ಮೈನ್ ರೋಡ್ನಲ್ಲೊಂದು ಮನೆ ಮಾಡಿ..!: ಎಸ್.ಜಿ.ಶಿವಶಂಕರ್

"ಏ..ಏ…" ನಾನು ಕೂಗುತ್ತಲೇ ಇದ್ದೆ! ನನ್ನ ಮಾತಿಗೆ ಕ್ಯಾರೇ ಅನ್ನದೆ, ಹಿಂದಿನ ಮನೆಯ ಕಾಂಪೌಂಡಿನಿಂದ ಕಸ ತುಂಬಿದ ಪ್ಲಾಸ್ಟಿಕ್ ಕವರು ದೊಪ್ಪನೆ ಖಾಲಿ ಸೈಟಿಗೆ ಬಿತ್ತು! ಅದರಿಂದ ನಿಮಗೇನು ತೊಂದರೆ? ಎನ್ನುತ್ತೀರಾ? ಆ ಖಾಲಿ ಸೈಟು ಪಕ್ಕದ್ದೇ ನನ್ನ ಮನೆ! ಹಿಂದಿನ ಮನೆಯವರು ಪ್ರತಿ ದಿನ ಹೀಗೆ ಫಾಸ್ಟ್ ಬೌಲರುಗಳತೆ ದಿನವೂ ಎಸೆಯುತ್ತಿದ್ದ ಕಸ ರಾಶಿಯಾಗಿತ್ತು! ಅದು ಹರಡಿದ್ದ ಸೈಟಿನಲ್ಲ್ಲಿ ತಿಪ್ಪೆ   ಸೃಷ್ಟಿಯಾಗಿತ್ತು! ದುರಾದೃಷ್ಟಕ್ಕೆ ನನ್ನ ಮನೆಯ ಎರಡು ಪಕ್ಕದ ಸೈಟುಗಳು ಖಾಲಿಯೇ! ಎಡ ಪಕ್ಕದ … Read more

ಅವ್ವನ ಸೀರೆ ಮತ್ತು ಬಾಳೀಗ೦ಟು…: ಜಯಶ್ರೀ ದೇಶಪಾಂಡೆ

     'ಎರಡು ..ಮೂರು ..ನಾಲ್ಕು , ಐದು. ಮತ್ತ ಇದು ಹತ್ತು . ಸಾಕೇನು?" " ಸಾಕು ಅ೦ದುಬಿಡ್ಲಿ ಇ೦ವಾ"  ಅ೦ತ ಇರ್ಬೇಕು ಅವ್ವನ ಮನಸಿನ್ಯಾಗ. ಯಾಕ೦ದ್ರ ಅವನ ಹಿ೦ದ ನಾನೂ          ನಿ೦ತಿದ್ದೆ.  ನನ್ನ ಕೈಗೂ ಹಿ೦ಗೇ ರೊಕ್ಕಾ  ಎಣಿಸಿ ಹಾಕಬೇಕಿತ್ತು..ಆದರ ಇ೦ವಾ ,ಅ೦ದ್ರ ನನ್ನ ತಮ್ಮ ,ಹೇಳಿ ಕೇಳಿ ಅಚ್ಚ್ಹಾದ  ಮಗಾ..  ಅ೦ವಾ ನಮ್ಮವ್ವನ 'ಶೇ೦ಡೆಫಳ' ಅರ್ಥಾತ್  (ಮುದ್ದಿನ ಮಗ !) ..ಅ೦ವಗ ಕೇಳಿದಷ್ಟು ಕೊಡೂದು ಎ೦ದಿಗಿದ್ರೂ ಇದ್ದದ್ದನ … Read more

’ಪಾನ ಮಹಿಮೆ’: ಗುಂಡುರಾವ್ ದೇಸಾಯಿ ಮಸ್ಕಿ

                                             ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದ್ರೆ ಪಾರ್ಟಿ ಅಂದ್ರ ಜನ ಕುಡಿತ, ಕಡಿತಾ ಇರಬೇಕು ಅಂತ ಭಾವಸ್ತಾರಲ್ಲ ಯಾಕೆ ಅಂತ! ಅದು ಬಿಟ್ಟು ಸ್ವಾದಿಷ್ಟ ಭೋಜನ ಸವದ್ರ ಪಾರ್ಟಿ ಆಗಲ್ವಾ. ಇಂತಹ ವಿರೋಧ ಕಾರಣಕ್ಕಾಗಿಯೇ ನಾನು ಹಲವಾರು ಸಂಬಂಧಗಳನ್ನು ಕಳೆದುಕೊಂಡಿದ್ದೇನೆ. ಏನು ಚಟ ಮಾಡದ ಹುಂಬ ಎಂದು … Read more

ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!     ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’     ‘ಮಿಲಿ’ ಎಂಬ … Read more

ಆ ಮೂರು ದಿನಗಳು: ಗುಂಡುರಾವ್ ದೇಸಾಯಿ ಮಸ್ಕಿ

ಯಾವು ಆ ಮೂರು ದಿನಗಳು!  ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು  ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ  ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು … Read more

ವೇದ ಸುಳ್ಳಾದರೂ ಗಾದೆ ಸುಳ್ಳಾಗದು!: ಎಸ್.ಜಿ.ಶಿವಶಂಕರ್

   "ಹಲೋ ?" ಮಾಮೂಲಿಗಿಂತ ತುಸು ಏರಿದ ವಿಶ್ವನ ದ್ವನಿ ಟೆಲಿಫೋನಿನಲ್ಲಿ ಮೊಳಗಿತು. "ಹೇಗಿತ್ತು ಒಥೆಲೋ ನಾಟಕ" ಹಿಂದಿನ ದಿನ ನಾಟಕ ನೋಡುವುದಾಗಿ ವಿಶ್ವ ಹೇಳಿದ್ದು ನೆನಪಾಗಿ ಕೇಳಿದೆ. "ನಾಟಕದ ಮನೆ ಹಾಳಾಯಿತು! ನನ್ನ ಜೀವನ ನಾಟಕದ ದುರಂತ ದೃಶ್ಯ ನೆನ್ನೆ ನಡೆಯಿತು!" ವಿಶ್ವನ ಧ್ವನಿ ಭಾರವಾಗಿತ್ತು. ಶುದ್ಧ ವೇದಾಂತಿಯ ಮಾತಿನ ಧಾಟಿ ಕಂಡಿತು. ವಿಶ್ವನ ಮಾತಿಗೆ ವಿವರಣೆ ಬೇಕಾಗಿರಲಿಲ್ಲ. ಅವನು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ ಎಂದು ನನಗಾಗಲೇ ತಿಳಿದುಹೋಗಿತ್ತು! ಎರಡು ದಶಕಗಳ ಸ್ನೇಹದಲ್ಲಿ ವಿಶ್ವನ ವಿಶ್ವದರ್ಶನವಾಗಿತ್ತು. ನನ್ನ … Read more

ನಾಯಿ ಪಾಡು: ಗುಂಡುರಾವ್ ದೇಸಾಯಿ

ವಾರದಿಂದ ತಲೆ ಸಿಡದು ಹೋದಂಗಾಗಕತಿತು. ಕ್ಷಣ ಕ್ಷಣಕ್ಕೂ ಭಯ ಆತಂಕ ಸುರುವಾಗಕತಿತು, ಶಾಲೆಯಲ್ಲಿ ಪಾಠ ಮಾಡುವಾಗಲು ಮನೆ ವಾತಾವರಣ ನೆನಸಿಕೊಂಡ ಕೂಡಲೆ ಸ್ಥಬ್ಧನಾಗಿ ನಿಂತುಬಿಡುತ್ತಿದ್ದೆ.  ಮಕ್ಕಳು ’ಸಾರ್, ಮುಂದು ಹೇಳ್ರೀ ಯಾಕ ಹಾಂಗ ನಿಂತ್ರಿ’ ಎಂದು ಎಚ್ಚರಿಸಿದಾಗಲೇ ವಾಸ್ತವಕ್ಕೆ ಬರೋದು. ಸಹುದ್ಯೋಗಿಗಳು ’ಯಾಕ ಹಿಂಗಾಗ್ಯಾರ? ಏನು ತಾಪತ್ರಯನೋ ಏನೋ? ಅಥವಾ ಮನೆಯಲ್ಲಿ ಮನೆಯವರ ಜೊತೆಗೆ ಮನಸ್ತಾಪನೋ?’ ಎಂದು ಹಲವು ಬಾರಿ ಕೆದುಕಲೆತ್ನಿಸಿದರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ನಿಮಗೂ ಏನೇನೋ ಕಲ್ಪನೆಗಳು ನನ್ನ ಬಗ್ಗೆ ಮೂಡಿರಬೇಕಲ್ಲ. ಅದು ಹೇಳುವ ವಿಷಯವೇನು … Read more

ಯುರೇಕಾ..! ಯುರೇಕಾ..!! : ಎಸ್.ಜಿ.ಶಿವಶಂಕರ್

’ರೀ…’ ಅಲೆಅಲೆಯಾಗಿ ತೇಲಿಬಂದು ವಿಶ್ವನ ಕರ್ಣಪಟಲದ ಮೇಲೆ ಪ್ರಹರಿಸಿದುವು-ಶಬ್ದ ತರಂಗಗಳು! ತೂಕಡಿಸುತ್ತಿದ್ದ ವಿಶ್ವ ಮೆಟ್ಟಿ ಬಿದ್ದ!! ನಿದ್ರೆ ಹಾರಿತು! ಬಿ.ಪಿ ಏರಿತು! ಅದು ತನ್ನ ಜೀವನ ಸಂಗಾತಿ ವಿಶಾಲೂ ದನಿಯೆಂದು ತಿಳಿದು. ಆ ಕ್ಷಣ ಏನು ಮಾಡಬೇಕೆಂದು ತೋಚದೆ ಅವಾಕ್ಕಾದ. ಆ ದನಿಯಲ್ಲಿನ ಭಾವ ಅರ್ಥ ಮಾಡಿಕ್ಕೊಳ್ಳಲು ಪ್ರಯತ್ನಿಸಿದ. ಮೊದಲಿಗೆ ದನಿ ಬಂದ ದಿಕ್ಕು ಗುರುತಿಸಲು ಪ್ರಯತ್ನಿಸಿದ. ಅದು ಮನೆಯ ಹಿಂಭಾಗದಿಂದ ಬಂತು ಎಂಬುದನ್ನು ಯಶಸ್ವಿಯಾಗಿ ಗುರುತಿಸಿದ. ನಂತರ ಆ ದನಿಯಲ್ಲಿ ಆತಂಕವಿದೆಯೆ..? ಗಾಬರಿಯಿದೆಯೆ..? ಇಲ್ಲಾ ಸಹಜವಾದ … Read more

ಇಂಗು ತೊಂಡೆ ಇದ್ದರೆ…: ಮಾಲಾ

ಅಂಗಡಿಯಿಂದ ತರಕಾರಿ ತರುವುದು ಬಲು ಸುಲಭ. ಕೈಯಲ್ಲಿ ದುಡ್ಡಿದ್ದರೆ ಸಾಕು. ಆದರೆ ತರಕಾರಿ ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಹಿತ್ತಲಲ್ಲಿ ತರಕಾರಿ ಬೆಳೆಯಲು ಎಷ್ಟೋ ಸಲ ನಾನೂ ಪ್ರಯತ್ನಿಸಿದ್ದೆ. ಹಳ್ಳಿಯಿಂದ ಪೇಟೆಗೆ ಬಂದ ನಾನು ಕೆಲವಾರು ವರ್ಷ ಮಣ್ಣಿನ ನಂಟು ಬೆಳೆಸಿದ್ದೆ. ಬೀನ್ಸ್, ಬೆಂಡೆ, ಬದನೆ ಬೀಜ ಹಾಕಿ ಅದು ಸಸಿಯಾಗಿ ಅರಳಿ ನಿಂತಾಗ ಸಂಭ್ರಮಿಸಿದ್ದೆ. ಕೇವಲ ಒಂದೆರಡು ಕಾಯಿ ಬಿಟ್ಟು ಅದನ್ನೇ ಖುಷಿಯಿಂದ ಅಡುಗೆ ಮಾಡಿ ತಿಂದದ್ದು ಇತ್ತು. ನಾವೇ ಬೆಳೆದ ತರಕಾರಿ ತಿನ್ನುವಾಗ … Read more

ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ … Read more

ಮರೆವು: ವೆಂಕಟೇಶ್ ಪ್ರಸಾದ್

ಹಿ೦ದಿನ ದಿನ ಅಲರಾ೦ ಇಡಲು ಮರೆತ ತಪ್ಪಿಗೆ ಇ೦ದು ತಡವಾಗಿ ಏಳುವ೦ತಾಗಿತ್ತು.ಎದ್ದವನೇ ದೈನ೦ದಿನ ಕೆಲಸ ಕಾರ್ಯಗಳನ್ನು ಪೂರೈಸಿ ಆಫೀಸಿಗೆ ಹೊರಟು ಈ ಮರೆವಿಗೆ ಶಪಿಸುತ್ತಾ ಬಸ್ ಹತ್ತಿದ ನ೦ತರವೇ ಧೀರ್ಘವಾಗಿ ಉಸಿರು ತೆಗೆದುಕೊ೦ಡದ್ದು. ಅತ್ತ ತಿರುಗಿದರೆ ಕ೦ಡಕ್ಟರ್ ಟಿಕೆಟ್ ಟಿಕೆಟ್ ಎ೦ದು ನಿ೦ತಿದ್ದ. ಪಾಸ್ ತೋರಿಸೋಣ ಕಿಸೆ ಬ್ಯಾಗ್ ತಡಕಾಡಿದರೆ ಎಲ್ಲಿದೇ?? ಪಾಸ್ ಮನೆಯಲ್ಲೇ ಮರೆತಿದ್ದೆ. ಮತ್ತೆ ಮರೆವಿಗೊ೦ದಷ್ಟು ಶಾಪ ಹಾಕಿ ಪೂಒರ್ತಿ ಬಸ್ ಚಾರ್ಜ್ ಕೊಟ್ಟು ಕಿಟಕಿಯತ್ತ ಮುಖ ಮಾಡಿದೆ.  ಈ ಮರೆವಿನ ವಿಷಯ ಬ೦ದಾಗ … Read more

ಮಹದಾನಂದ: ಉಮೇಶ ಕ. ಪಾಟೀಲ

                   ಭೂಮಿಯ ಮೇಲೆ ಸಹಸ್ರ ಕೋಟಿ ಜೀವರಾಶಿಗಳು ಇವೆ. ಇವೆಲ್ಲ ಜೀವಿಗಳಿಗೆ ಸುಖ, ದು:ಖ, ಸಂತೋಷ, ಆನಂದ ಇರಲೇಬೇಕು. ಅದರಲ್ಲಿಯೂ ಮನುಷ್ಯನು ಪ್ರತಿಯೊಂದು ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾನೆ. ಆನಂದ ಅಥವಾ ಮಹದಾನಂದ ಅಂದರೆ ವಿಶೇಷ ಆನಂದ, ಅತಿಶಯ ಆನಂದ, ದೊಡ್ಡ ಆನಂದ, ಈ ಆನಂದವು ಯಾವಾಗ ಯಾರಿಗೆ, ಯಾವ ಕಾರಣದಿಂದ ಬರುತ್ತದೆ ಎನ್ನುವದನ್ನು ನಿಶ್ಚಿತವಾಗಿ ಹೇಳಲು ಬರುವದಿಲ್ಲ. ಉದಾಹರಣೆಗೆ-ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವುದರಿಂದ  ಆನಂದ … Read more

ಆಯ ತಪ್ಪಿದ್ರೆ ಅಪಾಯ: ಎಂ.ಎಸ್.ನಾರಾಯಣ.

                                      ಮೊನ್ನೆ  ವಾರಾಂತ್ಯಕ್ಕೆ ಗೆಳಯರೆಲ್ಲರೂ ಮೈಸೂರಿನ ನಮ್ಮ ಹಳೆಯ ಅಡ್ಡಾ, ವಿಶ್ವನ ಕ್ಯಾಂಟೀನಿನಲ್ಲಿ ಸೇರಿದ್ದೆವು. ಆಗಷ್ಟೇ ನಮ್ಮನ್ನು ಸೇರಿಕೊಂಡ ಹರೀಶ, “ಇವತ್ತಿನ್ ಬಿಲ್ ನಂದ್ಕಣ್ರಪ್ಪಾ, ಕೊನೇಗೂ ಶ್ರೀರಾಂಪುರ್ದಲ್ಲಿ ಒಂದ್ ಥರ್ಟೀಫ಼ಾಟೀ ತೊಗೊಂಡೇಬಿಟ್ಟೇ ಕಣ್ರೋ, ಬ್ಯಾಂಕ್ಲೋನ್ಗೋಡಾಡ್ತಿದೀನಿ, ಒಂದೊಳ್ಳೆ ಮುಹೂರ್ತ ನೋಡಿ ಗುದ್ಲೀ ಪೂಜೆ ಮಾಡ್ಸೋದೊಂದೇ ಬಾಕಿ ನೋಡಿ” ಅಂತ ಗುಡ್ನ್ಯೂಸ್ ಕೊಟ್ಟೇಬಿಟ್ಟ. ಎಲ್ರೂ … Read more

ಹೀಗೊಂದು ಗೆಳೆಯರ ಬಳಗ! (ಅಳಿದುಳಿದ ಭಾಗ?!): ಗುರುಪ್ರಸಾದ ಕುರ್ತಕೋಟಿ

(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ  ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್  ***** ನಮ್ಮ ಬಳಗದ ಇನ್ನೊಂದು ಅವಿಭಾಜ್ಯ … Read more

ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್

ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು!  ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. … Read more

ಮೈ ಕ್ರೇಝಿ ಲೈಫ್ ಸ್ಟಿಲ್ ಗೋಸ್ ಆನ್..!!: ಸಚಿನ್ ಎಂ. ಆರ್.

ಫ್ಲಾಶ್ ಬ್ಯಾಕ್ ೧ (ಬ್ಲಾಕ್ ಅಂಡ್ ವೈಟ್ ಶೇಡ್):  ಅದು ೨೦೦೫ರ ಇಸವಿ. ಗುಳಿ ಬಿದ್ದ ಕಣ್ಣುಗಳ ಸಾಧಾರಣ ಎತ್ತರದ ತೆಳ್ಳನೆಯ ಬಿಳಿ ಹುಡುಗ ಶಾಲಾ ಗೇಟಿಂದ ಹೊರಬಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಚೀಟಿ ಕೈಲಿತ್ತು. ೮೪% ಮಾರ್ಕ್‌ಸ್ ಬಂದಿತ್ತು. ಒಂದು ಪರ್ಸಂಟ್ ಇಂದ ಡಿಸ್ಟಿಂಕ್ಷನ್ ಮಿಸ್ಸು. ಛೇ.. ಹಳಹಳಿಸಿದ ಆತ..!  ಕಾಲೇಜು ಮೆಟ್ಟಿಲು ಹತ್ತುವ ಹೊತ್ತು. ಅಪ್ಪ ಕೇಳಿದ್ರು ನಿನ್ನ ಮುಂದಿನ ಗುರಿ ಏನೊ? ಅವನುತ್ತರ ಗೊತ್ತಿಲ್ಲಪ್ಪ..,  ಆದ್ರೆ ನಾನು ಸೈಕಿಯಾಟಿಸ್ಟ್ ಆಗ್ತೀನಿ, ಎಲ್ರ ಬುಲ್ಡೆ … Read more

ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ

ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!  "ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… … Read more

ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು … Read more

ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ

ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.   ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ. ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ … Read more

ಕನ್ನಡೋದ್ಧಾರ!: ಗುರುಪ್ರಸಾದ್ ಕುರ್ತಕೋಟಿ

ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ … Read more