ಕೆಂಪು ಹುಂಜ: ಜೆ.ವಿ.ಕಾರ್ಲೊ

ಸೋಂಬಾನ ಆರೂಡುವ ಎತ್ತು ಹೊಟ್ಟೆಯುಬ್ಬರಿಸಿಕೊಂಡು ಸತ್ತು ಬಿದ್ದಿತ್ತು. ಸೋಂಬಾನ ಜಗತ್ತು ತಲೆ ಕೆಳಗಾದುದರಲ್ಲಿ ಆಶ್ಚರ್ಯವಿಲ್ಲ. ಎತ್ತು ಮುದಿಯಾಗಿತ್ತು, ನಿಜ. ನಿತ್ರಾಣಗೊಂಡಿತ್ತೂ ನಿಜವಾದರೂ, ಒಳ್ಳೆಯ ಸಮಯ ನೋಡಿಯೇ ಸೋಂಬಾನಿಗೆ ಕೈ ಕೊಟ್ಟಿತ್ತು… ಒಂದು ಹದವಾದ ಮಳೆ ಉದುರಿ ಭೂಮಿ ಉತ್ತನೆಗೆ ತಯಾರಾದಾಗ! ಎತ್ತು ಯಾಕೆ ಸತ್ತಿತು ಎಂದು ಕಾರಣ ಸೋಂಬಾನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅವನ ಹೊಲದ ಬದಿಯಲ್ಲೇ ಒಂದು ದೈತ್ಯಾಕಾರದ ಆಲದ ಮರವಿತ್ತು. ಅದರಲ್ಲಿ ವಾಸವಿದ್ದ ಚೌಡಿಗೆ, ಪ್ರತಿವರ್ಷ ಕೊಯ್ಲಿನ ನಂತರ ಕೆಂಪು ಹುಂಜನನ್ನು ಬಲಿ ಕೊಡುವುದು ರೂಢಿ. … Read more

ಚಕ್ರ: ಡಾ. ಗವಿಸ್ವಾಮಿ

''ತಾಯವ್ವಾ'' ''ಇನ್ನೂ ಆಗಿಲ್ಲ ಕ ನಿಂಗಿ ..  ತಿರ್ಗಾಡ್ಕಂಡ್ ಬಾ ಹೋಗು'' ''ಆಗಿದ್ದದೇನೋ ಅಂದ್ಕಂಡು ಕೇಳ್ದಿ ಕನ್ನೆವ್ವಾ … ಇಲ್ಲೇ ಕೂತಿರ್ತಿನಿ ತಕ್ಕಳಿ'' ಒಳಗೆ ಪೇಪರ್ ಒದುತ್ತಾ ಕೂತಿದ್ದವನು ನಿಂಗಿಯ ಸದ್ದು ಕೇಳಿ ಆಚೆ ಬಂದೆ. ಆವತ್ತು ಗೌರಿ ಹಬ್ಬ. ಹಬ್ಬಹರಿದಿನಗಳಂದು ಹೊಲಗೇರಿಯ ನಿಂಗಿ ನಮ್ಮ ಕೇರಿಯ ಮನೆಗಳಿಗೆ ಬಂದು ಊಟ ತಿಂಡಿ ಹಾಕಿಸಿಕೊಂಡು ಹೋಗುವುದು ಮಾಮೂಲು. ಆವತ್ತು ಎಂದಿನಂತೆ ಅದೇ ಹಳೆಯ  ಬಿದಿರಿನ ಪುಟ್ಟಿಯೊಂದಿಗೆ ಪಡಸಾಲೆಯ ಕೆಳಗಿನ ಮೆಟ್ಟಿಲುಗಳ ಮೇಲೆ ಕೂತಿದ್ದಳು. ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟಿದ್ದರಿಂದ … Read more

ನಿರಾಳ: ಶರತ್ ಚಕ್ರವರ್ತಿ

“ನಾನು ಹೊರಟಿದ್ದೇನೆ” ಅಂತ ಅವಳ ಮೆಸೆಜ್ ಬಂದೊಡನೆ ತರಾತುರಿಯಲ್ಲಿ ಟವಲ್ಲು, ಅಂಡರಿವೆಯನ್ನ ಹಿಡಿದುಕೊಂಡೋಗಿ ಬಚ್ಚಲ ಬಾಗಿಲು ಜಡಿದುಕೊಂಡ. ಗಡ್ಡ ಬಿಟ್ಟುಕೊಂಡು ಹೋಗುವುದೋ, ಟ್ರಿಮ್ ಮಾಡಿಕೊಂಡು ಹೋಗುವುದೋ ಎಂಬ ಮೂರು ದಿನಗಳ ಜಿಜ್ಞಾಸೆಗೆ ಕತ್ತರಿ ಬಿದ್ದು ಅವನ ಹರಕಲು ಗಡ್ಡು ನೂರು ತುಕುಡಾಗಳಾಗಿ ಉದುರಿಕೊಂಡಿತ್ತು. ಏಳು ವರ್ಷಗಳ ನಂತರ ಅವಳು ಸಿಗುತ್ತಿರುವುದು. ಅಂದು ಹನಿಮಳೆಯೊಳಗೆ ಕಣ್ಣು ತೀಡುತ್ತಾ ಹೋದವಳ ಬೆನ್ನು ನೋಡುತ್ತಾ ನಿಂತವನು ಅಲ್ಲಿಯೇ ಸ್ತಬ್ಧವಾಗಿದ್ದ. ಕಣ್ಣೀರಿಡುತ್ತಾ ಅವಳು ಸೊರಗುಟ್ಟಿದ ಸದ್ದು ಇನ್ನೂ ಕಿವಿಯ ಗೋಡೆಗಳಿಗೆ ಗುದ್ದಿಕೊಳ್ಳುತ್ತಾ ಹೊರಬರಲಾಗದೇ … Read more

ಬಾಳವ್ವನ ಬಾಳುವೆ: ನೇಮಿನಾಥ ಬಸವಣ್ಣಿ ತಪಕೀರೆ

ಸಾವಕಾರ್ರ ನಂಗ ಐವತ್ತು ರೂಪಾಯಿ ಕೊಡ್ರಿ ಸಾವಕಾರ್ರ… ಮನೀಗಿ ಅಕ್ಕಿ ತಗೊಂಡು ಹೋಗಬೇಕ್ರಿ ಸಾವಕಾರ್ರ, ಐವತ್ತು ರೂಪಾಯಿ ಕೊಡ್ರಿ ಎಂದು ಅಂಗಲಾಚುತ್ತಿದ್ದ ಸಾರಾಯಿಯ ಅರೆ ನಶೆಯಲ್ಲಿದ್ದ ರಾಮಪ್ಪ. ಸಾವಕಾರ್ರ ಸಿದ್ದಪ್ಪನ ಮುಂದೆ.  ಅಲ್ಲೋ ರಾಮಾ!? ನೀ ಹೀಂಗ ದುಡದಿದ್ದ ರೊಕ್ಕ ಎಲ್ಲ ತಗೊಂಡು ಹೋಗಿ ಶೆರೇದ ಅಂಗಡ್ಯಾಗ ಇಟ್ಟರ ನಿನ್ನ ಹೆಂಡ್ತಿ ಮಕ್ಕಳ ಗತಿ ಏನಾಗಬೇಕೋ ಖೋಡಿ? ದಾರು ಕುಡ್ಯೋದು ಬಿಟ್ಟಬಿಡೋ! ಸಾವಕಾರ್ರ ಸಿದ್ದಪ್ಪ ಬುದ್ಧಿವಾದ ಹೇಳುತಿದ್ದ.  ಏನ್ ಮಾಡಲ್ರೀ ಸಾವಕಾರ್ರ ನಂಗ ಕುಡಿಲಿಕ್ಕಂದ್ರ ನಿದ್ದೀನ ಹತ್ತಂಗಿಲ್ಲ. … Read more

ಪುಷ್ಪ: ಈಶ್ವರ ಭಟ್ ಕೆ

ಇತ್ತೀಚೆಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಬರುತ್ತಿರುವ ಸುದ್ಧಿಗಳನ್ನು ನೋಡುತ್ತಾ, ನಿರೀಕ್ಷೆಗೂ ಮೀರಿ ಜಗತ್ತು ಬೆಳೆದರೂ ವಾಹಿನಿಗಳಲ್ಲಿ ಸುದ್ಧಿಯೇ ಆಗದ ಒಂದು ಕತೆಯಿದೆ. ನಮ್ಮೂರಿನ ಪುಷ್ಪಕ್ಕ ದಿನ ಕಳೆದಂತೆ ಜನರಿಗೆ ಅಚ್ಚರಿಯೂ ಜನರ ಅನುಕಂಪಕ್ಕೂ ಕಾರಣಳಾಗಿ ಉಳಿದ ಕತೆ. ಈ ಕತೆ ಹೇಳುವ ನನಗೆ ಆಗ ಹದಿನೇಳು ವಯಸ್ಸು, ಈಗ ಇಪ್ಪತ್ತೆಂಟು. ಈ ಪುಷ್ಪಕ್ಕ ಎನ್ನುವ ನನ್ನ ಕತೆಯ ನಾಯಕಿಯ ಪೂರ್ಣ ಹೆಸರು ಪುಷ್ಪಲತ. ಊರು ಎರಡು ಮೂರು ಬೆಟ್ಟಗಳ ನಡುವಿನ ಗ್ರಾಮ. ವಿಶಾಲವಾದ ಗ್ರಾಮದಲ್ಲಿ ಸುಮಾರು ನಲುವತ್ತು ಮನೆಗಳಷ್ಟೇ. … Read more

ಪಟಾಕಿ: ಸಂತೋಷ್ ಕುಮಾರ್ ಎಲ್. ಎಂ.

ಅದು ಬೃಹದಾಕಾರವಾಗಿ ಬೆಳೆದ ನಗರದ ಮೂಲೆಯಲ್ಲಿ, ಇನ್ನೂ ತಲೆಯೆತ್ತಿ ನಿಲ್ಲಲೂ ಕಷ್ಟಪಡುತ್ತಿರುವ ಒಂದು ಬಡವರ್ಗದವರ ಏರಿಯಾ. ನಾಲ್ಕು ಗಂಟೆಗೆಲ್ಲ ಎದ್ದು ಕೂಲಿಗೆ ಹೊರಡುವ ಶ್ರಮಜೀವಿಗಳು ಮತ್ತೆ ವಾಪಸ್ಸು ಬರುವುದೇ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ.  ಮನೆಯೊಳಗೆ ಅಜ್ಜಿಯ ಕೈತುತ್ತು ತಿಂದು ಮಲಗಿದ ಪುಟ್ಟಿ ದೀಪಳಿಗೆ ನಿದ್ರೆ ಬರುತ್ತಿಲ್ಲ. ಅಜ್ಜಿ ನಾಳೆಯ ದಿನ ದೀಪಾವಳಿ ಅಂತ ಹೇಳಿದ್ದಾಳೆ. ಅಪ್ಪ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾವತ್ತಿಗೂ ಪಟಾಕಿ ತರುವುದನ್ನು ಮರೆತಿಲ್ಲ. ಯಾವುದಕ್ಕೂ ದುಡ್ಡಿಲ್ಲದಿದ್ದರೂ ಪ್ರತೀ ತಿಂಗಳು ಪಟಾಕಿಗೆಂದೇ ಇಂತಿಷ್ಟು ಅಂತ ಒಂದಷ್ಟು … Read more

ಕರಿಮುಗಿಲುಗಳ ನಡುವೆ: ಜಯರಾಮ ಚಾರಿ

"ಬೆಳಕಿನ ವೇಗದಲ್ಲಿ ನೀನಿದ್ದಾಗ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತದೆ; ಅಸಲು ಶೂನ್ಯವೇ ಆಗಿರುತ್ತದೆ" ಯಾವುದೋ ಅನಾಮಧೇಯ ವಿಜ್ಞಾನಿಯ ಈ ವಾಕ್ಯ ನನ್ನೊಳಗೆ ಎನನ್ನೋ ಹುಟ್ಟಿಹಾಕಿರಬೇಕು!. ಇಲ್ಲದಿದ್ದರೆ ಇಷ್ಟೊಂದು ಕಾಡುವ ಅಗತ್ಯವೇನಿತ್ತು? ಈ ಪ್ರವಾಹಭರಿತ 'ಜಲಧಾರಿನಿ' ತುಂಬಿ ಹರಿವಾಗ, ಅದರಲ್ಲಿ ಕೊಚ್ಚಿಹೋಗೋ ಸಾವಿರ ಕಲ್ಮಶಗಳ ನಡುವೆ ಇಂತಹುದೊಂದು ಪ್ರಶ್ನೆ ಯಾಕೆ ನನ್ನ ಕಾಡಬೇಕು? ಅದು ನನ್ನದಲ್ಲದ ಪ್ರಶ್ನೆಗೆ!. ಕರಿಮುಗಿಲಕಾಡು; ಈ ಹೆಸರೇ ವಿಚಿತ್ರತೆರನದು ಕರಿಮುಗಿಲೆಂದರೆ ಕಪ್ಪಾದ ಮುಗಿಲುಗಳು. ಮುಗಿಲುಗಳು ಸೇರಿ ಕಾಡಾದೀತೆ? ಕಾದಾಡಿತಷ್ಟೇ. ಇಂತಹುದೊಂದು ವಿಚಿತ್ರ ಊರಿಗೆ ನಾಗರೀಕತೆ ತುದಿಯಲ್ಲಿರೋ … Read more

ಬೆಳದಿಂಗಳ ಬಾಲೆ: ಸುಬ್ರಹ್ಮಣ್ಯ ಹೆಗಡೆ

೧.           ಪ್ರತೀ ದಿನದಂತೆ, ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು ತಿರುಗಿಸಿದೆ, ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ, ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್ ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳಿದಿದ್ದರೂ. ಪ್ರೀತಿಸಿದ ವ್ಯಕ್ತಿ ಇದ್ದ ಜಾಗ ಎಂಬ ವಿಷಯ ಇದೆಯಲ್ಲಾ, ಅವಳು ನಡೆದ ದಾರಿಯ ಘಮ ಇಲ್ಲೇ ಹಬ್ಬಿದೆ ಎಂಬ ಭ್ರಮಾಭರಿತ ಸೊಗಸು ಮಾತಿನ ಅಗತ್ಯವಿಲ್ಲದೇ, ಕಾಲದೇಶಗಳ ಹಂಗಿಲ್ಲದೇ, ವ್ಯಕ್ತವಾಗುವ … Read more

ತಾನೊಂದು ಬಗೆದರೆ: ಮಮತಾ ಕೀಲಾರ್

ರಾಜೇಶನದು ಸುಂದರ ದಾಂಪತ್ಯ.ಮನ ಮೆಚಿದ್ದ ಮಡದಿ ಸ್ವಾತಿ. ಒಳ್ಳೆಯ ಉದ್ಯೋಗದಿಂದಾಗಿ ಕೈತುಂಬಾ ಸಂಬಳ, ಕಾರು ಬಂಗಲೆ ಎಲ್ಲ ಇದ್ದ ಶ್ರೀಮಂತ ಜೀವನ. ಕೊರತೆಯೊಂದೆ ಮದುವೆಯಾಗಿ ಹತ್ತು ವರುಷ ಕಳೆದರೂ ಅವರ ಹೆಸರು ಹೇಳೋ ವಂಶದ ಕುಡಿ ಮೂಡದಿರುವದು. ಸ್ವಾತಿಗಾದರೋ ಮಕ್ಕಳುಎಂದರೆ ಪಂಚಪ್ರಾಣ. ದಿನಾಲೂ ಸಾಯಂಕಾಲ ತಮ್ಮ ಮನೆಯಿದಿರು ಇರುವ ಉದ್ಯಾನದಲ್ಲಿ ಆಡುವ ಮಕ್ಕಳನ್ನು ಕಿಟಕಿಯಿಂದ ಗಂಟೆಗಟ್ಟಲೇ ನೋಡುತ್ತಾ ಮೈಮರೆಯುತ್ತಿದ್ದಳು. ಆದರೂ ರಾಜೇಶನ ಮನಸ್ಸಿಗೆ ಬೇಸರವಾಗಬಾರದೆಂದು ತನ್ನ ನೋವನ್ನು ಅಡಗಿಸಿ ಸತ್ತ ನಗುವಿಗೆ ಜೀವತುಂಬೊ ಪ್ರಯತ್ನ ಮಾಡುತ್ತಿದ್ದಳು. ಮಡದಿಯನ್ನು … Read more

ಘಾತ: ಬೆಳ್ಳಾಲ ಗೋಪಿನಾಥ ರಾವ್

  ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.   ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.   ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,   "ಹೌದು ಮಂಜು ಕೊಟ್ಟ ಸಂಜೆ, ಅದನ್ನು ಓದಿದೆ, . ಅದು ನಿಮ್ಮ ಕಾಲೊನಿಯ ಮುನ್ನೂರು ಭವನಗಳ ಸಮುಚ್ಚಯ ( ಫ್ಲಾಟ್ ಗಳ) ವಾರ್ಷಿಕ ದುರಸ್ತಿ ಮತ್ತು ಸುಣ್ಣ ಬಣ್ಣಗಳ ಕಾರ್ಯಗಳ ಹತ್ತು ಲಕ್ಷದ ಕಾಂಟ್ರಾಕ್ಟ್ ಎಗ್ರಿಮೆಂಟ್ … Read more

ಈ ಬಾಳ ಪುಟಗಳಲ್ಲಿ ಭಾಮಿನಿ: ಉಮೇಶ್ ದೇಸಾಯಿ

ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆ ಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯ ಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನ ಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪ ಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆ ಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜು ಸ್ವಲ್ಪ ಅತಿ ಅನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದಾಗಲೇ ಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು. ಪಡಸಾಲೆಯಲ್ಲಿ ಕುಳಿತ ಅವನ ಮುಂದೆ ಹಾದೇ ಅಡಿಗೆ ಮನೆಗೆ ಹೋಗಬೇಕು. ನನ್ನ ನೋಡಿದವನೋ ಇಲ್ಲವೋ ಗೊತ್ತಾಗಲಿಲ್ಲ. ಹರಟೆ ಜೋರಾಗಿತ್ತು. ಗಮನಿಸಿರಲಿಕ್ಕಿಲ್ಲ … Read more

ನಿರಂತರತೆಯಲಿ ನಾನೊಂದು…?:ಅವಿನಾಶ್ ಸೂರ್ಯ

ಕೆಲವೇ ಕ್ಷಣದಲ್ಲಿ ಸೂರ್ಯ ಪ್ರತಿ ದಿನದ ಮುಕ್ತಾಯಕ್ಕೆ ಪೂರ್ಣ ವಿರಾಮ ತೆಗೆದುಕೊಳ್ಳುವ ಸಮಯ. ಬೆಳಕು ತನ್ನ ಅಸ್ತಿತ್ವ ಕಳೆದುಕೊಂಡು ಕತ್ತಲೆಯಲ್ಲಿ ಮರೆಯಾಗುವ ವೇಳೆಗೆ, ಮನಸಿನ ಮೂಲೆಯಲ್ಲಿ ಕುಳಿತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು! ಪ್ರಶ್ನೆಗೆ ಉತ್ತರ ಸಿಗುವುದೋ ಇಲ್ಲವೋ? ಇಲ್ಲ ಶಾಶ್ವತವಾಗಿ ಕಾಲದ ಅನಂತತೆಯ ಪಥದಲ್ಲಿ ಎಲ್ಲವೂ ಬದಲಾಗುವುದೋ ಇಲ್ಲವೋ ತಿಳಿಯದು. ಯಾವುದಕ್ಕೂ ಇಲ್ಲಿ ಉತ್ತರ ಪ್ರಶ್ನೆಗಳಿಲ್ಲ. ಅಂದ ಹಾಗೆ ನನ್ನನ್ನು ಪರಿಚಯ ಮಾಡಿಕೊಳ್ಳುವ ವಿಷಯವೇ ಮರೆಯಿತು ನೋಡಿ, ಮಹಾನಗರದ ಒಂದು ಉದ್ಯಾನದಲ್ಲಿ ನಾನೊಂದು ಕುರ್ಚಿ. ಏನಪ್ಪಾ ಕುರ್ಚಿಯದೇನು … Read more

ಸಾವಿತ್ರಿ: ಡಾ. ಗವಿಸ್ವಾಮಿ

            ಅದು ಎರಡಂಕಣದ ಗುಡಿಸಲು. ಅಲ್ಲಲಿ ಸುಣ್ಣದ ಚಕ್ಕೆಎಡೆದು  ಕೆಂಪಗೆ ಗಾಯಗೊಂಡಂತೆ ಕಾಣುತ್ತಿದೆ. ಛಾವಣಿಯ ಗರಿಗಳು ಮಳೆ-ಬಿಸಿಲಿನ   ಹೊಡೆತಕ್ಕೆ ಜೀರ್ಣವಾಗಿ ಬೂದಿ ಬಣ್ಣಕ್ಕೆ ತಿರುಗಿದೆ. ಒಂದು ಕೆಂಚಬೆಕ್ಕು ಛಂಗನೆ ಛಾವಣಿ  ಮೇಲೆ ನೆಗೆಯಿತು. ಅದು ನೆಗೆದು ಕೂತ ರಭಸಕ್ಕೆ ಛಾವಣಿ ಮೇಲೆ ಜಲಿಜಿಲಿಜಲಿಜಲಿ ಅಂತಾ ಸದ್ದಾಯಿತು. ''ತತ್ತದ ಇಲ್ಲಿ ಇಟ್ಟನ್ದೊಣ್ಯಾ, ಮನಗಸ್ಬುಡ್ತಿನಿ ಒಂದೇ ಏಟ್ಗಾ.. ಇಲ್ಲ್ಯಾರ್ ಆಟ್ ಇದ್ದದು ಅಂತ್ಯಾಕಣಿ ಗಳ್ಗಸೊತು ಬಂದದು'' ಎಂದು ಬೈಯುತ್ತಾ ಕಾಳಮ್ಮ ಗುಡಿಸಿಲಿನಿಂದ … Read more

ನನ್ನದಲ್ಲ…?: ಜಯರಾಮ ಚಾರಿ

 ಹಾಳು ಜಯಂತ ಮತ್ತೆ ಕಾಣೆಯಾಗಿದ್ದಾನೆ. ಆತನಿಗೆ ಕಾಣೆಯಾಗುವ ಕಾಯಿಲೆ ಹೊಕ್ಕಿಬಿಟ್ಟಿದೆ ಇತ್ತೀಚೆಗೆ. ಇದು ನಾಲ್ಕನೇ ಬಾರಿ ಕಾಣೆಯಾಗುತ್ತಿರುವುದು. ಅವನ ಅಮ್ಮ ದಿಗಿಲಾಗಿದ್ದಾಳೆ. ಆಕೆಗೊಂದು ಸಾಂತ್ವನ ಹೇಳಿ ಬರುವಾಗ ಆತನ ಸ್ಟಡಿ ಟೇಬಲ್ ಮೇಲಿನ ಬಿಳಿಹಾಳೆಗಳ ಗೊಂಚಲೊಂದು ಸಿಕ್ಕಿದೆ. ಅದಕ್ಕೆ "ನನ್ನದಲ್ಲ" ಎಂಬ ಶೀರ್ಷಿಕೆಯಿದೆ. ಅದನ್ನು ಅಲ್ಲಿಯೇ ಓದದೇ ರೂಮಿಗೆ ಬಂದು ಓದಲು ಬಿಚ್ಚಿದರೆ ಅದೊಂದು ಕತೆ. ಒಬ್ಬ ಕತೆಗಾರನ ಕತೆಯಲ್ಲಿ ಆತ ಹೊಕ್ಕುವುದು ತೀರ ಸಾಮಾನ್ಯ. ಅವನು ಬಾರದಿದ್ದರೂ ಆತನ ಜಂಭ,ಸ್ವಾರ್ಥ,ದಿಗಿಲು,ದ್ವಂದ್ವ,ಹುಚ್ಚು ಆದರ್ಶಗಳು, ಅವನ ಸ್ನೇಹಿತರು, ಆತನನ್ನು … Read more

‘ಯಂತಿಲ್ಲೆ’:ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕದಿಂದೊಂದು ಕತೆ

ಹಾಸ್ಯಪ್ರಿಯ ಓದುಗರಿಗೆ ಹಿರಿಯ ಸಾಹಿತಿ ಸೂರಿ ಹಾರ್ದಳ್ಳಿ  (ಸೂರ್ಯನಾರಾಯಣ ಕೆದಿಲಾಯ ಎಚ್) ಅವರು ಚಿರಪರಿಚಿತ. ಹಾಸ್ಯವಷ್ಟೇ ಅಲ್ಲ ಕತೆ, ಕಾದಂಬರಿ, ಟಿ.ವಿ.ಧಾರಾವಾಹಿಗಳ ಸಂಭಾಷಣೆ ಹೀಗೆ ಸದಾ ಕ್ರಿಯಾಶೀಲರಾದ ಇವರು ಈವರೆಗೆ ತ್ರಸ್ತ, ವಧುಪರೀಕ್ಷೆ (ಕಥಾಸಂಕಲನ); ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ (ಕಾದಂಬರಿ); ಬಾಸನ್ನಿಬಾಯ್ಸೋದ್ಹೇಗೆ?(ಹಾಸ್ಯನಾಟಕ); ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ(ಹಾಸ್ಯ ಸಂಕಲನಗಳು) ಮೊದಲಾದ ಸಮೃದ್ದ ಸಾಹಿತ್ಯವನ್ನ ಓದುಗರಿಗೆ ನೀಡಿದ್ದಾರೆ.  ಪ್ರಕಾಶ ಸಾಹಿತ್ಯ ಪ್ರಕಟಿಸಿರುವ ಸೂರಿ ಹಾರ್ದಳ್ಳಿ ಅವರ ಹೊಸ ಪುಸ್ತಕ 'ಸೊಂಡಿಲೇಶ್ವರ'ದಿಂದ ಆಯ್ದ … Read more

ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ

ನೂರೆಂಟು ತೂತು ಬಿದ್ದು ಹರಿದ ಬನಿಯನ್ ಹಾಕಿಕೊಂಡು, ಕಿತ್ತು ಹೋದ ಹವಾಯಿ ಚಪ್ಪಲಿಗೆ ಪಿನ್ನು ಹಾಕುತ್ತ, ಮನೆಯ ಅಂಗಳದಲ್ಲಿ ಕೂತಿದ್ದ ಬಳೆಗಾರ ಶಿವಪ್ಪನಿಗೆ ಕುಂಟ್ಲಿಂಗ ಒಂದೇ ಉಸಿರಿನಲ್ಲಿ ಕುಂಟಿಕೊಂಡು ತನ್ನತ್ತ  ಓಡಿ ಬರುವುದನ್ನು  ಕಂಡೊಡನೆ ಮನಸಿಗೆ  ಗಲಿಬಿಲಿಯಾಯಿತು. ಎದೆ ಉಸಿರು ಬಿಡುತ್ತ ನಿಂತ ಕುಂಟ ಲಿಂಗನನ್ನು ಎದ್ದು ನಿಂತು ಏನಾಯ್ತೋ ಕುಂಟ್ಯ ಹಿಂಗ್ಯಾಕ್ ಓಡಿ ಬಂದಿ ? ಎನ್ನುವಷ್ಟರಲ್ಲಿ ಸರೋಜಳ ಸಾವಿನ ವಿಷಯವನ್ನು ಸರಾಗವಾಗಿ ಕುಂಟ ಲಿಂಗ ಒದರಿಬಿಟ್ಟ, ಇದನೆಲ್ಲ ಕೇಳುತ್ತಾ ಕುಸಿದು ಬೀಳುವಷ್ಟು ನಿಶ್ಯಕ್ತನಾದರು ತಡ ಮಾಡದೆ ಉಕ್ಕಿ ಬರುವ ದುಃಖವನ್ನು ನುಂಗಿ ಇವ ಹೇಳಿದ್ದೆಲ್ಲಾ ಸುಳ್ಳಾಗಲಿ ಎಂದು ಇದ್ದ ಬದ್ದ ದೇವರನೆಲ್ಲ ನೆನಪಿಸಿಕೊಳ್ಳುತ್ತಾ … Read more

ಶಿಫಾರಸು: ಜೆ.ವಿ.ಕಾರ್ಲೊ ಅನುವಾದಿಸಿರುವ ರಶ್ಯನ್ ಕತೆ

  ಜಿಲ್ಲಾ ಪ್ರಾಥಮಿಕ ಶಾಲೆಗಳ ನಿರ್ದೇಶಕರಾದ ಮಾನ್ಯ ಫ್ಯೋಡೊರ್ ಪೆಟ್ರೊವಿಚ್ ತಾವು ನ್ಯಾಯ-ನೀತಿಯ ಮನುಷ್ಯರೆಂದು ಭಾವಿಸಿದ್ದರು. ಅದೊಂದು ದಿನ ಅವರ ಕಛೇರಿಯೊಳಗೆ ಒಂದು ಕುರ್ಚಿಯ ಅಂಚಿನಲ್ಲಿ ಮುಳ್ಳು ಕಂಟಿಗಳ ಮೇಲೆಂಬಂತೆ ರೆಮೆನಿಸ್ಕಿ ಎಂಬ ಹೆಸರಿನ ಶಿಕ್ಷಕರೊಬ್ಬರು ಆಸೀನರಾಗಿದ್ದರು. ಅವರು ತೀರ ಉದ್ವಿಘ್ನ ಮನಸ್ಥಿತಿಯಲ್ಲಿದ್ದರು. “ಕ್ಷಮಿಸು, ರೆಮೆನಿಸ್ಕಿ.” ಫ್ಯೋಡೊರ್ ಪೆಟ್ರೊವಿಚ್ ಕತ್ತೆತ್ತುತ್ತಾ ದುಃಖತಪ್ತ ಸ್ವರದಲ್ಲಿ ಹೇಳಿದರು. “ನಿನಗೆ ನಿವೃತ್ತನಾಗದೆ ಬೇರೆ ದಾರಿಯೇ ಇಲ್ಲ. ನಿನಗೆ ಸ್ವರವೇ ಇಲ್ಲ! ನೀನು ಪಾಠ ಮಾಡುವುದಾದರೂ ಹೇಗೆ? ನನಗೆ ಅರ್ಥವಾಗುತ್ತಿಲ್ಲ. ಒಮ್ಮೆಲೇ ನಿನ್ನ … Read more

ದ್ವಂದ್ವ:ಸಂಯುಕ್ತಾ ಪುಲಿಗಲ್ ಬರೆದ ಸಣ್ಣಕತೆ

“ವಾಟ್ ಅಬೌಟ್ ಯುವರ್ ಪ್ರೋಪೋಸಲ್ಸ್ ಯಾ?”, ಡಬ್ಬಿಯಲ್ಲಿನ ಚಿತ್ರಾನ್ನದ ಸಾಸಿವೆ ಕಾಳನ್ನು ಸ್ಪೂನಿಂದ ಕೆದಕುತ್ತಾ ಕುಳಿತಿದ್ದ ಪೂರ್ಣಿಗೆ ತನ್ನ ಸಹೋದ್ಯೋಗಿ ನಿರ್ಮಲ ಕೇಳಿದ ಪ್ರಶ್ನೆ. ನಿರ್ಮಲ ತನ್ನ ಬಾಳಿನ ಸಾಕಷ್ಟು ಸಿಕ್ಕುಗಳನ್ನು ಈಗಾಗಲೇ ಬಿಡಿಸಿಕೊಂಡು ತಕ್ಕಮಟ್ಟಿಗೆ ನೆಮ್ಮದಿಯ ಬದುಕು ಸಾಗಿಸುತ್ತಿರುವವಳು. ತಮಿಳುನಾಡಿನಿಂದ ಬಂದ ಈಕೆಯದು ಒಟ್ಟು ಕುಟುಂಬ, ಶಾಲೆ ಕಲಿಯುವ ಮಗ, ಈಗೊಮ್ಮೆ ಆಗೊಮ್ಮೆ ಕರೆಮಾಡುವ ಯಜಮಾನ. ಇದು ನಿರ್ಮಲಳ ಪ್ರಪಂಚ. ಸ್ವಲ್ಪ ಮುಂಗೊಪಿಯಾಗಿದ್ದರೂ ಪೂರ್ಣಿಗಿವಳು ಒಳ್ಳೆಯ ಸಹೋದ್ಯೋಗಿ. ನಿರ್ಮಲಳ ಪ್ರಶ್ನೆಗೆ ಪೂರ್ಣಿ ಉತ್ತರಿಸುವಷ್ಟರಲ್ಲೇ ತನ್ನ ಹೊಳಪಿನ … Read more

ಶಾಪ (ಕೊನೆಯ ಭಾಗ):ಪಾರ್ಥಸಾರಥಿ ಎನ್.

ನೋಡಿದರೆ ಖಾಲಿ ಜಾಗ, ಎದುರು ರಾಮಕೃಷ್ಣಯ್ಯ ಹಾಗು  ಅವರ ಪತ್ನಿ ಜಾನಕಿ ನಿಂತಿದ್ದರು, ಅವರ ಎರಡು ವರ್ಷದ ಮಗು  ಅಲ್ಲೆಲ್ಲ ಓಡಿಯಾಡುತ್ತ ಆಡಿಕೊಳ್ಳುತ್ತಿತ್ತು. “ನೋಡು  ಈ ಸೈಟ್ ನಮ್ಮದಾಗುವ ಹೊತ್ತಿಗೆ ಸಾಕು ಸಾಕಾಯಿತು, ಎಂತ ಕಾಲ ಬಂದಿತು, ನನ್ನಿಂದ ಅಡ್ವಾನ್ಸ್ ಹಣವನ್ನು ಪಡೆದ   ಅ ದಲ್ಲಾಳಿ ನಂತರ ಸೈಟ್ ಬೇರೆ ಯಾರಿಗೊ ಆಗಿದೆ ಅನ್ನುತ್ತಾನಲ್ಲ, ಹಾಗೆಂದು ಇಲ್ಲಿ ಸೈಟ್ಗಳಿಗೆ ಅಂತಾ ಬೆಲೆ ಏನು ಇಲ್ಲ, ನಮ್ಮ ಹತ್ತಿರ ನಾಟಕವಾಡಿ ಸೈಟಿನ ಬೆಲೆ ಏರಿಸಲು ಪ್ರಯತ್ನಿಸಿದ, ಹೇಗೊ … Read more

ಶಾಪ (ಭಾಗ-2):ಪಾರ್ಥಸಾರಥಿ ಎನ್.

[ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ] ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೋ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.   ಒಳಗೆ ಬರುವಾಗಲೇ, "ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ, ನಿಮಗೆ ತೊಂದರೆಯಾಯಿತು ಅನ್ನಿಸುತ್ತೆ" ಅಂದವನು ಅಲ್ಲೆ ಕುಳಿತಿದ್ದ ಅವನ ಮಗನತ್ತ, ಅವನ ಅಮ್ಮನತ್ತ, ನನ್ನತ್ತ ನೋಡಿ, "ಇವನ ಹತ್ತಿರ ಮಾತನಾಡುತ್ತಿದ್ದಿರಾ, ನಿಮಗೆ ಏನು ಬೇಸರವಾಗಲಿಲ್ಲ ತಾನೆ?" ಅಂದನು ಆತಂಕದಿಂದ. ನಾನು ನಕ್ಕುಬಿಟ್ಟೆ. "ಬನ್ನಿ ಕುಳಿತುಕೊಳ್ಳಿ, ಯಾವ ಆತಂಕವು ಬೇಡ, ನನಗೆ ಯಾವ ಬೇಸರವು ಇಲ್ಲ, … Read more