ಸಹೃದಯ: ಸಂತೋಷ್ ಟಿ

ಸಹೃದಯ ಎಂದರೆ ಒಳ್ಳೆಯ ಹೃದಯವಿರುವ ಮನುಷ್ಯ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಎದೆಯ ಮಧ್ಯ ಎಡ ಭಾಗದಲ್ಲಿರುವ ಕೈ ಮುಷ್ಟಿ ಗಾತ್ರದ ದೇಹದ ಅಂಗ. ಸ್ನಾಯುಗಳಿಂದ ಮಾಡಿರುವಂತ ಹೃದಯವು ನಿರಂತರವಾಗಿ ಹುಟ್ಟಿನಿಂದ ಸಾಯುವವರೆಗೂ ಕಾರ್ಯ ನಿರ್ವಹಿಸುತ್ತದೆ. ಇದನ್ನು ದಮನಿ ಎಂತಲೂ ಕರೆಯುವರು. ಇದರ ಕೆಲಸ ರಕ್ತ ಪರಿಶುದ್ಧತೆ ಮತ್ತು ಪರಿಚಲನೆ ಮಾಡಿ ಎಲ್ಲಾ ಅಂಗಗಳಿಗೂ ತಲುಪಿಸುವುದಾಗಿರುತ್ತದೆ. ಪ್ರತಿ ನಿಮಿಷಕ್ಕೆ ಎಪ್ಪತ್ತೇರಡು ಬಾರಿ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತದೆ. ಅದು ನಿಂತುಬಿಟ್ಟರೆ ಮನುಷ್ಯ ಸತ್ತನೆಂದೆ ಅರ್ಥ. ಹೃದಯವು … Read more

ಕತ್ತಿಯಂಚ ಮೇಲಿನ ನಡಿಗೆ: ಗೌರಿ ಚಂದ್ರಕೇಸರಿ.

ಅವರು ತಟ್ಟುವ ಚಪ್ಪಾಳೆಗಳಲ್ಲಿ ವಿಭಿನ್ನವಾದ ಒಂದು ದನಿ ಇದೆ. ಆ ಚಪ್ಪಾಳೆಯ ಶಬ್ದ ಕಿವಿಗೆ ಬಿದ್ದೊಡನೆಯೇ ಇದು ಅವರದ್ದೇ ಚಪ್ಪಾಳೆ ಎಂದು ಮನಸು ನಿರ್ಧರಿಸಿ ಬಿಡುತ್ತದೆ. ತಟ್ಟನೆ ನಮ್ಮ ಕತ್ತು ಆ ಧ್ವನಿ ಬಂದತ್ತ ತಿರುಗುತ್ತದೆ. ಆ ಚಪ್ಪಾಳೆಗಳಲ್ಲಿ ರೋಷ, ಕೋಪ, ಉತ್ಸಾಹ, ಧೈರ್ಯ ಎಲ್ಲವೂ ಅಡಗಿರುತ್ತದೆ. ಕ್ರಿಯಾಶೀಲರಾಗಿ ಚಕ ಚಕನೆ ಅತ್ತಿಂದಿತ್ತ ಓಡಾಡುವ ಇವರಿಗೆ ಎಂಥವರ ಚಿತ್ತವನ್ನೂ ತಮ್ಮತ್ತ ಸೆಳೆದುಕೊಂಡು ಬಿಡುವ ಆಕರ್ಷಣೆ ಇದೆ. ಇವರ ಶೃಂಗಾರ, ಒನಪು, ವೈಯ್ಯಾರ ಸ್ತ್ರೀಯರನ್ನೇ ನಾಚಿಸುವಂತಿರುತ್ತದೆ. ಒಳ್ಳೆಯವರಿಗೆ ಒಳ್ಳೆಯವರು, … Read more

ಬದುಕೆಂಬ ಅಚ್ಚರಿ: ಸುಮನಾ ರಮಾನಂದ,

“ಬದುಕು” ಈ ಮೂರಕ್ಷರದ ಪದ ಯಾವಾಗಲೂ ಒಂದು ಅಚ್ಚರಿಯೆನಿಸಿ ನನ್ನ ಮನಸಿಗೆ ಕಾಡುವುದುಂಟು.ಏಕೆಂದರೆ ಆ ಭಗವಂತ ನಮಗೆಲ್ಲ ಕೊಟ್ಟಿರುವುದು ಒಂದೇ ಒಂದು ಬದುಕು. ಬಯಸಿದರೂ ನಾವು ಇನ್ನೊಂದು ಮತ್ತೊಂದು ಅಂತ ಲೆಕ್ಕ ಹಾಕಿ ಬೇರೆ ಬದುಕನು ಪಡೆಯಲಾರೆವು.ಇರುವ ಒಂದು ಬದುಕನೇ ಸರಿಯಾಗಿ ಜೀವಿಸದೇ ಸುಮ್ಮನೆ ಮನಸಿಗೆ ಕಿರಿಕಿರಿ,ನೋವು ಮಾಡಿಕೊಂಡು ಬೇರೆಯವರಿಗೂ ನೆಮ್ಮದಿಯಿಂದ ಬದಕಲು ಬಿಡಲಾರದ ಮಂದಿ ಎಷ್ಟಿಲ್ಲ ಈ ಜಗದಲಿ.ಅವರಿಗೆಲ್ಲ ತಮ್ಮ ಬದುಕನು ತಮ್ಮದೇ ದೃಷ್ಟಿಕೋನದಿಂದ ನೋಡಿ ಗೊತ್ತಿರುವುದೇ ಹೊರತು ಬೇರೆಯವರ ದೃಷ್ಟಿಯಲಿ ಆ ಬದುಕನು ಹೇಗೆ … Read more

ಆತಂಕ ಸೃಷ್ಟಿಸಿದ ಗೋವಾ ಪ್ರವಾಸ !: ಎಲ್. ಚಿನ್ನಪ್ಪ

ಪ್ರವಾಸ ಎಂದರೆ, ದೇಹಕ್ಕೆ ನವೋಲ್ಲಾಸ ಮತ್ತು ಮನಸ್ಸಿಗೆ ಮುದ ನೀಡುವ ಒಂದು ಮಾನಸಿಕ ಕ್ರಿಯೆ. ಪ್ರತಿದಿನ ಯಾಂತ್ರಿಕ ಬದುಕಿನಲ್ಲಿ ದುಡಿದು ಬಸವಳಿದವರು ಒಂದೆರಡು ದಿನಗಳು ಪ್ರವಾಸ ಮಾಡಿ ಬಂದರೆ, ಅವರಲ್ಲಿ ನವ ಚೈತನ್ಯ ತುಂಬುತ್ತದೆ, ಹುರುಪು ಹೆಚ್ಚಾಗುತ್ತದೆ, ಕದಡಿದ ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ವರ್ಷಕ್ಕೊಮ್ಮೆ ಯಾವುದಾದರೊಂದು ಪ್ರವಾಸ ಮಾಡಿ ಬರುವುದು ದೈಹಿಕ ಹಾಗು ಮಾನಸಿಕ ದೃಷ್ಟಿಯಿಂದಲೂ ಒಳ್ಳೆಯದು. ಪ್ರವಾಸಕ್ಕೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟದ್ದು. ಕೆಲವರು ಪ್ರವಾಸಕ್ಕೆ ಪುಣ್ಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ, ಕೆಲವರು ಐತಿಹಾಸಿಕ … Read more

ಆಯಿ’ ನನಗೆ ತಾಯಿಯಂತಿದ್ದಳು !: ಡಾ. ಸದಾಶಿವ ದೊಡಮನಿ

” ‘ಆಯೀ’ನ ನೆನೆಯೋದು ಯಾ ಯಾಳಿ ಹೊತ್ತು?” ಸಮಯಾಸಮಯಗಳ ಗೊಡವೆ ಇಲ್ಲದೆ ತತಕ್ಷಣ ನೆನಪಾಗುವ ಸಂಜೀವಿ; ಅನುಗಾಲವೂ ದಿವ್ಯ ಸ್ಮರಣೆಯಲಿರುವ ಅಂತಃಕರಣದ ಮಹಾತಾಯಿ ಆಯಿ. ಆಯಿ ಎಂದರೆ ಬೇರೆ ಯಾರೂ ಅಲ್ಲ. ನನ್ನ ಅವ್ವನ ಅವ್ವ. ನಾನು ಎರಡನೆಯ ತರಗತಿಯನ್ನು ನಮ್ಮೂರಲ್ಲಿ (ವಿಜಯಪುರ ಜಿಲ್ಲೆ, ಇಂಡಿ ತಾಲೂಕು, ಬೂದಿಹಾಳ ) ಓದುತ್ತಿರುವ ಸಂದರ್ಭ, ಆಗ ಭೀಕರ ಬರಗಾಲ ತಲೆದೋರಿ, ಕುಡಿಯಲು ನೀರಿಗೂ ಬರ. ದನ-ಕರುಗಳಿಗೆ ಮೇವಿನ ಭವಣೆ. ಕೆಲಸವಿಲ್ಲದೆ ಉಪಜೀವನ ನಡೆಸುವುದೇ ಕಷ್ಟವಾದಾಗ ದಿಕ್ಕುಗಾಣದೆ ಅವ್ವ-ಅಪ್ಪ ಊರಿನ … Read more

“ಸಂಸ್ಕೃತಿ, ಸಂಪ್ರದಾಯ ಹಾಗೂ ಸಮೃದ್ಧಿಯ ಹಬ್ಬ -ಸಂಕ್ರಾಂತಿ”: ಚಲುವೇಗೌಡ ಡಿ ಎಸ್

ವರ್ಷದ ಮೊದಲ ಹಬ್ಬ:-ಭಾರತೀಯ ಹಬ್ಬಗಳ ಸಾಲಿನಲ್ಲಿ ಸಂಕ್ರಾಂತಿಯು ಒಂದು ಮಹತ್ವದ ಸ್ಥಾನವನ್ನು ಪಡೆದಿರುವ ಸಂಭ್ರಮ, ಸಡಗರದ ಹಬ್ಬ. ರವಿಯು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸುದಿನವನ್ನು ಮಕರ ಸಂಕ್ರಾಂತಿ ದಿನ ಅಥವಾ ಮಕರ ಸಂಕ್ರಮಣ ದಿನವೆಂದು ಆಚರಿಸುತ್ತೇವೆ. ಈ ದಿನದಿಂದ ಉತ್ತರಾಯಣ ಆರಂಭವಾಗುತ್ತದೆ. ಅಂದರೆ ಸೂರ್ಯನು ದಕ್ಷಿಣನಿಂದ ಉತ್ತರಕ್ಕೆ ಚಲಿಸುವ ಆರು ತಿಂಗಳ ಅವಧಿಯು ಆರಂಭವಾಗುವ ಸಂಕೇತವನ್ನು ಈ ಹಬ್ಬವು ಸೂಚಿಸುತ್ತದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಸಂಕ್ರಾಂತಿಯಂದೆ ಮಕರ ಜ್ಯೋತಿ ದರ್ಶನದ ಭಾಗ್ಯ … Read more

ಪ್ಲಾಸ್ಟಿಕ್‌ನ ಛಾಯೆ: ಪರಿಸರ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮಗಳು: ಅಶ್ವಜೀತ ದಂಡಿನ

ಈ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಪ್ರಕೃತಿಯು ನೈಸರ್ಗಿಕವಾಗಿ ಬೇಕು ಬೇಡಗಳನ್ನೆಲ್ಲಾ ಪೂರೈಸುತ್ತಾ ಬಂದಿದೆ. ಆದಿ ಕಾಲದಿಂದಲೂ ಮಾನವ ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುತ್ತಾ ತನ್ನ ಬೇಕು ಬೇಡಗಳನ್ನು ಪೂರೈಸಿಕೊಂಡು ಆರೋಗ್ಯದಿಂದ ಸುಖವಾಗಿ ಜೀವನ ಸಾಗಿಸುತ್ತ ಬಂದಿದ. ಮನುಷ್ಯನಿಗೆ ಬುದ್ಧಿಶಕ್ತಿ ಬೆಳೆದಂತೆಲ್ಲ ನೈಸರ್ಗಿಕ ವಸ್ತುಗಳೊಂದಿಗೆ ಕೃತಕ ವಸ್ತುಗಳನ್ನು ತಯಾರಿಸಿ ಬಳಸಲು ಪ್ರಾರಂಭಿಸಿದನು. ಅವುಗಳಲ್ಲಿ ಪ್ಲಾಸ್ಟಿಕ್ ಸಹ ಒಂದು. ಕ್ರಿ.ಶ ೧೮೬೨ ರಲ್ಲಿ ಅಲೆಕ್ಸಾಂಡರ್ ಪಾರ್ಕೆಸ್ ಎಂಬ ವಿಜ್ಞಾನಿಯು ಪಾರ್ಕೆಸಿನ್ (ಮೊದಲ ಅರೆ-ಕೃತಕ ಪ್ಲಾಸ್ಟಿಕ್) ಅನ್ನು … Read more

ಮನಸು ಸರೋವರ: ವೀಣಾ ರಮೇಶ್, ಮರವಂತೆ

ಅದ್ಯಾಕೋ. ಪ್ರಿಯಾ ಈ ನಡುವೆ ತುಂಬಾ ಮೌನವಾಗಿರುತ್ತಿದ್ದಳು. ಹತ್ತು ಸಲ ಕರೆದರೆ ಒಮ್ಮೆ ಮಾತ್ರ ಮಾತಾಡುವಳು. ಕಾರಣ ಏನಿರಬಹುದು, ? ಸದಾ ಮಂಕಾಗಿರುತ್ತಾಳೆ, ಏನಾದರೂ ಕೇಳಲು ಹೋದರೆ ಅಳುತ್ತಾ ಕುಳಿತಿರುತ್ತಾಳೆ. ಇದನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಮೃದುಲಾಗೆ ಯಾಕೋ ಪ್ರಿಯಾಳ ಈ ವರ್ತನೆ ಚಿಂತೆ ಗಿಟ್ಟುಕೊಂಡಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದ ಪ್ರಿಯಾ. ಈ ನಡುವೆ ಮೂಕಿಯಾಗಿರುತ್ತಿದ್ದಳು. ಫೋನ್ ಮಾಡಿದರೂ ಉತ್ತರ ನೀಡದ ಪ್ರಿಯಾ ಸದಾ ಮೌನವಾಗಿರುತ್ತಿದ್ದಳು. ಪ್ರಿಯಾ ಇಲ್ಲದ ಕಾಲೇಜಿನ ದಿನಗಳು ತುಂಬಾ ಬೋರು ಹೊಡೆಸುತಿತ್ತು ಮೃದುಲಾಗೆ. … Read more

ಮಾತೃಸ್ವಾಮ್ಯ ವ್ಯವಸ್ಥೆ: ಚಂದಕಚರ್ಲ ರಮೇಶಬಾಬು

“ರೀ ಇವತ್ತು ರಾತ್ರಿ ನಿಮಗೆ ಚಪಾತಿ ಮಾಡ್ಲಾ?” ಎನ್ನುವ ಪಶ್ನೆ ಮಡದಿಯಿಂದ ಬಂದಾಗ ಗಂಡನಿಗಾಗುವ ಫಜೀತಿ ಹೇಳಲಾಗದು. ಒಳಗೇನೋ ತನ್ನ ಸಕ್ಕರೆ ಕಾಯಿಲೆಯ ಸಲುವಾಗಿ ಮಾಡಿದರೆ ಒಳಿತು ಎಂದಿದ್ದರೂ “ಮಾಡು” ಎಂದು ಹೇಳಲಾರದ ಸ್ಥಿತಿ. ಯಾಕೆ ಅಂದರೆ ಆ ಪ್ರಶ್ನೆಯ ಒಳದನಿ “ನಾನು ಮಾಡುವುದಿಲ್ಲ ನೀವು ಊ ಅನ್ನಿ” ಅಂತಲೇ ಇರುತ್ತದೆ. ಗಂಡಸು ಹೊರಗೆ ದುಡಿದು ಮನೆಗೆ ಬೇಕಾದ ಸಾಮಾನೆಲ್ಲವನ್ನೂ ತಂದರೂ ತನಗೆ ಇಂಥದೇ ತಿಂಡಿ ಅಥವಾ ಅಡುಗೆ ಬೇಕು ಎನ್ನುವಷ್ಟು ಸ್ವಾತಂತ್ರ್ಯವಿರುವುದಿಲ್ಲ. ಯಾಕೆ ಅಂದರೆ ಅಡುಗೆಮನೆ … Read more

ಪುಟ್ಟಿಯ ಪಟ್ಟ: ಡಾ. ನೀತಾ ಕಲಗೊಂಡ

ತಲೆ ಭಾರ , ಸುಡುವ ಮೈ ಎದ್ದುಕೂರಲೂ ಆಗದಷ್ಟು ಸುಸ್ತು ಪುಟ್ಟಿಯ ದಿನ ಶುರುವಾಗಿದ್ದೆ ಬೇರೆ ರೀತಿ ಇಂದು. ಕಷ್ಟಪಟ್ಟು ಕಣ್ಣು ತೆರೆದು ನೋಡಿದಾಗ ಹೊರಗೆ ಬಿಸಿಲು ಮೈ ಚಾಚಿತ್ತು. ಮನೆಯಲ್ಲಿ ಎಂದೂ ಇರದ ನಿಶಬ್ದ ಕಸಿವಿಸಿ ತಂದಿತು ಪುಟ್ಟಿಯ ಮನಸ್ಸಿಗೆ. ಹತ್ತು ಜನರು ಸದಾ ಸುತ್ತಾಡೋ ಮನೆಯಲ್ಲಿ ಈ ತರದ ಸ್ತಬ್ಧತೆ, ಶಾಂತಿ ಅರ್ಥವೇ ಆಗಲಿಲ್ಲ ಅವಳಿಗೆ. ಇವತ್ತೇನಾದರೂ ರವಿವಾರವೇ? ಅಮ್ಮ ಕಿವಿ ತೂತಾಗುವಷ್ಟು ಕಿರಿಚಿ ಬೆನ್ನಿಗೆ ಎರಡು ಕೊಟ್ಟು ಎಬ್ಬಿಸಿರಲಿಲ್ಲ ಅಂದ್ರೆ ಇದು ಖಂಡಿತ … Read more

ಪಂಜು ಕಾವ್ಯಧಾರೆ

ಬಯಲ ದೃಷ್ಟಾಂತ ! ಪಾತರಗಿತ್ತಿಯ ಹಾಗೆಒಂದೆಡೆ ನಿಲಲೊಲ್ಲದೆಸುಂಟರ ಗಾಳಿಯಂತೆ ಗಿರಗಿರನೇ ತಿರುಗುತ್ತದಿನ ನೂಕುತ್ತಿರೆಒಡಲಲ್ಲಿ ಕಸ ಕಡ್ಡಿಗಳೇ ತುಂಬಿಕೊಂಡುಎದೆಯಗೂಡು ಹರಿದುಹೃದಯ ಪಾಳುಬಿದ್ದಮನೆಯಂತಾಗುತ್ತದೆ !ಅದೆಲ್ಲೋ ದೂರದ ಗಗನಚುಕ್ಕೆ ಪ್ರಕಾಶಿಸುವುದ ಕಂಡುಅದರಂತಾಗಬೇಕೆಂದು ಕಣ್ಮುಚ್ಚಿ ಕುಳಿತಡೆಕಣ್ಮುಂದೆ ಅದರ ಚಿತ್ತಾರವೇ ಬಂದುಗಹಗಹಿಸಿ ನಗುತ ಕೇಳುತ್ತಿದೆನೀನು ಗಗನದ ಚುಕ್ಕೆ ಆಗಬಲ್ಲೆಯಾ?!ಸುತ್ತಲ ಪ್ರಪಂಚದಿಂದದೂರಾಗಬೇಕೆಂದುಕಣ್ಣು, ಕಿವಿ, ಬಾಯ್ಮುಚ್ಚಿಕೊಂಡುನಿರ್ಲಿಪ್ತವಾಗಬೇಕೆಂದು ತಟಸ್ಥವಾದರೆಸುತ್ತಲ ಸಮಾಜದ ಕಣ್ಣು, ಕಿವಿ, ಬಾಯ್ಗಳುನನ್ನತ್ತ ತೆರೆದುಕೊಂಡುಕುಹಕವಾಡುತ್ತ ಹುಸಿನಗು ಬೀರುತಿವೆ !ಇದಾವುದರ ಗೊಡವೆಯೇ ಬೇಡವೆಂದುಆತ್ಮಾರ್ಪಣಕ್ಕಿಳಿದರೆಲೋ ಹುಚ್ಚ! ನೋಡಿಲ್ಲಿ ಎನುತಮಧುರಗಾನಗೈಯುತ್ತಹಕ್ಕಿಯೊಂದು ದೂರದಿ ತಂದಅನ್ನದಗಳನುಗೂಡಿನೊಳಗಿರುವ ಮರಿಹಕ್ಕಿಯಬಾಯೊಳಗೆ ಇಡುತ್ತಿತ್ತು!ಆ ಮರದ ಗೂಡಿನ ಮೇಲೊಂದುಕರಿನಾಗ ಹೆಡೆಯೆತ್ತಿ … Read more

ಸ್ಟಿಂಗ್‌ಲೆಸ್ ಜೇನುಕೃಷಿ ಸಂಪ್ರದಾಯದಿಂದ ವೈಜ್ಞಾನಿಕದೆಡೆಗೆ: ಚರಣಕುಮಾರ್

ಜೇನನ್ನು ಉತ್ಪಾದಿಸುವ ಜೇನು ನೊಣಗಳಲ್ಲಿ ಹಲವಾರು ವಿಧಗಳಿದ್ದು ಮುಖ್ಯವಾಗಿ ಭಾರತದಲ್ಲಿ ಹೆಜ್ಜೇನು, ತುಡುವೆ ಜೇನು, ಯೂರೋಪಿಯನ್ ಜೇನು, ಕಡ್ಡಿ ಜೇನು (ಕೋಲು ಜೇನು), ಮತ್ತು ಮುಳ್ಳುರಹಿತ ಜೇನು, ಕಂಡುಬರುತ್ತವೆ. ಕರ್ನಾಟಕದ ಮಲೆನಾಡು ಅರಣ್ಯಗಳ ಸುತ್ತ-ಮುತ್ತಲಿನ ಸ್ಥಳೀಯ ಅರಣ್ಯವಾಸಿಗಳಾದ ಕುಣಬಿಗಳು, ಹಾಲಕ್ಕಿ ಜನಾಂಗದವರು, ಮಲೆಕುಡಿಯರು, ಸೋಲಿಗರು, ಬೆಟ್ಟಕುರುಬರು, ಜೇನುಕುರುಬರು, ಕೊಡವರು, ಗೌಳಿಗಳು, ಕಾಡುಗೊಲ್ಲರು, ಕಾಡುಕುರುಬರು ಕೊರಗರು ಇನ್ನಿತರ ಅರಣ್ಯಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವ ಜನರು ಸ್ಟಿಂಗ್‌ಲೆಸ್ ಜೇನು ಪ್ರಭೇದವನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಟಿಂಗ್‌ಲೆಸ್ ಜೇನು ಅವೈಜ್ಞಾನಿಕ … Read more

ಬದಲಾದ ಯುವ ಮನಸ್ಸು-ಹೊಸ ದಿಕ್ಕಿನ ಹುಡುಕಾಟ: ಪರಮೇಶ ಕೆ.ಉತ್ತನಹಳ್ಳಿ

ಉಸಿರುಗಟ್ಟಿದ‌ ವಾತಾವರಣ, ವಿಷಕಾರಿಯಾದ ಬೆಳವಣಿಗೆ, ಒತ್ತಡದ ಒಡಲಲ್ಲಿ ಜೀಕುತ್ತಿವೆ ಮನಸ್ಸುಗಳು ನೂರು ಕಾಲ ಬದುಕಬೇಕಾದ ಹಸುಕಂದ ಅರಳು ಮುನ್ನವೇ ಬಾಡುವ ಚಿಂತಾಜನಕ ಸ್ಥಿತಿ ಎದುರಾಗಿದೆ. ಭರವಸೆಯಿಲ್ಲದ ಭವನಗಳು ಶೃಂಗಾರಗೊಳ್ಳುತ್ತಿವೆ, ವಿಷಮಶೀತ ವಿಷವರ್ತುಲ ವಿಷಯಗಳು ಮುಕ್ಕುತ್ತಿವೆ ಬೆಳಕಿನ ಬಳ್ಳಿಗಳ, ಕರುಳ ಬಳ್ಳಿಗಳೇ ಕರುಣೆಯನ್ನು ಬಸಿಯದೆ ಕಂಗಾಲಾಗುತ್ತಿದ್ದಾರೆ, ಜೀವ ಕರುಣಿಸಿದ ಜೀವಧಾತ ದೇವಧೂತರಾಗುವ ಬದಲು ಅನಾಥರಾಗುತ್ತಿದ್ದಾರೆ ಕಾಲಚಕ್ರ ನಿರಂತರವಾಗಿ ಸಾಗುತ್ತಿರುವಂತೆ ಸಮಾಜದ ರೂಪವೂ, ಮೌಲ್ಯಗಳ ಸ್ವರೂಪವೂ ಬದಲಾಗುತ್ತಿವೆ. ಆ ಬದಲಾವಣೆಯ ಕೇಂದ್ರಬಿಂದುವಾಗಿರುವುದು ಇಂದಿನ ಯುವ ಮನಸ್ಸು. ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ … Read more

ಯಕ್ಷ ಪಲಕುಗಳು: ದಿನೇಶ್ ಕೆ. ನಾಯ್ಕ್

ಯಕ್ಷಗಾನವು ದೈವಾರಾಧನೆಯ ಮೂಲದಿಂದ ಉಗಮಿಸಿತು ಎಂಬುದು ವಿದ್ವಾಂಸರ ಅಂಬೋಣ. ಕಾಲ ಕ್ರಮದಲ್ಲಿ ನಾಟ್ಯ, ವೇಷಭೂಷಣ, ವಾಚನ, ಹಿಮ್ಮೇಳ, ರಂಗಸ್ಥಳ ಮೈಗೂಡಿಸಿಕೊಂಡು ಸರ್ವಾಂಗ ಸುಂದರ ಕಲಾ ಪ್ರಕಾರವಾಗಿ ಹೊರ ಹೊಮ್ಮಿತು. ಯಕ್ಷಗಾನಕ್ಕೆ ಭಾಗವತರ ಆಟ, ಬೆಳಕಿನ ಸೇವೆ ಎಂಬ ಹೆಸರು ಕೂಡ ಇದೆ. ಭಗವಂತನನ್ನು ಸ್ತುತಿಸುವವ ಭಾಗವತ. ಯಕ್ಷಗಾನ ದೇವರ ಆರಾಧನೆಯ ಜೊತೆ ಜೊತೆಗೆ ಮನೋರಂಜನೆ, ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಯಕ್ಷಗಾನದಿಂದ ಜ್ಞಾನವರ್ಧನೆ, ನೀತಿ ಬೋಧನೆ ಪ್ರಾಪ್ತವಾಗುತ್ತದೆ. ಪ್ರಬುದ್ಧ ಕಲಾವಿದರ ಯಕ್ಷ ಸಂಭಾಷಣೆ ತರ್ಕ ಶಕ್ತಿ & … Read more

ಒಂದೂಕಾಲು ಸಾವಿರ ದಾಟಿದ ಪಂಜು ಬರಹಗಾರರು

ಪಂಜು ಬರಹಗಾರರು (ಒಟ್ಟು=1254) 1 ಅಂಜಲಿ ರಾಮಣ್ಣ2 ಅಂಬಿಕ ರಾವ್3 ಅಂಬಿಕಾ ಪ್ರಸಾದ್4 ಅಕ್ಕಿಮಂಗಲ ಮಂಜುನಾಥ5 ಅಕ್ಬರ್ ಅಲಿ6 ಅಕ್ಷತಾ ಕೃಷ್ಣಮೂರ್ತಿ7 ಅಕ್ಷಯ ಕಾಂತಬೈಲು8 ಅಕ್ಷಯಕುಮಾರ ಜೋಶಿ9 ಅಖಿಲೇಶ್ ಚಿಪ್ಪಳಿ10 ಅಜ್ಜಿಮನೆ ಗಣೇಶ್11 ಅಜಯ್12 ಅಜಯ್ ಅಂಗಡಿ13 ಅಜಯ್ ಕುಮಾರ್ ಎಂ ಗುಂಬಳ್ಳಿ14 ಅಜಿತ್ ಕೌಂಡಿನ್ಯ15 ಅಜಿತ್ ಭಟ್16 ಅಣ್ಣಪ್ಪ ಆಚಾರ್ಯ17 ಅಣ್ಣಯ್ಯ ಸ್ವಾಮಿ18 ಅದಿತಿ ಎಂ. ಎನ್.19 ಅನಂತ ಕುಣಿಗಲ್20 ಅನಂತ ರಮೇಶ್21 ಅನಂತ್ ಕಳಸಾಪುರ22 ಅನ್ನಪೂರ್ಣಾ ಬೆಜಪ್ಪೆ23 ಅನಿತ.ಎನ್24 ಅನಿತಾ25 ಅನಿತಾ ಕೆ. ಗೌಡ26 … Read more

ಹೆಣ್ಣು ಗಂಡೆಂಬ ಅಸಮಾನತೆಯ ಹಳತಾದ ಚರ್ಚೆಗೆ ಇನ್ನೊಂದು ಆಯಾಮ: ವಾಣಿ ಚೈತನ್ಯ

ಪ್ರಜ್ಞಾವಂತ ನಗರೀಕೃತ ಭಾರತದಲ್ಲಿ, ಮಗಳಿಗೆ ಓದಿಸಬೇಕು ಎನ್ನುವ ಹಂಬಲ ಹೆಚ್ಚಾಗಿ, ಕಾಲೇಜು ಮೆಟ್ಟಿಲೇರಿರುವ ಹೊಸ gen G ಪೀಳಿಗೆಯಲ್ಲಿ, ಲಿಂಗ ಅಸಮಾನತೆ ಎನ್ನುವ ಚರ್ಚೆಯು ಔಟ್ ಡೇಟೆಡ್ ಚರ್ಚೆ ಎನ್ನಿಸುತ್ತಿದೆ.ನಾನು 15 ವರ್ಷದ ಹಿಂದೆ ಬಿಜಾಪುರದಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವಾಗಿ ಕೆಲಸಮಾಡುವಾಗ, ದೇವದಾಸಿ ಮಹಿಳೆಯರ ಇರುವಿಕೆ, ಕಷ್ಟ ಸುಖ ತಿಳಿದು, ಒಂದು ಪತ್ರಿಕೆಗೆ ಕಥೆಯ ರೂಪದಲ್ಲಿ ಲೇಖನ ಬರೆದಿದ್ದೆ. ಅದನ್ನು ಬೆಂಗಳೂರಲ್ಲಿ ಕುಳಿತ ಸಂಪಾದಕರು, ಔಟ್ ಡೇಟೆಡ್ ಎಂದು ಆಗಿನ ಕಾಲಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿತ್ತು. ನಾನು … Read more

ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ: ಕಲ್ಪನಾ ಪ್ರಭಾಕರ ಹೆಗಡೆ

ಮಾನವರಲ್ಲಿ ಕುಟುಂಬ ಎಂದರೆ ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹಬಾಳ್ವೆಯಿಂದ ಒಟ್ಟಾಗಿರುವ ಒಂದು ಗುಂಪು. ಇದು ಸಮಾಜದ ಬಹುಮುಖ್ಯ ಅಂಗ. ನಾವು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆ. ಭಾಷೆ ಸಂಸ್ಕೃತಿ ಸಂಪ್ರದಾಯ ಶಾಸ್ತ್ರಗಳು ಪಾರಂಪರಿಕವಾಗಿ ಬೆಳೆದು ಬರುವುದಕ್ಕೂ ಈ ಕುಟುಂಬವೇ ಕಾರಣ. ಹುಟ್ಟಿದಾಗಿನಿಂದ ಕುಟುಂಬದೊಳಗೆ ಬೆಳೆದು ಪ್ರೀತಿ, ಕಾಳಜಿ ,ದಯೆ ಇತ್ಯಾದಿ ಜೀವನ ಮೌಲ್ಯಗಳನ್ನು ಕಲಿಯುವುದು ಇಲ್ಲಿಯೇ. ಇದು ನಮ್ಮ ಮೊದಲ ಪಾಠ ಶಾಲೆ ಎನ್ನಬಹುದು. ಹಿಂದೆಲ್ಲ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅಂದರೆ ಒಂದೇ ಕಡೆ … Read more

ಪ್ರಾಮಾಣಿಕ ಪ್ರಯತ್ನ ಗೆಲುವಿನ ಮೊದಲ ಮತ್ತು ಕೊನೆಯ ಮೆಟ್ಟಿಲು: ಜಿ. ಎಸ್. ಶರಣು

ನಾವು ಯಶಸ್ಸಿನ ಕಥೆಗಳನ್ನು ಓದುವಾಗ ಅಥವಾ ಕೇಳುವಾಗ, ನಮಗೆ ಕೇವಲ ಅಂತಿಮ ಫಲಿತಾಂಶ ಮಾತ್ರ ಕಾಣಿಸುತ್ತದೆ. ಆ ವ್ಯಕ್ತಿ ಪಡೆದ ಪದಕ, ಗಳಿಸಿದ ಹಣ ಅಥವಾ ಏರಿದ ಎತ್ತರ ನಮ್ಮ ಕಣ್ಣಿಗೆ ಕಾಣುತ್ತದೆ. ಆಗ ಸಹಜವಾಗಿಯೇ ನಾವು, “ಅವರು ತುಂಬಾ ಅದೃಷ್ಟವಂತರು” ಎಂದು ಅಂದುಕೊಳ್ಳುತ್ತೇವೆ. ಆದರೆ ಆ ಅದೃಷ್ಟದ ಹಿಂದೆ ಹಗಲಿರುಳು ಸುರಿಸಿದ ಬೆವರಿನ ಹನಿಗಳು ಮತ್ತು ಯಾರಿಗೂ ಕಾಣದಂತೆ ಮಾಡಿದ ಪ್ರಾಮಾಣಿಕ ಪ್ರಯತ್ನ ನಮಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ, ಜಗತ್ತಿನಲ್ಲಿ ಅದೃಷ್ಟ ಎನ್ನುವುದು ಲಾಟರಿ ಟಿಕೆಟ್ ಅಲ್ಲ, … Read more

ಮಂಗಟ್ಟೆ ಪಕ್ಷಿಯ ವಿಸ್ಮಯ ಲೋಕ: ಶ್ರೀಧರ ಬನವಾಸಿ

ಅರಣ್ಯ ಸಂರಕ್ಷಣೆ ಮತ್ತು ಜೀವ ಸಂಕುಲಗಳ ಅಳಿವು ಉಳಿವಿನ ಹೋರಾಟವು ಸದಾ ಪರಿಸರ ಪ್ರಿಯರನ್ನು ಕಾಡುವ ಪ್ರಶ್ನೆ. ಮಾನವ ಅನಾದಿಕಾಲದಿಂದಲೂ ಕಾಡು, ಅಲ್ಲಿನ ಜೀವರಾಶಿಗಳ ನಡುವೆ ಸಹಬಾಳ್ವೆಯಿಂದಲೇ ಬದುಕುತ್ತಾ ಬಂದವನು. ಕಾಲಘಟ್ಟದ ಕಡುವೈರುಧ್ಯವೋ ಏನೋ…ಮಾನವ ತನ್ನ ಹಿಂದಿನ ಹಾದಿ ತಪ್ಪಿ ಹಿಂಸೆ, ಸ್ವಾರ್ಥದ ಚಿಂತನೆಯ ದಿಕ್ಕಿನತ್ತ ಸಾಗಿದಾಗ ಅಲ್ಲಿಂದ ಕಾಡಿನ ಜೊತೆ ಅವನ ಹೋರಾಟ ಶುರುವಿಟ್ಟುಕೊಂಡ. ಇದೊಂದು ಅನೈಸರ್ಗಿಕ ಸುದೀರ್ಘ ಪಯಣ. ಈ ದುರುಳ ಹಾದಿಯಲ್ಲಿ ನಾವು ಕಳೆದುಕೊಂಡ ಸಂಪತ್ತೇಷ್ಟೋ! ಒಂದು ರೀತಿಯಲ್ಲಿ ಮಾನವನ ಅಜ್ಞಾನದ ಹಾದಿಯು … Read more

ಅಜ್ಜಿ ಕತೆ: ಆದರ್ಶ ಜೆ.

ಈ ದಿನ ಮಳೆ ಬಿಡುವಂತೆ ಇರಲಿಲ್ಲ ಮಾಡಲು ಕೆಲಸಗಳು ಬೇಕಾದಿಷ್ಟಿದ್ದರು ಮಾಡುವಂತೆಯೂ ಇರಲಿಲ್ಲ, ಈ ಹಾಳಾದ ಮಳೆ ಈಗ್ಲೇ ಮಳೆಗಾಲದ ನಮೂನೆ ಮಾಡ್ತಿದೆ. ಮಳೆಗಾಲ ಶುರುವಾಯ್ತೆನೊ?ಎಂದು ಕಾಲು ತೊಳೆಯುತ್ತಾ, ಹಿಮ್ಮಡಿಗೆ ಹತ್ತಿದ ಸಗಣಿ ಸರಿಯಾಗಿ ತೊಳೆದಿದಿಯೋ ಇಲ್ಲವೋ ಎಂದು ಖಾತರಿಪಡಿಸಿ. ಸೀದಾ ಅಡುಗೆ ಮನೆಗೆ ತೆರಳಿ ತಿಂಡಿ ತಿಂದು ಜಗುಲಿಯ ಕುರ್ಚಿಯೇರಿ, ಬೀಳುವ ಮಳೆಯನ್ನೇ ದಿಟ್ಟಿಸುತ್ತ ಕವಳ ಮೆಲ್ಲಲು ಶುರು ಮಾಡಿದ. ಒಮ್ಮೆಲೇ ಏನೋ ನೆನಪಾದವನಂತೆ ದಿಗ್ಗನೆ ಎದ್ದು ಚಡಿ ಕಟ್ಟೆ ತುದಿಗೆ ನೆಡೆದು, ಕವಳದ ಕೆಂಪು … Read more

ಪಂಜು ಕಥಾ ಸ್ಪರ್ಧೆ

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ. ಸೂಚನೆಗಳು:-ಕಥೆ ಸ್ವಂತ ರಚನೆಯಾಗಿರಬೇಕು.-ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.-ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.-ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು. ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ … Read more

ಜಂಬೂ ಸವಾರಿ: ಡಾ.ವೃಂದಾ ಸಂಗಮ್

ಇದೇನು ಕತಿಯಲ್ಲ. ನಮ್ಮೂರಾಗ ನಡೆದದ್ದು. ಆದರೂ ನೀವು ನಂಬೂದಿಲ್ಲ ನನಗ ಗೊತ್ತದ. ಅಂಥಾದ್ದೇನದ ಅಂದರ. ನಮ್ಮೂರಾಗ ಒಂದು ಇನ್ಸಪೆಕ್ಷನ್‌ ಬಂಗಲೋ ಅದ. ಅದೇನು ದೊಡ್ಡದು ಅಂತೀರಾ ಅಥವಾ ಈಗ ಹೋಗಿ ನೋಡಿದರ ಅದೊಂದು ಹಳೆಯ ಪಳೆಯುಳಿಕೆಯ ಕೋಟೆ ಕೊತ್ತಳದಂಗ ಕಾಣತದ. ಆದರೆ, ಒಂದಾನೊಂದು ಕಾಲದಾಗ, ಇದು ನಮ್ಮೂರಿನವರಿಗೆ ಒಂದು ಪಿಕ್‌ ನಿಕ್‌ ಸ್ಪಾಟ್‌ ಆಗಿತ್ತು. ಅದು ಹೆಂಗೆ ಅಂದರೆ, ಊರಿಗೆ ಯಾರಾದರೂ ಬಂಧುಗಳು ಬಂದರೆ, ಅವರಿಗೆ ಊರಲ್ಲಿ ತೋರಿಸ ಬೇಕಾದ ವಿಶೇಷ ಸ್ಥಳದಲ್ಲಿ ಇದೂ ಒಂದಾಗಿತ್ತು. ಹಂಗಂದರ, … Read more

ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ (ಭಾಗ 2): ರೋಹಿತ್ ವಿಜಯ್ ಜಿರೋಬೆ.

ಪ್ರಕೃತಿಯೊಳಗೆಯೇ ಮಾನವ ಜೀವನ ವಾಸ್ತವವಾಗಿ ನೆಲೆಗೊಂಡಿದೆ. ಅಲ್ಲಿ ಜೀವ, ಸೌಂದರ್ಯ ಮತ್ತು ಪ್ರೇರಣೆ ಒಳಗೊಂಡಿದೆ. ಪ್ರಕೃತಿಯ ಅಂಶಗಳಲ್ಲಿ ಸಸ್ಯಗಳು ಅತ್ಯಂತ ಪ್ರಮುಖವಾದವು. ಪ್ರಕೃತಿಯು ಸಸ್ಯಗಳಿಲ್ಲದೆ ಅಪೂರ್ಣವಾಗಿದೆ. ಸಸ್ಯಗಳು ಆಹಾರ, ಆಶ್ರಯ, ಔಷಧ, ಆಮ್ಲಜನಕ ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸಸ್ಯಶಾಸ್ತ್ರದ ಲೋಕವು ಕೇವಲ ವಿಜ್ಞಾನ ಶಾಖೆಯಲ್ಲ — ಅದು ಮಾನವನ ಜೀವನದ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಮೂಲ ತತ್ವವಾಗಿದೆ. ಸಸ್ಯಶಾಸ್ತ್ರದ ಮೊದಲ ಭಾಗದಲ್ಲಿ ನಾವು ಸಸ್ಯಗಳ ವೈವಿಧ್ಯತೆ, ಅವುಗಳ ಜೀವಚಕ್ರ ಮತ್ತು ಮಾನವ ಜೀವನದ ಸಂಬಂಧವನ್ನು … Read more

ಡಾ.ದೊಡ್ಡರಂಗೇಗೌಡರ ಕಾವ್ಯ: ಸಂತೋಷ್ ಟಿ.

ಮಾನವೀಯತೆಯ ಮಹೋನ್ನತ ಭಾವಗಳ ಆಧುನಿಕ ಕಾವ್ಯ ಪುನರುತ್ಥಾನ ಪರ್ವದ ಮಹಾಮೇರು ಕವಿ ಪದ್ಮಶ್ರೀ ಡಾ ದೊಡ್ಡರಂಗೇಗೌಡರು ಎಂದು ಬಹು ಹೆಮ್ಮೆಯಿಂದ ಹೇಳಬಹುದು. ಕನ್ನಡ ಕಾವ್ಯ ನದಿಯು ಹರಿದು ಹರಿದು ಸವಕಲಾಗಿ ಹಳೆಯದಾದರೂ ಉಕ್ಕಿ ಹರಿಯುವ ನೂತನ ತವನಿಧಿಯಂತೆ ತನ್ನ ನಿರಂತರ ಚಲನಶೀಲತೆ ಮತ್ತು ಮತ್ತು ಅದು ತೆಗೆದುಕೊಂಡು ತಿರುವು ಪಾತ್ರ ಆಕಾರ ಗುಣ ಸಂಪನ್ಮೂಲಗಳಲ್ಲಿ ಭಾಷೆಯ ಸ್ವರೂಪ ಬದಲಾಗಿದೆ. ಛಂದಸ್ಸಿನಲ್ಲಿ ಸುಧಾರಣೆಯಾಗಿದೆ. ಜನಪದ ಸಾಹಿತ್ಯದ ಮೂಲ ಧಾತುಗಳಿಂದ ಕೂಡಿ ಇಲ್ಲಿಯವರಗಿನ ಅದರ ಸ್ಫೂರ್ತಿಯ ಚಿಲುಮೆ ಎಂದಿಗೂ ಬತ್ತಿಲ್ಲ. … Read more

ಅಪ್ಪನೆಂಬ ಬದುಕು ಕಲಿಸಿದ ಗುರು: ನಾಗರಾಜನಾಯಕ ಡಿ. ಡೊಳ್ಳಿನ

“ಅಪ್ಪಾಜಿ” ಅಂದರೆ ಧೈರ್ಯ“ಅಪ್ಪಾಜಿ” ಅಂದರೆ ಹುರುಪು“ಅಪ್ಪಾಜಿ” ಅಂದರೆ ಹಸನ್ಮುಖಿ“ಅಪ್ಪಾಜಿ” ಅಂದರೆ ಕರುಣೆ“ಅಪ್ಪಾಜಿ” ಅಂದರೆ ಕನಸು“ಅಪ್ಪಾಜಿ”ಅಂದರೆ ಬೆನ್ನೆಲುಬು“ಅಪ್ಪಾಜಿ” ಅಂದರೆ ಆತ್ಮವಿಶ್ವಾಸ.“ಅಪ್ಪಾಜಿ “, ಅಂದರೆ ಪ್ರಯತ್ನ. ಮೊಬೈಲ್ ನ ವಾಟ್ಸಾಪ್ ನಲ್ಲಿ ಈ ಸಂದೇಶ ಬಂದೊಡನೆ ನನಗೂ ಅಪ್ಪನ ನೆನಪಾಯಿತು. ಅಪ್ಪಾಜಿ ಅಂದರೆ ಎಲ್ಲರಿಗೂ ಅವರವರ ಹೀರೊ. ನಮ್ಮ ತೊದಲು ನುಡಿಗಳನ್ನು ತಿದ್ದುತ್ತ, ಮುದ್ದಿಸುತ್ತಾ, ಬದುಕಿನ ಪಾಠಗಳನ್ನು ಸದ್ದಿಲ್ಲದೇ ಕಲಿಸುವ ಗುರು. ಅಪ್ಪಾಜಿಯೆಂಬ ಗುರು ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಗಿಂತ ಕಡಿಮೆಯಲ್ಲ. ಅಪ್ಪಾಜಿಯ ಸೈಕಲ್ಲಿನ ಮುಂದಿನ ಭಾಗದಲ್ಲಿನ ಪುಟಾಣಿ ಸೀಟಿನಲ್ಲಿ … Read more

ಪ್ರೇಮಿಗಳಿಗೆ ಸಾವೆಂಬುದು ಹೀಗೆ ಬರಬೇಕು: ಜ್ಞಾನೇಶ, ಸೀಗೆಕೋಟೆ.

ಅವಳ ಮೇಲಿನ ಪ್ರೀತಿಗಿಂತ ಭಯವೇ ಹೆಚ್ಚುಮನಸ್ಸೇಕೋ ಭಾರವಾಗಿತ್ತು. ನನ್ನಲ್ಲಿ ಹುಟ್ಟಿಕೊಳ್ಳುತ್ತಿದ್ದ ನೂರಾರು ಪ್ರಶ್ನೆಗಳಿಗೆ ನಾನೆ ಉತ್ತರವನ್ನು ಹುಡುಕಿಕೊಳ್ಳುತ್ತಾ, ನನ್ನ ಗೊಂದಲಗಳಿಗೆ ನಾನೆ ಪರಿಹಾಗಳನ್ನು ಯೋಚಿಸುತ್ತಾ ಕಾಡಿನ ದಾರಿಯತ್ತ ಸಾಗಿ ಬಹಳ ದೂರ ಕ್ರಮಿಸಿದೆ. ನಾನು ಎಂದೂ ತಿರುಗಾಡದ ಒಂದು ದಾರಿ ನನ್ನನ್ನು ಕರೆಯುತಿತ್ತು.ನನ್ನ ಮನಸ್ಸು ಹೃದಯ ಮಂಕಾಗಿದ್ದವು ಬದುಕು ನೀರಸವೆನಿಸಿತ್ತು. ಎತ್ತೆತ್ತೆಲೋ ಸಾಗುತಿದ್ದವನು ಹಾಗೆ ಬಂಡೆಯ ಮೇಲೆ ಕುಳಿತು ಮರಗಳನ್ನೂ ಹಕ್ಕಿಗಳನ್ನೂ ನೋಡುತ್ತ ನೀರವ ಮೌನಕ್ಕೆ ಒರಗಿದ್ದೆ. ನನ್ನ ಮುಂದೆ ಎರಡು ನೀಲಕಂಠ ಅಥವ ಬಣ್ಣದ ಹಕ್ಕಿ … Read more

ಅಂಗವಿಕಲ ಮಕ್ಕಳ ಶಿಕ್ಷಣ: ಹಕ್ಕು, ಹಾದಿ ಮತ್ತು ಹೊಣೆಗಾರಿಕೆ: ರಶ್ಮಿ ಎಂ.ಟಿ.

ಭಾರತದ ಸಂವಿಧಾನವು ಪ್ರತಿ ಮಕ್ಕಳಿಗೂ – ಜಾತಿ, ಧರ್ಮ, ಲಿಂಗ ಅಥವಾ ವರ್ಗದ ವ್ಯತ್ಯಾಸವಿಲ್ಲದೆ – ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲ ಹಕ್ಕು ಎಂದು ಘೋಷಿಸುತ್ತದೆ. ಈ ಹಕ್ಕು ಶಾರೀರಿಕ, ಬೌದ್ಧಿಕ, ಮತ್ತು ಭಾವನಾತ್ಮಕ ಅಡಚಣೆಗಳನ್ನು ಅನುಭವಿಸುತ್ತಿರುವ ಅಂಗವಿಕಲ ಮಕ್ಕಳಿಗೂ ಹೋಲಿಕೆಯ ರೀತಿಯಲ್ಲಿ ಅನ್ವಯಿಸಬೇಕಾಗಿದೆ. ಆದರೆ ನೆಲೆನಿಂತಿರುವ ನೈಜತೆ ಬೇರೆಯೇ ಹೇಳುತ್ತದೆ.ಸಮಾನತೆ ನೀಡುವ ಸಂವಿಧಾನ – ವ್ಯತ್ಯಾಸ ತೋರುವ ನೈಜತೆಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ – 2009 (RTE Act), ಅಂಗವಿಕಲರ ಹಕ್ಕುಗಳು ಕಾಯಿದೆ … Read more

ಪೂರ್ವಜರ ನೆನೆಯಲು ಮೀಸಲಾದ ಪಿತೃಪಕ್ಷ, ಮಹಾಲಯ ಅಮಾವಾಸ್ಯೆ: ಚಂದ್ರು ಪಿ ಹಾಸನ್

ಆಧುನಿಕ ಮಾನವನಿಗೆ ಎಲ್ಲಾ ಇದ್ದರೂ ಸಂತೋಷಕ್ಕಾಗಿ ಕಾರಣ ಹುಡುಕುತ್ತಿರುತ್ತಾನೆ. ಐಷಾರಾಮಿ ಜೀವನ, ಮೋಜು-ಮಸ್ತಿ, ತಿರುಗಾಟ ಇವುಗಳೇ ಸಂತೋಷದ ಮೂಲವೆಂಬ ಭ್ರಮೆಯಲ್ಲಿರುತ್ತಾನೆ. ಆದರೆ ನಾವು ನಮ್ಮ ಬಾಲ್ಯದಲ್ಲಿ ಜಾತ್ರೆ ಬಂದರೆ ಸಾಕು ಐದು ರೂಪಾಯಿ ಕೈಯಲ್ಲಿ ಹಿಡಿದು ಇಡೀ ಜಾತ್ರೆಯನ್ನು ಸುತ್ತಿ ಸುತ್ತಿ ತಿಂಡಿ ತಿನಿಸುಗಳ ತಿನ್ನುತ್ತಾ ಖುಷಿ ಪಡುತ್ತಿದ್ದೆವು. ಹಬ್ಬಗಳು ಬಂದರೆ ಸಾಕು ಹೊಸ ಹೊಸ ರುಚಿ ತಿಂಡಿಗಳ ನೆನೆಯುತ್ತಾ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದ ಕಾಲವದು. ಒಂದೊಂದು ಹಬ್ಬದಲ್ಲಿ ಒಂದೊಂದು ವಿಶೇಷ ತಿನಿಸುಗಳು. ಯುಗಾದಿ ಬಂದರೆ ಹೋಳಿಗೆ … Read more