ಪಂಜು ಹೋಳಿ ಕಾವ್ಯ ಧಾರೆ

ಹಿಗ್ಗಿನ ಹೋಳಿ ಶೋಭಿಸುತಿದ್ದವು ಮೊಗಗಳು ಬಣ್ಣಗಳ ಸಮ್ಮಿಲನದಿಂದ, ಬೆಳಗುತಿದ್ದವು ಕಣ್ಣುಗಳು ಅಂತರಾಳದಲ್ಲಿರುವ ಆನಂದದಿಂದ, ಥಳಿಥಳಿಸುತಿದ್ದವು ತೊಯ್ದ ಉಡುಪುಗಳು ರಂಗುರಂಗಿನ  ಲೇಪನದಿಂದ. ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ, ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ, ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ, ವೃದ್ಧರಿಗೆ ಸಂಕೋಚವಿರಲಿಲ್ಲ, ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ, ಎರಚುತ್ತಾ ರಂಗುರಂಗಿನ ಓಕುಳಿಯ. ಭೇದವಿರಲಿಲ್ಲ ಜಾತಿ, ಮತ, ವರ್ಗಗಳ, ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ, ಎಲ್ಲರೂ ಭಾಗ್ಯವಂತರು ಅಲ್ಲಿ, ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ, ಹಂಚುತಿದ್ದರು ಸಿಹಿ ಸಂತೋಷಗಳ, ಹಚ್ಚುತ್ತಾ ರಂಗುರಂಗಿನ ಬಣ್ಣಗಳ. ಉರಿಸಲಾಗಿತ್ತು ಅಗ್ನಿ ಈಗಾಗಲೇ, ಚಂದಿರನ … Read more

ಮೂರು ಕವಿತೆಗಳು: ಶಿವಕುಮಾರ ಸಿ., ತಿರುಪತಿ ಭಂಗಿ, ಲೋಕೇಶಗೌಡ ಜೋಳದರಾಶಿ

ಕಾವ್ಯದ ಕೂಗು ಅದೆಲ್ಲಿದೆ…… ದುತ್ತನೆ ಸಮುದ್ರದ ತೀರದಲ್ಲಿ ಯಮಯಾತನೆಯ ಹೊತ್ತು , ಮಣಬಾರದ ಹೆಜ್ಜೆಯಿಟ್ಟು ಮಹಲಿನಲ್ಲಿ ಹಲ್ಲುಕಿರಿದು ಕಿಕ್ಕಿರಿದು ಸೇರಿದ್ದ ಸಂದಣಿಯಲ್ಲಿ  ಗುನುಗುನುಗುತ್ತಿತ್ತು. ಆರ್ಭಟದ ಅಳಲಿನಲಿ, ಪಂಚಾಯ್ತಿ, ಗುಡಿಸಲು, ಗುಡಿ ಗುಂಡಾರಗಳಲ್ಲಿ, ಇಲ್ಲಿ ಕಚ್ಚೆ ಕಟ್ಟುವ, ಅಲ್ಲಿ ಸ್ಕರ್ಟ ಹಾಕಿರುವ, ಭೂವಿಸಖಿ, ಗಗನಸಖಿಯರಲ್ಲಿ, ಹುಬ್ಬು, ಹುನ್ನಾರಗಳಲ್ಲಿ, ತೇರು ಹರಿವ ಮಾದಕ ನೋಟಗಳಲ್ಲಿ, ಕುಣಿಕುಣಿದಾಡುತ್ತಿತ್ತು. ಒಮ್ಮೆ ತಿರುಗಿ ನೋಡಬೇಕಿತ್ತು ತೆರಪಿರದೇ ಕಣ್ಣಲ್ಲೇ ಕುಣಿಯುತ್ತಿದ್ದ ಹಗಲುಗನಸುಗಳ ಸೈಡಿಗಿಟ್ಟು ಹಳೇ ಬಸ್ಟಾಂಡಿನ ಚಿಲ್ಲರೆ ಮುದುಕಿಯ  ಕಷ್ಟ ಕೇಳಬಹುದಿತ್ತು ನಾನೇ ನೋಡಬಹುದಿತ್ತು ಪಾಯ, … Read more

ಕವಿತೆಗಳು: ಸಿಪಿಲೆ ನಂದಿನಿ, ಸಂತೆಬೆನ್ನೂರು ಫೈಜ್ನಟ್ರಾಜ್, ನವೀನ್ ಮಧುಗಿರಿ, ನಾಗರಾಜ ಎಸ್. ಹಣಗಿ

ಕೆಂಪು ನಕ್ಷತ್ರದ ಹೂ ತೇಲುವ  ಬೆಳ್ಳಿ ಮೋಡಗಳ  ಜೀವಗಳಲಿ ಸಂಗ್ರಾಮ ಕೆಂಪುಮಳೆ ಬಿದ್ದರೆ ತರಗೆಲೆ ತುಂತುರ ಹನಿಯೊಳಗೆ ಬೆಳಕು..! ನಕ್ಷತ್ರದ ಹೂಗಳಲಿ ಸಂಭ್ರಮ ಎದೆಯ ನೋವ ರಕ್ತದೊಳಗೆ ಕಾಡು ಜನರಿಗೆ ಹರ್ಷ ಕೆಂಪು ನಕ್ಷತ್ರದ ಹೂವು ಮಳೆ ಇಬ್ಬನಿಗಳ ರಂಬಿಸುವ  ಅನಂತ  ಆಕಾಶವೇಕೆ ಶೂನ್ಯ? ಪ್ರಭುತ್ವ ಜೀವಗಳಲಿ ಬಿನ್ನತೆ ಏತಕೆ?  ಹಸಿರುಬೇಟೆ ಹೆಸರಲಿ ನಿತ್ಯ ಮಾರಣ ಹೋಮ ತರಗಲೆಯೊಳಗೆ  ಬಲಿಯಾದವರೆಲ್ಲ ಮಳೆಕಾಡ ನೆಲದೆದೆಯ ಒಂದೇ  ರಕ್ತದ ಸಹೋದರರು    ಕಾಡು ಮಲೆಗಳಲಿ ವಿಶಿಷ್ಟತೆಯ ಸೊಗಸು ದಮನಿಯೊಳಗೆ ಲುಪ್ತವಾಗಿ … Read more

ಮೂರು ಕವಿತೆಗಳು: ಜಯಶ್ರೀ ದೇಶಪಾಂಡೆ, ಶ್ರೀದೇವಿ ಕೆರೆಮನೆ, ರಮೇಶ್ ನೆಲ್ಲಿಸರ

ಪ್ಯಾರಾಡೈಸ್ ಲಾಸ್ಟ್….!                                                               ಜುಳುಜುಳು ಹರಿದ ಮಳೆಯ ತಿಳಿ ನೀರಲ್ಲಿಳಿದ     ಹಳೇ ಪೇಪರಿನ ಹಡಗು, ಆ ದಂಡೆ ಈ ದಂಡೆ ವಾಲಿ ತೇಲಿ ಕೊನೆಗೆ ಹೊಡೆದ ಗೋತ, ಕಳಕೊಂಡ ಹಡಗಿನ ದ:ಖ ಮರೆಸಲು … Read more

ಮೂವರ ಕವಿತೆಗಳು: ಮುಕುಂದ್ ಎಸ್., ಮೌಲ್ಯ ಎಂ., ಅಕುವ

ಲೋ ಮಾರ್ಕು,  ನೀ ಕಟ್ಟಿದ್ ಜಗ್ಲಿ ಮ್ಯಾಕ್ ಕೂತು,  ದೊಡ್ಡ್ ದೊಡ್ಡ್ವರು ಹೇಳಿದ್ದು  ಅರ್ಥವಾಗ್ದಿದ್ರು ಬೇರೆಯವರಿಗೆ ಷೇರ್ ಗಿರ್ ಮಾಡಿಕ್ಕಂಡು, ರಾಜಕಾರಣಿ ಹಾಕೋ ಥರಾವರಿ  ಟೋಪಿಗಳ್ ನಾವ್ ನಮ್ಮ್  ಗೆಳ್ಯರಿಗು ಹಾಕಿ,  ಪರ್ ವಿರೋಧ ಬಾಯ್ ಬಡ್ಕೊಂಡು, ಫ್ರೆಂಡ್, ಅನ್ ಫ್ರೆಂಡ್ ಅಂತ್ ಆಟ್ಗಳ ಜೊತೆ ಕ್ಯಂಡಿ ಕ್ರಷುಗಳ್ ಬಗ್ಗೆ ಉರ್ಕೊಂಡು,  ನಮ್ಮ್ ನಮ್ಮ್ ಪಟ್ವ ತೆಗೆದು  ಸ್ಚಯಂವರಕ್ಕೆ ರೆಡಿ ಆಗೋ ಪರಿಯಲ್ಲಿ ತೆಗ್ಸಿ, ಲೈಕುಗಳ ಬಿಕ್ಕ್ಸೆಗೆ ಕಾಯ್ಕೊಂಡು, ಅಕ್ಕ ಪಕ್ಕ ಇರೋ ಅಣ್ಣ್ ತಮ್ಮದಿರ್ ದೂರ್ … Read more

ಮೂವರ ಕವಿತೆಗಳು: ಸಾಬಯ್ಯ ಕಲಾಲ್, ನಾಗರಾಜ ವಿ.ಟಿ., ಕಾವ್ಯಪ್ರಿಯ

ಗೋವಿನ ನೋವು ನನ್ನ ಕೊಬ್ಬಿದ ಮಾಂಸವನು ತಿಂದು ತೇಗುವ ನಿನಗೆ.. ಚೀಪಿದ ಮೂಳೆಯನ್ನಾದರು ಸಮಾಧಿ ಮಾಡಿದ್ದರೆ.. ನನ್ನೊಳಗಿರುವ ಮುಕ್ಕೋಟಿ ದೇವರ ಆತ್ಮಕ್ಕಾದರು ಶಾಂತಿ ದೊರಕುತ್ತಿತ್ತು..|| ಹರೆಯದಲ್ಲಿ ಹಾಲು ಕರೆದು ಹಾಲುಣಿಸಿದ ತಾಯಿಗೆ ದ್ರೋಹ ಬಗೆದು ಮುದಿತನದಲ್ಲಿ ಕಟುಕನಿಗೆ ಕೊಡುವ ಬದಲು ನೀನೆ ಜೀವಂತ ಸಮಾಧಿ ಮಾಡಿದ್ದರೆ ಹಾಲುಣಿಸಿದ ಋಣವಾದರು ತೀರುತ್ತಿತ್ತು..|| ನಿನಗಾಗಿ ಹಗಲಿರುಳು ದುಡಿದು ಬಸವಳಿದ ನನಗೆ ಕಸಾಯಿಖಾನೆಗೆ ಕಳಿಸುವ ಬದಲು ದವಾಖಾನೆಗೆ ನನ್ನ ಕಳಿಸಿದ್ದರೆ ಈ ತಾಯಿಯ ಮನದ ನೋವು ಹಗುರವಾಗುತ್ತಿತ್ತು..|| ತಾಯಿಯೆಂದು ಪೂಜಿಸಿದ ನಿನು … Read more

ಮೂರು ಕವಿತೆಗಳು: ಉರ್ಬಾನ್ ಡಿಸೋಜ, ಅಕುವ, ಶಿವಕುಮಾರ ಸಿ.

ಹುಡುಕಾಟ ನಾನು ನನ್ನ ಬದುಕನ್ನು ಹೀಗೆಯೇ ಸುಮ್ಮನೆ ನೋಡಿದೆ, ಆಗ೦ತುಕ, ಆಗ೦ತುಕನನ್ನು ಭೇಟಿಯಾದ೦ತಾಯ್ತು. ಇದು ನನ್ನ ಬದುಕೇ? ಉತ್ತರ ಹುಡುಕಾಡಿದೆ. ಒಳ್ಳೇದೇ ಮಾಡಿದೆ,  ಕೋಟಿ ದೇವರನ್ನ ಬೇಡಿದೆ, ಆದರೂ ನನ್ನ ಬದುಕನ್ನು ನಾನೇ ಅರಿಯದಾದೆ. ಇತರ ಚಿ೦ತನೆ, ಮಾತುಗಳೇ ನಾನೆ೦ದುಕೊ೦ಡೆ. ಕಡಿದವನ, ಕುಡಿದವನ, ಅತ್ಯಾಚಾರಿಯ, ಲ೦ಚವಾದಿಯ ಬದುಕು ಯಾವ ರೀತಿಯದು ಎಂದು ನೆನೆದು ನಡುಗಿದೆ. ಸತ್ತ ನ೦ತರದ ಬದುಕನ್ನು ನೆನೆದು ಈಗಿನ ಬದುಕ ಮರೆತೆ? ಹೂವನ್ನೇ ಬಯಸಿದ ಬದುಕಿನೊಳಗೆ ಹರಿತ ಚಾಕುವೇ ತಿವಿಯಿತು. ಬದುಕೇ, ನೀನು ಮತ್ತೆ … Read more

ಮೂವರ ಕವಿತೆಗಳು: ಅಕ್ಷಯ ಕಾಂತಬೈಲು, ಸಿಂಧು ಹೆಗ್ಡೆ, ಸ್ಫೂರ್ತಿ ಗಿರೀಶ್

ಪ್ರಶ್ನೆಯ ಮೇಲೆ ಪ್ರಶ್ನೆ                 ಬಂಧುವೋ ಬಳಗವೋ ಯಾರೊಡೆ ಆನಂದವೋ ಸಂಸಾರದ ಬೇಲಿಯೊಳಗೆ ಮೇಯಿವ, ಬೇಯುವ ಮನಸಿನೊಳು ಎಲ್ಲವೂ ಶೂನ್ಯವು ಮುಂದೆ ಏನೋ ಹಿಂದೆ ಸವೆಸಿದ ಹಾದಿಯೋ ಬೆಟ್ಟ ತಪ್ಪಲು ಕಲ್ಲು ಚಪ್ಪಡಿ ಮೇಲೆ ಗಟ್ಟಿ ಮೆಟ್ಟದ ಪಾದವು ಬರೀ ಚಲಿಸುವ ಕಾಯವು ಹಬ್ಬಿದ ಉರಿ ಧಗೆಗೆ  ಬಸವಳಿದು ಬೆಂಡಾದ  ಸ್ಥಿತಿಯೋ ನದಿ ಮೂಲವ ತಿಳಿಯ ಹೊರಟ  ಜೀವವೇ ಆವಿಯು ಎಂತು ಕಟ್ಟಿತು ಮೋಡವು ಹೋರಾಟದ ಬದುಕೋ? … Read more

ಮೂವರ ಕವಿತೆಗಳು: ಲಕ್ಷ್ಮೀಶ ಜೆ.ಹೆಗಡೆ, ನವೀನ್ ಮಧುಗಿರಿ, ಅಕುವ

ಆತ್ಮ ಸೌಂದರ್ಯ ಕಣ್ಣು ಮಾತ್ರ ಕಂಡರೆ ಸಾಕೇ ಆತ್ಮಕ್ಕೂ ಕಾಣಬೇಡವೇ ಸೌಂದರ್ಯ ರಸಾನುಭೂತಿಯಲಿ ದೇಹ ತೇಲುವುದು ಆತ್ಮ ಪರಿತಪಿಸಿ ನರಳುವುದು ಹಲವು ರೀತಿಯ ನೂರಾರು ಲಹರಿ ಅನಂತಾನಂತ ಈ ಸೌಂದರ್ಯದ ಪರಿ ಕಣ್ಣಿಗೆ ಕಾಣುವುದು ಸಹಸ್ರ ರೀತಿ ಆತ್ಮಾನುಭವದಲಿರುವುದು ಒಂದೇ ಲಹರಿ ದೇಹ ಸೌಂದರ್ಯಕೆ ಮರುಳಾಗುವರು ಆತ್ಮೋನ್ನತಿಯಿಲ್ಲದೆ ನರಳುವರು ನಯನ ನೋಡುವುದು ಲೌಕಿಕ ಸೌಂದರ್ಯ ಆತ್ಮಕ್ಕೆ ಕಾಣುವುದು ಭವ ಮೀರಿದ್ದು ಮಾತ್ರ ಆತ್ಮ ಸಿಕ್ಕಿದ್ದು ವಿಶ್ವತೋಮುಖನಿಂದ ದೇಹ ಲಭಿಸಿದ್ದು ಪ್ರಕೃತಿ ಪುರುಷರಿಂದ ದೇವನೊಬ್ಬ ಆತ್ಮರೂಪಿ ಹಲವು ನಾಮಗಳಿಂದಾತ … Read more

ಮೂವರ ಕವಿತೆಗಳು: ರಘುನಂದನ ಹೆಗಡೆ, ಬಿ. ಸಿ. ಪ್ರಮೋದ, ಗಿರಿ

ನೀನಿಲ್ಲದ ಗೋಕುಲದ ಬೇಸರ ನಿನ್ನ ತುಟಿಯಂಚಿನ ಕೊಳಲಾಗುವೆ ಬಿಸಿಯುಸಿರ ಪುಳಕದಿ ರಾಗವಾಗುವೆ ಅನುರಾಗದ ರವಳಿಯ ತೇಲಿ ಬಿಡು ಶ್ಯಾಮ ಯಮುನಾ ತೀರದಿ ಹಾಡಾಗಿ ಹರಿಯಲಿ ಪ್ರೇಮ ನನ್ನೆದೆಯ ರಾಗ ಕೇಳು ಸಾಕು ಮಾಡೊ ವಿರಹಿ ಬಾಳು ನಿಂತೆ ಇದೆ ಜೀವ ಗೋಕುಲದಲ್ಲಿ ಜೀವಾಮೃತವಿದೆ ಎದೆಯಲ್ಲಿ ದ್ವಾರಕೆ, ಮಧುರೆಗಳು ಸಾಕು ಬಾ ನನ್ನೊಲವ ಬೃಂದಾವನಕೆ ಗೋಧೂಳಿ ದೀಪ ಮನದಲ್ಲಿ ಒಮ್ಮೆ ಹರಿವ ಯಮುನೆ ಕಣ್ಣಲ್ಲಿ ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ  ಕಾಯುತ್ತ ನಿಂತೆ ಇದೆ ಜೋಕಾಲಿ ಯಾರಿಗೆ ಹೇಳಲೋ … Read more

ಮೂವರ ಕವಿತೆಗಳು: ಶೋಭಾಶಂಕರ್, ವಿನಾಯಕ ಭಟ್, ಶ್ರೀಕಾಂತ ಧಾರವಾಡ.

ಜಿ ಎಸ್ ಎಸ್ ಎದೆ ತುಂಬಿ ಹಾಡಿದ ಕವಿ ನವೋದಯದ ಸಮನ್ವಯ ಋಷಿ ಕನ್ನಡಿಗರ ಮನಸ ಗೆದ್ದ ಭಾವಜೀವಿ     ಇರುವಷ್ಟು ಕಾಲದಿ ಎದೆ ತುಂಬಿ ಮನತುಂಬಿ ತನು ತುಂಬಿ ಹಾಡಿದಾ ಕವಿ ಇಲ್ಲದ ದೇವರ ಹುಡುಕದೆ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು  ದೇವರ ದರ್ಶನ ತೋರಿದ ದಾರ್ಶನಿಕ ಕವಿ ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ ತುಂಬಿದರು ಬತ್ತದ ಅನಂತ ಜೀವನೋತ್ಸಾಹ!! ಹೂವು ಅರಳೀತು ಹೇಗೆ ಪ್ರೀತಿ … Read more

ಚುಟುಕಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ

ಕಿರು ಕವಿತೆಗಳು —————— ಅಪ್ಪನ ನೇಗಿಲ ಕಾವ್ಯಕೆ ಹೊಟ್ಟೆ ತುಂಬಿದವರ ತೇಗುಗಳೇ ಪ್ರಶಸ್ತಿ , ಪುರಸ್ಕಾರ ತಟ್ಟೆಯಲಿ ಬಿಟ್ಟ, ತಿಪ್ಪೆಗೆ ಚೆಲ್ಲಿದ ಅನ್ನ ಅಪ್ಪನ ಬೆವರಿಗೆ ನೀವು ಮಾಡಿದ ಅವಮಾನ — ಮೊನ್ನೆ ಮಹಾನ್ ದೈವಭಕ್ತ ಸಿದ್ರಾಮ ದೇವರಿಗೆ ಕೈ ಮುಗಿದು ಕಾಣಿಕೆ ಸಲ್ಲಿಸಿ ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ ಅವನ ಚಪ್ಪಲಿ ಕಳುವಾಗಿದ್ದವು! — ರೈತನ ಬೆವರ ಹನಿ ಹೊಳೆದಿದೆ ಎಳೆ ಬಿಸಿಲಿಗೆ ಪೈರಿನ ನೆತ್ತಿಯ ಮೇಲೆ ತೆನೆ — ಒಂದಷ್ಟು ಪ್ರೀತಿ ಮಣ್ಣಾದ ಮೇಲೆ ಈ … Read more

ಮೂವರ ಕವಿತೆಗಳು: ಗಿರಿ, ರಘುನಂದನ ಹೆಗಡೆ, ಪಾ.ಮು.ಸುಬ್ರಮಣ್ಯ ಬ.ಹಳ್ಳಿ.

ಕಾಡುವ ನೆನಪಿನ ಹಿಂದೆ ನೂರೊಂದು ಚಡಪಡಿಕೆ ಒಂದೊಂದು ತಿರುವಲು ನಿನ್ನ ನಗುವಿನ ಪಳೆಯುಳಿಕೆ ಕಂಡೂ ಕಾಣದೆ ಕತ್ತಲಿನ ಮೂಲೆಯಲಿ ಕಂಪಸೂಸಿದ ನಿನ್ನ ಬೆಳದಿಂಗಳಂತ ನಸುನಗೆ ಸುಮ್ಮನೆ ಪ್ರೇಮಿಸುತಿದ್ದ ನನ್ನ ಕವಿಯನಾಗಿ ಮಾಡಿದ್ದು ನೀನಾ? ನಿನ್ನ ನೆನಪಾ? ಹೇಳು, ದಯವಿಟ್ಟು ಹೇಳು ಕನಸಲಿ ಬಂದು ಕನವರಿಸುವಂತೆ ಮಾಡಿದ್ದು ನೀನಾ? ನಿನ್ನ ಮುಂಗುರಳಾ? – ಗಿರಿ         ಮೂಲ ಮರೆತವನ ಹುಡುಕಾಟ ಅಂಗಳದಿಂದ ಹತ್ತು ಹೆಜ್ಜೆ ಎತ್ತಿಟ್ಟರೆ ನೆರಳು ಬಿಸಿಲು ಆಟವಾಡುವ ಮನೆ ಉಸ್ಸೆಂದು ಹಗುರಾಗಿ … Read more

ಮೂವರ ಕವಿತೆಗಳು

 ನನ್ನ ಅಪ್ಪ ಅಪ್ಪ ಶಬ್ದ ಕೇಳಿದಾಗ ನೆನಪಾಗುವ, ಮೊದಲ ಪ್ರಿಯ ದೇವರು ನೀವು, ನನ್ನ ಬಾಳ ಬಲಹೀನ ಕ್ಷಣಗಳ ಮಳೆಗೆ, ಬಲಿಷ್ಟವಾದ ಆಸರೆಯ ಕೊಡೆ ನೀವು, ನನ್ನ ಎದೆಯ ವೈಭವ ಗೋಪುರದ, ಹೆಮ್ಮೆಯ ಸುವರ್ಣ ಕಳಸವು ನೀವು, ನನ್ನ ಜೀವನದ ಹುಡುಕಾಟದ ಗುರಿ, ನಿಮ್ಮ ಮೊಗದ ಚಿರು ನಗುವಿನಲ್ಲಿ ಅಡಗಿರುವುದು, ನಿಮ್ಮ ಕರುಣೆಯ ಆಳವನು ಹೇಗೆ ಅರಿಯಲಿ, ಅದು ನನಗೆ ಚಿದಂಬರ ರಹಸ್ಯವಾಗಿದೆ. –ಬಿ.ಸಿ.ಪ್ರಮೋದ. ಎಮ್.ಟೆಕ್. ಎನ್.ಐ.ಟಿ.ಕೆ. ಸುರತ್ಕಲ.           ಅವಳು….??? … Read more

ಮೂವರ ಕವಿತೆಗಳು: ಬಸವರಾಜ ಕದಮ್, ರಮೇಶ್ ನೆಲ್ಲಿಸರ, ತ.ನಂ.ಜ್ಞಾನೇಶ್ವರ

ಪ್ರೀತಿಯ ಹೆಜ್ಜೆಗಳು : ಪ್ರೀತಿಯ  ನಿನ್ನ  ಹೆಜ್ಜೆಗಳು ನನ್ನ  ಹೃದಯದ ಒಳಗೆ ಗೆಜ್ಜೆ  ಕಟ್ಟಿಕೊಂಡು  ಕುಣಿಯುತ್ತಿದೆ ಪ್ರೇಮದ ತಾಳದ  ಸದ್ದು ಮನಸ್ಸಿಗೆ  ಮುದಕೊಡುತ್ತದೆ. ಪ್ರೀತಿಯ ಅನುಭವ : ನಿನ್ನ  ಕಾಲಿಗೆ  ಚುಚ್ಚಿದ ಮುಳ್ಳನ್ನು  ಪ್ರೀತಿಯಿಂದಲೇ  ಮುಳ್ಳಿಗೂ  ನನಗೂ  ನೋವಾಗದೆ ತೆಗೆಯುವಾಗ  ಅಲ್ಲೊಂದು  ಪ್ರೀತಿಯ  ಅನುಭವವೇ ಬೇರೆ ….!!! ಹೊಸತನ : ನೀ ಬರೆದ ರಂಗೋಲೆ ಅಂಗಳದ  ಅಲಂಕಾರವೇ  ಬದಲಾಗಿ ಹೊಸತನ  ತಂದಿದೆ  ಒಂದೊಂದು  ಚುಕ್ಕೆಗಳ ಸಾಲುಗಳು  ನನ್ನ  ಹೃದಯದಲ್ಲಿ  ಚಿತ್ತಾರ ಮೂಡಿಸಿದೆ.. ನಗು : ಗೆಳತಿ, ನಿನ್ನ … Read more

ಮೂರು ಕವಿತೆಗಳು: ಕಡಲ ಬೇಟೆಗಾರ, ರಮೇಶ್ ನೆಲ್ಲಿಸರ, ದಿನೇಶ್ ಚನ್ನಬಸಪ್ಪ

ಅವಳೆಂದರೆ,,, ಅದ್ಯಾವುದೋ ಒಂದು ಹೊತ್ತಿನ ಮೌನ, ಮತ್ತೆಲ್ಲಿಂದಲೋ ತೂರಿ ಬಂದ ನಿಲ್ಲದ ಮಾತು,, ಮಚ್ಚೆಯ ಜೊತೆಜೊತೆಗೆ ಚೆಲುವಿನ ಗುಳಿಕೆನ್ನೆ, ಮರೆತಾಗ ಹೆಚ್ಚಾಗೇ ನೆನಪಾಗೊ ಏನೋ ಒಂದು ಗುರುತು. ಅವಳೆಂದರೆ,,, ಹಾಳಾದ ಸಂಜೆಯನೇ ರಂಗೇರಿಸೊ ಬೆಳಕು, ಮತ್ತನ್ನೆ ಬಗಲಲ್ಲೇ ಎತ್ತಿಟ್ಟುಕೊಂಡು ಬೀಸೋ ತಂಗಾಳಿ,, ನಿಧಾನ ಗತಿಯಲಿ ಏರಿಇಳಿಯೊ ರಂಗು, ಕಡಲಿನೆದೆಮೇಲೆ ಪ್ರತಿಫಲಿಸೋ ಅರೆನೀಲಿಮೋಡದ ಸಂದಿಗೊಂದಿಯ ಬಿಳಿ. ಅವಳೆಂದರೆ,,, ತುಂತುರು ಮತ್ತೆ ಚಳಿ ಹಿಡಿಸೊ ಆಷಾಡದ ಮಳೆ,, ನೆನೆವಾಗ ಕಾರಣವಿರದೇ ಮನಸೊಳಗೆ ಮೂಡೋ ಸಂಭ್ರಮ, ಜ್ವರದಮೂಲಕ ಕಾಡುವ ಹೊಸ ರಗಳೆ. … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು ಎಲೆಗಳುದುರಿದ ಒಣ ಕೊಂಬೆಗೆ ಜೋಡಿ ಬಾವಲಿ ಜೋತು ಬಿದ್ದಂತೆ ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ ಬತ್ತಿ ಹೋದ ಸ್ಥನಗಳು ನನ್ನ ಬೆರಳುಗಳೂ ಅಂತೆಯೇ ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ  ಮಾಂಸಲವೇನಲ್ಲ ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ ಮಾಂಸಖಂಡಗಳ ಪ್ರಣಯದಾಟವಲ್ಲ ಅದು, ಮೂಳೆ-ತೊಗಲಿನ ಸಂಘರ್ಷ! *** ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ  ಬಾವಲಿಯ ರೆಕ್ಕೆಯನ್ನು ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ ರಚಿಸಿದ ಪುಟ್ಟ ಡೋಲು ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ ಸವೆದ ಪಕ್ಕೆಲುಬುಗಳಂತಿರುವ ಚೋಟುದ್ದ ಬೆತ್ತಗಳಿಂದ ಬಾವಲಿಯ ರೆಕ್ಕೆಗೆ ಬಡಿಯುವಾಗ … Read more

ಮೂರು ಕವಿತೆಗಳು: ಶಿವರಾಂ ಎಚ್. ಆಶಾ ದೀಪ, ಅಕ್ಷತಾ ಕೃಷ್ಣಮೂರ್ತಿ

ನೀనిಲ್ಲದ ದಿನಗಳಲಿ ಮೌನವಾಗಿವೆ ಭಾವಗಳು ಮ್ಲಾನವಾಗಿವೆ ಕನಸಿನ ಬಣ್ಣಗಳು ಹೃದಯದ  ಸರಸಿಯಲ್ಲೇ ಅರಳಿದ ತಾವರೆಯ ಹೂಗಳು. ನೀನಿಲ್ಲದ ದಿನಗಳಲಿ ಇರುಳು ತಪ್ತವಾಗಿದೆ; ಪ್ರೀತಿಯ ಇನಿದನಿಗಳು ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು. ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು  ತಟ್ಟನೆ ಕಾವೇರಿದರೂ ತಂಪಾಗದಿವೆ. ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ ಹೆಡೆಯಾಡಿಸುತ್ತ ತಪ್ತವಾಗಿ ಹೋದ ಕಾಮನೆಗಳೆಲ್ಲ … Read more

ಮೂರು ಕವಿತೆಗಳು: ಕುಮಲೇಶ ಗೌಡ, ಈಸೋಪ, ರಮೇಶ್ ನೆಲ್ಲಿಸರ

ಸಾವು ಕಣ್ರೆಪ್ಪೆಗಳನ್ನ  ತೆರೆದು ನೋಡಿದರೆ ಬೆಳಕನ್ನ ನೋಡಲಾಗದೆ ಮುಚ್ಚಿಕೊಂಡವು ಪ್ರಯಾಸದಿಂದ ತೆರೆದ ಕಣ್ಣನ್ನ ಅವನನ್ನ ಬಿಗಿದು ಕಟ್ಟಲಾಗಿತ್ತು ಊರಾಚೆಗಿನ ಬಟಾಬಯಲಿನ ಮಧ್ಯೆ ಮರವೊಂದಕ್ಕೆ ನಿರ್ಜನ ಪ್ರದೇಶದಲ್ಲಿ ಸುತ್ತಲೂ ಬಿದ್ದಿದ್ದ ಹಿಡಿಗಾತ್ರದ ಕಲ್ಲುಗಳು ಅವನ ಮೈಗೆ ತಾಕಿ ಕೆಳಬಿದ್ದವಾಗಿದ್ದವು ರಕ್ತ ಹೊರಬಂದು ಹೆಪ್ಪುಗಟ್ಟಿತ್ತು ಗಾಯಗಳಿಂದ ತುಟಿಗಳೊಣಗಿತ್ತು ಮುಖದಲ್ಲಿ ಜೀವವಿದೆಯಾ ಇನ್ನೂ ಅನ್ನುವಂತ ನಿರ್ಜೀವವಾದ ಭಾವ ಸುತ್ತಲೂ ನೋಡಿ ಒಮ್ಮೆ ಯಾರೂ ಕಾಣದಾದಾಗ ನೆನಪು ಮಾಡಿಕೊಳ್ಳಲು ಶುರುಮಾಡಿದ ತನ್ನೀ ಪರಿಸ್ಥಿತಿಗೆ!!  ಕಾರಣ! ಇನ್ನೂ …….ಅದೆ..! ಐ….ಕ..!! –ಕಮಲೇಶ ಗೌಡ   … Read more

ಎರಡು ಕವಿತೆಗಳು: ಪ್ರಮೋದ್ ಬಿ.ಸಿ., ಅಕುವ

  ನನ್ನ ಹಾಡಿನ ಪಲ್ಲವಿ  ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು, ಬಯಸಿರುವೆ ನಿನ್ನ ವಾಣಿಯ ಮಾಯೆಯನು; ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು, ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು; ಇಳಿಸಂಜೆಯ ಮಧುರವಾದ ಕಲ್ಪನೆ ನೀನು, ಕಾದಿರುವೆ ನಿನ್ನ ಒಲವಿನ ಆಗಮನವನು; ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು, ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ; ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು. – ಬಿ. ಸಿ. ಪ್ರಮೋದ.     … Read more