ಲೇಖನ ಕಳುಹಿಸಿ

ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು … Read more

ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ಇರುವ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ನವಕರ್ನಾಟಕ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೆ ನಾಡಿನ ಪ್ರಮುಖ ಪ್ರಕಾಶಕರ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಪುಸ್ತಕ ಪ್ರಿಯರು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ. ಬೆಂಗಳೂರು ಮಳಿಗೆಗಳ ವಿಳಾಸ: ನವಕರ್ನಾಟಕ ಪುಸ್ತಕ ಮಳಿಗೆದೇವಾಂಗ ಟವರ್, 35, ಕೆಂಪೇಗೌಡ ರಸ್ತೆಬೆಂಗಳೂರು – 560 009ದೂ : 9480686862 ನವಕರ್ನಾಟಕ ಪುಸ್ತಕ ಮಳಿಗೆಎಂಬೆಸಿ ಸೆಂಟರ್, ಕ್ರೆಸೆಂಟ್ … Read more

ಹಾಡ್ಲಹಳ್ಳಿ ಪ್ರಕಾಶನದ ಐದು ಪುಸ್ತಕಗಳು ಈಗ ಒಂದೇ ಗುಚ್ಚದಲ್ಲಿ…

ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಉಲಿವಾಲ ಮೋಹನ್ ಕುಮಾರ್ ಅವರ “ಮುಳುಗಿದ್ದೆಲ್ಲಾ ಕಥೆಯಲ್ಲ” ಹಾಡ್ಲಹಳ್ಳಿ ನಾಗರಾಜ್ ಅವರ “ಅಜ್ಜನ ಕಮೋಡು” ಕಾದಂಬರಿ ಹಾಗು “ಮಳೆಯೆಂಬ ಮಾಯಾಂಗನೆ” ಪ್ರಬಂಧ ಹಾಗು ಚಲಂ ಹಾಡ್ಲಹಳ್ಳಿ ಅವರ “ಈ ಮಳೆಗಾಲ ನಮದಲ್ಲ” ಕವನ ಸಂಕಲನ, “ವಿ.ಸೂ. ಹೊಗೆ ಆರೋಗ್ಯಕ್ಕೆ ಒಳ್ಳೆಯದು” ಪುಸ್ತಕಗಳು ಇದೇ ಶನಿವಾರ, ಸೆಪ್ಟೆಂಬರ್‌ ೪, ೨೦೨೧ ರ ಸಂಜೆ ಐದಕ್ಕೆ ಹಾಸನದ ಸಾಹಿತ್ಯ ಪರಿಷತ್‌ ಭವನದಲ್ಲಿ ಬಿಡುಗಡೆಯಾಗಲಿವೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪುಸ್ತಕ ಕೊಳ್ಳುವವರಿಗಾಗಿ ಈ ಐದು ಪುಸ್ತಕಗಳ … Read more

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನಿಸುತಿದ್ದೇವೆ..ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಬೇಡ.ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.ಎಲ್ಲ ಅಂದರೆ ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ.. ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ … Read more

ಚಡಗ ಕಾದಂಬರಿ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ, ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಹನ್ನೊಂದನೆಯ ವರ್ಷದ ಕಾದಂಬರಿ ಪ್ರಶಸ್ತಿಗೆ 2020ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ ಪ್ರಕಾಶಕರಿಂದ ಆಹ್ವಾನಿಸಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ, “ಶ್ರೀ” ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ – 575225 (9740842722) ಇವರಿಗೆ ಸೆಪ್ಟೆಂಬರ್ 30, 2021 ರ ಒಳಗೆ … Read more

‘ಪಿಯುಸಿ ನಂತರ ಮುಂದೇನು?’ ಫೇಸ್ ಬುಕ್ ಲೈವ್ ಕಾರ್ಯಕ್ರಮ

ಸ್ನೇಹಿತರೆ,‘ಪಿಯುಸಿ ನಂತರ ಮುಂದೇನು?’ ಎಂಬ ವಿಷಯದ ಕುರಿತು ಫೇಸ್ ಬುಕ್ ಲೈವ್ ಕಾರ್ಯಕ್ರಮವನ್ನು ಭಾರತೀಯ ವಿದ್ಯಾರ್ಥಿ ಸಂಘ (BVS) ಏರ್ಪಡಿಸಿದೆ. ಈ ದಿನ ರಾತ್ರಿ ಎಂಟಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿರುವ ಅವಕಾಶಗಳ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಣ. ಬಿ ಅವರು ಮಾರ್ಗದರ್ಶನ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು BVS ಫೇಸ್ ಬುಕ್ ಪುಟವನ್ನು ಭೇಟಿ ನೀಡಿ.

“ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು

ಈ ವೀಕೆಂಡ್ನಲ್ಲಿ “ಅಲೈದೇವ್ರು” ನಾಟಕವನ್ನು ನೀವು ಮನೆಯಲ್ಲೆ ಕುಳಿತು ನೋಡಬಹುದು. ನೀವು ನೋಡಿ ಫೀಡಬ್ಯಾಕ್ ಕೊಟ್ರೆ ನಮ್ಮ ತಂಡಕ್ಕೆ ಖುಷಿ. ಲಾಕ್ಡೌನ್ ಇರದಿದ್ರೆ ಇಷ್ಟೊತ್ತಿಗೆ ನಮ್ಮ ಜನರಂಗದಿಂದ “ಅಲೈದೇವ್ರು” ನಾಟಕ ಹತ್ತಾರು ಪ್ರದರ್ಶನ ಕಾಣುತ್ತಿತ್ತೇನೋ. ಸಾಲಸೋಲ ಮಾಡಿ, ಕೆಲವರು ಹತ್ರ ಇಸ್ಕೊಂಡು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ 35 ಜನ ಹೊಸಬರೊಂದಿಗೆ ನಾಟಕ ಕಟ್ಟಿದ್ದೆವು. ಆದರೆ, ಇನ್ನು ಮುಂದೆ ಪ್ರದರ್ಶನವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ಈ ನಾಟಕವು ಈಗ ಜೂನ್ 19ರಿಂದ ಶನಿವಾರ ಬೆಳಿಗ್ಗೆ 7 ಗಂಟೆಯಿಂದ … Read more

ಪಂಜುವಿನ ಯೂ ಟ್ಯೂಬ್ ಚಾನಲ್ ನಲ್ಲಿ ಕವನ ಓದುವ ಅವಕಾಶ

ಕನ್ನಡದ ಉತ್ತಮವಾದ ಕವಿತೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪಂಜು ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದೇವೆ. ತಮ್ಮ ಕವಿತೆಗಳಿಗಿಂತ ಬೇರೆ ಕವಿಗಳ ಕವಿತೆಗಳನ್ನು ವಾಚಿಸುವ ಅವಕಾಶ ಪಂಜುವಿನ ಯೂ ಟ್ಯೂಬ್ ಚಾನಲ್ಲಿನಲ್ಲಿದೆ. ಬೇರೆಯವರ ಕವಿತೆಯನ್ನು ವಾಚಿಸುವ ಇಚ್ಚೆಯಿದ್ದರೆ ನೀವು ವಾಚಿಸಿರುವ ಕವಿತೆಯ voice ಸ್ಯಾಂಪಲ್ ಕಳಿಸಿ. ಉತ್ತಮವಾಗಿ ವಾಚನ ಮಾಡುವವರಿಗೆ ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಕವಿತೆ ವಾಚಿಸುವ ಅವಕಾಶ ನೀಡಲಾಗುವುದು. ನಿಮ್ಮ ಕವಿತೆಯನ್ನು ಬೇರೆಯವರಿಂದ ವಾಚಿಸುವ ಇಚ್ಚೆ ಇದ್ದರೆ ನಿಮ್ಮ ಕವನ ಸಂಕಲನವನ್ನು ನಮಗೆ … Read more

ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು

ಕನ್ನಡದ ಅತ್ಯುತ್ತಮ ಕವಿತೆಗಳನ್ನು ಕೇಳಿಸಲು ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ್ದೇವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ. ಕವಿತೆ ವಾಚಿಸುವ ಇಚ್ಚೆಯುಳ್ಳವರು ಒಂದು ಮೇಲ್‌ ಮಾಡಿ. ನಮ್ಮ ಮೇಲ್‌ ವಿಳಾಸ: editor.panju@gmail.com, smnattu@gmail.com

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟದ ವಿವಿಧ ಸ್ಪರ್ಧೆಗಳು

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ“ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ” 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ*) 150 ಪದಮಿತಿಯ ಸ್ವತಂತ್ರ ವಿಷಯದ ಮೇಲೆ ಕಥೆ ರಚಿಸಿ (mobileನಲ್ಲಿ unicode fontನಲ್ಲಿ ಟೈಪ್ ಮಾಡಿದ ಕಥೆ) ಏಪ್ರಿಲ್ 20 ರಂದು avvapustakaalaya@gmail.com ಗೆ ಕಳಿಸಿಕೊಡಬೇಕು. 21-ಏಪ್ರಿಲ್-2021 : ಸ್ವರಚಿತ ಕವನ … Read more

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಕುರಿತು ಲೇಖನ ಸ್ಪರ್ಧೆಗೆ ಲೇಖನಗಳ ಆಹ್ವಾನ

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಯಾಪಲದಿನ್ನಿ, ರಾಯಚೂರು ಕಲಾಂ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರ ರಕ್ತದಾನ ಶಿಬಿರ ವ್ಯಕ್ತಿತ್ವ ವಿಕಸನ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಕಲಾಂ ಕಲ್ಪ ವೃಕ್ಷವನ ಕಲಾಂ ಸ್ಮಾರಕ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳಮೂಲಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ ವಿವಿಧ ಕಾರ್ಯಕ್ರಮವನ್ನು ಮಾಡುತ್ತಾ, ಸಮಾಜದ ಸುಧಾರಣೆಗಾಗಿ ವಿವಿಧ ರೀತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಪ್ರತಿವರ್ಷ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯಂದು … Read more

ಗಣಕರಂಗ (ರಿ), ಧಾರವಾಡ ಆಯೋಜಿಸಿರುವ ಕವನ ವಾಚನ ಅಥವಾ ಜನಪದ ಶೈಲಿಯಲ್ಲಿ ಗಾಯನ ಸ್ಪರ್ಧೆ

  #ಗಣಕರಂಗ (ರಿ), ಧಾರವಾಡ ಆಯೋಜಿಸುವ ವಿಶ್ವಜ್ಞಾನ ದಿನ ದ ಪ್ರಯುಕ್ತ ‘ಬಾಬಾಸಾಹೇಬ ಡಾ.ಅಂಬೇಡ್ಕರ್ ಕುರಿತ ಜಾನಪದ ಶೈಲಿಯ ಮುಕ್ತ ಕವನ ವಾಚನ ಮತ್ತು ಗಾಯನ ಸ್ಪರ್ಧೆಗೆ ಸ್ವಾಗತ . ಎಲ್ಲರಿಗೂ ಮುಂಚಿತವಾಗಿ (ಏಪ್ರಿಲ್-14) ವಿಶ್ವಜ್ಞಾನ ದಿನದ ಶುಭಾಶಯಗಳು. ಆತ್ಮೀಯರೇ, ನಿಮಗೆ ಈಗಾಗಲೇ ಗೊತ್ತಿರುವಂತೆ ಗಣಕರಂಗ (ರಿ), ಧಾರವಾಡ ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಭಾವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ಆನ್-ಲೈನ್ ದಲ್ಲಿ ಯಶಸ್ವಿಯಾಗಿ ನಡೆಸಿದೆ. ಅದರ ಮುಂದುವರಿಕೆಯಾಗಿ, ಈಗ ಬರುವ ಏಪ್ರಿಲ್-14ರಂದು ‘ವಿಶ್ವಜ್ಞಾನ ದಿನ’ದ ಪ್ರಯುಕ್ತ ವಾಟ್ಸಪ್ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021 ರ ಫಲಿತಾಂಶ

2021 ರ ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ. 1 ಪ್ರಥಮ ಬಹುಮಾನ: ಕೃತಿಕಾರಾಣಿ, ಯಲ್ಲಾಪುರ 2 ದ್ವಿತೀಯ ಬಹುಮಾನ: ಸುಕೃತಿ ಕೆ ಪೂಜಾರಿ 3 ತೃತೀಯ ಬಹುಮಾನ: ಶರಣಬಸವ ಕೆ.ಗುಡದಿನ್ನಿ ಐದು ಸಮಾಧಾನಕರ ಬಹುಮಾನಗಳು: 1. ದಿನೇಶ್‌ ಉಡಪಿ 2. ನರೇಂದ್ರ ಎಸ್‌. ಗಂಗೊಳ್ಳಿ 3. ಕಪಿಲ ಪಿ ಹುಮನಾಬಾದೆ 4. ಪರಮೇಶ್ವರಿ ಭಟ್ 5. ಸುಜಾತಾ ಲಕ್ಮನೆ, ಬೆಂಗಳೂರು ತೀರ್ಪುಗಾರರು: ಕನ್ನಡದ ಖ್ಯಾತ ಬರಹಗಾರರಾದ ಎ ಆರ್‌ ಮಣಿಕಾಂತ್‌ ರವರು ಈ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021

ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ … Read more