ಮಾನಸ ಸರೋವರದಲ್ಲಿ ವೇದತರಂಗ: ಹೃದಯಶಿವ ಅಂಕಣ

  ಶಿವರುದ್ರಪ್ಪನವರಿಗೆ ವಂದಿಸುತ್ತಾ… ಜೆಎಸ್ಸೆಸ್ ಎಂದೇ ಖ್ಯಾತರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾರಸ್ವತ ಲೋಕದ ಅಗ್ರಪಂಕ್ತಿಯಲ್ಲಿ ನಿಲ್ಲುವ ಕವಿಜೀವ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರ ಫೆಬ್ರವರಿ ೭ನೇ ತಾರೀಖು ಜನಿಸಿದ ಈ ಸಮನ್ವಯ ಕವಿಯ ಸಾಹಿತ್ಯಕೃಷಿ ನವೋದಯದಲ್ಲಿ ಶುರುವಾಗಿ ನವ್ಯದಲ್ಲಿ ಮುಂದುವರೆಯುತ್ತಿದೆ. ವೃತ್ತಿಯಲ್ಲಿ ಅಧ್ಯಾಪಕರಾಗಿ ಸಾವಿರಾರು ಚಿಂತನಾ ಜೀವಿಗಳನ್ನು ಹುಟ್ಟುಹಾಕಿದ ಇವರು ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರ ಪಟ್ಟಶಿಷ್ಯ. ಇದುವರೆಗೂ ಸಾಮಗಾನ, ಒಲವು-ಚೆಲುವು, ತೆರೆದಮನ, ದೀಪದ ಹೆಜ್ಜೆ, ಕಾವ್ಯಾರ್ಥ ಚಿಂತನೆ, ಕಾವ್ಯರ್ಥ ಲೋಕ, ವಿಮರ್ಶೆಯ ಪೂರ್ವಪಶ್ಚಿಮ ಒಳಗೊಂಡಂತೆ ಇನ್ನೂ … Read more

ತೆರೆದ ಮನೆ ಬಾಗಿಲಿಗೊಂದು ಬೆಳಕಿನ ತೋರಣ:ಹೃದಯಶಿವ ಅಂಕಣ

ರಸಋಷಿಯ ರಮ್ಯಲೋಕದೆಡೆಗೆ ಬಾಲ್ಯದಲ್ಲಿ ಆಂಗ್ಲ ಸಾಹಿತ್ಯದ ವ್ಯಾಮೋಹಕ್ಕೊಳಗಾಗಿ ಹಲವು ಆಂಗ್ಲಕವಿತೆಗಳನ್ನು ಬರೆದರೂ ಕ್ರಮೇಣ ಕನ್ನಡ ಸಾಹಿತ್ಯ ಕೃಷಿಗೆ ಕೈ ಹಾಕಿ ಇಂದು ಕನ್ನಡ, ಕರ್ನಾಟಕದಷ್ಟೇ ಪ್ರಾಮುಖ್ಯತೆ ಪಡೆದಿರುವ ಕೆ.ವಿ.ಪುಟ್ಟಪ್ಪನವರು 1904ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದವರು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಮಲೆನಾಡಿನೊಂದಿಗೆ ಆಟವಾಡುತ್ತ, ಮೋಹಕ ಮಂಜಿನೊಂದಿಗೆ ಮಾತಿಗಿಳಿಯುತ ಬೆಳೆದ ಇವರು ಮೂಲತಃ ನಿಸರ್ಗದ ಆರಾಧಕರಾಗಿದ್ದರು.  ಪ್ರೌಢರಾಗುತ್ತಾ ಹೃದಯ ವಾಸ್ತವಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ತಮ್ಮ ಅಂತಃಸತ್ವಕ್ಕೆ ಅಕ್ಷರ ರೂಪ ಕೊಡುತ್ತಾ ಹೋದಂಥವರು. ಹೊಸ ತಲೆಮಾರಿನ, … Read more

ಮಳೆ ಎನ್ನುವುದು ಒಂಥರಾ ಆಕ್ಸಿಡೆಂಟ್!: ಹೃದಯಶಿವ ಅಂಕಣ

  ತುಂಟ ಕವಿಯ ಗಾಂಭೀರ್ಯತೆ   ನವ್ಯ ಕಾಲದಲ್ಲಿ ಹೊಸಕಾವ್ಯವೆಂದರೆ ಕೇವಲ ದುರಂತಮಯವಾದದ್ದು, ಕ್ಲಿಷ್ಟವಾದದ್ದು, ಸಿನಿಕತನದ್ದು ಎಂಬಂತಹ ತಿಳುವಳಿಕೆ ರೂಢಿಯಲ್ಲಿತ್ತು. ಉತ್ಸಾಹದಿಂದ ಜೀವಂತ ಕಾವ್ಯ ರಚಿಸಿದ ಬಿ. ಆರ್. ಲಕ್ಷ್ಮಣ್ ರಾವ್ ಕಳೆದ ಮೂರು ದಶಕಗಳಲ್ಲಿ ತಮ್ಮದೇ ಶೈಲಿಯ ಕಾವ್ಯ ರಚಿಸಿದವರು ಎಂದು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಮ್ಯಂ ಪ್ರಸ್ತಾಪಿಸಿರುತ್ತಾರೆ.   ಹೌದು, ಬಿ.ಆರ್.ಎಲ್. ಮೇರೆಗಳನ್ನು ದಾಟಿ ನಿಂತವರು. ಸಾಹಿತ್ಯ ಸರೋವರದಲ್ಲಿ ತಮ್ಮದೇ ವಿನೂತನ ಶೈಲಿಯ ತರಂಗಗಳನ್ನು ಸೃಷ್ಟಿಸಿದವರು. ಗಂಭೀರ ವಿಷಯಗಳನ್ನು ಸರಳವಾಗಿ ಕಾವ್ಯಕ್ಕೆ ಇಳಿಸಿ ಗಮನ … Read more

ನೀ ಬರುವ ದಾರಿ ತಿರುಗಾ ಮರುಗಾ!:ಹೃದಯಶಿವ ಅಂಕಣ

ಪ್ರೇಮಕವಿಯ ಪ್ರಸನ್ನ ಕಾವ್ಯ   ಏಳು ದಶಕಗಳ ಕಾಲ ಕಾವ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಪ್ರಿಯರನ್ನು ಅಯಸ್ಕಾಂತದಂತೆ ಸೆಳೆದ ನವಿರುಕವಿ ಕೆ.ಎಸ್.ನರಸಿಂಹಸ್ವಾಮಿಯವರು ನಮ್ಮ  ನಡುವಿನ ಜೀವಂತ ಸೆಲೆ. ಇವರು ಜನಿಸಿದ್ದು ಮಂಡ್ಯ ಜಿಲ್ಲೆ ಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ ರಂದು, ನಿಧನರಾದದ್ದು ೨೦೦೩ರ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ. ತಮ್ಮ ಸರಳ ಪದಗಳ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದು ಹೃದಯ ಹೃದಯಗಳ ನಡುವೆ ಸೇತುವೆಯಾದರು.  ವಾಸ್ತವದ ತಳಪಾಯದ ಮೇಲೆ ನಿಂತು ಕಲ್ಪನೆಯ ಬಾವುಟ ಹಾರಿಸಿದ ಖ್ಯಾತಿ ಇವರದು. … Read more

ಸುದೀಪ್ ನಾಯಗನ್, ಇಳಯರಾಜಾ ಟ್ಯೂನುಗಳು ಮತ್ತು ನನ್ನ ಲೈನುಗಳು: ಹೃದಯಶಿವ ಅಂಕಣ

ನನ್ನನ್ನು ಸದಾ ಕಾಡುವ ಅನೇಕ ತಮಿಳು ಚಿತ್ರಗಳಲ್ಲಿ ನಾಯಗನ್ ಚಿತ್ರಕ್ಕೆ ಮೊದಲ ಸ್ಥಾನ ಕೊಡಬಯಸುತ್ತೇನೆ. ೧೯೮೭ರಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದ್ದ ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು. ಕಮಲಾ ಹಾಸನ್ ಅತ್ಯದ್ಭುತ ಅಭಿನಯವಿತ್ತು. ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಆಸ್ಕರ್ಸ್ ವರೆಗೂ ಹೋಗಿತ್ತು. ಸುದೀಪ್ ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಿ, ನಟಿಸುವ ಆಸಕ್ತಿ ತೋರಿದ್ದ ಕಾಲದಲ್ಲಿ ನಾನು ಒಂದೇ ಒಂದು ಚಿತ್ರಗೀತೆ ಬರೆಯುವ ಹೋರಾಟದಲ್ಲಿದ್ದೆ. ಈ ಕಾರಣದಿಂದ ಸುದೀಪ್ ತಂದೆ ಸರೋವರ್ ಸಂಜೀವರನ್ನು ಒಂದೆರಡು ಸಲ ಭೇಟಿಯಾಗಿದ್ದೆ. … Read more

ರತ್ನನ ಪರ್ಪಂಚದಲ್ಲಿ ಉಪ್ಪಿ ಚಪ್ಪರಿಸಿದ ಉಪ್ಗಂಜಿ:ಹೃದಯಶಿವ ಅಂಕಣ

ರಾಜರತ್ನಂ ಬೀದಿಯಲ್ಲಿ ಅಡ್ಡಾಡುತ್ತಾ… ಟಿ.ಪಿ. ಕೈಲಾಸಂ ಗ್ರಾಮ್ಯಭಾಷೆಯನ್ನು ನಾಟಕಗಳಲ್ಲಿ ತಂದರೆ ಜಿ.ಪಿ. ರಾಜರತ್ನಂ ರವರು ಕಾವ್ಯಕ್ಕೆ ತಂದವರು. ಬಡತನದಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ಪಡಬಾರದ ಕಷ್ಟಪಟ್ಟು ಸಾಂಸಾರಿಕ ಕಷ್ಟಗಳ ನಡುವೆಯೇ ಆಶಾವಾದಿತ್ವ ಸಾರುವ ರತ್ನನ ಪದಗಳನ್ನು ರಚಿಸಿದ ರಾಜರತ್ನಂ 1904ರಲ್ಲಿ ಮೈಸೂರಿನಲ್ಲಿ ಜನಿಸಿ 1938 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ಇವರು 1979 ರಲ್ಲಿ ತೀರಿಕೊಂಡರು. ಶಾಂತಿ ಮೊದಲಾದ ಗ್ರಂಥಸ್ಥ ಭಾಷೆಯ ರೀತಿ ರಚನೆಗಳಿಂದ ಹೊರಬಂದು ಬೇಂದ್ರೆಯವರಂತೆ ಗ್ರಾಮೀಣ ಸೊಗಡಿನ ಸ್ಪರ್ಶದೊಂದಿಗೆ ವಿದ್ಯಾರ್ಥಿದೆಸೆಯಲ್ಲಿದ್ದಾಗಲೇ ರಾಜರತ್ನಂ ರಚಿಸಿದ 'ಯೆಂಡ್ಕುಡ್ಕ … Read more

ಸೂಪರ್ ಗಾಡ್ ಸಣ್ಣಯ್ಯ (ಕಥೆ): ಹೃದಯಶಿವ ಅಂಕಣ

  "ಸಿಸುಮಗನೇ ನಾನೇಳಿದಷ್ಟು ಮಾಡು. ನಿಂಗೆ ಒಳ್ಳೇದಾಗ್ಲಿಲ್ಲ ಅಂದ್ರೆ ನನ್ನೆಸ್ರು ಬದಲಾಯಿಸಿಕೊಳ್ತೀನಿ" ಎಂದು ಮೈಮೇಲೆ ಬಸಪ್ಪದೇವರು ಬಂದಿದ್ದ ಸಣ್ಣಯ್ಯ ಹೇಳಿದಾಗ ಸುತ್ತ ನೆರೆದಿದ್ದ ರಾಗಿದೊಡ್ಡಿಯ ಜನ ದೂಸ್ರಾ ಮಾತಾಡದೆ ಕೈ ಮುಗಿದರು. ನಾವೆಲ್ಲಾ ಅದನ್ನು ನೋಡಿ ಕಂಗಾಲಾದೆವು. ಅಷ್ಟೊತ್ತಿಗಾಗಲೇ ಸಣ್ಣಯ್ಯ ತನ್ನೆದುರು ಬಿಡಿಸಿದ್ದ ರಂಗೋಲಿಯನ್ನು ತನ್ನ ಬಲಗೈಯಿಂದ ಉಜ್ಜಿ ಉಜ್ಜಿ ಚುಕ್ಕಿ ಹಾಗೂ ಗೆರೆಗಳ ಗುರ್ತು ಸಿಗದಂತೆ ಮಾಡಿ ಆರ್ಭಟಿಸಿದ್ದ. ಸಗಣಿ ಉಂಡೆಯ ಮೇಲಿದ್ದ ಮಣ್ಣಿನ ದೀಪ ಆಕಳಿಸುತ್ತಿತ್ತು. ನಾವು ತೂಕಡಿಸುತ್ತಿದ್ದೆವು. ಸಣ್ಣಯ್ಯ ಕಡೆಗೂ 'ಅರಾ ಅರಾ … Read more

ನಾನು,ಗುರಿ ಮತ್ತು ಅಶ್ವಿನಿ ಸ್ಟುಡಿಯೋ: ಹೃದಯಶಿವ ಅಂಕಣ

ಆಗಿನ್ನೂ  ನಾನು  ಅವಕಾಶಗಳ  ಹುಡುಕಾಟದಲ್ಲಿದ್ದೆ. ಗುರುಕಿರಣ್  ಬೆನ್ನು ಬಿದ್ದಿದ್ದೆ. ಅಶ್ವಿನಿಸ್ಟುಡಿಯೋ  ಮುಂದೆ  ಕೆ.ಎ.19ರಿಂದ  ಶುರುವಾಗುವ  ನಂಬರ್  ಪ್ಲೇಟುಳ್ಳ, ಹಿಂಬದಿಯ  ಗ್ಲಾಸಿನ  ಮೇಲೆ  ಕಂಟ್ರಿಕ್ಲಬ್ಬಿನ  ಸ್ಟಿಕ್ಕರುಳ್ಳ  ಒಂದು  ಸ್ಯಾಂಟ್ರೋ ಕಾರು  ಅಲ್ಲಿ  ನಿಂತಿತ್ತು  ಅಂದ್ರೆ  ಗುರುಕಿರಣ್ ಸ್ಟುಡಿಯೋ  ಒಳಗಡೆ  ಇದ್ದಾರೆ  ಅಂತ ಅರ್ಥ. ಅವರು  ಹೊರಗೆ  ಬರುವವರೆಗೂ  ನಾನು  ಕಾಯಬೇಕು. ಎಷ್ಟು  ಹೊತ್ತಿಗೆ  ಬರುತ್ತಾರೋ  ಯಾರಿಗೆ ಗೊತ್ತು?  ಒಂದು  ವೇಳೆ  ಕೆಲಸದ  ಗುಂಗಿನಲ್ಲಿ  ಬರದೇ  ಅಲ್ಲೇ ಉಳಿದುಬಿಟ್ಟರೆ  ಏನು ಗತಿ?  ನನ್ನ  ಬಾಡಿಗೆಮನೆ  ಇರೋದು  ಬನ್ನೇರುಘಟ್ಟ ರೋಡಿನ  ತುದಿಯಲ್ಲಿ. … Read more

ಬೆಳ್ಳಿಮೋಡದಲ್ಲಿ ಬೇಂದ್ರೆ ಭಾವಗೀತ: ಹೃದಯಶಿವ ಅಂಕಣ

  'ಬೆಂದ್ರೆ  ಬೇಂದ್ರೆ !'   ಅಂಬಿಕಾತನಯದತ್ತ  ಎನ್ನುವ  ಕಾವ್ಯನಾಮದಿಂದ  ಕನ್ನಡಮಣ್ಣಿನಲ್ಲಿ  ಹೆಮ್ಮರವಾಗಿ  ಬೆಳೆದು ನಿಂತಿರುವ  ದತ್ತಾತ್ರೇಯ  ರಾಮಚಂದ್ರ  ಬೇಂದ್ರೆಯವರು  ೧೮೮೯ರಲ್ಲಿ  ಧಾರವಾಡದಲ್ಲಿ  ಜನಿಸಿ ೧೯೮೧ ರಲ್ಲಿ  ನಿಧನರಾದ  ಕವಿಸಾಮ್ರಾಟ. ಉತ್ತರ  ಕರ್ನಾಟಕದ  ಜನಪದ,  ಗ್ರಾಮೀಣಭಾಷೆಯನ್ನು ತಮ್ಮ  ಕಾವ್ಯದಲ್ಲಿ  ತಂದು  ಕನ್ನಡಸಾಹಿತ್ಯವನ್ನು  ಶ್ರೀಮಂತಗೊಳಿಸಿದ  ವರಕವಿ  ಇವರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು  ಸಾಹಿತ್ಯಕೃಷಿ  ಮಾಡಿದ  ಇವರು  ಕನ್ನಡದಷ್ಟೇ  ಮರಾಠಿ ಭಾಷೆಯಲ್ಲಿಯೂ  ಅಪಾರವಾದ ಪಾಂಡಿತ್ಯ  ಹೊಂದಿದ್ದರು.  ಮಹಾರಾಷ್ಟ್ರ  ಹಾಗೂ  ಉತ್ತರ ಕರ್ನಾಟಕದ  ಜನಜೀವನ  ಸಾಂಸ್ಕೃತಿಕ  ನೆಲೆಗಟ್ಟನ್ನು  ತೀರಾ  ಹತ್ತಿರದಿಂದ  ಬಲ್ಲವರಾಗಿದ್ದರು.   … Read more

ಕೆಂಚಣ್ಣನ ತಿಥಿಯೂ… ವಿ.ಸಿ.ಪಿ. ಕಥೆಯೂ…! :ಹೃದಯಶಿವ ಅಂಕಣ

"ಬತ್ತು… ಬತ್ತು… ಬತ್ತು… ಇನ್ನೇನ್ ಬಂದೇ ಬುಡ್ತು… ಅಗೋ ಬತ್ತಾದೆ… ಸದ್ದು ಕೇಳ್ತಾದೆ… ಅಲ್ನೋಡು ಧೂಳು ಏಳ್ತಾದೆ… ಬತ್ತು… ಬತ್ತು.. ಬಂದೇsss ಬುಡ್ತು !  ಆಕು  ಪಾಕು  ವೆತ್ತೆಲೆ  ಪಾಕು  ಅಮಾ  ಡುಮಾಡೇ….  ಅಸ್ಕಿಣಕಣ  ಪಿಸ್ಕಿಣಕಣ ಅಮಾ  ಡುಮಾಡೇ!!"  ಎಂದು  ಎರಡೋ, ಮೂರೋ  ಓದುವ  ವಯಸ್ಸಿನಲ್ಲಿದ್ದ  ನಾವೆಲ್ಲ  ಖುಷಿಯಿಂದ ಸಂಭ್ರಮಿಸುತ್ತಿದ್ದಂತೆಯೇ  ಅತೀ  ಕೆಟ್ಟ  ಮಣ್ಣರೋಡಿನಲ್ಲಿ  ತುಂಬಿದ ಬಿಮ್ಮನ್ಷೆಯಂತೆ  ಏದುಸಿರು  ಬಿಡುತ್ತಾ  ನಮ್ಮೂರಿಗಿದ್ದ  'ಮೂರು  ಗಂಟೆ  ಬಸ್ಸು'  ಮೂರೂವರೆಗೋ, ಮೂರೂ ಮುಕ್ಕಾಲಿಗೋ  ನೇರವಾಗಿ ನಾವಿದ್ದಲ್ಲಿಗೇ  ಬಂದು ನಿಂತು ದೂರದಿಂದ … Read more

ಕನ್ನಡ ಹಾಡು ಬರೆಯಲು ಮದ್ರಾಸಿಗೆ ಹೋದ ಕಥೆಯು: ಹೃದಯಶಿವ ಅಂಕಣ

"ಬಿಳಿ ಕೂದಲಿಗೆ ಬೆಳ್ಳಿ ರೇಟು ಬಂದುಬಿಟ್ಟರೆ ಹೆಂಗಿರುತ್ತೆ ಶಿವಾ?" ಅಂತ ಮುರಳಿಮೋಹನ್ ರವರು ಹೇಳುತ್ತಿದ್ದಂತೆಯೇ ಡ್ರೈವರ್ ಗಕ್ಕನೆ ಗಾಡಿ ಸೈಡಿಗೆ ಹಾಕಿದ. ಕ್ಷಣಹೊತ್ತಿನ ಮೌನದ ನಂತರ ನಾನು, "ಅಣ್ಣತಮ್ಮಂದಿರು ಭಾಗ ಆಗುವ ಸಂದರ್ಭದಲ್ಲಿ ತಂದೆತಾಯಿಗಳು ತಮ್ಮ ಕಡೆಗೇ ಇರಲಿ ಅಂತ ಪಟ್ಟು ಹಿಡೀಬಹುದು ಸಾರ್" ಅಂದೆ. ಒಂದು "ಗೊಳ್ " ಅನ್ನಬಹುದಾದ ಸಾಮೂಹಿಕ ನಗೆಯ ತರುವಾಯ ಎಲ್ಲರೂ ಗಂಭೀರವಾಗಿ ಕಾರಿನಿಂದ ಕೆಳಗಿಳಿದು ಒಬ್ಬರಿಗೊಬ್ಬರು ಗ್ಯಾಪು ಬಿಟ್ಟುಕೊಂಡು ಬೇಲಿಯೆಡೆಗೆ ಮುಖಮಾಡಿ ನಿಂತು ತಂತಮ್ಮ ಲಕ್ಷ್ಯವನ್ನು ತಂತಮ್ಮ ಪ್ಯಾಂಟಿನ ಜಿಪ್ಪಿನತ್ತ … Read more

ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ

ಗುರುಕಿರಣ್ ರನ್ನು ನಾವೆಲ್ಲಾ ಸಾಮಾನ್ಯವಾಗಿ ಗುರೂಜಿ ಅಂತೀವಿ. ಇಂಥ ಗುರೂಜಿ ಒಂದು ಬೆಳಗ್ಗೆ ತಮ್ಮ ಜೊತೆ ನನ್ನನ್ನೂ ಆಕಾಶ್ ಆಡಿಯೋಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ಒಂದೇ ಒಂದು ಹಾಡು ಸೈತ ಸಿನಿಮಾಗೆ ಬರೆದಿರಲಿಲ್ಲ ನಾನು. ಚಿತ್ರಗೀತೆ ಬರೆಯುವುದರ ಕುರಿತು ಆಗಷ್ಟೇ ಕಲಿಕೆಯ ಹಂತದಲ್ಲಿದ್ದ ನನಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋ ಒಳಗೆ ಜರುಗುವ ವಿದ್ಯಮಾನಗಳ ಬಗ್ಗೆ ತೀರಾ ಕುತೂಹಲವಿತ್ತು. ಗಾಯಕ/ಗಾಯಕಿ ಬಂದು ಸಾಹಿತಿಯ ಮುಖೇನ ಸಾಹಿತ್ಯವನ್ನು ತಮ್ಮ ಡೈರಿಯಂಥ ಪುಸ್ತಕದಲ್ಲಿ ಬರೆದುಕೊಳ್ಳುವುದು, ನಂತರ ಟ್ರ್ಯಾಕ್ ಕೇಳುವುದು, ಟ್ಯೂನಿಗನುಗುಣವಾಗಿ ತಾವು … Read more