ಕರಿಸುಂದರಿಯ ಕಿರಿಗೂಡು-2: ಅಖಿಲೇಶ್ ಚಿಪ್ಪಳಿ

ಕರಿಸುಂದರಿಯ ಕಿರಿಗೂಡು-1 [ಎರಡು ವಾರದ ಹಿಂದೆ ಬರೆದಿದ್ದ ಈ ಸತ್ಯಕಥೆಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇದ್ದುದ್ದರಿಂದ, ನಂತರದಲ್ಲಿ ನಡೆದ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿದ್ದರೆ, ಪ್ರಪಂಚ ಸುಲಲಿತವಾಗಿಯೇ ಇರುತ್ತಿತ್ತೇನೋ. ಇಲ್ಲಿ ಪುಟ್ಟ ಕಣಜವೊಂದು ತನ್ನ ವಂಶಾಭಿವೃದ್ಧಿಯ ಪ್ರಯತ್ನದಲ್ಲಿದ್ದಾಗಲೇ, ದೂರದ ಅಸ್ಸಾಂನಲ್ಲಿ ಮಾನವನ ಶೋಕಿಗಾಗಿ ಒಂದು ಅಪ್ರಿಯ ಘಟನೆ ನಡೆಯಿತು. ಜೀವಜಾಲದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ]    ತನ್ನ ಗೂಡಿಗೆ ಲಪ್ಪ ಹಾಕಿ ಮೆತ್ತಿದಂತೆ, ಜೇಡಿ ಮಣ್ಣನ್ನು ಮೆತ್ತಿ ಹೋದ ಕಪ್ಪು … Read more

ಸುಜಿಯೆಂಬ ಕುರುಡಾನೆಯ ಬಿಡುಗಡೆ!: ಅಖಿಲೇಶ್ ಚಿಪ್ಪಳಿ

[ಮಾನವನ ಮನೋವಿಕಾರಗಳಿಗೆ ಎಣೆಯಿಲ್ಲ. ಮನುಷ್ಯರನ್ನೇ ಗುಲಾಮರನ್ನಾಗಿಸಿ, ಚಿತ್ರಹಿಂಸೆ ನೀಡಿ ದುಡಿಸಿಕೊಂಡಿರುವ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅನೇಕ ತರಹದ ರಕ್ತಪಾತ, ಹೋರಾಟ, ಪ್ರತಿರೋಧಗಳಿಂದಾಗಿ ಜಗತ್ತಿನ ಹಲವು ಭಾಗಗಳಲ್ಲಿ ಮಾನವ ಗುಲಾಮಗಿರಿ ಎಂಬ ಅಮಾನುಷ ಕೃತ್ಯ ಹೆಚ್ಚು ಕಡಿಮೆ ಅಳಿದುಹೋಗಿದ್ದರೂ, ನಾಗರೀಕ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ ಈ ಹೇಯ ಕೃತ್ಯ ಇನ್ನೂ ಉಳಿದುಕೊಂಡಿದೆ. ಜೀತ ಪದ್ಧತಿಯೆಂದು ನಮ್ಮಲ್ಲಿ ಕರೆಯಲಾಗುವ ಕೆಲವು ಘಟನೆಗಳನ್ನು ದಿನಪತ್ರಿಕೆಗಳಲ್ಲಿ ನಾವಿನ್ನೂ ಓದುತ್ತಿದ್ದೇವೆ. ಇದೇ ನಾಗರೀಕ ಸಮಾಜ ತನ್ನ ಮನರಂಜನೆಗಾಗಿ ಪ್ರಾಣಿಗಳನ್ನು ಪಳಗಿಸಿ ಗುಲಾಮಿತನಕ್ಕೆ … Read more

ಕಪ್ಪುಸುಂದರಿಯ ಕಿರಿಗೂಡು!!: ಅಖಿಲೇಶ್ ಚಿಪ್ಪಳಿ

ಅನಿವಾರ್ಯ ಕಾರಣಗಳಿಂದಾಗಿ ಮನೆಯಿಂದ ಹೊರಗೆ ಕಾಲಿಡದೇ ವಾರದ ಮೇಲಾಗಿತ್ತು. ಮನೆಯಲ್ಲಿ ಇದ್ದ-ಬದ್ದ ಪುಸ್ತಕಗಳೆಲ್ಲಾ ಓದಿ ಮುಗಿದವು. ಈಡಿಯಟ್ ಪೆಟ್ಟಿಗೆ ವೀಕ್ಷಿಸಲು ವಿದ್ಯುಚ್ಛಕ್ತಿ ಭಾಗ್ಯವಿಲ್ಲವಾಗಿತ್ತು. ಮಳೆಯಿಲ್ಲದ ಮಳೆಗಾಲದಲ್ಲೆ ಬಿರುಬೇಸಿಗೆಗಿಂತ ಸುಡುವ ಬಿಸಿಲು. ಆಕಾಶ, ಗಾಳಿ, ನೆಲವೆಲ್ಲಾ ಬಿಸಿಯ ಝಳದಿಂದ ಕಾದು ಬೆಂದು ಹೋಗಿದ್ದವು. ಮಾಡಲು ಕೆಲಸವಿಲ್ಲದಿದ್ದಾಗ ಸಮಯದ ಸೆಕೆಂಡಿನ ಮುಳ್ಳು ನಿಧಾನಕ್ಕೇ ಚಲಿಸುತ್ತದೆ. ಅದರಲ್ಲೂ ಈ ತರಹದ ವ್ಯತಿರಿಕ್ತ ವಾತಾವರಣ ಮಾನಸಿಕ ಆರೋಗ್ಯವನ್ನೇ ತಿಂದು ಬಿಡುತ್ತದೆ. ಲವಲವಿಕೆಯಿಲ್ಲದೇ ಮರದ ಕೊರಡಿನಂತೆ ಬಿದ್ದುಕೊಂಡಿದ್ದವನಿಗೆ, ಕಾಲಬುಡದಲ್ಲೊಂದು ಹೆಜ್ಜೇನಿಗಿಂತ ಕೊಂಚ ದೊಡ್ಡದಾದ ಕರೀ … Read more

ಮಂಕಿ ಬ್ಯುಸಿನೆಸ್: ಅಖಿಲೇಶ್ ಚಿಪ್ಪಳಿ

ಮಂಗಳೂರಿನ 800 ಜನ ರೈತರು ಮಂಗಗಳ ಕಾಟದಿಂದ ಬೇಸತ್ತು 2012ರಿಂದ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಂಗನ ಕಡಿತಕ್ಕೆ ಪರಿಹಾರ ನೀಡುವ ಏಕೈಕ ರಾಜ್ಯ ಉತ್ತರಾಖಂಡ. ಜಮ್ಮು ಜಿಲ್ಲೆಯಲ್ಲಿ ಪ್ರತಿವರ್ಷ 33 ಕೋಟಿ ರೂಪಾಯಿ ಮೊತ್ತದ ಬೆಳೆ ನಾಶ ಮಂಗಗಳಿಂದ. ಹಿಮಾಚಲ ಪ್ರದೇಶದಲ್ಲಿ ಪ್ರತಿವರ್ಷ ಮಂಗಗಳಿಂದ ಆಗುವ ಬೆಳೆ ಹಾನಿ ಮೊತ್ತ 500 ಕೋಟಿ ರೂಪಾಯಿಗಳು. ಮಂಗಗಳ ವಿರುದ್ಧ ಸೆಣೆಸಲು ಆಗ್ರಾ ಸಿಟಿ ಡೆವಲಪ್‍ಮೆಂಟ್ ಅಥಾರಿಟಿ ಪ್ರತಿವರ್ಷ ಖರ್ಚು ಮಾಡುವ ಹಣದ ಮೊತ್ತ 2 ಕೋಟಿ ರೂಪಾಯಿಗಳು. ದೇಶದ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ– 7: ಅಖಿಲೇಶ್ ಚಿಪ್ಪಳಿ

ಕೊನೆಯ ಕಂತು: ವಸ್ತುಗಳು ಇವತ್ತು ಜನರನ್ನು ಆಳುತ್ತಿವೆ. ಟಿ.ವಿ.ಯಲ್ಲಿ ಬರುವ ಪ್ರತಿಯೊಂದು ವಸ್ತುವೂ ಮನುಷ್ಯನಿಗೆ ಅತಿ ಅಗತ್ಯ ಎಂದು ಬಿಂಬಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಯಂತ್ರಗಳ ಬಳಕೆ ಶುರುವಾಗಿದೆ. ನಿಮ್ಮಲ್ಲಿ ವಾಶಿಂಗ್ ಮಷಿನ್ ಇಲ್ಲ ಅಂದರೆ ನಿಮ್ಮ ಸಾಮಾಜಿಕ ಸ್ತರದಲ್ಲಿ ಒಂದು ಮೆಟ್ಟಿಲು ಕಡಿಮೆಯಾಗುತ್ತದೆ. ಯಂತ್ರಗಳ ಸಂಖ್ಯೆ ನಿಮ್ಮ ಮನೆಯಲ್ಲಿ ಹೆಚ್ಚು-ಹೆಚ್ಚು ಇದ್ದ ಹಾಗೆ ನಿಮ್ಮ ಸಾಮಾಜಿಕ ಸ್ತರ ಸದಾ ಮೇಲ್ಮುಖಿಯಾಗಿಯೇ ಇರುತ್ತದೆ. ಹವಾಮಾನ ಬದಲಾವಣೆಗೂ ಹಾಗೂ ವೈಯಕ್ತಿಕ ಬದುಕಿಗೂ ನೇರ ಸಂಬಂಧವಿದೆ. ನಿಮ್ಮ ಜೀವನಶೈಲಿಯ ಬದಲಾವಣೆಯಿಂದಾಗಿ ನೀವೊಬ್ಬ ಪರಿಸರಸ್ನೇಹಿ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ – 6: ಅಖಿಲೇಶ್ ಚಿಪ್ಪಳಿ

ಸರ್ಕಾರಗಳು ಏನು ಮಾಡುತ್ತಿವೆ? ಹೃದಯಾಘಾತಗೊಂಡ ಮನುಷ್ಯ, ನಾಳೆಯಿಂದ ನಾನು ನನ್ನ ಬಿರ್ಯಾನಿಯಲ್ಲಿ ಕಡಿಮೆ ಎಣ್ಣೆ ಉಪಯೋಗಿಸುತ್ತೇನೆ ಎಂಬಂತ ಮಾತುಗಳನ್ನು ಭಾರತ ಸರ್ಕಾರ ಆಡುತ್ತಿದೆ. ವಾತಾವರಣಕ್ಕೆ ಸೇರುವ ಸಿತ್ಯಾಜ್ಯದ ತಲಾವಾರು ಪ್ರಮಾಣವನ್ನು 2020ರ ವೇಳೆಗೆ ಶೇ.25% ತಗ್ಗಿಸುತ್ತೇವೆ (ಮಿಟಿಗೇಶನ್) ಎಂಬುದು ಭಾರತದ ಹೇಳಿಕೆಯಾಗಿದೆ. ಆದಾಗ್ಯೂ ಹವಾಗುಣ ವೈಪರೀತ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಅನೇಕ ಸಂW-ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಇವೆಲ್ಲವೂ ಶೈಕ್ಷಣಿಕ ಸಂಬಂಧಿ ವಾರ್ಷಿಕವಾದ ಫಲಿತಾಂಶದ ಹಂತದಲ್ಲೇ ಇವೆ. ಕಾಣಬಹುದಾದ ತಳಮಟ್ಟದ ಕೆಲವು ಕೆಲಸಗಳೆಂದರೆ, ಗ್ರಾಮೀಣ ಪ್ರದೇಶದ ಸಣ್ಣ ರೈತರ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-5: ಅಖಿಲೇಶ್ ಚಿಪ್ಪಳಿ

[ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ:ಭಾಗ-4: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ (ಭಾಗ-3): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ ಭಾಗ – 2: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ: ಅಖಿಲೇಶ್ ಚಿಪ್ಪಳಿ

ಶ್ರೀ ನಾಗರಾಜ್ ಅಡ್ವೆಯವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು ಬರೆದ ಕಿರುಪುಸ್ತಕದ ಭಾವಾನುವಾದವನ್ನು ನೀಡಲಾಗಿದೆ. ಗುಜರಾತಿನಲ್ಲಿ ಏನು ಹೇಳಿದರು? ಮೂರು ವರ್ಷಗಳ ಹಿಂದೆ ಪೂರ್ವ ಗುಜರಾತಿ ಮೆಕ್ಕೆಜೋಳ ಬೆಳೆಯುವ ರೈತರನ್ನು ಮಾತನಾಡಿಸಲಾಯಿತು. ಕೆಲವು ವರ್ಷಗಳಿಂದ ಬಿಸಿಯಾಗುತ್ತಿರುವ ಚಳಿಗಾಲದಿಂದಾಗಿ, ಅಲ್ಲಿ ಇಬ್ಬನಿ ಬೀಳುವುದು ತೀವ್ರವಾಗಿ ಕಡಿಮೆಯಾಗಿದೆ. ಅತ್ಯಂತ ಕಡಿಮೆ ನೀರು … Read more

ಕ್ಯಾನ್ಸರ್ ಟ್ರೇನ್ – ಭಟಿಂಡಾ ಟೂ ಬಿಕನೇರ್: ಅಖಿಲೇಶ್ ಚಿಪ್ಪಳಿ

ಗೋಧಿಯ ಕಣಜವಾದ ಪಂಜಾಬ್ ರಾಜ್ಯದ ಕ್ಯಾನ್ಸರ್ ಟ್ರೇನ್ ಕತೆ ಗೊತ್ತಿರಬಹುದು. ಆದರೂ ಕೊಂಚದಲ್ಲಿ ಹೇಳಿಬಿಡುತ್ತೇನೆ. ನಮ್ಮಲ್ಲಿ ಹೇಗೆ ಅಕ್ಕಿ ಮುಖ್ಯ ಆಹಾರವೋ ಹಾಗೆ ಉತ್ತರ ಭಾರತದಲ್ಲಿ ಗೋಧಿ ಮುಖ್ಯ ಆಹಾರ. ಅಲ್ಲಿ ಅಕ್ಕಿಯನ್ನು ಬಹು ಅಪರೂಪಕ್ಕೆ ಉಪಯೋಗಿಸುತ್ತಾರೆ. ಅದರಲ್ಲೂ ಡಾಭಾಗಳು ಮೈದಾ ಹಿಟ್ಟಿನ ರೋಟಿಯನ್ನೇ ಮಾಡುತ್ತಾರೆ. ಮೈದಾಹಿಟ್ಟು ತಯಾರಾಗುವುದು ಗೋಧಿಯಿಂದಲೇ. ಶಕ್ತಿಯುತ, ಹೇರಳ ಪ್ರೊಟೀನ್ ಮತ್ತು ನಾರಿನಂಶವಿರುವ ಗೋಧಿಯ ಮೇಲಿನ ಭಾಗ ಬೂಸ ಎಂದು ಕರೆಯಲ್ಪಟ್ಟು ಜಾನುವಾರುಗಳಿಗೆ ಆಹಾರವಾಗುತ್ತದೆ. ಹಾಗೆಯೇ ಗೋಧಿ ರವೆ, ಹಿಟ್ಟು ಆಮೇಲೆ ಗೋಧಿಯ … Read more

ಪಾಂಡದ ಪರಿ-ಬಿದಿರೆಂಬ ಸಿರಿ: ಅಖಿಲೇಶ್ ಚಿಪ್ಪಳಿ

ಕಳೆದ 2 ವರ್ಷದಿಂದ ಕಳಲೆ ತಿಂದಿಲ್ಲ. ಕಳಲೆ ತಿನ್ನುವುದು ಕಾನೂನುಬಾಹಿರವೆಂದು ಅಂದು ಕೊಂಡಿದ್ದ ದಿನಗಳವು. ಆದರೂ ಮಳೆಗಾಲ ಬಂತೆಂದರೆ ಕಳಲೆಗೆ ಮುಗಿಬೀಳುವುದು ನಡದೇ ಇತ್ತು ಮತ್ತು ಇದೆ. ಕಳಲೆಗಾಗಿಯಲ್ಲವಾದರೂ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬಿದಿರನ್ನು ನೆಟ್ಟು ಬೆಳೆಸಿರುತ್ತಾರೆ. ಅದರಲ್ಲಿ ಮೂಡುವ ಕಳಲೆಗಳ (ಬ್ಯಾಂಬೂ ಶೂಟ್) ಲ್ಲಿ ಕೆಲವನ್ನು ಕತ್ತರಿಸಿ, ಸಂಸ್ಕರಿಸಿ ತಿನ್ನುವ ವಾಡಿಕೆ ಮಲೆನಾಡಿನಲ್ಲಿ ಇದೆ. ಹಿಂದಿನ ವಾಡಿಕೆಯಂತೆ ಬಿದಿರು ಹೂ ಬಿಟ್ಟ ನಂತರದಲ್ಲಿ ಸಾಯುತ್ತದೆ. ಬಿದಿರು ಹೂ ಬಿಡುವುದು 60 ವರ್ಷಕ್ಕೊಮ್ಮೆ. 2013-14ರಲ್ಲಿ ಮಲೆನಾಡಿನ … Read more

ಸಿಕಾಡ ಎಂಬ ಸಂಗೀತ: ಅಖಿಲೇಶ್ ಚಿಪ್ಪಳಿ

ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗದೆ, ಈ ವರುಷದ ಗಿಡ ನೆಡುವ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಅಂತೂ ಜುಲೈ ತಿಂಗಳಲ್ಲಿ ಮಳೆಗಾಲ ಶುರುವಾಯಿತೇನೊ ಎನಿಸಿ, ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಳೆ ಬಂದು ಇಳೆಯೇನೋ ತಂಪಾಯಿತು. ಗಿಡ ನೆಟ್ಟ ಮೇಲೆ ಬಿರು ಬೇಸಿಗೆ ಶುರುವಾಯಿತು. ನೆಟ್ಟ ಗಿಡಗಳು ಇನ್ನೆರೆಡು ದಿನ ಮಳೆ ಬಾರದಿದ್ದಲ್ಲಿ ಸತ್ತೇ ಹೋಗುವ ಸಂದರ್ಭ. ಮನುಷ್ಯರ ಕತೆ ಹೀಗಾದರೆ, ಮಳೆಗಾಲದಲ್ಲೇ ಜನ್ಮ ತಳೆಯುವ ಅದೆಷ್ಟೋ ಕೀಟಗಳು ಸಂಕಷ್ಟಕ್ಕೆ ಸಿಲುಕಿದ್ದವೋ. ನಮ್ಮಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು … Read more

ಕಾಡು (ವ) ದಿಟ್ಟೆಯರು!!: ಅಖಿಲೇಶ್ ಚಿಪ್ಪಳಿ

ಲೋಕಾಯುಕ್ತ ಕಚೇರಿಯಲ್ಲೇ ಲಂಚಾವತಾರ. ರೈತರ ಸರಣಿ ಆತ್ಮಹತ್ಯೆಗಳು. ರೈತನ ಪಾಲಿಗೆ ಕಬ್ಬಿನ ಬೆಳೆ ಕಬ್ಬಿಣದ ಶೂಲವಾಗಿ ಪರಿಣಮಿಸಿದ್ದು, ತನ್ಮಧ್ಯೆ ಮಳೆ ಕೊರತೆಯಿಂದ ಉಂಟಾಗಬಹುದಾದ ಬರಗಾಲದ ಛಾಯೆ. ಕ್ರಿಕೇಟ್ ಆಟಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿಯ ವೀಸಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಮತ್ತು ರಾಜಾಸ್ಥಾನದ ಮಹಿಳಾ ಮುಖ್ಯಮಂತ್ರಿಯ ಮೇಲೆ ಬಂದ ಗಂಭೀರ ಆರೋಪ. ವ್ಯಾಪಂ ಹಗರಣದ ಸರಣಿ ಸಾವುಗಳು. ಒಟ್ಟಾರೆ ಋಣಾತ್ಮಕ ಅಂಶಗಳೇ ಹೆಚ್ಚು. ಈ ಮಧ್ಯದಲ್ಲೂ ಅನೇಕ ಮಹಿಳೆಯರು ಭೂಆರೋಗ್ಯದ ಕುರಿತು ಚಿಂತಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. … Read more

ಬೆಳೆದಿದೆ ನೋಡಾ ಬೆಂಗಳೂರು ನಗರ!!!: ಅಖಿಲೇಶ್ ಚಿಪ್ಪಳಿ

ಹಿಂದಿನ ಭಾನುವಾರ ಸಾಗರದಲ್ಲಿನ ಸ್ವಸಹಾಯ ಗುಂಪಿನ ವಾರ್ಷಿಕ ಸಭೆ ಕರೆದಿದ್ದರು. ಪೇಟೆಯಲ್ಲಿ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಿ ಎಂಬುದು ಅವರ ಕೋರಿಕೆ. ವಾಯುಭಾರ ಕುಸಿತದಿಂದಾಗಿ ಅಂದು ಜೋರು ಮಳೆಯಿತ್ತು, ಕರೆಂಟು ಇರಲಿಲ್ಲ. ಅದೊಂದು ಸುಮಾರು 50-60 ಜನರಿರುವ ಚಿಕ್ಕ ಸಭೆ.  ಸಭೆಯ ವಿಧಿ-ವಿಧಾನಗಳು ಮುಗಿದ ಮೇಲೆ ಮಾತಿಗೆ ಶುರುವಿಟ್ಟುಕೊಂಡಿದ್ದಾಯಿತು. ಆ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಮೂಲತ: ಕೃಷಿ-ಕುಟುಂಬದವರೇ ಆಗಿದ್ದರು. ನಿಮ್ಮ ವಂಶವಾಹಿನಿಯಲ್ಲೇ ಕೃಷಿ-ತೋಟಗಾರಿಕೆಗೆ ಬೇಕಾಗುವ ಅಂಶವಿದೆ ಆದ್ದರಿಂದ ತರಕಾರಿ ಬೆಳೆಯುವ ಬಗ್ಗೆ ಆಮೇಲೆ ಮಾತನಾಡೋಣ ಎಂದು, … Read more

ಶಾಂತಿ ಮಂತ್ರವೇ?: ಅಖಿಲೇಶ್ ಚಿಪ್ಪಳಿ

ಬಾಹ್ಯಾಕಾಶ ವಿಜ್ಞಾನದಲ್ಲಿ ಎಲ್ಲಾ ದೇಶಗಳೂ ಪ್ರಗತಿ ಸಾಧಿಸಿವೆ. ಹವಾಮಾನ ಮನ್ಸೂಚನೆಗಾಗಿಯೇ ಭಾರತವೂ ಅಂತರಿಕ್ಷದಲ್ಲಿ ಬಾಹ್ಯಾಕಾಶ ನೌಕೆಗಳನ್ನು ಏರಿಸಿಟ್ಟಿದೆ. ಅಲ್ಲಿಂದಲೇ ಹದ್ದುಗಣ್ಣಿನಿಂದ ಭುವಿಯ ಸಕಲ ಆಗು-ಹೋಗುಗಳನ್ನು ಈ ನೌಕೆಗಳು ಹದ್ದುಗಣ್ಣಿನಿಂದ ವೀಕ್ಷಿಸಿ ನಮಗೆ ಕರಾರುವಕ್ಕು ವರದಿ ನೀಡುತ್ತವೆ. ಲಾಗಾಯ್ತಿನಿಂದ ನಮ್ಮ ಹವಾಮಾನ ಇಲಾಖೆ ಸಾಲು-ಸಾಲು ವೈಪಲ್ಯಗಳನ್ನು ಕಾಣುತ್ತಿದೆ. ಜೂನ್ ಹತ್ತಕ್ಕೆ ಬರುವ ಮಳೆಗಾಲ ಈ ಬಾರಿ ಜೂನ್ 1ಕ್ಕೆ ಬರುತ್ತದೆ ಎಂದು ವರದಿ ಮಾಡಿತು. ಅಂತೆಯೇ ಮಳೆಯೂ ಗುಡುಗು-ಸಿಡಿಲಬ್ಬರದ ನಡುವೆ ಧೋ ಎಂದು ಸುರಿಯಿತು. ಹವಾಮಾನ ವರದಿಯನ್ನು ಅಣಕಿಸುವಂತೆ … Read more

ತಾಜ್ ಕಥೆ-ಆಗ್ರಾದ ವ್ಯಥೆ: ಅಖಿಲೇಶ್ ಚಿಪ್ಪಳಿ

1990ರ ಜೂನ್ ತಿಂಗಳ ಒಂದು ದಿನ ಮುಂಜಾವು. ಏರ್‍ಪೋರ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತನ ಹೀರೋಹೊಂಡ ಹತ್ತಿ ದೆಹಲಿಯಿಂದ ಆಗ್ರಾ ಹೊರೆಟೆವು. ಈಗ ನೋಡಿದರೆ ಅದೊಂದು ಹುಚ್ಚು ಸಾಹಸವಾಗಿತ್ತು. ಆಗ್ರಾಕ್ಕೆ ಹೋಗುತ್ತಿರುವ ಉದ್ಧೇಶ ಜಗತ್ಪಸಿದ್ಧ ತಾಜ್ ಮಹಲ್ ನೋಡುವುದಾಗಿತ್ತು. ಸುಮಾರು 400 ಕಿ.ಮಿ. ದೂರ ಪಯಣ. ಕೆಳಗಿನ ಕಪ್ಪು ಟಾರೋಡು ಸೂರ್ಯನ ಎಲ್ಲಾ ಶಾಖ ಹೀರಿಕೊಂಡು ನಿಗಿ ನಿಗಿ ಸುಡುತ್ತಿತ್ತು. ಜೊತೆಗೆ ಬಿಸಿಗಾಳಿ. ಬಹುಷ: ಆಗಿನ ವಯಸ್ಸು ಇಂತದೊಂದು ವಿಲಕ್ಷಣ ಸಾಹಸಕ್ಕೆ ಪ್ರೇರಪಿಸಿತೋ ಏನೋ?. ಆಗ್ರಾ ಎಷ್ಟೊತ್ತಿಗೆ ತಲುಪಿಯೇವು? … Read more

ಸಚಿವರಿಗೊಂದು ಸನ್ಮಾನ ಮಾಡೋಣವೇ???: ಅಖಿಲೇಶ್ ಚಿಪ್ಪಳಿ

ಮ್ಯಾಗಿಯಲ್ಲಿ ಸತುವಿದೆ, ಕೋಲ್ಗೇಟ್‍ನಲ್ಲಿ ಉಪ್ಪಿದೆ. ಇನ್ನುಳಿದ ಜಂಕ್ ಫುಡ್‍ಗಳಲ್ಲಿ ಯಾವ್ಯಾವ ವಿಷವಿದೆ ಗೊತ್ತಿಲ್ಲ. ಮ್ಯಾಗಿ ಆರೋಗ್ಯಕ್ಕೆ ಹಾನಿಕಾರಕ ಆದ್ದರಿಂದ ಅದಕ್ಕೆ ನಿಷೇಧ ಹೇರಲಾಯಿತು. ದಾಸ್ತಾನಿನಲ್ಲಿದ್ದ ಎಲ್ಲಾ ಮ್ಯಾಗಿ ಉತ್ಪನ್ನಗಳನ್ನು ನೆಸ್ಲೆ ವಾಪಾಸು ಪಡೆದಿದೆ ಎಂದೆಲ್ಲಾ ಸುದ್ಧಿ ಪ್ರತಿ ಪತ್ರಿಕೆಯ ಎಲ್ಲಾ ಪೇಜುಗಳಲ್ಲಿ. ಇದೇ ಹೊತ್ತಿನಲ್ಲಿ ದೇಶದ ರಾಜಧಾನಿಯನ್ನು ಆಳುತ್ತಿರುವ ಆಮ್ ಆದ್ಮಿ ಸರ್ಕಾರದ ಕಾನೂನು ಸಚಿವರ ಪದವಿಯೇ ಫೇಕು ಎಂಬಂತಹ ಮತ್ತೊಂದು ಬ್ರೇಕಿಂಗ್ ಸುದ್ಧಿ. ಪತ್ರಿಕೆಗಳಿಗೆ ಖುಷಿಯೋ ಖುಷಿ. ಇದರ ಜೊತೆಗೆ ಕುಂದಣವಿಟ್ಟಂತೆ ಕೇಂದ್ರ ಕಾನೂನು ಮತ್ತು … Read more

ಇಗೋ ತಗಳ್ಳಿ – ಅಳಿವಿನ ಸವಾಲಿಗೆ ಉಳಿವಿನ ಉತ್ತರ!!!: ಅಖಿಲೇಶ್ ಚಿಪ್ಪಳಿ

ಪ್ರತಿವರ್ಷ ಜೂನ್ 5ರಂದು ಪರಿಸರ ದಿನಾಚರಣೆ. ಇದನ್ನು ಕೆಲವು ಕಡೆ ವಿಜೃಂಭಣೆಯಿಂದ, ಕೆಲವೆಡೆ ಕಾಟಾಚಾರಕ್ಕಾಗಿ, ಕೆಲವೆಡೆ ನೈಜ ಕಾಳಜಿಯಿಂದ, ಹಲವೆಡೆ ಪೋಟೋ ಸೆಷನ್‍ಗಾಗಿ ಆಚರಿಸಲಾಗುತ್ತಿದೆ. ಇದು ಇಲಾಖೆಗೂ ಒಂದು ಸರ್ಕಾರಿ ಶ್ರಾದ್ಧದ ಆಚರಣೆಯಿದ್ದಂತೆ. ಆಚರಿಸದಿದ್ದರೆ ಭಾರೀ ಲೋಪ ಜೊತೆಗೆ ಉಗ್ರ ಟೀಕೆ! ಆಚರಿಸಿ ಸಾರ್ಥಕಗೊಳಿಸಿದ ನಿದರ್ಶನಗಳು ಕಡಿಮೆಯೇ. ನಾವು ಪ್ರತಿವರ್ಷ ವಿಶ್ವಪರಿಸರ ದಿನಾಚರಣೆಯನ್ನು ಒಂದೇ ಕಡೆಯಲ್ಲಿ ಆಚರಿಸುತ್ತೇವೆ. ಗುಂಡಿ-ಹೊಂಡ ತೆಗೆಯುವ ಕೆಲಸವೇ ಇಲ್ಲ. ಹೋದ ವರ್ಷ ನೆಟ್ಟ ಗುಂಡಿಯಲ್ಲೇ ಈ ವರ್ಷವೂ ಗಿಡ ನೆಟ್ಟು ಫೋಟೊ ಹೊಡೆಸಿಕೊಳ್ಳುವುದು … Read more