ಕಥಾಕಾಲ: ಪ್ರಶಸ್ತಿ ಪಿ.

ಎಲೆಕ್ಷನ್ನಾದ ಮೇಲೆ ಆಗೊಮ್ಮೆ ಈಗೊಮ್ಮೆಯಾದರೂ ಬರುತ್ತಿದ್ದ ಮಳೆಯ ಸುಳಿವೂ ಇಲ್ಲದೇ ಅದೆಷ್ಟೋ ದಿನಗಳಾಗಿ , ತನ್ನನ್ನು ತಾನೇ ಸುಟ್ಟುಕೊಳ್ಳುವಂತಿದ್ದ ಬಿರುಬೇಸಿಗೆ. ಈ ಸುಡುಬೇಸಿಗೆಯಲ್ಲಿ ಕೂತ ಕುರ್ಚಿಯೂ ಕೊಂಚ ಹೊತ್ತಲ್ಲೇ ಕೆಂಡದಂತೆನಿಸಿದರೆ ಆಶ್ಚರ್ಯರ್ಯವೇನಿಲ್ಲ. ಸ್ವಂತಕ್ಕೇ ಸಮಯವಿಲ್ಲದೀ ಸಮಯದಲ್ಲೊಬ್ಬರ ಹುಡುಕಾಟ ನಡೆದಿದೆ. ಅವ್ರೇ ಕತೆಗಾರ ಕಟ್ಟಪ್ಪ. ಈ ಕಟ್ಟಪ್ಪರಿಗೆ ಕತೆ ಬರೆಯೋದು ಅಂದ್ರೆ ಅದೊಂದು ತಪಸ್ಸು. ಯಾರೋ ಕೇಳಿದ್ರು ಅಂತ, ಏನೋ ನೋಡಿದ್ರು ಅಂತ ತಕ್ಷಣಕ್ಕೆಲ್ಲಾ ಏನೇನೋ ಎಳೆಹೊಡೆದು ಅದು ಕತೆಯಾಗೋದಲ್ಲ.ಈ ತತ್ ಕ್ಷಣದ ಕತೆ ಮತ್ತು ಮೂಡಿದ್ದಾಗ, ಬಿಡುವಿದ್ದಾಗೆಲ್ಲಾ ಒಂದೊಂದು … Read more

ಹಾದಿ ದೂರವಿದೆ ಇನ್ನೂ, ಭವ್ಯ ಭಾರತಕ್ಕೆ: ಪ್ರಶಸ್ತಿ ಪಿ.

ಮುಂದುವರೆಯೋ ಮುನ್ನವೇ ಹೇಳಿಬಿಡುತ್ತೇನೆ. ಇದು ಬರಹಕ್ಕೆ ಕೇಸರಿ, ಹಸಿರು ಅಥವಾ ಇನ್ಯಾವುದೇ ಬಣ್ಣ ಬಳಿಯೋ ಪ್ರಯತ್ನವಲ್ಲ. ಕಮಲ, ಹಸ್ತ, ಆನೆ, ಕತ್ತಿ, ಪೊರಕೆ ಅಥವಾ ಇನ್ಯಾವುದೇ ಚಿನ್ನೆ ತೊಡಿಸೋ ಪ್ರಯತ್ನವಲ್ಲ.  ಧರ್ಮ, ರಾಜ್ಯ, ಪಕ್ಷಗಳೆಂಬ ಬೇಧಗಳ ಹೊರಬಂದು ವಾಸ್ತವದ ಅನಿವಾರ್ಯತೆಗಳೇನಿದೆಯೆಂಬುದನ್ನು ಬಿಂಬಿಸೋ ಅಗತ್ಯವಷ್ಟೇ .ಮೂವತ್ತು ವರ್ಷಗಳ ಕಿಚಡಿ ಸರ್ಕಾರಗಳ ನಂತರ ಕೊನೆಗೂ ಭಾರತಕ್ಕೊಂದು ಸುಭದ್ರ ಸರ್ಕಾರ ಸಿಕ್ಕಿದೆ. ಕಾಂಗ್ರೆಸ್ಸಾಗಲಿ, ಭಾಜಪಾವೇ ಆಗಲಿ. ಆದ್ರೆ  ಸದಾ ಸ್ಟ್ರೈಕೇ ಮಾಡೋ ಕಮ್ಯೂನಿಸ್ಟು, ಮಾರ್ಕಿಸ್ಟು, ಲೆಫ್ಟಿಸ್ಟುಗಳ ಕಾಲು ಹಿಡಿಯೋ ಕರ್ಮದ ಚಿತ್ರಾನ್ನ … Read more

ಬಾಳೇಕಾಯಿ ರಂಗಪ್ಪನ ಕತೆಗಳು: ಪ್ರಶಸ್ತಿ ಪಿ.

ಬಾಳೇ ಹಣ್, ಬಾಳೇ ಹಣ್.. ನೇಂದ್ರ ಬಾಳೆ, ಮೈಸೂರ್ ಬಾಳೆ, ಪುಟ್ ಬಾಳೆ, ಏಲಕ್ಕಿ ಬಾಳೆ, ವಾಟ್ ಬಾಳೆ.ಬಾಳೆ ಹಣ್.. ಬಾಳೇ ಹಣ್.. ಬೀದಿ ಬೀದಿ ಕೂಗಿ ಕೂಗಿ ರಂಗಪ್ಪನ ಬಾಳೇ ಹಣ್ಣಾಗಿಹೋಗಿತ್ತು. ಈ ಬಾಳೇ ಹಣ್ಣಿನ ಕೂಗು ಸಂಜೆ ಹೊತ್ತಿಗೆ ಬರ್ತಾ ಇದ್ರೆ ಬೀದಿ ಹುಡುಗ್ರೆಲ್ಲಾ ಆ ಗಾಡಿಗೆ ಮುತ್ತಾ ಇದ್ರು. ರಂಗಪ್ಪನ ಮನೆಯೂ ಈ ಬೀದಿಯ ಹತ್ರವೇ ಇದ್ದಿದ್ರಿಂದಲೋ, ಆ ಬೀದಿಯ ಚಿಳ್ಳೆ ಪಿಳ್ಳೆ ಹುಡುಗ್ರ ಜೊತೆ ಮಾತಾಡೋದ್ರಲ್ಲಿ ಸಿಗೋ ಅದಮ್ಯ ಸುಖಕ್ಕೋಸ್ಕರವೋ ಗೊತ್ತಿಲ್ಲ … Read more

ವಾರದ ಸಿನಿಮಾ ಟೂ ಸ್ಟೇಟ್ಸ್: ಪ್ರಶಸ್ತಿ ಪಿ.

ಕಾದಂಬರಿಯಾಧಾರಿತ ಚಿತ್ರಗಳೆಂದ್ರೆ ಅವೆಲ್ಲಾ ಕಲಾತ್ಮಕ ಚಿತ್ರಗಳು. ನಿರ್ಮಾಪಕನ ರೊಕ್ಕ ಖಾಲಿ ಮಾಡಿ ನಿರ್ದೇಶಕನಿಗೊಂದು ಅವಾರ್ಡ್ ತರಬಹುದೇ ಹೊರತು ಪ್ರೇಕ್ಷಕರ ಮನಗೆಲ್ಲೋ ಮಾತಿಲ್ಲ ಅನ್ನೋದು ಸಾಮಾನ್ಯ ಜನರ ಮಾತು. ಕನ್ನಡದಲ್ಲಿ ಕಾನೂರು ಸುಬ್ಬಮ್ಮ ಹೆಗ್ಗಡತಿ, ಹಿಂದಿಯಲ್ಲಿ ಪಹೇಲಿಯಂತಹ ಸಿನಿಮಾಗಳು ಸೋತಿದ್ರೂ ಆಗೋಂದೀಗೊಂದು ಕಾದಂಬರಿಯಾಧಾರಿತ ಚಿತ್ರಗಳು ಸಖತ್ ಹಿಟ್ಟಾಗುತ್ತವೆ. ಆ ಸಾಲಲ್ಲಿ ಇಂಗ್ಲೀಷಿನಲ್ಲಿ ನೆನಪಾಗೋದು ಡಾನ್ ಬ್ರೌನಿನ ಐದು ಕಾದಂಬರಿಯಾಧಾರಿತ ಸಿನಿಮಾಗಳು. ಹಿಂದಿಯಲ್ಲಿ ಚೇತನ್ ಭಗತ್. ಅಮೀರ್ ಖಾನಿನ ತ್ರೀ ಈಡಿಯಟ್ಸೆಂಬ ಸಿನಿಮಾ ಬಂದಾಗ ಆ ಸಿನಿಮಾ ಚೇತನ್ ಭಗತ್ತಿನ … Read more

ಮರುಜನ್ಮ: ಪ್ರಶಸ್ತಿ ಪಿ.

ಊರಾಚೆಯ ಒಂದು ನಾಲೆ. ಚಿಕ್ಕಂದಿನಲ್ಲಿ ಈಜು ಬೀಳುತ್ತಿದ್ದ, ಬಟ್ಟೆ ತೊಳೆಯೊ, ಕೆಲವರ ಎಮ್ಮೆ ತೊಳೆಯೋ.. ಹೀಗೆ ಊರ ಎಲ್ಲಾ ಕೊಳೆಗಳ ತೊಳೆಯೋ ಪವಿತ್ರ ಸ್ಥಳವದು ! ಸಂಜೆಯ ಹೊತ್ತಾಗಿದ್ದರಂದ ಬಟ್ಟೆ ತೊಳೆವ ಹೆಂಗಸರು, ಈಜು ಬೀಳೋ ಮಕ್ಕಳೂ,ಎಮ್ಮೆ ತೊಳೆಯೋ ರೈತರೂ ಮನೆ ಸೇರಿದ್ದರೆಂದು ಕಾಣುತ್ತೆ. ನಾಲೆಯ ದಡದಲ್ಲಿ ಕೂತಿದ್ದ ಈತನನ್ನು, ನಾಲೆಯಲ್ಲಿ ಪ್ರತಿಬಿಂಬಿಸುತ್ತಿದ್ದ ಕೇಸರಿ ರವಿಯನ್ನುಳಿದು ಇನ್ಯಾರೂ ಇರಲಿಲ್ಲ. ಆಗಾಗ ಬಂದು ನೇಪಥ್ಯದಲ್ಲಿ ಮರೆಯಾಗುತ್ತಿದ್ದ ಹಕ್ಕಿಗಳ ಸಾಲುಗಳು ಹಾರೋ ಹಕ್ಕಿಯಂತೆ ಸ್ವಚ್ಚಂದವಾಗಿದ್ದ ಹಿಂದಿನ ದಿನಗಳನ್ನು ನೆನಪಿಸುತ್ತಿದ್ದವು. ಒಮ್ಮೆ … Read more

ದೆಲ್ಲಿ ಚಲೋ .. : ಪ್ರಶಸ್ತಿ ಪಿ.

ಹೆಂಗಿದ್ರೂ ರಜೆಯಿದ್ಯಲ್ಲ ಬಾರೋ, ಉತ್ತರ ಭಾರತ ಸುತ್ತಬಹುದು ಅಂತ ಮೀರತ್ತಿನಲ್ಲಿದ್ದ ಮಾವ ಕರೆದಾಗ ದೇಶ ಸುತ್ತಬೇಕೆಂಬ ಬಯಕೆ ಗರಿಗೆದರಿ ನಿಂತಿತ್ತು. ದೇಶ ಸುತ್ತಬೇಕೆಂಬ ಮನ ಚಲೋ ದಿಲ್ಲಿ ಎಂದು ಹೊರಟು ನಿಂತಿತ್ತು. ದೆಲ್ಲಿಗೆಂದು ಹೊರಟಿದ್ದೆಂತು ಹೌದು. ಆದರೆ ಬೆಂಗಳೂರಿಂದ ದಿಲ್ಲಿಗೆ  2,153 ಕಿ.ಮೀಗಳ ಪಯಣ ಸುಲಭದ್ದೇನಲ್ಲ. ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ. ಯಾಕೆಂದರೆ ದೆಲ್ಲಿಗೆ … Read more

ಹೆಸರಿಡದ ಕತೆಯೊಂದು (ಭಾಗ 5): ಪ್ರಶಸ್ತಿ ಪಿ.

ಇಲ್ಲಿಯವರೆಗೆ:  ಕಿಟ್ಟಿ-ಶ್ಯಾಮ ಶಾರ್ವರಿ-ಶ್ವೇತರಿಗೆ ಬಾಲ್ಯದಿಂದಲೂ ಸ್ನೇಹ. ಕಿಟ್ಟಿ ಹತ್ತಕ್ಕೆ ಓದು ನಿಲ್ಲಿಸಿ ಗ್ಯಾರೇಜ್ ಸೇರಿದ್ರೆ ಉಳಿದವರೆಲ್ಲಾ ಓದು ಮುಂದುವರೆಸಿ ಬೇರ್ಬೇರೆ ಕೆಲಸ ಹಿಡಿಯುತ್ತಾರೆ. ಕೆಲಸವಿಲ್ಲದ ಶ್ಯಾಮನ ಒದ್ದಾಟದ ದಿನಗಳು ಮುಗಿದು ಕೊನೆಗೂ ಒಂದು ಕೆಲಸವೊಂದು ಸಿಕ್ಕಿದೆ ಅವನಿಗೆ. ಶಾರ್ವರಿಗೆ ಕಾಲೇಜಲ್ಲೇ ಒಂದು ಕಂಪೆನಿಯಲ್ಲಿ ಆಯ್ಕೆಯಾಗಿದ್ದರೆ ಶ್ವೇತ ಬಾನುಲಿ ಉದ್ಘೋಷಕಿಯಾಗುವತ್ತ ಹೆಜ್ಜೆ ಹಾಕುತ್ತಾಳೆ. ಹಿಂಗೆ ಗೆಳೆಯರದ್ದು ಒಂದೊಂದು ದಿಕ್ಕು, ಒಂದೊಂದು ಗುರಿ. ಕಾಲೇಜಲ್ಲಿದ್ದ ಶ್ಯಾಮ-ಶಾರ್ವರಿಯ ನಡುವಿನ ಸಮಾನ ಮನಸ್ಥಿತಿ, ಆಕರ್ಷಣೆಗಳು ಅವರನ್ನು ಬದುಕಿನೋಟದಲ್ಲಿ ಒಂದು ಮಾಡುತ್ತಾ ಅಥವಾ ಬದುಕನ್ನೇ … Read more

ಹೆಸರಿಡದ ಕತೆಯೊಂದು (ಭಾಗ 4): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಧನಸಂಪಾದನೆಯಲ್ಲಿ ಮಧ್ಯಮ ವರ್ಗವೂ, ಧಾರಾಣತನದಲ್ಲಿ ಕಡುಬಡವರೂ ಆಗಿದ್ದ ಕುಟುಂಬವೊಂದರಲ್ಲಿ ಹುಟ್ಟಿದ ಮೇಧಾವಿ ಶ್ಯಾಮ. ಧನಸಂಪಾದನೆಯಲ್ಲಿ ಬಡವರಾಗಿದ್ದರೂ ಹೃದಯ ವೈಶಾಲ್ಯತೆಯಲ್ಲಿ ಶ್ರೀಮಂತರಾಗಿದ್ದ ಕುಟುಂಬದಲ್ಲಿ ಹುಟ್ಟಿದವ ಶ್ಯಾಮನ ಚಡ್ಡೀ ದೋಸ್ತ ಕಿಟ್ಟಿ. ಕಿಟ್ಟಿ ಹೈಸ್ಕೂಲಿಗೇ ವಿದ್ಯೆಗೆ ಶರಣು ಹೊಡೆದು ಪೇಟೆಯ ಗ್ಯಾರೇಜು ಸೇರಿದ್ರೆ ಶಾಲೆಯ ಟಾಪರ್ರಾಗಿದ್ದ ಶ್ಯಾಮ ಮುಂದೆ ಓದೋ ಛಲದಿಂದ ಡಿಗ್ರಿವರೆಗೂ ಮುಟ್ಟಿದ್ದ. ಡಿಗ್ರಿಯಲ್ಲಿ ಶ್ಯಾಮನ ಕಣ್ಣಿಗೆ ಬಿದ್ದ ಹುಡುಗಿ ಶಾರ್ವರಿ. ಇಬ್ಬರ ಹಲವು ವಿಚಾರಧಾರೆಗಳು ಹೊಂದುತ್ತಿದ್ದರಿಂದ್ಲೋ ಏನೋ ಇಬ್ಬರಲ್ಲೂ ಏನೋ ಆಕರ್ಷಣೆ.. ಅದು ಪ್ರೀತಿಯೆಂದಲ್ಲ. ಏನೋ … Read more

ಹೆಸರಿಡದ ಕತೆಯೊಂದು (ಭಾಗ 3): ಪ್ರಶಸ್ತಿ ಪಿ.

(ಇಲ್ಲಿಯವರೆಗೆ) ಕಾಲೇಜು ದಿನಗಳಿಂದ್ಲೂ ಭಾಷಣ, ಚರ್ಚೆ ಅಂತೆಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಶಾರುಗೆ ತನ್ನ ಡಿಗ್ರಿ ಮುಗಿದ ಮೇಲೆ ತಾನೂ ಒಂದು ಕೆಲಸ ಮಾಡ್ಬೇಕಾ ಅನ್ನೋ ಕಲ್ಪನೆಯೇ ಬೇಸರ ತರಿಸುತ್ತಿತ್ತು. ಕಾಲೇಜಲ್ಲಿ ಪ್ಲೇಸ್ಮೆಂಟಂತ ಬಂದು ತನ್ನ ಗೆಳತಿಯರೆಲ್ಲಾ ಒಬ್ಬೊಬ್ಬರಾಗಿ ಆಯ್ಕೆಯಾಗೋಕೆ ಶುರುವಾದಾಗ ತಾನೂ ಆಯ್ಕೆಯಾಗಿದ್ರೆ ಅನ್ನಿಸೋಕೆ ಶುರುವಾಗಿತ್ತು. ಆದ್ರೆ ಅನಿಸಿದ್ದೇ ಬಂತು. ಆ ಸೀಸನ್ನೇ ಮುಗಿದೋದ್ರೂ ಕೆಲಸ ಅನ್ನೋದು ಸಿಕ್ಕಿರಲಿಲ್ಲ.  ಯಾಕಾದ್ರೂ ಕೆಲ್ಸ ಕೆಲ್ಸ ಅಂತ ಹುಡುಕ್ತಾರೋ , ತಾನೆಂತೂ ಆರಾಮಾಗಿದ್ದುಬಿಟ್ತೀನಿ ಅಂತ ಹಿಂದಿನ ವರ್ಷ ಅಂದುಕೊಂಡಿದ್ದ ನಿರ್ಣಯಗಳೆಲ್ಲಾ … Read more

ಹೆಸರಿಡದ ಕಥೆಯೊಂದು (ಭಾಗ 2): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಕೈಯಲ್ಲಿದ್ದ ಕರಗಿದ ಐಸ್ ಕ್ಯಾಂಡಿ ಪಟ್ಟಣಕ್ಕೆ ಬಂದು ಕಳೆದೇ ಹೋಗುತ್ತಿರುವ ಕಾಲದ ಬಗ್ಗೆ, ಇನ್ನೂ ದೊರಕದ ಭದ್ರ ಕೆಲಸದ ನೆನಪ ಹೊತ್ತು ತಂತು. ಬಂದೊಂದು ತಿಂಗಳಿನಲ್ಲೇ ಒಂದು ದಿನವೂ ಬಿಡದೆ ಇಂಟರ್ವ್ಯೂಗಳಿಗೆಂದು ಅಲೆದಿದ್ದರೆ ಏನಾದ್ರೂ ಕೆಲಸ ದಕ್ಕುತ್ತಿತ್ತೇನೋ. ಆದ್ರೆ ದಿನಾ ಅಲೆಯಲು ದುಡ್ಡೆಲ್ಲಿ ? ಕೆಲಸ ಹುಡುಕ್ತಿದಾನೆ ಬೇಕಾಗತ್ತೆ ಅಂತ ಅಪ್ಪ ತಿಳಿದು ಕೊಟ್ಟರೆ ತಾನೆ ಇವನಿಗೆ ದುಡ್ಡು ? ಸ್ನೇಹಿತರತ್ರ ಎಷ್ಟಂತ ಕೇಳೋದು ? ಕಂಡರೆ ಸಾಲ ಕೇಳ್ಬೋದು ಅಂತ ಇವನ ಕಾಲೇಜು ಗೆಳೆಯರೆಲ್ಲಾ … Read more

ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.

ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ  ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ … Read more

ಒಂದು ಸ್ನೇಹದ ಸುತ್ತ: ಪ್ರಶಸ್ತಿ ಅಂಕಣ

ತೊಳೆಯಬೇಕೆಂದು ನೆನೆಸಿದರೂ ತೊಳೆಯಲಾಗದ ಸೋಮಾರಿತನಕ್ಕೆ ಬಕೆಟ್ಟಲ್ಲೇ ಕೊಳೆಯುತ್ತಿರುವ ಬಟ್ಟೆ, ಉತ್ತರ ದಕ್ಷಿಣಕ್ಕೆ ಮುಖಮಾಡಿರೋ ತನ್ನ ಮೂಲ ಬಣ್ಣ ಬಿಳಿಯೋ, ಹಳದಿಯೋ,  ಸಿಮೆಂಟೋ ಎಂದು ತನಗೇ ಮರೆತು ಹೋದಂತಾಗಿರೋ ಬೂದು ಶೂಗಳಿಂದ ಹೊರಬಿದ್ದು ತನ್ನ ಅಸ್ತಿತ್ವ ಸಾರುತ್ತಿರೋ ಸಾಕ್ಸುಗಳು, ನಾಯಿ ನಾಲಗೆಯಾದಂತಾಗಿ ಕೆಲವೆಡೆ ತಳ ಕಂಡರೂ ಇನ್ನೂ ಮುಕ್ತಿ ಕಾಣದ ಚಪ್ಪಲಿ, ಹೊರಗೆ ಒಣಗಿಸಿ ವಾರವಾದರೂ ತೆಗೆಯದಿದ್ದ ನನ್ನ ಬಟ್ಟೆಗಳಿಂದ ತನ್ನ ಬಟ್ಟೆಗೆ ಜಾಗವಿಲ್ಲವೆಂದು ಸಿಟ್ಟಿಗೆದ್ದ ಗೆಳೆಯ ತಂದು ಒಗೆದಿರೋ ಗುಪ್ಪೆ ಗುಪ್ಪೆ ಬಟ್ಟೆಗಳು, ತರಿಸಿದರೂ ಓದುವುದಿರಲಿ ಮಡಚಿಡಲೂ … Read more

ಚಿಕ್ಕಮಗಳೂರ ಟ್ರಿಪ್ಪು: ಪ್ರಶಸ್ತಿ ಪಿ.

ಮುಳ್ಳಯ್ಯನ ಗಿರಿಗೆ ಹೋಗ್ಬೇಕನ್ನೋದು ಬಹುದಿನದ ಕನಸು. ಆದ್ರೆ ಬೆಂಗ್ಳೂರಿಂದ ೨೫೦ ಚಿಲ್ರೆ ಕಿಲೋಮೀಟ್ರು ಅನ್ನೋ ಕಾರಣಕ್ಕೆ ಮತ್ತೆ ಒಂದಿನ ಅದೊಂದಕ್ಕೇ ಹೋಗ್ಬರೋಕಾಗಲ್ಲ. ಎರಡು ದಿನಕ್ಕೆ ಬೆಂಗ್ಳೂರಿಂದ ಗಾಡಿ ಮಾಡಿಸ್ಕೊಂಡೋದ್ರೆ ಬರೀ ಹೋಗ್ಬರೋ ಚಾರ್ಜೇ ಜಾಸ್ತಿ ಆಗತ್ತೆ, ಎರಡು ದಿನಕ್ಕೆ ಯಾರು ಬರ್ತಾರೋ, ಯಾರು ಬರೋಲ್ವೋ ಅನ್ನೋ ಹಲವು ಸಂದೇಹಗಳಲ್ಲೇ ಕನಸು ಮುರಿದುಬೀಳ್ತಿತ್ತು. ಕೊನೆಗೂ ಹರಿ ಹರಿ ಅಂತ ಸಡನ್ನಾಗಿ ಶುಕ್ರವಾರ ಸಂಜೆ ಪ್ಲಾನು ಪಕ್ಕಾ ಆಗಿ ಶುಕ್ರವಾರ ರಾತ್ರೆ ಒಂದೂಮುಕ್ಕಾಲಿಗೆ ಮುಳ್ಳಯ್ಯನಗಿರಿಗೆ ಹೊರಟೇಬಿಟ್ವಿ. ಚಿಕ್ಕಮಗಳೂರು ಅಂದ್ರೆ ಸೀತಾಳಯ್ಯನಗಿರಿ, … Read more

ಸಾಗರದ ಮಾರಿಕಾಂಬ ಜಾತ್ರೆ: ಪ್ರಶಸ್ತಿ ಪಿ.

ಸಾಗರದ ಹಬ್ಬಗಳು ಅಂದ್ರೆ ಮೊದಲು ನೆನಪಾಗೋದು ಮೂರು ವರ್ಷಕ್ಕೊಮ್ಮೆ ಬರೋ ಮಾರಿ ಜಾತ್ರೆ. ಸಾಗರದ ಮಧ್ಯಭಾಗದಲ್ಲಿರುವ ಶ್ರೀ ಮಾರಿಕಾಂಬೆ ದೇವಿಯ ಒಂಭತ್ತು ದಿನಗಳ ಜಾತ್ರೆಯೆಂದರೆ ಸಾಗರಿಗರ ಪಾಲಿಗೆ ಅಂದೊಂದು ದೊಡ್ಡ ಹಬ್ಬವೇ. ಮೊದಲನೇ ದಿನ ಅದೇ ಬೀದಿಯಲ್ಲಿರುವ ತನ್ನ ತವರು ಮನೆಯಲ್ಲಿರುತ್ತಾಳಂತೆ ತಾಯಿ. ಅವತ್ತು ಮಾಂಸ ಮಧ್ಯಗಳಿಲ್ಲದ ಸಸ್ಯಾಹಾರಿ ಪೂಜೆ. ಆಮೇಲಿನ ದಿನಗಳಲ್ಲಿ ಕುರಿ, ಕೋಳಿಗಳ ಕಡಿತವೆಂದು ಮಾಂಸಾಹಾರಿಗಳ ಹಬ್ಬ. ಆ ಬೀದಿಯ ಮಾಂಸದಂಗಡಿಯಲ್ಲಿ ಮೊದಲ ದಿನವೇ ಮೂವತ್ತೊಂದು ಕುರಿ ಕಡಿದರಂತೆ  ಆ ಮನೆಯಲ್ಲಿ ಬಂದ ನೆಂಟರ … Read more

ಗೂಗಲ್ಡೂಡಲ್ ಪುರಾಣ: ಪ್ರಶಸ್ತಿ ಪಿ.

ಮೊನ್ನೆ ಎಂದಿನಂತೆ ಗೂಗಲ್ ತೆರೆತಿದ್ದೋನಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಕಾರಣ ಏನಪ ಅಂದ್ರೆ ನಮ್ಮ ಭಾರತದ ಕೋಗಿಲೆ(nightangle of india) ಎಂದೇ ಖ್ಯಾತ ಸರೋಜಿನಿ ನಾಯ್ಡು ಅವರ ಮುಖಚಿತ್ರ ಗೂಗಲ್ನಲ್ಲಿ ರಾರಾಜಿಸ್ತಾ ಇತ್ತು. ಸಣ್ಣವರಿದ್ದಾಗ ಪಠ್ಯದಲ್ಲಿ ನೋಡಿದ ಅವರ ಮುಖ ಇವತ್ತು ಗೂಗಲ್ನಲ್ಲಿ ಕಂಡಾಗ ಏನೋ ಖುಷಿ. ಗೂಗಲ್ನಲ್ಲಿ ಭಾರತೀಯರ ಬಗ್ಗೆ ಬಂದೇ ಇಲ್ವಾ ಅಂತಲ್ಲ. ಬಂದಿದೆ. ಶ್ರೀನಿವಾಸ ರಾಮಾನುಜಂ ಜನ್ಮದಿನ, , ಜಗತ್ ಸಿಂಗ್, ಜಗದೀಶ ಚಂದ್ರ ಬೋಸ್ ಜನ್ಮದಿನ, ಗಾಂಧೀಜಯಂತಿ, ಹೋಳಿ, ದೀಪಾವಳಿ, ಪ್ರತೀವರ್ಷದ … Read more

ಬರೆಯೋ ಮೂಡಿನ ಹಿಂದೆ: ಪ್ರಶಸ್ತಿ ಪಿ.

ತುಂಬಾ ದಿನವಾಗಿಬಿಟ್ಟಿದೆ. ಏನೂ ಬರೆದಿಲ್ಲ . ಹೌದಲ್ಲಾ ? ಏನಾದರೂ ಬರಿಬೇಕು.  ಹೌದು. ಏನು ಬರಿಯೋದು ? ಬೆಂಗಳೂರು ಬಿಂಟಿಸಿಯಲ್ಲಿನ ಕನ್ನಡ ಪ್ರೇಮದ ಬಗ್ಗೆ ಬರೆಯಲಾ ? ಬನವಾಸಿಗೆ ಹೋದ ನೆನಪುಗಳ ಬಗ್ಗೆ ಬರೆಯಲಾ ? ಬರುತ್ತಿರೋ ಪ್ರೇಮಿಗಳ ದಿನದ ನೆನಪಿಗೆ ಕೈಕೊಟ್ಟ ಪ್ರೀತಿಗಳ ಬಗ್ಗೆ ಬರೆಯಲಾ ? ಮೈಕ್ರೋಸಾಫ್ಟಿನ ಮೂರನೇ ಸಿ.ಇ.ಓ ಸತ್ಯಣ್ಣನ ಬಗ್ಗೆ ಬರೆಯಲಾ ? ಟೀವಿಯಲ್ಲೆಲ್ಲಾ ಸುತ್ತಾಡುತ್ತಿರೋ ನಮೋ-ರಾಗಾ ಅಲೆಯ ಬಗ್ಗೆ ಬರೆಯಲಾ .. ಬರೆಯಬಹುದಾದದ್ದು , ಬರೆಯಲಾಗದ್ದು, ಬರೆಯಬಾರದ್ದು ನೂರೆಂಟು ವಿಷಯಗಳಿವೆಯಲ್ಲಾ. … Read more

ಸೂರ್ಯಾಸ್ತವನರಸುತ್ತಾ (ಭಾಗ 2): ಪ್ರಶಸ್ತಿ ಪಿ.

ಬಿಡಲೇ ಆಗದಂತೆ ಉರಿಯುತ್ತಿದ್ದ ಕಣ್ಣುಗಳು, ಕೈ ಕಾಲುಗಳೆಲ್ಲಾ ಹಗ್ಗದಿಂದ ಜಗ್ಗಿದಂತೆ. ಎದ್ದೇನೆಂದರೂ ಏಳಲಾಗದಂತೆ ಧಿಮ್ಮೆನ್ನುತ್ತಿರುವ ತಲೆ.. ಎಲ್ಲಿದ್ದೇನೆಂದು ಅರಿವಿಗೆ ಬರಲು ಸ್ವಲ್ಪ ಹೊತ್ತೇ ಬೇಕಾಯಿತು. ಕಣಿವೆಯೊಂದರ ಸೂರ್ಯಾಸ್ತ ನೋಡಬೇಕೆಂದು ಹೊರಟ ಗೆಳೆಯರ ಗುಂಪಿನ ಉದ್ದೇಶ ಸೂರ್ಯಾಸ್ತಕ್ಕಷ್ಟೇ ಸೀಮಿತವಾಗದೇ ಮುಳುಗುರವಿಯ ದೃಶ್ಯಕಾವ್ಯಕ್ಕೆ ಇನ್ನೊಂದಿಷ್ಟು ರಂಗು ಹಚ್ಚುವಂತೆ ಪಾನ ಗೋಷ್ಟಿಯಲ್ಲಿ ತೊಡಗಿತ್ತು. ಈ ಪಾನವೆಂಬುದು ಪೌರುಷದ, ಸ್ಟೇಟಸ್ಸಿನ ಸಂಕೇತವೆಂಬ ಭಾವ ಗುಂಪಿನ ಗೆಳೆಯರದ್ದು ! ಕುಡಿಯದವರನ್ನು ಹೀಯಾಳಿಸುತ್ತಾ ಎಷ್ಟು ಬಾಟಲ್ ಏರಿಸುತ್ತೇವೆ ಅನ್ನುವುದರ ಮೇಲೆ ತಮ್ಮ "ಕೆಪ್ಯಾಸಿಟಿ"ಯ ಗುಣಗಾನ ಮಾಡುವುದರಲ್ಲಿ … Read more

ಗಣತಂತ್ರ ದಿನ: ಪ್ರಶಸ್ತಿ ಪಿ.ಸಾಗರ

ಗಣತಂತ್ರ ದಿನದ ಶುಭಾಶಯಗಳು !.  ಓ. ಧನ್ಯವಾದಗಳು. ಅಂದಂಗೆ ನಂಗೆ ಗಿಫ್ಟೆಲ್ಲಿ ?  ಗಿಫ್ಟಾ? ನಿಂಗಾ? ಯಾಕೆ ? !!! ಇದೊಳ್ಳೆ ಕತೆ ಆಯ್ತು. ಹುಟ್ಟಿದಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಸ್ನೇಹಿತರ ದಿನಕ್ಕೆ, ಅಪ್ಪಂದಿರ ದಿನಕ್ಕೆ, ಮಕ್ಕಳ ದಿನಕ್ಕೆ, ಪ್ರೇಮಿಗಳ ದಿನಕ್ಕೆ ಅಂತ ವರ್ಷವೆಲ್ಲಾ ಗಿಫ್ಟ್ ಗಿಫ್ಟಂರ್ತೀಯ. ನನ್ನ ದಿನಕ್ಕೊಂದು ಗಿಫ್ಟ್ ಕೊಡಕ್ಕಾಗಲ್ವಾ ?  ಓ,ಹೌದಲ್ವಾ ? ಇಷ್ಟು ವರ್ಷ ಈ ತರ ಯೋಚ್ನೇನೆ ಮಾಡಿರ್ಲಿಲ್ಲ. ಏನು ಬೇಕು ಗಿಫ್ಟು ನಿಂಗೆ ?  ಯಾವತ್ತೂ ಅದು ಸಿಕ್ಕಿಲ್ಲ, ಇದು … Read more

ಸೂರ್ಯಾಸ್ತವನರಸುತ್ತ: ಪ್ರಶಸ್ತಿ ಪಿ.ಸಾಗರ

ಅಣಾ..ಣ  ಒಂದ್ನಿಮ್ಷ ನಿಲ್ಸಿ ಗಾಡಿನ ಅಂದ ಶ್ಯಾಂ. ಏನಾಯ್ತಪ ಅಂತ ಡ್ರೈವರ್ ಗಾಡಿ ನಿಲ್ಲಿಸ್ತಿದ್ದ ಹಾಗೆನೇ ಬಾಗಿಲು ತೆಗೆದು ಹೊರಗೋಡಿದ ಶ್ಯಾಂ. ಏನಾಯ್ತಪ ಅಂತ ಹಿಂದಿರೋರೆಲ್ಲಾ ನೋಡ್ತಾ ಇದ್ರೆ ಶ್ಯಾಂ ತನ್ನ ಕ್ಯಾಮೆರಾ ತೆಗೆದು ಸೂರ್ಯಾಸ್ತದ ಫೋಟೋ ತೆಗಿತಾ ಇದ್ದ. ಸೂರ್ಯ ಕಿತ್ತಳೆಯಂತೆ ಕೆಂಪಗಾಗಿ ಇನ್ನೇನು ಬೆಟ್ಟಗಳ ನಡುವೆ ಮುಳುಗಿ ಹೋಗುತ್ತಿದ್ದ. ಜಸ್ಟ್ ಮಿಸ್ಸಾಗಿಬಿಡುತ್ತಿದ್ದ ದೃಶ್ಯವನ್ನು ಸೆರೆಹಿಡಿದದ್ದರ ಖುಷಿಯಲ್ಲಿ ಶ್ಯಾಂ ಇದ್ರೆ ಏನಪ್ಪಾ ಯಾವತ್ತೂ ಜೀವಮಾನದಲ್ಲಿ ಸೂರ್ಯನನ್ನೇ ನೋಡದವ್ನ ತರ ಮಾಡ್ತಾನೆ ಇವ್ನು ಅಂತ ಗಾಡಿ ನಿಲ್ಸಿದ್ದರ … Read more

ಬಿಡುವು: ಪ್ರಶಸ್ತಿ ಪಿ.ಸಾಗರ

ದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ … Read more