ಭರ್ಜರಿ ಸಿನಿಮಾ ಬಹದ್ದೂರ್: ಪ್ರಶಸ್ತಿ

ಮಂಗಳವಾರನೇ ಫ್ರೆಂಡ್ ಹೇಳಾಗಿತ್ತು. ಈ ಶನಿವಾರ ಅಥ್ವಾ ಭಾನುವಾರ ಒಂದು ಮೂವಿಗೆ ಹೋಗ್ಬೇಕಂದಿದ್ದ. ಅದ್ರಲ್ಲೇನಿದೆ ದೊಡ್ ವಿಷ್ಯ. ಪ್ರತೀವಾರ ಒಂದೊಂದು ಹೊಸ ಸಿನಿಮಾ ಬರುತ್ತಿರುತ್ತೆ. ಅದ್ರಲ್ಲೂ ಇದು ಬೆಂಗ್ಳೂರು. ಇಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲೀಷು, ಮಲೆಯಾಳಿ ಅಥ್ವಾ ಅವುಗಳದ್ದೇ ರಿಮೇಕಾದ ಯಾವ್ದ್ರಾದ್ರೂ ಚಿತ್ರ ಯಾವಾಗ್ಲೂ ಓಡ್ತಿರತ್ತೆ ! ಅದ್ರಲ್ಲೊಂದಕ್ಕೆ ಹೋಗೋದ್ರಲ್ಲೇನಿದೆ ವಿಶೇಷ ಅಂದ್ರಾ ? ಅಲ್ಲೇ ಇದ್ದಿದ್ದು ಫ್ರೆಂಡ್ ಹೇಳ್ತಾ ಇದ್ದಿದ್ದು ಈ ವಾರಕ್ಕೆ ಎರಡನೇ ವಾರ ಮುಗಿಸಿದ ಕನ್ನಡದ ಸ್ವಮೇಕ್ ಸಿನಿಮಾ ಬಹಾದ್ದೂರ್ ಬಗ್ಗೆ 🙂 … Read more

ಮಂದ್ಲಪೇಟೆಯ ಮೋಡಗಳ ನಡುವೆ: ಪ್ರಶಸ್ತಿ ಅಂಕಣ

ಮಡಿಕೇರಿ ಅಂದಾಕ್ಷಣ ನೆನಪಾಗೋ ಸ್ಥಳಗಳಲ್ಲಿ ಮಂದ್ಲಪೇಟೆಯೂ ಒಂದು. ಹಿಂದಿನ ಸಲ ಹೋದಾಗ ಇಲ್ಲಿಂದ ೨೭ ಕಿ.ಮೀ ಅಂತ ನೋಡಿದ್ರೂ ಹೋಗಕ್ಕಾಗದೇ ಇದ್ದ ಕಾರಣಕ್ಕೋ ಏನೋ ಗೊತ್ತಿಲ್ಲ. ಈ ಸಲ ಮಡಿಕೇರಿಗೆ ಹೋದಾಗ ಮಂದ್ಲಪೇಟೆಗೆ ಹೋಗ್ಲೇಬೇಕು ಅಂತ ಮನ ತುಡೀತಿತ್ತು . ನಮ್ಮ ಗಾಳಿಪಟ ಚಿತ್ರದಲ್ಲಿ ಮುಗಿಲುಪೇಟೆ, ಕೆಲವರ ಬಾಯಲ್ಲಿ ಮಾಂದ್ಲಪೇಟೆ, ಮಂದ್ಲಪಟ್ಟಿ.. ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳೋ ಮುಗಿಲುಗಳಿಗೆ ಮುತ್ತಿಕ್ಕೋ ಜಾಗ ಇದೇನೆ. ಗಾಳಿಪಟ ಚಿತ್ರದ ಹೆಸರಿದ್ದಂತೆಯೇ ಇಲ್ಲಿ ಮುಗಿಲುಗಳದ್ದೇ ಮೊಹಬ್ಬತ್ . ಆದ್ರೆ ಕೆಲೋ ಸಲ … Read more

ಮಂಗಳಪ್ರಿಯನೊಬ್ಬನ ಮಮಕಾರದ ಮಾತುಗಳು: ಪ್ರಶಸ್ತಿ ಅಂಕಣ

ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ … Read more

ಭಾವಗಳ ಮೂಟೆ ಕಟ್ಟೋ ಹಾಗಿದ್ರೆ: ಪ್ರಶಸ್ತಿ

ಈ ಗಣಕ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಕೆಲೋ ಸಲ ಅಂದ್ರೆ ಅದನ್ನ ಬರಿ ಮಾತಲ್ಲಿ ಹೇಳೋಕಾಗದಷ್ಟು. ಯಾಕಂತೀರಾ ?  ಸದ್ಯಕ್ಕೆ ಸಮಯವಿಲ್ಲದಿದ್ದರೂ ಮುಂದೆಂದಾದರೂ ಬೇಕಾಗುವುದೆಂಬ ನಮಗಿಷ್ಟದ ಅದೆಷ್ಟೋ ಜೀ.ಬಿಗಟ್ಲೆ ಹಾಡುಗಳನ್ನು, ಸಿನಿಮಾಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ನೋಡಬಹುದಾದ ವ್ಯವಸ್ಥೆಯಿದೆಯೆಲ್ಲ ಅದೇ ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡೋದು ನಂಗೆ ಅಂದ್ರೆ ಕೆಲವರಿಗೆ ಅಷ್ಟೇನಾ ಅನಿಸಬಹುದು. ಕೆಲವರಿಗೆ  ತಮಾಷೆಯೆನಿಸಬಹುದು . ಕೆಲವರಿಗೆ ವಿಡಂಬನೆಯಂತೂ ಭಾಸವಾಗಬಹುದು. ನಮ್ಮ ಮನಸ್ಸಿನಲ್ಲಿರೋ.. ವೈಜ್ನಾನಿಕವಾಗಿ ಹೇಳೋದಾದ್ರೆ ಮೆದುಳಿನಲ್ಲಿರೋ ಮಾಹಿತಿಯ ವಾಹಕವಾಗಿ ಸಂಗ್ರಾಹಕವಾಗಿ ಕೆಲಸ ಮಾಡೋ ನ್ಯೂರಾನುಗಳಲ್ಲಿ … Read more

ಎಲ್ಲ ಬರೆವವರೇ ಆದರೆ ಓದುವವರ್ಯಾರು?: ಪ್ರಶಸ್ತಿ ಪಿ. ಸಾಗರ

  ಇಂಥಾ ಗಂಭೀರ ಪ್ರಶ್ನೆಯ ಬಗ್ಗೆ ಒಂದು ಲೇಖನ ಬೇಕಿತ್ತಾ ಅಂತ ಯೋಚಿಸ್ತಾ ಇದ್ದೀರಾ ? ನೀವಷ್ಟೇ ಅಲ್ಲ. ನಾನೂ ಹಾಗೇ ಯೋಚಿಸಿದ್ದು. ನಾನೇ ಕೆಲ ಘಟನೆಗಳ ನೋಡಿ ಬೇಸತ್ತು, ರೋಸತ್ತು ಇದರ ಬಗ್ಗೆ ಬರೆಯಹೊರಟೆ ಅನ್ನುವುದರ ಬದಲು ಇತ್ತೀಚಿಗಿನ ಕೆಲ ವಿದ್ಯಮಾನಗಳು ಬೇರೆ ವಿಷಯಗಳಿಗಿಂತ ಇದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಇದರ ಬಗ್ಗೆಯೇ ಈ ವಾರ ಬರೆಯುವಂತೆ ನನ್ನ ಪ್ರೇರೇಪಿಸಿದವು ಅಂದ್ರೆ ತಪ್ಪಾಗಲಾರದೇನೋ. ಅನಂತಮೂರ್ತಿಗಳ ನಿಧನದ ವೇಳೆ ಚರ್ಚೆಯಾದ ಕೃತಿಗಳಿರಬಹುದು. ಭೈರಪ್ಪನವರ ಯಾನದ ಬಗೆಗಿನ ಪರ-ವಿರೋಧ … Read more

ಗುರುಭ್ಯೋ ನಮ: ಪ್ರಶಸ್ತಿ

ಬದುಕ ಪಯಣಕೆ ಬೆಳಕನಿತ್ತಿಹ ಪ್ರಣತಿ ಗುರುವರ್ಯ ಹುಡುಗು ಮುದ್ದೆಯ ಪ್ರತಿಮೆಯಾಗಿಸಿ ನಿಂತ ಆಚಾರ್ಯ ಸಕಲವಿದ್ಯೆಯ ಮಳೆಯಗಯ್ದಿಹೆ ಮುನಿಸ ಮೋಡದಲಿ ಕಷ್ಟ ಸುಡುತಿರೆ, ಜೀವವಳುತಿರೆ ಸಹಿಸಿ ಮೌನದಲಿ ನಳಿನಿ ಮೇಲಣ ಹನಿಯ ತರದಲಿ ತಪ್ಪ ಮಸ್ತಕದಿ ಸರಿಸಿ ಹರಿಸಿದೆ ಜ್ಞಾನ ಬೆಳಕನು ತೊಳೆದ ಬುದ್ದಿಯಲಿ |೧| ಅರಿವಿಗೆ ನಿಲುಕದ ಮಾತುಗಳಲ್ಲಿ ಗುರುವಿನ ನಿಲುವುಗಳೆಷ್ಟಿಹುದೋ ಕತ್ತಲ ಪಥದಲೂ ಹಾಕುವ ಹೆಜ್ಜೆಯ ತಿದ್ದಿಹ ಬುದ್ದಿಗಳೆಷ್ಟಿಹುದೊ  ಶಿಸ್ತನು ಕಲಿಸಿದೆ, ಬುದ್ದಿಯ ಬೆಳೆಸಿದೆ ಸವಾಯೀಯುತಲೆ ಜಡಮನಕೆ ತೊಲಗಿಸಿ ಮೌಢ್ಯತೆ, ಮೂಡಿಸಿ ಐಕ್ಯತೆ ನನ್ನನು ತೆರೆದಿಹೆ … Read more

ಗಣನಾಥನಿಗೊಂದು ನಮನವೆನ್ನುತ್ತಾ: ಪ್ರಶಸ್ತಿ

ವಿಘ್ನೇಶನ ಬಗ್ಗೆ ಬರೆಯೋದೇನನ್ನ ನಾಥನೆನ್ನಲೇ ಗೌರೀತನಯನನ್ನ ಯಶವ ಹಂಚುವ ಆದಿ ಪೂಜ್ಯನನ್ನ ಕರವ ಮುಗಿಯುವೆ ಹರಸು ಗಣಪನೆನ್ನ ಗಣೇಶನೆಂದರೆ ಏನು ಹೇಳಲಿನ್ನ ಜಾಣನೆನ್ನಲೇ ವಿದ್ಯಾ ದೇವನನ್ನ ನಮನವೆನ್ನಲೇ ವಕ್ರದಂತನನ್ನ ನಶಿಶು ವಿಘ್ನವ ನೀಡಿ ಹರುಷ, ಹೊನ್ನ ವಿನಾಯಕ, ಗಜಾನನ ಅಂತ ಬರಿಯೆ ಬರೆಯೋದೇನು, ಅದನ್ನೇ ಆದಿಯಕ್ಷರಗಳಾಗಿಸಿ ಒಂದಿಷ್ಟು ಸಾಲು ಗೀಚಬಾರದೇಕೇ ಅಂತೆನ್ನೋ ಆಲೋಚನೆ ನರನ ತಲೆಯಲ್ಲಿ ಹೊಳೆದಿದ್ದೇ ತಡ ಕೃಷ್ಣ ಪಿಂಗಾಕ್ಷನ ಬಗ್ಗೆ ಒಂದಿಷ್ಟು ಸಾಲು ಜೋಡಿಸಾಯ್ತು. ತನ್ನ ದಂತದಿಂದಲೇ ರಾಮಾಯಣವನ್ನು ಬರೆದನೆಂಬೋ ಧೂರ್ಮವರ್ಣನ ಬಗ್ಗೆ ಒಂದಿಷ್ಟು … Read more

ಅಧ್ಯಕ್ಷ ಅಧ್ಯಕ್ಷ: ಪ್ರಶಸ್ತಿ

ಹೇ. ಯಾವ್ದಾದ್ರೂ ಮೂವಿಗೆ ಹೋಗನ ಕಣೋ ಸುಮಾರು ದಿನ ಆಯ್ತು . ಸರಿ, ಸಿಂಗಂ ರಿಟರ್ನ್ಸ್ ಗೆ ಹೋಗೋಣ್ವಾ ? ಇಲ್ಲಪ್ಪ. ನಾ ಬರೋಲ್ಲ. ಎಕ್ಸ್ ಪ್ಯಾಂಡಬಲ್ ೩ ? ಇಲ್ಲೋ. ಅಂಜಾನ ? ಊಹೂಂ. ಮತ್ಯಾವ ಮೂವಿಗೆ ಬರ್ತಿಯೋ ನೀನು ? ನಾನು ಥಿಯೇಟ್ರಿಗೆ ಹೋಗಿ ನೋಡೋದು ಅಂದ್ರೆ ಕನ್ನಡ ಮೂವಿಗಳ್ನ ಮಾತ್ರ ಕಣ್ರೋ. ಹೋ. ಕನ್ನಡ ಇಂಡಸ್ಟ್ರಿ ಉದ್ದಾರ ಮಾಡ್ತಿದೀಯ ಅನ್ನು ಅನ್ನೋ ಕಾಲೆಳತದ ದಾಟಿ ಮುಗಿಯೋ ಮೊದ್ಲೇ ಅದಕ್ಕೊಂದು ತೇಪೆ ಹಚ್ಚಿದೆ. ಅಧ್ಯಕ್ಷಕ್ಕೆ … Read more

ದೋಸೆ ದೋಸ್ತಿ : ಪ್ರಶಸ್ತಿ ಅಂಕಣ

  ರಜಾ ದಿನ ಭಾನುವಾರ ಅಂದ್ರೆ ಎಚ್ಚರಾಗೋದು ಹೊಟ್ಟೆಯಿಂದ್ಲೇ. ಮುಖಕ್ಕೆ ಬಿಸಿಲು ಬಿದ್ರೂ ಎಚ್ಚರಾಗದ ದೇಹವನ್ನ ಹುಟ್ಟೋ ಹೊಟ್ಟೆ ಹಸಿವು ಎಬ್ಬಿಸಿಬಿಡುತ್ತೆ. ಹಂಗೇ ಎದ್ದು ಹೊರಗಿಣುಕಿದ್ರೆ ಎದುರಿನ  ತೆಂಗಿನ ಮರದ ಮೇಲಿನ ಕಾಗೆ ಗುಡ್ಮಾರ್ನಿಂಗ್ ಅಂತ ಕೂಗ್ತಾ ಇದ್ದುದು ನಂಗೇನಾ ಅನಿಸುತ್ತೆ. ತಿರುಗೋ ಭೂಮಿಗಿಲ್ಲದ ರಜೆ, ಸುತ್ತೋ ಬಸ್ಸಿಗಿಲ್ಲದ ರಜೆ , ಅಹಮಿಗಿಲ್ಲದ , ಹಸಿವಿಗಿಲ್ಲದ ರಜೆ ನಿಂಗೇಕೋ ಬೆಪ್ಪೇ ? ಜಗವೆಲ್ಲ ಎದ್ದಿರಲು ಮಲಗಿರುವೆ ಸಿದ್ದ ಅಂತ ನಂಗೆ ಬಯ್ಯೋಕೆ ಶುರು ಮಾಡಿತ್ತಾ ಗೊತ್ತಿಲ್ಲ. ಎಲ್ಲಾ … Read more

ಅಣ್ಣಾ ಎಂಬ ಕೂಗಲಿ ಕರಗಿಹೋಗುವ ಮುನ್ನ: ಪ್ರಶಸ್ತಿ ಅಂಕಣ

ಪ್ರತೀ ಪದಕ್ಕೂ ತನ್ನದೇ ಆದೊಂದು ನೆನಪ ಬುತ್ತಿಯಿರುತ್ತಾ ಅಂತ.  ಕೆಲವದ್ದು ನಲಿವ ನರ್ತನವಾದರೆ ಕೆಲವದ್ದು ನೋವ ಮೌನ ಗಾನ. ಅಕ್ಕ ಅನ್ನೋ ಎರಡಕ್ಷರದ ಮಾಧುರ್ಯ, ಗೆಳತಿ ಅನ್ನೋ ಮೂರಕ್ಷರದ ನವಿರು ಭಾವಗಳು, ಅಮ್ಮಾ ಅನ್ನೋ ಮಮತೆ, ಅಪ್ಪ ಅನ್ನೋ ಗೌರವ, ಹೆಮ್ಮೆ .. ಹೀಗೆ ಪ್ರತೀ ಪದವೂ ತಮ್ಮದೇ ಆದೊಂದು ಹೊಸಲೋಕಕ್ಕೆ ಕೊಂಡೊಯ್ಯುವಂತೆ. ಸ್ನೇಹ ಎಂಬ ಪದದ್ದೆಂತೂ ನೆನಪುಗಳ ಬುತ್ತಿಯಲ್ಲ. ಅದೊಂದು ಜಾತ್ರೆ. ತಿರುಗಿದಷ್ಟೂ ಮುಗಿಯದಷ್ಟು, ನೋಡಿದಷ್ಟೂ ದಣಿಯದಷ್ಟು , ಹೊಸ ಹೊಸ ದಿಕ್ಕಲ್ಲಿ ಹೊಸ ಹೊಸ … Read more

ಸುದ್ದಿಯಾಗದ ಸುದ್ದಿಗಳ ಹಿಂದೆ: ಪ್ರಶಸ್ತಿ

ಪ್ರಚಾರ ಅನ್ನೋದು ಯಾರಿಗೆ ಬೇಡ ಹೇಳಿ ? ಯಾರಿಗೂ ಒಂದು ಜೊತೆ ಬಟ್ಟೆ ಕೊಟ್ಟಿದ್ರಿಂದ ಹಿಡಿದು ಮತ್ಯಾರಿಗೋ ಐದು ರೂಪಾಯಿ ದಾನ ಮಾಡಿದವರೆಗೆ ನಿತ್ಯದ ತಿಂದುಂಡು ಮಲಗೋದ್ರ ಹೊರತಾಗಿ ಮಾಡಿದ ಒಳ್ಳೇ ಕೆಲ್ಸಗಳನ್ನ ನಾಲ್ಕು ಜನರೊಂದಿಗೆ ಹಂಚಿಕೋಬೇಕು ಅನ್ನೋ ಹಂಬಲ ನಮಗೆ. ಅದನ್ನ ಮಾಡಿದೆ, ಇದನ್ನ ಮಾಡಿದೆ ಹೇಳಿಕೊಳ್ಳೋ ಮೂಲಕ ಬೇರೆಯವ್ರ ದೃಷ್ಟಿಯಲ್ಲೊಂದು ಒಳ್ಳೇ ಸ್ಥಾನ ಪಡೆಯೋದು ಸಾಮಾನ್ಯರ ಬಯಕೆಯಾದ್ರೆ  ಏನೆಲ್ಲಾ ಮಾಡ್ತಿದ್ರೂ ಯಾರ ಕಣ್ಣಿಗೂ ಬೀಳದೇ ತಣ್ಣಗಿದ್ದು ಬಿಡೋ ಜನಗಳದ್ದು ಮತ್ತೊಂದು ಗುಂಪು. ತಮ್ಮ ಜೀವನವನ್ನೇ … Read more

ಪ್ರಶಸ್ತಿ ಪಿ. ಸಾಗರ ಬರೆದ ಕತೆ: ಸುದೇಷ್ಣೆ

ಏ ಎಲ್ಲಾದ್ರೂ ಟ್ರಿಪ್ ಹೋಗೋಣ್ವಾ ? ಬೆಂಗ್ಳೂರಿಗೆ ಬಂದು ತುಂಬಾ ದಿನ ಆಯ್ತು ಕಣೋ. ಏನೂ ನೋಡಿಲ್ಲ ಸರಿಯಾಗಿ.  ಹೂಂ. ಸರಿ. ಎಲ್ಲಿಗೆ ?  ಅರೆ, ವಾರ ವಾರ ಕಾಲಿಗೆ ಚಕ್ರ ಕಟ್ಕೊಂಡವ್ನ ತರ ತಿರ್ಗೋದು ನೀನು. ಬೈಕಂತೆ, ಕಾರಂತೆ. ಬಸ್ಸಂತೆ. ಆ ಫೇಸ್ಬುಕ್ಕನ್ನೇ ಮಿನಿ ಹಾರ್ಡುಡಿಸ್ಕು ಮಾಡೋ ಅಷ್ಟು ಫೋಟೋ ತುಂಬ್ಸಿದ್ದೀಯ. ನಂಗೆ ಕೇಳ್ತಿಯಲ್ಲೋ ಎಲ್ಲೋಗದು ಅಂತ. ನೀನು ಹೋಗಿರೋ ಜಾಗಗಳಲ್ಲೇ ಯಾವ್ದಾದ್ರೂ ಹೇಳೋ. ಊಂ… ನಿಂಗೆ ಎಷ್ಟೊತ್ತಿನ ಪ್ರಯಾಣ ಆಗಿರ್ಬೇಕು ? ಒಂದೆರಡು ಘಂಟೆ … Read more

ಮಳೆ ಮಾತುಗಳಲ್ಲಿ: ಪ್ರಶಸ್ತಿ ಪಿ.

ಬೇಸಿಗೆಯ ಬೇಗೆಯಲ್ಲಿ ಬೆಂದ ನಗರದ ಜನಗಳಿಗೀಗ ಮಳೆಯ ತಂಪು. ಭೋರ್ಗರೆವ ಮಳೆಗೆ ಎಂಥಾ ಮಳೆಗಾಲವಪ್ಪಾ ಅನಿಸಿಬಿಡುವಂತ ಮಲೆನಾಡಿಗರಿಗೂ ಈ ಸಲ ತಡವಾದ ಮಳೆ ಕೊಂಚ ತಲೆಬಿಸಿ ತಂದಿದ್ದುಂಟು. ಮೊದಲ ಮಳೆಗೆ ಖುಷಿಯಾಗಿ ನಾಟಿಗೆ ಅಣಿಮಾಡಿದವರು, ಗಾಬರಿಯಾಗಿ ಕೊಳೆ ಔಷಧಿ ಹೊಡೆಸಿದವರು ಮತ್ತೆ ಒಂದು ವಾರವಾದರೂ ಮಳೆಯ ಸುಳಿವಿಲ್ಲದಿದ್ದಾಗ ಗಾಬರಿಯಾಗಿದ್ದು ಸಹಜವೇ. ನಾಟಿಗೆಂದು ಉತ್ತ ನೆಲವೆಲ್ಲಾ ಮತ್ತೆ ಬಿಸಿಲಿಗೆ ಒಣಗೋಕೆ ಶುರುವಾಗಿತ್ತು. ಬಿಸಿಲ ಝಳಕ್ಕೆ ಕೊಳೆಯೌಷಧಿ ಹೊಡೆಸಿಕೊಂಡ ಮರದ ತಲೆಯೆಲ್ಲಾ ಸುಡತೊಡಗಿದ್ವು. ಒಂತರಾ ಬಿಸಿಲಲ್ಲಿ ಬೆಂಕಿ ಹಾಕಿದಂಗೆ ಮರಗಳಿಗೀಗ. … Read more

ಬೆಂಗ್ಳೂರ ಮಳೆ: ಪ್ರಶಸ್ತಿ ಪಿ.

ಬೆಂಗ್ಳೂರಲ್ಲಿ ಭಾರೀ ಮಳೆ ಅಂತ ಟೀವಿನಲ್ಲಿ ಬೆಳಗ್ಗಿಂದ ತೋರಿಸ್ತಿದ್ದದ್ನ ನೋಡಿ ಅಮ್ಮ ಗಾಬ್ರಿಯಾಗಿ ಫೋನ್ ಮಾಡಿದ್ರು. ಅಯ್ಯೋ ಅಮ್ಮಾ , ನಿಂಗೆ ಮಾಡಕ್ಕೆ ಬೇರೆ ಕೆಲ್ಸ ಇಲ್ಲ. ಯಾವ್ದೋ ಏರಿಯಾದಲ್ಲಿ ಮಳೆ ಬಂತು ಅಂದ್ರೆ ಇಡೀ ಬೆಂಗ್ಳೂರೇ ಮುಳುಗಿ ಹೋಯ್ತು ಅಂತ ತೋರಿಸ್ತಾರೆ ಈ ಟೀವಿಯವ್ರು. ಅವ್ರಿಗೆ ಒಂದೋ ತೋರ್ಸಕ್ಕೆ ಬೇರೆ ಸುದ್ದಿ ಇಲ್ಲ. ಮಾಡಕ್ಕೆ ಬೇರೆ ಕೆಲ್ಸ ಇಲ್ಲ ಅಂದ ಮಗ. ಮಗನ ಮಾತು ಕೇಳಿ ತಾಯಿಗೆ ಎಷ್ಟೋ ಸಮಾಧಾನವಾದ್ರೂ ಸೊಂಟ ಮಟ್ಟ ನೀರಲ್ಲಿ ನಿಂತ … Read more

ಅಂತರ್ಜಾಲದ ಖೆಡ್ಡಾಗಳು ಮತ್ತು ಕಾಟಕೊಡೋ ಕುಕ್ಕಿಗಳು: ಪ್ರಶಸ್ತಿ. ಪಿ.

ದಿನ ಬೆಳಗಾದಾಗ ಮುಖ ತೊಳೆಯೋ ಮುನ್ನವೇ ವಾಟ್ಸಾಪು ಮೆಸೇಜು ನೋಡ್ಲಿಲ್ಲ ಅಂದ್ರೆ ರಾತ್ರೆಯೊಳಗೆ ಒಮ್ಮೆಯೂ ಫೇಸ್ಬುಕ್ಕು ಹೊಕ್ಕಿಲ್ಲ ಅಂದ್ರೆ ನಮ್ಮ ಆ ದಿನವೇ  ಅಪೂರ್ಣವಾದ ಭಾವ !. ಈ ಅಂತರ್ಜಾಲದಲ್ಲಿ ನಾವು ಎಷ್ಟು ಮುಳುಗಿ ಹೋಗಿದ್ದೇವೆ ಅಂದ್ರೆ ಕಾಲ್ಪನಿಕ ಜಗತ್ತೇ ಸರ್ವಸ್ವವೂ ಆಗಿ ಇಲ್ಲೇ ಕೃಷಿ ಮಾಡೋದ್ರಿಂದ(farm villa), ಓಡೋವರೆಗೆ(temple run) ನಿಜಜೀವನದ ಎಲ್ಲವನ್ನೂ ಅನುಕರಿಸೋ ತಂತ್ರಾಂಶಗಳನ್ನು ಬರೆದು ಅವುಗಳಲ್ಲೇ ಮುಳುಗಿ ಹೋಗಿ ಒಂಥರಾ ಕಾಲ್ಪನಿಕ ಜಗತ್ತಲ್ಲೇ ಕಳೆದುಹೋಗಿದ್ದೇವೆ. ಒಂದು ವಾರ ಫೇಸ್ಬುಕ್ಕಲ್ಲಿ ದಿನಾ ರಾತ್ರಿ ಹರಟಿದವ … Read more

ಕೊಳೆಯ ಜಾಡು ಹಿಡಿದು: ಪ್ರಶಸ್ತಿ. ಪಿ.

ಶನಿವಾರ , ಭಾನುವಾರ ಬಂತಂದ್ರೆ ಬಟ್ಟೆ ತೊಳೆಯೋದಿತ್ತಲ್ವಾ ಅನ್ನೋದು ದುತ್ತಂತ ನೆನಪಾಗುತ್ತೆ. ರೂಮಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು, ನಾ ನಿನ್ನ.. ಬಿಡಲಾರೆ ಅಂತ ಹಾಡುತ್ವೆ. ಏನು ಮಾಡೋದು ? ಬಟ್ಟೆಗಳ ತೊಳಿದೇ ಮನಬಂದಲ್ಲಿ ಎಸೆದು ಒಂದು ವಾರದ ತನಕ ದ್ವೇಷ ಸಾಧಿಸಬಹುದು. ಆದ್ರೆ ಆಮೇಲೆ ? ಸೋಮವಾರ ಮತ್ತೆ ಆಫೀಸಿಗೆ ಹೋಗೋಕೆ ಅವೇ ಬಟ್ಟೆಗಳು ಬೇಕಲ್ವಾ ?  ಮುದುರಿಬಿದ್ದ ಬಟ್ಟೆಗಳನ್ನ ನೆನೆಸೋಕೆ ಹೋದಾಗ ಅವುಗಳ ಕಾಲರ್ರು, ತೋಳುಗಳಲ್ಲಿ ಜಮಾವಣೆಯಾದ ಮಣ್ಣು ನೋಡಿ ಇಷ್ಟು ಕೊಳೆಯಾಗೋ ತರ ಏನು … Read more

ಉತ್ತರವಿಲ್ಲದ ಪ್ರಶ್ನೆಗಳ ಹಿಂದೆ: ಪ್ರಶಸ್ತಿ. ಪಿ.

ಪೀಠಿಕೆ: ಪ್ರೀತಿಯೋ ದ್ವೇಷವೋ ಕವಿತೆಯಾಗೋದುಂಟು. ತಿರಸ್ಕಾರ, ನೋವುಗಳು ಕವಿತೆಯ ಮಿತಿ ದಾಟಿ ಕತೆಗಳಾಗೋದೂ ಉಂಟು. ಆದ್ರೆ ನಿಜಜೀವನದ ನೋವಿಗೊಂದು ಮಾತಿನ ರೂಪ ಸಿಕ್ಕರೆ ? ವಿದ್ಯಾರ್ಥಿಯೊಬ್ಬ ತನ್ನ ಇಂಟರ್ನಲ್ಸು, ಎಕ್ಸಾಮುಗಳನ್ನೇ ಕತೆಯ ವಸ್ತುವಾಗಿಸಿದ್ರೆ ?  ಡಾಕ್ಟರೊಬ್ಬ ತನ್ನ ಆಪರೇಷನ್ನುಗಳ ಸುತ್ತ, ಕಂಪ್ಯೂಟರ್ ಉದ್ಯೋಗಿಯೊಬ್ಬ ತನ್ನ ಜೀವನ ಶೈಲಿಯ ಬಗ್ಗೆ, ಆಟಗಾರನೊಬ್ಬ ತಾನು ಈಗಿನ ಹಂತಕ್ಕೆ ಬರಲು ಕಷ್ಟಪಟ್ಟ ಬಗ್ಗೆಯೋ ಬರದ್ರೆ ? ಸದ್ಯಕ್ಕಂತೂ ಗೊತ್ತಿಲ್ಲ. ರಕ್ತದಾನ ಮಾಡಲೆಂದು ಹೋಗಿ, ಇತ್ತ ಸಂಜೆಯ ತಿಂಡಿಯೂ ಇಲ್ಲದೇ, ಅತ್ತ ಬಸ್ಸೂ … Read more

ಆದಾಯ ತೆರಿಗೆ ಮತ್ತು ನಾವು: ಪ್ರಶಸ್ತಿ ಪಿ.

  ಈಗ ಟೀವಿ, ಪೇಪರ್ಗಳಲ್ಲೆಲ್ಲಾ ಫುಟ್ಬಾಲು ಜ್ವರ. ಮೆಸ್ಸಿ, ರೊನಾಲ್ಡೋ, ರೋಬಿನ್ ವಾನ್ ಪರ್ಸಿ.. ಹೀಗೆ ತರಾವರಿ ಹೆಸರುಗಳದ್ದೇ ಗುಣಗಾನ ಫೇಸ್ಬುಕ್ , ಟ್ವಿಟ್ಟರ್ಗಳಲ್ಲೂ. ಈ ಜೋಶಿನ ಮಧ್ಯೆಯೇ ಆದಾಯ ತೆರಿಗೆ ಮಾಹಿತಿ ಸಲ್ಲಿಸಲು ಜುಲೈ ಮೂವತ್ತು ಕೊನೇ ದಿನ ಅನ್ನೋ ಮಾಹಿತಿ ಮೂಲೆಲೆಲ್ಲೋ ಮಿಂಚ್ತಾ ಇರತ್ತೆ. ಸಣ್ಣವರಿದ್ದಾಗಿಂದ ಟಿ.ವಿಯಲ್ಲಿ ಈ ಬಗ್ಗೆ ಜಾಹೀರಾತು ನೋಡೇ ಇರ್ತೇವೆ. ಆದ್ರೆ ಸ್ವಂತ ದುಡಿಯೋಕೆ ಶುರು ಮಾಡಿದಾಗ್ಲೇ ಇದೇನಪ್ಪಾ ಅನ್ನೋ ಪ್ರಶ್ನೆ ಹೆಚ್ಚೆಚ್ಚು ಕಾಡತೊಡಗೋದು. ನಾವು ಕಟ್ಟೋ ತೆರಿಗೆಯೇ ಸರ್ಕಾರದ … Read more

ದಾಂಡೇಲಿ ದೋಣಿಯಾನ: ಪ್ರಶಸ್ತಿ ಪಿ.

ಗೆಳೆಯನ ಮದುವೆಗೆ ಬೆಳಗಾವಿಯ ಚಿಕ್ಕೋಡಿಗೆ ಹೋಗಬೇಕೆಂದಾಗ ಪ್ರವಾಸ ಪ್ರಿಯನಾದ ನಾನು ಸಹಜವಾಗೇ ಜೈಯೆಂದಿದ್ದೆ.  ಮದುವೆಯ ಮುಂಚಿನ ದಿನ ದಾಂಡೇಲಿಗೆ ಹೋಗಿ ಅಲ್ಲಿನ ಕಾಳೀ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡೋಣ ಅಂದಾಗೆಂತೂ ತಗೋ, ಸ್ವರ್ಗಕ್ಕೆ ಮೂರೇ ಗೇಣು. ಗೆಳೆಯರ ಬಾಯಲ್ಲಿ ಈ ರಿವರ್ ರಾಫ್ಟಿಂಗ್ ಬಗ್ಗೆ ಹಲವು ಸಲ ಕೇಳಿದ್ದವನಿಗೆ ಅದನ್ನೊಮ್ಮೆ ನೋಡಬೇಕೆಂಬ ಬಯಕೆ ಮುಂಚಿಂದಲೂ ಇತ್ತೆಂದು ಬೇರೆ ಹೇಳಬೇಕಿಲ್ಲವೆಂದುಕೊಂಡು ಮುಂದುವರೆಯುತ್ತೇನೆ. .ಶುಕ್ರವಾರ ಸಂಜೆ ಐದುಮುಕ್ಕಾಲಕ್ಕೆ ಮೆಜೆಸ್ಟಿಕ್ಕಿಂದ ಹುಬ್ಬಳ್ಳಿಯ ಟ್ರೈನು. ಆಫೀಸಿಂದ ನಾಲ್ಕಕ್ಕೇ ಹೊರಟರೂ ಬೆಂದಕಾಳೂರಿನ ಟ್ರಾಫಿಕ್ಕಿಗೆ ಸಿಲುಕಿ … Read more

ಬ್ಲಾಗುಗಳ ಲೋಕದಲ್ಲಿ: ಪ್ರಶಸ್ತಿ ಪಿ.

ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, … Read more