ಅಧ್ಯಾಪಕನಾಗಿ ನನ್ನ ಅನುಭವ…: ಪ್ರಶಾ೦ತ ಕಡ್ಯ

ನನ್ನ ಮನಸ್ಸಿನಲ್ಲಿ ಬಾಲ್ಯದಲ್ಲೇ ನಾನೊಬ್ಬ ಶಿಕ್ಷಕನಾಗುವವನು ಎ೦ದು ಠಸೆ ಒತ್ತಿ ಆಗಿತ್ತು. ಚಿಕ್ಕ೦ದಿನಲ್ಲಿ ನನಗೆ ಗೋವಿ೦ದ ಮಾಸ್ಟರು ಆದರ್ಷರಾಗಿದ್ದರು. ಅವರು ಪಾಠಮಾಡುವ ರೀತಿ, ಬಯ್ಯುವ ರೀತಿ, ಮಕ್ಕಳು ಅವರನ್ನು ಗೌರವಿಸುವ ರೀತಿ ಎಲ್ಲವೂ ನನಿಗೆ ತು೦ಬಾ ಇಷ್ಟವಾಗಿದ್ದವು. ಆಗಲೇ ನಿರ್ಧಾರ ಮಾಡಿ ನಾನು ಅಧ್ಯಾಪಕ ವೃತ್ತಿಯನ್ನು ಆಯ್ಕೆಮಾಡಿದ್ದೆನು. ಬಾಲ್ಯದಿ೦ದಲೇ ಅದಕ್ಕೆ ಅನುಕೂಲವಾಗುವ೦ತೆಯೇ ನನ್ನ ತಯಾರಿಗಳಿದ್ದವು. ಅದಕ್ಕೆ ಸರಿಯಾಗುವ೦ತೆ ಒಳ್ಳೇ ಅ೦ಕಗಳನ್ನು ಪಡೆದು, ಅಧ್ಯಾಪಕನಾಗಲು ಬೇಕಾಗುವ ದಿಶೆಯಲ್ಲೇ ವ್ಯಾಸ೦ಗವನ್ನು ನಡೆಸಿದೆನು.   ವ್ಯಾಸ೦ಗ ಮಾಡಬೇಕಿದ್ದರೆ ಮನದಲ್ಲಿ ತು೦ಬಾ ಅಳುಕಿತ್ತು. … Read more

ಮೌನರಾಗದ ನೆನಪ ಜೋಗುಳದಲಿ: ದಿವ್ಯ ಟಿ.

ಯಾಕೋ ಬೇಸರವಾಗುತ್ತಿದೆ ಎಂದು ರಾತ್ರಿ ಬೇಗ ಮಲಗಿದವಳಿಗೆ ನಿದ್ರೆಯೂ ಬರುತ್ತಿರಲಿಲ್ಲ. ಒಂದೆರೆಡು ಹಾಡು ಕೇಳುತ್ತಾ ಹಾಗೆಯೇ ಮಲಗಿಬಿಟ್ಟಿದ್ದೆ. ಒಂದು ಗಂಟೆಯ ನಂತರ ಸರಿಯಾಗಿ 12.10ಕ್ಕೆ ಎಚ್ಚರಿಕೆಯಾಯಿತು. ನಿಶ್ಚಿಂತೆಯಿಂದ ಮಲಗಿದ ಕೊಠಡಿಯಲ್ಲಿ ಗಡಿಯಾರದ ಟಿಕ್ ಟಿಕ್ ಸದ್ದು, ಫ್ಯಾನ್ ಗಾಳಿಯ ಸದ್ದು ಬಿಟ್ಟರೆ ಬೇರೆನೂ ಇಲ್ಲ. ವಾಹನಗಳ ಸದ್ದಿನಿಂದ ಗಿಜಿ ಗಿಜಿ ಎನ್ನುತ್ತಿದ್ದ ರಸ್ತೆಯೂ ಮೌನವಾಗಿದೆ. ಅಲ್ಲೆಲ್ಲೋ ಇರುವ ರೈಲ್ವೆ ಹಳಿಯ ಮೇಲೆ ಸಂಚರಿಸುತ್ತಿರುವ ರೈಲಿನ ಸದ್ದು ಗಾಳಿಯಲ್ಲಿ ತೇಲಿ ಬರುತ್ತಿದೆ. ಇತ್ತೀಚಿಗೆ ಎಚ್ಚರವಾಗುವುದು ನಿದ್ರೆಯಿಲ್ಲದೆ ಹೊರಳಾಡುವುದು ಸಾಮಾನ್ಯವಾಗಿದ್ದರೂ … Read more

ರೌಡಿ ದನ: ಅಖಿಲೇಶ್ ಚಿಪ್ಪಳಿ ಅಂಕಣ

ಸಾಗರದ ವಿನೋಬ ನಗರದ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬದ ಯಜಮಾನನ ಹೆಸರು ಸೂರಪ್ಪ. ಮನೆ, ಮನೆ ಮುಂದೆ ೧೦ ಅಡಿ ಅಗಲ ೧೦ ಉದ್ದದ ಚಿಕ್ಕದಾದ ಒಂದು ದಿನಸಿ ಅಂಗಡಿ. ಜೀವನೋಪಾಯಕ್ಕೆ. ಹಳೆಯದಾದ ಮನೆಯಾದರೂ ಹಿಂಭಾಗದಲ್ಲಿ ಸಾಕಷ್ಟು ಜಾಗವಿತ್ತು. ಅಪ್ಪನ ಕಾಲದಲ್ಲಿ ಕಟ್ಟಿದ ಮನೆಯಾದ್ದರಿಂದ, ಮುಚ್ಚಿಗೆ, ತೊಲೆ, ದೊಡ್ಡ-ದೊಡ್ಡ ಚಿತ್ತಾರದ ಕಂಬಗಳು, ನಾಗಂದಿಗೆ, ಕಪಾಟು ಎಲ್ಲವಕ್ಕೂ ಮರಗಳ ಬಳಕೆಯಾಗಿದೆ. ಹೀಗೆ ಸಾಗಿ ಹಿಂದುಗಡೆ ಹತ್ತು ಕಾಲ್ನಡೆಗಳನ್ನು ಕಟ್ಟಿಕೊಳ್ಳಲು ಕೊಟ್ಟಿಗೆಯು ಇದೆ. ಸೂರಪ್ಪನವರ ತಂದೆಯ ಕಾಲದಲ್ಲಿ ಕೊಟ್ಟಿಗೆ … Read more

ವಾಸ್ಯ ತಾತ ಈಗ: ಡಾ. ಗವಿ ಸ್ವಾಮಿ

ನೆಂಟರೊಬ್ಬರನ್ನು  ನೋಡಲು ಮೊನ್ನೆ ಆಸ್ಪತ್ರೆಗೆ ಹೋಗಿದ್ದೆ . ಆಸ್ಪತ್ರೆಯ ಗೇಟಿನ ಬಳಿ ಬೈಕು ನಿಲ್ಲಿಸುತ್ತಿದ್ದಾಗ ಇಬ್ಬರು ಹೊರಬರುತ್ತಿದ್ದರು. ಒಬ್ಬ ಹೆಂಗಸು ಮಗುವನ್ನು ಕಂಕುಳಿಗೆ ಹಾಕಿಕೊಂಡಿದ್ದಳು. ಪಕ್ಕದಲ್ಲಿ ಬರುತ್ತಿದ್ದಾತ ಮಗುವಿನ ಕೆನ್ನೆ ಚಿವುಟುತ್ತಾ ಅಂದ, '' ಈ ಗಣಾಂದಾರನ್ಗ ಮುನ್ನೂರ್ರುಪಾಯ್ ಆಯ್ತು ಇವತ್ತು '' ಆ ಹೆಂಗಸು ಹುಸಿಮುನಿಸಿನಿಂದ   ''ಚುರ್ಕ್ ಅಂದ್ಬುಡ್ತನ ನಿನ್ಗ ..  ನೋಡುಕಂದ ತಾತ ವೊಟ್ಟುರ್ಕತನ'' ಎಂದು ಕಂಕುಳಲ್ಲಿದ್ದ ಮಗುವನ್ನು ನೋಡಿ ಹೇಳಿದಳು. ಮಗು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಅವ್ವನನ್ನು ನೋಡಿತು. ''ಸುಮ್ನಂದಿಕವ್ವೈ ತಮಾಸ್ಗ .. … Read more

ಒಂದು ತಂತಿ ಪರ್ಸಂಗ …. ! : ಶ್ರೀಕಾಂತ್ ಮಂಜುನಾಥ್

ಐದು ಮಂದಿ ಹಳ್ಳಿಕಟ್ಟೆಯಲ್ಲಿ ಬೀಡಿ ಸೇದುತ್ತಾ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು…    "ನೀನು ಏನೇ ಹೇಳು.. ಈ ಪರ್ಪಂಚದಲ್ಲಿ ಏಟೊಂದು ಬದಲಾವಣೆ ಆಗಿ ಬಿಡ್ತು!"   "ಹೌದು ಕಣಣ್ಣ..  ಮೊದ್ಲು ಮೊದ್ಲು ಒಬ್ಬರನ್ನ ಒಬ್ಬರು ಭೇಟಿ ಮಾಡೋಕೆ ಆನಾಡಿ ಕಷ್ಟ ಪಡ್ತಾ ಇದ್ವಿ.. ಈಗ ಎಲ್ಲಾ ಚಿಟಿಕೆ ಚಿಟಿಕೆ ಹೊಡೆಯೋದರಲ್ಲಿ ಮುಗಿಯುತ್ತೆ"   "ಗುರುವೇ ನಿನಗೆ ಗೊತ್ತಾ… ಈ ಟೆಲಿಗ್ರಾಂ ಅಂದ್ರೆ ತಂತಿ ಸೇವೆ ಐತಲ್ಲ ಅದನ್ನ ನಿಲ್ಲಿಸಿ ಬಿಡ್ತಾರಂತೆ.. ಈ ತಂತಿ ಸೇವೆ ಬಗ್ಗೆ ನಿನ್ನ ಅನುಭವ ಹೇಳ್ರಣ್ಣಾ!"   "ಓಹ್ … Read more

ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ…: ದಿವ್ಯ ಆಂಜನಪ್ಪ

ಹೆಚ್.ಎಸ್. ವೆಂಕಟೇಶ ಮೂರ್ತಿ ರವರ ಕವನ:- ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವಾ… ಕವಿಯು ತಮ್ಮ ಈ ಕವನದಲ್ಲಿ ಮಾನವ ಸಂಬಂಧಗಳ ನಡುವಿನ ಅಂತರವನ್ನು ವಿಶ್ಲೇಷಿಸಿದ್ದಾರೆ. ನಾವು ನಮ್ಮೊಂದಿಗಿರುವ ಜನರೊಂದಿರೆ ಎಷ್ಟೇ ಕಾಲ ಒಟ್ಟಿಗೆ ಕಳೆದರೂ, ಒಬ್ಬರಿಗೊಬ್ಬರು ಅಂತರಾತ್ಮವನ್ನು ತೆರೆದುಕೊಂಡಿರುವುದಿಲ್ಲ ಎಂದು ಕವಿ ಹೇಳುವಾಗ ಹೋಲಿಕೆಗಳನ್ನು ಹೀಗೆ ನೀಡುತ್ತಾರೆ. ಕಡಲ ಮೇಲೆ ಸಾಗುವ ದೋಣಿ ಎಷ್ಟೇ ದೂರ ಸಾಗಿದರೂ ಕಡಲ ಆಳವನ್ನು ತಿಳಿಯುವ ಗೊಡವೆಗೆ ಹೋಗುವುದಿಲ್ಲ. ಸಾಗರಕ್ಕೂ ದೋಣಿಗೂ ತೀರ ಅಂಟಿದ … Read more

ಫ್ಲಾಪೀ ಬಾಯ್ ಕಂಡ ಕೆಂಪುತೋಟ: ಸಚಿನ್ ಎಂ. ಆರ್.

ಈ ಫ್ಲಾಪೀ ಬಾಯ್‍ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ. ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು … Read more

ಓಡಿ ಹೋಗುವ ಮುನ್ನ ಓದಿ ಹೋಗಿ: ಪ್ರವೀಣ್ ಕುಲಕರ್ಣಿ

ಹಲೋ ಹಲೋ ಥೂ ಈ ಹುಡುಗರು ಸರಿಯಾದ ಟೈಮ್ ಗೆ ಬರೋದು ಇಲ್ಲ ಫೋನ್ ಎತ್ತೋದು ಇಲ್ಲ ಹಲೋ …. ಹಾಂ ಹ..ಲೊ ..ಇನ್ನೂ ಎದ್ದಿಲ್ವ ದಂಡ ಪಿಂಡ ನೀನು..? ಇಲ್ಲಿ ನನಗೆ ಒಂದೊಂದು ನಿಮಿಷ ಉಸಿರು ಕಟ್ತಾ ಇದೆ ಏಳೋ ಬೇಗ .. ಅಯ್ಯೋ ಎದ್ದೆ ತಡಿಯೇ… ಮಾತಾಡಿದ ನಿಮ್ಮ ಅಮ್ಮ ಅಪ್ಪನ ಹತ್ತಿರ ಏನಂತೆ ? ಮರ್ಯಾದೆಯಾಗಿ ಮದುವೆ ಮಾಡಿಕೊಟ್ಟು ದೊಡ್ಡವರು ಅನ್ನಿಸಿಕೊಳ್ತಾರೋ  ಇಲ್ವಾ ಫಿಲ್ಮಲ್ಲಿ ತೋರಿಸೋ ಹಾಗೆ ಇಲ್ಲ ಆಗಲ್ಲ ಅಂದ್ಕೊಂಡು ತಲೆ … Read more

ಜಾರಿ ಹೋಗುವ ಕಾನೂನು: ಸಂದೀಪ ಫಡ್ಕೆ

ಕಾನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ … Read more

ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

ಉಗುರುಗಳದು ನೆನಪಿನದು , ಕತ್ತರಿಸಿದಷ್ಟು ವೇಗದಲಿ ಮೂಡುವುದು , ಸಿಬಿರಾಗಿ ನಿಂತು ಚುಚುತ್ತಲೇ ಇರುವುದು ******************** ನೀ ಕೊಟ್ಟ ನೋವಿನ ವಿಷವನ್ನು  ಗಟಗಟನೆ ಕುಡಿದೂ ಸಾಯದೆ ಉಳಿಯಲು ನಾನೇನು ನೀಲಕಂಠನಲ್ಲ ಒಳಗೆ ಸತ್ತಿರುವೆ ಆದರು ಇನ್ನು ಬದುಕೇ ಇರುವೆ *************** ಅವನ ಗಂಡಸುತನವ ದಿಕ್ಕರಿಸಿದ ನನ್ನ ಹೆಣ್ತನ ಕದವಿಕ್ಕಿ ಅಳುತ್ತಿತ್ತು ಒಳಗೆ ********** ಇಂಚಿಂಚು ಕೊಂದಿರುವೆ ಚುಚ್ಚಿ ಚುಚ್ಚಿ ಹುಡುಕಲು ನಿನ್ನ ಬಿಂಬವನ್ನು ಚೂರುಗಳಲ್ಲಿ ನಾನೇನು ಕನ್ನಡಿಯಲ್ಲ ********** ನವಿಲಿಗೆ ಕುಣಿವುದೇ ಧರ್ಮ ಕೆಂಬೂತದ ಸಹವಾಸಕ್ಕೆ ಕುಣಿವುದ … Read more

ಮನಸ್ಸು ಒಮ್ಮೊಮ್ಮೆ ಹೀಗೆಲ್ಲಾ ಯೋಚಿಸುವುದು೦ಟು…!: ರಾಮಚಂದ್ರ ಶೆಟ್ಟಿ

"ನನಗೆ ದೇವರು ಏನನ್ನೂ ಕೊಟ್ಟಿಲ್ಲ" ಇದು ಸಾಮಾನ್ಯವಾಗಿ ಎಲ್ಲಾ ಇರುವವರ ಒ೦ದು ದೂರು,ಒ೦ದು ಹೇಳಿಕೆ ದೇವರೆಡೆಗೆ .ನನ್ನನ್ನೂ ಸಹ ಸೇರಿಸಿ..ಸಾಮಾನ್ಯವಾಗಿ ನಾವು ನೋವಿನ ಪರಿಧಿಯೊಳಗೆ ಸಿಕ್ಕಿಕೊ೦ಡು ಒದ್ದಾಡುತ್ತಿರುವಾಗ ,ನಾವು ಆಸೆ ಪಟ್ಟಿದ್ದು ನಮಗೆ ದಕ್ಕದಿದ್ದಾಗ, ಅಥವಾ ನಮಗೆ ಹತ್ತಿರ ಎ೦ದೆನಿಸಿದವರೂ ನಮ್ಮಿ೦ದ ದೂರ ನಡೆದಾಗ ಇ೦ಥ ಅನೇಕ ಸ೦ಧರ್ಭದಲ್ಲಿ ಅದರ ಪರಿಣಾಮವನ್ನು ಸ್ವೀಕರಿಸಲಾಗದೆ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯವಾಗಿ ಅಥವಾ ಗೊ೦ದಲವಾಗಿ ನಾವು ಪೂರ್ತಿಯಾಗಿ ಸೋತು ಬಿಟ್ಟೆವು ಅ೦ದುಕೊ೦ಡುಬಿಡುತ್ತೇವೆ..ಈ ಸಮಯದಲ್ಲಿನ ನೋವು, ನಿರಾಶೆ ಹತಾಶೆಯನ್ನು ಹತ್ತಿಕ್ಕಲಾಗದೆ ಗೊ೦ದಲದಲ್ಲಿದ್ದಾಗ ಈ … Read more

ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ: ರೂಪ ರಾವ್

ನನ್ನ ಪ್ರೀತಿಯ ವಿಕಿಗೆ,   ನೆನ್ನೆ ನೀನು ಐ ಲವ್ ಯು ಸುಮಾ ಅಂದಾಗ ಎಷ್ಟು ಖುಷಿಯಾಯ್ತು ಗೊತ್ತಾ ಮಾತಾಡೋಕೆ ಆಗಲಿಲ್ಲ. ಒಂದು ವರ್ಷದಿಂದ ಪ್ರೀತ್ಸೋ ಪ್ರೀತ್ಸೋ ಅಂತ ನಿನ್ನ ಹಿಂದೆ ಬಿದ್ದಿದ್ದ ನನ್ನನ್ನ ಫ್ರೆಂಡ್ ಆಗೇ ನೋಡ್ತಿದ್ದ ನೀನು ಇದ್ದಕಿದ್ದ ಹಾಗೆ ಬೇಸಿಗೆಕಾಲದ ಮಳೆ ಥರ ಪ್ರೀತಿಸ್ತೀನಿ ಅಂದ್ರೆ……. ಒಂದು ಕ್ಷಣ ಎದೆ ಝಲ್ಲೆಂತು… ಪ್ರೀತಿಸಿದ ಹುಡುಗನ ಬಾಯಲ್ಲಿ ಇಂಥ ಮಾತು ಕೇಳುವಾಗಿನ ಸ್ವರ್ಗ ಸುಖವೇ ಬೇರೆ ಕಣೋ..ಅಂತಹ ಗಾಳೀಲಿ ತೇಲ್ತಾ ತೇಲ್ತಾ ನಗ್ತಾ  ಇದ್ದ … Read more

ತಾಯಿಯ ಮನಸ್ಸು: ಲಿಂಗರಾಜು

           ಅಂದು ಸೋಮವಾರ, ನಾನು ಒಬ್ಬ ಮುಖ್ಯ ವ್ಯಕ್ತಿಯೊಬ್ಬರನ್ನು ಬೇಟಿ ಮಾಡಲು ಬೆಂಗಳೂರಿನ ಗಾಂದಿನಗರದ ಕಡೆ ಹೋಗಬೇಕಾಗಿತ್ತು..ಬೆಳಿಗ್ಗೆ 10 ಗಂಟೆಯ ಸಮಯ, ಕೆಂಪೇಗೌಡ ಬಸ್ ನಿಲ್ಧಾಣದಲ್ಲಿ ಬಸ್ಸಿನಿಂದ ಇಳಿದು ನಿಂತೆ.  ಸುತ್ತಲೂ ನೋಡಿ ಒಮ್ಮೆ ಬೆರಗಾದೆ ಎತ್ತ ನೋಡಿದರೂ ಜನರ ಗಜಿಬಿಜಿ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೂ ದಾಟಲು ಅಸಾದ್ಯವಾದ ವಾಹನಗಳ ಸಾಲು.          ಮನಸ್ಸಿನಲ್ಲಿ ಏನೋ ಗೊಂದಲ, ಒಂದು ಕಡೆ ಸುಮ್ಮನೆ ನಿಂತುಬಿಟ್ಟೆ. ತಕ್ಷಣ ಒಂದು … Read more

ಒಂದು ಲವ್ ಕಹಾನಿ!: ನವೀನ್ ಮಧುಗಿರಿ

ಸುಡು ಸುಡು ಬಿಸಿಲಿನ ಬೇಸಿಗೆಯ ಒಂದು ಮಧ್ಯಾಹ್ನ. ಸಿಮೆಂಟು ಕಾಡಿನ ಮಧ್ಯೆ ಅಪರೂಪಕ್ಕೆ ಅಲ್ಲಲ್ಲಿ ಕಾಣಿಸುವ ರಸ್ತೆ ಬದಿಯಲ್ಲಿರುವ  ಒಂದೆರಡು ಮರಗಳೂ ಸಹ ತಲೆಬಾಗುವುದನ್ನು ಮರೆತು ತಟಸ್ಥ ಧ್ಯಾನಕ್ಕೆ ಶರಣಾಗಿವೆ. ಸೂರ್ಯೋದಯದ ನಂತರ ಆ ಊರಿನಲ್ಲಿ ಒಮ್ಮೆಯೂ ಗಾಳಿ ಬೀಸಿಲ್ಲ. ಒಂದೆಲೆಯೂ ಅಲುಗಿಲ್ಲ. ಮರದ ರೆಂಬೆಗಳು  ಬಿಸಿಲ ಬೇಗೆಗೆ ಬೆಂದು, ಚಲನವಿಲ್ಲದೆ ನಿರ್ಜೀವ ವಸ್ತುವಿನಂತೆ (ಸತ್ತಂತೆ) ಮಲಗಿವೆ.  ಆ ಊರಿನ ಯಾವುದೋ ಒಂದು ಬೀದಿಯಲ್ಲಿನ ಒಂದು ಮೂಲೆಯಲ್ಲಿ ಆಗಷ್ಟೇ ಗೃಹ ಪ್ರವೆಶವೋ, ನಾಮಕರಣವೋ, ಅಥವಾ ಇನ್ನಾವುದೋ ಕಾರ್ಯಕ್ರಮವು ನಡೆದಿತ್ತು. ಬಂದ … Read more

ರೋಗ ಯಾವುದೆಂದು ಕೇಳುವ ವ್ಯವಧಾನವಿಲ್ಲದಿದ್ದರೂ…:ಶರತ್ ಎಚ್ ಕೆ

ಮೊನ್ನೆ ಬೆಳಿಗ್ಗೆ ಆಗಷ್ಟೇ ತಿಂಡಿ ತಿಂದು ಮನೆಯವರೆಲ್ಲ ಟೀವಿ ನೋಡುತ್ತ, ಪೇಪರ್ ಓದುತ್ತಾ ಕುಳಿತಿದ್ದೆವು. ಗೇಟ್ ತೆರೆದ ಸದ್ದಾಯಿತು. ಯಾರೆಂದು ನೋಡಿದರೆ ಚರಂಡಿ ಶುಚಿಗೊಳಿಸುವ ಮತ್ತು ಹೂದೋಟದ ಕಳೆ ಕೀಳುವ ಕೆಲಸ ಮಾಡುವ ಹುಡುಗ. ಅವನು ಈ ಹಿಂದೆ ಒಂದೆರಡು ಬಾರಿ ನಮ್ಮ ಮನೆ ಹೂದೋಟದ ಕಳೆ ಕಿತ್ತಿದ್ದ. ’ಕೆಲಸ ಇದ್ಯ’ ಅಂತ ಕೇಳ್ದ. ಬಾಗಿಲು ತೆರೆದ ಅಮ್ಮ ’ಇಲ್ಲ ಹೋಗಪ್ಪ’ ಅಂತೇಳಿ ಒಂದೇ ಮಾತಲ್ಲಿ ಅವನನ್ನು ಸಾಗಾಕಲು ಮುಂದಾದರು. ತಕ್ಷಣವೇ ಬಾಗಿಲು ಹಾಕಿದರು. ’ಅಮ್ಮ ತಿಂಡಿ … Read more

ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

      ಮೊನ್ನೆ ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದೆ ಹಾಗೆ ಕಾರ್ಯ ನಿಮಿತ್ತ ಹೋದವನು ಅಲ್ಲೆ ರಾಜರಾಜೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಭೇಟಿ ಇತ್ತೆ, ಹೋದ ಕೂಡ್ಲೆ ಎಲ್ಲಿಲ್ಲದ ಖುಷಿಯಿಂದ ಓಡಿ ಬಂದ ಪುಟ್ಟ ಪ್ರಾರ್ಥನ ಕೈ ಹಿಡಿದು ಒಳಗೆ ಎಳೆದೊಯ್ದು ತನ್ನ ಹೊಸ ಆಟಿಕೆಗಳನ್ನ ತೋರಿಸೋಕೆ ಶುರು ಮಾಡಿದ್ಲು, ಸ್ವಲ್ಪ ಸಮಯ ವಿಶ್ರಾಂತಿ ಬಳಿಕ ಮತ್ತೆ ಅವರು ಕಟ್ಟಿಸುತ್ತಿರುವ ಹೊಸ ಮನೆ ತೋರಿಸೋಕೆ ಇಲ್ಲೆ ವಾಕಿಂಗ್ ಹೋಗೋಣ ಬಾ ಮಾಮ ಅಂತ ಕರೆದುಕೊಂಡ್ ಹೋದ್ಲು. ಹೋದ ಸ್ವಲ್ಪ … Read more

ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು: ಪ್ರವೀಣ್ ದಾನಗೌಡ

    ಅರೆ ಉಪದೇಶಿಸುತ್ತಿರುವೆ ಎಂದುಕೊಂಡ್ರಾ, ಇಲ್ಲ ಉಪದೇಶವಲ್ಲಾ ಇದು ಒಂದು ಮಸ್ತಿ ಮಜದ ಘಟನೆ !  ಇದಕ್ಕೆ ನೀವು ಒಪ್ಪುತ್ತಿರೊ ಇಲ್ಲವೋ , ಈ ಜಗತ್ತು ಇಂದ್ರ ಲೋಕವನ್ನು ಮೀರಿದ ಸುಖ ಹಾಗೂ ಸೌಂದರ್ಯವನ್ನು ಹೊಂದಿದ ಜಗತ್ತು. ಇಲ್ಲಿ ರಂಬೆ ,ಊರ್ವಶಿ, ಮೇನಕೆಯರನ್ನು ಮೀರಿದ ರೂಪಶಿಯರು ಉಂಟು ಎಂದ ಮೇಲೆ ಈ ಜಗತ್ತು ಅಲ್ಲಿಗಿಂತಲು ಸೌಂದರ್ಯ ಪೂರಿತ ಜಗತ್ತೆ ಸರಿ, ಇನ್ನು ಅಮಲಿಗೆ ಮೋಜಿಗೆ ಸುಖಕ್ಕೆ ಇಂದ್ರನೇ ಇಲ್ಲಿಯ ಅಲ್ಕೋ ಹಾಲ್ ಬ್ರ್ಯಾಂಡ್ ಗಳನ್ನು ಆಮದು … Read more

ಆಕಾಲಿಕ ಮರಣನ್ನಪ್ಪಿದ ಸಾಹಿತಿ ಶ್ರೀಯುತ ರವಿಮುರ್ನಾಡುರವರ ಕುಟುಂಬಕ್ಕೆ ಅರ್ಥಿಕ ಸಹಾಯದ ಕೋರಿಕೆ

  ಆತ್ಮೀಯರೇ , ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ವಿಪರ್ಯಾಸ, ವಿಧಿಯಾಟ. ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ … Read more

ತುಮುಲಗಳು ತೀರಿ ಹೋದ ಹೊತ್ತು:ಎಚ್.ಕೆ.ಶರತ್

    ತುಮುಲಗಳು ತೀರಿ ಹೋದ ಹೊತ್ತು… ಭಾವುಕ ಕನ್ನಡಿ ಚೂರಾಯ್ತು. ಮನಸ್ಸು ಮೋಡ ಕವಿದ ಸಂಜೆಯಷ್ಟೇ ನೀರವ. ದೂರದಲ್ಲೆಲ್ಲೋ ಮಳೆ ಹನಿಗಳ ಕಲರವ. ಬರ ಬರಬಾರದಿತ್ತು ಭಾವುಕತೆಗೆ. ಸುಖಾಸುಮ್ಮನೆ ಅಳುವುದರಲ್ಲೂ ಒಂದು ಸುಖ. ಅಕಾರಣವಾಗಿ ನಗೆ ಚೆಲ್ಲಿದಾಗಲೂ ಇಣುಕುವ ದುಃಖ… ಬದುಕು ಕಳೆಗುಂದದಿರಲು ಕಣ್ಣಂಚಲ್ಲಿ ಒಂದಷ್ಟು ನೀರು ಶೇಖರಿಸಿಟ್ಟುಕೊಳ್ಳುವ ಜಾಣ್ಮೆ ಮೊದಲೇ ಮೈಗೂಡಬೇಕಿತ್ತು. ಎರಡು ಬದಿಯ ಮೌನ ಮಾತಾಡುವಷ್ಟು, ಒಂದು ಬದಿಯ ಕದನ ಪದ ಕಕ್ಕಲಾರದು. ಮೌನವಿರಬೇಕಿತ್ತು ಇಬ್ಬರ ನಡುವೆ… ನಮ್ಮಿಬ್ಬರಿಗೂ ಇಷ್ಟವಾದ ಮಾತನಾಡುವ ಸಲುವಾಗಿಯಾದರೂ! … Read more