಕ್ಷೆಯೂ ಇರುತ್ತದೆ! … Read more

ಬಯಲು ಕಮ್ಮಾರರ ಬಯಲ ಬದುಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ.

 ಬಡವರು ಬಡತನದಿಂದ ದೂರವಾಗಿ ಒಳ್ಳೆಯ ಬದುಕು ರೂಪಿಸಿಕೊಳ್ಳಲು ಭಾರತ ಸರಕಾರ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ಅನಷ್ಠಾನಕ್ಕೆ ತಂದಿರುವುದು ಮೀಸಲಾತಿ ಘೋಷಿಸಿರುವುದು ಸತ್ಯಸ್ಯಸತ್ಯ! ಬಡವರ ಉದ್ದಾರಕ್ಕೆಂದೇ ಅವು ಮೈದಳೆದದ್ದು. ರಾಜ್ಯ ಸರಕಾರಗಳೂ ತಾವೇನು ಕಡಿಮೆಯಿಲ್ಲದಂತೆ ಅವರಿಗಾಗಿ ಕಾರ್ಯಕ್ರಮಗಳ ರೂಪಿಸಿರುವುದು ಸಹ ಸತ್ಯ! ಆದರೂ ಅವು ಕಾರಣಾಂತರದಿಂದ ಕೆಲವರಿಗೆ ತಲುಪದೆ ಅವರು ಬದುಕು ಸಾಗಿಸಲು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುತ್ತಿರುವುದು ಸಹ ಸತ್ಯಸ್ಯಸತ್ಯ! ಈ ಗುಂಪಿಗೆ ಸೇರಿದವರಲ್ಲಿ ಬಯಲು ಕಮ್ಮಾರರು ಒಬ್ಬರು! ಬಡವರಿಗೆ ಕೊಡುವ ಪಡಿತರ, ನರೇಗದಂತಹ ಉದ್ಯೋಗ ಖಾತ್ರಿ ಕಾರ್ಯಕ್ರಮದಿಂದಲೂ … Read more

ಸರಸ್ವತಿ ಪುರಂದರ ದಾಸರ ಸತಿ ಸದ್ಗತಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಪ್ರತಿಯೊಬ್ಬ ಮಹಾನ್ ಪುರುಷನ ಮಹಾನ್ ಸಾಧನೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳಿರುವುದನ್ನು ಕೇಳಿರುತ್ತೇವೆ! ಗಾಂಧಿ, ಶಿವಾಜಿಯ ಮಹಾನ್ ಸಾಧನೆಯ ಹಿಂದೆ ಇದ್ದ ಸ್ತ್ರೀಯರು ಯಾರೆಂದು ಎಲ್ಲರೂ ತಿಳಿದಿದ್ದಾರೆ! ಕರ್ನಾಟಕ ಸಂಗೀತ ಪದ್ದತಿಯ ಪಿತಾಮಹಾ, ದಾಸವರೇಣ್ಯ, ಭಕ್ತಿಯಿಂದ ಮುಕ್ತಿ ಮಾರ್ಗ ತೋರಿದ ಪುರಂದರ ದಾಸರು ಯಾರಿಗೆ ತಾನೇ ಗೊತ್ತಿಲ್ಲ? ಅವರು, ಅವರ ಕೀರ್ತನೆಗಳು ಎಲ್ಲ ಜನರಿಗೂ ಗೊತ್ತು! ಆದರೆ ಅವರು ಹರಿದಾಸರಾಗಿ ಪ್ರಖ್ಯಾತಿ ಹೊಂದಲು ಕಾರಣವಾದ ಅವರ ಹೆಂಡತಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಕೆಲವರಿಗೆ … Read more

ಸಕಾರಾತ್ಮಕವಾಗಿಯೇ ಚಿಂತಿಸಬೇಕಲ್ಲವೆ?: ಸೋಮಶೇಖರ್ ಹೊಳಲ್ಕೆರೆ

ಬಹಳ ವರುಷ ಒಂದೇ ಸ್ಥಳದಲ್ಲಿ, ಒಂದೇ ವಾತಾವರಣದಲ್ಲಿ ವಾಸಿಸುವುದರಿಂದ, ಒಂದೇ ರುಚಿ ಆಹಾರ ಸೇವಿಸುವುದರಿಂದ ಬೇಸರ ಉಂಟಾಗುವುದು ಸಾಮಾನ್ಯ! ಅದಕ್ಕೇ ಆಗಾಗ ಹಬ್ಬಗಳು, ಜಾತ್ರೆಗಳು ಬಂದು ವಿಧವಿಧ ರುಚಿಯ ಭಕ್ಷ್ಯ ಬೋಜ್ಯಗಳ ತಂದು, ನೆಂಟರಿಷ್ಟರ ಮನೆತುಂಬಿಸಿ, ಪೂಜೆ ಪುರಸ್ಕಾರ ಗಂಟಾ ಘೋಷಗಳಲಿ ಮೀಯಿಸಿ, ಮನೆಯ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ವಾತಾವರಣವನ್ನು ಬದಲಾಯಿಸಿ ಏಕತಾನತೆಯ ಬೇಸರ ಕಳೆದು ಬದುಕುವ ಉತ್ಸಾಹವ ತುಂಬುವ ಹೊಸ ಹುರುಪು ತುಂಬುವ ಉಪಾಯಗಳ ನಮ್ಮ ಹಿರಿಯರು ವರುಷ ಪೂರ್ತಿ ಮಾಡಿರುವುದು! ಪ್ರವಾಸ, ತೀರ್ಥಯಾತ್ರೆಗಳು … Read more

ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. … Read more

ವಿವಾಹ ಎಂಬ ಅನುಬಂಧವು, ಲಿವಿಂಗ್ ಟುಗೆದರ್ ಎಂಬ ಸಂಬಂಧವು!:ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾಂಗಲ್ಯಂ ತಂತುನಾನೇನ ಮಮಜೀವನ ಹೇತುನಾ … ಎಂಬ ಮಂತ್ರೋಚ್ಛಾರಣೆಯೊಂದಿಗೆ ಸಾವಿರಾರು ಗುರು ಹಿರಿಯರು, ಬಂಧು ಮಿತ್ರರು ಆಶೀರ್ವಾದ ಮಾಡಿಕೊಟ್ಟ ಪವಿತ್ರ ಮಾಂಗಲ್ಯ ಧಾರಣೆ ಮಾಡುವ ವಿವಾಹ ಎಂಬ ಏಳೇಳು ಜನುಮದ ಸಂಬಂಧ ಎಂಬ ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ – ಎಂದು ಪತಿ ಪತ್ನಿಗೆ ಮಾತು ಕೊಟ್ಟು, ಅಗ್ನೀ ಸಾಕ್ಷಿಯಾಗಿಸಿ ಸಪ್ತಪದಿ ತುಳಿಯುವ ಮದುವೆಗಳು ಸ್ವರ್ಗದಲ್ಲಿ ನಿರ್ಣಯಾವಾಗಿರತ್ತವೆಂದು ಬಿಡಿಸಿಕೊಳ್ಳಲಾಗದಂತೆ ಬಿಗಿಯಾಗಿ ಸಂಬಂಧವನ್ನು ಬೆಸೆದು ಅಕ್ರಮ ಸಂಬಂಧಗಳ ತಡೆಯುವ, ಸಂಗಾತಿಯನ್ನು ಅರ್ಧ ನಾರೀಶ್ವರರಂತೆ ಬೆಸೆಯುವ ಅಧ್ಭತ ಕಲ್ಪನೆ, ಪತಿ … Read more

ಜೀವನಾಸ್ವಾದ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಜೀವನದಲ್ಲಿ ಮಾನವ ಅನೇಕ ಮುಖ್ಯ ಘಟ್ಟಗಳನ್ನು ದಾಟುತ್ತಾನೆ. ಆ ಸಂದರ್ಭದಲ್ಲಿ ಕೆಲವು ಸಂಪ್ರದಾಯ, ಪದ್ದತಿ, ಪರಂಪರೆ, ಆಚರಣೆಗಳನ್ನು ಭಾರತೀಯರು ಆಚರಿಸುತ್ತಾರೆ. ಅವು ಜೀವನದಲ್ಲಿನ ಏಕತಾನತೆಯನ್ನು ಹೋಗಲಾಡಿಸಿ ಬದುಕಿಗೆ ನವಚೈತನ್ಯವನ್ನು ತುಂಬುತ್ತವೆ! ಬದುಕಿನ ಮುಖ್ಯಘಟ್ಟದ ಕೆಲವು ಸಂದರ್ಭಗಳಲ್ಲಿ ಹುಡುಗಾಟಿಕೆ ಖುಷಿ ತಮಾಷೆಗಳಿರುವಂತೆ ಬದುಕ ರೂಪಿಸಿದ್ದರಿಂದ ಅವು ಆನಂದ ಉಂಟುಮಾಡುತ್ತಿದ್ದವು! ಹಿಂದೆ ಬದುಕು ಅಮೂಲ್ಯ ಎಂದು ಭಾವಿಸಿದ ಪ್ರಯುಕ್ತ ಜೀವಕ್ಕೆ ಬೆಲೆ ಇತ್ತು. ಬಹುದಿನ ಬೆಲೆಯುತವಾಗಿ ಬದುಕಲು ಪ್ರಯತ್ನಿಸುತ್ತಿದ್ದರು. ಜೀವನದ ಪ್ರತಿ ಹಂತವನ್ನೂ ಆಸ್ವಾದಿಸಿ ಸಂತೋಷವಾಗಿರುತ್ತಿದ್ದರು. ಬದುಕಿನ ಉದ್ದಕ್ಕೂ ಸಂತಸ … Read more

ಹನುಮನ ವಿರಾಟ ರೂಪ ತೋರಿದ ಆ ಒಂದು ಹೂವು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಗದಾಯುದ್ದ ಎಂದರೆ ಭೀಮ! ಭೀಮಾ ಎಂದರೆ ಮಹಾಕಾಯ, ಬಲವಂತ! ಪರ್ವದಂತಹ ದೇಹದಾರಿ! ವಜ್ರಕಾಯ! ಇವನನ್ನು ವಾಯುವಿನ ಮಂತ್ರದಿಂದ ಕುಂತಿ ಮಗನಾಗಿ ಪಡೆಯುವಳು. ಬಾಲಕನಿದ್ದಾಗ ಪಾಂಡವರು ಕೌರವರ ನೂರು ಮಂದಿ ರಾಜಕುಮಾರರು ಸೇರಿ ಮರಕೋತಿ ಆಡುವಾಗ ಮರವನ್ನೇ ಅಲುಗಾಡಿಸಿ ಮರದಲ್ಲಿನ ಹಣ್ಣುಗಳನ್ನು ಉದುರಿಸಿದಂತೆ ಅವರನ್ನು ನೆಲಕುರುಳಿಸುತ್ತಿದ್ದ ಭೂಪ, ಅರಗಿನ ಮನೆಗೆ ಬೆಂಕಿಬಿದ್ದಾಗ ಎಲ್ಲರನ್ನೂ ಗುಪ್ತ ಸುರಂಗ ಮಾರ್ಗದಲ್ಲಿ ಒಬ್ಬನೇ ಹೊತ್ತೊಯ್ದ ಬಲಶಾಲಿ, ಬಂಡಿ ಭೋಜ್ಯ ಸವಿದು ಏಕಚಕ್ರ ನಗರಿಗೆ ಕಂಟಕನಾಗಿದ್ದ ಬಕಾಸುರನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟಿ ಏಕಚಕ್ರ … Read more

ಮಾಯವಾಗುತ್ತಿರುವ ಬರವಣಿಗೆ ಎಂಬ ಭಾಷಾ ಕೌಶಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ವಿಜ್ಞಾನ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಮಾನವನ ಬದುಕು ಎಷ್ಟು ಸುಖಮಯ ಸುಲಭವಾಗುತ್ತದೋ ಅಷ್ಟೇ ಸಂಕೀರ್ಣವೂ ಅವಲಂಬಿಯೂ ಆಕಸ್ಮಿಕವೂ ಅಘಾತಕಾರಿಯೂ ಆಗುವುದರೊಂದಿಗೆ ಏಷ್ಟೋ ಶ್ರೇಷ್ಠ ಕಲೆಗಳ ಅಳಿವಿಗೂ ಹೊಸ ಕಲೆಗಳ ಸೃಷ್ಟಿಗೂ ನಾಂದಿ ಹಾಡಿದೆ! ಆದರೆ ವಿಜ್ಞಾನದ ಪ್ರಗತಿಯ ಓಟದಲ್ಲಿ ನಾವು ಈ ಸಂಕೀರ್ಣತೆಯನ್ನು, ಕಲೆಯನ್ನೂ ಮುಖ್ಯವೆಂದು ಭಾವಿಸುತ್ತಿಲ್ಲ! ಮುಂದೊಂದು ದಿನ ಅದರ ಪ್ರಾಮುಖ್ಯತೆ ಗೊತ್ತಾಗುತ್ತದೆ. ವಿಜ್ಞಾನ ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದಾಗಿ ಇಂದು ಕ್ಯಾಶ್ಲೆಸ್ ವ್ಯವಹಾರ ಆರಂಭವಾಗಿದೆ! ಇದು ಅದ್ಭುತ ಸಾಧನೆ! ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು … Read more

ಕನ್ನಡ ಸಾಹಿತ್ಯವನ್ನು ಓದುವವರು ಯಾರು?: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಹಬ್ಬ ಎಂಬುದು ಸಂತೋಷ ಉಂಟುಮಾಡುವ ವಿಷಯ. ಕನ್ನಡದ ಸಾಧನೆ ಸಾರುವ, ಸಾಧನೆಗೆ ಮಣೆ ಹಾಕುವ, ಸಾಧಕರಿಗೆ ಕಿರೀಟವಿಡುವ, ಆಸಕ್ತರಿಗೆ ಪ್ರೋತ್ಸಾಹಿಸುವ, ಕವಿಗೋಷ್ಟಿ, ಸಾಹಿತ್ಯಕ ಚರ್ಚೆ, ಚಿಂತನ, ಮಂಥನದ ಹಬ್ಬವಾಗಬೇಕಿರುವ ಸಾಹಿತ್ಯಸಮ್ಮೇಳನಗಳಲ್ಲಿ ಕನ್ನಡ ಉಳಿಸುವುದು ಹೇಗೆ ಎಂಬ ವಿಷಯ ತಾಲ್ಲೂಕು ಮಟ್ಟದ ಸಮ್ಮೇಳನಗಳಿಂದ ಹಿಡಿದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಗಳವರೆಗೂ ಉದ್ಘಾಟನಾ ಸಭೆಯಿಂದನೇ ಚರ್ಚೆ ಆರಂಭವಾಗಬೇಕಾಗಿರುವ ಸಂದರ್ಭ ಬಂದಿರುವುದು ಕನ್ನಡಿಗರ ದುರದೃಷ್ಟ! ನುಡಿ ಹಬ್ಬದಲ್ಲಿ ಕನ್ನಡದ ಉಳಿಸುವ ಬೆಳೆಸುವ ಬಗ್ಗೆ ಚರ್ಚಿಸಿ ಇದಕ್ಕೆ ಪೂರಕವಾದ ಕೆಲವು ನಿರ್ಣಯಗಳನ್ನು ನುಡಿಹಬ್ಬದ … Read more

ಧೃತರಾಷ್ಟ್ರಾಲಿಂಗನ !: ಕೆ ಟಿ ಸೋಮಶೇಖರ. ಹೊಳಲ್ಕೆರೆ

‘ ಆಲಿಂಗನ ‘ ಎಂಬ ಪದವೇ ಆಪ್ಯಾಯಮಾನ ಅನಿಸುವಂತಹದ್ದು! ಹಿತಕರ ಅನುಭವ ಉಂಟು ಮಾಡುವಂತಹದ್ದು. ಆಲಿಂಗನವೆಂಬ ಕ್ರೀಯೆ ಎರಡು ದೇಹಗಳ ಬೆಸುಗೆ! ಮಧುರ ಅನುಭವ! ಗಾಢ ಪ್ರೀತಿ, ಸ್ನೇಹ, ಮಮತೆ ಆಲಿಂಗನದ ಸಂಕೇತಗಳು! ಆಲಿಂಗನದಲ್ಲಿ ದೇಹಗಳಷ್ಟೇ ಬೆಸೆದಿರುವಂತೆ ಕಂಡರೂ ಮನಸ್ಸುಗಳು ಮೊದಲೇ ಸೂಜಿಗಲ್ಲಿನಂತೆ ಸೆಳೆದು ಆಲಂಗಿಸಿಕೊಂಡಿರುತ್ತವೆ. ಮನಸ್ಸುಗಳು ಆಕರ್ಷಿಸದೆ ದೇಹಗಳು ಆಲಿಂಗನಗೊಳ್ಳುವುದಿಲ್ಲ! ದೇಹಗಳ ಆಲಿಂಗನದಿಂದ ಮನಸ್ಸುಗಳು ಸ್ಪರ್ಷಾನಂದದ ಅನುಭವ ಹೊಂದುತ್ತಿರುತ್ತವೆ! ಸ್ಪರ್ಷಾನುಭವ ವ್ಯಕ್ತಿಗಳು ಹೊಂದಿರುವ ಅನ್ಯೋನ್ಯತೆಯ ಆಧಾರದ ಮೇಲೆ ಸಂತಸ ಉಂಟು ಮಾಡುತ್ತಿರುತ್ತದೆ. ಹಾಗೇ ಗಾಢಾಲಿಂಗನ ಅವರ … Read more

ಇಚ್ಛಾಮರಣಿಯ ತ್ಯಾಗದ ಜೀವನ, ತ್ಯಾಗದ ಮರಣ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಮಹಾಭಾರತದ ಮಹಾಪಾತ್ರಗಳಲ್ಲಿ ಭೀಷ್ಮನದು ಬಹು ಮುಖ್ಯವಾದ ಪಾತ್ರವಾಗಿದೆ! ತ್ಯಾಗವೆಂಬ ಮಹಾಮೌಲ್ಯದಿಂದ ಕೂಡಿ ಪ್ರಸಿದ್ದವಾದುದಾಗಿದೆ. ಇವ ಕೌರವ ಪಾಂಡವರಿಗೆ ಅಜ್ಜನೂ ಗುರುವೂ ಆಗಿದ್ದು ಮಹಾಪರಾಕ್ರಮಿಯಾಗಿದ್ದವ! ಶಂತನು ಮತ್ತು ಗಂಗಾದೇವಿಯರ ಪುತ್ರನೇ ಭೀಷ್ಮ! ಒಂದು ಕಟ್ಟುಪಾಡಿನ ಮೇರೆಗೆ ಶಂತನು ಗಂಗಾದೇವಿಯನ್ನು ಮದುವೆಯಾಗಿರುತ್ತಾನೆ. ಶಂತನು ಗಂಗಾ ದೇವಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನ ಗಂಡು ಮಕ್ಕಳನ್ನು ಪಡೆಯುತ್ತಾನಾದರೂ ಮಗು ಹುಟ್ಟುತ್ತಿದ್ದಂತೆ ಗಂಗಾದೇವಿ ಅದನ್ನು ತೆಗೆದುಕೊಂಡು ಗಂಗಾ ನದಿಯಲ್ಲಿ ಮುಳುಗಿಸಿ ಬರುತ್ತಿರುತ್ತಾಳೆ! ಪ್ರತಿ ಮಗು ಹುಟ್ಟಿದಾಗಲೂ ಶಂತನು ಅವಳ ಹಿಂದೆ ನದಿ … Read more