ಮತ್ತೆ ಒಂದು ನಾಟಕ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ ನನ್ನ ಕಣ್ಣುಗಳು ಅವನ ನಡೆ, ನುಡಿಗಳನ್ನು ಹಿಂಬಾಲಿಸಿದವು. ಅವನ ನಡಿಗೆಯಲ್ಲೇ ಒಂದು ವಿಚಿತ್ರ ಲಯವಿತ್ತು. ಆ ಲಯ, ನನ್ನ ನಾಟಕದ ಮುಖ್ಯ ಪಾತ್ರದಂತೆಯೇ ಕಂಡಿತು. ‘ಯಾರವನು?’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದೆ. ‘ಅವನು ಪ್ರಸಾದರಾವ್. ಒಂದು ರೀತಿಯಲ್ಲಿ ಹುಚ್ಚ. ಅವನ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ’ ಎಂದು ನಕ್ಕ. ಆದರೂ ನನ್ನ ಮನಸ್ಸು ಆತನನ್ನೇ ಹಿಂಬಾಲಿಸಿತು. ಆತ ಇನ್ನೊಬ್ಬರೊಂದಿಗೆ ನಗುತ್ತಾ, ಹರಟುತ್ತಿದ್ದ. ಆ ನಗು, ಆ ಹರಟೆಗಳಲ್ಲಿ … Read more

ಸ್ಮಾರ್ಟ್ವಾಚು ಮತ್ತು ಹಳದಿ ಮೀನು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ನೆರಳಿನಲ್ಲಿದ್ದ ಬಂಡೆಗಲ್ಲಿನ ಮೇಲೆ ನೀಳವಾಗಿ ಮೈಚಾಚಿದ್ದ ಸೋಂಪ ದಿಗ್ಗನೆ ಒಂದೇಸಲಕ್ಕೆಎದ್ದುಕುಳಿತ. ಒಳಸೇರಿದ್ದ ದಿವ್ಯಾಮೃತ ಇದುವರೆಗೂ ಬೇರೆ ಯಾವಯಾವುದೋ ಲೋಕದಲ್ಲಿ ತನ್ನನ್ನು ಸುತ್ತಾಡಿಸುತ್ತಿತ್ತು. ಈಗದು ವೈಜಯಂತೀ ಹೊಳೆಯ ತೀರಕ್ಕೆ ಒಗೆದಿದೆ ಎಂದುಕೊಂಡ. ಒಂದು ಹಳೆಯ ಪಂಚೆ ಅವನ ಕೆಳಮೈಯ್ಯನ್ನು ಅರ್ಧಂಬರ್ಧವಾಗಿ ಆವರಿಸಿತ್ತು. ಮೇಲ್ಗಡೆ ಇದ್ದದ್ದು ಬಗೆಬಗೆಯ ಶೂನ್ಯಾಕೃತಿಗಳಿಗೆ ಜೀವಂತ ಸಾಕ್ಷಿ ಎನಿಸಿದ್ದ ಬನಿಯನ್ನು. ಅಂಗಿ ಅಲ್ಲೇ ಆ ಬಂಡೆಗಲ್ಲಿನ ಹಿಂದೆ ಬಿದ್ದಿತ್ತು. ಏನೋ ಸದ್ದು ಕೇಳಿದಂತಾಯಿತಲ್ಲ! ಅದರಿಂದಲೇ ಅಲ್ಲವೇ ತನಗೆ ಎಚ್ಚರ ಆದದ್ದು!ಎಂದುಕೊಂಡ ಅವನು. ಯಾರೋ ನೀರಿಗೆ ಹಾರಿದ … Read more

ಮಾಸಿದ ಪಟ: ಎಫ್.‌ ಎಂ. ನಂದಗಾವ

ಕ್ರಿಸ್ಮಸ್ ಬಂತಂದ್ರ ನನಗ ನಮ್ಮ ಮನ್ಯಾಗಿದ್ದ ಮಾಸಿದ ಪಟ ನೆನಪಾಗ್ತದ. ಸಣ್ಣಾಂವ ಇದ್ದಾಗ ನಾ ಮಾಡಿದ್ದ ಹಳವಂಡದ ಕೆಲಸ ನೆನಪಾಗಿ ಮನಸ್ಸ ಖಜೀಲ ಆಗ್ತದ. ನನಗ ತಿಳಿವಳಿಕಿ ಬಂದಾಗಿಂದಲೂ, ನಮ್ಮ ಮನೆಯ ದೇವರ ಪೀಠದಾಗ ಅಪ್ಪ ಜೋಸೆಫ್, ಅವ್ವ ಮರಿಯವ್ವ ಮತ್ತು ಬಾಲಯೇಸುಸ್ವಾಮಿ ಅವರ ಪವಿತ್ರ ಕುಟುಂಬದ ಚಿತ್ರಪಟದ ಜೋಡಿ ಒಬ್ಬರು ಸ್ವಾಮಿಗಳ ಚಿತ್ರಪಟಾನೂ ಐತಿ. ಕನ್ನಡ ಸಾಲಿ ಓದ ಮುಗಿಸಿ, ನಾನು ಪ್ಯಾಟಿಯೊಳಗಿನ ಹೈಸ್ಕೂಲ್ ಕಟ್ಟಿ ಏರಿದಾಗ ನನ್ನ ಸಹಪಾಠಿಗಳು ನಮ್ಮ ಮನಿಗೆ ಬಂದಾಗಲೆಲ್ಲಾ, `ಅದೇನೋ, … Read more

ಈ ಪ್ರಶ್ನೆಗೆ ಉತ್ತರವೇನು?: ಕೊಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಸಂಘಮಿತ್ರಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್ ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ. ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ … Read more

ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು. ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. … Read more

ವಿಭಾವರಿ (ಕೊನೆಯ ಭಾಗ): ವರದೇಂದ್ರ ಕೆ ಮಸ್ಕಿ

ಇತ್ತ ಅನುಪಮಾಳ ಅಳು ನೋಡಲಾಗದೆ ತೇಜಸ್ ಕೂಡ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡ ವಿಭಾಳ ಮನಸಲ್ಲಿ ತಲ್ಲಣವಾಗುತ್ತಿದೆ. ನಾನು ತಪ್ಪು ಮಾಡಿದೆ, ಮತ್ತೆ ಮತ್ತೆ ತಪ್ಪೇ ಮಾಡುತ್ತಿದ್ದೇನೆ. ಅಂದು ತೇಜಸ್ನನ್ನು ಬಿಟ್ಟು ಹೋಗಿ ತಪ್ಪು ಮಾಡಿದೆ, ಈಗ ಮತ್ತೆ ಅವನೊಂದಿಗೆ ಬಂದು ಮತ್ತೆ ತಪ್ಪು ಮಾಡಿದ್ದೇನೆ. ಆದರೆ ತೇಜಸ್ನ ಜೊತೆ ಬರದೇ ವಿಧಿ ಇರಲಿಲ್ಲ.. ಈಗ ಏನು ಮಾಡಲಿ.. ಏನು ಮಾಡಲಿ.. ಎಂದು ಚಿಂತೆಯಲ್ಲಿ ಮುಳುಗಿದವಳನ್ನು ಅವಳ ಗೆಳತಿ ವೇದಶ್ರೀ ಬಂದು ಕರೆದುಕೊಂಡು ಹೋಗುತ್ತಾಳೆ. … Read more

ವಿಭಾವರಿ (ಭಾಗ 4): ವರದೇಂದ್ರ ಕೆ ಮಸ್ಕಿ

ಅನುಪಮಾಳ ಅನುರಾಗದಲೆಯಲ್ಲಿ ತೇಜಸ್ ಅನುಪಮಾ ಮಾಧವನ ಒಬ್ಬಳೇ ಮುದ್ದಿನ ತಂಗಿ. ವರ್ಣನಾತೀತ ರೂಪ, ಬೆಳ್ಳನೆಯ ಚರ್ಮ ಇಲ್ಲದೆ ತುಸು ಕಪ್ಪಾದ ಮೈ ಬಣ್ಣ ಹೊಂದಿದ ಕೃಷ್ಣ ಸುಂದರಿ. ಆ ಕಣ್ಣುಗಳನ್ನು ನೋಡುತ್ತಿದ್ದರೆ ನವಿಲೇ ನಾಚಬೇಕು, ತುಂಬಿಕೊ ಂಡ ಗಲ್ಲಗಳನ್ನು ಸ್ಪರ್ಶಿಸಿದರೆ ಕೈಯಲ್ಲಿ ಹೂ ಹಿಡಿದ ಅನುಭವ. ಸುಂದರ ರೂಪಲಾವಣ್ಯದ ಜೊತೆಗೆ ಗುಣವಂತೆ, ಸಂಸ್ಕಾರವ ಂತೆ, ಸಹೃದಯ ಮನಸಿನ ಭಾವನಾತ್ಮಕ ಜೀವಿ, ಒಬ್ಬಳನ್ನು ಪ್ರೇಮಿಸಿ ಅವಳಿಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅವಳಿಂದ ಮೋಸಹೋಗಿ ಕುಗ್ಗಿಹೋದವನನ್ನು ಮದುವೆ ಆಗಲು … Read more

ಆರಿದ ದೀಪ: ಎಲ್.ಚಿನ್ನಪ್ಪ, ಬೆಂಗಳೂರು

“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು. “ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ. ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು … Read more

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು … Read more

ದಪ್ಪಗಿದ್ದರೆ ಏನು ಜೀವ?: ಕೊಡೀಹಳ್ಳಿ ಮುರಳೀಮೋಹನ್

ಭೂಮಾತಾ ನಗರದ ರಸ್ತೆ ಸಂಖ್ಯೆ 10ರಲ್ಲಿರುವ ‘ಸೌಧ ಎಲ್-ಕ್ಯಾಸಲ್’ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್, ಜಿ-1ರಲ್ಲಿ ವಾಸಿಸುವ ಜೀವನ್ ಮತ್ತು ಡಿ ಬ್ಲಾಕ್, ಎಫ್-2ರಲ್ಲಿರುವ ಸುಧೀರ್ ಬಾಲ್ಯದ ಗೆಳೆಯರು. ಚಿಕ್ಕಂದಿನಲ್ಲಿ ಅವರ ಸ್ವಂತ ಊರಿನಲ್ಲಿ ಇಬ್ಬರ ಮನೆಗಳೂ ಪಕ್ಕ ಪಕ್ಕವೇ ಇದ್ದವು. ಜೀವನ್ ಅವರ ತಾತ ಇಬ್ಬರಿಗೂ ಪದ್ಯಗಳು, ಶತಕಗಳನ್ನು ಕಲಿಸುತ್ತಿದ್ದರು. ಕಥೆಗಳನ್ನು ಹೇಳುತ್ತಿದ್ದರು. ಅವರು ಜೀವನನ್ನು ‘ಜೀವ’ ಎಂದೂ, ಸುಧೀರನನ್ನು ‘ಧೀರ’ ಎಂದೂ ಕರೆಯುತ್ತಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಒಟ್ಟಿಗೆ ಓದಿದರು. ನಂತರ ಇಬ್ಬರಿಗೂ ಒಂದೇ ಊರಿನಲ್ಲಿ ಉದ್ಯೋಗಗಳು … Read more

ಮಗು, ನೀ ನಗು (ಭಾಗ ೨): ಸೂರಿ ಹಾರ್ದಳ್ಳಿ

ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ … Read more

ಪಾರ್ಟ್-ಪಲ್ಯಾ: ಸಿದ್ಧರಾಮ ಹಿಪ್ಪರಗಿ (ಸಿಹಿ)

ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ. ಥೇಟ್‌ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು … Read more

ಮಗು, ನೀ ನಗು (ಭಾಗ ೧): ಸೂರಿ ಹಾರ್ದಳ್ಳಿ

ಪ್ರಿಯ ಗೆಳತಿ,ನನ್ನ ಅರವತ್ತನೆಯ ವಯಸ್ಸಿನಲ್ಲಿ, ಅರೆ, ನಾನು ಇಷ್ಟು ಬೇಗ ಮುದುಕಿ ಎಂಬ ಕೆಟಗರಿಗೆ ಸೇರಿಬಿಟ್ಟೆನೇ?, ನಾನು ಮೊಮ್ಮಗಳೊಂದರ ಅಜ್ಜಿಯಾದೆ. ಮೊದಲು ಯಾವುದಾದರೊಂದು ಮಗು ‘ಅಜ್ಜಿ’ ಎಂದು ಸಂಬೋಧಿಸಿದರೆ ರೇಗುತ್ತಿದ್ದವಳು ಈಗ ಈ ಪುಟ್ಟಿ, ತನ್ನ ತೊದಲು ನುಡಿಯಲ್ಲಿ ಎಂದು ‘ಅಜ್ಜಿ’ ಎಂದು ಕರೆಯುತ್ತದೆಯೋ ಎಂದು ಕಾಯುವಂತಾಗಿದೆ. ತೊಡೆಯ ಮೇಲೆ ಮಲಗಿಸಿಕೊಂಡು, ಅದರ ಕಣ್ಣಲ್ಲೇ ಕಣ್ಣು ನೆಟ್ಟು, ‘ಪುಟ್ಟ, ನಾನು ನಿನ್ನ ಅಜ್ಜಿ, ಅವಳು ನಿನ್ನ ಅಮ್ಮ, ಅವರು ನಿನ್ನ ಅಜ್ಜ, ಮಗೂ, ಅಜ್ಜಿ ಅನ್ನು,’ ಎನ್ನುತ್ತಾ … Read more

ವಿಭಾವರಿ (ಭಾಗ 1): ವರದೇಂದ್ರ ಕೆ ಮಸ್ಕಿ

                                     ಅದೊಂದು ದಿನ ನಿಸ್ತೇಜತೆ ಮೈಯಲ್ಲಿ ಹೊಕ್ಕು, ತನ್ನೆಲ್ಲ ಸಂತೋಷವನ್ನು ಸಮಾಧಿಗೊಳಿಸಿ.. ತಲೆ ಮೇಲೆ ಕೈ ಹೊತ್ತು ಕೂಡುವಂತೆ ಮಾಡಿತ್ತು. ನಡೆದ ಇತಿಹಾಸವೆಲ್ಲ ಕಣ್ಣಿನ ಹನಿಗಳು ಬೇಡವೆಂದರೂ ನೆನಪಿಸುತ್ತಿವೆ… ಅರೆ ಘಳಿಗೆಯೂ ಸುಮ್ಮನಿರದ ಮನಸು ಇಂದೇಕೋ ಸ್ಮಶಾನ ಮೌನಕ್ಕೆ ಬಲಿಯಾಗಿದೆ. ಹೌದು… ಹೌದು….. ಅವನೇಕೆ ಹೀಗೆ ಮಾಡಿದ…!! ಸುಖಾಸುಮ್ಮನೆ ಕೋಪಗೊಳ್ಳದವನು ಇಂದೇಕೆ ಮೃಗದಂತಾದ, ಗೋವಿನಂತಹ ಮನಸ್ಸುಳ್ಳ ನನ್ನ ತೇಜು, ಏಕೆ ಈ ದಿನ ಹೆಬ್ಬುಲಿಯಂತಾಡಿದ. ಸದಾ ಹಸನ್ಮುಖಿ ಲವಲವಿಕೆಯ ಗಣಿ ನೂರು ಮಾತಿಗೆ ಒಂದು ಮಾತನಾಡುವವ ಒಂದು … Read more

ಸಂದಿಗ್ಧತೆ: ಬಂಡು ಕೋಳಿ

ರಾಂ ಪಹರೆ ಬರೊಬ್ಬರಿ ಐದರ ಅಂಕಿಯ ಮೇಲೆ ಹೊಂದಿಸಿಟ್ಟಿದ್ದ ಅಲರ‍್ಮನೇ ರಿಂಗಣಿಸಿತೇನೋ ಅಂತಿಳಿದು ಬಾಪೂ ನಿದ್ದೆಯಿಂದ ಎಚ್ಚರಾಗಿ ಗೊಣಗುತ್ತ ತಲೆದಿಂಬಿನ ಬುಡಕ್ಕೆ ಕೈಯ್ಯಾಡಿಸಿದ; ಮೊಬೈಲ್ ಕೈಗತ್ತಿತು. ಅದರ ಮಗ್ಗುಲಿನ ಗುಂಡಿಯ ಮೇಲೆ ಹೆಬ್ಬೆಟ್ಟೂ ಹಿಚುಕಿದ. ಮೊಬೈಲ್ ಬಾಯಿ ಬಂದಾತು. ಹಾಳಾದ ಕಿಣಿಕಿಣಿ ಸಪ್ಪಳ ಸುಖ ನಿದ್ದೆಯ ಮಜಾನೆಲ್ಲಾ ಕೆಡಿಸಿತು ಎನ್ನುತ್ತ ಮನಸ್ಸಿನಲ್ಲೇ ಬೈದ. ತನ್ನಿಷ್ಟದ ಭಂಗಿಯಾಗಿದ್ದ ನೆಲದ ಹೊಟ್ಟೆಯ ಮೇಲೆ ಹೊಟ್ಟೆಯೂರಿದ್ದ ನಿದ್ರಾಸನ ಬದಲಿಸಿದ. ಎಡ ಕಪಾಳು ಹೊಳ್ಳಿಸಿ ಬಲಕಿನದು ಊರಿದ. ಸೊಂಟದ ಕೆಳಗ ಜಾರಿದ್ದ ದುಬ್ಟಿಯನ್ನು … Read more

ಭಗ್ನ ಪ್ರೇಮಿಗಳು: ಎಲ್.ಚಿನ್ನಪ್ಪ, ಬೆಂಗಳೂರು.

“ಮಾರ್ಗರೆಟ್, ನಾವು ಮೊದಲು ಹೇಗಿದ್ದೆವು ಈಗ ಹೇಗಾಗಿದ್ದೇವೆ ನೋಡು . . . ! ನಾವೀಗ ನಿರ್ಜರ ಆತ್ಮಗಳು. ಭೂಲೋಕದಲ್ಲಿ ಶಾರೀರಿಕ ಆತ್ಮಗಳಾಗಿ ಜೀವಿಸಬೇಕಾದವರು ಇಲ್ಲಿ ಆಕಾರವಿಲ್ಲದ ನಿರ್ವಿಕಾರ ಆತ್ಮಗಳಾಗಿದ್ದೇವೆ. ದಂಪತಿಯರಾಗಿ ಬಾಳಬೇಕಾಗಿದ್ದವರು ಬಾಳಿಗೆ ಮುಕ್ತಾಯ ಹಾಡಿದ್ದೇವೆ. ಪ್ರೀತಿ ಎಂಬ ನೌಕೆಯಲ್ಲಿ ಸಾಗುತ್ತಿದ್ದ ನಾವು ಸಾಗರದಲ್ಲಿ ಮುಳುಗಿ ಈಜಿ ಜೈಸಲಾಗದೆ ಹೋದವರು. ಪ್ರೇಮ ವೈಪಲ್ಯಕ್ಕೆ ತುತ್ತಾಗಿ ‘ಭಗ್ನ ಪ್ರೇಮಿಗಳು’ ಎಂಬ ಹಣೆಪಟ್ಟಿಯನ್ನು ತೊಟ್ಟುಕೊಂಡವರು. ನಾವು ಹುಟ್ಟಿ ಬೆಳೆದ ಜಾತಿ ಧರ್ಮಗಳೇ ನಮಗೆ ಆತ್ಮಹತ್ಯೆಯ ಹಾದಿ ತೋರಿಸಿದವು. ಅದರೊಟ್ಟಿಗೆ … Read more

ರಮಾಬಾಯಿಯ ಸೇಡು: ಕೊಳ್ಳೇಗಾಲ ಶರ್ಮ

ರೋಬಾಟು ಸೇವಕಿ ಮಾಡಿದ ತಪ್ಪುಗಳು ರಮಾಬಾಯಿಯನ್ನು ದೋಷಿಯಾಗಿಸಿವೆ. ರಕ್ಷಣೆ ಹೇಗೆ? ರಮಾಬಾಯಿ ತಲೆ ಕೊಡವಿದಳು. ಅವಳ ಒದ್ದೆ ಕೈಗಳು ಸುತ್ತಲೂ ನೀರನ್ನು ಸಿಂಪಡಿಸಿದುವು. ತೊಳೆದ ಕೈಗಳು ಇನ್ನೂ ಕೆಸರಾಗಿದೆಯೋ ಎನ್ನುವಂತೆ ಮತ್ತೊಮ್ಮೆ ಅವನ್ನು ಕೊಡವಿದಳು. ಅವಳಿಗೆ ಹಾಗೆಯೇ ಅನ್ನಿಸುತ್ತಿತ್ತು.ತನ್ನ ಕೈ ಕೊಳೆಯಾಗಿದೆ ಎಂಬ ಭಾವನೆ ಅವಳಿಗೆ ಬಂದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಈ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಇದು ಆರಂಭವಾಗಿದ್ದೂ ಇತ್ತೀಚೆಗಷ್ಟೆ..ಇವೆಲ್ಲ ಆರಂಭವಾಗಿದ್ದು ಯಾವಾಗ ಎನ್ನುವುದನ್ನು ರಮಾಬಾಯಿ ಮರೆತಿಲ್ಲ. ಸರಿಯಾಗಿ ನಾಲ್ಕೂವರೆ ವರ್ಷಗಳ ಹಿಂದೆ, ದೀದೀ ಸೈಬರ್‌ಬಾಯಿಯನ್ನು … Read more

ನೀರಿನ ಪೊಟ್ಟಣಗಳು: ಕೋಡಿಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್ “ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ. ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ … Read more

ನಮ್ಮ ಗೋದವ್ವಜ್ಜಿ: ಎಫ್.ಎಂ.ನಂದಗಾವ

ಸೊಸೆಯತ್ತ ಮುಖ ಮಾಡಿ, ʻಇರ್ಲಿ ಬಿಡವ, ಕೂಸು ಅದಕ್ಕೇನ ಗೊತ್ತಾಗ್ತದ?ʼ ಎನ್ನುತ್ತಾ ಅಜ್ಜ ಅರಳಪ್ಪ, ಮೊಮ್ಮಗ ಅಂತಪ್ಪನ ಕಡೆ ತಿರಗಿ, ʻಕೂಸ, ನಾ ಯಾಕ ಸುಳ್ಳ ಹೇಳಲಿ?ʼ ʻನೀ ನಿನ್ನೆ ರಾತ್ರಿ ಪೂಜಿಗೆ ಹೋಗಿದ್ದಿ. ನಿನಗ ಮುಂಜಾನಿ ಒಂಬುತ್ತೂವರಿತನ ಎಚ್ಚರ ಆಗಿಲ್ಲ.ʼ ʻಹೌದ ಅಜ್ಜಾ, ನೀ ಹೇಳೂದು ಖರೆ ಅದ. ನಾ ಇಂದ ತಡಾ ಮಾಡಿ ಎದ್ನಿʼ ʻ… …ʼ ʻಆದರೂ ಅಜ್ಜ, ನಿನ್ನೆ ರಾತ್ರಿ ಪೂಜಿಗೆ ನೀ ಬರಬೇಕಿತ್ತು. ರಾತ್ರಿ ಪೂಜಿಯೊಳಗ ಸ್ವಾಮಿಗಳು ಕಬ್ಬಿಣದ ದೊಡ್ಡ … Read more