ಜ್ಞಾನದ ಹರಿವಿನ ಸ್ಥಿತಿಗತಿ. ಏನು? ಎತ್ತ?: ರಕ್ಷಿತ್ ಶೆಟ್ಟಿ
ಒಂದು ಕಾಲವಿತ್ತು. ಬರಹಗಾರರು ಹಗಲಿರುಳೆನ್ನದೇ ಬರೆದು ತಮ್ಮ ಕೃತಿಗಳನ್ನು ಮುದ್ರಿಸಿ ಉರಿ ಮಳೆ ಚಳಿಯಲ್ಲಿಯೂ ಅಲೆದು ಪ್ರತಿಯನ್ನು ಮಾರುತ್ತಿದ್ದರು. ನಾಡು ನುಡಿಗಾಗಿ ಭಾಷೆಯ ಹಲವು ಮಗ್ಗುಲಲ್ಲಿ ಸಾಹಿತ್ಯ ಕೃಷಿ ಮಾಡಿ ಓದುಗರೊಡನೆ ಭಾವನೆಗಳನ್ನು ಬೆಸೆದುಕೊಳ್ಳುತ್ತಿದ್ದ ಸಮಯವದು. ಇಂಗ್ಲೀಷಿನ ಬರಹಗಾರರಿಗೆ ವಿಶೇಷ ಸ್ಕೋಪ್ ಸಿಗುತ್ತಿದ್ದರೂ ಸ್ವಭಾಷೆಯನ್ನು ಕೃತಿಗಳಲ್ಲಿ ಮೈತಾಳಿಸಿಕೊಂಡು ಭಾಷಾ ಸೇವೆ ಮಾಡಿರವುದು ಕೇವಲ ಕನ್ನಡಕ್ಕಷ್ಟೇ ಸೀಮಿತವಲ್ಲದ್ದು. ಅಂದಿನ ಓದು :- ಕೃತಿಯೊಂದನ್ನು ಮನೆಯವರೆಲ್ಲರೂ ಕಿತ್ತಾಡಿಕೊಂಡು ಆದಷ್ಟು ಬೇಗ ಓದುತ್ತಿದ್ದ ಕಾಲವಿತ್ತು. ಕಾಲ ಸಂದರ್ಭವೂ ಪೂರಕವಾಗಿದ್ದುದು ಬೇರೆ ಮಾತು. ವರ್ಷದಲ್ಲಿ ದುಡಿಯೋದನ್ನ ತಿಂಗಳಲ್ಲಿ ದುಡಿಯೋ ಧಾವಂತ ಆಗಿರಲಿಲ್ಲ. ಅನಕ್ಷರತೆಯಿಂದ ಅಕ್ಷರಸ್ಥತೆಯೆಡೆಗೆ … Read more