ಮರಣ ತರುವ ಬಿಸಿಗಾಳಿ!: ಅಖಿಲೇಶ್ ಚಿಪ್ಪಳಿ

ಮೇ ತಿಂಗಳೆಂದರೆ ಎಲ್ಲೆಡೆ ಬಿಸಿಲು-ತೀರಲಾರದ ಬೇಸಿಗೆ. ಮುಂಗಾರು ಶುರುವಾಗುವ ಮುಂಚಿನ ತಿಂಗಳು. ಒಂಥರಾ ಅನಾಹುತಗಳ ತಿಂಗಳು. ಕೆಲವಡೆ ಹಿಂಗಾರಿನ ಹೊಡೆತಕ್ಕೆ ಸಿಕ್ಕು ನಲುಗುವವರು, ಮತ್ತೆ ಕೆಲವೆಡೆ ಬಿಸಿಲಿನ ತಾಪಕ್ಕೆ ಕರಗುವವರು. ಫಸಲು ಕೈಗೆ ಬರುವಷ್ಟರಲ್ಲಿ ವರುಣನ ಅವಕೃಪೆಯಿಂದಾಗಿ ಬೆಳೆ ನಷ್ಟ, ರೈತನ ಇಡೀ ಶ್ರಮ ನೀರಿನಲ್ಲಿ ಹೋಮ. ಪ್ರತಿವರ್ಷ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ. ದಕ್ಷಿಣ ಭಾರತದಲ್ಲೇ ಎರಡು ರೀತಿಯ ನೈಸರ್ಗಿಕ ವಿಕೋಪಗಳ ತಾಂಡವ ನೃತ್ಯ ನಡೆಯಿತು. ಬಳ್ಳಾರಿಯಂತಹ ಬಿರುಬೇಸಿಗೆ ನಾಡಿನಲ್ಲಿ ಆಲಿಕಲ್ಲು ಮಳೆ ಬಂದು ಇಳೆ ಕೊಂಚ … Read more

ಪ್ರಾಣಿಗಳಿಂದ ಪಾಠ ಕಲಿಯುವ ಕಾರ್ಪೋರೇಟ್ ಪ್ರಪಂಚ: ಅಖಿಲೇಶ್ ಚಿಪ್ಪಳಿ

ಬಿರುಬಿಸಿಲಿನ ಈ ದಿನದಲ್ಲಿ ಕಾಗೆಯೊಂದಕ್ಕೆ ಬಾಯಾರಿಕೆಯಾಗಿತ್ತು. ಮಡಿಕೆಯಲ್ಲಿ ಅರ್ಧ ಮಾತ್ರ ನೀರು. ಬುದ್ಧಿವಂತ ಕಾಗೆ ಹತ್ತಿರದಲ್ಲಿದ್ದ ಕಲ್ಲುಗಳನ್ನು ಕೊಕ್ಕಿನಿಂದ ಕಚ್ಚಿಕೊಂಡು ಬಂದು ಮಡಿಕೆಗೆ ಹಾಕುತ್ತದೆ. ಮಡಿಕೆಯಲ್ಲಿದ್ದ ನೀರು ಮೇಲೆ ಬರುತ್ತದೆ. ಕೊಕ್ಕಿನಿಂದ ಆ ನೀರನ್ನು ಹೀರಿ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತದೆ. ಇಂತದೊಂದು ಕತೆಯಿತ್ತು. ಈ ಕತೆ ಕಲ್ಪನೆಯದ್ದೇ ಇರಬಹುದು. ಆದರೂ ನಮ್ಮ ಕಲ್ಪನೆಗೂ ಮೀರಿ ಪ್ರಾಣಿಲೋಕ ತನ್ನ ಮಿತಿಯಲ್ಲಿ ಬುದ್ಧಿವಂತಿಕೆ ತೋರುತ್ತವೆ. ಈಗೀಗ ಕಾರ್ಪೋರೇಟ್ ವಲಯದಲ್ಲಿ ಮ್ಯಾನೇಜ್‍ಮೆಂಟಿನದ್ದೇ ಸವಾಲಾಗಿದೆ. ಒಂದು ಕಂಪನಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವುದು ಪೈಪೋಟಿಯ … Read more

ಸೌರಶಕ್ತಿ v/s ಸೀಮೆಎಣ್ಣೆ: ಅಖಿಲೇಶ್ ಚಿಪ್ಪಳಿ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ, ಗಂಡ-ಅತ್ತೆ-ಮಾವರಿಂದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸೊಸೆಯ ಕೊಲೆ. ಕೊಲೆಗಾರರ ಮೇಲೆ ಪೋಲೀಸರು ವರದಕ್ಷಿಣೆ ಕೇಸು ದಾಖಲಿಸಿಕೊಂಡಿದ್ದಾರೆ ಎಂಬಂತಹ ಸುದ್ಧಿಗಳು ಈಗೊಂದು ಹತ್ತು ವರ್ಷಗಳ ಹಿಂದೆ ಮಾಮೂಲಿಯಾಗಿದ್ದವು. ಸೀಮೆಎಣ್ಣೆ ಮಾಫಿಯಾಗಳು ಮಾಡಿದ ಕೊಲೆಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಸರಕಾರ ಸೀಮೆಎಣ್ಣೆಯನ್ನು ಮುಕ್ತವಾಗಿ ಮಾರುವುದಕ್ಕೆ ನಿಷೇಧ ಹೇರಿದ್ದರಿಂದ ಅಂತೂ ಕೆಲವು ಜೀವಗಳಾದರೂ ಬದುಕಿರಬಹುದು. ಆದರೂ ಉನ್ನತ ಮಟ್ಟದಲ್ಲಿ ಸೀಮೆಎಣ್ಣೆಯ ಬಲುದೊಡ್ಡ ವ್ಯಾಪಾರವಿದೆ. ಹೊರದೇಶಗಳಿಂದ ಬರುವ ಹಡಗಿನ ಪೆಟ್ರೋಲ್ ತುಂಬಿದ ಕಂಟೈನರ್‍ಗಳಿಗೆ ಸೀಮೆಎಣ್ಣೆಯನ್ನು ಮಿಶ್ರಣ ಮಾಫಿಯಾಗಳೂ ಇವತ್ತೂ … Read more

ಹಸುರು ಮುಕ್ತ ಭಾರತ!?: ಅಖಿಲೇಶ್ ಚಿಪ್ಪಳಿ

ಕುವೆಂಪುರವರ ನಾಡಗೀತೆಯಲ್ಲಿ ಕರ್ನಾಟಕದ ನಿಸರ್ಗ ಸಂಪತ್ತಿನ ಕುರಿತಾದ ಮನದಣಿಸುವ ಸಾಲುಗಳಿವೆ ಹಾಗೆಯೇ  ರಾಷ್ಟ್ರಗೀತೆಯಲ್ಲಿಯೂ ವಿಂಧ್ಯ-ಹಿಮಾಚಲ ಯಮುನಾ-ಗಂಗಾ. . . ಇಡೀ ಭಾರತದ ಎಲ್ಲೆಗಳಲ್ಲಿ ಹಬ್ಬಿರುವ ಹಸುರು ಕಾಡುಗಳ, ನದಿ, ಝರಿಗಳ ವರ್ಣನೆಯಿದೆ. ಇರಲಿ, ಈಗ ಹೇಳ ಹೊರಟಿರುವುದಕ್ಕೂ ಈ ಮೇಲೆ ಹೇಳಿದ್ದಕ್ಕೂ ಸಂಬಂಧವಿರುವುದರಿಂದ ಇಲ್ಲಿ ಉದ್ಧರಿಸಬೇಕಾಯಿತು. ಸಂಸತ್ತಿನ ಹೆಬ್ಬಾಗಿಲಿಗೆ ಹಣೆಯಿಟ್ಟು ನಮಸ್ಕರಿಸಿ ಪ್ರವೇಶ ಮಾಡಿ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ದೇಶದ ಪ್ರಧಾನಿ ಮೋದಿ ಮೊದಲು ಮಾಡಿದ ಕೆಲಸವೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರ ಸಂಖ್ಯೆಯನ್ನು 15 … Read more

ಹಮ್ಮಿಂಗ್ ಎಂಬ ನ್ಯಾನೋ ಹಕ್ಕಿ!!!: ಅಖಿಲೇಶ್ ಚಿಪ್ಪಳಿ

ಹೃದಯದ ಬಡಿತ ನಿಮಿಷಕ್ಕೆ ಸರಾಸರಿ 1200 ಇರುವ ಜೀವಿ ಯಾವುದು? ಸೆಕೆಂಡಿಗೆ 80 ರಿಂದ 250 ಬಾರಿ ರೆಕ್ಕೆ ಬಡಿಯುವ ಪಕ್ಷಿ ಯಾವುದು? ತನ್ನ ತೂಕಕ್ಕಿಂತ ಒಂದುವರೆ ಪಟ್ಟು ಆಹಾರ ಸೇವಿಸುವ ಜೀವಿ ಯಾವುದು? ಬರೀ 300 ಮಿಲಿಗ್ರಾಂ ತೂಕದ ಮೊಟ್ಟೆಯಿಡುವ ಹಕ್ಕಿ ಬಗ್ಗೆ ಗೊತ್ತ? ಹೀಗೆ ಮುಗಿಯದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ. ಅದು ಹಮ್ಮಿಂಗ್ ಬರ್ಡ್ ಆಲಿಯಾಸ್ ಝೇಂಕಾರದ ಹಕ್ಕಿ!! ನಮಗೆ ಇದನ್ನು ನೋಡುವ ಭಾಗ್ಯ ಇಲ್ಲ. ಏಕೆಂದರೆ ಭಾರತದಲ್ಲಿ ಇವು ಇಲ್ಲ. ಸಂತೋಷದ … Read more

ಏನಿದು ಮೇಕೆದಾಟು???: ಅಖಿಲೇಶ್ ಚಿಪ್ಪಳಿ

ಕೊಡಗಿನಲ್ಲಿ ಹುಟ್ಟಿದ ಜೀವನಾಡಿ ನದಿ ಕಾವೇರಿಗೆ ಸಂಗಮ ಎಂಬಲ್ಲಿ ಅರ್ಕಾವತಿ ಎಂಬ ಮತ್ತೊಂದು ನದಿ ಸೇರುತ್ತವೆ. ಇಲ್ಲಿಂದ ಜಲಪಾತದೋಪಾದಿಯಲ್ಲಿ ಕಾವೇರಿ ದುಮ್ಮಿಕ್ಕುತ್ತಾಳೆ. ಕಡಿದಾದ ಕಣಿವೆಯಲ್ಲಿ ಸಾಗುವ ಕಾವೇರಿ ಸಂಗಮದಿಂದ ಮೂರುವರೆ ಕಿ.ಮಿ. ಸಾಗುವಷ್ಟರಲ್ಲಿ ಮೇಕೆದಾಟು ಸಿಗುತ್ತದೆ. ಹಿಂದೊಮ್ಮೆ ಹುಲಿಯೊಂದು ಮೇಕೆಯನ್ನು ಹಿಡಿಯಲು ಅಟ್ಟಿಸಿಕೊಂಡು ಬಂತಂತೆ. ಬೆದರಿದ ಮೇಕೆ ಜೋರಾಗಿ ಓಡಿ ಬಂದು ಜೀವವುಳಿಸಿಕೊಳ್ಳಲು ನದಿಯ ಈ ದಡದಿಂದ ಆ ದಡಕ್ಕೆ ಜಿಗಿಯಿತಂತೆ, ಹುಲಿಗೆ ಹಾರಲು ಸಾಧ್ಯವಾಗಲಿಲ್ಲ. ಇಲ್ಲಿ ಮೇಕೆಯ ಶೌರ್ಯವನ್ನು ಹೊಗಳಲು ಈ ಪ್ರದೇಶಕ್ಕೆ ಮೇಕೆದಾಟು ಎಂದು … Read more

ಕಾಡ ಹಾಡು: ಅಖಿಲೇಶ್ ಚಿಪ್ಪಳಿ

ಎ ಫಾರ್ ಆಪಲ್ ಯಾಕೆ ಅನಿಮಲ್ ಯಾಕಲ್ಲ? ಲಕ್ಷಗಟ್ಟಲೇ ಡೊನೇಷನ್ ತೆತ್ತು, ಅಸಾಧಾರಣವಾದ ಇಂಟರ್‍ಯೂನ ಎದುರಿಸಿ ಪುಟ್ಟಿಗೊಂದು ಸೀಟುಕೊಡಿಸಿ ನಿರಾಳವಾಗುವಂತಿಲ್ಲ. ಕ್ಲಾಸಿಗೆ ಮೊದಲಾಗಿ ಬರಬೇಕು, ಇದು ಎಲ್ಲಾ ತಂದೆ-ತಾಯಿಗಳ ಇಚ್ಛೆ. ಎಲ್.ಕೆ.ಜಿ.ಯಿಂದಲೇ ಟ್ಯೂಷನ್ ಶುರು. ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ  ಮುಂದಿರಬೇಕು. ಬಹುತೇಕ ಖಾಸಗಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇದೇ ನಿಯಮವಿದೆ. ಖಾಸಗಿ ಶಾಲೆಗಳು ಈ ಅಲಿಖಿತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಶಸ್ಸುಗಳಿಸುತ್ತಾರೆ. ಪಾಪ ಸರ್ಕಾರಿ ಶಾಲೆಗಳ ಶಿಕ್ಷಕರನ್ನೂ ಸರ್ಕಾರ ಎಲ್ಲಾ ಕೆಲಸಗಳಿಗೂ ಬಳಸಿಕೊಳ್ಳುತ್ತದೆಯಾದ್ದರಿಂದ ಈ ನಿಯಮವನ್ನು … Read more

ಅಲ್ಲಿ ಮಾವಿಗೆ ಮರಣದಂಡನೆ – ಇಲ್ಲಿ ಕಾಡೆಮ್ಮೆ ಕರುವಿನ ದುರಂತ: ಅಖಿಲೇಶ್ ಚಿಪ್ಪಳಿ

ನೈಸರ್ಗಿಕ ಸಂಪತ್ತನ್ನು ಬರಿದು ಮಾಡಲು ಯಾರೆಲ್ಲಾ, ಏನೆಲ್ಲಾ ದಾರಿಗಳನ್ನು ಹುಡುಕುತ್ತಾರೆ. ಪಶ್ಚಿಮಘಟ್ಟಗಳ ಕಾಡನ್ನು ಬರಿದು ಮಾಡಲಾಗಿದೆ. ಅಳಿದುಳಿದ ಅರಣ್ಯವನ್ನು ನುಂಗಿ ನೊಣೆಯುವ ಹಂತಕ್ಕೆ ಸರ್ಕಾರವೇ ಬಂದು ನಿಂತಿದೆ. ನಮ್ಮ ಘನ ಸರ್ಕಾರ ಒಂದು ಆದೇಶವನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, ನೀಲಗಿರಿ, ಅಕೇಶಿಯಾದ ಕೆಲವು ತಳಿಗಳು, ಅಡಕೆ-ತೆಂಗಿನ ಮರಗಳು, ನಿಂಬೆ-ಪೇರಳೆ ಗಿಡ, ಕಾಫಿ ಗಿಡ, ಹಳದಿ ಬಿದಿರು, ಹೆಬ್ಬೇವು, ಶಮೆಗಳ ಹೀಗೆ ಒಟ್ಟು 26 ಗಿಡ-ಮರಗಳಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದರಿಂದ ವಿನಾಯತಿ ನೀಡಲಾಗಿದೆ. ಅಂದರೆ, ಅರಣ್ಯ … Read more

ಪರಿಸರದ ವಿರುದ್ಧ ಜಾಗತಿಕ ಯುದ್ಧ: ಅಖಿಲೇಶ್ ಚಿಪ್ಪಳಿ

ಕೊಡಲಿಯೊಂದು ತಾನಾಗಿಯೇ ಹೋಗಿ ಯಾವುದೇ ಮರವನ್ನು ಕಡಿದ ದಾಖಲೆಯಿಲ್ಲ. ಆದರೆ, ಬೀಜವೊಂದು ತಾನಾಗಿಯೇ ಮಣ್ಣಿನಲ್ಲಿ ಸೇರಿ, ಮರುಹುಟ್ಟು ಪಡೆದ ದಾಖಲೆಗಳು ಎಲ್ಲೆಂದರಲ್ಲಿ ಸಿಗುತ್ತದೆ. ಅಂದರೆ, ನಾಶ ಮಾಡಲು ಪ್ರೇರಕ ಶಕ್ತಿ ಬೇಕು. ಹುಟ್ಟು-ಮರುಹುಟ್ಟು ಈ ಪ್ರಕ್ರಿಯೆ ನಿಸರ್ಗದಲ್ಲಿ ತನ್ನಿಂದ ತಾನೇ ಸಂಭವಿಸುತ್ತದೆ. ಬಿಲ್ಲು-ಬಾಣಗಳು ಖುದ್ದು ಹೋಗಿ ಬೇಟೆಯಾಡುವುದಿಲ್ಲ. ಬಂದೂಕಿನಿಂದ ಗುಂಡು ತಾನಾಗಿಯೇ ಸಿಡಿಯುವುದಿಲ್ಲ. ಇದಕ್ಕೆ ಇನ್ನೊಬ್ಬರ ಸಹಾಯ ಬೇಕು, ಗುರಿ ಇರಬೇಕು, ಶ್ರಮ ಬೇಕು. ಪ್ರಕೃತಿಯ ಸೃಷ್ಟಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗಳಿಗೆ ಶ್ರಮ ಬೇಕಿಲ್ಲ. ಅಡಚಣೆ-ಅಪಾಯಗಳಿಲ್ಲದಿದ್ದರೆ, ನಿಸರ್ಗದಲ್ಲಿ … Read more

ಮೋವ: ಅಖಿಲೇಶ್ ಚಿಪ್ಪಳಿ

    ಆಕಾಶದಿಂದ ೮೦ ಕಿ.ಮಿ. ವೇಗದಲ್ಲಿ ಇಳಿದು ತನ್ನ ಬಲಿಷ್ಟವಾದ ಕೊಕ್ಕಿನಿಂದ ಹದಿನೈದಡಿ ಎತ್ತರದ ಗಿಡದ ಎಲೆಗಳನ್ನು ಮೇಯುತ್ತಿದ್ದ ೧೨ ಅಡಿ ಎತ್ತರದ ದೈತ್ಯ ಪಕ್ಷಿಯ ಹಿಂಭಾಗಕ್ಕೆ ಬಲವಾಗಿ ಕುಕ್ಕುತ್ತದೆ. ೮ನೇ ಮಹಡಿಯಿಂದ ಬೀಳುವ ಬೂದಿಯ ಇಟ್ಟಿಗೆಯಷ್ಟು ವೇಗವಾಗಿ ಅಪ್ಪಳಿಸಿದ ಹೊಡೆದಕ್ಕೆ ದೈತ್ಯ ಪಕ್ಷಿ ಧರಾಶಾಯಿಯಾಗುತ್ತದೆ. ಮಾರಣಾಂತಿಕವಾದ ಗಾಯದಿಂದ ರಕ್ತ ಬಸಿದು, ಬಲಿ ಅಸುನೀಗುತ್ತದೆ. ಬಲಿಗಿಂತ ಸುಮಾರು ೧೫-೨೦ ಪಟ್ಟು ಚಿಕ್ಕದಿರುವ ಹಾಸ್ತಸ್ ಎಂಬ ಹೆಸರಿನ ಗಿಡುಗಕ್ಕೆ ಮುಂದಿನ ಒಂದು ವಾರ ಬೇರೆ ಬೇಟೆ ಬೇಕಿಲ್ಲ. … Read more

೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ

ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, … Read more

ಕಾ. ಕಾ.. ಕಾಗೆ. . . ನೀ ಏಕೆ ಹೀಗೆ?: ಅಖಿಲೇಶ್ ಚಿಪ್ಪಳಿ

ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ.  ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೧೦): ಅಖಿಲೇಶ್ ಚಿಪ್ಪಳಿ

(ಕೊನೆಯ ಕಂತು) ಈ ಲೇಖನ ಮಾಲೆಯಲ್ಲಿ ಎರಡೂ ವರದಿಯ ಹಲವು ವಿಚಾರಗಳನ್ನು ವಿವರವಾಗಿ ನೋಡಲಾಗಿದೆ. ಪಶ್ಚಿಮಘಟ್ಟಗಳಲ್ಲಿ ವಾಸಿಸುವ ಜನರಿಗೆ ವರದಿಯ ಪ್ರಾಮಾಣಿಕ ನೋಟ ಬೇಕಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು, ಹೂಡಿಕೆದಾರರು ಹಾಗೂ ರಾಜಕಾರಣಿಗಳು ಸೇರಿಕೊಂಡು ವರದಿಯನ್ನು ತಿರುಚಿ ಜನರನ್ನು ತಪ್ಪ ದಾರಿಗೆ ಎಳೆಯುತ್ತಿದ್ದಾರೆ. ದೂರದೃಷ್ಟಿಯಿಂದ ಯೋಚಿಸುವುದಾದರೆ, ಮಾಧವ ಗಾಡ್ಗಿಳ್ ವರದಿಯು ಹೆಚ್ಚು ಜನಸ್ನೇಹಿ ಹಾಗೂ ಪರಿಸರಸ್ನೇಹಿಯಾಗಿದೆ. ಮಾಧವ ಗಾಡ್ಗಿಳ್ ವರದಿಗೆ ವ್ಯಾಪಕ ವಿರೋಧ ಎದುರಾಗಿದ್ದರಿಂದ, ಈ ವರದಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಜನಸ್ನೇಹಿ ಹಾಗೂ ಪರಿಸರಸ್ನೇಹಿಗೊಳಿಸುವ ಅಂಶಗಳನ್ನು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೯): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಕರ್ನಾಟಕದ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಗುಂಡ್ಯ ನದಿಗೆ ಅಡ್ಡಡ್ಡಲಾಗಿ ಆಣೆಕಟ್ಟು ಕಟ್ಟುವ ಪ್ರಸ್ತಾವನೆಯನ್ನು  ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆ.ಪಿ.ಸಿ.ಎಲ್) ಹೊಂದಿದೆ. ಮೂರು ಹಂತಗಳಲ್ಲಿ ೨೦೦ ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಿದ್ಧಪಡಿಸಿದೆ. ಮೊದಲನೇ ಹಂತವಾಗಿ ಎತ್ತಿನಹೊಳೆ, ಕೇರಿಹೊಳೆ, ಹೊಂಗದಹಳ್ಳ ಮತ್ತು ಬೆಟ್ಟಕುಮಾರಿ ಹರಿವಿನ ನೀರನ್ನು ಬಳಸುವುದು, ಇದರಲ್ಲಿ ನೀರು ಸಂಗ್ರಹಣೆಗಾಗಿ ೧೭೮.೫ ಚ.ಕಿ.ಮಿ ವಿಸ್ತೀರ್ಣ ಮುಳುಗಡೆಯಾಗುತ್ತದೆ. ಹಾಗೆಯೇ ಎರಡನೇ ಹಂತದಲ್ಲಿ ಕುಮಾರಧಾರಾ ಮತ್ತು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೮): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಈ ವರದಿಯು ಇಎಸ್‌ಝಡ್೧ರಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುವುದನ್ನು ನಿರಾಕರಿಸುತ್ತದೆ. ಕರ್ನಾಟಕ ಪವರ್ ಕಾರ್ಪೊರೇಷನ್‌ನವರು ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ೮೦% ಕಡಿಮೆ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಗದಹಳ್ಳ ಆಣೆಕಟ್ಟು ಕಟ್ಟುವುದನ್ನು ಕೈ ಬಿಡಲಿದೆ. ಆದಾಗ್ಯೂ ಬೆಟ್ಟದ ಕುಮರಿ ಪ್ರದೇಶವೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಹೀಗೆಯೇ ಅತಿರಪಳ್ಳಿ ಜಲವಿದ್ಯುತ್ ಯೋಜನೆಯ ವ್ಯಾಪ್ತಿಯೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಇದರಿಂದಾಗಿ ವರದಿಯು ಕೇಂದ್ರ ಪರಿಸರ ಇಲಾಖೆಗೆ ಯಾವುದೇ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೭): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಉದ್ದೇಶಿತ ಜನವಸತಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆ: ತಮಿಳುನಾಡು: ವಾಲ್‌ಪರಿ, ಕೊಡೈಕೆನಾಲ್ ಮತ್ತು ನೀಲಗಿರಿ ಜಿಲ್ಲೆ ಕೇರಳ: ಮಂಡಕೋಲ್, ಪನತಾಡಿ, ಪೈತಾಲ್‌ಮಾಲ, ಬ್ರಹ್ಮಗಿರಿ-ತಿರುನೇಲಿ, ವಯನಾಡ್, ಬನಸುರ-ಕುಟ್ಟಿಯಾಡಿ, ನೀಲಂಬರ್-ಮೇಪಾಡಿ, ಸೈಲೆಂಟ್‌ವ್ಯಾಲಿ, ಅಮರಂಬಲಂ, ಸಿರುವಾಣಿ, ನೀಲಂಪತೈ, ಅತ್ರಿಪಳ್ಳಿ, ಕಾರ್ಡ್‌ಮಮ್ ಹಿಲ್ಸ್, ಪೆರಿಯಾರ್, ಅಗಸ್ತ್ಯಮಾಲ. ಆರು ರಾಜ್ಯಗಳ ವಿವಿಧ ಜಿಲ್ಲೆಗಳ ತಾಲ್ಲೂಕುವಾರು ಪ್ರಸ್ತಾವಿತ ಸೂಕ್ಷ್ಮಪ್ರದೇಶಗಳ ಪಟ್ಟಿ ರಾಜ್ಯ ಜಿಲ್ಲೆ ತಾಲ್ಲೂಕು ಇಎಸ್‌ಝಡ್1 ತಾಲ್ಲೂಕು ಇಎಸ್‌ಝಡ್2 ತಾಲ್ಲೂಕು ಇಎಸ್‌ಝಡ್3 ಗುಜರಾತ್ 3 1 1 … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೬): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸೂಕ್ಷ್ಮ ಪ್ರದೇಶಗಳು: ಪರಿಸರ ಸಂರಕ್ಷಣಾ ಕಾಯ್ದೆ ೧೯೮೬ ಕಲಂ ೩ರಂತೆ,  ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ನೀಡಿದೆ. ಈ ಕಾಯ್ದೆಯ ಪ್ರಕಾರ ಕೇಂದ್ರವು ಪರಿಸರವನ್ನು ಕಲುಷಿತಗೊಳಿಸುವ ಎಲ್ಲಾ ತರಹದ ಕಾರ್ಖಾನೆಗಳ ಸ್ಥಾಪನೆಯನ್ನು ತಡೆಯುವುದು ಮತ್ತು ಈಗಾಗಲೇ ಪ್ರಾರಂಭಿಸಲಾಗಿರುವ ಕಾರ್ಖಾನೆಗಳಿಗೆ ನಿಷೇಧ ಹೇರುವ ಅಧಿಕಾರವಿದೆ ಅಥವಾ ಕಟ್ಟುನಿಟ್ಟಾದ ಎಚ್ಚರಿಕೆ ಕ್ರಮಕೈಗೊಳ್ಳಲು ನಿರ್ದೇಶಿಸಬಹುದಾಗಿದೆ. ಕಲಂ ೫(೧)ರಂತೆ ಜೀವಿವೈವಿಧ್ಯ ನಾಶವಾಗುವಂತಹ ಕಾರ್ಖಾನೆಗಳಿಗೂ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೫): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಸುಸ್ಥಿರ ಅಭಿವೃದ್ಧಿ-ಚಿಂತನಾಯುಕ್ತ ಸಂರಕ್ಷಣೆ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೇದ್ ತಾಲ್ಲೂಕಿನಲ್ಲಿ ಮಹಾರಾಷ್ಟ್ರ ಕೈಗಾರಿಕ ಅಭಿವೃದ್ದಿ ನಿಗಮವಿದೆ. ಇಲ್ಲಿ ಭರಪೂರ ರಾಸಾಯನಿಕ ಕೈಗಾರಿಕೆಗಳಿವೆ. ನೆರೋಲ್ಯಾಕ್, ಹಿಂದೂಸ್ತಾನ್ ಲಿವರ್, ರತ್ನಗಿರಿ ಕೆಮಿಕಲ್ಸ್ ಹೀಗೆ ಹತ್ತು ಹಲವು ವಿಷಕಕ್ಕುವ ಕಾರ್ಖಾನೆಗಳಿವೆ. ಈ ತರಹದ ಕಾರ್ಖಾನೆಗಳಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಿರಲೆಂದು ಅಲ್ಲಿನ ಸರ್ಕಾರ ೨೦೦೬ರಲ್ಲಿ ಲೋಟೆ ಅಭ್ಯಾಸ್ ಗಾತ್ ಎಂಬ ಕಾರ್ಖಾನೆಗಳ ಮೇಲ್ವಿಚಾರಣೆ ಅಧ್ಯಯನ ತಂಡವನ್ನು ರಚಿಸಿತು. ಈ ಸಮಿತಿಯು ಕಾಲ-ಕಾಲಕ್ಕೆ ತನ್ನ ವರದಿಯನ್ನು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೪): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಪಶ್ಚಿಮಘಟ್ಟಗಳ ಮಹತ್ವವನ್ನು ಅರಿಯಬೇಕಾದರೆ ಈ ಕೆಳಗಿನ ಕೆಲ ಅಂಕಿ-ಅಂಶಗಳನ್ನು ಗಮನಿಸಬೇಕು. ಭಾರತಾದ್ಯಂತ ಕಂಡು ಬರುವ ೪೦೦೦ ಜಾತಿಯ ಪುಷ್ಪವೈವಿಧ್ಯದಲ್ಲಿ ೧೦೮೦ ಜಾತಿಗಳು ಈ ಘಟ್ಟಪ್ರದೇಶದಲ್ಲಿವೆ. ದೇಶದಲ್ಲಿರುವ ೬೪೫ ನಿತ್ಯಹರಿಧ್ವರಣ ಜಾತಿಯ ಮರಗಳಲ್ಲಿ ೩೬೨ ಜಾತಿಯ ಮರಗಳು ಇಲ್ಲಿವೆ. ೧೦೦೦ ಜಾತಿಯ ನೆಲಮಟ್ಟದ ಪೊದೆ-ಬಳ್ಳಿಗಳ ಪ್ರಬೇಧಗಳಲ್ಲಿ ೬೮೨ ಪ್ರಭೇದಗಳು ಘಟ್ಟಗಳಲ್ಲಿವೆ ಹಾಗೂ ಇದರಲ್ಲಿ ೨೮೦ ಪ್ರಬೇಧಗಳು ಪಶ್ಚಿಮಘಟ್ಟಗಳಲ್ಲಿ ಮಾತ್ರ ಲಭ್ಯವಿದೆ. ಅಕಶೇರುಕ ಪ್ರಬೇಧಗಳ ಒಟ್ಟು ೩೫೦ರಲ್ಲಿ ೭೦ ಪ್ರಬೇಧಗಳು ಪ್ರಪಂಚದ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೩: ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . (ಮಾಧವ ಗಾಡ್ಗಿಳ್ ವರದಿಯು ೫೭೨ ಪುಟಗಳನ್ನು ಹೊಂದಿದ್ದು, ಅದೇ ಕಸ್ತೂರಿರಂಗನ್ ವರದಿಯು ಬರೀ ೧೫೨ ಪುಟಗಳನ್ನು ಹೊಂದಿದೆಯಾದ್ದರಿಂದ, ಮಾಧವ ಗಾಡ್ಗಿಳ್ ವರದಿಯು ವಿಸೃತವಾಗಿ ವ್ಯಾಖ್ಯಾನಿಸಿದಂತೆ ತೋರಬಹುದು, ಮಾಹಿತಿಗಳ ಅಗಾಧ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಓದುಗರು ಸಹಕರಿಸಬೇಕು) ಬೆಂಗಳೂರಿನಲ್ಲಿ ೩೦ನೇ ಮಾರ್ಚ್ ೨೦೧೦ರಂದು ನಡೆದ ಸಭೆಯ ನಂತರದಲ್ಲಿ ಪ್ರೊ:ಮಾಧವ ಗಾಡ್ಗಿಳ್ ಸಮಿತಿ ರಚನೆಯಾಯಿತು. ನಂತರದಲ್ಲಿ ಈ ಸಮಿತಿಯು ೧೪ ಸಭೆಗಳನ್ನು ನಡೆಸಿ ನಿರ್ಣಾಯಕ ಸಭೆಯನ್ನು ೧೬-೧೭ ಆಗಸ್ಟ್ ೨೦೧೧ರಂದು ನಡೆಸಿತು. ಇದಕ್ಕೂ ಪೂರ್ವದಲ್ಲಿ ವಿವಿಧ ಸರ್ಕಾರಿ … Read more