ಸಸ್ಯಾಹಾರ ವರ್ಸಸ್ ಮಾಂಸಾಹಾರ: ಅಖಿಲೇಶ್ ಚಿಪ್ಪಳಿ ಅಂಕಣ

  ಮೊನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. ಮಾತು ದೇಶ-ವಿದೇಶಗಳನ್ನು ಸುತ್ತಿ, ಕಡೆಗೆ ನಾವು ಸೇವಿಸುವ ಆಹಾರದ ಬಗ್ಗೆ ಹೊರಳಿತು. ತಟ್ಟನೆ ಆ ಪರಿಚಿತರು ಪ್ರತಿಕ್ರಯಿಸಿದರು. ಮಾರಾಯ ಈಗಿನ ಪೀಡೆನಾಶಕದ ಹಾವಳಿಯಲ್ಲಿ ತರಕಾರಿಗಿಂತ ಕೋಳಿ ತಿನ್ನೋದೆ ಸ್ವಲ್ಪ ಮಟ್ಟಿಗೆ ಒಳ್ಳೆದು ಅಂತ ಕಾಣ್ತದೆ ಎಂದರು. ಯಾಕೆ ಎಂದೆ. ನೋಡು ತರಕಾರಿಗಳಿಗೆ ಇಂತದೇ ವಿಷ ಹಾಕ್ತಾರೆ ಅಂತ ಹೇಳೊಕಾಗಲ್ಲ. ಪಾದರಸದಿಂದ ಹಿಡಿದು ಎಂಡೋಸಲ್ಪಾನ್‍ವರೆಗೂ ಎಲ್ಲಾ ತರಹದ ಔಷಧ ಹೊಡಿತಾರೆ. ಯಾವುದೇ ನಿಯಮಗಳನ್ನೂ ಪಾಲಿಸೋದಿಲ್ಲ. ಕೋಳಿಯಾದ್ರೆ ಜೀವಂತ ಪ್ರಾಣಿ ಹಾಗಾಗಿ ಅದಕ್ಕೆ ಯದ್ವಾತದ್ವಾ … Read more

ಕುಂಡೆಕುಸ್ಕ ಬಂತು: ಅಖಿಲೇಶ್ ಚಿಪ್ಪಳಿ

ಹವಾಮಾನ ಬದಲಾವಣೆಯ ಪರಿಣಾಮವೋ ಏನೋ ಮಲೆನಾಡಿನಲ್ಲಿ ಇನ್ನೂ ಮಳೆ ಬಿಟ್ಟಿಲ್ಲ. ಮೇಲಿಂದ ಮೇಲೆ ಚಂಡಮಾರುತಗಳು ರುಧ್ರನರ್ತನಗೈಯುತ್ತಿವೆ. ಪ್ರಕೃತಿವಿಕೋಪಕ್ಕೆ ಸಿಕ್ಕ ಮಾನವನ ಬದುಕು ಮೂರಾಬಟ್ಟೆಯಾಗಿದೆ. ಸ್ವಯಂಕೃತಾಪರಾಧವೆನ್ನಬಹುದೆ? ಮಳೆಗಾಲ ಕ್ಷೀಣವಾಗಿ ನಿಧಾನವಾಗಿ ಚಳಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತಾ ಬರುವಾಗಿನ ಸಂಭ್ರಮ ಮತ್ತು ಅದರ ಮಜ ಬೇರೆ. ತೆಳ್ಳಗಿನ ಇಬ್ಬನಿ ಎಲೆಗಳ ಮೇಲೆ ಹುಲ್ಲಿನ ಮೇಲೆ, ಜೇಡದ ಬಲೆಯಲ್ಲಿ ಮುತ್ತು ಪೋಣಿಸಿದಂತೆ ಅತ್ಯಾಕರ್ಷಕವಾಗಿ ತೋರುತ್ತದೆ. ಚಳಿಗಾಲದ ಮುಂಜಾವಿನ ಸೊಗಸನ್ನು ಅನುಭವಿಸಿದವನೇ ಧನ್ಯ. ಸೂರ್ಯವಂಶಿಗಳಿಗೆ ಈ ಭಾಗ್ಯವಿಲ್ಲ. ಇವರೆದ್ದು ವಾತಾವರಣದ ಸಂಪರ್ಕಕ್ಕೆ ಬರುವ … Read more

ವನ್ಯಾಪಘಾತಗಳು ಮತ್ತು ಪರಿಹಾರ: ಅಖಿಲೇಶ್ ಚಿಪ್ಪಳಿ ಅಂಕಣ

ಮೊನ್ನೆ ಕೇರಳದ ಮುಖ್ಯಮಂತ್ರಿ ಚಾಂಡಿ ಬಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಒಂದು ಮನವಿಯನ್ನು ಸಲ್ಲಿಸಿದರು. ಕರ್ನಾಟಕ-ಕೇರಳದ ಮಧ್ಯೆ ಸಂರಕ್ಷಿತ ವನ್ಯಪ್ರದೇಶದಲ್ಲಿ ಹಾದು ಹೋಗುವ ಹೈವೇಯಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂಬುದು ಮನವಿಯ ಸಾರಾಂಶ. ಕರ್ನಾಟಕದ ಮುಖ್ಯಮಂತ್ರಿಗಳು ಸಧ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳ ಈ ನಿಲುವು ಸಂತೋಷದ ವಿಚಾರವೇ ಸೈ. ಜನಸಂಖ್ಯೆ ಬೆಳೆದ ಹಾಗೆ ಪಟ್ಟಣಗಳು ನಗರಗಳಾಗುತ್ತವೆ. ಹಳ್ಳಿಗಳು ಪೇಟೆಯ ಸ್ವರೂಪ … Read more

ಟೋನಿ ಮಾರ್ಕಿಸ್‌ಯೆಂಬ ಪರಮ ಘಾತುಕ: ಅಖಿಲೇಶ್ ಚಿಪ್ಪಳಿ ಅಂಕಣ

  ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಶಾರೀರಿಕವಾಗಿ ಬಲಿಷ್ಟನಲ್ಲದ ಮಾನವ ಇವತ್ತು ಜಗತ್ತನ್ನು ಆಳುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಇವನಿಗಿರುವ ಆಲೋಚನಾ ಶಕ್ತಿ, ಬುದ್ಧಿಮತ್ತೆ ಇತ್ಯಾದಿಗಳು. ಮನುಷ್ಯನ ವಿದ್ಯೆ-ಬುದ್ಧಿಗಳು ಜಗತ್ತಿನ ಒಳಿತಿಗೆ ಪೂರಕವಾದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ಇದನ್ನೇ ದುಷ್ಕಾರ್ಯಗಳಿಗೆ ಬಳಸಿದರೆ ಸಿಗುವುದು ಹಿಂಸೆ-ಅಶಾಂತಿ ಇತ್ಯಾದಿಗಳು. ಎಲ್ಲಾ ಪ್ರಾಣಿಗಳಿಗೂ ಹೊಟ್ಟೆ ತುಂಬಿದ ಮೇಲೆ ಮನೋರಂಜನೆ ಬೇಕು. ಬೆಕ್ಕು ಚಿನ್ನಾಟವಾಡುವ ಹಾಗೆ, ಆಟಗಳು ದೈಹಿಕವಾಗಿ ಬಲಿಷ್ಟವಾಗಿರಲು ಮತ್ತು ಮನಸ್ಸಿನ ನೆಮ್ಮದಿ-ಆರೋಗ್ಯಕ್ಕೆ ಪೂರಕ. ಆಧುನಿಕ ಮನುಷ್ಯ ರೂಡಿಸಿಕೊಂಡ ಆಟಗಳು ಸಾವಿರಾರು. ಇದರಲ್ಲಿ ಹೆಚ್ಚಿನವು … Read more

ಗಾಂಧಿಯನ್ನು ಕೊಂದವರ್‍ಯಾರು?:ಅಖಿಲೇಶ್ ಚಿಪ್ಪಳಿ ಅಂಕಣ

ಭೌತಿಕವಾದ ಗಾಂಧಿಯನ್ನು ಕೊಂದಿದ್ದು ನಾಥುರಾಮ್ ಗೋಡ್ಸೆ. ಗಾಂಧಿಯನ್ನು ಕೊಂದ ತಾನು ನೇಣಿಗೇರಿ ಸತ್ತ. 600 ಚಿಲ್ಲರೆ ರಾಜರನ್ನು ಹೊಂದಿದ ಪುರಾತನ ಭಾರತವನ್ನು ಒಡೆದಾಳಿ, ಗುಲಾಮಗಿರಿಗೆ ತಳ್ಳಿ ಮೆರೆದಿದ್ದು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲಾಗುವ ಬ್ರೀಟಿಷರ ಹೆಗ್ಗಳಿಕೆ. ದೇಶಾಭಿಮಾನ ಮತ್ತು ಸ್ವಾಭಿಮಾನ ಮೇಳೈಸಿ, ಗುಲಾಮತನಕ್ಕೆ ಒಗ್ಗಿಹೋಗಿದ್ದ ಲಕ್ಷಾಂತರ ಭಾರತೀಯರಿಗೆ ಸ್ವದೇಶಿ, ಸ್ವಾಭಿಮಾನ, ಸ್ವಾತಂತ್ರ್ಯವೆಂಬ ಊರುಗೋಲುಗಳನ್ನು ನೀಡಿ ಎಬ್ಬಿಸಿ ನಿಲ್ಲಿಸಿದವರಲ್ಲಿ ಗಾಂಧಿ ಪ್ರಮುಖರು. ಇದಕ್ಕಾಗಿಯೇ ಗಾಂಧಿಯನ್ನು ಇಡೀ ದೇಶ ರಾಷ್ಟ್ರಪಿತನೆಂದು ಒಪ್ಪಿಕೊಂಡಿದೆ. ಸ್ವಾತಂತ್ರ್ಯ ಪಡೆದ ನಂತರದಲ್ಲಿ ರಚಿತವಾದ ಸರ್ಕಾರಗಳ ಧೋರಣೆಗಳು … Read more

ಮುಂದಿನ ಪೀಳಿಗೆಗೊಂದು ಪುಟ್ಟ ಪತ್ರ: ಅಖಿಲೇಶ್ ಚಿಪ್ಪಳಿ ಅಂಕಣ

ಭವಿಷ್ಯದ ಪುಟಾಣಿಗಳೆ, ಈ ಭೂಮಿ ಹುಟ್ಟಿ ೪೬೦ ಕೋಟಿ ಅಗಾಧ ವರ್ಷಗಳಾದವು. ನವಮಾಸಗಳು ಹೊತ್ತು-ಹೆತ್ತು ಇವತ್ತು ಜಗತ್ತಿಗೆ ಬಂದು ಕಣ್ಬಿಡುವ ಹೆಚ್ಚಿನ ನೀವುಗಳು ಖಾಸಗಿ-ಸರ್ಕಾರಿ ಆಸ್ಪತ್ರೆಗಳ ಫಿನೈಲ್-ಡೆಟಾಲ್‌ಗಳ ವಾಸನೆಗಳನ್ನೇ ಸೇವಿಸಿ ವಿಸ್ಮಿತರಾಗಿ ಹೊರಜಗತ್ತನ್ನು ಗಮನಿಸುತ್ತೀರಿ. ಕಲುಷಿತ ವಾತಾವರಣ ನಿಮಗೆ ಥಂಡಿ-ಜ್ವರ-ಕಫಗಳನ್ನು ಧಾರಾಳವಾಗಿ ಧಾರೆಯೆರೆಯುತ್ತದೆ. ಗಾಬರಿಗೊಂಡ ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಸಮಾಧಾನ ಮಾಡಲು ಜೊತೆಗೆ ನಿಮಗಾದ ಜಡ್ಡನ್ನು ಹೋಗಲಾಡಿಸಲು ಹಲವಾರು ಮದ್ದುಗಳಿವೆ, ಚುಚ್ಚುಮದ್ದುಗಳಿವೆ, ಸಿರಫ್‌ಗಳಿವೆ ಇತ್ಯಾದಿ ಸಾವಿರಗಳಿವೆ. ಇವುಗಳನ್ನು ಪೂರೈಸಿ ತಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳಲು ಅಂತಾರಾಷ್ಟ್ರೀಯ ಕಂಪನಿಗಳು ತುದಿಗಾಲಲ್ಲಿ … Read more

ಅಲ್ಲಿ ಫುಕೋಕಾ-ಇಲ್ಲಿ ಚೇರ್ಕಾಡಿ: ಅಖಿಲೇಶ್ ಚಿಪ್ಪಳಿ ಅಂಕಣ

ಬೀಳು ಭೂಮಿಯ ಭೀಷ್ಮ-ಕರ್ನಾಟಕದ ಹೆಮ್ಮೆಯ ಕೃಷಿ ಋಷಿ – ಚೆರ್ಕಾಡಿ ರಾಮಚಂದ್ರರಾವ್ ಭವ್ಯ ಭಾರತದ ಹೆಮ್ಮೆಯ ಕರ್ನಾಟಕದ ಕರಾವಳಿ ತೀರದಲ್ಲಿ ಬರೀ ಎರಡೂಕಾಲು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸಿದ, ದೇಶಕ್ಕೇ ಮಾದರಿಯಾಗಬಲ್ಲ, ಯಾವುದೇ ಕೃಷಿ-ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಮಾಡಿ ಸ್ವಾವಲಂಬಿ ಬದುಕನ್ನು ಬದುಕಿದ ವ್ಯಕ್ತಿ ಆಗಿ ಹೋಗಿದ್ದಾರೆ. ಸರ್ಕಾರದ ಭಿಕ್ಷೆಯಾದ ಸಬ್ಸಿಡಿಯನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಯಾವ ಆಧುನಿಕ ಉಪಕರಣಗಳನ್ನೂ ಬಳಸದೆ, ವಿದ್ಯುತ್ ಇಲ್ಲದೇ ಕೃಷಿಯಿಲ್ಲ, ರಾಸಾಯನಿಕಗಳಿಲ್ಲದೆ ಕೃಷಿ ಅಸಾಧ್ಯ ಎಂಬ … Read more

ಸುರಿಯುವ ಫುಕೊಶಿಮ-ಎರವಾಗಲಿರುವ ಕೊಡಂಕುಳಂ: ಅಖಿಲೇಶ್ ಚಿಪ್ಪಳಿ ಅಂಕಣ

ಫುಕೊಶಿಮ ಅಣು ದುರಂತದ ಬೆನ್ನಲ್ಲೆ ಬಹಳಷ್ಟು ಅವಘಡಗಳು ಅಲ್ಲಿ ಸಂಭವಿಸುತ್ತಿವೆ. ಇದೀಗ ಹೊಸದಾಗಿ ಸೇರ್ಪಡೆಯೆಂದರೆ, ಅಣು ರಿಯಾಕ್ಟರ್‍ಗಳ ಬಿಸಿಯನ್ನು ತಣ್ಣಗಾಗಿಸುವ ನೀರಿನ ಭದ್ರವಾದ ಟ್ಯಾಂಕ್‍ಗಳ ಸೋರಿಕೆ. ಬಳಕೆಯಾದ ವಿಕಿರಣಯುಕ್ತ ನೀರಿನ ಟ್ಯಾಂಕ್ ಸೋರಿಕೆಗೊಂಡು ಪೆಸಿಫಿಕ್ ಸಮುದ್ರಕ್ಕೆ ಸೇರಿದೆ. 2011ರ ಬೀಕರ ಸುನಾಮಿ ಮತ್ತು ಭೂಕಂಪ ಜಪಾನಿನ ಪುಕೊಶಿಮಾದ ಅಣು ಸ್ಥಾವರಗಳನ್ನು ಹಾಳುಗೆಡವಿ ಅಂತಾರಾಷ್ಟ್ರೀಯ ಬಿಕ್ಕಟ್ಟನ್ನುಂಟುಮಾಡಿತ್ತು. ಈಗಾಗಲೇ 8 ಟ್ಯಾಂಕಿನಿಂದ ಸುಮಾರು 300 ಟನ್‍ಗಳಷ್ಟು ವಿಕಿರಣಯುಕ್ತ ನೀರು ಸೋರಿಕೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಸೋರಿಕೆಯಾದ ಜಾಗದಿಂದ 50 … Read more

ಬಂಗಾರದಕ್ಕಿ ಮತ್ತು ಇತರೆಗಳು:ಅಖಿಲೇಶ್ ಚಿಪ್ಪಳಿ ಅಂಕಣ

 ವಿಟಮಿನ್ ಎ ಕೊರತೆಯಿಂದ ಪ್ರಪಂಚದಲ್ಲಿ ಪ್ರತಿವರ್ಷ ೨೦ ಲಕ್ಷ ಜನ ಸಾಯುತ್ತಾರೆ ಮತ್ತು ೫ ಲಕ್ಷ ಮಕ್ಕಳು ಕುರುಡರಾಗುತ್ತಿದ್ದಾರೆ ಎಂಬುದೊಂದು ಅಂಕಿ-ಅಂಶ. ವಿಟಮಿನ್ ಎ ಮನುಷ್ಯ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವ. ವಿಟಮಿನ್ ಎ ಕೊರತೆಯು ಮುಖ್ಯವಾಗಿ ಕಣ್ಣಿನ ಮೇಲಾಗುತ್ತದೆ ಎಂಬುದು ಆರೋಗ್ಯ ವಿಜ್ಞಾನ ಕಂಡುಕೊಂಡಿರುವ ಸತ್ಯ. ಏರುತ್ತಿರುವ ಜನಸಂಖ್ಯೆ, ಬಡತನ ಇತ್ಯಾದಿ ಕಾರಣಗಳಿಂದಾಗಿ ಬಡವರ ಮಕ್ಕಳಿಗೆ ವಿಟಮಿನ್ ಎ ಕೊರತೆಯಾಗಿ ಕಾಡುತ್ತದೆ ಮತ್ತು ಇದರಿಂದಾಗಿ ಪ್ರಪಂಚದ ಮೇಲೆ ತೀವ್ರವಾದ ಪರಿಣಾಮವಾಗುತ್ತದೆ. ಹೆಚ್ಚಿನ ಬಡ ಮಕ್ಕಳು ದೃಷ್ಟಿಮಾಂದ್ಯರಾದರೆ … Read more

ಅತ್ಯಾಚಾರ ತಡೆಯುವ ಬಗೆ: ಅಖಿಲೇಶ್ ಚಿಪ್ಪಳಿ ಅಂಕಣ

ಅದೊಂದು ೬ನೇ ಕ್ಲಾಸಿನಲ್ಲಿ ಓದುತ್ತಿರುವ ಚುರುಕಾದ ಹೆಣ್ಣುಮಗು. ಆ ದಿನ ಶನಿವಾರ ಗೆಳತಿಯರಿಗೆ ಬೈ ಸೋಮವಾರ ಸಿಗ್ತೀನಿ ಎಂದು ಹೇಳಿ ಮನೆಕಡೆ ನಡಕೊಂಡು ಹೊರಟಿತು. ಹೈವೇಯಿಂದ ಸುಮಾರು ಅರ್ಧ ಕಿ.ಮಿ. ಆಸುಪಾಸಿನಲ್ಲಿ ಮನೆ. ಆ ವಯಸ್ಸಿನ ಮಕ್ಕಳಲ್ಲಿ ವಯೋಸಹಜ ಆಟವಾಡುವ ವಾಂಛೆಯಿರುತ್ತದೆ. ಇಲ್ಲಿ ನೋಡಿದರೆ ಕಣ್ಣುಹಾಯಿಸುವಷ್ಟು ದೂರ ೪೦ ಅಡಿ ಅಗಲದಲ್ಲಿ ಕಪ್ಪನೆಯ ಹೆದ್ದಾರಿ ಮಲಗಿದೆ. ಅದರ ಮೇಲೆ ವೇಗವಾಗಿ ಸಾಗುವ ಕಾರುಗಳು, ದೈತ್ಯ ಲಾರಿಗಳು. ಮಣ್ಣಾಡಲು ರಸ್ತೆಯಲ್ಲಿ ಮಣ್ಣೇ ಇಲ್ಲ. ಇಲ್ಲೊಂದು ಒಳದಾರಿಯಿದೆ, ಮನೆಗೆ ಹತ್ತಿರ … Read more

ಚಿಟ್ಟು ಕುಟುರದ ಮರಿಗಳ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

ಮಲೆನಾಡು ಈಗ ಅಕ್ಷರಶಃ: ಮಳೆನಾಡು. ಹಾಗೆಯೇ ಪ್ರಕೃತಿಯ ಅಚ್ಚರಿಗಳ ಗೂಡು. ಲಕ್ಷಗಟ್ಟಲೆ-ಕೋಟಿಗಟ್ಟಲೆ ಖರ್ಚು ಮಾಡಿ, ಪರಿಸರದಿಂದ ಬಗೆದು ತಂದ ಕಲ್ಲು-ಮರಳು-ಕಬ್ಬಿಣದ ಮಾನವ ನಿರ್ಮಿತ ತಾರಸಿ ಮನೆಗಳು ಧಾರಾಳವಾಗಿ ಸೋರುತ್ತಿವೆ. ಮನೆಯೆಲ್ಲಾ ಥಂಡಿ-ಥಂಡಿ. ಇಂತಹ ಮಳೆಗಾಲದಲ್ಲೂ ಹಕ್ಕಿಗಳು ಒಣ ಎಲೆಯನ್ನು, ಹುಲ್ಲನ್ನು ಎಲ್ಲಿಂದ ಸಂಪಾದಿಸಿ ತರುತ್ತವೆ ಎಂಬುದು ಚಿದಂಬರ ರಹಸ್ಯವೇ ಸೈ. ಸಾಗರ ತಾಲ್ಲೂಕಿನ ಹೊಸೂರಿನಲ್ಲಿ ಒಬ್ಬರ ಮನೆಯ ಹಿತ್ತಲಲ್ಲಿ 3 ಇಂಚು ಅಗಲದ ಪಿ.ವಿ.ಸಿ ಪೈಪೊಂದನ್ನು ಹಿತ್ತಿಲಿನ ಧರೆಗೆ ಆನಿಸಿ ನಿಲ್ಲಿಸಿದ್ದರು. ಅದನ್ನು ಉಪಯೋಗಿಸದೇ ವರ್ಷಗಳೇ ಆಗಿತ್ತು. ಚಿಕ್ಕ … Read more

ಜೀವವಿರೋಧಿ ಕೀಟನಾಶಕಗಳು:ಅಖಿಲೇಶ್ ಚಿಪ್ಪಳಿ ಅಂಕಣ

ಭದ್ರಾವತಿ ಹುಡುಗಿ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಳು. ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಫೇಲ್ ಆಗಿದ್ದಳು. ಸೀದಾ ಕೀಟನಾಶಕಗಳನ್ನು ಮಾರುವ ಅಂಗಡಿಗೆ ಹೋಗಿ ಫಾಲಿಡಾಲ್ ಬಾಟಲಿ ಕೊಡಿ ಎಂದಳು. ಅಂಗಡಿಯವ ಏನು ಎತ್ತ ವಿಚಾರಿಸದೆ ದುಡ್ಡು ಇಸಿದುಕೊಂಡು ಫಾಲಿಡಾಲ್ ಬಾಟಲಿಯನ್ನು ಕೊಟ್ಟ. ನೆಹರು ಮೈದಾನಕ್ಕೆ ಬಂದವಳು ಯಾರಿಗೂ ಕಾಣಬಾರದೆಂದು ಕೊಡೆ ಬಿಡಿಸಿಕೊಂಡು, ಬಾಟಲಿಯ ಮುಚ್ಚಳವನ್ನು ತೆಗೆದು ಗಟ-ಗಟ ಕುಡಿದೇ ಬಿಟ್ಟಳು. ೫ ನಿಮಿಷದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಆಟೋದವನು ನೋಡಿದವನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. … Read more

ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

ಫೋಟೊದಲ್ಲಿರುವ ಊರ್ಧ್ವಮುಖಿ ಯಾರೆಂದು ನಿಮಗೆ ಸುಲಭವಾಗಿ ಅರ್ಥವಾಗಿರಬಹುದು. ಅದೇ ಲೇಖನ ಬರೆಯುವ ಮನುಷ್ಯ – ಅಖಿಲೇಶ್ ಚಿಪ್ಪಳಿ. ಆದರೆ, ಎತ್ತಿಕೊಂಡಿರುವ ಆ ಚಿಕ್ಕ, ಸುಂದರ ಪ್ರಾಣಿ ಯಾವುದೆಂದು ಗೊತ್ತಾ? ಇದರ ಹಿಂದಿನ ಕತೆಯೇ ಈ ವಾರದ ಸರಕು. ವನ್ಯಜೀವಿ ಹತ್ಯೆ ಅಂದರೆ ಪ್ರತಿಷ್ಟಿತ ಬೇಟೆ ಎಂಬ ಅಮಾನವೀಯ ಕಾರ್ಯ ಜನಪ್ರಿಯವಾದ ಕಾಲವೊಂದಿತ್ತು. ರಾಜ-ಮಹಾರಾಜರು ತಮ್ಮ ತಿಕ್ಕಲು ತೆವಲಿಗೋಸ್ಕರ ಕಾಡಿನ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದರು. ರಾಮಾಯಣದಂತಹ ಪುರಾಣ ಗ್ರಂಥಗಳಲ್ಲೂ ಬೇಟೆಯ ಬಗ್ಗೆ ಉಲ್ಲೇಖಗಳಿವೆ. ಸೀತೆ ಬಂಗಾರದ ಜಿಂಕೆ ಬೇಕು … Read more

ಮಳೆ-ಮಳೆ: ಅಖಿಲೇಶ್ ಚಿಪ್ಪಳಿ

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಭಾರಿ ಮಳೆಯನ್ನು ನೋಡದಿರುವ ಈಗಿನ ಯುವಕರು ಇದೇನು ಮಳೆ ಎಂದು ಒಂಥರಾ ತಾತ್ಸಾರ ಮಾಡುತ್ತಾರೆ. ಕಳೆದ ಬಿರುಬೇಸಿಗೆಯಲ್ಲಿ ನೀರಿಗಾಗಿ ಅನುಭವಿಸಿದ ಎಲ್ಲಾ ಕಷ್ಟಗಳನ್ನು ಆರಿದ್ರಾ ಮತ್ತು ಪುನರ್ವಸು ಮಳೆಗಳು ಮರೆಸಿವೆ. ಹೂಳು ತುಂಬಿದ ಡ್ಯಾಂಗಳು ತುಂಬಿದರೆ ನಮಗೆ ಬೊನಸ್ಸು ಸಿಗುತ್ತದೆ ಎಂದು ಕೆ.ಪಿ.ಸಿಯವರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದಾರೆ. ಹೈಸ್ಕೂಲು ಓದಲು 80ರ ದಶಕದಲ್ಲಿ ನಮ್ಮ ಊರಿನಿಂದ ಸಾಗರಕ್ಕೆ ಬರಬೇಕಾಗಿತ್ತು. ಗ್ರಾಮಾಂತರ ಬಸ್ಸುಗಳು ಇರದಿದ್ದ ಆ ಕಾಲದಲ್ಲಿ, ಸೈಕಲ್ಲಿನ ಭಾಗ್ಯವಿಲ್ಲದ ನಾವು ನಡದೇ … Read more

ಕಾಯುವವ-ಕೊಲ್ಲುವವ: ಅಖಿಲೇಶ್ ಚಿಪ್ಪಳಿ

ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಒಂದು ಗಿಡವನ್ನು ನೆಟ್ಟು, ಪೋಷಿಸಿ, ರಕ್ಷಿಸಿ ಮರವಾಗುವತನಕ ನೋಡಿಕೊಳ್ಳುವುದು ತಪಸ್ಸಿನಂತೆ. ಕೊಲ್ಲುವುದಕ್ಕೆ ಒಂದು ಕತ್ತಿಯೇಟು ಸಾಕು. ಹಾಗೆ ಕೆಲಬಾರಿ ಪ್ರಕೃತಿಯಲ್ಲಿ ರಕ್ಷಿಸುವ ಪ್ರಯತ್ನವೂ ವಿಫಲಗೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ನಾವೇ ಕಾರಣವಾಗುವುದು ಇದೆ. ಕಾಯುವ ಪ್ರಯತ್ನದಲ್ಲಿ ಸಫಲಗೊಂಡು ಸಂತೋಷದಿಂದ ಬೀಗಿದ ಘಟನೆಯ ಜೊತೆಗೆ ವಿಫಲಗೊಂಡು ದು:ಖ ಅನುಭವಿಸಿದ ಕತೆಯೂ ಇಲ್ಲಿದೆ. ನಾನು ಕೆಲಸ ಮಾಡುವ ಜಾಗದಲ್ಲಿ ಜನರ ತಿರುಗಾಟ ಹೆಚ್ಚು. ಜೋಡಿ ಪಿಕಳಾರಗಳಿಗೆ ಗೂಡು ಕಟ್ಟಲು ಜಾಗವೊಂದು ಬೇಕು, ಕಾಂಕ್ರೀಟ್ ಕಾಡಿನಲ್ಲಿ ಅವಕ್ಕೆ ಪ್ರಶಸ್ತ … Read more

ಸುಸ್ಥಿರ ಅಭಿವೃದ್ಧಿ-ಕೃಷ್ಣಾ ನದಿ: ಅಖಿಲೇಶ್ ಚಿಪ್ಪಳಿ

ಭರತ ಖಂಡ ಎಂದು ಕರೆಸಿಕೊಂಡ ಸಮಗ್ರ ಭಾರತ ಹಲವಾರು ಸಾರಿ ಛಿದ್ರವಾಯಿತು. ಚೀನಾ ಅತಿಕ್ರಮಿಸಿದರೆ, ಪಾಕಿಸ್ತಾನವನ್ನು ನಾವೇ ಕೊಟ್ಟೆವು. ಇಷ್ಟಾಗ್ಯೂ ನೂರಾರು ನದಿಗಳ ಭವ್ಯ ಪರ್ವತಗಳ, ಗಿರಿ ಶಿಖರಗಳ ನಾಡು. ಹೇರಳ ನೈಸರ್ಗಿಕ ಸಂಪತ್ತಿನ ಬೀಡು ಭಾರತ. ಪ್ರಪಂಚದ ಎಲ್ಲಾ ಖಂಡಗಳಲ್ಲೂ ನಾಗರೀಕತೆ ಅರಳಿದ್ದು, ನದಿಗಳ ದಂಡೆಗಳ ಮೇಲೆ. ಪವಿತ್ರ ಗಂಗಾನದಿ ಅದೆಷ್ಟು ಜನರಿಗೆ ಆಧಾರವಾಗಿದೆ. ಅದೆಷ್ಟು ಆಹಾರ ಧಾನ್ಯವನ್ನು ಇದೇ ನದಿಯ ನೀರನ್ನುಪಯೋಗಿಸಿ ಬೆಳೆಯಲಾಗುತ್ತಿದೆ. ಜನಸಂಖ್ಯೆ ಮತ್ತು ಅಭಿವೃದ್ಧಿಯೆಂಬೆರೆಡು ಗಂಗಾನದಿಗೆ ಕಂಟಕವಾಗಿ ಪರಿಣಮಿಸಿದ್ದೊಂತು ದುರಂತವೇ ಸೈ. … Read more