ಸಂಜಯಂತಿಯಲ್ಲೊಂದು ಸುತ್ತು:ಪ್ರಶಸ್ತಿ ಪಿ

  ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ.ಮೀ ಅಂತ. ಅರೆ! ಬನವಾಸಿ ಇಷ್ಟು ಹತ್ರವಾ.. ಹಾಗಾದ್ರೆ ಇವತ್ತು ಅಲ್ಲಿಗೆ ಹೋಗೇ ಊರಿಗೆ ಮರಳ್ಬೇಕು ಅಂದ್ಕೊಂಡೆ. ಆದ್ರೆ  ಮದುವೆ ಊಟ ಮುಗಿಸಿದ ಮೇಲೆ ಸೀದಾ ಸಾಗರದ ಬಸ್ಸು ಹತ್ತಿದ್ದಾಯ್ತು, ಬನವಾಸಿ ಮಿಸ್ಸಾಯ್ತು. ಆದರೆ ಸಿಗಬೇಕೆಂದಿದ್ದದ್ದು ಸಿಕ್ಕೇ ಸಿಗುತ್ತೆ ಅಂತಾರೆ ಹಲವರು. … Read more

ಕಿಕ್ಕೇರಿ ಪಂಚಲಿಂಗೇಶ್ವರ ಹಾಗೂ ಹೊಸಹೊಳಲು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ

"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು…ಅಪಾರ ಕೀರ್ತಿಯೇ" ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾಗಿದ್ದ ಶ್ರೀ ಆರ್. ಎನ್. ನಾಗೇಂದ್ರ ರಾಯರು ದಿಗ್ದರ್ಶಿಸಿದ್ದ ಮಹತ್ವಾಕಾಂಕ್ಷೆಯ ಚಿತ್ರ ವಿಜಯನಗರದ ವೀರಪುತ್ರ ಚಿತ್ರದ ಕುದುರೆ ನಡಿಗೆಯ ತಾಳದ ಜನಪ್ರಿಯ ಗೀತೆ ಕೇಳಿದಾಗೆಲ್ಲ ಕರ್ನಾಟಕದಲ್ಲಿ ಶಿಲ್ಪಕಲೆಯು ಉನ್ನತ ಸ್ಥಾಯಿ ಮುಟ್ಟಿದ್ದ ಹೊಯ್ಸಳ ಅರಸರ ಕಲೆಯು ನೆನಪಿಗೆ ಬರುತ್ತದೆ.   ಡಿಸೆಂಬರ್ ೨೯ನೆ ತಾರೀಕು ಹಾಸನದಿಂದ ಮೈಸೂರಿಗೆ ಹೋಗಬೇಕಿತ್ತು..ಕರುನಾಡಿನ ಎಲ್ಲ ಸ್ಥಳಗಳು ಕೈ ರೇಖೆಯಂತೆ … Read more

ಬೆಟ್ಟದ ಅ೦ಗಳದಲ್ಲೊ೦ದು ದಿನ

ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ … Read more