ತಮ್ಮನ್ನು ರಕ್ಷಿಕೊಳ್ಳಲಾಗದ ಸಜ್ಜನಿಕೆ ಏಕೆ ಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.
ದಿನ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ ಒಂದೆರಡಾದರೂ ಸ್ತ್ರೀಯರ ಮೇಲಿನ ಅತ್ಯಾಚಾರಗಳು, ಚೀಟಿಹಾಕಿ ಮೋಸಹೋದ ಪ್ರಕರಣಗಳು, ಪೋಲೀಸ್ ಅಧಿಕಾರಿಗಳು ಪೋಲೀಸರಿಗೆ ನೀಡಿದ ಕಿರುಕುಳಗಳು, ವರದಕ್ಷಿಣೆ ಕಿರುಕುಳ ತಾಳಲಾಗದೆ ಹಸುಗೂಸನ್ನು ಬಿಟ್ಟು ತಾಯಿ ಮಾಡಿಕೊಂಡ ಆತ್ಮಹತ್ಯೆಗಳು, ಲಂಚ ಪ್ರಕರಣಗಳು, ಭಯೋತ್ಪಾದನೆಗಳು, ಜನಾಂಗೀಯ ದ್ವೇಷಕ್ಕೆ ತುತ್ತಾದ ಬಲಹೀನರು, ಬಹುಸಂಖ್ಯಾತರಿಂದ ತೊಂದರೆಗೊಳಗಾದ ಅಲ್ಪಸಂಖ್ಯಾತರ ನೋವುಗಳು ವರದಿ ಆಗಿಯೇ ಇರುತ್ತವೆ! ಇಲ್ಲೆಲ್ಲಾ ತೊಂದರೆ ಅನುಭವಿಸಿದ್ದು ದುರ್ಬಲರು! ತೊಂದರೆ ನೀಡಿದ್ದು ಸಬಲರು! ಅಂದರೆ ಪ್ರಬಲರು ದುರ್ಬಲರಿಗೆ ಸದಾ ತೊಂದರೆ ನೀಡುವುದನ್ನು ಕಾಣುವಂತಾಗಿದೆ. ದುರ್ಬಲರ ಶೋಷಣೆಗೆ … Read more