ಅಗಾಧ ಬದುಕು – ನಿಗೂಢ ಸಾವು, ಅಳುವ ಮನಸು…..

ಕಣ್ಣಲ್ಲಿ ಸಾವಿರ ಕನಸುಗಳ ಮತಾಪು… ಬೆನ್ನಲ್ಲಿ ಈಡೇರಿಸಿಕೊಳ್ಳಲಾಗದ ಅಸಹಾಯಕತೆಯ ನಡುಕ…   ಬಣ್ಣ ಬಣ್ಣದ ಕತ್ತಲು… ಭವಿಷ್ಯವನ್ನು ತೋರಲಾರದ ಬೆಳಕು… ನಮ್ಮೆಲ್ಲ ಪ್ರಯತ್ನವನ್ನೂ ಮೀರಿ ಒಮ್ಮೆಲೇ ಧುತ್ತನೆ ಎದುರಾಗಿ ಕಾಡುವ ಹತಾಶೆ… ಮನುಷ್ಯನ್ನು ಸಾವು ಮತ್ತು ಸೋಲುಗಳು ಕಂಗೆಡಿಸಿದಷ್ಟು ಮತ್ಯಾವ ವಿಷಯಗಳೂ ಕಂಗೆಡಿಸಲಾರವೇನೋ.  ಸಾವನ್ನಾದರೂ ಒಪ್ಪಿಕೊಂಡು ಬಿಡಬಹುದು.  ಏಕೆಂದರೆ ಅದು ಸಾರ್ವಕಾಲಿಕ ಮತ್ತು ಸರ್ವವಿಧಿತ ಸತ್ಯ.  ಆದರೆ ಸೋಲುಗಳು –  ಮನುಷ್ಯನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಎರಡೂ ವಿಧಗಳಲ್ಲೂ ಹಣ್ಣಾಗಿಸುವ ವಿಚಾರವೆಂದರೆ ಸೋಲುಗಳು.  ಅವು ಸತತ ಹಾಗೂ … Read more

ಓ ನಾಗರಾಜ ಅಪ್ಪಣೆಯೇ…

  ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‌ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನು ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ … Read more

ಮಾತೃ ಭಾಷೆಗೆ ಸಿಕ್ಕ ಮನ್ನಣೆ

  ಹಚ್ಚೇವು ಕನ್ನಡದ ದೀಪ  ಕರು ನಾಡ  ದೀಪ  ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ l            ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದ ನನ್ನ ಹಳ್ಳಿ ಬಿಟ್ಟು ಈ ಮರುಭೂಮಿಗೆ ಬಂದು ಇಳಿದಾಗ ಅಸಾಧ್ಯ ಭಯ ಇತ್ತು. ದೇವರೇ! ಹೇಗೆ ನಾನು ಬದುಕಿ ಉಳಿದೇನಾ ಅಂತ. ಆದರೆ ನಾನು ಇದ್ದ ಜಾಗ ತುಂಬಾ ಸುರಕ್ಷಿತವಾಗಿತ್ತು. ನನ್ನ ಬಹು ಮಹಡಿ ಕಟ್ಟಡದಲ್ಲಿ ಹಾಗೂ ಸುತ್ತಲೂ ಎಲ್ಲವೂ ಇತ್ತು. ಕ್ಲಿನಿಕ್, … Read more

ಇದೇ ಮೇಲಲ್ಲವೇ?

  "ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ. ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ … Read more

ನಾ ಕಂಡ ಹೀರೋಗಳು

ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ. ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು … Read more

‘ತಾಯಿಯ ಮಡಿಲು’

ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯೊಲ್ಲ ಜೋಗಿ… ಕಡೆತನಕ ಮರೆಯೊಲ್ಲ ಜೋಗಿ… ಎನ್ನುವ 'ಜೋಗಿ ಚಿತ್ರದ ಗೀತೆಯನ್ನು ನಾವೆಲ್ಲಾ ಟೀವಿ, ರೇಡಿಯೋಗಳಲ್ಲಿ ಕೇಳಿರುತ್ತೇವೆ. ಇದು ೨೦೦೫ ರಲ್ಲಿ ತೆರೆಕಂಡ 'ಶಿವರಾಜ್ ಕುಮಾರ್' ನಾಯಕ ನಟನ ಸೂಪರ್ ಹಿಟ್ ಚಲನ ಚಿತ್ರ.  ಈ ಚಿತ್ರ ಬಿಡುಗಡೆಯದಾಗ ಹೆಚ್ಚು ಸಿನೆಮಾ ಮಂದಿರಕ್ಕೆ ಹೋಗದವಳಾದ ನಾನು ಸಹ ಈ ಹಾಡಿಗೆ ಮನಸೋತು ಚಿತ್ರ ನೋಡಲು ಹೋಗಿದ್ದೆ.  ಚಿತ್ರ ತುಂಬಾ ಚೆನ್ನಾಗಿತ್ತು. ತಾಯಿ ಪ್ರೀತಿ ಪ್ರಧಾನವಾದ ಚಿತ್ರ, ಎಂತಹವರನ್ನು ಬರಸೆಳೆಯುವ … Read more