ದದ್ದ ಬೂಗು ಕಟ್ಟಿದಾಗ !: ಪ್ರಜ್ವಲ್ ಕುಮಾರ್

ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ. “ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?” “ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ. “ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ. “ಬೂಗು! ಕಡೋ … Read more

ಆಂಗ್ಲ – ಕನ್ನಡ ಇತ್ತೀಚಿನ ನಿಘಂಟು, ಇತ್ಯಾದಿ : ಆರತಿ ಘಟಿಕಾರ್

1.       ಬೈತಲೆ ಬಟ್ಟು ಧರಿಸುವವಳು ಬೈತಲೆ ತಗೆಯಲೇ ಬೇಕೆಂಬ ನಿಯಮ ಇಲ್ಲ  ! 2.       ಸಾಮನ್ಯವಾಗಿ  ಡಾಕ್ಟರ್ ದಂಪತಿಗಳು  ತಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 🙂 3.       ವರ ಪೂಜೆಯ ಸಮಾರಂಭದಿಂದಲೇ  ಮದುವೆ  ಆಗುವವನ ಪೂಜೆ ಶುರುವಾಗುತ್ತದೆ. 🙂 4.       ಮನೆಗೆ ಬಂದ ನಂತರ ಮಾಮೂಲಿಗಿಂತಲೂ  ಹೆಚ್ಚು ಮೌನಿಯಾಗಿ  ಗಂಡ  ಕುಳಿತ್ತಿದ್ದರೆ (ಆಫೀಸಿನಲ್ಲಿ) ಏನಾದರೂ ಎಡವಟ್ಟು ಮಾಡಿಕೊಂಡಿದ್ದಾನೆಂದೇ ಅರ್ಥ. 5.       ಪೆನ್ ಅಂಗಡಿಗಳಲ್ಲಿ  ಹೊಸ ಪೆನ್ ಪರೀಕ್ಷಿಸುವವರೆಲ್ಲರೂ  ಅಲ್ಲಿದ್ದ ಪೇಪರ್ ಮೇಲೆ ಗೀಚೀಯೇ ನೋಡುತ್ತಾರೆ. (ಹೀಗಾಗಿ … Read more

ಫಿಟ್ಟಿಂಗ್ ನಲ್ಲಿ ಫಿಕ್ಸಿಂಗ್ ಫಿಕ್ಸು..!: ಎಂ. ಆರ್. ಸಚಿನ್

ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!! ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ … Read more

ಅಳಿಯವಾಂತರಗಳು: ಜಯಪ್ರಕಾಶ ಅಬ್ಬಿಗೇರಿ

‘ಅಳಿಯ’ಎಂದೊಡನೆ ಅವನ ಬಗೆಗೆ ಕುತೂಹಲವಾಗುವುದುಂಟು. ಅಳಿಯ, ಅಳಿಯತನ, ಇವು ಸಂಸಾರಕ್ಕೆ ಸಂಬಂಧಿಸಿದ ಹೊಸ ಪದಗಳಲ್ಲದಿದ್ದರೂ ಕೂಡ ಈ “ಅಳಿಯ” ಎಂಬ ಪದದಲ್ಲಿ  ಹೊಸ ಚೇತನ, ಹೊಸ ಕ್ರಿಯೆ, ಅಡಗಿದೆ ಎಂದೆನಿಸುತ್ತದೆ. ಈ ಅಳಿಯಂದಿರಲ್ಲಿ ಅನೇಕ ಪ್ರಕಾರಗಳುಂಟು. ಅಕ್ಕನ ಮಗ, ಹೆಂಡತಿಯ ತಮ್ಮ, ಮಗಳ ಗಂಡ, ಹೀಗೆ ಅನೇಕ ಅಳಿಯಂದಿರು ನಮಗೆ ಕಾಣಸಿಗುತ್ತಾರೆ. ಇನ್ನು ಕೆಲವರು ಮೊದಲು ಭಾವಿ ಅಳಿಯಂದಿರಾಗಿ ನಂತರ ಸ್ವಂತ ಅಳಿಯಂದಿರಾಗುವುದು ಸಾಮಾನ್ಯವಾಗಿದೆ. ಕೆಲವು ಭಾವಿ ಅಳಿಯಂದಿರು ಮದುವೆಗಿಂತ ಮೊದಲೇ ಬೋರಿಂಗ್ ಅಳಿಯರಾಗಿ ನಂತರ ಸ್ವಂತ … Read more

ಪಕ್ಷಾಂತರ ಮತ್ತು ಪೂಜಾಯಣ:ವಿಜಯ್ ಹೆರಗು

  ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು..   ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀ ಫ್ಯಾನ್ ಹಿಡ್ಕಂಡು ನೇತಾಡ್ತಾ ಅವಳಂತೆ.!!?? ಕೆಂಚ : ಅಯ್ಯೋ ಬುಡ್ಲಾ ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. … Read more

ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

  ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು. ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ. ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ… ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!! ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ … Read more