ಚೊಕ್ಕ ಕತೆಗಳು: ಮಾಧವ ಡೋಂಗ್ರೆ

1.ಸಂಸಾರ ಆತ ಸ್ಥಿತಪ್ರಜ್ಞ. ಆಕೆ ಚಂಚಲೆ. ಆದರೂ ಅವರದು ಬಿಡಲಾರದ ಅನುಬಂಧ.  ಆಕೆ ಆತನನ್ನು ಖುಶಿಪಡಿಸಲು ದಿನವೂ ಆತನಲ್ಲಿ ಬಂದು ಅವನಲ್ಲಿ ಸೇರುತ್ತಾಳೆ. ಆದರೆ ಕೆಲವೊಮ್ಮೆ ನಿತ್ರಾಣಳಾಗಿ ನಡುದಾರಿಯಲ್ಲೆ ಬಿದ್ದುಹೋಗುತ್ತಾಳೆ. ಅವನಾದರೋ ಇದ್ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿದ್ದು ತನ್ನ ತಪಸ್ಸನ್ನಾಚರಿಸುತ್ತಾನೆ. ಇನ್ನೊಂದು ಆಯಾಮದಲ್ಲಿ ಆತ ಆಕೆಗಾಗಿ ಕ್ಷಣಕ್ಷಣವೂ ಹಾತೊರೆಯುತ್ತಿರುತ್ತಾನೆ. ಆಕೆಯ ಬರುವಿಕೆ ಗೊತ್ತಿದ್ದರೂ ಸುಮ್ಮನೆ ಮುನಿಸಿಕೊಳ್ಳುತ್ತಾನೆ. ಆದರೆ ಆಕೆ ಬಂದರೂ, ಬರದಿದ್ದರೂ ಅವರಿಬ್ಬರ ಮಕ್ಕಳನ್ನು ಜೊಪಾನವಾಗಿ ನೋಡಿಕೊಂಡು, ರಾತ್ರಿಯಾದಂತೆ ಮಕ್ಕಳನ್ನು ಮಲಗಿಸಿ ಅವಳಿಗೊಸ್ಕರ ಕಾಯತೊಡಗುತ್ತಾನೆ. ಆತನ ಹೆಸರು … Read more

ತಿರಸ್ಕಾರ (ಭಾಗ 2): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) … ಹುಡುಗಿ ಅವನಿಗೆ ಒಂದು ಮುತ್ತು ಕೊಟ್ಟಿದ್ದರೆ ಅವನು ಸುಮ್ಮನೇ ಹೊರಟುಹೋಗಿ ಈ ಅನಾಹುತ ಜರುಗುತ್ತಿರಲಿಲ್ಲವೇನೋ? ನೆಲಕ್ಕುರುಳಿದ್ದ ರೈತನ ಮೇಲೆ ಅವನ ದೃಷ್ಟಿ ಹರಿದು ಅವನಿಗೆ ನಗು ಬಂದಿತು. ಹಾಗೆಯೇ ಹೆಂಗಸಿನೆಡೆಗೆ ನೋಡಿದಾಗ ಅವಳಿನ್ನೂ ಕಂಪಿಸುತ್ತಿದ್ದಳು. ಹುಡುಗಿಯ ನಂತರ ತನ್ನ ಸರದಿ ಎಂದು ಅವಳು ಭಾವಿಸಿರಬೇಕು! ಯಾಕೆ ಹೆಂಗ್ಸೇ ಅಳ್ತಾ ಇದ್ದೀಯಾ? ಇದು ಇವತ್ತಲ್ಲ ನಾಳೆ ಜರುಗಲೇ ಬೇಕಿತ್ತು. ಅವನು ಹಿಂಬದಿಯ ಜೇಬಿನಿಂದ ಪರ್ಸನ್ನು ಹೊರತೆಗೆದು, ತೆಗೋ ಇದರಲ್ಲಿ ನೂರು ಫ್ರಾಂಕುಗಳಿವೆ. ನಿನ್ನ ಮಗಳಿಗೊಂದು ಡ್ರೆಸ್ … Read more

ತಿರಸ್ಕಾರ (ಭಾಗ 1): ಜೆ.ವಿ.ಕಾರ್ಲೊ, ಹಾಸನ

ಮೂಲ: ಡಬ್ಲ್ಯು. ಸಾಮರ್ಸೆಟ್ ಮ್ಹಾಮ್. ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ (ಬ್ರಿಟಿಶ್ ಲೇಖಕ ಡಬ್ಲ್ಯು. ಸಾಮರ್ಸೆಟ್ ಮ್ಹಾಮ್ (೧೮೭೪-೧೯೬೫) ಹುಟ್ಟಿದ್ದು ಪ್ಯಾರಿಸಿನಲ್ಲಿ. ತನ್ನ ಕುಟುಂಬದ ಸಂಪ್ರದಾಯದಂತೆ ಅವನು ವೃತ್ತಿಯಲ್ಲಿ ವಕೀಲನಾಗಬೇಕಿತ್ತು. ಹುಟ್ಟಿನಿಂದಲೇ ತೊದಲುವಿಕೆಯ ಕಾರಣಗಳಿಂದ ಅವನು ವಕೀಲನಾಗಲಿಲ್ಲ. ಹತ್ತು ವರ್ಷಗಳಲ್ಲೇ ಅನಾಥನಾದ್ದರಿಂದ ಅವನನ್ನು ಅವನ ಚಿಕ್ಕಪ್ಪ ಇಂಗ್ಲೆಂಡಿನಲ್ಲಿ ಸಾಕಿದರು. ಅವನು ಕಲಿತದ್ದು ವೈಧ್ಯ ಶಿಕ್ಷಣವಾದರೂ ಅವನ ಆಸಕ್ತಿ ಸಾಹಿತ್ಯದಲ್ಲಿತ್ತು. ಲೇಖಕನಾಗಿ ಹೆಸರು, ಹಣ ಗಳಿಸಲು ಅವನಿಗೆ ಬಹಳಷ್ಟು ವರ್ಷಗಳೇ ಹಿಡಿದವು. ಕಾದಂಬರಿಕಾರನಾಗಿ, ಸಣ್ಣ ಕತೆಗಾರನಾಗಿ ಹೆಸರುಗಳಿಸುವ ಮೊದಲು ಅವನು … Read more

ಒಂದು ಹನಿ ಕಣ್ಣೀರು: ಪಾರ್ಥಸಾರಥಿ ಎನ್

ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ. ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ, "ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ … Read more

ಪತ್ರ: ಗಣೇಶ್ ಖರೆ

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು… ಹಲ್ಲೋ ಸರ್… ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ … Read more

ನನಗೂ ನಿನಗೂ ಅಂಟಿದ ನಂಟಿನ: ಪ್ರವೀಣ

ಆತ ಮರೆತುಹೋದಾಗಲೆಲ್ಲ ಆಕೆ ನೆನಪು ಮಾಡಿಕೊಡುತ್ತಾಳೆ.  ಅದು ಬಾನು, ಇದು ಭುವಿ, ಅವ ಚಂದ್ರ, ಇವ ರವಿ, ಇದು ಇರುವೆ ಸಾಲು, ಅದು ಕುಡಿಯುವ ಹಾಲು. ಆ ದಿನ ರೈಲಿನಲ್ಲಿ ಅವಳು ಎಲ್ಲೋ ಪ್ರಯಾಣಿಸುವಾಗ ಆತ ಮೊದಲ ಬಾರಿಗೆ ಕಂಡಿದ್ದ.  ಕೊಳಕು ಅರಿವೆ, ಜಿಡ್ಡುಗಟ್ಟಿದ ಕೂದಲು, ಮಹಾ ದುರ್ಗಂಧ ಸೂಸುತ್ತ ಬಾಗಿಲ ಬಳಿ ಮುದುಡಿ ಕುಳಿತಿದ್ದ.  ಆತ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರಿಂದ ಅವಳು ಬೆದರಿ, ಬೇರೆಡೆ ದೃಷ್ಟಿ ತಿರುಗಿಸಿ ಬಾತರೂಮು ಹೊಕ್ಕು ಹೊರಬಂದಳು.  ವಾಪಸು ಬರುವಾಗ … Read more

ಏಟುತಿಂದ ಕೈಗಳಿಗೆ ಬಹುಮಾನ ಇಟ್ಟ ಕೈಗಳು: ತಿರುಪತಿ ಭಂಗಿ

        ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ  ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ  ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು  ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು.  ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ … Read more

ಹೆತ್ತ ಕರುಳು-ತಾಯ್ತನ-ಮಮತೆ: ಕೃಷ್ಣವೇಣಿ ಕಿದೂರು

ಸುಬ್ಬಕ್ಕ ಮಿಲಿಟರಿಯಲ್ಲಿದ್ದ ಮಗನಿಗೆ ಮದುವೆ ಮಾಡಿದರೂ ಸೊಸೆಯನ್ನು ಮಗನೊಂದಿಗೆ ಕಳಿಸಲೇ ಇಲ್ಲ. ವರ್ಷಕ್ಕೊಮ್ಮೆ ಎರಡು ತಿಂಗಳ ರಜಾದಲ್ಲಿ ಆತ ಬಂದಾಗ ಅವಳಿಗೆ ಗಂಡನ ದರ್ಶನ. ಅವನಿಗೂ ಅಮ್ಮ ಹೇಳುವುದರಲ್ಲಿ ತಪ್ಪೇನಿಲ್ಲವೆನಿಸುತ್ತಿತ್ತು. ಮುದುಕರು, ಇಬ್ಬರೇ ಇದ್ದಾರೆ; ಕೂಗಿ ಕರೆದರೆ ಓಗೊಡಲು ಸೊಸೆ ಇರಲಿ ಎಂದರೆ ತಪ್ಪೇನು? ರಜಾದಲ್ಲಿ ಮಗ ಬಂದರೂ ಸುಬ್ಬಕ್ಕನ ಒಂದು ಕಿವಿ ಇವರತ್ತಲೇ ಇರುತ್ತಿತ್ತು. ಸೊಸೆ ಮಗನ ಕಿವಿ ಊದಿ ಕರೆದುಕೊಂಡು ಹೋಗಲು ಹಟ ಹಿಡಿದರೆ ಎಂಬ ಭೀತಿ,  ಅವರಿಬ್ಬರನ್ನು ಹತ್ತಿರವಾಗಲು ಬಿಡದಂತೆ ಕಾಯುವಂತೆ ಮಾಡಿತ್ತು. … Read more

ಸುಳಿವ ಗಾಳಿಯ ಶಬ್ದ ಹಿಡಿದು: ನಾಗರಾಜ್ ಹರಪನಹಳ್ಳಿ

‘ನಮಸ್ತೆ’ ಅವಳು ‘ಎಫ್ ಬಿ’ ಯಲ್ಲಿ ಕಳಿಸಿದ ಮೊದಲ ಶಬ್ದ ಸಂದೇಶವಿದು. ನಾನು ಕುತೂಹಲದಿಂದಲೇ ಪ್ರತಿಕ್ರಿಯಿಸಿದೆ ಕೊಂಚ ಉತ್ಸುಕನಾಗಿ. ‘ಹಾಯ್ ’ ‘ಥ್ಯಾಂಕ್ಸ ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ’ ‘ ನನ್ನ ಫ್ರೆಂಡ್ ಪೋಟೋ ಒಂದಕ್ಕೆ ನಾನು ಕಮೆಂಟ್ ಹಾಕಿದ್ದು ನಿಮಗೆ ಇಷ್ಟವಾಗಿ, ನೀವು ಲೈಕ್ ಒತ್ತಿದ್ದಿರಿ. ನಾನು ಕುತೂಹಲದಿಂದ ನಿಮ್ಮನ್ನ ಪರಿಚಯ ಮಾಡಿಕೊಳ್ಳಕ್ಕೆ ಮುಂದಾದೆ ನೋಡಿ. ಹಾಗಾಗಿ ಈ ಗೆಳೆತನ ಅಂದೆ.  ‘ಅವರು ನಿಮಗೆ ಗೊತ್ತಾ’ ಅಂತ ಅವಳು ಕೇಳಿದ್ಲು. ‘ತೀರಾ ಪರಿಚಿತರೇನಲ್ಲ. ಎಫ್ … Read more

ಸಂಸಾರ ಸಾರ: ಮಂಜು ಹಿಚ್ಕಡ್

ಟಕ್, ಟಕ್, ಟಕ್ ಎಂದು ಕೇಳಿ ಬರುವ ಜನರ ಹೆಜ್ಜೆಗಳ ಸಪ್ಪಳ. ಗುಂಯ್, ಗುಂಯ್, ಗುಂಯ್ ಎಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಶಬ್ಧ. ಆಗೊಮ್ಮೆ ಈಗೊಮ್ಮೆ ಕೊಂಯ್, ಕೊಂಯ್, ಕೊಂಯ್ ಎಂದು ಕೇಳಿ ಬರುತ್ತಿದ್ದ ಅಂಬ್ಯೂಲನ್ಸ್ ಸಪ್ಪಳ. ಅಲ್ಲಲ್ಲಿ ಆಗಾಗ ಕೇಳಿ ಬರುತ್ತಿದ್ದ ಜನರ ಪಿಸುಮಾತುಗಳು. ಒಮ್ಮೊಮ್ಮೆ ಅಲ್ಲೊಬ್ಬರು, ಇಲ್ಲೊಬ್ಬರು ಅಳುವ ಸಪ್ಪಳ. ಇವೆಲ್ಲಾ ಆಗಾಗ ಕೇಳಿ ಬರುತ್ತಲೇ ಇದ್ದುದರಿಂದ ಇಂದಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕೆಂದುಕೊಂಡು ಮಲಗಿದ ಸುಮಾಳಿಗೆ ನಿದ್ದೇನೆ ಹತ್ತಿರ ಸುಳಿಯುತ್ತಿರಲಿಲ್ಲ. ತಾನು ಮಲಗಿ … Read more

ಎಲ್ಲೋ ಹುಡುಕಿದೆ ಇಲ್ಲದ ದೇವರ: ಹನುಮಂತ ಹಾಲಿಗೇರಿ ಬರೆದ ಕತೆ

ಊರಾಗ ಸಿಕ್ಕಾಪಟ್ಟಿ ಮಳೆಯಾಗಿ ಎಲ್ಲ ಮನೆ ಬಿದ್ದಾವು. ನಮ್ಮ ಮನಿನೂ ಸೊರಾಕ ಹತೈತಿ. ಈ ಸಲ ಊರಿಗೆ ಬಂದು ಹೋಗಪಾ ಎಂದು ಅವ್ವ ಹೇಳಿದ್ದು ನೆನಪಾಗಿ ಈ ಸಲ ಹಬ್ಬದ ಸೂಟಿ ಉಪಯೋಗ ಮಾಡಿಕೊಳ್ಳುವುದಕ್ಕೋಸ್ಕರವಾದರೂ ಊರಿಗೆ ಹೋಗಲೇ ಬೇಕೆನಿಸಿದ್ದರಿಂದ ರಾತ್ರಿ ಕೆಲಸ ಮುಗಿದ ಮೇಲೆ ನೇರವಾಗಿ ರೂಮಿಗೆ ಹೋಗಿ ಒಂದೆರಡು ಪ್ಯಾಂಟು-ಶರಟುಗಳನ್ನು ಬ್ಯಾಗಿಗೆ ತುರುಕಿಕೊಂಡು ಬಸ್ಸು ಹತ್ತಿದೆ.  ಬೆಳಗ್ಗೆ ಬಸ್ ಇಳಿದಾಗ ಬಸ್ ನಿಲ್ದಾಣದ ಛಾವಣಿಯೊಳಗ ಮತ್ತು ರಡ್ಡೆರ ಕಾಂಪ್ಲೆಕ್ಸ್‌ನೊಳಗ ಊರ ಜನ ಅನ್ನ ಬೇಯಿಸಿಕೊಳ್ಳುತ್ತಿದ್ದುದು ಕಂಡು … Read more

ಹುಲಿಯೋ, ಸುಂದರಾಂಗಿಯೋ?: ಜೆ.ವಿ.ಕಾರ್ಲೊ

ಹುಲಿಯೋ, ಸುಂದರಾಂಗಿಯೋ? ಮೂಲ: ಫ್ರ್ಯಾಂಕ್ ಸ್ಟೊಕ್ಟನ್ ಅನುವಾದ: ಜೆ.ವಿ.ಕಾರ್ಲೊ ಬಹಳ ಬಹಳ ವರ್ಷಗಳ ಹಿಂದೆ ಒಬ್ಬ ರಾಜ ರಾಜ್ಯವನ್ನಾಳುತ್ತಿದ್ದ. ತನ್ನ ನೆರೆಯ ಲ್ಯಾಟಿನ್ ಸಾಮ್ರಾಜ್ಯದ ಪ್ರಭಾವದಿಂದಾಗಿ ಅವನು ತೋರಿಕೆಗೆ ನಾಗರಿಕನಾಗಿ ಕಾಣುತ್ತಿದ್ದನಾದರೂ, ಮೂಲತಃ ತುಂಬಾ ಕ್ರೂರಿಯಾಗಿದ್ದ, ಚಂಚಲ ಸ್ವಭಾವದವನಾಗಿದ್ದ. ಯಾವ ಗಳಿಗೆಯಲ್ಲಿ ಅವನ ಯೋಚನೆಗಳು ಹೇಗೆ ತಿರುಗುತ್ತವೆಂದು ಊಹಿಸಲು ಯಾರಿಗೂ ಸಾಧ್ಯವಿರಲಿಲ್ಲ. ಅವನೇ ಅವನ ಆಪ್ತ ಸಲಹಾಕಾರನಾಗಿದ್ದ ಮತ್ತು ಆ ಗಳಿಗೆಯಲ್ಲೇ ತೀರ್ಮಾನಿಸಿ ಜಾರಿಗೊಳಿಸುತ್ತಿದ್ದ. ಅವನ ರಾಜ್ಯಭಾರ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸರಾಗವಾಗಿ ನಡೆಯುತ್ತಿದ್ದರೆ ಅವನು ತುಂಬಾ … Read more

ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ

೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು.   ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ … Read more

ತಿಮ್ಮನ ಹುಚ್ಚು!: ಮಂಜು ಹಿಚ್ಕಡ್

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ … Read more

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨): ಗುರುಪ್ರಸಾದ ಕುರ್ತಕೋಟಿ

ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ … Read more

ಗಲಭೆ: ವಾಸುಕಿ ರಾಘವನ್

ಕಳೆದೆರಡು ದಿನಗಳಿಂದ ನಾರಾಯಣ ತಂತ್ರಿಯವರಿಗೆ ಆ ಊರಿನ ರೈಲ್ವೆ ಸ್ಟೇಷನ್ನಿಂದ ಹೊರಬರಲಾಗಿರಲಿಲ್ಲ. ಊರಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳೆಲ್ಲಾ ರದ್ದಾಗಿದ್ದವು. ಊರಿನಲ್ಲಿನ್ನೂ ಗಲಭೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಫೋನ್ ಸರ್ವೀಸುಗಳೂ ಬಂದ್ ಆಗಿದ್ದರಿಂದ ತಮ್ಮ ಮನೆಯವರಿಗೆ ತಾವಿಲ್ಲಿ ಇರುವ ವಿಷಯ ತಿಳಿಸಲು ಆಗಿರಲಿಲ್ಲ. ಹೊರಗಡೆ ಕರ್ಫ್ಯೂ ವಿಧಿಸಲಾಗಿತ್ತು. ತುಂಬಾ ಸುಸ್ತಾಗಿದ್ದರೂ, ತಂತ್ರಿ ಹತಾಶರಾಗಿ ಪ್ಲಾಟ್ಫಾರ್ಮಿನ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿದ್ದರು. ತಮ್ಮ ಮಗಳಿಗೆ ಒಳ್ಳೆ ಸಂಬಂಧ ಹುಡುಕಿಕೊಂಡು ಈ ಊರಿಗೆ, ಅದೂ ಈ ಹೊತ್ತಿನಲ್ಲಿ ಬಂದು … Read more

ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…: ಷಡಕ್ಷರಿ ತರಬೇನಹಳ್ಳಿ

ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೋಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ … Read more

ಕುರುಂಬಿಲನ ಪಂಚಾಂಗ: ಅಶೋಕ್ ಕುಮಾರ್ ವಳದೂರು (ಅಕುವ)

ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು. ಅಂದು ಶನಿವಾರ. … Read more

ಶಿಕಾರಿ: ಡಾ. ಗವಿ ಸ್ವಾಮಿ

ಎರಡು ವರ್ಷದ ಎಳೆಗೂಸು  ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಅವನನ್ನು ಅಲುಗಾಡಿಸುತ್ತಿದ್ದಳು. ಆತ ತೆರೆದ ಕಣ್ಣುಗಳಿಂದ ಛಾವಣಿಯನ್ನು ದಿಟ್ಟಿಸುತ್ತಾ ಮರದ ಕೊರಡಿನಂತೆ ಬಿದ್ದಿದ್ದ . ತನ್ನನ್ನು ಎಬ್ಬಿಸಲು ಹೆಣಗಾಡುತ್ತಿದ್ದ ಮುದ್ದಿನ ಮಗಳಿಗೆ ಒಂಚೂರೂ ಸ್ಪಂದಿಸದೇ ನಿತ್ರಾಣನಾಗಿ ಹಾಸಿಗೆಗೆ ಅಂಟಿಕೊಂಡಿದ್ದ. ಮೂರ್ನಾಲ್ಕು ಬಾರಿ ಅಪ್ಪನನ್ನು ಜಗ್ಗಾಡಿ ಸುಸ್ತಾದ ಕಂದನ ಕಣ್ಣುಗಳಲ್ಲಿ ಹತಾಶೆ ಮಡುಗಟ್ಟಿತು. ತನ್ನನ್ನು ಮೊರದಗಲದ ಅಂಗೈ ಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದ ಅಪ್ಪ.. ಗೊಂಬೆಯಂತೆ ಎಸೆದು ಆತುಕೊಳ್ಳುತ್ತಿದ್ದ ಅಪ್ಪ ಈಗ ಸ್ಪಂದಿಸದೇ ಮರದ ಕೊಂಟಿನಂತೆ ಮಲಗಿರುವುದನ್ನು ನೋಡಿ ಪುಟ್ಟ ಕಣ್ಣುಗಳಲ್ಲಿ … Read more