‘ಸೋಲು ಗೆದ್ದವನದ್ದು!’ ಕಾದಂಬರಿಯ ಒಂದು ಅಧ್ಯಾಯ: ಮಂಜು ಬನವಾಸೆ
ಅಮ್ಮ-ಅಪ್ಪ ಅದ್ಯಾರ ಕೈಕಾಲು ಹಿಡಿದು ದುಡ್ಡು ತಂದರೋ ಗೊತ್ತಿಲ್ಲ. ಫೀಸು ಎಷ್ಟೋ ಗೊತ್ತಿಲ್ಲ. ನನ್ನನ್ನು ಸಕಲೇಶಪುರದ ಗೌರ್ಮೆಂಟ್ ಪಿಯು ಕಾಲೇಜಿಗೆ ಅಡ್ಮಿಷನ್ ಮಾಡಿಸಲಾಗಿದೆ ಮತ್ತು ಮಡಿಕೆಯೊಂದಿಗೆ ನಾನೂ ಆಟ್ರ್ಸ್ ಫಸ್ಟ್ ಇಯರ್ ಪಿಯುಸಿಗೆ ಹೋಗುತ್ತಿದ್ದೇನೆ ಎಂದು ತಿಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಕಾಲೇಜಿನ ಮೊದಲ ದಿನ ಬಹುಶಃ ಅದು ಜುಲೈ 7ನೇ ತಾರೀಖಿರಬಹುದು ಎನ್ನಿಸುತ್ತದೆ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ನಮ್ಮ ಮನೆಗಳಂತೂ ಅಕ್ಷರಶಃ ಮಂಜಿನಲ್ಲಿ ಮುಳುಗಿ ಹೋಗಿದ್ದವು. ಮಳೆ ಸ್ವಲ್ಪ ಬಿಡುವು ನೀಡಿದಾಗ ಇದ್ದ ಒಂದು … Read more