ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ ಕವನಸಂಕಲನ ಬಿಡುಗಡೆ ಸಮಾರಂಭ

ದಿನಾಂಕ: 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯನ್ನು ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾ ರವರು( ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು) ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇದ್ರಪ್ಪ, ನಿದೇಶಕರು, ಬಾಪೂಜಿ ಇಂಜಿಯರಿಂಗ ಕಾಲೇಜು, ದಾವಣಗೆರೆ … Read more

ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಈ ಬಾರಿಯ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ನೆಲೆಸಿರುವ ಗುರುಪ್ರಸಾದ ಕಾಗಿನೆಲೆ ಅವರ ಕೃತಿ: ಹಿಜಾಬ್ ಇದಕ್ಕೆ ದೊರೆತಿದೆ. ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ: ಆಗಸ್ಟ್ 13, 2018 ಸೋಮವಾರ ಅಪರಾಹ್ನ: 2.00 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿ ಗಳಾಗಿ ಎಸ್. ದಿವಾಕರ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ವಿವರ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಳಿಗ್ಗೆ 9.30 ರಿಂದ ನಿನಾದ ಕನ್ನಡ ಕಾವ್ಯ … Read more

ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ “ಪಾರ್ಶ್ವ ಸಂಗೀತ” ನಾಟಕ ಪ್ರದರ್ಶನ

ಇದೇ ಜೂನ್ ತಿಂಗಳ 23, 24, 29, 30 ಹಾಗೂ ಜುಲೈ 1 ರಂದು ಸಂಜೆ 7 ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ನೂತನ ಕಿರುರಂಗಮಂದಿರದಲ್ಲಿ ರಂಗವಲ್ಲಿ ತಂಡದ ನೂತನ ರಂಗಪ್ರಯೋಗ, ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕದ ಪ್ರದರ್ಶನವಿದೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕದ ನಿರ್ದೇಶಕರು. ನಾಟಕ ಕುರಿತು ಪಾಶ್ರ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ … Read more

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2018’ ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ … Read more