ಪಂಜು ಕಾವ್ಯಧಾರೆ

ಹರಿದ್ರ ಕುಂಕುಮ ಶೋಭಿತಳಾದವಳಿಗೆ ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ ಅವನು ಹಾಕುವ ಮೂರುಗಂಟಿಗೆ ತಾನು ಬೆಳದ ಪರಿಸರ ತೊರೆಯುವಳಲ್ಲ ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಮಮತೆಯ ಕುಡಿಯನ್ನು ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ…. ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ ತನ್ನ ಮನೆ ಸೇರುವಳಲ್ಲ ಗಂಡನ ಮನೆಯ ಸುಖ ಶಾಂತಿ ನೆಮ್ಮದಿ ಬಯಸಿ ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ ಗಂಡ ಮಕ್ಕಳ … Read more

ಪಂಜು ಕಾವ್ಯಧಾರೆ

ನಂಕ್ಯಾಕೋ…. ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ ಸುಮ್ಜೆ ಕೂಕಂತೀನಿ ಗವ್ವನ್ನೋ ಕತ್ಲು ಮೈಮ್ಯಾಗೇ ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ ಗ್ವಾಡೇ ಮ್ಯಾಗೆ ನೀನೇ ಬಂದಂಗಾತು ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ ಕಳಿಯಾಕೆ ಮನುಸಾಗ್ತಿಲ್ವಾ… ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ … Read more

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ … Read more

ಪಂಜು ಕಾವ್ಯಧಾರೆ

ಹೆದ್ದಾರಿ ಹೊದ್ದು ಮಲಗಿದವರು. ಬೆವತ ಚಂದಮಾಮನಂತ ಮೊಗದಿಂದ ಕಮಲೆಲೆಯಿಂದ ಜಾರುವ ಹನಿಯಂತೆ ಬೆವರಹನಿಗಳು ಸಾಲುಗಟ್ಟಿವೆ.! ಸಮನಾಂತರವಾಗಿ ಜೊಲ್ಲುರಸವೂ ತುಟಿಯಂಚಿಂದ ಜೋಗದಂತೆ ಸುರಿದು ತಲೆದಿಂಬಾಗಿ ಮಡಿಚಿಟ್ಟ ಮೆತ್ತನೆಯ ಅಮ್ಮನ ಸೀರೆ ಒದ್ದೆಯಾಗಿದೆ.!! ಗುಡಾರವು ನಾಲ್ದೆಸೆಯ ಗೂಟಗಳಿಗೆ ಬಿಗಿದಪ್ಪಿಕೊಂಡಿದೆ. ಬೀಸುವ ಗಾಳಿಯನ್ನು ನಿರ್ಭಂದಿಸಿ ಬೆರಗು ಮೂಡಿಸಿದೆ.! ಅಮ್ಮ ಕಣ್ಣುಬ್ಬುಗಳಿಗೆ ಕೈಯಡ್ಡಿ ಗುಡಾರದ ದ್ವಾರದಲ್ಲಿ ಸಿರಿವಂತರ ಸಿಂಗರಿಸಿ ಕಪಾಟಿನಲ್ಲಿಡುವ ಅಲಂಕಾರದ ವಸ್ತುಗಳ ಮಾರಾಟ ಮಾಡುತ್ತಿದ್ದಾಳೆ.!! ಅದು ರಾಜಪಥ ಇಬ್ಬದಿಯುದ್ದಕ್ಕೂ ಸುಂದರ ಮರಗಳ ಸಾಲು, ಪ್ರತಿ ಕ್ಷಣವೂ ರಾಜಾರಥಗಳ ಪಯಣ ನೋಡಲು ಇಕ್ಕಣ್ಣುಗಳು … Read more

ಪಂಜು ಕಾವ್ಯಧಾರೆ

ಗಜಲ್ ಕಣ್ಣು ಬೇರಸಿ ಬಿಡು ಏಕಾಂತದ ಸುಖ ಸಿಗಲಿ ಸಖ ಮನಸಿನ ಸಂಭ್ರಮಕೆ ಸುಖ ತುಂಬಿ ಬರಲಿ ಸಖ ಯಾರ ಸಲುವಾಗಿ ಬದುಕು ನೊಂದಿತ್ತು ಅವರೆ ಆನಂದಿಸಲಿ ಇಬ್ಬರು ಕಳೆದ ಕತ್ತಲೆಗೆ ನೆನಪುಗಳ ಬೆಳಕು ಬರಲಿ ಸಖ ಗಿಡ ಮರ ಬಳ್ಳಿಗಳು ಹೂವ ಚೆಲ್ಲಿ ನಿಂತಿವೆ ನಮ್ಮೊಲವಿನ ಮಾತು ಸವಿಯಲು ಮೌನ ಮುರಿದು ಹೂವಿನ ಹಾಸಿಗೆ ಮೇಲೆ ನಡೆದು ಹೋಗಲಿ ಸಖ ಕಾಡಿ ಜೀವ ಹಿಂಡಿ ಜಾತಿಯ ಕೆಂಬಣ್ಣ ಹಚ್ಚಿ ಅಡ್ಡಗೋಡೆ ಕಟ್ಟಿದರು ವೈಭವದ ಮೆರವಣಿಗೆಯಲಿ ಬಂದು … Read more

ಪಂಜು ಕಾವ್ಯಧಾರೆ

ಪ್ರಶ್ನೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನಿಮ್ಮ ರೋಧನ ನನಗೆ ಕೇಳುತ್ತಿದೆ ನಿಮ್ಮ ಮನದ ನೋವು ನನಗೆ ಅರ್ಥವಾಗುತ್ತಿದೆ ನಿಮ್ಮ ಕಣ್ಣೀರ ಹನಿಗಳನ್ನು ನಾನು ಬಾಚಿ ತಬ್ಬಿಕೊಳ್ಳುತ್ತಿರುವೆ ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ಗೋಡೆಗೆ ಭಾರವಾಗಿರುವ ಭಾವಚಿತ್ರದಲ್ಲಿ ನಾನಿರುವೆನೇನು? ಅಥವಾ ಆಗಸದೆತ್ತರದ ಕಲ್ಲು ಮನುಷ್ಯನೊಳಗೆ ಅಡಗಿ ಕುಳಿತಿರುವೆನೇನು ನಾನು..? ಅಥವಾ ನೀವೆ ಕಟ್ಟಿದ ಭಾರವಾದ ಸಮಾಧಿಯೊಳಗೆ ಕಣ್ಮುಚ್ಚಿ ಮಲಗಿರುವೆನೇನು ನಾನು..? ನಾನು ಸತ್ತಿರುವೆನೆಂದು ಏಕೆ ಅಳುತ್ತಿರುವಿರಿ..? ನನ್ನ ದೇಹದ ಕಣ ಕಣದ ಉಸಿರು ನಿರ್ಮಲ ವಾತಾವರಣ ಸೇರಿದೆ … Read more

ಕೊರೋನ ಕವಿತೆಗಳು

ಮನೆಯಲ್ಲೇ ಇರಿ ಬಂಧಿಯಾಗಿಬಿಡಿ.. ಚಂದದಿ, ಇಪ್ಪತ್ತೊಂದು ದಿನ ವ್ರತದಂದದಿ.. ಮನೆಯೊಳಗೆ ಮನಸೊಳಗೆ…. ನಿಮಗಾಗಿ, ನಮಗಾಗಿ, ಭಾರತಕ್ಕಾಗಿ ಮನೆಯಲ್ಲೇ ಇರಿ, ಮುದದಿ… ಇದ್ದು ಮಹಾನ್ ಆಗಿರಿ.. ಭಾರತೀಯರೇ ಅಂದು ಗಾಂಧಿ ಕರೆಗೆ ಬ್ರಿಟಿಷರ ಅಟ್ಟಲು ಮನೆ ಬಿಟ್ಟಿರಿ… ಇಂದು ಮಾರಿ ಕರೊನಾ ಅಟ್ಟಲು ದಯಮಾಡಿ ಮನೆಯಲ್ಲೇ ಇರಿ… ಇದ್ದು ಬಿಡಿ ಮನೆಯಲ್ಲೇ ವಿನಂತಿಸುವೆ… ವಿಷಕ್ರಿಮಿಯ ಮೆಟ್ಟಲು. ತುಸುದಿನ ನಿಮ್ಮ ಮನೆಗಳಲ್ಲಿ ನೀವೇ ರಾಜರಾಗಿರಿ, ಆಳಿರಿ, ಆಡಿರಿ, ಓದಿರಿ‌.. ತೊಳೆಯಿರಿ, ತೆರೆಯಿರಿ ಮನವ ಹೊಸ ಆಲೋಚನೆಗೆ…. ಆವಿಷ್ಕಾರಕೆ, ಸಾತ್ವಿಕ ಸಂಯಮಕೆ… … Read more

ಪಂಜು ಕಾವ್ಯಧಾರೆ

“ಬುನಾದಿ ಇಲ್ಲದ ಬದುಕು “ ಕೂಡಿಟ್ಟ ಕನಸುಗಳ ಜೊತೆ ಪಾದಯಾತ್ರೆ ಮಾಡುತ್ತಿರುವೆ. ಅರಮನೆಗಲ್ಲ, ಹೊತ್ತಿನ ಅಂಬಲಿಗಾಗಿ! ಕಟ್ಟಿಕೊಂಡ ಆಸೆಗಳನ್ನ ಒಟ್ಟುಗೂಡಿಸಿ ಸಮಾಧಿ ಮಾಡಿರುವೆ. ಚಂದದ ಬಟ್ಟೆಗಲ್ಲ, ಹಸಿದ ಹೊಟ್ಟೆಗಾಗಿ! ನನ್ನೊಳಗಿನ ಖುಷಿಯನ್ನ ಮಾಯಾ ಬಜಾರಿನಲ್ಲಿ ಮಾರಿಕೊಂಡಿರುವೆ. ದುಡ್ಡಿಗಲ್ಲ, ಮನದ ದುಃಖಕ್ಕಾಗಿ! ಬುನಾದಿಯೇ ಇಲ್ಲದ ಬದುಕನ್ನ ನಡು ಬೀದಿಯಲ್ಲೆ ಕಳೆದುಕೊಂಡಿರುವೆ. ನನ್ನ ಸೋಲಿಗಲ್ಲ, ಗೆದ್ದ ಬಡತನಕ್ಕಾಗಿ! –ಹರೀಶ್ ಹಾದಿಮನಿ (ಹಾಹರೀ) ಸದಾ ಕಾಡುವೆ ಏಕೆ? ನೀ ಅಗಲಿದ ಕ್ಷಣವ ಮರೆಯಲಾಗದು ಎಂದಿಗೂ, ನಿನ್ನ ನೆನಪಿನ ಬುತ್ತಿ ಹೊತ್ತು ಸಾಗುತ್ತಿರುವ … Read more

ಪಂಜು ಕಾವ್ಯಧಾರೆ

ಮಾವು -ಬೇವು, ಚಿಗುರಿ, ಧವಸ-ಧಾನ್ಯ ತುಂಬಿರಲು, ವರುಷದ ಆದಿ ಯುಗಾದಿ, ಅದುವೇ ಚೈತ್ರದ ತೊಟ್ಟಿಲು..!! ಬೇವು -ಬೆಲ್ಲವ ಸವಿದು, ಹೋಳಿಗೆ ಹೂರಣ ನೈವೇದಿಸಿ; ಮನೆ -ಮನೆಗೂ ಕಟ್ಟಿದ ಹಸಿರು ತೋರಣ…! ಅದುವೇ ಚೈತ್ರದ ತೊಟ್ಟಿಲು..! ಕಹಿ-ನೆನಪು ಅಳಿದು; ಇರಲಿ ಮಧು-ಮಧುರ ನೆನಪು.. ವರುಷವೆಲ್ಲಾ ಇರಲಿ ಸಂತಸ..! ಅದುವೇ ಚೈತ್ರದ ತೊಟ್ಟಿಲು..!! ನೇಗಿಲ ಹಿಡಿವ ಸಂಭ್ರಮ; ಆಗಾಗ ಮುಂಗಾರು ಸಿಂಚನ.., ರೈತನ ಮೊಗದಲ್ಲಿ ಆಶಾ ಕಿರಣ .! ಅದುವೇ ಚೈತ್ರದ ತೊಟ್ಟಿಲು.. !! ಯುಗಾದಿ ಚಂದ್ರ ದರ್ಶನ; ಪಾಪ … Read more

ಪಂಜು ಕಾವ್ಯಧಾರೆ

ಹೈಕುಗಳು. ಅಮ್ಮನ ಪ್ರೇಮ ಎಲ್ಲೆಲ್ಲಿಯೂ ಸಿಗದ ಅಮೃತದಂತೆ. * ಏನು ಚೆಂದವೋ ಸೂರ್ಯನ ಕಿರಣವು ಪ್ರತಿ ಮುಂಜಾವು. * ಗುರು ಬಾಳಿಗೆ ದೇವತಾ ಮನುಷ್ಯನು ಜೀವನ ಶಿಲ್ಪಿ. * ಬಾಳ ಬೆಳಗೋ ಆ ಸೂರ್ಯ, ಚಂದ್ರರಿಗೆ ಕೋಟಿ ಪ್ರಣಾಮ. * ನಿರ್ಗತಿಕರ ಸೇವೆ ನೀ ಮಾಡುತಲಿ ದೇವರ ಕಾಣು. * ಸಿರಿಗನ್ನಡ ನಮ್ಮ ಕಣಕಣದಿ ಪುಟಿಯುತ್ತಿದೆ. * ದಾನ ಹಸ್ತಕ್ಕೆ ಜಾತಿ ಕಾರಣವೇಕೆ ಮಾನವ ಧರ್ಮ. * ತಾಯಿಯ ಪ್ರೇಮ ದೇವನಿಗೆ ಸಮಾನ ಮಿಕ್ಕದ್ದು ಮಿಥ್ಯ. * … Read more

ಪಂಜು ಕಾವ್ಯಧಾರೆ

ಬಾಲಲೀಲೆಗಳು ಮರಳಬೇಕೆನಿಸುತಿದೆ ಆ ಸಮೃದ್ಧಿಯ ದಿನಗಳಿಗೆ. ನುಗ್ಗಿಬರುತಿವೆ ನೆನೆಪುಗಳ ಬುಗ್ಗೆ, ಮನಸಿಗೆ ಬಂಧನವಿರದ, ಹೃದಯಕೆ ದಣಿವಾಗದಿರದ, ಆ ಮುಗ್ದ ಮುಕ್ತ ರಸವತ್ತಾದ ದಿನಗಳಿಗೆ. ಕಣ್ಣಿಗೆ ಕಟ್ಟಿದಂತಿವೆ ಆ ಆಟ ಪಾಟಗಳು… ಬೀದಿ ಬೀದಿ ಅಲೆದು ಹುಣೆಸೆ ಬೀಜ ಗುಡ್ಡೆಯಾಕಿ ಅಟಗುಣಿ ಆಡಿದ್ದು. ಹಳ ಕೊಳ್ಳಗಳ ಶೋಧಿಸಿ ಕಲ್ಲುತಂದು ಅಚ್ಚಿನಕಲ್ಲು ಆಡಿದ್ದು. ಬಳಪ ಸೀಮೆಸುಣ್ಣ ಸಿಗದೆ ಇದ್ದಲಿನಲಿ ಚೌಕಬಾರ ಬರೆದಿದ್ದು. ಕುಂಟೆಬಿಲ್ಲೆ ಆಡಿ ಕಾಲು ಉಣುಕಿಸಿಕೊಂಡಿದ್ದು. ಕಣ್ಣಾಮುಚ್ಚಾಲೆ ಹಾಡುವಾಗ ಕಣಜದಲಿ ಅಡಗಿ ನೆಲ್ಲಿನ ನವೆಗೆ ದಿನವೆಲ್ಲಾ ಮೈಕೆರೆದುಕೊಂಡಿದ್ದು. ಬರಿಗಾಲಲ್ಲಿ … Read more

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. … Read more

ಪಂಜು ಕಾವ್ಯಧಾರೆ

ಹೊತ್ತೊಯ್ಯುವ ಮುಂಚೆ… ಕೋಳಿ ಪಿಳ್ಳಿಗಳ ಜತೆ ಓಡಾಟ ಹಸುಕರುಗಳೊಡನೆ ಕುಣಿದಾಟ ಗೆಳೆಯರೊಟ್ಟಿಗೆ ಕೆಸರಿನಾಟ ಅಪ್ಪ ಸಾಕಿದ್ದ ಕಂದು ಬಣ್ಣದ ಮೇಕೆಯ ತುಂಟಾಟ, ನಮಗೆಲ್ಲ ಅದರೊಂದಿಗೆ ಆಡುವದು ಇಷ್ಟ ಅಪ್ಪನಿಗೂ ಮೇಕೆಯಂದ್ರೆ ಪ್ರೀತಿ ಗಾಂಧಿತಾತನಂತೆ ಮೇಕೆ ಹಾಲು ಅವನ ಪಾಲಿಗೆ ಪಂಚಾಮೃತ ಅಪ್ಪ ಕೇಳಿದಾಗಲೆಲ್ಲ ಅವ್ವ ಮಾಡಿಕೊಡಲೇಬೇಕು ಚಹಾ ಹಾಲಿಗಿದೆಯಲ್ಲ ಮೊಗೆದಷ್ಟು ತುಂಬಿಕೊಡುವ ಕಾಮಧೇನು ಒಂದು ದಿನ ಅದೇನೋ ತಿಂದ ಮೇಕೆಗೆ ಹೊಟ್ಟೆಯುಬ್ಬರದ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದು, ಜೀವದಂತಿದ್ದ ಮೇಕೆ ಪ್ರಾಣ ಉಳಿಸದ ಪಶುವೈದ್ಯ ಕಟುಕನಂತೆ ಕಂಡು … Read more

ಪಂಜು ಕಾವ್ಯಧಾರೆ

ಸಾಧನಕೇರಿಯ ಬೇಂದ್ರೆ ಅಜ್ಜ ಕನ್ನಡ ನುಡಿಸೇವೆ ನಿನ್ನ ಕಜ್ಜ. ಪದ್ಯ ಕಟ್ಟಿ ಹಾಡಿದ್ಯಂದ್ರೆ ಕೇಳೋ ಕಿವಿಗಳಿಗೆ ಇಲ್ಲ ತೊಂದ್ರೆ… ಅಜ್ಜ ನಿನ್ನ ಬರೆಯೋ ಕೋಲ್ಗೆ ಎಂಥ ಶಕ್ತಿ ಇತ್ತು. ಅದ್ನೆ ನೀನು ಎತ್ತಿ ಹಿಡಿದೆ ನಿನ್ನ ಕೈ ಕಲ್ಪವೃಕ್ಷವಾಯ್ತು… ನಗ್ ನಗ್ತ್ ಹೇಳ್ದೀ ಬುದ್ಧಿಮಾತು ನಿನ್ ದುಃಖ ನೀನ್ ನುಂಗಿ. ಅಜ್ಜ ಅಂದ್ರ ನೆನಪಿಗ್ ಬರ್ತದ ತಲೆಗೆ ಪಟಗ ನಿಲುವಂಗಿ.. ಅಜ್ಜ ನಿನ್ ಪದಗಳಂತು ಸಜ್ಜಿತೆನಿ ತೊನೆದ್ಹಾಂಗ. ಕೇಳ್ತಾ ಕೇಳ್ತಾ ತಲೆದೂಗ್ತಾವಾ ಹಸುಕಂದಮ್ಗಳು ಹಾಂಗಾ.. ಬಾಳ್ಗೆ ನಾಕು … Read more

ಮಕ್ಕಳ ಕವನ: ವೆಂಕಟೇಶ್ ಚಾಗಿ, ದೀಪು

ನನ್ನ ತಂಗಿ ಪುಟ್ಟ ಪುಟ್ಟ ಹೆಜ್ಜೆ ಇಡುತಾ ನನ್ನ ತಂಗಿ ಬರುವಳು ಅಣ್ಣಾ ಎಂದು ತೊದಲುನುಡಿದು ನನ್ನ ಮನವ ಸೆಳೆವಳು || ತಿನ್ನಲು ಒಂದು ಹಣ್ಣು ಕೊಡಲು ನನ್ನ ಬಳಿಗೆ ಬರುವಳು ಅಲ್ಪಸ್ವಲ್ಪ ಹಣ್ಣು ತಿಂದು ಮನೆಯ ತುಂಬಾ ಎಸೆವಳು || ಕಣ್ಣೇ ಮುಚ್ಚೆ ಕಾಡೆಗೂಡೆ ಆಟ ಆಡು ಎನುವಳು ಅಮ್ಮನಿಂದ ಅಡಗಿ ಕುಳಿತು ನಕ್ಕು ನನ್ನ ಕರೆಯುವಳು || ನನ್ನ ಕಾರು ನನ್ನ ಗೊಂಬೆ ತನಗೂ ಬೇಕು ಎನುವಳು ಕೊಡುವ ತನಕ ಹಠವಮಾಡೇ ಅಪ್ಪ ಅಮ್ಮ … Read more

ಪಂಜು ಕಾವ್ಯಧಾರೆ

ಅಪ್ಪ ಅಂದರೆ…… ಏನೇ ಕೇಳಿದರೂ ಏನೇ ಹೇಳಿದರೂ ಕೋರ್ಟ್ ಲ್ಲಿ ದಾವೆ ಹೂಡಿದಂತೆ ಚೌಕಾಸಿ ಮೇಲೆ ಚೌಕಾಸಿ ಪರ ವಿರೋಧದ ತೀರ್ಪಿನ ಮೇಲೆ ನೂರಾರು ಕರಾರಿನ ಅಪ್ಪನ ಮೊಹರು….. ಹೆಜ್ಜೆ ಹೊಸ್ತಿಲ ಹೊರಗಿಟ್ಟರೂ ಒಳಗಿಟ್ಟರೂ ತೀವ್ರ ಹದ್ದಿನ ಕಣ್ಣು ಇಟ್ಟಂತೆ ಶೋಧ ಪ್ರತಿಶೋಧಗಳ ಕಾರ್ಯಾಚರಣೆ ತಪ್ಪೊಪ್ಪುಗಳ ಸರ್ಪಗಾವಲಿನಲ್ಲಿ ಖುಲಾಸೆಯೇ ಸಿಗದ ಅಪ್ಪನ ಕಾಯ್ದೆ …… ಎಲ್ಲೇ ಇದ್ದರೂ ಹೇಗೆ ಇದ್ದರೂ ಕುದುರೆಗೆ ಲಗಾಮು ಹಾಕಿಟ್ಟಂತೆ ಸಾಗುವ ಪಥದಿ ತಿರುವು ಏನೇ ಬಂದರು ಸ್ಥಿರ ಸಿದ್ದಾಂತಗಳ ಗಡಿ ಮೀರಲು … Read more

ಪಂಜು ಕಾವ್ಯಧಾರೆ

ಬದುಕ ನೇಯ್ದ ಅವ್ವ…!! ಕಾವ್ಯ ಪುರಾಣ ವೇದ ಉಪನಿಷತ್ತು ಕಟ್ಟಿ ತಿಳಿಸಿ ಓದಿದವಳಲ್ಲ ಹೊಲ ಗದ್ದೆ ಪೈರು ಮನೆಯನ್ನ ಜೇಡರ ಬಲೆಯಂತೆ ನೇಯ್ದು ಬಂಡೆಯಲ್ಲಿ ಮೊಳಕೆಯೊಡೆದು ಸೂರಿಗೆ ಚಂದ್ರನಾಗಿ ತಂಪ ನೀಡಿದವಳು ಕೋಳಿ ಕೂಗೋ ಮುಂಚೆ ಎದ್ದು ದನ ಕರು ಕಟ್ಟಿ, ಕಸ ಸುರಿದು ಬಂದು ಮಬ್ಬ ನೆಲದಾಗಸವ ಶುಚಿಗೊಳಿಸಿ ನೀರ-ನಿಡಿ ಹಿಡಿದು ಕಾಯಿಸಿ ಹಜಾರದಲ್ಲಿ ಮಕ್ಕಳಿಗೆ ಮಜ್ಜನ ಮಾಡಿಸಿ ಕೊಳಕಿಲ್ಲದ ಶ್ವೇತವಸ್ತ್ರ ತೊಡಿಸಿ ಲೋಕದ ಮಾನ ಮುಚ್ಚಿ ಬಾಚಣಿಗೆಯಲ್ಲೆ ವಿಶ್ವಪರ್ಯಟಿಸಿ ಚಿಂದಿ ಮನಗೂಡಿಸಿ ಸಮತೆ ಸಾರಿ … Read more

ಪಂಜು ಕಾವ್ಯಧಾರೆ

ನಗ್ನ ರಾತ್ರಿಗಳು ನನ್ನ ಆಸೆಗಳು ಮತ್ತು ನಿನ್ನ ಯೌವ್ವನ ನಿನ್ನ ದೇಹ ನನ್ನ ಸ್ಪರ್ಷ ಎಷ್ಟು ಹೊತ್ತಿ೦ದ ಅನ್ನುವುದನ್ನು ಡಿಮ್ ಲೈಟಿನ ನಾಲ್ಕು ಗೋ‌ಡೆಯ ಮದ್ಯ ಮರೆತಿರುವುದು ಒ೦ದು ಹುಚ್ಚುತನ ಅ೦ತ ನನಗನಿಸಲಿಲ್ಲ, ನಿನಗೂ ಕೂಡ! ನಿನ್ನ ಕೈ ಬೆರಳಿನ ಉಗುರಿನ ಗಾಯ ನನ್ನ ಬೆತ್ತಲೆಯ ಬೆನ್ನಿನ ಮೇಲೆ ತೇವಗೊ೦ಡಿರುವುದು ನಿನ್ನ ಸ್ತನದ ತೊಟ್ಟು ನನ್ನ ತುಟಿಯ ಚು೦ಬನದಲಿ ನರಳುತ್ತಿರುವುದು ನೋವು ನಲಿವಿನ ಸ್ವರ್ಗಸುಖದಲಿ ಯಾವುದೂ ಅರಿವಿಲ್ಲದೆಯೆ ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ ನಾವಿಬ್ಬರು ಹೀಗೆ ಎಷ್ಟು … Read more

ಪಂಜು ಕಾವ್ಯಧಾರೆ

ಈ ಜಗದಾಗೆ ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ ಎಲ್ಲಾರೂ ಒಂದೇನೆ ಈ ಜಗದಾಗೆ ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ ಕಡೆಗೆಲ್ಲಾ ಮಣ್ಣು ಈ ಜಗದಾಗೆ || ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ || ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ ಬಂದದ್ದು ತಗೋಬೇಕು ಜೀವಂದಾಗೆ ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ || ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ ಜಿದ್ದಾಜಿದ್ದಿಯ ಕಾಣೆ … Read more

ಪಂಜು ಕಾವ್ಯಧಾರೆ

ಬೇಸರದ ಬಾವಲಿಗಳಿಗೆ ಕಣ್ಣಿಲ್ಲ. ಬೀಸುವ ಗಾಳಿಗೆ ಎದೆಯ ಕಾಗುಣಿತ ಅಪಥ್ಯ. ಇದ್ದಲ್ಲೇ ನುರಿಯುವ ಈ ನಿರುದ್ದೇಶಿ ಕುರ್ಚಿಗೆ ಕಾಲುಗಳು, ನೆಪಕ್ಕೆ ಮಾತ್ರ ಪೋಣಿಸಿದ್ದಾನೆ-ಬಡಗಿ, ಇದು ಹಳೆಯ ಗುಟ್ಟು. ಒಪ್ಪಿಕೊಂಡು ಎಷ್ಟೋ ಕಾಲವಾಗಿದೆ. ಕೆಲವು ಕಾರಾಗೃಹಗಳಿಗೆ ಗೋಡೆಗಳಿರುವುದಿಲ್ಲ. ಕೆಲವು ಮಾತುಗಳಿಗೆ ಪದಗಳೂ.. ನಿಟ್ಟುಸಿರಿಗೆ ಮಾತ್ರ ಬಣ್ಣಗಳು – ಬಿನ್ನ ಬಿನ್ನ. ಯಾರದೋ ಒಬ್ಬಂಟಿತನದ ಬೇಟೆಗೆ ಮರಳ ಮಯ್ಯ ಮೇಲೆ ಬರೆದ ಚಿತ್ರಗಳಂತೆ ಬದುಕು. ಆದಿ ಅಂತ್ಯಗಳ ವಿಧಿ ಲಿಖಿತಗಳ ಗೊಡವೆ ಮರೆವೆಗೆ ಕೊಟ್ಟು, ಅಲೆ ಕೊಚ್ಚಿಕೊಂಡು ಹೋಗಲೆಂದೇ ಕಾಯುತ್ತಾ … Read more