ಪುಸ್ತಕ ಕೊಳ್ಳಿರಿ: ಮುಖವಾಡದ ಮಾಫಿಯಾದಲ್ಲಿ
ಶಿವಕುಮಾರ ಚನ್ನಪ್ಪನವರ ಇವರು ಬರೆದ ಮುಖವಾಡದ ಮಾಫಿಯಾದಲ್ಲಿ ಕಥಾಸಂಕಲನವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.. https://www.instamojo.com/panjuprakashana/mukhavadada-mafiyadalli/
ಶಿವಕುಮಾರ ಚನ್ನಪ್ಪನವರ ಇವರು ಬರೆದ ಮುಖವಾಡದ ಮಾಫಿಯಾದಲ್ಲಿ ಕಥಾಸಂಕಲನವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.. https://www.instamojo.com/panjuprakashana/mukhavadada-mafiyadalli/
ನನ್ನ ಹೆಸರು ರಾಜಹಂಸ. ಮೂಲತಃ ಬೀದರ್ ದವನು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದೇನೆ. ಓರ್ವ ಕವಿ ಕೂಡ. ಈಗಾಗಲೇ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದೇನೆ. ಸಿನಿಮಾ ನಿರ್ದೇಶಕನಾಗಬೇಕೆಂಬುದು ನನ್ನ ಜೀವಮಾನದ ಕನಸು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಈಗ “ನೋಡ್ ಬೇಡ” ಎಂಬ ಶೀರ್ಷಿಕೆಯ ಕಿರುಚಿತ್ರವೊಂದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಪುಟ್ಟಪ್ರಯತ್ನ. ದಯವಿಟ್ಟು ಒಮ್ಮೆ ನೋಡಿ ಮತ್ತು ಸಾಧ್ಯವಾದರೆ ಈ ಕಿರುಚಿತ್ರದ ಕುರಿತು ಸರಿ ತಪ್ಪುಗಳ … Read more
ಇಲ್ಲಿಯವರೆಗೆ ಕರುಣೆ ಇರುವುದು ಕೊಡುವುದರಲ್ಲಿ ಇಲ್ಲ:- ನಾವು ಬೇರೆಯವರಿಗೆ ತೋರಿಸುವ ಕರುಣೆ ಅವರನ್ನು ಆಶಕ್ತರನ್ನಾಗಿ, ಬಲಹೀನರನ್ನಾಗಿ ಮಾಡಬಾರದು ಅಷ್ಟೇ ಅಲ್ಲ, ನಮ್ಮ ದಯೆ ಅವರಲ್ಲಿ ದುಷ್ಟ ಆಲೋಚನೆಗಳನ್ನು ಹುಟ್ಟುಹಾಕಬಾರದು, ಹಾಗಾದಲ್ಲಿ ಅದಕ್ಕೆ ಸೂಕ್ತ ದಂಡನೆಯನ್ನು ನಾವೇ ಅನುಭವಿಸುತ್ತೇವೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಅರ್ಹತೆಯಿಲ್ಲದೆ ಏನನ್ನು ಪಡೆಯಬಾರದು ಹಾಗೇ ಅರ್ಹತೆಯಿಲ್ಲದವನಿಗೆ ಏನನ್ನು ಕೊಡಲೂಬಾರದು. ಸಾಧುವೊಬ್ಬ ಒಂದು ಗುಹೆಯಲ್ಲಿ ಕುಳಿತುಕೊಂಡು ಬಹಳ ಕಠಿಣವಾದ ತಪಸ್ಸನ್ನಾಚರಿಸುತ್ತಿದ್ದ ಆತ ಸಾಧನೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಬೇಟೆಯಾಡುತ್ತಾ ಬಂದ ರಾಜನೊಬ್ಬ … Read more
ಸ್ವಂತ ಜ್ವಾಲೆಯಿಂದ ಉರಿಯುವ ದೀಪ ಮತ್ತೊಂದು ದೀಪವನ್ನು ಹೇಗೆ ಹೊತ್ತಿಸಲಾರದೋ ಹಾಗೆಯೇ ಸ್ವತಃ ಕಲಿಯದೇ ಇದ್ದ ಶಿಕ್ಷಕನು ಸಮರ್ಥವಾಗಿ ಬೋಧಿಸಲಾರ -ರವೀಂದ್ರನಾಥ ಠಾಗೂರ್ ಜೂನ್ ತಿಂಗಳು ಬಂತೆಂದರೆ ಶಾಲೆಗಳ ಪ್ರಾರಂಭ. ಇಲ್ಲಿ ಪಾಲಕರು. ಮಕ್ಕಳು ಶಿಕ್ಷಕರು ತಮ್ಮದೇ ಆದ ತಯಾರಿ ಮಾಡಿಕೊಳ್ಳುವ ಮೂಲಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ದರಾಗುವ ಸಮಯ. 2018-19 ಶೃಕ್ಷಣಿಕ ವರ್ಷ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾಗುವ ಮೊದಲು ವೇಳಾಪತ್ರಿಕೆ, ವರ್ಗದ ಶೈಕ್ಷಣಿಕ ರೂಪರೇಷೆಗಳ ಅಂದಾಜು ಪತ್ರಿಕೆ,ಅಭ್ಯಾಸ ಪತ್ರಿಕೆ, ದಿನಚರಿ ಹೀಗೆ ಒಂದಲ್ಲಾ ಹಲವು ದಾಖಲೆಗಳ … Read more
ಇಂದು ಮಾನವ ಕಟುಕನಾಗಿದ್ದಾನೆ, ಕರುಣೆ, ಕನಿಕರ ಎಲ್ಲವೂ ಅವನಿಂದ ಮಾಯವಾಗಿದೆ ಎನ್ನುವುದು ಸತ್ಯ. ಅತೀ ಶ್ರೇಷ್ಠ ಎನಿಸಿಕೊಂಡ ಮಾನವ ಜೀವಿ ಕರುಣಾ ಮೂರ್ತಿ, ಸಹನಾಮಯಿ, ಸಂಘಜೀವಿ ಎಂದೆಲ್ಲಾ ಬಿರುದು ಪಡೆದಿರುವ ಮನುಷ್ಯ ಇಂದು ತನ್ನೆಲ್ಲ ಮೌಲ್ಯಯುತ ಗುಣಗಳನ್ನು ತೊರೆದು ರಾಕ್ಷಸ ಪ್ರವೃತ್ತಿಗೆ ಇಳಿದಿರುವುದು, ಹೇಯಕರ ಸಂಗತಿ. ನಮ್ಮ ಧರ್ಮಗಳು, ಪರಸ್ಪರ ಮಾನವರು ಮಾತ್ರವಲ್ಲ ಇಡೀ ಪ್ರಕೃತಿಯನ್ನೇ ಪ್ರೀತಿಸುವದಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ಪ್ರಳಯ ಎದುರುಗೊಂಡರೂ ಕೈಯಲ್ಲಿರುವ ಸಸಿಯನ್ನು ನಾಟಿ ಮಾಡಿರೆಂದು ಹೇಳುತ್ತವೆ. ನಾವು ಬೆಳೆದ ಕೃಷಿಯನ್ನು ಮಾನವರು … Read more
ಪುದೀನ ರೈಸ್. ಬೇಕಾಗುವ ಸಾಮಾಗ್ರಿಗಳು: ಪುದೀನ ಸೊಪ್ಪು ½ ಕಟ್ಟು ಕೊತ್ತಂಬರಿ ಸೊಪ್ಪು ½ ಕಟ್ಟು ಬೆಳ್ಳುಳ್ಳಿ 3 ಶುಂಠಿ 1ಇಂಚು ಹಸಿ ಮೆಣಸಿನಕಾಯಿ 4 ಈರುಳ್ಳಿ 1 ತೆಂಗಿನ ತುರಿ ½ ಕಪ್ ನೀರು ¼ ಕಪ್ ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಸಾಮಾಗ್ರಿಗಳು: ತುಪ್ಪ 3 ಚಮಚ ಗೋಡಂಬಿ ಸ್ವಲ್ಪ ಜೀರಿಗೆ 1 ಚಮಚ ಕಾಳುಮೆಣಸು 10 ಪಲಾವ್ ಎಲೆ 1 ಲವಂಗ 4 ಸ್ಟಾರ್ ಅನೈಸ್ 1 ಚಕ್ಕೆ ಒಂದಿಂಚು … Read more
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ… ಪಂಜುವಿನ ಯುಗಾದಿ ವಿಶೇಷಾಂಕ ನಿಮ್ಮ ಓದಿಗೆ.. ಈ ಸಂಚಿಕೆಯಲ್ಲಿ…. ಕಾವ್ಯಧಾರೆ 1 ಮಮತಾ ಅರಸೀಕೆರೆ ಮೌಲ್ಯ ಎಂ. ಗೋವಿಂದ ಹೆಗಡೆ ಪ್ರವೀಣಕುಮಾರ್ .ಗೋಣಿ ಷಣ್ಮುಖ ತಾಂಡೇಲ್ ಬೀನಾ ಶಿವಪ್ರಸಾದ ಶಿವಕುಮಾರ ಕರನಂದಿ ಮಾ.ವೆಂ.ಶ್ರೀನಾಥ ನಂದೀಶ್ ಮಾಧವ ಕುಲಕರ್ಣಿ, ಪುಣೆ ಸಂದೀಪ ಫಡ್ಕೆ, ಮುಂಡಾಜೆ ವಿಭಾ ವಿಶ್ವನಾಥ್ ಜಹಾನ್ ಆರಾ ಎಚ್.ಕೊಳೂರು ಆದಿತ್ಯಾ ಮೈಸೂರು ರಂಜಿತ ದರ್ಶಿನಿ ಆರ್. ಎಸ್ ಯಲ್ಲಪ್ಪ ಎಮ್ ಮರ್ಚೇಡ್ ಕುರಿಯ ಕಾಲು: ಜೆ.ವಿ.ಕಾರ್ಲೊ ಉದಾತ್ತ ಜೀವಿ ಪ್ಲಾಟಿಪಸ್: … Read more
ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ. ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ … Read more
21ನೇ ಶತಮಾನದಲ್ಲಿ ನಮ್ಮ ಪೂರ್ವಜರ ಹೆಚ್ಚಿನ ಸಹಾಯವಿಲ್ಲದೇ ನಾವು ಮಹತ್ತರವಾದ ಮತ್ತು ಪ್ರಬಲವಾದ ತಾಂತ್ರಿಕ ಸಾಮ್ರಾಜ್ಯವನ್ನು ಸಾಧಿಸಿದ್ದೇವೆಂದು ಭಾವಿಸುತ್ತೇವೆ. ಆದರೆ ಭಾವಿಸಿದಂತೆ ಇದು ಸತ್ಯವಲ್ಲ. ಇತ್ತೀಚಿನ ಸಂಶೋಧನೆ ಎಂದು ಹೇಳುವ ಬಹುತೇಕ ವಸ್ತುಗಳನ್ನು ನಮ್ಮ ಪೂರ್ವಜರು ಆಗಲೇ ಬಳಸಿದ್ದರು ಮತ್ತು ನಾವು ಈಗ ಯೋಚಿಸುವುದಕ್ಕಿಂತ ಮುಂಚಿತವಾಗಿ ಅವರು ವೈಜ್ಞಾನಿಕವಾಗಿ ಮುಂದುವರೆದಿದ್ದರು ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ದೊರೆಯುತ್ತವೆ. ಅಂತಹ ಕೆಲ ಸಲಕರಣೆಗಳೇ ನಮ್ಮ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹಾಗೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿವೆ. ಹಾಗಾದರೆ ಆ ವಸ್ತುಗಳು ಯಾವುವು? … Read more
ಅಂದು ಪ್ರಕೃತಿಯು ತನ್ನ ವಸಂತಕ್ಕೆ ಕಾಲಿಟ್ಟ ಸಮಯ. ಆ ತಾಯಿಯು ತನ್ನೆಲ್ಲ ನೋವುಗಳನ್ನು ಮರೆತು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಲ್ಲಿದ್ದಳು. ವಸಂತ ಎಂಬ ಪದವೇ ಹಾಗೆ. ಅವನಿಗೆ ಎಣೆ ಯಾರು? ಯಾರನ್ನಾದರೂ ಬಿಟ್ಟಿಹನೆ? ಸೃಷ್ಟಿಯ ರುವಾರಿಯಾದ ಬ್ರಹ್ಮನನ್ನೇ ಬಿಡದ ಮಾರ…ಪ್ರಕೃತಿಯನ್ನು ಬಿಡಬಲ್ಲನೆ? ಹಾಗೆಯೇ ವಸಂತಕ್ಕೆ ಕಾಲಿಟ್ಟ ಭೂಮಿ ತಾಯಿಯ ಜೊತೆ ಅನೋನ್ಯದಿಂದ ಜೀವಿಸುತ್ತಿದ್ದ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೂ ಅದರ ಅನುಭವ ಆಗಬೇಕಲ್ಲವೇ… ಗಿಡ ಮರಗಳು ಮೈ ಕೊಡಗಿ ಚಿಗುರೊಡೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು…ಅವುಗಳನ್ನು ಅವಲಂಬಿಸಿದ ಪ್ರಾಣಿ ಪಕ್ಷಿಗಳಲ್ಲೂ … Read more
ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ? ಪಾಪ್ ಗೊತ್ತು ರಾಕ್ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು … Read more
ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ … Read more
ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ … Read more
ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ. ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು … Read more
ಸಹೃದಯಿಗಳೇ, ಮುಂದಿನ ಜನವರಿ ತಿಂಗಳು 21ನೇ ತಾರೀಖು ಬಂದರೆ ಪಂಜು ಶುರುವಾಗಿ ಐದು ವರ್ಷವಾಗುತ್ತದೆ. ಈ ಐದು ವರ್ಷಗಳಲ್ಲಿ ಪಂಜು ತನ್ನದೇ ಆದ ದೊಡ್ಡ ಓದುಗ ಬಳಗವನ್ನೇ ಹೊಂದಿದೆ. ಹಾಗೆಯೇ ಇಲ್ಲಿಯವರೆಗೂ 680 ಲೇಖಕರು ವಿವಿಧ ಲೇಖನಗಳನ್ನು ಪಂಜುವಿಗಾಗಿ ಬರೆದಿದ್ದಾರೆ. ಆ ಅಷ್ಟು ಲೇಖಕರ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಪಂಜುವಿನ ಪುಟಗಳ ಹಿಟ್ಸ್ ಇಲ್ಲಿಯವರೆಗೆ 33 ಲಕ್ಷಕ್ಕೂ ಅಧಿಕವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿ ಹೀಗೆಯೇ ಇರಲಿ. “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ … Read more
ರಂಗಭೂಮಿ ಎಂದರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿರುವ ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು. … Read more
ಚಿನಕುರುಳಿಯಂತೆ ಕಚಗುಳಿಯಿಡುವ ಮುಗ್ಧ ಸ್ನೇಹದ ಹುಡುಗಿ ಅಕ್ಷತಾ ಕೃಷ್ಣಮೂರ್ತಿ ಕಳಿಸಿದ ಹೊಸ ಕವನ ಸಂಕಲನ 'ಕೋಳ್ಗಂಬ' ಕೈಯಲ್ಲಿ ಹಿಡಿದು ಕಿಟಕಿಯಲ್ಲಿ ತೂರಿಬರುವ ಮಳೆಹನಿಗಳಿಗೆ ಮುಖವೊಡ್ಡಿ ಕೂತಿದ್ದೆ. ಬಾಲ್ಯದ ಗೆಳತಿ ಸುಮಾ ಕರೆಮಾಡಿದಳು. ಕುಶಲೋಪರಿಯ ಸಾಂಪ್ರದಾಯಿಕತೆಯನ್ನೂ ಮರೆತು ನೇರವಾಗಿ ವಿಷಯಕ್ಕೆ ಬಂದಳು. ಮೀಡಿಯಾಗಳಲ್ಲೆಲ್ಲ ಮುಟ್ಟಿಗುಡುವ ಸೆನಿಟರಿ ಪ್ಯಾಡ್ ಗಳ ಮೇಲೆ ಹೇರಿದ ಜಿ ಎಸ್ ಟಿ ಯ ಕುರಿತು ಪರ ವೈರುಧ್ಯ ಅಭಿಪ್ರಾಯಗಳು ವ್ಯಕ್ತವಾಗ್ತಾ ಇದ್ಯಲ್ಲೇ ಅಂದ್ಲು. ಹೂಂ ಅಂದೆ. ಅವಳು ಮುಂದೇನೂ ಮಾತನಾಡದೇ ಮೌನ ಸಾಧಿಸಿದಳು. ಏನಿದೆ … Read more
ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು, ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸು ತಿಮ್ಮಪ್ಪ. ತಣದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ … Read more
ಇಂದಿನ ಮಾನವನ ಪ್ರಕೃತಿಯ ಮೇಲಿನ ದಾಳಿಯನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದು ಒಂದು ರೀತಿಯ ಆಘಾತದ ಸಂಗತಿ. ಹಲವು ಬಗೆಯ ವರದಿಗಳು ಹಲವು ಸಲ ನಾವು ವಾಸಿಸುತ್ತಿರುವ ಪರಿಸರದಲ್ಲಿ ಮಾಲಿನ್ಯತೆಯ ಪ್ರಮಾಣದ ಬಗ್ಗೆ ಎಚ್ಚರಿಸುತ್ತಲೇ ಇವೆ. ಇತ್ತೀಚೆಗೆ ವಾಯು ಮಾಲಿನ್ಯತೆಯ ಪ್ರಭಾವದಿಂದಾಗಿ ದೇಶ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳು ಶಾಲೆಗಳಿಗೆ ರಜೆಗಳನ್ನು ಘೋಷಿಸಲಾಗಿತ್ತು. ಇನ್ನು ನಮ್ಮ ಬೆಂಗಳೂರು ಇದಕ್ಕೆ ಹೊರತಾಗಿಲ್ಲ, ಅಷ್ಟು ಪ್ರಮಾಣ ಇಲ್ಲದಿದ್ದರೂ ಅದರ ಸಮೀಪದಲ್ಲಿದೆ. ಇದಕ್ಕೆಲ್ಲ ಕಾರಣಗಳು ನಮಗೆ ತಿಳಿದಿವೆ. ಹೆಚ್ಚಾದ ವಾಹನಗಳ ಸಂಖ್ಯೆ, ನಿಯಂತ್ರಣದಲ್ಲಿಲ್ಲದ ಕಾರ್ಖಾನೆಗಳ … Read more
ಅಪ್ಪಂದಿರ ದಿನ ಮುಗಿದೇ ಹೋಯ್ತು. ಇನ್ನೂ ಮುಂದಿನ ವರ್ಷವೇ ಅಪ್ಪನನ್ನ ಹಗಲಿಂದ ಇರುಳಿಬ್ಬಾಗವಾಗುವವರೆಗೂ ತಮ್ತಮ್ಮ ಹೆಗಲಿಗೆ ಕಟ್ಟಿಕೊಂಡು ಹೊಗಳುವುದು, ಹಾಡುವುದು ಕವಿತೆ ಬರೆಯುವುದು ಅಲ್ಲೋ ಇಲ್ಲೋ ಓದಿದ ಆದರ್ಶ ಅಪ್ಪಂದಿರ ಬಗ್ಗೆ ಬರೆಯುವುದು ಎಲ್ಲವೂ ಒಂದಷ್ಟು ಈ ವರ್ಷ ಮುಗಿಯಿತು. ಬರೆಯುವುದೇನು ತಪ್ಪಿಲ್ಲ ಓದಿದವ ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾನೆ, ಅಷ್ಟಕ್ಕೂ ಅಪ್ಪನೆಂದರೆ ದ್ವೇಷವೇನು ಇಲ್ಲಾ. ಜಗತ್ತಿಗೆ ನನ್ನಪ್ಪನನ್ನ ತೋರಿಸುವ ಉಮೇದುವಾರಿಕೇನು ಇಲ್ಲಾ, ನನಗಂತೂ ಅಪ್ಪನೆಂದರೆ ಚಿಪ್ಪೊಡೆಯದ ಮುತ್ತು, ನಾನಾಗ ಚಿಗುರುಗಣ್ಣಿನ ಹುಡುಗ. ಎಸ್. ಎಸ್. ಎಲ್ಸಿ … Read more
ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ಪ್ರವಾಸ ಮಾಡುವಾಗ, ಸಾಮಾನ್ಯವಾಗಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನಮಗೆ ಗೊತ್ತಿರುವ ಭಾಷೆಯಲ್ಲಿ ಮತ್ತೊಬ್ಬರ ಜೊತೆ ಸಂಭಾಷಣೆ ನೆಡೆಸುವುದು ವಿಫಲವಾದಾಗ, ಕೈ, ಬಾಯಿ ಸನ್ನೆಗಳು ಮತ್ತು ನಮ್ಮ ಹಾವ ಭಾವಗಳ ಮೂಲಕ ಸಂಭಾಷಣೆ ನೆಡೆಸುವ ಪ್ರಯತ್ನ ಮಾಡುತ್ತೇವೆ. ಕೆಲವೊಮ್ಮೆ ಇದೂ ವಿಫಲವಾಗುವುದುಂಟು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ, ಆದರೆ ಭಾಷೆಯ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆ ಆಗ ನಮಗೆ ಎದುರಾಗುವುದುಂಟು. ಜಪಾನಿನ ಲಾಗ್‍ಬಾರ್ ಹೆಸರಿನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ … Read more
ಅಮ್ಮ ಎನ್ನುವವಳು ಜಗತ್ತಿನ ಅದಮ್ಯ ಜ್ಯೋತಿ ಚೇತನ. ಈ ಎರಡಕ್ಷರಗಳಲ್ಲಿ ಸೃಷ್ಟಿಯನ್ನೇ ಮೋಡಿಮಾಡಬಲ್ಲ ಅದೆಂಥದೋ ಶಕ್ತಿ ಇದೆ. ಆ ಶಕ್ತಿ ಅದರ ಉಚ್ಚಾರಣೆಯಿಂದ ಬಂದದ್ದೋ ಅಥವಾ ಆ ಪದದ ಹುಟ್ಟಿನಿಂದ ಬಂದದ್ದೊ ತಿಳಿಯದು ಆದರೆ ಆ ಪದಕ್ಕೆ ಶೋಭೆಯಂತಿರುವ ಆ ಹೆಣ್ಣು ಮಾತ್ರ ಮಮತೆ, ಪ್ರೀತಿ, ಸಹನೆ, ಕರುಣೆ ಇಂಥ ಹೇಳಲು ಅಸಾಧ್ಯವಾದ ಗುಣ ಭೂಷಿತೆ. ಜಗತ್ತಿನ ಎಲ್ಲರೂ ಇದನ್ನು ಕಂಡುಂಡವರೇ ! ಇವುಗಳೇ ನಮಗೆ ಅವಳನ್ನು ದೈವ ಸ್ವರೂಪಿ ಎನ್ನಲು ಪ್ರೇರಕ ಮತ್ತು ಅಮ್ಮ ಎನ್ನುವ … Read more
ಬುದ್ದಿ ಭಾವಗಳ ರೂಪಿತ ವಿಸ್ಮಯವನ್ನು ಕವಿತೆ ಎನ್ನುವದೊ? ಪದಗಳ ಜೋಡಣೆಯನ್ನು ಕವಿತೆ ಎನ್ನುವದೊ?ಪರಿಶ್ರಮ, ಕಲಾ ಕೌಶಲ್ಯ, ಪ್ರತಿಭೆಯ ಅನಾವರಣದ ರೂಪಕವನ್ನು ಕವಿತೆಯೆನ್ನುವದೊ?ಕಾಣದರ ಜೊತೆಗೆ ಕಂಡಂತೆ ಮಾತಿಗೆ ನಿಲ್ಲುವ ಕ್ರಿಯೆ ಕವಿತೆಯೊ? ನಮ್ಮೊಳಗಿನ ಭಾವಗಳ ಜೊತೆಗಿನ ಸಂವಾದವೊ? ಕವಿತೆ ಎಂದರೆ ನನ್ನೊಳಗೊ??? ಹೀಗೆ ಹಲವಾರು ಪ್ರಶ್ನೆಗಳ ಸರಮಾಲೆಗೆ ಎಡತಾಕುವದೆ ಕವಿತೆಯೊ?ನನಗಂತು ಕವಿತೆ ಎಂದರೆ ಏನು ಎಂಭ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬಹುಶಃ ಪ್ರತಿ ಪ್ರಶ್ನೆಗಳು ಕವಿತೆ ಎಂಬುದಕ್ಕೆ ಅರ್ಥ ಕೊಡುತ್ತಿದೆ.ಎಲ್ಲವೂ ಹೌದಾಗಿದ್ದು ಇಲ್ಲದರ ಭಾವಗಳ ಕೂಡುವಿಕೆಯ ಜೊತೆಗಿನ ಸಂವಾದದಲ್ಲಿ … Read more
ಭಾರತ ಜ್ಯೋತಿ ಲೇಖನ ಸರಣಿ : ತೆಲಂಗಾನಾದ ಚಿಂತಕಿಂಡಿ ಮಲ್ಲೇಶಂ, ಹುಟ್ಟಿದ್ದು ತೆಲಂಗಾನಾ ರಾಜ್ಯದಲ್ಲಿರುವ ಪುಟ್ಟ ಹಳ್ಳಿ ಶಾರ್ಜಿಪೇಟೆಯ ಬಡ ನೇಕಾರ ಕುಟುಂಬವೊಂದರಲ್ಲಿ. ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ, ಶಾಲೆಯಲ್ಲಿ 6ನೆ ತರಗತಿ ಓದುವಾಗಲೇ ತನ್ನ ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆದರೆ ಅವರು ಮಾಡಿರುವ ಸಾಧನೆಗಾಗಿ ದೊರೆತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳನ್ನು ಒಮ್ಮೆ ನೋಡಿ. ಇವರು, ವರ್ಷ 2009ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಗೌರವ ಪುರಸ್ಕಾರ, ವರ್ಷ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅಮೇಜಿಂಗ್ ಇಂಡಿಯನ್ ಗೌರವ ಪ್ರಶಸ್ತಿ, … Read more
ಜನ್ನನ ಯಶೋಧರ ಚರಿತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವಾದ ಕೃತಿ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ಧೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದದೆ. ಸಾಂಪ್ರದಾgಯಿಕ ಜೈನಕಾವ್ಯಗಳಿಗಿಂತಲೂ ಮಿಗಿಲಾಗಿ ಜೀವದಯೆ ಜೈನಧರ್ಮಂ ಅನ್ನುವ ಆಶಯದೊಂದಿಗೆ ಇಡೀ ಕಾವ್ಯ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. ಬೆರಳೆಣಿಕೆಯಷ್ಟು ವೃತ್ತಗಳಿವೆ. ಸಮಕಾಲೀನ ಸಂದರ್ಭದಲ್ಲಿ ಜರುಗುತ್ತಿದ್ದ ಧಾರ್ಮಿಕ ಮತ್ತು ರಾಜಕೀಯ ಪಲ್ಲಟಗಳಿಂದಾಗಿ ಜನ್ನ ಅನುಸರಿಸಿದ ಮತ ಪ್ರತಿಪಾದನೆಯ ಮಾರ್ಗ ಆ ಕಾಲದ ಸರಿದಾರಿ ಎನಿಸಿತು. ಈ ಕೃತಿಯ ಮತಪ್ರತಿಪಾದನೆಯ ತತ್ವವನ್ನು … Read more
ನಾನು ಕುಳಿತಿದ್ದ ರೈಲು ಹೊರಡಲು ಇನ್ನೂ ಸಮಯವಿತ್ತು. ಜನರು ಹತ್ತುವ ಇಳಿಯುವ ಗಜಿಬಿಜಿಯ ಗಲಾಟೆ ಕಡೆ ಕಣ್ಣಾಯಿಸಿದೆ. ಕೆಲವರು ಬೋಗಿಯೊಳಗೆ ತಮ್ಮ ಆಸನ ಹುಡುಕುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಲಗೇಜು ಇಡುವ ಭರದಲ್ಲಿದ್ದಾರೆ. ಕೆಲವರ ಬ್ಯಾಗುಗಳನ್ನು ಅಪ್ಪರ್ ಬರ್ತ್‍ನಲ್ಲಿಡುತ್ತಿದ್ದಾರೆ. ಇನ್ನೂ ಕೆಲವರು ಇಡೀ ಮನೆ ಖಾಲಿ ಮಾಡಿ ಬಂದಷ್ಟು ಲಗೇಜ್ ತಂದು ಇಡಲು ಸ್ಥಳವಿಲ್ಲದೆ ಪೇಚಾಡುತ್ತಿದ್ದಾರೆ. ಈ ಎಲ್ಲಾ ಗಲಾಟೆಯ ಮಧ್ಯೆಯೂ ಸೀಬೆಬುಟ್ಟಿ ಹಿಡಿದ ಹುಡುಗಿಯೊಬ್ಬಳು ತೂರಿ ಬಂದಳು. ಅವಳು ಮಾರಲು ತಂದ ಬುಟ್ಟಿಯೊಳಗೆ ಬಿಸಿಲಿಗೆ ಬಾಡಿ … Read more
ನಾಳೆ "ಕುಮಾರಗಂಧರ್ವ ಹಾಲ್ ನಲ್ಲಿ (ಬೆಳಗಾವಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಕ್ತರು ಭಾಗವಹಿಸಬೇಕು ಮತ್ತು ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಒಟ್ಟಿನಲ್ಲಿ ಎಲ್ಲರೂ ಅಲ್ಲಿರಬೇಕು'' ಎಂದು ಪ್ರಿನ್ಸಿಪಾಲರಾದ ಶ್ರೀ ಬಿ. ಮಲ್ಲಿಕಾರ್ಜುನ ಸರ್ ಅವರು ಗಂಭೀರವಾಗಿ ಹೇಳಿದಾಗ ರೋಮಾಂಚನವಾಯಿತು. ಏಕೆಂದರೆ ಬಿ. ಎಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದ್ರೆ ಮರುಭೂಮಿಯಲ್ಲಿ ಸಿಗುವ ಓಯಾಸಿಸ್ ಇದ್ದಹಾಗೆ. ಅದೂ ಕೆ. ಡಿ ದೇಶಪಾಂಡೆ ಮತ್ತು ಆನಂದ ಅಪ್ಪುಗೋಳ್(ಧರ್ಮದೇವತೆ, ನಂತರ ಸಂಗೊಳ್ಳಿರಾಯಣ್ಣ ಸಿನೆಮಾ ಖ್ಯಾತಿಯ)ಅವರುಗಳು ನಡೆಸುವ ಕಾರ್ಯಕ್ರಮ. ಸರಿ, … Read more
ಅಪ್ಪ, ತಂದೆ, ಬಾಬಾ.. ಈ ಎರಡಕ್ಷರದ ಮಹತ್ವ. ಈ ಸಂಬಂಧದ ಅರ್ಥ ತಿಳಿದುಕೊಳ್ಳೋದು ಎಷ್ಟೋ ಜನರಿಂದ ಬಹುಷಃ ಆಗಂಗೇ ಇಲ್ಲಾ.. ಅಂಥವರಾಗ ನಾನೂ ಒಬ್ಬ ಎಷ್ಟಾದ್ರೂ ಹಿರಿ ಮಗ ನೋಡ್ರಿ, ಅವ್ವನ ಮ್ಯಾಲೇ ಪ್ರೀತಿ ಜಾಸ್ತಿ ಎಲ್ಲಾರೂ ಅಂತಾರ ತಾಯಿಯಾದಮೇಲೆ ಹೆಣ್ಣೆಗೆ ಎರಡನೇ ಜೀವ ಸಿಗ್ತದ ಅಂತ, ಮತ್ತ ಅಪ್ಪಗ? ಅವನ ಬಗ್ಗೆ ಯಾರೂ ಜಾಸ್ತೀ ಮಾತಾಡಲೇ ಇಲ್ಲ ಯಾಕಂದ್ರ ಅವರ ಜೀವನದಾಗ ಅಪ್ಪನ ‘ರೋಲ್’ ಯಾವತ್ತೂ, ಯಾರಿಗೂ ಕ್ಲಿಯರ್ ಆಗ್ಲೇ ಇಲ್ಲ ಎಲ್ಲರ ಜೀವನದ ಕಥಿಯೊಳಗೂ … Read more
“ಪ್ರತಿ ಸುಖದ ಹಿಂದೆ ಅನಿವಾರ್ಯವಾಗಿ ದುಃಖ ಬೆಂಬತ್ತುವುದೇ ಆದಲ್ಲಿ, ಆಗ ದುಃಖದಿಂದಲ್ಲ – ಸುಖದಿಂದಲೇ ಮುಕ್ತನಾಗುವ ಸ್ಪಷ್ಟತೆ ನಿನ್ನ ಜೀವನದಲ್ಲಿ ಫಲಿತವಾಗಬೇಕು.” (ಓಶೋ) — ನಾನಾಗ ಬೆಳಗಾವಿಯವನಾಗಿದ್ದೆ. ನಾನು ನನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆ ಬೆಳಗಾವಿ ದಂಡು ಪ್ರದೇಶದಲ್ಲಿತ್ತು. 1999 ರ ಡಿಸೆಂಬರ ತಿಂಗಳ ಮೊದಲ ರವಿವಾರದ ದಿನ ಮುಂಜಾನೆಯ ಸಮಯ. ಮನೆಯ ಬಾಗಿಲ ಚಿಲಕ ಕಟಕಟ ಬಡಿದ ಶಬ್ಧ. ಬಾಗಿಲು ತೆಗೆದೆ, ಅವನು ನಿಂತಿದ್ದ. ಬಾರೋ ಒಳಗೆ ಅಂದೆ. ಬಂದ, ಕೈಲಿದ್ದ ಆವತ್ತಿನ … Read more