ಚಿಂತೆಗೆ ಕೊನೆಯುಂಟೆ?: ಮಂಜು ಹಿಚ್ಕಡ್

ಒಮ್ಮೆ ಮೆದುಳಿಗೆ ಹೊಕ್ಕ ಚಿಂತೆಗಳಿಗೆ ಹೊಸತು ಹಳತು ಎನ್ನುವ ಭೇದಬಾವವಿಲ್ಲ. ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಮನಸ್ಸನ್ನು ಹೊಕ್ಕ ಚಿಂತೆಗಳು ಆಗಾಗ ಜಾಗ್ರತಗೊಂದು ಕಾಡುತ್ತಿರುತ್ತವೆ. ಇರಲಿ ಎಂದು ಹಾಗೆ ಸುಮ್ಮನೆ ಬಿಡುವಂತಿಲ್ಲ. ಹಾಗೇನಾದರೂ ಬಿಟ್ಟು ಬಿಟ್ಟರೆ ಅದು ಬೆಳೆಯುತ್ತಾ ಹೋಗಿ ಹೆಮ್ಮರವಾಗಿ ಬಿಡುತ್ತದೆ. ಆ ಚಿಂತೆಗಳಿಗೆ ಅದೆಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಇದು ಸೋಮನಿಗೂ ಕೂಡ ತಿಳಿದ ವಿಷಯ. ಸೋಮ ಜಾಸ್ತಿ ಓದಿದವನಲ್ಲದಿದ್ದರೂ ತನ್ನ ಅರವತ್ತು ವರ್ಷದ ಅನುಭವದಿಂದಾಗಿ ಅವನಿಗೆ ಅದೆಲ್ಲವೂ ತಿಳಿದ ವಿಚಾರವಾರವೇ. … Read more

ಮನಸಿದ್ದರೆ ಮಾರ್ಗ: ಸುರೇಶ್ ಮಡಿಕೇರಿ

  ಮನುಷ್ಯ ಅಂದ ಮೇಲೆ ಅವನಿಗೆ ಹವ್ಯಾಸ ಎನ್ನುವುದು ಇದ್ದೇ ಇರುತ್ತದೆ. ಹವ್ಯಾಸ ಅಂದ ಮೇಲೆ ಸಾಧಾರಣವಾಗಿ ಅದು ಒಳ್ಳೆಯ ಹವ್ಯಾಸವಾಗಿರುತ್ತದೆ. ಆ ಹವ್ಯಾಸಗಳು ಜೀವನಕ್ಕೆ ಹೊಸ ಚೇತನವನ್ನು, ಜೀವನೋಲ್ಲಾಸವನ್ನು ತಂದು ಕೊಡುತ್ತದೆ. ಆದರೆ ನಮ್ಮಲ್ಲಿ  ಕೆಲವು ಚಟಗಳಿರುತ್ತವೆ. ಈ ಚಟ ಅನ್ನೋದು ಹೆಚ್ಚಾಗಿ ಬಹಳ ಕೆಟ್ಟದ್ದೇ ಆಗಿರುತ್ತದೆ. ಸುಖಿ ಮಾನವ ಫ್ಯಾಶನ್‌ಗಾಗಿ ಆರಂಭಿಸುವ ಈ ಚಟಗಳು ಮುಂದೆ ಅವನನ್ನೇ ದಾಸನನ್ನಾಗಿ ಮಾಡಿಬಿಡುತ್ತವೆ. ಆತನ ಜೀವನದ ಉತ್ಸಾಹ, ಉಲ್ಲಾಸಗಳು ಅವನಿಂದ ದೂರವಾಗುತ್ತವೆ. ಅದು ಮಧ್ಯಪಾನ ಸೇವನೆಯಾಗಿರಬಹುದು, ಧೂಮಪಾನವಾಗಿರಬಹುದು, … Read more

ನಿಮ್ಮ ಗಮನಕ್ಕೆ

ದಿನಾಂಕ 30 ಡಿಸೆಂಬರ್ 2014 ರಿಂದ 3 ಜನವರಿ 2015ರ ವರೆಗೆ ಮೈಸೂರಿನ ನಿರಂತನ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ರಂಗ ಉತ್ಸವವನ್ನು ಆಯೋಜಿಸಲಾಗಿದೆ. ಈ ನಿಮಿತ್ತ ರಂಗಾಸಕ್ತರಿಗೆ ನಿರಂತರ ಫೌಂಡೇಷನ್ ಆಹ್ವಾನ ಕೋರಿದೆ.  ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ನಿರಂತರ ಫೌಂಡೇಷನ್ ಕಾಂತರಾಜ ರಸ್ತೆ ಸರಸ್ವತಿ ಪುರಂ ಮೈಸೂರು ದೂರವಾಣಿ: 0821-2544990 ****

ನಿಮ್ಮ ಗಮನಕ್ಕೆ

ಪ್ರಕಟಣೆ 1 ಜ್ಞಾನಡಮರು ಪ್ರಕಾಶನವು ದ್ವಿತೀಯ  ವರ್ಷ ಪೂರೈಸಿದ ಸವಿನೆನಪಿಗಾಗಿ ಸಹಕಾರ ತತ್ವದಡಿಯಲ್ಲಿ ರಾಜ್ಯಮಟ್ಟದ ಚೌಪದಿಗಳ ಅಪೂರ್ವ ಸಂಕಲನ ಹೊರತರಲು ಚಿಂತನೆ ನಡೆಸಿದ್ದು, ಆಸಕ್ತ  ಹಿರಿಯ-ಕಿರಿಯ ಕವಿಗಳು ಸ್ವರಚಿತ  ೬ ಚೌಪದಿಗಳನ್ನು ಮೊಗೇರಿ ಶೇಖರ ದೇವಾಡಿಗ ಸಂಪಾದಕರು ಜ್ಞಾನಡಮರು ಪ್ರಕಾಶನ, ಮೊಗೇರಿ ಕೆರ್ಗಾಲ್ (ಅಂಚೆ) ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-೫೭೬೨೧೯ ಮೊ: ೯೯೧೬೧೮೦೪೯೫ ಈ ವಿಳಾಸಕ್ಕೆ ಮಾರ್ಚ್ ೨೮ ೨೦೧೫ ರೊಳಗೆ ೨ ಸ್ವವಿಳಾಸ ಬರೆದ ಅಂಚೆ ಲಕೋಟೆಯನ್ನು ಲಗತ್ತಿಸಿ ಕಳುಹಿಸಲು ಕೋರಲಾಗಿದೆ. ಇ-ಅಂಚೆ ಮೂಲಕ  ಕಳುಹಿಸುವವರು … Read more

ಅಮರವಾಗಲಿ ನಮ್ಮ ಚೆಲುವ ಕನ್ನಡ ನುಡಿಯು: ಹೊರಾ.ಪರಮೇಶ್ ಹೊಡೇನೂರು

"ಜೇನಿನ ಹೊಳೆಯೋ ಹಾಲಿನ ಮಳೆಯೋ  ಸುಧೆಯೋ ಕನ್ನಡ ಸವಿ ನುಡಿಯೋ….  ವಾಣಿಯ ವೀಣೆಯೊ ಸ್ವರ ಮಾಧುರ್ಯವೋ  ಸುಮಧುರ ಸುಂದರ ನುಡಿಯೋ….ಆಹಾ!"         ಎಂಬ ಗೀತೆಯು ನಮ್ಮ ಕರುನಾಡಿನ ಕನ್ನಡಿಗರ ಎದೆಯಾಳದಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ರವರ ಅಮೃತ ಕಂಠಸಿರಿಯಲ್ಲಿ ಅಜರಾಮರವಾಗಿರುವ ಈ ಗೀತೆಯು ಚಲನಚಿತ್ರಕ್ಕಾಗಿ ರಚಿಸಲ್ಪಟ್ಟರೂ ನಮ್ಮ "ಸವಿಗನ್ನಡ"ದ ಹಿರಿಮೆ-ಗರಿಮೆಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿ ಕನ್ನಡ ಭಾಷಾ ಚಳುವಳಿಯಲ್ಲಿ ಪ್ರಮುಖವಾದ ಕನ್ನಡಪರ ಕಾಳಜಿಯ ಸಂದೇಶಗೀತೆಯಾಗಿದ್ದು ಇತಿಹಾಸದ ಪುಟ … Read more

ಬದುಕ್ ಸಾಯ್ರಿ: ಪ್ರವೀಣ್ ಎಸ್ ಕುಲಕರ್ಣಿ

    ಥತ್ತೇರಿಕೆ…!ಮತ್ತೆ ಫೇಲಾಗ್ ಬಿಟ್ನಾ. . ಚೆನ್ನಾಗೆ ಬರೆದಿದ್ನಲ್ಲ. . ಯಾಕೋ ಈ ದೇವರದು ಅತಿಯಾಯ್ತು. . ನನ್ನ ಸುಖವಾಗಿ ಬದುಕಲು ಬಿಡಲೇಬಾರದು ಅಂತ ಇದ್ರೆ ಯಾಕ್ ಹುಟ್ಟಿಸಿದ್ನೋ, ಮನೆಗೆ ಹೋಗಿ ಏನು ಮುಖ ತೋರಿಸೋದು. . . ಏನು. . . ?ಮತ್ತೆ ಲಾಸಾ. . . ಸರ್ಯಾಗ್ ನೋಡಿ ಹೇಳೋ, ಈ ಸಲಾ ಹೆಚ್ಚು ಕಮ್ಮಿ ಆದ್ರೆ ನಾನಷ್ಟೇ ಅಲ್ಲಾ ಅಪ್ಪ ಅಮ್ಮ ಹೆಂಡ್ತಿ ಮಕ್ಕಳು ಎಲ್ರೂ ಸೇರಿ ನೇಣು ಹಾಕ್ಕೋಬೇಕಾಗುತ್ತೆ. . … Read more

ಅಡುಗೆಯ ಅವಾಂತರಗಳು: ಸ್ಮಿತಾ ಅಮೃತರಾಜ್

ಅಡುಗೆ ಮಾಡುವುದರಲ್ಲಿ ನಮ್ಮ ಗೃಹಿಣಿಯರು ಎಷ್ಟೇ ಪಳಗಿದರೂ, ಪರಿಣಿತಿಯನ್ನು ಪಡೆದುಕೊಂಡರೂ ಕೆಲವೊಮ್ಮೆ ಗಡಿಬಿಡಿಯಲ್ಲಿ ಅಡುಗೆ ತಯಾರು ಮಾಡುವಾಗ ಎಡವಟ್ಟಾಗಿ ಪಾಕವೇ ಬದಲಾಗಿ ಹೊಸ ರುಚಿಯೇ ಉದ್ಭವಗೊಳ್ಳುವಂತಹ ಪರಿಸ್ಥಿತಿಗಳು ಬಂದೊದಗಿ ಬಿಡುತ್ತದೆ. ಬಹುಷ; ಇದಕ್ಕೆ ಯಾವ ಮನೆಯಾಕೆಯೂ ಹೊರತಾಗಿಲ್ಲ ಅನ್ನಿಸುತ್ತೆ.  ಮೊದ ಮೊದಲೆಲ್ಲಾ ತೀರಾ ಸಾಂಪ್ರದಾಯಿಕ ಅಡುಗೆಗಳು. ಹಾಗಾಗಿ ಇಂತಿಂತ ಖಾದ್ಯಕ್ಕೆ ಇಂತಿಂತದೇ ರುಚಿ ದಕ್ಕುತ್ತದೆ ಅಂತ ಕರಾರುವಕ್ಕಾಗಿ ಹೇಳಿ ಬಿಡಬಹುದಾಗಿತ್ತು. ಅಡುಗೆ ಮಾಡುವಾಗ ಸಾಕಷ್ಟು ಏಕಾಗ್ರತೆಯನ್ನು ಮೈಗೂಡಿಸಿ ಕೊಳ್ಳಬೇಕಾಗಿತ್ತು. ಮನಸ್ಸು ಕೊಂಚ ವಿಚಲಿತವಾಗಿ ಹಾಕುವ ಸಾಮಾಗ್ರಿ ತುಸು … Read more

ಡೆಸರ್ಟ್ ಫ್ಲವರ್’ ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ

ಸಹಮತ ಫಿಲಮ್ ಸೊಸಯಟಿ ಮಂಗಳೂರು ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನವಂಬರ್ 30ರ ಭಾನುವಾರ ಮಧ್ಯಾಹ್ನ 2.00 ಗಂಟೆಯಿಂದ 6.00 ಗಂಟೆ ತನಕ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಸಾಹಿತ್ಯ ಸದನದಲ್ಲಿ ಸೋಮಾಲಿಯನ್ ರೂಪದರ್ಶಿ ವಾರೀಸ್ ಡೇರಿಯ ಆತ್ಮಕತೆಯಾಧಾರಿತ .' ಡೆಸರ್ಟ್ ಫ್ಲವರ್' ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ ಏರ್ಪಡಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕವಿ ಡಾ. ಅನುಪಮ ಎಚ್ ಎಸ್ .ಮತ್ತು ಮಂಗಳೂರಿನ ಚಿಂತಕ ಡಾ.ಬಿ.ಎಸ್ ಕಕ್ಕಿಲ್ಲಾಯ ಚಲನಚಿತ್ರದ … Read more

ಭಯದ ಆ ರಾತ್ರಿ: ನಾಗರಾಜ್ ಹರಪನಹಳ್ಳಿ.

ಹಳವಂಡ ಕನಸು. ಅದ್ಹೇನೋ ಸಮಾರಂಭ. ಹೋದಲೆಲ್ಲಾ ಚಿವುಟಿದಂತೆ; ದೇಹದ ಎದೆ ಹಾಗೂ ಕಿಬ್ಬೊಟ್ಟೆ ಭಾಗಕ್ಕೆ ಯಾರೋ ತಿವಿದಂತೆ. ತಿವಿಯುವ ಕೈ ಮತ್ತು ಮುಖ ಮಾತ್ರ ಅಸ್ಪಷ್ಟ. ಕಿರುಕುಳ ಮುಂದುವರಿದಂತೆ, ಅದರಿಂದ ತಪ್ಪಿಸಿಕೊಂಡ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಂತೆ ಅದೆಂಥದೋ ಭಾರ ಎನಿಸುವ ಕನಸು. ಯಾರೋ ವೆಹಿಕಲ್  ಪಾರ್ಕಿಂಗ್ ಗೇಟ್ ತೆರದಂತೆ ಸದ್ದು. ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಎದೆಯ ಮೇಲೆ ಕೈಯಿಟ್ಟು ಮಲಗಿದ್ದಕ್ಕೋ ಏನೋ…ಇರಬೇಕು. ಕೆಟ್ಟ ಕನಸು. ಬೆಡ್ ರೂಂ ಲೈಟ್ ಹಾಕಿದ. ಕೋಣೆಯಲ್ಲಿ ಆತನ ಜೊತೆ ಇರುವುದು … Read more

ಮಕ್ಕಳ ದಿನದ ಮಹತ್ವ: ಹೊರಾ.ಪರಮೇಶ್ ಹೊಡೇನೂರು

    ಅಪ್ಪ ತನ್ನ ಅಂಗಿ ಜೇಬಿನಲ್ಲಿ ಸದಾ ಎರಡು ಪೆನ್ನುಗಳನ್ನು ಇಟ್ಟುಕೊಳ್ಳುತ್ತಿದ್ದ ಶಿಸ್ತುಬದ್ಧ ಜೀವನದ ವಕೀಲರು. ಮಗನಿಗೆ ಮಾತ್ರ ಆ ಎರಡು ಪೆನ್ನುಗಳ ಅಗತ್ಯವೇನು ಎಂಬ ತರ್ಕ. ಒಮ್ಮೆ ಅಪ್ಪನಿಗೆ ಹೇಳದೆ ಆ ಎರಡು ಪೆನ್ನುಗಳಲ್ಲಿ ಒಂದನ್ನು ಮಗ ಎಗರಿಸಿಬಿಟ್ಟ ಇದನ್ನು ಗಮನಿಸಿದ ಅಪ್ಪ ಹೆಂಡತಿ ಮಗನನ್ನು ಗದರಿಸಿ ಕೇಳಿದಾಗ ಮಗನು ತಾನು ತೆಗೆದುಕೊಂಡಿದುದಾಗಿ ಹೇಳಿದನು. ಇದನ್ನು ಕೇಳಿದ ಅಪ್ಪನು ಹೇಳದೇ ಕೇಳದೇ ಪೆನ್ನು ತೆಗದುಕೊಂಡಿದ್ದು ತಪ್ಪೆಂದು ತಿಳಿಸಿ ಬೈಯ್ದು ಬುದ್ಧಿ ಹೇಳಿದರು. ಈ ಪ್ರಸಂಗದಿಂದಲೇ … Read more

ನಿಮ್ಮ ಗಮನಕ್ಕೆ

ಬ್ಲೂ ವೇವ್ಸ್ : ನಿಕ್ಷೇಪ- 2014 : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ ಕನ್ನಡ ಯುವ ಬರಹಗಾರರ ಸಾಮಾಜಿಕ ಜಾಲತಾಣದ ಸಾಹಿತ್ಯ ವೇದಿಕೆ ಬ್ಲೂ ವೇವ್ಸ್ (ನೀಲಿ ಅಲೆಗಳು) ಫೇಸ್ಬುಕ್ ಪೇಜ್ ಬಳಗದ ವತಿಯಿಂದ ಕನ್ನಡದ ಯುವ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಕ್ಷೇಪ – 2014 (ನವ ಚಿಂತನೆಗಳ ಅಗೆತ) ಎಂಬ ಸ್ಪರ್ಧೆಯಡಿ ಏಳು ಪ್ರಸಕ್ತ ವಿದ್ಯಮಾನಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾವಂತ ಸೃಜನಶೀಲ ಯುವ ಬರಹಗಾರರು ಇದರಲ್ಲಿ ಪಾಲ್ಗೊಳ್ಳಬಹುದು.  ವಿಷಯಗಳು ಇಂತಿವೆ. … Read more

ಕನಸು: ದಿವ್ಯ ಆಂಜನಪ್ಪ

'ಕನಸು', ಕೇಳಲೆಷ್ಟು ಸುಮಧುರ!. ಕನಸೆಂಬುದು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಹುಟ್ಟುತ್ತಾ ಕಾಡುತ್ತಲೇ ಇರುವುದು. ಕನಸು ಕಾಣದ ಮನಸ್ಸು ಸಾಧ್ಯವೇ? ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಬದುಕಲಿ ಸೊಗಸೇ ಇರುತ್ತಿರಲಿಲ್ಲ. ಬದುಕು ಎಂದಾಗ ಅದರೊಳಗಿನ ಸೋಲು ಗೆಲುವುಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಸೋಲು ಗೆಲುವುಗಳು ಎಂಬ ಅಂಶಗಳು ಹುಟ್ಟಿಕೊಳ್ಳಲೂ ಮತ್ತೂ ಈ ಕನಸುಗಳೇ ಕಾರಣ. ಆದರೂ ಎಲ್ಲರೂ ಕನಸಿನ ದಾಸರೇ. ''ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ; ಕನಸೇ ಇಲ್ಲದ ದಾರಿಯಲಿ ಹೇಗೆ … Read more

ನಿಮ್ಮ ಗಮನಕ್ಕೆ…

ಅದ್ವೈತ ಪ್ರಕಾಶನ, ಬೆಂಗಳೂರು ಇವರು ಪ್ರಥಮ ಬಾರಿಗೆ ಕನ್ನಡ ಕವಿತೆಗಳ ಆಂಡ್ರಾಯ್ಡ್ ಆ್ಯಪ್ ಒಂದನ್ನು ಅಭಿವೃದ್ದಿ ಮಾಡಿದ್ದಾರೆ. ಈ ಆಂಡ್ರಾಯ್ದ್ ಆ್ಯಪ್ ಅನ್ನು ಗೂಗಲ್ ಸ್ಟೋರ್ಸ್ ನಲ್ಲಿ ಉಚಿತವಾಗಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ನಲ್ಲಿ 25 ಕನ್ನಡ ಕವಿಗಳ ಸುಮಾರು 75 ಕವಿತೆಗಳು ಓದಲು ಸಿಗುತ್ತವೆ. ಈ ಕವಿತೆಗಳಿಗೆ ಪೂರಕವಾಗುವಂತೆ ಉತ್ತಮ ರೇಖಾಚಿತ್ರಗಳು ಸಹ ಈ ಆ್ಯಪ್ ನಲ್ಲಿ ನೋಡಲು ಲಭ್ಯವಿವೆ.  ವಿದ್ಯಾಶಂಕರ್ ಹರಪನಹಳ್ಳಿಯವರ ನೇತೃತ್ವದಲ್ಲಿ ಮೂಡಿಬಂದಿರುವ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಮಾಹಿತಿ … Read more

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಆಸ್ಪತ್ರೆ ಎಂಬ ಜಗದೊಳಗಿನ ಮರಿಜಗತ್ತಿಗೆ ಇರುವ ಮುಖಗಳು ಹತ್ತು ಹಲವು. ನೋವು-ನಲಿವು, ಮಾನವೀಯ-ಅಮಾನವೀಯ ಬಣ್ಣಗಳು ಅಲ್ಲಿನ ಗೋಡೆಯ ತುಂಬ ಆವರಿಸಿಕೊಂಡಿವೆ. ಆಸ್ಪತ್ರೆಯ ಅಂಗಳದಲ್ಲಿ ನನ್ನ ಕಣ್ಣು ಚಿತ್ರಿಸಿಕೊಂಡ ಕೆಲ ಕಪ್ಪು ಬಿಳುಪಿನ ದೃಶ್ಯಗಳು ಇಲ್ಲಿವೆ. ದೃಶ್ಯ ೧: ಜಗತ್ತಿಗೆ ಹೊಸ ಜೀವವೊಂದರ ಆಗಮನವಾಗಿದೆ. ಅದ ಕಂಡು ಅಲ್ಲಿರುವವರ ಮನದಿಂದ ಹರ್ಷದ ಹೊನಲು ಹೊಮ್ಮುತ್ತಿದೆ. ಅಲ್ಲೇ ಸನಿಹದಲ್ಲಿ ಹಿಂದೆಂದೋ ಜಗತ್ತಿಗೆ ಬಂದು, ಹಲವರ ಮನದಲ್ಲಿ ಸಂಭ್ರಮದ ತೇರು ಎಳೆದಿದ್ದ ಜೀವ ಜಗದ ವ್ಯವಹಾರ ಮುಗಿಸಿ, … Read more

“ಜೀವನದಲ್ಲಿ ಗುರಿ ಇರಲಿ”: ಹೊರಾ.ಪರಮೇಶ್ ಹೊಡೇನೂರು

ಅಂದು ತರಗತಿಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಹೇಳುವಾಗ, ಮುಂದೆ ಯಾರ್ಯಾರು ಏನಾಗಲು ಬಯಸುತ್ತೀರಿ? ಎಂದು ಕೇಳಿದೆ.ಕೆಲವರು ಮಾಮೂಲಿಯಂತೆ ಡಾಕ್ಟರ್, ಇಂಜಿನಿಯರ್, ಪೊಲೀಸ್, ಲಾಯರ್, ಕವಿ, ಬರಹಗಾರ, ಮುಖ್ಯಮಂತ್ರಿ, ಶಿಕ್ಷಕ…ಹೀಗೆ ಅನೇಕ ಆಯ್ಕೆಗಳನ್ನು ತಮ್ಮ ಅಭಿಲಾಷೆಯಂತೆ ಹೇಳಿಕೊಂಡರು. ಶಹಬ್ಬಾಸ್ ಗಿರಿ ಕೊಟ್ಟು, ಅವೆಲ್ಲವನ್ನು ಆಗಬೇಕಾದರೆ ಏನು ಪೂರ್ವ ತಯಾರಿ ಮಾಡಿಕೊಳ್ಳಬೇಕೆಂಬುದು ನಿಮಗೇ ಗೊತ್ತೇ ಎಂಬ ನನ್ನ ಮರು ಪ್ರಶ್ನೆಗೆ ಅವರು ತಲೆಯಾಡಿಸಿದರು. ಅವರಿಗ ವಿಷಯ ಮನದಟ್ಟು ಮಾಡಿಕೊಡಲು ಈ ಉದಾಹರಣೆ ಹೇಳಿದೆ. ಪತ್ರಿಕೆಗಳಲ್ಲಿ ನನ್ನ ಕತೆ, ಚುಟುಕ, … Read more

ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ಕೊರತೆಯೊಂದನು  ನೀನು ನೆನೆನೆನೆದು ಕೆರಳಿ ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವುದು ಬದುಕೇನೋ? ಮಂಕುತಿಮ್ಮ ಇದೇನೋ ಸೂರಿ ಏನೋ ಬಡಬಡಿಸ್ತಾ ಇದ್ದೀಯಾ? ಯಾರೀ ಮಂಕುತಿಮ್ಮ? ಎಂದು ಪ್ರಶ್ನಿಸಿದ ಸ್ನೇಹಿತನ ಮೇಲೆ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ ಏನೂ ಇಲ್ಲ ಕಣೋ ಅದು ಡಿ.ವಿ.ಜಿ ಅವರ ಕಗ್ಗ ಎಂದೆ. ಹೌದಾ, ಏನಿದರ ಅರ್ಥ ಎಂದ ಅವನಿಗೆ ನನಗೆ ತಿಳಿದ ಮಟ್ಟಿಗೆ ವಿವರಿಸಿದೆ.  ಮಂಗ ತನ್ನ ಮೈಮೇಲೆ ಸ್ವಲ್ಪ ಗಾಯವಾದರೂ ಅದನ್ನು ಕೆರೆದು … Read more

ಏನು ಸೊಗಸಿದೀ ಮಧುರ ಸಂಬಂಧ: ಪೂರ್ಣಿಮಾ ಸುಧಾಕರ ಶೆಟ್ಟಿ

’ಸಂಬಂಧ’ ಈ ಪದವೇ ನನಗೆ ವಿಚಿತ್ರವಾಗಿ ಕಾಣುತ್ತದೆ. ಈ ಸಂಬಂಧ ಅನ್ನುವುದು ಪರಸ್ಪರರನ್ನು ಬೆಸೆಯುವ ಕೊಂಡಿಯಾಗಿ ಮಾನವನ ಜೀವನದಲ್ಲಿ ಮಹತ್ತರವಾದ ಪ್ರಭಾವ ಬೀರುತ್ತದೆ. ಜೀವನದಲ್ಲಿ ಭಾವ ಬಂಧಗಳ ಅನ್ಯೋನ್ಯತೆಯ ಗೂಡು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ಹೀಗಿರುವಾಗ ನನ್ನನ್ನು ಅನೇಕ ಸಲ ಕಾಡಿದ, ಕಾಡುತ್ತಿರುವ ಪ್ರಶ್ನೆ ಅಂದರೆ ಸಂಬಂಧ ಅಂದರೇನು? ಸಂಬಂಧಿಕರು ಯಾರು? ಇತ್ಯಾದಿ. ನಾವು ಇವರು ನಮ್ಮ ಸಂಬಂಧಿಕರೆಂದು ಕರೆಯುವುದು ನಮ್ಮ ರಕ್ತ ಸಂಬಂಧಿಗಳನ್ನು. ಹಾಗಿದ್ದರೆ ನಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ಪ್ರಾಮುಖ್ಯತೆ ಪಡೆಯುವ ಇತರರು ನಮ್ಮ ಸಂಬಂಧಿಕರಲ್ಲವೇ?. … Read more

ಆಂಬುಲೆನ್ಸ್ ಗೂ ಮೊದಲೇ ಪಿಜ್ಜಾ ಡೆಲಿವರಿ : ಸಂತೋಷ್ ಗುರುರಾಜ್

ಗೆಳೆಯರೇ ಈ ನಮ್ಮ ದೇಶದ ವ್ಯವಸ್ಥೆಯೇ ಹೀಗಾ ಅನಿಸ್ಸುವಷ್ಟು ಮತ್ತು ಇದನ್ನು ಬದಲಾಯಿಸಲು ಆಗುವುದೇ ಇಲ್ಲವಾ ಎನ್ನುವ ಅನುಮಾನ ಬರುವುದಂತೂ ಖಂಡಿತ, ಯಾಕೇ ಈ ರೀತಿಯ ಹೀನಾಯ ಪರಿಸ್ಥಿತಿ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ, ಯಾಕೆ ಈ ಸರಕಾರಗಳಿಗೆ ಇಷ್ಟೊಂದು ನಿರ್ಲಕ್ಷ್ಯ ದೋರಣೆ, ಸರಕಾರದ ಕೆಲಸ ದೇವರ ಕೆಲಸ ಎಂದು ಮಾಡಬೇಕಾಗಿರುವ ಇವರು ತಮ್ಮ ತಮ್ಮ ಅದಿಕಾರಕ್ಕೆ ಹೊಡೆದಾಡುತ್ತ, ತಮ್ಮ ತಮ್ಮ ಖಜಾನೆಗಳನ್ನು ತುಂಬಿಸಿ ಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. (ಎಲ್ಲರೂ ಹೀಗೆ ಇರುತ್ತಾರೆಂದು ಹೇಳಲಾಗುವುದಿಲ್ಲ, ನಿಷ್ಟಾವಂತರು ಇದ್ದಾರೆ ಆದರೆ … Read more

ಹೆಣ-ಹೆಣ್ಣು:ನಳಿನ ಡಿ.

  ಭಾನುವಾರದ ಒಂದು ನಡುಮಧ್ಯಾಹ್ನ ಐದು ಹೆಣ್ತಲೆಗಳು ಲಕ್ಕಮ್ಮ ಕಾಲೇಜಿನ ಅರ್ಧ ಕಟ್ಟಿದ್ದ ಗಿಲಾವು ಮಾತ್ರ ಕಂಡ ಸಿಮೆಂಟ್ ಕಟ್ಟಡದೊಳಗೆ ರಿಂಗಣಿಸದೆ ಸುಮ್ಮನಿದ್ದ ದೂರವಾಣಿಯ ಸುತ್ತಾ ಸಂಭಾಷಿಸುತ್ತಿದ್ದವು. ಹೋದವಾರ ಅದೇ ಜಾಗದಲ್ಲಿ ನಡೆದಿದ್ದ ಅಲ್ಲಿನ ಅಟೆಂಡರನ ನಂಟಸ್ಥಿಕೆಯ ಓಸಿ ವಿವಾಹದ ಗಬ್ಬೆಲ್ಲಾ ಮೂಟೆಯಾಗಿ ಕಾಲೇಜಿನ ಮುಂದೆ ಬಿದ್ದಿದ್ದು, ಕೊಳೆತು ಬರುತ್ತಿದ್ದ ವಾಸನೆಗೆ ಮೂಗು ಮುಚ್ಚಿಕೊಂಡೇ ಅನಿವಾರ್ಯವಾಗಿ ಅಲ್ಲಿ ನೆರೆದಿದ್ದರವರು. ಗುಲ್ಬರ್ಗಾದಿಂದ ತರಭೇತಿಗಾಗಿ ಬಂದು ಅನ್-ಏಡೆಡ್ ಆಗಿದ್ದ ಕಾಲೇಜಿಗೆ ಸೇರಿಕೊಂಡು ಸೈ ಅನ್ನಿಸಿಕೊಳ್ಳಲು ಎಣಗುತ್ತಿದ್ದ ಅರಕೇರಿ, ಮಂಗಳೂರಿನ ಬಳಿ … Read more

ಶಾಲೆ ಬಿಡುವ ಮಕ್ಕಳಿಗೆ ಯಾರು ಹೊಣೆ?:ಕೆ.ಎಂ.ವಿಶ್ವನಾಥ

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ಗುಣಾತ್ಮಕತೆ ತರಲು, ಗಣನೀಯವಾಗಿ ಶ್ರಮಿಸಲಾಗುತ್ತಿದೆ . ಶಿಕ್ಷಣ ಎಲ್ಲರ ಸೊತ್ತಾಗಬೇಕು. ಪ್ರತಿಯೊಂದು ಮಗು ಶಾಲೆಯ ಆಸರೆಯಲ್ಲಿ ತನ್ನ ಮುಗ್ಧ ಬಾಲ್ಯವನ್ನು ಕಳೆಯಬೇಕು. ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಹೊರತರಲಾಗುತ್ತಿದೆ. ಪ್ರತಿಯೊಂದು ಯೋಜನೆಯೂ ಉತ್ತಮ ಅನುಪಾಲನೆ ಮಾಡಿದಾಗ ಮಾತ್ರ, ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಸಾಧ್ಯವಾಗುತ್ತದೆ. ಈಗಾಗಲೇ ನಮ್ಮ ರಾಜ್ಯ, ಶಾಲೆ ಬಿಟ್ಟ ಮಕ್ಕಳಲ್ಲಿ ಮೊದಲನೆ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನೂರು ಯೋಜನೆಗಳು ಹೊರತಂದ ರಾಜ್ಯ ಸರಕಾರ, ಪ್ರತಿ ಹಂತದಲ್ಲಿ ಯೋಜನೆಯ ಸೂಕ್ತ ಪರಿಶೀಲನೆಯನ್ನು ಮರೆಮಾಚುತ್ತಿದೆ.  ರಾಜ್ಯದಲ್ಲಿ … Read more