ಮಿಥೇನ್ ಎಂಬ ಟೈಬಾಂಬ್ ಟಿಕ್.. ಟಿಕ್…: ಅಖಿಲೇಶ್ ಚಿಪ್ಪಳಿ

ತೇನವಿನಾ ತೃಣಮಪಿ ನ ಚಲತಿ ಎನ್ನುವ ಮಾತು ಭಗವಂತನಿಗಿಂತ ಚೆನ್ನಾಗಿ ವಿದ್ಯುಚ್ಛಕ್ತಿಗೇ ಅನ್ವಯವಾಗುತ್ತದೆ. ಯಾಕೆಂದರೆ ವಿದ್ಯುತ್ತಿಲ್ಲದಿದ್ದರೆ ಇಂದು ಜೀವನವೇ ಇಲ್ಲ. ಮನುಷ್ಯ ಇದ್ದೂ ಸತ್ತಂತೆ. ಮನೆಯೊಳಗಿನ ತೃಣವೂ ಕಸದ ಬುಟ್ಟಿಗೆ ರವಾನೆಯಾಗಲು ವಿದ್ಯುತ್ ಬೇಕು. ಇಂದು ವಿದ್ಯುತ್ ಎಂಬ ಮಹಾಮಾಂತ್ರಿಕನಿಲ್ಲದೆ ಜೀವಪ್ರವಾಹವೇ ನಿಶ್ಚಲ. ಶಿಶುವಾಗಿ ಹುಟ್ಟುವಾಗಿನಿಂದ ಹಿಡಿದು ಹೆಣವಾಗಿ ಉರಿದು ಬೂದಿಯಾಗುವವರೆಗೂ ವಿದ್ಯುತ್ ಬೇಕೇಬೇಕು. ಶಿಶು ಹುಟ್ಟುವಾಗ, ಅದು ಆಪರೇಷನ್ ಥಿಯೇಟರ್ ಆಗಿರಲಿ, ಬಾಣಂತಿ ಕೋಣೆಯಗಿರಲಿ ವಿದ್ಯುತ್ ಬೇಕು. ಹುಟ್ಟಿದ ಮಗುವೂ ಕೂಡ ಅಮ್ಮ, ನೀನಲ್ಲದಿದ್ದರೆ ನಾನಿದ್ದೇನು, … Read more

ಕೃತಕ ಮಾಂಸ-ಎಲೆ ಮತ್ತು ವಿಶ್ವಬ್ಯಾಂಕ್ ಎಂಬ ವಿಷಜಾಲ: ಅಖಿಲೇಶ್ ಚಿಪ್ಪಳಿ ಅಂಕಣ

ಮೊನ್ನೆ ಅಂದರೆ ಅಗಸ್ಟ್ ೩ ೨೦೧೪ರಂದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ನೆರೆ ದೇಶವಾದ ನೇಪಾಳಕ್ಕೆ ಭೇಟಿ ನೀಡಿದ್ದರು. ಕಳೆದ ೧೭ ವರ್ಷಗಳಿಂದ ಯಾವುದೇ ಭಾರತದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರಲಿಲ್ಲ. ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ರುದ್ರಾಕ್ಷಿ ಸರ ತೊಟ್ಟು ಕೊಂಡು ಭೇಟಿ ನೀಡಿದ ಸಮಯದಲ್ಲೇ ಇತ್ತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ವರದಿ ಮಾಡಿತ್ತು. ನೆರೆಯ ಚೀನಾದ ಮಂದಿ ಕಾರಿನ ಸೀಟು ಕವರ್‌ಗಳಿಗೆ ರುದ್ರಾಕ್ಷಿಯನ್ನು ಬಳಸುತ್ತಿದೆ ಎಂದು ಹೇಳಿತ್ತು. ಇದೇ … Read more

ಮನುಕುಲದ ಅವಸಾನ ಹತ್ತಿರವಾಗುತ್ತಿದೆಯೇ?: ಅಖಿಲೇಶ್ ಚಿಪ್ಪಳಿ ಅಂಕಣ

ಭೂಮಿಯ ಮೇಲೆ ಒಂದು ತರಹದ ವೈರಸ್ ಸೃಷ್ಟಿಯಾಗಿದೆ. ಈ ವೈರಸ್‌ಗಳು ಮನುಷ್ಯನ ದೇಹವನ್ನು ಹೊಕ್ಕು ಅವಾಂತರ ಮಾಡಿ ಕ್ರಮೇಣ ಸಾಯಿಸುತ್ತವೆ. ಸತ್ತ ಹೆಣಗಳು ಮತ್ತೆ ಎದ್ದು ಕೂತು ದೆವ್ವಗಳಾಗಿ ಪರಿವರ್ತನೆ ಹೊಂದಿ ಉಳಿದ ಮನುಷ್ಯರನ್ನು ಕಾಡುತ್ತವೆ. ಈ ತರಹದ ಕಥಾವಸ್ತುವನ್ನು ಹರವಿಕೊಂಡು ನಿರ್ಮಿಸಲಾದ ಅಮೇರಿಕಾದ ಒಂದು ಪ್ರಸಿದ್ಧ ಧಾರಾವಾಹಿಯ ಹೆಸರು ದಿ ವಾಕಿಂಗ್ ಡೆಡ್. ಈ ಧಾರಾವಾಹಿಯು ಅತ್ಯಂತ ಪ್ರಸಿದ್ಧಿಯನ್ನು ಪಡೆದು ದಾಖಲೆ ನಿರ್ಮಿಸಿದೆ. ಕಾಲ್ಪನಿಕವಾಗಿ ಸೃಷ್ಟಿಸಲಾದ ಈ ಘಟನೆಗಳು ನಿಜವಾಗಲೂ ನಡೆಯುತ್ತವೆಯೇ? ಮನುಕುಲದ ಅವಸಾನ ಸನಿಹವಾಗುತ್ತಿದೆಯೇ? … Read more

ಪಂಚಮಹಾಸಾಗರದ ಐದು ಕೊಳೆಗುಂಡಿಗಳು: ಅಖಿಲೇಶ್ ಚಿಪ್ಪಳಿ ಅಂಕಣ

(ಭೂಮಂಡಲದ ಶೇ ೭೦ ಭಾಗ ನೀರಿನಿಂದ ಸುತ್ತುವರೆದಿದೆಯಾದ್ದರಿಂದ ಅಷ್ಟೂ ನೀರನ್ನೂ ಸೇರಿಸಿ ಒಂದೇ ಮಹಾಸಾಗರ ಎನ್ನಬಹುದು. ಆದರೂ ದೇಶಗಳು ತಮ್ಮ ಗಡಿಗಳಿಗೆ ಅನುಸಾರವಾಗಿ ೫ ಮಹಾಸಾಗರಗಳನ್ನು ಗುರುತಿಸಿಕೊಂಡಿದ್ದಾರೆ. ೧. ಪೆಸಿಫಿಕ್ ಮಹಾಸಾಗರ ೨. ಅಟ್ಲಾಂಟಿಕ್ ಮಹಾಸಾಗರ ೩. ಹಿಂದೂ ಮಹಾಸಾಗರ ೪. ಅಂಟಾರ್ಟಿಕ್ ಮಹಾಸಾಗರ ಮತ್ತು ಆರ್ಕ್‌ಟಿಕ್ ಮಹಾಸಾಗರ) ಮೊನ್ನೆ ಸೋಮವಾರ ಅಂದರೆ ದಿನಾಂಕ:೨೧/೦೭/೨೦೧೪ರ ಬೆಳಗ್ಗೆ ತೋಟದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುವಾಗ ಅಪ್ಪಟ ಭೂಮಿಪುತ್ರನ ಜಂಗಮವಾಣಿಯಿಂದ ಕರೆ ಬಂತು ಎಂದು ಮನೆಯಿಂದ ಕೂಗಿದರು. ಈ ಭೂಮಿಪುತ್ರನ ದೂರವಾಣಿ … Read more

ಅಣ್ವಾಸುರನ ಬೂದಿ ಮತ್ತು ವಿಶ್ವ ಅಣು ಪರೀಕ್ಷೆ ವಿರೋಧಿ ದಿನಾಚರಣೆ: ಅಖಿಲೇಶ್ ಚಿಪ್ಪಳಿ

ಆಧುನಿಕ ಮಾನವನ ಯೋಚನೆಗಳು, ವರ್ತನೆಗಳು ಎಲ್ಲವೂ ಸ್ವಾರ್ಥದಿಂದ ಕೂಡಿದೆ. ತಕ್ಷಣದ ಲಾಭಕ್ಕಾಗಿ ಏನು ಮಾಡುವುದಕ್ಕೂ ತಯಾರು. ಒಟ್ಟಾರೆ ಬಹುಸಂಖ್ಯಾತರ ಆಲೋಚನೆಗಳು ಸದ್ಭುದ್ದಿಯಿಂದ ಕೂಡಿದೆ ಎನಿಸುವುದಿಲ್ಲ. ಮೊನ್ನೆ ಸ್ನೇಹಿತರೊಬ್ಬರು ಕಾಫಿ ಕುಡಿಯೋಣ ಬನ್ನಿ ಎಂದು ಕರೆದರು. ಅರ್ಧರ್ಧ ಕಾಫಿ ಕುಡಿದು ಮುಗಿಯುವಷ್ಟರಲ್ಲಿ ಮಳೆ ಬಂತು. ಅದೂ ಮಳೆಗಾಲ ಶುರುವಾದ ಮೇಲೆ ತುಂಬಾ ಅಪರೂಪಕ್ಕೆ ಬಂದ ಮಳೆ. ಕಾಫಿಗೆ ಕರೆದೊಯ್ದ ಸ್ನೇಹಿತರಿಗೆ ಅಸಹನೆ ಶುರುವಾಯಿತು. ಥೂ! ಎಂತಾ ಮಳೆ ಮಾರಾಯ್ರೆ?. ಇವರಿಗೆ ಕಾಫಿ ಕುಡಿದ ತಕ್ಷಣ ತಮ್ಮ ಕೆಲಸಕ್ಕೆ ಹೋಗಬೇಕಿತ್ತು. … Read more

ಮರಗಳ್ಳರೇ! ವನ್ಯ ಹಂತಕರೇ – ಇದೋ ನಾವು ಕೇಳಿಸಿಕೊಳ್ಳುತ್ತಿದ್ದೇವೆ!! ಎಚ್ಚರ!!!: ಅಖಿಲೇಶ್ ಚಿಪ್ಪಳಿ

ಜುಲೈ ೫ ೨೦೧೪ ಶನಿವಾರದಂದು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಉದಯೋನ್ಮುಖ ಕವಿ ರಚಿಸಿದ ಪರಿಸರ ಜಾಗೃತಿ ಕುರಿತಾದ ನಾಟಕ ಸಂಜೆ ೭ ಗಂಟೆಗೆ ಶುರುವಾಗಬೇಕಿತ್ತು. ಕಾರಣಾಂತರಗಳಿಂದಾಗಿ ರಾತ್ರಿ ೯.೩೦ಕ್ಕೆ ಶುರುವಾಯಿತು. ಮುಕ್ಕಾಲು ತಾಸಿನ ಮಕ್ಕಳು ಅಭಿನಯಿಸಿದ ಸುಂದರ ನಾಟಕ ಮುಗಿಸಿ ಮನೆಗೆ ಹೋಗಿ ಊಟ ಮಾಡಿ ಮಲಗುವಾಗ ಹನ್ನೊಂದು ಘಂಟೆಯ ಮೇಲಾಗಿತ್ತು. ಮೆಸ್ಕಾಂನವರು ಹಠ ತೊಟ್ಟು ವಿದ್ಯುತ್ ನಿಲುಗಡೆ ಮಾಡಿ ಮಲಗಿದ್ದರು. ಮಲಗಿದವನಿಗೆ ಕಣ್ಣು ಹತ್ತುತ್ತಿತ್ತು. ಡಂ! ಎಂಬ ಶಬ್ಧವಾಯಿತು. ಮಗ ಎದ್ದು ಬಂದ. … Read more

ವಿಶ್ವ ಜನಸಂಖ್ಯಾ (ಸ್ಪೋಟ!) ದಿನಾಚರಣೆ – ಜುಲೈ ೧೧: ಅಖಿಲೇಶ್ ಚಿಪ್ಪಳಿ

ತುಂಬಾ ನೇರವಾಗಿ ಹೇಳಬೇಕೆಂದರೆ, ನೊಣ, ಸೊಳ್ಳೆ, ಇಲಿ-ಹೆಗ್ಗಣ, ತಿಗಣೆ, ಉಣ್ಣಿ, ಊಜಿನೊಣ ಇತ್ಯಾದಿಗಳು ಈ ಸೃಷ್ಟಿಯ ರಾಕ್ಷಸ ರೂಪಗಳು. ಇವುಗಳನ್ನು ಸಂಹಾರ ಮಾಡಲು ಯಾವುದೇ ಆಯುಧಗಳಿಲ್ಲ. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕ ಬಲ್ಲ ಸಾಮರ್ಥ್ಯವನ್ನು ಈ ರಾಕ್ಷಸ ರೂಪಿಗಳು ಹೊಂದಿವೆ. ಯಾವುದೇ ರಾಸಾಯನಿಕಗಳಿಂದಲೂ ಇವುಗಳನ್ನು ನಾಶ ಮಾಡಲು ಆಗದು. ಇವುಗಳ ಸಂಖ್ಯೆಯೂ ಅಧಿಕ. ಇದೇ ಸಾಲಿಗೆ ಇನ್ನೊಂದು ಜೀವಿ ಸೇರ್ಪಡೆಯಾಗಿದೆ. ಅದೇ ಆಧುನಿಕ ಮಾನವ. ಕಳೆದೊಂದು ಶತಮಾನದಲ್ಲಿ ತನ್ನ ಸಂಖ್ಯೆಯನ್ನು ಮೂರು-ನಾಲ್ಕು ಪಟ್ಟು ಹೆಚ್ಚಿಸಿಕೊಂಡು ಭೂಮಿಯ … Read more

ಕೀನ್ಯಾದ ಸತಾವ್ ಮತ್ತು ಇಂಡಿಯಾದ ಘೆಂಡಾ: ಅಖಿಲೇಶ್ ಚಿಪ್ಪಳಿ

ಸತಾವ್ ಹೆಸರಿನ ಅವನೊಬ್ಬನಿದ್ದ. ೪೫ ವರ್ಷದ, ಭೀಮಕಾಯದ, ಬಾಳೆಯ ದಿಂಡಿನಷ್ಟು ಬೆಳ್ಳಗಿದ್ದ ದಂತವನ್ನು ಹೊಂದಿದ ಬೃಹತ್ ಗಾತ್ರದ ಗಂಭೀರವಾದ ಆನೆ ತ್ಸಾವೋ ಸಂರಕ್ಷಿತ ಅರಣ್ಯವನ್ನು ಅಕ್ಷರಷ: ಆಳಿದವ. ಇಡೀ ಜಗತ್ತಿನ ಅತಿ ದೊಡ್ಡ ಆನೆಗಳ ಪೈಕಿ ಒಬ್ಬನಾಗಿದ್ದ.  ಆಕಾಶದಿಂದ ಹಣಿಕಿದರೂ ಕಾಣುವಂತಿದ್ದ ಉದ್ದದ ಬಿಳಿ ಕೋರೆಯನ್ನು ಹೊಂದಿದ್ದ. ಒಂದೊಂದು ಕೋರೆಯೂ ೫೦ ಕೆ.ಜಿ.ಗಳಿಗಿಂತ ಜಾಸ್ತಿ ತೂಗುತ್ತಿದ್ದವು. ತ್ಸಾವೋ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರನ್ನು ತನ್ನ ದೈತ್ಯ ಗಾತ್ರ ಮತ್ತು ಕೋರೆಗಳಿಂದಾಗಿ ಗಮನ ಸೆಳೆಯುತ್ತಿದ್ದ. … Read more

ಕೆಂದಳಿಲು-ಚೆಂದದಳಿಲು: ಅಖಿಲೇಶ್ ಚಿಪ್ಪಳಿ

ಮಾರ್ಚ್ ೨೦ ೨೦೧೪ ರಾತ್ರಿ ಖ್ಯಾತ ಪೆರ್ಡೂರು ಮೇಳದ ಯಕ್ಷಗಾನ ಸಾಗರ ಸಮೀಪದ ಕರ್ಕಿಕೊಪ್ಪದಲ್ಲಿ.  ಸಂಜೆಯಾದ ಮೇಲೆ ಮತ್ತಿಕೊಪ್ಪದಿಂದ ಒಳದಾರಿಯಲ್ಲಿ ಕರ್ಕಿಕೊಪ್ಪ ತಲುಪಲು ಬಹಳ ಹೊತ್ತು ಬೇಕಾಗಿಲ್ಲ. ದಟ್ಟ ಕಾನನದ ಕಚ್ಚಾರಸ್ತೆಯಲ್ಲಿ ಹೊರಟರೆ ೨ ಕಿ.ಮಿ. ತಲುಪಲು ಬರೀ ಅರ್ಧಗಂಟೆ ಸಾಕು. ಆಟ ಶುರುವಾಗುವುದು ಹೇಗೂ ೧೦ ಗಂಟೆಗೆ ತಾನೆ. ಊಟ ಮುಗಿಸಿಯೇ ಹೊರಡುವುದೆಂಬ ತೀರ್ಮಾನದಲ್ಲಿದ್ದ ಆದಿತ್ಯ. ಸೆಕೆಂಡ್ ಪಿ.ಯು.ನಲ್ಲಿ ಪಾಸಾಗದೇ ಅನಿವಾರ್ಯವಾಗಿ ಕರ್ಕಿಕೊಪ್ಪದಲ್ಲೇ ಗ್ಯಾರೇಜ್ ಸೇರಿ ಹೆಸರು ಮಾಡಿದ್ದ ಆದಿತ್ಯ ಕೈ ತೊಳೆದು ಊಟಕ್ಕೆ ಕೂರಬೇಕು … Read more

ಹುಲಿ ವಿಧವೆ ರಹೀಮಾ ಬೇಗಂ: ಅಖಿಲೇಶ್ ಚಿಪ್ಪಳಿ

ಮೊನ್ನೆ ಭಾನುವಾರ ಬೇರೆ ಯಾವುದೋ ವಿಚಾರಕ್ಕೆ ಊರಿನಲ್ಲಿ ಮೀಟಿಂಗ್ ಸೇರಿದ್ದೆವು. ಹತ್ತಾರು ಜನರಿದ್ದ ಆ ಗುಂಪಿನಲ್ಲಿ ರಸ್ತೆ ಅಗಲೀಕರಣದ ವಿಷಯ ಅದೇಗೋ ನುಸುಳಿ ಬಂತು. ಗ್ರಾಮಪಂಚಾಯ್ತಿಯ ಸದಸ್ಯರೊಬ್ಬರು ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯ ಮರಕಡಿಯಲು ಪರವಾನಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸಾರಾಂಶ. ಸರಿ ಪರಸ್ಪರ ಚರ್ಚೆ ಶುರುವಾಯಿತು.  ಕೆಲವರು ಹೇಳಿದರು ಅಭಿವೃದ್ಧಿಗಾಗಿ ರಸ್ತೆ ಬದಿಯ ಸಾಲು ಮರಗಳನ್ನು ತೆಗೆಯುವುದು ಅನಿವಾರ್ಯ. ಹಿಂದೆ ಅದ್ಯಾವುದೋ ಕಾಲದಲ್ಲಿ ಜನರು ನಡೆದುಕೊಂಡೊ ಅಥವಾ ಎತ್ತಿನ ಗಾಡಿಗಳಲ್ಲಿ ದೂರದೂರುಗಳಿಗೆ ಹೋಗುತಿದ್ದರು. … Read more

ಓತಿ ಮೊಟ್ಟೆಯಿಟ್ಟ ಕತೆ: ಅಖಿಲೇಶ್ ಚಿಪ್ಪಳಿ

ಹೊಸ ಮನೆ ಕಟ್ಟಿಕೊಂಡು ವಾಸವಾಗಿ ಸುಮಾರು ೨ ತಿಂಗಳು ಕಳೆದವು. ಕೃಷಿಯಿಂದ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಮರಳಿ ಮಣ್ಣಿಗೆ ಹೋಗಿದ್ದು ಹೊಸ-ಹೊಸ ಅನುಭವಗಳನ್ನು ನೀಡುತ್ತಿದೆ. ಈಗ ಕಟ್ಟಿಕೊಂಡಿರುವ ಹೊಸ ಮನೆಯ ಹಿಂಭಾಗದಲ್ಲಿ ಸುಮಾರು ೨೦ ಗುಂಟೆಯಷ್ಟು ಜಾಗದಲ್ಲಿ ದಟ್ಟವಾದ ಅರಣ್ಯ ರೂಪುಗೊಂಡಿದೆ. ಅಗಣಿತ ಸಂಖ್ಯೆಯಲ್ಲಿ ಸಸ್ಯಗಳ ಸಂಖ್ಯೆ ವೃಧ್ದಿಸಿದೆ. ನೂರಾರು ಕಾಡಿನ ಮೇಲ್ಮನೆ ಸದಸ್ಯರು ದಿನಾ ಬೆಳಗ್ಗೆ ಸಂಗೀತ ನೀಡುತ್ತವೆ. ಹನುಂತರಾಯರ ಸಂತತಿಯೂ ಬಂದು ತಮ್ಮ ಹಕ್ಕನ್ನು ಚಲಾಯಿಸಲು ಬಯಸುತ್ತಿವೆ. ಅಳಿದು ಹೋದವೆಂದುಕೊಂಡ ಕ್ಯಾಸಣಿಲು ತನ್ನ ಉದ್ದವಾದ ಸುಂದರ … Read more

ಆನೆ ಜೀವನ: ಅಖಿಲೇಶ್ ಚಿಪ್ಪಳಿ

ಮೆಕ್ಸಿಕೊ ದೇಶದ ಪ್ರಜೆಯೊಬ್ಬ ದೊಡ್ಡ ಸೂಟ್‌ಕೇಸಿನಲ್ಲಿ ೫೫ ಆಮೆಗಳನ್ನು ಮತ್ತು ೩೦ ಬಣ್ಣದ ಓತಿಗಳನ್ನು ಸಾಗಿಸುವಾಗ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾನೆ. ಮೆಕ್ಸಿಕೊ ಸಿಟಿಯಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ಬಾರ್ಸಿಲೋನಕ್ಕೆ ಈ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಅಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿದೆ. ೫೦ ರಿಂದ ೬೦ ಸಾವಿರ ಪೌಂಡ್ ಬೆಳೆಬಾಳುವ ಈ ಪ್ರಾಣಿಗಳಲ್ಲಿ ಮೂರು ಆಮೆಗಳು ಸತ್ತು ಹೋಗಿದ್ದವು. ಮತ್ತೊಂದು ಹಾರುವ ಓತಿ ಗರ್ಭ ಧರಿಸಿತ್ತು ಎಂಬುದನ್ನು ಅಲ್ಲಿನ ವನ್ಯಜೀವಿ ತಜ್ಞರು ಹೇಳಿದ್ದಾರೆ. … Read more

ಮೇ ೨೨ ಹಾಗೂ ಜೂನ್ ೫ ರ ನಡುವೆ: ಅಖಿಲೇಶ್ ಚಿಪ್ಪಳಿ

ಮೇ ೨೨ ಜೀವಿ ವೈವಿಧ್ಯ ದಿನ. ಮೇ ತಿಂಗಳು ಕಳೆದ ನಂತರ ಜೂನ್ ಮೊದಲ ವಾರದಲ್ಲೇ ಅಂದರೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆ. ಈ ಪರಿಸರದಲ್ಲಿ ಎನೆಲ್ಲಾ ವೈವಿಧ್ಯಗಳಿವೆ ಎಂಬುದನ್ನು ಸಂಪೂರ್ಣವಾಗಿ ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಪ್ರತಿವರ್ಷ ಹೊಸ ಸಸ್ಯವೈವಿಧ್ಯ ಹಾಗೂ ಜೀವಿಗಳು ಪತ್ತೆಯಾಗುತ್ತಿರುತ್ತವೆ. ನಿಸರ್ಗ ಅದ್ಯಾವುದೋ ಲೆಕ್ಕಾಚಾರ ಹಾಕಿಯೇ ಜೀವಿಗಳನ್ನು ಸೃಷ್ಟಿ ಮಾಡುತ್ತಿರುತ್ತದೆ. ನಮ್ಮ ಗ್ರಹಿಕೆ ಬರುವ ಮೊದಲೇ ಹಲವು ಜೀವಿಗಳು ನಾಮಾವಶೇಷವಾಗುತ್ತವೆ. ಪ್ರಕೃತಿಯ ಅಗಾಧ ಅಚ್ಚರಿಗಳ ಎದುರು ನಾವು ಹುಲುಮಾವನರಷ್ಟೆ ಸೈ. … Read more

ಕಾಳಮಂಜಿ ಗುಡ್ಡ, ಉರಿಸೆಖೆ ಮತ್ತು ಆಹಾರಭದ್ರತೆ: ಅಖಿಲೇಶ್ ಚಿಪ್ಪಳಿ

ಅರೆಮಲೆನಾಡಿನ ಸ್ನೇಹಿತರೊಬ್ಬರು ಮಲೆನಾಡಿಗೆ ಬಂದಿದ್ದರು. ಸಾಗರದಂತಹ ಮಲೆನಾಡಿನಲ್ಲಿ ಈ ಪರಿ ಸೆಖೆಯಿದೆ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಇದಕ್ಕೇನು ಕಾರಣ ಎಂದು ಕೇಳಿದರು. ಇದನ್ನು ಸ್ವಲ್ಪ ಸುತ್ತಿ-ಬಳಸಿ ಹೇಳುವುದು ಒಳ್ಳೆಯದು ಎಂದು ತೋರುತ್ತದೆಯೆಂಬ ಕಾರಣಕ್ಕೆ ಉದಾಹರಣೆಯನ್ನು ನೀಡುವುದು ಅನಿವಾರ್ಯವಾಯಿತು.  ೧೯೭೪-೭೫ರಷ್ಟು ಹಿಂದಿನ ಘಟನೆಯಿದು. ಲಿಂಗನಮಕ್ಕಿಯಿಂದ ಎ.ಬಿ.ಸೆಟ್‌ವರೆಗೆ ಹಾಗೆಯೇ ಎ.ಬಿ.ಸೆಟ್‌ನಿಂದ ಲಿಂಗನಮಕ್ಕಿಯವರೆಗೆ ನೀರು ಸಾಗಣೆಗಾಗಿ ಒಂದು ಚಾನೆಲ್ ನಿರ್ಮಿಸುವ ಯೋಜನೆ ತಯಾರಾಯಿತು.  ಈ ಯೋಜನೆಗೆ ಸೆಂಟ್ರಲ್ ಆಡಿಟ್ ಚಾನೆಲ್ ಎಂದು ಹೆಸರಿಡಲಾಯಿತು. ಈಗಿನ ಹಾಗೆ ತಂತ್ರಜ್ಞಾನ ಮುಂದುವರೆದು ಆಧುನಿಕ ರಾಕ್ಷಸ … Read more

ವಿಚಿತ್ರಗಳು-ವಿಕೃತಿಗಳು: ಅಖಿಲೇಶ್ ಚಿಪ್ಪಳಿ

ಈ ಮನುಷ್ಯರಲ್ಲಿ ಜಾತಿಯನ್ನು ಯಾರು ಹುಟ್ಟು ಹಾಕಿದರೋ? ಎಲ್ಲರೂ ಉಸಿರಾಡುವುದು ಗಾಳಿಯನ್ನೇ! ತಿನ್ನುವುದು ಅನ್ನ, ಕುಡಿಯುವುದು ನೀರು. ಆದರೂ ಜಾತಿ-ತಾರತಮ್ಯ, ಮೇಲು-ಕೀಳು ಎಲ್ಲಾ ಹೊಲಸುತನದ ಪರಮಾವಧಿ. ಸರ್ಕಾರಗಳೂ ತಮ್ಮ ಲಾಭಕ್ಕೋಸ್ಕರ ಜಾತಿಯನ್ನು ಪೋಷಿಸುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತವೆ. ಶಾಲೆಗೆ ಸೇರಿಸುವಾಗಲೇ ಜಾತಿಯನ್ನು ನಮೂದಿಸಬೇಕು ಕಡ್ಡಾಯವಾಗಿ. ಇರಲಿ, ಮನುಷ್ಯ ಸಮಾಜದ ವಿಕೃತಿಗಳು ಕಾಲಕ್ರಮೇಣದಲ್ಲಿ ಸುಧಾರಿಸಬಹುದು ಎಂಬ ಆಶಾವಾದವನ್ನು ಇಟ್ಟುಕೊಳ್ಳೋಣ. ಪ್ರಾಣಿ-ಪಕ್ಷಿ ಪ್ರಪಂಚದಲ್ಲೂ ಕೋಟಿಗಟ್ಟಲೆ ಪ್ರಭೇದಗಳಿವೆ. ಹಲವು ಪ್ರಭೇದಗಳು ಪರಿಸರಕ್ಕೆ, ಸಮಾಜಕ್ಕೆ ಉಪಕಾರವನ್ನು ಮಾಡಿದರೆ, ಕೆಲವು ಪ್ರಭೇದಗಳು ಹಾನಿಯನ್ನುಂಟು ಮಾಡುತ್ತವೆ. … Read more

ಗುಡುಗುಮ್ಮ ಬಂದಾ: ಅಖಿಲೇಶ್ ಚಿಪ್ಪಳಿ

ಗುಡುಗುಮ್ಮ ಬಂದ ಹೆಡಿಗೆ ತಂದಾ ಅಕ್ಕಿ ಬ್ಯಾಡಂತೆ ಭತ್ತ ಬ್ಯಾಡಂತೆ ನೀನೇ ಬೇಕಂತೆ!!! ಇಂತದೊಂದು ದಾಟಿಯನ್ನು ಹೇಳಿ ಅಳುವ ಮಕ್ಕಳನ್ನು ಸಂತೈಸುವ ಪ್ರಯತ್ನವನ್ನು ಮಲೆನಾಡಿನ ಹಳ್ಳಿಗಾಡುಗಳಲ್ಲಿ ಕಾಣಬಹುದಿತ್ತು. ನಮಗೂ ಈ ಹಾಡನ್ನು ಹೇಳಿ ಹೆದರಿಸಿ ಸಂತೈಸುತ್ತಿದ್ದದು ನೆನಪು. ಬೇಸಿಗೆ ಬೇಗೆಯಲ್ಲಿ ಬೇಯುತ್ತಾ ಸೂರ್ಯನಿಗೆ ಶಾಪ ಹಾಕುತ್ತಾ, ತಣ್ಣನೆಯ ಪಾನೀಯಗಳನ್ನು ಹೀರುತ್ತಾ, ಮೈಯೆಲ್ಲಾ ಬೆವರು, ನೀರಿದ್ದವರು ಎರೆಡೆರೆಡು ಸ್ನಾನ ಮಾಡುತ್ತಾ, ಮತ್ತೆ ಬೆವರುವ ಪರಿ, ಮಳೆಯಾದರೂ ಬಂದಿದ್ದರೆ ಚೆನ್ನಾಗಿತ್ತು ಎಂದು ಹಂಬಲಿಸುವ ಕೋಟ್ಯಾಂತರ ಮನಸ್ಸುಗಳ ಆರ್ತ ಕೇಳಿ ಮೇಲೇರಿದ … Read more

ಕಾಕ್ರೋಚ್ ಎಫೆಕ್ಟ್ ಮತ್ತು ಹನಿಯನ್ ಗಿಬ್ಬನ್: ಅಖಿಲೇಶ್ ಚಿಪ್ಪಳಿ

ಯಾರ ಬಾಯಲ್ಲಿ ನೋಡಿದರೂ ಒಂದೇ ಮಾತು. ಸೆಕೆ-ಸೆಕೆ-ಸೆಕೆ-ಉರಿ. ಮಳೆ ಯಾವಾಗ ಬರುತ್ತೋ? ಇತ್ಯಾದಿಗಳು. ರಾತ್ರಿಯಿಡೀ ನಿದ್ದೆಯಿಲ್ಲ. ವಿಪರೀತ ಸೆಖೆ ಮತ್ತು ಸೊಳ್ಳೆ. ಮೇಲುಗಡೆ ಮತ್ಸ್ಯಯಂತ್ರ ತಿರುಗದಿದ್ದರೆ ನಿದ್ದೆಯಿಲ್ಲ. ಬೆಳಗ್ಗೆ ಎದ್ದಾಗ ಕಣ್ಣೆಲ್ಲಾ ಉರಿ. ಎಷ್ಟು ನೀರು ಕುಡಿದರೂ ಕಡಿಮೆ. ದಾಹ. ವಿಪರೀತ ದಾಹ. ಕಳೆದೆರೆಡು ಮೂರು ದಶಕಗಳಿಂದ ಹವಾಮಾನ ಏರುಪೇರಾಗುತ್ತಿದೆ ಎಂಬ ಕೂಗು ಶುರುವಾಗಿ ಇದೀಗ ಅದೇ ಕೂಗು ಮುಗಿಲು ಮುಟ್ಟುತ್ತಿದೆ. ಊರ್ಧ್ವಮುಖಿಯ ಅವಾಂತರಗಳು ಹೆಚ್ಚಾದಷ್ಟು ವಾತಾವರಣದಲ್ಲಿ ಬಿಸಿಯೇರಿಕೆಯಾಗುತ್ತದೆ. ಒಟ್ಟಾರೆಯಾಗಿ ಭೂಮಿಯ ಬಿಸಿಯನ್ನು ಕಡಿಮೆ ಮಾಡಬೇಕೆಂಬ ಉದ್ಧೇಶದಿಂದ … Read more

ತಕರಾರಿನ ತರಕಾರಿ-ತಲೆನೋವಿನ ಎಳನೀರು: ಅಖಿಲೇಶ್ ಚಿಪ್ಪಳಿ

ಅತಿಸಾರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಚಿತ್ರದುರ್ಗದ ಖಾಸಗಿ (ಹೆಸರು ನೆನಪಿಲ್ಲ) ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿನ ತಜ್ಞವೈದ್ಯರು ಒಂದು ವಾರ ಆತನಿಗೆ ಸೂಕ್ತ ಚಿಕಿತ್ಸೆ ನೀಡಿ ಬಿಡುಗಡೆ ಮಾಡುತ್ತಾರೆ. ಅತಿಸಾರದಿಂದ ಬಳಲಿದ ರೋಗಿಗೆ ಹೆಚ್ಚು-ಹೆಚ್ಚು ದ್ರವರೂಪದ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಹಾಗೆಯೇ ಎಳನೀರನ್ನು ಹೆಚ್ಚು ಸೇವಿಸಿ ಎಂದೂ ಸಲಹೆ ನೀಡುತ್ತಾರೆ. ಬಿಡುಗಡೆಯಾಗಿ ಹೋದ ರೋಗಿ ಮೂರನೇ ದಿನಕ್ಕೆ ಮತ್ತೆ ವಾಪಾಸು ಬರುತ್ತಾನೆ. ಈ ಬಾರಿ ಇನ್ನೂ ಹೆಚ್ಚು ಸುಸ್ತಿನಿಂದ ಬಳಲಿರುತ್ತಾನೆ. ಮುಖ ಬಿಳಿಚಿಕೊಂಡಿರುತ್ತದೆ. ಚಿಕಿತ್ಸೆಯಲ್ಲಿ ಏನೂ ವ್ಯತ್ಯಾಸ ಆಗಿರುವುದಿಲ್ಲ ಎಂದು … Read more

ವಿಲನ್ ಆಗ್ಬಿಟ್ರಲ್ಲೋ ರಾಧೇಶ! ಸೀತೇಶ!!: ಅಖಿಲೇಶ್ ಚಿಪ್ಪಳಿ

  [ಈ ಕತೆಯಲ್ಲಿ ಬರುವ ವ್ಯಕ್ತಿಗಳ ಹೆಸರು ಕ್ರಮವಾಗಿ ರಾಧೇಶ ಮತ್ತು ಸೀತೇಶ. ರಾಧೇಶ ಬಂಡವಾಳಶಾಹಿ ಮತ್ತು ಸೀತೇಶ ಹೋರಾಟಗಾರ. ವಾಸ್ತವಿಕತೆಯಿಂದ ತುಂಬಾ ದೂರ ನಿಂತು ಯೋಚಿಸಿದ ಪರಿಣಾಮವಾಗಿ ಇವರಿಬ್ಬರು ಖಳನಾಯಕರಾಗಿದ್ದಾರೆ. ಹೇಗಾದರೂ ಕಾರ್ಯಸಾಧನೆ ಮಾಡಬೇಕೆಂಬ  ಕಾನೂನುಬಾಹಿರವಾದ ಇವರ ಹಠಕ್ಕೆ ಬಲಿಷ್ಟವಾದ ಹಲಸಿನ ಮರ ಬಲಿಯಾಗಿದೆ. ಪೂರ್ಣಪಾಠವನ್ನು ಮುಂದೆ ಓದಿ] ಈ ಹಿಂದೆ “ಮಾವು-ಹಲಸಿನ ಮರವುಳಿಸಿದ ಕತೆ” ಎಂಬ ಲೇಖನವನ್ನು ಬರೆಯಲಾಗಿತ್ತು. ಲೇಖನ ಓದಿದ ನಂತರ ಖಾಸಗಿ ಪೆಟ್ರೋಲ್ ಬಂಕ್ ಮಾಲಿಕ ರಾಧೇಶನ ಮನ:ಪರಿವರ್ತನೆಯಾಗಬಹುದು ಎಂದು ಭಾವಿಸಲಾಗಿತ್ತು. … Read more

ಹೀಗೊಂದು ಪ್ರಲಾಪ: ಅಖಿಲೇಶ್ ಚಿಪ್ಪಳಿ

ಮೊನ್ನೆ ಮುಂಜಾನೆ ಗಣ್ಯರೊಬ್ಬರು ಕೆಲಸದ ಮೇಲೆ ನೋಡಲು ಬರುವವರಿದ್ದರು, ಗಣ್ಯರಿಗೆ ಒತ್ತಡಗಳಿರುತ್ತವೆ ಹಾಗೂ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗದಿರುವುದು ಅಚ್ಚರಿಯ ವಿಷಯವಲ್ಲ. ೫-೧೦ ನಿಮಿಷದಲ್ಲಿ ಬರುತ್ತಾರೆ ಎಂಬುದನ್ನು ಗಣ್ಯರ ಸಹಾಯಕ ಜಂಗಮವಾಣಿಯ ಮುಖಾಂತರ ತಿಳಿಸುತ್ತಿದ್ದ. ಸರಿ ಮತ್ತೇನು ಮಾಡಲು ತೋಚದೆ, ರಸ್ತೆಗೆ ಬಂದು ನಿಂತೆ. ಮುಂಜಾನೆಯ ಹಕ್ಕಿಗಳ ಕಲರವದ ನಡುವೆ ನಾನೇನು ಕಡಿಮೆಯೆಂಬಂತೆ ಪುಟ್ಟ ಇಣಚಿಯೊಂದು ನಿರ್ಕಾಯ್ ಮರವನ್ನು ಜಿಗಿ-ಜಿಗಿದು ಏರುತಿತ್ತು. ನಗರದ ಹೊಲಸನ್ನು ಸ್ವಚ್ಚ ಮಾಡುವ ಪ್ರಯತ್ನದಲ್ಲಿ ಕಾಗೆಗಳ ಸಂತತಿ ಮಗ್ನವಾಗಿದ್ದವು. ಕೈವಾರದಿಂದ ಗೀರಿದಷ್ಟು ಕರಾರುವಕ್ಕಾದ … Read more