ಮೂವರ ಕವಿತೆಗಳು ಕು.ಸ.ಮಧುಸೂದನರಂಗೇನಹಳ್ಳಿ, ಅನಿತಾ ಕೆ.ಗೌಡ, ರಾಜೇಶ್ವರಿ ಎಂ.ಸಿ.
ಅದೊಂದು ರಾಜ್ಯದಲ್ಲಿ! ಅಷ್ಟೆತ್ತರದ ಅರಮನೆ ಅಂಬರ ಮುಟ್ಟುವ ಕಳಸಗೋಪುರಗಳು ಸುತ್ತೇಳು ಕೋಟೆ ಗೋಡೆಗಳ ಮೇಲೆ ಫಿರಂಗಿಗಳ ಹಿಂಡು ಸುತ್ತ ಶಸ್ತ್ರಸಜ್ಜಿತ ಸೈನಿಕರ ದಂಡು ಅಲ್ಲಲ್ಲಿ ವಿಶಾಲ ದೇವಳಗಳು ಸಾಹಿತ್ಯ ಸಂಗೀತ ಸಭಾಭವನಗಳು ಮೀಟಿದರೆ ನಾದ ಹೊಮ್ಮಿಸುವ ತಂತಿವಾದ್ಯಗಳು! ಕಲ್ಯಾಣಮಹೋತ್ಸವಕ್ಕಾಗಿ ಕಟ್ಟಿಸಿದಷ್ಟಗಲದ ಛತ್ರಗಳು ಕಸದ ತೊಟ್ಟಯ ಸುತ್ತ ಕಂತ್ರಿನಾಯಿಗಳು ತಲೆ ಹಿಡಿಯಲು ಗಿರಾಕಿಯನುಡುಕಿ ಹೊರಟ ಛತ್ರಿಗಳು ಬರೆದಿಟ್ಟ ಬೊಗಳೆ ಗ್ರಂಥಗಳು ಆಳುವ ಅರಸರು ಅವರ ಹೆಂಡಂದಿರು ಹೆಂಡಂದಿರ ಮಿಂಡರು ಮನೆಹಾಳು ವಂದಿಮಾಗದಿಗರಿಗಾಗಿ ಕಟ್ಟಿಸಿದ ಮಹಲುಗಳು ಅದರೊಳಗಿನವರ ತೆವಲುಗಳು ಐದು … Read more