ಗಾಲ್ಫ್ ಕ್ಲಬ್ ಗುಂಡುಗೋಷ್ಠಿಯೂ… ಅಲ್ಲಿನ ರೂಲ್ಸೂ…: ಎಚ್.ಕೆ.ಶರತ್

ಗೆಳೆಯನನ್ನು ಭೇಟಿ ಮಾಡಲು ಇತ್ತೀಚೆಗೆ ಮೈಸೂರಿಗೆ ಹೋಗಿದ್ದೆ. ಹೆಂಡತಿ ತವರು ಮನೆಗೆ ಹೋಗಿದ್ದ ಕಾರಣ ‘ಗುಂಡು ಪಾರ್ಟಿ’ಯಲ್ಲಿ ಪಾಲ್ಗೊಳ್ಳುವ ಅವಕಾಶ ಅವನಿಗೆ ಒಲಿದಿತ್ತು. ಅಪರೂಪಕ್ಕೆ ಸಿಗುವ ಇಂಥ ಚಾನ್ಸ್ ಮಿಸ್ ಮಾಡಿಕೊಳ್ಳಬಾರದೆಂದು ಮೈಸೂರಿನಲ್ಲಿದ್ದ ತನ್ನ ಗೆಳೆಯರಿಗೆಲ್ಲ ಕರೆ ಮಾಡಿ ಪಾರ್ಟಿ ಮಾಡುವ ಪ್ಲ್ಯಾನು ಇರುವುದಾಗಿ ತಿಳಿಸಿದ. ಗಾಲ್ಫ್ ಕ್ಲಬ್ ಮೆಂಬರ್ ಆಗಿರುವವನೊಬ್ಬ, ಕ್ಲಬ್‍ಗೆ ಹೋಗೋಣ ಹಾಗಾದ್ರೆ ಅಂತಂದ. ನಾವು ರೆಡಿಯಾದ್ವಿ. ನಮ್ಮನ್ನು ಕರೆದೊಯ್ಯಲು ಬಂದವನು, ನಮ್ಮ ಅವತಾರ ಕಂಡು ಅವಾಕ್ಕಾದ. ಈ ಡ್ರೆಸ್‍ನಲ್ಲಿ ಬಂದ್ರೆ ನಿಮ್ಮನ್ನು ಕ್ಲಬ್ … Read more

“ಮನವ ಗೆದ್ದವನೇ ಮಹಾ ಶೂರ!”: ಹೊರಾ.ಪರಮೇಶ್ ಹೊಡೇನೂರು

            ಗಾಳಿಗಿಂತಲೂ ವೇಗವಾಗಿ ಚಲಿಸುವುದು ನಮ್ಮ "ಮನಸ್ಸು" ಎಂಬುದು ಸರ್ವವಿಧಿತ. ಏಕೆಂದರೆ, ನಮ್ಮ ಮನಸ್ಸಿನಲ್ಲಿ ಒಂದು ವಸ್ತು, ನೋಡಿದ ಸ್ಥಳ, ಕಾಡುವ ಹುಡುಗಿ, ಬೇಡುವ ದೇವರು ಮೊದಲಾದವುಗಳನ್ನು ಕಲ್ಪಿಸಿಕೊಂಡು ಮನಸ್ಸನ್ನು ಹರಿಯಬಿಟ್ಟರೆ ಅಥವಾ ಅಂದುಕೊಂಡರೆ ಸಾಕು, ನಮ್ಮ ಸ್ಮೃತಿಯೊಳಗೆ ಅವುಗಳ ಚಿತ್ರಣ ಹಾದು ಹೋಗಿ ಕಣ್ಣೆದುರೇ ಬಂದಂತೆ ಭಾಸವಾಗುವುದು ಸೃಷ್ಟಿಯ ಅದ್ಭುತ ಕೊಡುಗೆಯಾಗಿದೆ. ಇದೇ ಮನಸ್ಥಿತಿಯ ಈ ಸಾಮರ್ಥ್ಯವನ್ನು ಬಳಸಿಕೊಂಡೇ ಇಂದು ನಾವೆಲ್ಲರೂ ಅಪಾರವಾದ ಜ್ಞಾನವನ್ನು, ಅದರೊಳಗೆ ಜೀವನ ಸೊಬಗನ್ನೂ … Read more

ಸುರಿದದ್ದು ಮಳೆ, ಕರಗಿದ್ದು ಒಡಲು: ಸಂಗೀತ ರವಿರಾಜ್

ಇಳೆಯು ಬಯಸಿದ ಪ್ರೇಮ ಕಾವ್ಯವೇ ಮಳೆ ಎಂಬುದು ಅವಳಿಗಷ್ಟೆ ತಿಳಿದಿದೆ. ಈ ಕಾವ್ಯಕ್ಕೆ ನದಿ, ತೊರೆಯ ಹಂಗಿಲ್ಲ. ಇಳೆಯಲ್ಲೇ ಇಂಗಿ ಅಲ್ಲೇ ಒರತೆಯಾಗುವ ಹುಮ್ಮಸ್ಸು ಮಾತ್ರ. ಸುಮಧುರ ಮನಸ್ಸಿಗೆ, ಸುಮಧುರ ಕಾವ್ಯದ ಹಿತ ಕೊಡುವ ಮಳೆ ಅವನಿಯಂತೆ ಅಚಲ. ಭೋರ್ಗರೆಯುತ್ತಾ ಸುರಿಯುವ ನಿನಾದಕ್ಕೆ ಮನದ ಸಂಗೀತ ಎಲ್ಲೆ ಮೀರಿ ಹಾಡುತ್ತಿದೆ. ಆ ರಾಗಕ್ಕೆ ಸ್ವರಗಳು ಶ್ರುತಿಯ ಮೀಟುತ್ತಿದೆ. ಪದಗಳಿಲ್ಲದ ಆಲಾಪವೆಂದರೆ ಅದು ವರ್ಷಾಧಾರೆ ಎಂಬುದನ್ನು ಒಂದೇ ಕೊಡೆಯಡಿಯಲ್ಲಿ ನಡೆದಾಡಿದಾಗ ಉಸುರಿದ್ದು ಈಗ ನೆನಪುಗಳು. ಪದಪದಗಳ ಪಲ್ಲವಿ ಕಟ್ಟಿ … Read more

ಕಣ್ಣೀರು ಜಾರಿದ ಆ ಕ್ಷಣ…..: ಚೈತ್ರಾ ಎಸ್.ಪಿ.

ಅವತ್ತಿನ ದಿನಾಂಕ ನೆನಪಿಲ್ಲ. ನೆನಪಿಟ್ಕೊಬೇಕು ಅಂತ ಯಾವತ್ತು ಅನಿಸಿಲ್ಲ. ಆದರೆ ಈಗದರ ಅವಶ್ಯಕತೆ ಇತ್ತು ಅಂತ ಅನಿಸ್ತಾ ಇದೆ. ಯಾಕಂದ್ರೆ ಹೀಗೊಂದು ಘಟನೆಯ ಬಗ್ಗೆ ಬರೀತೀನಿ ಅಂತ ನನ್ಯಾವತ್ತು ಅಂದ್ಕೊಂಡಿರ್ಲಿಲ್ಲ. ಆದರೆ ಬರೀಬೇಕು ಅಂತ ತುಂಬಾ ಅನ್ನಿಸಿ ಬಿಡ್ತು….. ಯಾಕಿಷ್ಟು ಪೀಠಿಕೆ ಅಂತ ಯೋಚ್ನೆ ಮಾಡ್ತ ಇದ್ದೀರ ?? ತುಂಬಾ ಉದ್ದ ಎಳೀದೆ ಆರಂಭಿಸ್ತೀನಿ….. ನಮ್ಮನೇಲೊಬ್ಬ ಪುಟ್ಟ ಪಾರ್ಥ. ಹೊಟ್ಟೆಯೊಳಗಿದ್ದಾಗಿನಿಂದ್ಲೇ ನಮಗೆ ಸಂಭ್ರಮ ನೀಡ್ತ ಇದ್ದ ಪೋರ. ಹತ್ತು-ಹದಿನೈದು ವರ್ಷಗಳ ನಂತರ ಮಗುವಿನ ಅಳು-ಕೇಕೆ, ಪುಟ್ಟ-ಪುಟ್ಟ ಕಾಲ್ಗಳ … Read more

ನೆನಪು: ವೇಣುಗೋಪಾಲ್ ಹೆಚ್.

ಹೊಸ ಬದುಕು, ಹೊಸ ಊರು, ಹೊಸ ಗೆಳೆಯರು, ಎಲ್ಲವೂ ಹೊಸದೇ ಆದರೆ ನೆನಪುಗಳು………????                   ಹೀಗೆ ಮೊನ್ನೆ ಹುಟ್ಟಿದ ಊರಿಗೆ ಹೋಗಿದ್ದೆ ಆ ಜಾಗ, ಶಾಲೆ, ಮನೆ, ಗಿಡ-ಮರಗಳ ನೆನಪು ಹಾಗೆ ಕಣ್ಣಮುಂದೆ ಹಾಗೆ ಬಂದುಹೋದಂತಾಯಿತು….ಆ ಸೊಗಡಿನಲ್ಲಿ ಬೆಳೆದ ಎಲ್ಲರಿಗೂ ಆದ ಅನುಬವವೇ ಈ ನೆನಪು.. ಮೊದಲನೆಯದಾಗಿ ಆ ಮಲಗುವ ಅಟ್ಟ ಒಮ್ಮೆ ಕಣ್ಣು ಮುಚ್ಚಿದರೆ ಏಳುತಿದ್ದದ್ದು ಬೆಳೆಗ್ಗೆಯೆ ನಮ್ಮದು ಬೇರೆ ದೇಶದವರತರವಲ್ಲ ಅಪ್ಪ ಅಮ್ಮನ … Read more

ಗೆಲುವು ಸುಲಭಾನಾ?: ರೋಷನ್ ಅರೆಹೊಳೆ

ಅದ್ಭುತವಾದ ವಿಜಯವನ್ನು ಸಾಧಿಸಿದವರೆಲ್ಲ ಉನ್ನತ ಸ್ಥಾನದಿಂದ ಬಂದವರಲ್ಲ…! ತೀರಾ ಕೆಳಮಟ್ಟದಿಂದಾನೇ ಬಂದಿರುವವರು….! ಕಷ್ಟದ ಅರಿವಿದ್ದರೆ, ಜಯದ ರುಚಿ ಬೇಕು ಎನಿಸುವುದು. ಒಮ್ಮೆ ಕೆಲವು ಸಾಧಕರ ಬಗ್ಗೆ ತಿಳಿದುಕೊಂಡರೆ, ನಾವು ಎಲ್ಲಿದ್ದೇವೆ? ಎನ್ನುವಂತಹದ್ದು ಅರಿವಾಗುತ್ತದೆ. ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಇಷ್ಟ ಪಡುವ ಆಟ ಫುಟ್ಬಾಲ್. ಸದ್ಯದ ಯುವಕರಿಗೆ ಫುಟ್ಬಾಲ್ ಅಲ್ಲಿ ಇಷ್ಟವಾಗುವ ಆಟಗಾರ "ಲೂಯಿಸ್ ಲಯೋನೆಲ್ ಆ್ಯಂಡ್ರೆಸ್ ಮೆಸ್ಸಿ" ಲೂಯಿಸ್ ರೊನಾಲ್ಡೊ ತರ ಆಕ್ರಮಣಕಾರಿ ಆಟಗಾರನಲ್ಲದಿದ್ದರೂ ಆತ ಜಗತ್ತಿಗೆ ಇಷ್ಟವಾಗುತ್ತಾನೆ….! ಇಷ್ಟರ ಮಟ್ಟಿಗೆ ಈತ ಜನಪ್ರಿಯನಾಗಲು … Read more

ಇರಲಾದರದ್ದು ಮಾಡಿ ಮೈ ಕೆರಕೊಂಡರಂತ…: ಗಾಯತ್ರಿ ಬಡಿಗೇರ

ಬಾಳಿನ ಹಾದಿಯಲ್ಲಿ ಸಂಬಂಧ, ಸ್ನೇಹ, ಪ್ರೀತಿ, ದ್ವೇಷ, ಸಿಟ್ಟು ಮತ್ತು ನೋವು-ನಲಿವು ಎಲ್ಲವೂ ಸಹಜ. ಕೆಲವೊಮ್ಮೆ ಕನಸದಾಗು ನೆನಸಿಕೊಂಡಿರಂಗಿಲ್ಲ ಹಂತಾ ದುರಂತ ನಡದ ಬಿಡ್ತಾವ. ಜೀವನಾ ಒಂದ ಚೌಕ್ಕಟನ್ಯಾಗ ಇರಬೇಕು. ಆದ್ರ ಚೌಕ್ಕಟ್ಟೆ ಜೀವನಲ್ಲ. ತಿಳ್ಕೊಬೇಕಾದ ವಿಷಯ ಹೇಳಲಾರದಷ್ಟ ಆದ. ಆದ್ರ ಕೇಳೊ ಮನಸ್ಸಗಳು ಪ್ರೀತಿ ಎಂಬ ಬೆಂಕಿಯಲ್ಲಿ ಬಿದ್ದು ಜಗತ್ತಿನ ಅರಿವಿಲ್ಲದೆ ನರಳತಿದಾವ. ಪ್ರೀತಿ ಮಾಡೋದ ತಪ್ಪಲ್ಲ. ಹಂಗಂತಾ ಪ್ರೀತಿನೇ ಜೀವನಾ ಅಲ್ರಿ. ಪ್ರೀತಿ ಮಾಡಿ ಅದೇನು ಸಾದಸ್ತಾರೋ? ಗೊತ್ತಿಲ್ಲ. ಆದ್ರ ಮನೆವರ ಹೊಟ್ಟೆ ಮಾತ್ರ … Read more

ಆಸ್ಪತ್ರೆಯಲ್ಲಿ ಹೀಗೊಂದು ಮಾತುಕತೆ…: ಎಚ್.ಕೆ.ಶರತ್

ಅದು ಆಸ್ಪತ್ರೆಯ ಜನರಲ್ ವಾರ್ಡು. ನಾಲ್ವರು ನಾಲ್ಕು ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿಕೊಂಡೇ ಮಾತಿಗಿಳಿದಿದ್ದಾರೆ. ಡಾಕ್ಟರ್ ಒಬ್ಬನ ಹೊಟ್ಟೆ ಭಾಗದಲ್ಲಿ ಅರ್ಧ ಅಡಿ ಉದ್ದ ಕೊಯ್ದು ಆಪರೇಷನ್ ಮಾಡಿದ್ದಾರೆ. ಮತ್ತೊಬ್ಬ ಬೈಕ್ ಮೇಲಿಂದ ಬಿದ್ದು ಬೆನ್ನಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಇನ್ನೊಬ್ಬ ಬೇರೊಬ್ಬರ ತಪ್ಪಿಗೆ ತಾನು ನೋವು ಅನುಭವಿಸುತ್ತಿದ್ದಾನೆ. ರಸ್ತೆ ಬದಿಯಲ್ಲಿ ಸುಮ್ಮನೆ ನಿಂತಿದ್ದ ಅವನಿಗೆ ಬೈಕೊಂದು ಬಂದು ಗುದ್ದಿದ ಪರಿಣಾಮ ಹಣೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಕಾಲಿನ ಚರ್ಮ ಕಿತ್ತು ಹೋಗಿದೆ. ತೊಡೆಯ ಚರ್ಮ ಕಿತ್ತು … Read more

ಋಣಮುಕ್ತವಲ್ಲದ ಬದುಕು ನಮ್ಮದು: ಗಾಯತ್ರಿ ಬಡಿಗೇರ

                  ತಂದೆ ತಾಯಿ ನಾವ ಹುಟ್ಟಿದಮ್ಯಾಗ ತುಸು ಖರ್ಚು ಮಾಡಿ ಹೆಸರಿಟ್ಟಿರಂಗಿಲ್ರಿ. ಹುಟ್ಟಿದ ಜಾತಕ ತಗಸಿ ಅದು ಇದು ಅಂತಾ ಪಾಪಾ ಬಾಳ ತಿರಗ್ಯಾಡಿ ಬಂಗಾರದಂಗ ಹೆಸರ ಇಟ್ಟಿರತಾರ.. ನಾವ ದೀಡ ಪಂಡಿತ್ರ ಅದೀವಿ ಅಲ್ಲ. ‘ಅಂದ ಅನಸ್ಕೊದ ಚಂದಗೇಡಿಂತ’ ಹಂಗ ಎತ್ತಾಗರ ಪತ್ತಾಗರ ಅರ್ಧಂಬರ್ಧಾ ಹೆಸರ ಕರಕೋತ ನಾಯಿ, ನರಿ, ಹಂದಿ, ಮಗಾ, ಮಚ್ಚಾ, ಮಾಮಾ, ಮಾಮಿ ಅದು ಇದು ಸುಡಾಗಾಡ ಸಂತಿ ವಟ್ಟ … Read more

ಹೆಸರಿಲ್ಲ: ಸಖ್ಯಮೇಧ (ವಿಶ್ವನಾಥ ಗಾಂವ್ಕರ್)

ಸಾಲು ಅಡಿಕೆ ಮರಗಳು ಮುರಿದು ಬೀಳುತ್ತವೇನೋ ಎಂಬಂತೆ ತೂಗುತ್ತಿದ್ದವು  ಬೀಸುಗಾಳಿಗೆ… ಹುಚ್ಚುಗಾಳಿಯು ತರಗೆಲೆಗಳನ್ನು ಧೂಳನ್ನು ಹೊತ್ತು ತರುತ್ತಿತ್ತು… ತೋಟದಾಚೆ ಬಹುದೂರ ಕಾಣುವ ಬೆಟ್ಟದಲ್ಲಿ ಮಳೆ ಸುರಿಯುವುದು ಅಸ್ಪಷ್ಟವಾಗಿ ಕಾಣುತ್ತಿತ್ತು… ಇನ್ನೇನು ಇಲ್ಲೂ ಮಳೆಯಾಗುತ್ತದೆ.. ತಂಪು ಗಾಳಿ ಬೀಸತೊಡಗಿದೆ.. ಮೋಡ ಕವಿದ ಮಲೆನಾಡ ಕತ್ತಲು… ಅವಳೂ ಮಳೆಗಾಗಿಯೇ ಕಾದಿದ್ದಾಳೆ… ಮಳೆಗಾಗಿ ಎನ್ನುವುದಕ್ಕಿಂತ ಮಳೆಯೊಡನೇ ಒತ್ತಿ ಬರುವ ಅವನ ನೆನಪುಗಳಿಗಾಗಿ…ಕಳೆದ ಮಳೆಗಾಲದಲ್ಲಿ ಅವನ ಜೊತೆಯಾಗಿ ಸವಿದ ಮಲೆನಾಡ ಮಳೆಯ ಸವಿನೆನಪು ಮಾತ್ರ ಅವಳ ಪಾಲಿಗೆ ಉಳಿದಿರುವುದು.. ಅವಳ ಹಾಗೂ ಅವನ ಅಭಿರುಚಿಗಳಲ್ಲಿ … Read more

ಬಾ ಮಳೆಯೆ ಬಾ….: ಸಂಗಮೇಶ ಡಿಗ್ಗಿ ಸಂಗಾಮಿತ್ರ

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿ ಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, … Read more

ದಪ್ಪ, ಸಪೂರದ ನಡುವೆ: ಅಕ್ಷಯ ಕಾಂತಬೈಲು

ಮುಂಚೆ ದಪ್ಪ ಇದ್ದಿಯಲ್ಲಾ. ಈಗ ಎಂತ ಸಡನ್ ಆಗಿ ಸಪೂರ ಆದದ್ದು ಹೀಗೆ ಕೇಳಿದರು, ಸಂಬಂಧಿಕರೊಬ್ಬರು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ಸ್ವಲ್ಪ ತಡವರಿಸುತ್ತಾ ಅವರಿಗೆ ಹೇಳಿದೆ -ನಾನು ಅಷ್ಟೊಂದು ಸಪೂರ ಆಗಿದ್ದೀನಾ…? ಎಂದು. ಆ ಸಂಬಂಧಿಕರು ನನ್ನ ಮೈಕಟ್ಟಿನ ಬಗ್ಗೆ ಹೇಳಿದ್ದು ನಿಜ ಅನ್ನಿಸಿತು. ಏಕೆಂದರೆ ಈ ಮೊದಲು ಹಲವು ಗೆಳೆಯರು ನನಗೆ ಅದೇ ರೀತಿಯಾಗಿ ಹೇಳಿದ್ದರು. ಆದರೆ ಹೇಳಿದ ಕ್ರಮ ಮಾತ್ರ ಬೇರೆ ಇತ್ತು. ಏನೋ ಲವ್ ಫೆಲ್ಯೂರಾ, ಸಿಕ್ಕಾಪಟ್ಟೆ ಓದಿದರೆ ಹೀಗೇ ಆಗೋದು, … Read more

ಪ್ರೀತಿಯಿ೦ದ “ಜಕ್ಕಣ್ಣ” ಎ೦ದು ಕರೆಸಿಕೊಳ್ಳುವ ಟಾಲಿವುಡ್ ಚಿತ್ರ ನಿರ್ದೇಶಕ: ಸುನಿಲ್ ಕುಮಾರ್

ಇವರ ಹೆಸರು ಎಸ್. ಎಸ್ .ರಾಜಮೌಳಿ ( ಕೊಡುರೂ ಶ್ರೀಶೈಲ ಶ್ರೀ ರಾಜಮೌಳಿ). ಜಕ್ಕಣಾಚಾರ್ಯರು ಅದ್ಬುತವಾಗಿ ಶಿಲ್ಪಗಳನ್ನು ಕೆತ್ತಿದರೆ. ಈ ಅಧುನಿಕ ಜಕ್ಕಣಾಚಾರ್ಯರು ಅದ್ಬುತವಾಗಿ ಚಿತ್ರಗಳನ್ನು ನಿರ್ಮಿಸುತ್ತಾರೆ. ಟಾಲಿವುಡ್ ನಲ್ಲಿ ಇವರನ್ನು ಪ್ರೀತಿಯಿ೦ದ " ಜಕ್ಕಣ್ಣ" ಎ೦ದು ಕರೆಯುತ್ತಾರೆ. ಭಾರತ ಚಿತ್ರರ೦ಗವನ್ನು ವಿಶ್ವಮಟ್ಟಕ್ಕೆ ಎತ್ತರಿಸಿದ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಸೂಪರ್ ಹಿಟ್ಟುಗಳೆ. ಇವರು ಟಾಲಿವುಡ್ ನಲ್ಲೆ ಅತಿ ಹೆಚ್ಚು ಬೇಡಿಕೆಯ ಹಾಗೂ ಜನಪ್ರಿಯ ನಿರ್ದೇಶಕರು. ಇವರ ಎಲ್ಲ ಚಿತ್ರಗಳು ಭಾರತೀಯ ಭಾಷೆಗಳಾದ ತಮಿಳು, ಬೋಜ್ ಪುರಿ, ಕನ್ನಡ … Read more

ತಿನ್ನುವ ಅನ್ನಕ್ಕೆ ಕಲ್ಲು ಹಾಕುವ ಮಂದಿ ಮತ್ತು ಇಂಗದ ಹಸಿವು: ಜೈಕುಮಾರ್ ಹೆಚ್.ಎಸ್.

ದೇಶದಲ್ಲಿ ಯಾರ ಹಸಿವು ಇಂಗುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುವ ಮುನ್ನ ನಮ್ಮ ರಾಜ್ಯದ ಬಹುಸಂಖ್ಯಾತ ಜನತೆಯ ಪರಿಸ್ಥಿತಿಯತ್ತ ಕಣ್ಣು ಹಾಯಿಸೋಣ. 18 ವರ್ಷದೊಳಗಿನ ಲಕ್ಷಾಂತರ ಮಕ್ಕಳು ಇಂದಿಗೂ ಶಾಲೆಯಿಂದ ಹೊರಗುಳಿದಿವೆ. ಯೂನಿಸೆಫ್ ಸಂಸ್ಥೆಯ ಪ್ರಕಾರ ಶೇ. 50 ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ 3 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 8 ಮಕ್ಕಳು ರಕ್ತಹೀನತೆ ಹೊಂದಿದ್ದರೆ, 5 ವರ್ಷದೊಳಗಿನ ಮಕ್ಕಳ ಪೈಕಿ 10ರಲ್ಲಿ 4 ಮಕ್ಕಳ ಬೆಳವಣಿಗೆ ಸರಿಯಾದ ಆಹಾರ ಪೋಷಣೆಯಿಲ್ಲದೆ ಕುಂಠಿತಗೊಂಡಿದೆ.  ನಮ್ಮ ರಾಜ್ಯವೂ … Read more

ದೋನಿಯ ತಪ್ಪು ಯಾವುದು ?: ರಘು ಕೆ.ಟಿ.

ಭಾರತ ತಂಡಕ್ಕೆ 2011 ರಿಂದ ದೋನಿ ನಾಯಕತ್ವ ವಹಿಸಿಕೊಂಡಾಗಿನಿಂದ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಭಾರತವು ಅನೇಕ ಯಶಸ್ವಿಗಳನ್ನು ಗಳಿಸಿ, ವಿಶ್ವ ದರ್ಜೆಯ ತಂಡವಾಗಿ ಹೊರಹೊಮ್ಮಿತು. ದೋನಿ ಮಾಡಿದ ಹಲವಾರು ತಂತ್ರಗಾರಿಕೆ, ಬದಲಾವಣೆಗಳು, ಕೈಗೊಂಡ ನಿರ್ಧಾರಗಳಿಂದ ಭಾರತವು 20-20 ವಿಶ್ವಕಪ್, ವಿಶ್ವಕಪ್-2011 ಸೇರಿದಂತೆ ಎಲ್ಲ ಪ್ರಮುಖ ಪಂದ್ಯಾವಳಿಗಳನ್ನು ಜಯಿಸಿ ವಿಶ್ವ ಖ್ಯಾತಿಯನ್ನು ಗಳಿಸಿತ್ತು. ಆಗ ಎಲ್ಲ ಪತ್ರಿಕಾ ಮಾಧ್ಯಮದವರು, ಹಿರಿಯ ಆಟಗಾರರು ದೋನಿಯ ನಿರ್ಧಾರಗಳಿಗೆ ಬೆಂಬಲ ಮತ್ತು ಶ್ರೇಷ್ಠ ನಾಯಕರೆಂದು ಹಾಡಿ ಹೊಗಳಿದರು. ಆದರೆ ಬಾಂಗ್ಲಾ ದೇಶದ ವಿರುದ್ಧ … Read more

ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ: ಚೈತ್ರಾ ಎಸ್.ಪಿ.

ಗೆಳೆಯನೊಬ್ಬ ಮೆಸ್ಸೇಜ್ ಮಾಡಿದ್ದ, "ಮದ್ವೆಗೆ ಹುಡುಗನ್ನೇನಾದ್ರು ನೋಡ್ತಾ ಇದಾರೇನೆ ??", "ಇಲ್ಲಪ್ಪಾ", "ಯಾಕೋ??!!"ಎಂದು ಮರು ಪ್ರಶ್ನೆ ಹಾಕಿದ್ದೆ. "ಸುಮ್ನೆ ಕೇಳ್ದೆ, ನಾಚ್ಕೊಂಡ್ಯೇನೇ ??"ಎಂದಿದ್ದ ಆತ. ನನಗೆ ಸಿಕ್ಕಿದ್ದ ಹೊಸ ಗೆಳೆಯ. ನನ್ನ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನನ್ನ ಹಳೆಯ ಫ್ರಿಂ ಡ್ಸ್ ಅಂತ ಕರೆಸಿಕೊಂಡವರೆಲ್ಲರೂ, " ನೀನೂ ನಾಚ್ಕೊತೀಯೇನೇ ??!! ಹುಡ್ಗೀರ್ ಮಾತ್ರ ಕಣೇ ನಾಚ್ಕೊಳೋದು ", ಅಂತ ಹೇಳ್ತ ಇದ್ರೇ ವಿನಃ ಯಾರೂ ಈ ಥರ ಕೇಳಿರ್ಲಿಲ್ಲ. ಉತ್ತರಿಸುವ ಗೊಂದಲದಲ್ಲಿದ್ದ ನನ್ನ ಭಾವ ಸರಪಳಿ ಇನ್ನೆಲ್ಲೋ … Read more

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ: ಸಂಗಮೇಶ ಡಿಗ್ಗಿ ಸಂಗಾಮಿತ್ರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ… ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ … Read more

ಕ್ಷೌರ ಸಮಾಚಾರ: ಎಚ್.ಕೆ.ಶರತ್

ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಹೇರ್ ಕಟ್ ಮಾಡಿಸುವುದು, ವಾರಕ್ಕೋ ಹದಿನೈದು ದಿನಕ್ಕೋ ಟ್ರಿಮ್ ಅಥವಾ ಶೇವ್ ಮಾಡಿಸೋದು ಅಂದ್ರೆ ಸುಮ್ನೆ ಅಲ್ಲ. ಅನುಭವಿಸಿದವರಿಗೇ ಗೊತ್ತು ಅದರ ಸುಖ-ದುಃಖ. ಬೆಳಿಗ್ಗೆ ಎದ್ದು ಮುಖಕ್ಕೆ ಮತ್ತು ……ಕ್ಕೆ ನೀರು ಹಾಕಿಕೊಂಡು(ಪಾಶ್ಚಿಮಾತ್ಯ ಸಂಸ್ಕøತಿ ಅಳವಡಿಸಿಕೊಂಡವರು ಟಿಶ್ಯೂ ಪೇಪರ್ ಬಳಸಬಹುದು!) ಹೇರ್ ಡ್ರೆಸಸ್ ಎಂಬ ಜಗತ್ತಿನೊಳಗಿನ ಜಗತ್ತಿಗೆ ಪ್ರವೇಶಿಸಿದರೆ ಸಾಕು, ಅಲ್ಲಿ ನಾನಾ ನಮೂನೆಯ ವಿಚಾರಗಳು ಮೈ ಕೊಡವಿ ಮೇಲೇಳುತ್ತವೆ. ಒಬಾಮಾ ನ್ಯೂಸ್‍ನಿಂದಿಡಿದು ಹೊಸ ಲೋಕಲ್ ಲವ್ ಸ್ಟೋರಿಯವರೆಗೆ ಎಲ್ಲವೂ ಮುಕ್ತ … Read more

ಚಲನಚಿತ್ರ ಅಭಿನಯ – ನಿರ್ದೇಶನ ಕಾರ್ಯಾಗಾರ

"ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ" ಯು ಪ್ರತಿ ವರ್ಷದಂತೆ ಈ ಸಲವೂ 2015, ಜೂನ್ 21 ರಿಂದ ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ  ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ, ನಿರ್ದೇಶನ ಮತ್ತು ಅಭಿನಯ ಕುರಿತು 5 ತಿಂಗಳು ಅವಧಿಯ ವಾರಾಂತ್ಯದ ಉಚಿತ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಗತಿಗಳು ಪ್ರತಿ ಭಾನುವಾರ ನಡೆಯುತ್ತವೆ.   ತರಬೇತಿಗಳನ್ನು ‘ಸೃಷ್ಟಿ ಆಪ್ತ ರಂಗಮಂದಿರ, 12ನೇ ಕ್ರಾಸ್, ರಾಮಮಂದಿರ ರಸ್ತೆ, ಓಲ್ಡ್ ಏರಪೋರ್ಟ ರಸ್ತೆ, ದೊಮ್ಮಲೂರು, ಬೆಂಗಳೂರು ಇಲ್ಲಿ ನಡೆಸಲಾಗುತ್ತದೆ. ಆಸಕ್ತರು … Read more