ಚಂಚಲ

ನಾ ಬರೆವ ಮುನ್ನ ಎದೆಯಲಿ ಕವಿತೆಯಾಗಿ ಹೊಮ್ಮಿದೆ ನೀನು, ಅದನು ಹಾಳೆಗಿಳಿಸುವ ಮುನ್ನ ನನಗೇ ಅರಿವಿರಲಿಲ್ಲ, ನನ್ನೊಳಗಿನ ನೀನು..!          ನನ್ನ-ನಿನ್ನ ಆಂತರಿಕ ಸಂಘರ್ಷದ        ಚಂಚಲತೆಯ ಭಯದಲಿ ಕರಗುತಿರುವೆ ನಾನು,        ಕಾಣದೇ ಅಂತರ್ಮುಖಿಯಾಗಿ ಕಾಡುವ        ನಿನಗೆ ನಾ ತಿಳಿಸಲಿ ಏನನು..?   ಬರೆಯುವುದೇನನು? ಪದಗಳೇ ಇರದ ಭಾವನೆಗಳ, ಕಾಗದದಿ ಬಣ್ಣದ ಶಾಹಿಯಲಿ.. ಬರಿಯ ವರ್ಣ ಮಿಶ್ರಿತ ಅಸ್ಪಷ್ಟ ಮನದ ಪುಟದಲಿ … Read more

ಪೂರ್ಣತೆಯ ಕಡೆಗೆ

  ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ||   ಬಗೆಹರಿಯದ ಮೌಲ್ಯವದು ’ಪೈ’ ಎಂದು ಪರಿಧಿ ವ್ಯಾಸದ ಸರಳ ಅನುಪಾತವದು ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ ಸನಿಹವಾದರೂ ಎಂದೂ ನಿಖರವಲ್ಲ ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ ತೀರದ ಹಠಕೆ ಅರ್ಪಣೆಯೇನು ಕಡಿಮೆಯ ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧|   ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ … Read more