ಶಾಲೆಯಲ್ಲಿನ ಶಿಕ್ಷೆಯೂ ದೌರ್ಜನ್ಯವೇ: ಡಾ. ಚೈತ್ರ ಕೆ.ಎಸ್.

ಎಂಟು ವರ್ಷದ ವರುಣ್‍ಗೆ ಎರಡು ದಿನದಿಂದ ಕೈ ಬೆರಳು ಊದಿ ಕೆಂಪಾಗಿದೆ. ಬರೆಯಲು, ತಿನ್ನಲು ಬೆರಳು ಮಡಚಲಾಗದ ಸ್ಥಿತಿ. ಕಾರಣ, ಹೋಂ ವರ್ಕ್ ಮಾಡಿಲ್ಲ ಎಂದು ಡಸ್ಟರ್‍ನಿಂದ ಟೀಚರ್ ಹೊಡೆದಿದ್ದು. ಆರು ವರ್ಷದ ಭಾವನಾ, ಶಾಲೆ ಎಂದರೆ ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾಳೆ. ಎದ್ದೊಡನೆ ಗಲಾಟೆ-ಕಿರುಚಾಟ -ಹಠ. ಅವಳ ಎಲ್ಲಾ ತೊಂದರೆಗೆ ಮೂಲ ಶಾಲೆಯಲ್ಲಿ ಪದೇ ಪದೇ `ನೋಡೋಕೆ ಕರಿತಿಮ್ಮಿ, ಓದೋದ್ರಲ್ಲೂ ದಡ್ಡಿ' ಎಂದು ಹಂಗಿಸುವ ಟೀಚರ್. ಕೆಳಜಾತಿಗೆ ಸೇರಿದ ಹತ್ತು ವರ್ಷದ ರಂಗಿಗೆ ಶಾಲೆ ಬಿಟ್ಟ ನಂತರ … Read more

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಸಾಧ್ಯತೆಗಳು: ಡಾ.ವಾಣಿ ಕಂಟ್ಲಿ

ಮಕ್ಕಳೆಂದರೆ ಯಾರು ಅಂದುಕೊಂಡ ಕೂಡಲೇ ಮಕ್ಕಳೆಂದರೆ ದೇವರು, ಕುಸುಮಗಳು, ಉತ್ಸಾಹದ ಚಿಲುಮೆಗಳು, ಬದುಕು, ಸಮಾಜ ನೀಡಿರುವ ಹಲವಾರು ಗುಣವಿಷೇಶಣಗಳು ನೆನಪಾಗುತ್ತವೆ. ನಮಗೆಲ್ಲಾ ಮಕ್ಕಳೆ ಸರ್ವಸ್ವ, ಮಕ್ಕಳಿಗಾಗಿ ನಿನ್ನನ್ನು ಸಹಿಸುತ್ತಿದ್ದೇನೆ ಎನ್ನುವ ಜನರು ಹೆಚ್ಚಿನ ಸಂಖ್ಯೆಯಲ್ಲಿಯೇ ಸಿಗುತ್ತಾರೆ. ಮಕ್ಕಳಿಗಾಗಿ ಇತರರನ್ನು ಸುಲಿದು, ಕೊಂದು ಬಾಚಿ ತಿಂದವರೂ ಇದ್ದಾರೆ.  ಮಕ್ಕಳಿಗಾಗಿ ಕದ್ದು, ಭ್ರಷ್ಟರಾಗಿ, ವಂಚಕರಾಗಿ ಆಸ್ತಿಮಾಡಿದವರೆಷ್ಟಿಲ್ಲ. ಮಗಳ ಮದುವೆಗೆಂದು, ವರದಕ್ಷಿಣೆಗೆಂದು ಸಾಲಸೋಲಮಾಡಿ, ಮನೆಮಾಡಿ ದಿವಾಳಿಯಾದವರೆಷ್ಟಿಲ್ಲ. ಮಗಳು ಓಡಿಹೋದಳೆಂದು, ಮಗ ಸಾಕಲಿಲ್ಲವೆಂದು ಕೊರಗಿ ಸೊರಗಿದವರೆಷ್ಟಿಲ್ಲ. ಸಮಾಜದಲ್ಲಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಮಾತ್ರ … Read more

ಮಕ್ಕಳು ಮತ್ತು ಯುದ್ಧ ನೀತಿಯ ಒಂದು ಪುಟ: ರುದ್ರೇಶ್ವರ ಸ್ವಾಮಿ

`ಮಕ್ಕಳು ಮತ್ತು ಯುದ್ಧ ನೀತಿ’- ಈ ಶೀರ್ಷಿಕೆಯನ್ನು ಓದುತ್ತಿದ್ದಂತೆ, ಇಲ್ಲಿ ಏನೋ ಒಂದು ಗೊಂದಲವಿದೆ ಅನ್ನಿಸುತ್ತದೆ. ಒಂದೇ ಗುಂಪಿಗೆ ಸೇರದ ಯಾವುದೋ ಒಂದು ಹೊರಗಿನದು ಇಲ್ಲಿ ಬಂದು ಈ ಗೊಂದಲ ಸೃಷ್ಟಿಸಿದಂತೆ ಕಂಡುಬರುತ್ತದೆ- ಮೊಸರಲ್ಲಿ ಕಲ್ಲು ಸಿಕ್ಕ ಹಾಗೆ. ಮಕ್ಕಳಿಗೂ ಯುದ್ಧಕ್ಕೂ ಯಾವ ಬಾದರಾಯಣ ಸಂಬಂಧ?  ಆದರೆ ಆಳದಲ್ಲಿ ಅದರ ಕಥೆ ಬೇರೆಯದೇ ಆಗಿದೆ. ಮಕ್ಕಳು ಮತ್ತು ಯುದ್ಧ (ನೀತಿ)- ಇದು ಎಂತಹ ವೈರುಧ್ಯಗಳುಳ್ಳ ಸಮಸ್ಯೆ. ಈ ವೈರುಧ್ಯವನ್ನು, ಬದುಕಿನ ಈ ಅಣಕವನ್ನು ನಾವು ಆಳಕ್ಕಿಳಿಯದೆ ಅರ್ಥಮಾಡಿಕೊಳ್ಳುವುದು … Read more

ನಮ್ಮ ಪುರಾಣಗಳಲ್ಲಿ ನಮ್ಮ ಮಕ್ಕಳು: ದತ್ತ ರಾಜ್

ಹದಿನೆಂಟು ಪುರಾಣಗಳು ಹಾಗೂ ಅವುಗಳ ಉಪಪುರಾಣಗಳು ಭಾರತೀಯ ಇತಿಹಾಸಗ್ರಂಥಗಳೇ ಆಗಿದ್ದರೂ  ಕೆಲವು ಪುರಾಣಗಳಲ್ಲಿ ಪರಸ್ಪರ ವಿರೋಧಗಳಿರುವುದರಿಂದ, ಅನೇಕ ಪ್ರಕ್ಷಿಪ್ತತೆಗಳು ಇರುವುದರಿಂದ ಅವುಗಳನ್ನು ಸಂಪೂರ್ಣವಾಗಿ ಸತ್ಯವಾದ ಇತಿಹಾಸಗಳೆಂದು ಪರಿಗಣಿಸಲಾಗುವುದಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತ ಇವೆರಡನ್ನುಯಥಾರ್ಥ ಇತಿಹಾಸ ಗ್ರಂಥಗಳು ಎಂದು ಗುರುತಿಸಲಾಗಿದೆ. ಈ ಇತಿಹಾಸ ಪುರಾಣಗಳನ್ನು ಅವಲೋಕಿಸಿದಾಗ  ಪ್ರಾಚೀನ ಭಾರತದ ಜನರು ಎಂತಹ ಜೀವನ ನಡೆಸುತ್ತಿದ್ದರು.  ಸಮಾಜದ ಆರ್ಥಿಕ-ಪಾರಿವಾರಿಕ ಸ್ಥಿತಿಗತಿಗಳು ಹೇಗಿದ್ದವು ಎನ್ನುವುದು ಅರಿವಿಗೆ ಬರುತ್ತದೆ. ಪ್ರಾಚೀನ ಭಾರತದಲ್ಲಿಯೂ ಮಕ್ಕಳ ಮೇಲೆ ಇಂದಿನಂತೆ ದೌರ್ಜನ್ಯಗಳು ನಡೆಯುತ್ತಿದ್ದವಾ..?  ಆಗಿನ ಕಾಲದ … Read more

ಮಕ್ಕಳ ಹಕ್ಕುಗಳ ರಕ್ಶಣೆಯಲ್ಲಿ ಮಾಧ್ಯಮದ ಪಾತ್ರ: ಜ್ಯೋತಿ ಇರವರ್ತೂರು

ಇತ್ತೀಚೆಗೆ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದ್ರೆ ಮಕ್ಕಳಿಗೂ ಹಕ್ಕುಗಳು ಇದೆಯಾ ಅನ್ನಿಸುತ್ತೆ. ತಮ್ಮವರಿಂದ, ಸಮಾಜದಿಂದ ಹೀಗೆ ತಮ್ಮ ಹಕ್ಕುಗಳೇನೆಂದು ಅರಿವು ಮೂಡುವ ಮುನ್ನ ಕನಸುಗಳ ಬಣ್ಣ ಕಳೆದುಕೊಳ್ಳುತ್ತಾರೆ ಈ ಚಿಣ್ಣರು. ಇಂತಹ ಸಂದರ್ಭದಲ್ಲಿ ಅರಿವು ಮೂಡಿಸಿ ಅವರ ಭವಿಷ್ಯ ದಾರಿ ಅರ್ಥಪೂರ್ಣವಾಗಿಸಲು ಮಾಧ್ಯಮದ ಪಾತ್ರ ಬಹಳ ದೊಡ್ಡದು.  ಶಾಲೆಯಲ್ಲಿ ಪುಟ್ಟ ಬೆನ್ನಿಗೆ ಬೆಟ್ಟದ ಹೊರೆ, ಬದುಕಿನ ಬಣ್ಣ ಕಳೆದುಕೊಂಡ ಬಾಲಕಾರ್ಮಿಕರು ;  ಕಾಫಿ ಕುಡಿಯಲೆಂದು ಹೋಟೇಲಿಗೆ ಹೋದಾಗ ಟೇಬಲ್ ಒರೆಸುವ ಪುಟ್ಟ ಕಂದನನ್ನು ನೋಡಿ ನಿಮ್ಮ … Read more

ಪರಿಸರ ವಿನಾಶ ಮತ್ತು ಆರ್ಥಿಕ ಅಸಮಾನತೆಯಿಂದ ನಾಗರೀಕತೆಯ ಅಳಿವು: ಜೈಕುಮಾರ್.ಹೆಚ್.ಎಸ್

ಪ್ರಳಯ ಸಂಭವಿಸಿ ಇಡೀ ವಿಶ್ವವೇ ವಿನಾಶಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ ಸ್ವಾಮೀಜಿ-ಜ್ಯೋತಿಷಿಗಳು ಪ್ರಳಯ ಸಂಭವಿಸದೇ ಇದ್ದಾಗ ಸಬೂಬು ಹೇಳುವುದನ್ನು ಗಮನಿಸಿದ್ದೇವೆ. ವಿಶ್ವದಲ್ಲಿ ಮನುಷ್ಯ ಸಮಾಜ ಹೇಗೆ ವಿನಾಶಗೊಳ್ಳುತ್ತದೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ ಸವೆಸಿರುವ ಕಾಲಘಟ್ಟವನ್ನು ನಾಗರೀಕತೆ ಎನ್ನುತ್ತೇವೆ. ಮಾನವ ಇತಿಹಾಸದ ಉದ್ದಕ್ಕೂ ಹಲವು ನಾಗರೀಕತೆಗಳು ಏಳಿಗೆ ಕಂಡು ಅವಸಾನ ಹೊಂದಿವೆ. ಮಾನವ ನಾಗರೀಕತೆಗಳು ಹೇಗೆ ಅವಸಾನ ಕಾಣುತ್ತವೆ ಎಂಬುದರ ಕುರಿತು ಇತ್ತೀಚೆಗೆ ಅಮೇರಿಕಾದ ನಾಸಾ ಸಂಸ್ಥೆಯ ನೆರವಿನಿಂದ … Read more

ನ್ಯಾನೊ ದ್ರವ; ವಿಜ್ಞಾನಿಗಳಲ್ಲಿ ಹುಟ್ಟಿಸಿರುವ ಕೌತುಕತೆಯ ಮಾಯದ್ರವ: ಪ್ರಸನ್ನ ಗೌಡ

ನೀವು ನ್ಯಾನೊ ಕಾರ್ ಬಗ್ಗೆ ಕೇಳಿದ್ದೀರಿ, ನ್ಯಾನೊ ಸಿಮ್ ಬಗ್ಗೆ ಕೇಳಿರಬಹುದು ಆದರೆ ನ್ಯಾನೊ ದ್ರವದ ಬಗ್ಗೆ ಕೇಳಿದ್ದೀರಾ?. ಏನಿದು ನ್ಯಾನೊ ದ್ರವ (Nanofluid) ಎಂದು ನಿಮ್ಮಲ್ಲಿ ಕೌತುಕತೆ ಹುಟ್ಟುವುದು ಸಹಜ.  ನಾವು ಬಳಸುವ ದಿನನಿತ್ಯದ ಹಲವಾರು ಉಪಕರಣಗಳಾದಂತಹ ರೆಫ್ರೀಜಿರೇಟರ್, ಎಸಿ/ಏರ್‌ಕಂಡಿಷನ್, ಲ್ಯಾಪ್‌ಟಾಪ್/ಕಂಪ್ಯೂಟರ್ ಹಾಗೂ ಕಾರ್ ರೇಡಿಯೇಟರ್‌ಗಳಲ್ಲಿ ಶಾಖವರ್ಗಾವಣೆಯಾಗುವುದನ್ನು ಗಮನಿಸಿದ್ದಿರಾ?.  ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳಲ್ಲಿ ಕೂಲಿಂಗ್ ಪ್ಯಾನ್ ಬಳಸುವುದರಿಂದ ಗಾಳಿಯಿಂದ ಶಾಖವರ್ಗಾವಣೆಯಾಗುತ್ತದೆ. ರೆಫ್ರೀಜಿರೇಟರ್‌ನಲ್ಲಿ ಸಿ.ಎಫ್.ಸಿ(ಕ್ಲೋರೊ ಪ್ಲೋರೊ ಕಾರ್ಬನ್) ಎಂಬ ರಾಸಯನಿಕ ದ್ರವವನ್ನು ಮತ್ತು ಕಾರ್ ರೇಡಿಯೇಟರ್‌ನಲ್ಲಿ ನೀರನ್ನು ಬಳಸಿ ಶಾಖವರ್ಗಾವಣೆ … Read more

ಆಯ ತಪ್ಪಿದ್ರೆ ಅಪಾಯ (ಅಳಿದುಳಿದ ಭಾಗ): ಎಂ.ಎಸ್.ನಾರಾಯಣ.

(ಇಲ್ಲಿಯವರೆಗೆ…) ಕೆಲವರಿಗೆ ಇದೆಲ್ಲಾ ವಿವರಣೆ, ಸ್ಪಷ್ಟೀಕರಣಗಳು ರೇಜಿಗೆಯೆನಿಸಬಹುದು. ಹೀಗೆ ದ್ವಂದ್ವ, ಗೊಂದಲ ಹಾಗೂ ಸಂಕೀರ್ಣತೆಗಳಿಂದ ಕೂಡಿದ ಹಲವಾರು ಸಿದ್ಧಾಂತಗಳೇಕೆ ಬೇಕು? ಸರಳವಾದ ಒಂದು ಸಿದ್ಧಾಂತ ಸಾಲದೇ? ಎಂದೂ ಪ್ರಶ್ನಿಸಬಹುದು. ಆದರೆ, ಸತ್ಯದ ಸಮಗ್ರ ವಿವರಣೆಯು ಸತ್ಯದ ಎಲ್ಲ ಮಗ್ಗುಲುಗಳನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೆ, ಅಂತಹ ಅತಿ ಸರಳೀಕರಣಗಳಿಂದ ಆಗಬಹುದಾದ ಅಪಾಯಗಳನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈಗ ಉದಾಹರಣೆಗೆ ಬರೀ ಕರ್ಮವಾದವನ್ನು ಅಳವಡಿಸಿಕೊಂಡೆವೆಂದುಕೊಳ್ಳಿ. ಆಗ ಎಲ್ಲ ಹೊಣೆಗಾರಿಕೆಯೂ ನಮ್ಮದೇ ಎಂದಾಗುತ್ತದೆ. ಹಾಗಾದೊಡನೆ, ‘ಎಲ್ಲವೂ ನನ್ನಿಂದಲೇ,  ನಾನಿಲ್ಲದಿದ್ದರೇನೂ ಇಲ್ಲ, ನಾನೇ ಸರ್ವಸ್ವ’, ಎಂದು … Read more

ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್

ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು  ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ … Read more

ಮರೆಯುವುದನ್ನು ಮರೆಯುವ ಬಗೆ ಹೇಗೆ?: ಹೊರಾ.ಪರಮೇಶ್

"ಮರೆವು" ಎಂಬುದು ಜ್ಞಾನಾಸಕ್ತರಿಗೆ ಅದರಲ್ಲೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶತ್ರುವಂತೆ ಕಾಡುತ್ತದೆ.ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಈ "ಮರೆವು" ಉಂಟಾಗಿ ಕೆಲವೊಮ್ಮೆ ಅವಮಾನ, ಮತ್ತೆ ಕೆಲವೂಮ್ಮೆ ಅಪಘಾತ ಇನ್ನೂ ಕೆಲವು ಸಾರಿ ಆನಂದವನ್ನೇ ಉಂಟು ಮಾಡುತ್ತದೆ.ಅದಕ್ಕೆ ಮನೋವಿಜ್ಞಾನಿಗಳು "ಮರೆವು ಮನುಷ್ಯನಿಗೆ ವರವೂ ಹೌದು ಶಾಪವೂ ಹೌದು" ಎಂದಿದ್ದಾರೆ.             ನಿಜ ನಮ್ಮ ಮೆದುಳಿನಲ್ಲಿ ನಮ್ಮ ಪಂಚೇ೦ದ್ರಿಯಗಳಿಂದ ಪಡೆದ ಅನುಭವಗಳೆಲ್ಲವನ್ನು ದಾಖಲಿಸುವ ಸಾಮರ್ಥ್ಯ ಇರುತ್ತದೆ.ಆದರೆ ಆ ಧಾರಣ ಸಾಮರ್ಥ್ಯವು … Read more

ನೂರರ ಕಸಾಪ ತೊಡಬೇಕಾಗಿರುವ ರೂಪ: ಪ್ರದೀಪ್ ಮಾಲ್ಗುಡಿ

ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದೆ. ಮೈಸೂರಿನ ಅಂದಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಯ ಉದ್ದೇಶದಿಂದ ೦೫/೦೫/೧೯೧೫ರಂದು  ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು. ಇಂದಿಗೆ ಕಸಾಪಗೆ ೯೯ ವರ್ಷಗಳು ತುಂಬಲಿವೆ. ಅಂದಿನ ಉದ್ದೇಶಗಳೆಲ್ಲ ಇಂದಿಗಾದರೂ ಈಡೇರಿದೆಯೇ? ಎಂಬ ಪ್ರಶ್ನೆಯನ್ನು ಕೇಳಿದರೆ ಸಮಾಧಾನಕರ ಉತ್ತರ ಸಿಗುವುದಿಲ್ಲ. ಈ ಸಮಯದಲ್ಲಿ ೨೩ ಅಧ್ಯಕ್ಷರ ಅವಧಿ ಮುಗಿದು, ೨೪ನೆಯವರು ಅಧ್ಯಕ್ಷರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಪ್ರಕಟಣೆ, ಸಾಹಿತ್ಯ ಸಮ್ಮೇಳನಗಳ ಆಯೋಜನೆಯನ್ನು ಹೊರತು ಪಡಿಸಿದರೆ … Read more

ಸುಷ್ಮಾ: ಕುಸುಮ ಆಯರಹಳ್ಳಿ

ಸುಮಾರು ಹನ್ನೆರಡು ವರ್ಷಗಳೇ ಕಳೆದಿರಬೇಕು. ಅದರೂ ಈ ಘಟನೆ ಮಾತ್ರ ನನ್ನ ಮನಸಿನಲ್ಲಿ ಇಂದಿಗೂ ಹಸಿ ಹಸಿಯಾಗಿದೆ. ಹತ್ತನೇ ಕ್ಲಾಸಿನವರೆಗೂ ಚಾಮರಾಜನಗರದ ಅಜ್ಜಿಮನೆಯಲ್ಲಿ ಬೆಳೆದ ನಾನು ಆಗಷ್ಟೇ ಅಪ್ಪ,ಅಮ್ಮನನ್ನೂ, ಸ್ವಂತ ಹಳ್ಳಿಯನ್ನೂ, ಪಿಯುಸಿಯನ್ನೂ ಸೇರಿದ್ದೆ. ಸುತ್ತಮುತ್ತಲ ಹಳ್ಳಿಗಳಿಗೆ ಇದ್ದದ್ದು ಅದೊಂದೇ ದೇವಲಾಪುರದ ಪಿಯು ಕಾಲೇಜು. ಬುದ್ದಿವಂತರೂ, ಒಂದಷ್ಟು ಸಾಹಿತ್ಯಾಸಕ್ತಿಯೂ ಇದ್ದ ಸುತ್ತಲ ಹಳ್ಳಿ ಹುಡುಗ-ಹುಡುಗಿಯರಲ್ಲಿ ತುಂಬ ಜನ ಇದೇ ಬ್ಯಾಚಲ್ಲಿದ್ದರು. ಹೆಚ್ಚೆಂದರೆ 100 ಜನ ವಿಧ್ಯಾರ್ಥಿಗಳಿದ್ದ, ಎರಡೇ ಕ್ಲಾಸಿನ ಆ ಕಾಲೇಜಿನಲ್ಲಿ ನಾವು ಚರ್ಚಾಸ್ಪರ್ಧೆ ಮುಂತಾದವಕ್ಕೆ ದೀಪ … Read more

ಬಸವಣ್ಣನಿಂದ ಭಗೀರಥನವರೆಗೆ: ಕೆ. ಆರ್. ಹರಿಪ್ರಸಾದ್

ಈ ಶೀರ್ಷಿಕೆ ಓದಿ ಇದೇನಿದು ವಿಚಿತ್ರವಾಗಿದೆ? ಅಂತ ನಿಮಗೆ ಅನ್ನಿಸಿದರೆ, ನಿಮ್ಮ ಅನಿಸಿಕೆ ಸರಿಯಾಗೇ ಇದೆ. ಒಬ್ಬ ಚಾರಿತ್ರಿಕ ಮನುಷ್ಯ, ಮತ್ತೊಬ್ಬ ಪುರಾಣಪುರುಷ. ಇವರಿಗೆ ಹೇಗೆ ಸಂಬಂಧ ಅನ್ನುವ ನಿಮ್ಮ ಪ್ರಶ್ನೆಗೆ ಉತ್ತರವನ್ನು ಒಂದು ಸಾಲಿನಲ್ಲಿ ಹೇಳಲು ಕಷ್ಟ. ಅರ್ಥಾತ್ ನೀವು ಮುಂದೆ ಓದಲೇಬೇಕು. ನಮ್ಮದೊಂದು ಗೆಳೆಯರ ಬಳಗವಿದೆ. ನಾವು ಅದರ ಮೂಲಕ ನಾಟಕ, ಪ್ರತಿಭಟನೆ, ಜಾಥಾ, ಪ್ರಕಟಣೆ ಇತ್ಯಾದಿ ಏನೇನೋ ಮಾಡುತ್ತಿರುತ್ತೇವೆ. ಈ ಏನೇನೋ ಮಾಡುವ ನಮಗೆ ರಂಗಭೂಮಿ ಪ್ರಧಾನ ಮಾಧ್ಯಮ. ಒಮ್ಮೆ ನಾವು ಬಸವಣ್ಣನ … Read more

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ: ವಿಶ್ವನಾಥ ಕಂಬಾಗಿ

ಬಹುಶಃ ಮನುಷ್ಯನಿಗೆ ಇನ್ನೊಂದೆರಡು ಮೆದುಳುಗಳೇನಾದರು ಇದ್ದಿದ್ದರೆ ಇಡೀ ಪೃಥ್ವಿ  ಎರಡಂತಸ್ತಿನ ಜಗತ್ತಾಗುತ್ತಿತ್ತು. ಯಾವ ಒಂದು  'ಅರಿವು' ಇರದೇ ಇರುವಾಗಿನ ಮನುಷ್ಯ ಪ್ರಾಣಿಯನ್ನು ಊಹಿಸಿಕೊಂಡಾಗ ಕಾಲ, ಸ್ಥಳ ಎರಡೂ ನಿಜಕ್ಕೂ ಶುಭ್ರವಾಗಿದ್ದವೆನೋ? ಎಂದೆನಿಸುತ್ತದೆ. ಆಗ ಮನುಷ್ಯ ಕೂಡ ಇತರೆ ಪ್ರಾಣಿಯಂತೆ ತಾನೂ ಒಂದು ಪ್ರಾಣಿ. ಎಲ್ಲರೊಳೊಂದಾಗಿ ಬದುಕಿದ ಆತ ಎಲ್ಲರಂತೆಯೇ ಬೆಳೆಯುತ್ತಿದ್ದ. ಎಲ್ಲದರ ಮಧ್ಯ ಎಲ್ಲವೂ ಆಗಿದ್ದ ಈ ಪ್ರಾಣಿಯ ಮೆದುಳು ಗಡ್ಡೆಯಲ್ಲಿ ಅದೆಂತಹ ನರಗಳು ಕವಲೊಡೆದು ಬೆಳೆದವೋ! ಆತನ ಇರುವಿಕೆಗೂ ಇತರೇ ಪ್ರಾಣಿಗಳ ಇರುವಿಕೆಯ ಮಧ್ಯ ಒಂದು … Read more

ಆಧುನಿಕ ಮಹಿಳೆಯರು ಶಿಲುಬೆಗೇರುವ ಪರಿ: ಶ್ರೀದೇವಿ ಕೆರೆಮನೆ

ನಾನು ಸೀತೆಯಷ್ಟು ಸಹಿಷ್ಣು, ಸರ್ವ ಸಹನೆಯವಳಲ್ಲ. ಅವಶ್ಯಕತೆ ಉಂಟಾದಲ್ಲಿ ನಾನು ವಿಪ್ಲವ ಮಾಡ ಬಲ್ಲೆ… ಪ್ರತಿ ಹಿಂಸೆಯನ್ನೂ ಮಾಡಬಲ್ಲೆ. ಕಳೆದ ಎರಡು ತಿಂಗಳಿಂದ ಡಾ. ಪ್ರತಿಭಾ ದೇವಿಯವರು ಬರೆದ, ಮೂತಿದೇವಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ’ಯಾಜ್ಞಸೇನಿ’ ಕೃತಿಯನ್ನು ಗೌತಮ ಗಾಂವಕರರು ನನ್ನ ಕೈಗಿಟ್ಟಾಗಿನಿಂದ ಕನಿಷ್ಟ ಸಾವಿರ ಸಲ ಈ ವಾಕ್ಯವನ್ನು ಓದಿದ್ದೇನೆ. ಆಸ್ವಾದಿಸಿದ್ದೇನೆ. ಒಳಗೊಳಗೇ ಈ ವಾಕ್ಯವನ್ನು ಮಥಿಸಿದ್ದೇನೆ, ಈ ವಾಕ್ಯವನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನವನ್ನೂ ಮಾಡಿದ್ದೇನೆ. ಬಹುಶಃ ಮಹಿಳಾ ವಾರಾಚರಣೆಯ ಈ ಸಂದರ್ಭದಲ್ಲಿ ಈ ಮಾತು ಕೇವಲ … Read more

ಕನ್ನಡವೇ ನಿತ್ಯ: ಸ್ಮಿತಾ ಅಮೃತರಾಜ್

ನಾವು ಎಲಿಮೆಂಟರಿ ಶಾಲೆಗೆ ಹೋಗುವ ಹೊತ್ತಿಗೆ ಅಲ್ಲೊಂದು ಇಲ್ಲೊಂದರಂತೆ ಅಕ್ಕಪಕ್ಕದ ಊರುಗಳಲ್ಲಿ  ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗಳು ಹಣಕಿ ಹಾಕುತ್ತಿದ್ದವಷ್ಟೆ. ಉಳ್ಳವರು ಹಾಗು  ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಗೆ  ಸೇರಿಸಬೇಕೆಂಬ ಮಹಾತ್ಕಾಂಕ್ಷೆ ಹೊತ್ತ ಹೆತ್ತವರ ಮಕ್ಕಳಿಗೆ ಮಾತ್ರ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ನೊಳಕ್ಕೆ ಹೊಕ್ಕು ಲಯ ಬದ್ಧವಾಗಿ ಇಂಗ್ಲೀಷ್ ಪ್ರಾರ್ಥನೆಯನ್ನು  ಉಸುರುವ ಭಾಗ್ಯ. ನಾವೆಲ್ಲಾ ಬರೇ ಕಾಲಿನಲ್ಲಿ. ಹೆಚ್ಚೆಂದರೆ ಹವಾಯಿ ಚಪ್ಪಲನ್ನು ತೊಟ್ಟು ಬಲು ದೂರದಿಂದ ನಡೆದು ಕೊಂಡೇ ಬರುವಾಗ,  ಅವರುಗಳೆಲ್ಲಾ ಗರಿ ಗರಿ … Read more

ಅಲ್ಲೂರಿಯ ಒಡಲುರಿ ಇನ್ನೂ ಆರಿಲ್ಲ…!: ಅಜ್ಜಿಮನೆ ಗಣೇಶ್

ನಮಗೆ ನೀರು ಬೇಡ, ರಸ್ತೆ ಬೇಡ, ಮನೆಯೂ ಬೇಡ, ಸ್ವಾತಂತ್ರ್ಯದ ಗುರುತಿನ ಒಂದೇ ಒಂದು ಪತ್ರ ಬೇಡ. ನಿಮ್ಮ ಸವಲತ್ತುಗಳು ನಿಮಗೆ ಇರಲಿ. ನಮ್ಮನ್ನ ಬದುಕಲು ಬಿಡಿ. ಕಾಡು ಕಾಯುವವರು ನಾವು ನಮಗೆ ಸಾಮಾಜಿಕ ನ್ಯಾಯ ಕೊಡಿ. ಹಸಿರುಟ್ಟ ಹಾಡಿಯಲ್ಲಿ, ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಿರುವ ಆದಿವಾಸಿಗಳ ಅಹವಾಲಿದು..ಬದಕಲು ಬಿಡಿ ಅಂತ ಅಂಗಲಾಚುತ್ತಿರುವ ಪರಿಯಿದು…ದೊಡ್ಡ ಗೌಡರ ಬಾಗಿಲಿಗೆ ನಮ್ಮ ಎಲುಬಿನ ತ್ವಾರಣಾ. ಶೋಷಣೆ ವಿರುದ್ಧದ  ಈ ಹಾಡು ಮಲೆನಾಡ  ಮಡಿಲೊಳಗೆ ಹರಡಿದ ಕಾಡು ದರಲೆ ಮೇಲೆ ನೆತ್ತರ ಹರಿಸಿದ್ದು, … Read more

ಹಳ್ಳಿಮೇಷ್ಟ್ರು: ಪತ್ರೇಶ್. ಹಿರೇಮಠ್

ಹಳ್ಳಿಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೇ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಪ್ರೀತಿಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು.   ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆ ಹೊರಡುವುದು, ಪ್ರಾರ್ಥನೆ,ಪಾಠ, ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು. ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ … Read more

ಮಹಿಳಾ ದಿನ’ ಅರ್ಥ ಕಳೆದುಕೊಳ್ಳುತ್ತಿರುವಾಗ: ವೀಣಾ ಅನಂತ್

ಮಾರ್ಚ್ ೮,  ಮತ್ತೊಮ್ಮೆ ವಿಶ್ವ ಮಹಿಳಾ ದಿನ ಬಂದಿದೆ. ಮತ್ತೊಮ್ಮೆ ಕನವರಿಕೆಗಳು, ಹೊಸ ಆಶಯಗಳು… ಭಾರತೀಯ ಮಹಿಳೆ ಇಂದು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದಾಳೆ… ಎಲ್ಲಾ ಕಡೆ ಮಹಿಳೆಯರದೇ ಮೇಲುಗೈ…ಇವೆಲ್ಲಾ ಕೇಳಿ ಬರುವ ಮಾತುಗಳು. ಆದರೆ ನಿಜ ಪರಿಸ್ಥಿತಿ ಬೇರೆಯೇ ಇದೆ. ಹಳೆ ಕನಸುಗಳೆಲ್ಲಾ ದುಃಸ್ವಪ್ನವಾಗಿ ಕಾಡುತ್ತಿರಲು ಹೊಸ ಕನಸುಗಳನ್ನು ಹೆಣೆಯಲು ಯಾಕೋ ಮನಸ್ಸೇ ಬರುತ್ತಿಲ್ಲ. ಇತ್ತೀಚಿಗಿನ ಘಟನೆಗಳನ್ನು ಗಮನಿಸಿದಾಗ ಯಾಕೋ ’ ಮಹಿಳಾ ದಿನ’ ಅರ್ಥ ಕಳೆದುಕೊಂಡಂತೆ ಅನಿಸುತ್ತಿದೆ. ಇತ್ತೀಚೆಗೆ ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿವೆ. … Read more

ಹರಳೆಣ್ಣೆ ಡಬ್ಬಿ ಮತ್ತು ಹಳೇ ಪ್ರೇಮ ಪುರಾಣ..!: ರಶ್ಮಿ ಜಿ ಆಳ್ವ

ಪ್ರೀತಿ ಅನ್ನುವ ಎರಡಕ್ಷರವನ್ನು ದ್ವೇಷಿಸುವಂತೆ ಮಾಡಿದ್ದು ನೀನು… ಪ್ರೀತಿ ಅಂದರೆ ಅರಿಯದ ದಿನಗಳವು… ರೋಮಿಯೋ-ಜ್ಯೂಲಿಯೆಟ್, ಲೈಲಾ-ಮಜ್ನು ಪ್ರೀತಿಗಾಗಿ ಸತ್ತರು ಇಷ್ಟೇ ನನಗೆ ಗೊತ್ತಿದ್ದಿದ್ದು. ಆದರೆ ಕಾಲೇಜಿನ ದಿನಗಳಲ್ಲಿ ಲೆಕ್ಚರರೊಬ್ಬರು ತುಂಬಾ ಇಷ್ಟವಾಗಿದ್ದರು. ಅವರು ಮಾಡುತ್ತಿದ್ದ ಪಾಠವೂ ಅಷ್ಟೇ ಆಕರ್ಷಕ. ನಮ್ಮ ಗರ್ಲ್ಸ್ ಕಾಲೇಜ್ ಹೀರೋ ಅವರು. ಅವರು ಮಾಡುತ್ತಿದ್ದ ‘ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ’ಯ ಪಾಠ ಇಂದಿಗೂ ಮರೆತಿಲ್ಲ. ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ನನ್ನ ಆಟೋಗ್ರಾಫ್‌ನಲ್ಲಿ ಬರೆದಿದ್ದು, ‘ಲವ್ಲೀ ಹ್ಯೂಮನ್‌ಬಿಯಿಂಗ್ ವಿತ್ ಮೋಸ್ಟ್ ಎಕ್ಸ್‌ಪ್ರೆಸಿಂಗ್ ಐಸ್’ ಕಣ್ಣಿಗೆ … Read more