ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                            ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ … Read more

ನನ್ನೆಲ್ಲಾ ಭಾವಗಳಿಗೆ ನಿನ್ನ ಪ್ರೀತಿಯ ಲೇಪನ..: ಪದ್ಮಾ ಭಟ್

          ಕೂಸೆ.. ನಿನ್ ಸಂತಿಗೆ ಮಾತಾಡ್ತಾ ಇದ್ರೆ, ಸಮಯ ಹೋಗೋದೇ ಗೊತ್ತಾಗ್ತಿಲ್ಲೆ.. ಅದೆಂತಕ್ಕೆ ನೀ ಯಂಗೆ ಅಷ್ಟು ಇಷ್ಟ ಆದೆ.. ಅಂತಾ ಪದೇ ಪದೇ ಹೇಳುವ ನಿನಗೆ ನನ್ನಿಂದ ಉತ್ತರ ಕೊಡುವುದು ಕಷ್ಟ.. ಅದೇ ಆ ದಿನ. ಆ ಮುಸ್ಸಂಜೆಯ ಕೋಲ್ಮಿಂಚಿನಲಿ, ನಿನ್ನ ಮುಖವಷ್ಟೇ ಕಾಣುತ್ತಿದ್ದ ತುಸು ಬೆಳಕು, ಹೃದಯದ ಬಡಿತ ಇಷ್ಟು ಜೋರಾಗಿದ್ದನ್ನು ನಾನೆಂದೂ ಕೇಳಿರಲಿಲ್ಲ.. ಚಳಿಯಿಂದ ಮೈ ಕೊರೆಯುತ್ತಿತ್ತು.. . ಮೌನದ ಆಳದೊಳಗೆ , ಆಡಲಾಗದ ಮಾತುಗಳನ್ನೆಲ್ಲಾ ಕಣ್ಣುಗಳೇ … Read more

ಲಾಸ್ಟ್ ಬೇಂಚ್: ಪದ್ಮಾ ಭಟ್

ಲೇ ಮಚ್ಚ ಇವತ್ತಾದ್ರೂ ಬೇಗ ಕ್ಲಾಸಿಗೆ ಹೋಗೋಣ  ಇಲ್ಲಾಂದ್ರೆ ಹಿಂದಿನ ಬೇಂಚಿನಲ್ಲಿ ಯಾರಾದ್ರೂ ಕೂತ್ಕೊಂಡ್ ಬಿಡ್ತಾರೆ.. ಆಮೇಲೆ ದಿನವಿಡೀ ಮುಂದಿನ ಬೇಂಚೆ ಗತಿ.. ಎಂದು ಆತ ಹೇಳುತ್ತಿದ್ದ.. ಅರೇ! ಹಿಂದಿನ ಬೇಂಚಿಗೆ ಇಷ್ಟೆಲ್ಲಾ ಕಾಂಫೀಟೇಶನ್ನಾ? ಎಂದು ಅಂದ್ಕೋಬೇಡಿ ಕಾಲೇಜಿನಲ್ಲಿ ಯಾವಾಗಲೂ ಮುಂದಿನ ಬೇಂಚಿಗಿಂತ ಹಿಂದಿನ ಬೇಂಚಿಗೆ, ಕಾಂಫೀಟೇಶನ್ ಜಾಸ್ತಿ.. ಇಷ್ಟವಿಲ್ಲದ ಪ್ರೊಫೆಸರ್ ಪಾಠವನ್ನು ಮುಂದಿನ ಬೇಂಚಿನಲ್ಲಿ ಕೂತರೆ ಕಷ್ಟಪಟ್ಟು ಕೇಳಲೇಬೇಕಾಗುತ್ತದೆ. ಆದರೆ ಹಿಂದಿನ ಬೇಂಚು ಎನ್ನುವುದು ಒಂಥರಾ ಮನೆ ಇದ್ದಂಗೆ, ಡೆಸ್ಕಿನ ಒಳಗೆ ಪತ್ತೇದಾರಿ ಕಾದಂಬರಿಯನ್ನು ಓದಬಹುದು, … Read more

ಆ ಬೆಳದಿಂಗಳ ರಾತ್ರಿಯಲಿ ಒಂಟಿತನ: ಪದ್ಮಾ ಭಟ್

ಅದೊಂದು ಸುಂದರ ಬೆಳದಿಂಗಳ ರಾತ್ರಿ.. ತಂಪು ತಂಗಾಳಿ ಎದೆಗೆ ಸೋಕಿರಲು ಕನಸುಗಳ ಪದಗುಚ್ಚವುಕವಲೊಡೆದು ಬಂದಿತು.ನಕ್ಷತ್ರಗಳನ್ನು ಎಣಿಸುತ್ತಾ ಎಣಿಸುತ್ತ ಚಂದಿರನ ನಗೆಯನು ನೋಡುತ್ತಿದ್ದೆ. ಭಾವನೆಗಳ ಹೊಸ್ತಿಲು ನೆಲಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ. ಆಗಲೇ ಕಾಡುವಒಂಟಿತನ. ಕೆಲವೊಂದು ಸಮಯಕ್ಕೆ, ಯೋಚನೆಗಳಿಗೆ ಆಸ್ಪದ ನೀಡುವ ಒಂಟಿತನ. ಆ ಒಂಟಿತನವು ಕೆಲವು ಬಾರಿಅತ್ಯಂತ ಖುಷಿಯನ್ನುಕೊಡುತ್ತದೆ.ಕನಸುಗಳ ಲೋಕಕ್ಕೆ ಒಬ್ಬಂಟಿಯಾಗಿರುವಾಗ ಮಾತ್ರ ಹೋಗಲು ಸಾಧ್ಯ. ಕನಸೇ ಬದುಕನ್ನು ನನಸೆಂದು ಮಾಡುವೆ ಎಂದು ಕೇಳಿಕೊಳ್ಳಲು ಅವಕಾಶ ನೀಡುವುದು. ಬೇಕಾದ ಹಾಗೆ ತಿರುಗಿಸಿ … Read more

ವಾಕಿಂಗ್ ಅನ್ನೋ ಸ್ನೇಹಿತೆ: ಪದ್ಮಾ ಭಟ್

                     ಹೆಲ್ದೀ ಲೈಫ್ ಅನ್ನೋದು ಈಗ ಉಳ್ಳವರ ಅಥವಾ ಪೇಟೆಯವರ ಸ್ವತ್ತಾಗಿ ಮಾತ್ರ ಉಳಿದಿಲ್ಲ.. ಬದಲಾಗಿ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ..ನನ್ ಹೊಟ್ಟೆ ಸಣ್ಣಗಾಗಬೇಕು, ನನ್ ಟೆನ್ಶನ್ ಕಡಿಮೆಯಾಗಬೇಕು, ಬಳುಕುವ ಸೊಂಟ ನಂಗಿರಬೇಕು ಎಂಬ ಬೇಕುಗಳ ನಡುವೆಯೇ, ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ.  ರೋಗ ಬಂದ್ಮೇಲೆ ಕಡಿಮೆ ಮಾಡೋದಿಕ್ಕೆ ಸಾಹಸ ಪಡೋದಕ್ಕಿಂದ, ಬರದೇ ಇದ್ದ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕೆಂಬ … Read more

ಹೊಸ ವರುಷದಿ ಹೊಸ ಮನಸು: ಪದ್ಮಾ ಭಟ್

                   ಹೊಸ ವರುಷವು ಪ್ರತೀ ವರುಷವೂ ಬರುತ್ತದೆ.. ಕಳೆದು ಹೋದ ಹಳೆಯ ವರುಷದ ನೆನಪಿನಲಿ ನವ ವರುಷವನ್ನು ಸ್ವಾಗತಿಸುತ್ತ, ಹೊಸ ಕನಸುಗಳನು ಬಿಚ್ಚಿಡಲು ಶುರು ಮಾಡಿರುತ್ತೇವೆ.. ಪ್ರತೀ ಸಲದಂತೆ ಈ ಸಲವೂ ಏನಾದರೂ ಹೊಸದಾದ ಪ್ಲ್ಯಾನ್ ಮಾಡಬೇಕು.. ಹೊಸ ಯೋಜನೆಗಳು ಹೊಸ ವರುಷದಿಂದಲೆ ಜಾರಿಗೆ ಬರಲೆಂಬ ಕಟುವಾದ ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟಿರುತ್ತೇವೆ.. ಅದೇ ಹಳೆಯ ಕೆಟ್ಟ ಚಟಗಳನ್ನು ಬಿಡಬೇಕು ಎಂತಲೋ, ಹೊಸದಾದ ಕೆಲಸವನ್ನು ಶುರು ಮಾಡಿಕೊಳ್ಳಬೇಕೆಂತೋ, … Read more

ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್

ನಿನ್ನ ಬಗ್ಗೆ ಏನಾದರೂ ಬರೀಲೇಬೇಕು.. ಬರೀತಾನೇ ಇರ್ತೀನಿ. ತುಂಬಾತುಂಬಾ ಯೋಚಿಸ್ತೀನಿ.. ಸ್ನೇಹಿತೆಯರ ಗುಂಪಿನಲ್ಲಿ ಕನಸನ್ನು ಹಂಚಿಕೊಂಡು ಒಮ್ಮೆಲೇ ತಲೆಯನ್ನು ಕೆಳಗೆ ಮಾಡಿ ಮುಖ ಕೆಂಪಗೆ ಮಾಡಿಕೊಳ್ಳುತ್ತೀನಿ.. ಪ್ರೀತಿ ಪ್ರೇಮಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆದಾಗ ಎಷ್ಟೋ ಜನರು ಕೇಳಿದ್ದುಂಟು..ನಿಂಗೆ ಲವರ್ ಇಲ್ವಾ? ಅಂತ. .ಇಲ್ಲಾ ಎಂದು ನಿಜವನ್ನೇ ಹೇಳಿದ್ದೇನೆ.. ನೀನು ಯಾರೆಂದೇ ಗೊತ್ತಿಲ್ಲ ನೋಡು ನಂಗೆ..ಎಲ್ಲಿದ್ದೀಯೋ, ಹೇಗಿದ್ದೀಯೋ ಏನ್ ಮಾಡಾ ಇದ್ದೀಯೋ..ಒಂದೂ ಗೊತ್ತಿಲ್ಲ ನಿ॒ನ್ನ ಬಗ್ಗೆ ಸಾಸಿವೆಯಷ್ಟೂ ಗೊತ್ತಿಲ್ಲ ಮುಂದೆ ನೀನೆಂದೋ  ಬರುವೆಯಲ್ಲ..ನಿನ್ನ ಜೊತೆಗೆ ಬದುಕನ್ನು … Read more

ನೆಮ್ಮದಿಯೆಂಬುದೊಂದು ಭಾವ..: ಪದ್ಮಾ ಭಟ್

ಮಧ್ಯಾಹ್ನದ ಬಿಸಿಲಿನಲ್ಲಿ , ಛತ್ರಿ ಹಿಡಿದು ಒಂದಷ್ಟು ದೂರ ಸಾಗಿದ್ದೆ. ರಸ್ತೆ ಬದಿಯಲ್ಲಿ ಟೆಂಟು ಹಾಕಿಕೊಂಡು , ಅರ್ಧ ಹರಿದ ಬಟ್ಟೆಯಲ್ಲಿದ್ದ ಹೆಂಗಸೊಬ್ಬಳು ರೊಟ್ಟಿ ಸುಡುತ್ತಿದ್ದರೆ,  ಪಕ್ಕದಲ್ಲಿಯೇ ಇದ್ದ ಮರಳು ರಾಶಿಯಲ್ಲಿ ಅವಳ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.. ಆ ನಗುವು ಬಡತನವನ್ನೆಲ್ಲಾ ಮರೆಮಾಚಿತ್ತು. ಖುಷಿಯಿಂದಿರಲು ದುಡ್ಡು  ಬೇಕೆಂಬುದಿಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳುವಂತಿತ್ತು.. ಸ್ವಲ್ಪ ಹೊತ್ತು ಅಲ್ಲಿಯೇ  ನಿಂತು ನೋಡುತ್ತಿದ್ದವಳಿಗೆ ಎಲ್ಲಾ ಇದ್ದೂ ಖುಷಿಯಿಂದಿರಲು ಸಾಧ್ಯವಿಲ್ಲ.. ಏನೂ ಇಲ್ಲದೇ ಇರುವ ಇವರು ಅದೆಷ್ಟು ನಗುತ್ತಿದ್ದಾರಲ್ಲ ಎಂದೆನಿಸಿದ್ದು ಸುಳ್ಳಲ್ಲ.  … Read more

ಅವನ ಮೌನದಲಿ ನಾನು ಧ್ವನಿಸಬೇಕಿದೆ: ಪದ್ಮಾ ಭಟ್, ಇಡಗುಂದಿ.

ಕನಸುಗಳನೊಮ್ಮೆ ಹರವಿ ಕುಳಿತೆ.. ಸಾಲಾಗಿ ಕಂಡುಕೊಂಡೆ ಅವನ ಬಗೆಗಿನ ಕನಸುಗಳನ್ನು.. ಇಷ್ಟರ ವರೆಗೆ ಎಷ್ಟೋ ಜನರು ಕೇಳಿದಾರೆ.. ನಿಂಗೆ ಬಾಯ್ ಫ್ರೆಂಡ್ ಇಲ್ವಾ? ಅಂತ..ಇಲ್ಲಾ ಅಂತ ನಾ ಹೇಳಿದ್ದಕ್ಕೆ , ನೀನು  ವೇಸ್ಟ್ ಅಂತ ಅವಳ್ಯಾರೋ ಹೇಳಿದಾಗ ನನಗೇನು ಬೇಸರವಾಗಲಿಲ್ಲ.. ಏಕೆಂದರೆ ಅಪ್ಪ ಅಮ್ಮನ ಮುದ್ದು ಮಗಳು ನಾನು.. ಅವರು ಹೇಳಿದಂತೆ ಕೇಳುವುದು ಇಷ್ಟ.. ಬಹುಶಃ ನನ್ನ ಹುಡುಗನನ್ನು ದೇವರು ತುಂಬಾ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿರಬಹುದೇನೋ..ಅದಕ್ಕೇ ಅವನು ಇನ್ನೂ ಕನಸಾಗಿಯೇ ಉಳಿದದ್ದು.. ಊಹೂಂ ಅದೇ ಹಳೇ ಕಾಲದಂತೆ … Read more

ಅಜ್ಜಿಯ ಕತೆ: ಪದ್ಮಾ ಭಟ್, ಇಡಗುಂದಿ.

                 ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ.. ಎಂದೇ ಆರಂಭವಾಗುತ್ತಿದ್ದ ಅಜ್ಜಿಯ ಕತೆಯು ಯಾವುದೋ ನೀತಿ ಪಾಠದೊಂದಿಗೋ ಜೀವನ ಮೌಲ್ಯಗಳೊಂದಿಗೋ ಮುಗಿಯುತ್ತಿದ್ದವು. ದಿನದ ಎಲ್ಲಾ ಚಟುವಟಿಕೆಗಳಲ್ಲಿ ಕತೆಯೂ ಸಹ ಒಂದಾಗಿತ್ತು. ರಾಮಾಯಣ ಮಹಾಭಾರತದಂತಹ ಪಾತ್ರಗಳು ಮಕ್ಕಳ ಪಾಲಿನ ಹೀರೋಗಳಾಗಿರುತ್ತಿದ್ದವು. ಅಜ್ಜಿ ಅಜ್ಜಿ ಕತೆ ಹೇಳಜ್ಜಿ ಎಂದ ಕೂಡಲೇ ಒಂದು ಚೂರೂ ಬೇಸರ ಮಾಡಿಕೊಳ್ಳದೆ ಹೇಳುತ್ತಿದ್ದಳು. ಇಡೀ ದಿನವೂ ಯಾವುದೋ ಕೆಲಸಗಳಿಂದಲೋ ಅಥವಾ ಇನ್ಯಾವುದರಿಂದಲೋ ಬ್ಯೂಸಿಯಾಗಿರುತ್ತಿದ್ದ ಅಜ್ಜಿಗೂ ಮೊಮ್ಮಕ್ಕಳಿಗೆ ಕತೆ ಹೇಳುವುದೆಂದರೆ … Read more

ಈ ಬಂಧಗಳು..ಸಂಬಂಧಗಳು..: ಪದ್ಮಾ ಭಟ್, ಇಡಗುಂದಿ.

                  ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತೇವೆ..ಆದರೆ ಈ ಕಾಲ ಅನ್ನೋದು … Read more

ಅವನ ಪ್ರೀತಿಯಲ್ಲಿ ಅವಳ ಚಿತ್ರವಿದೆ: ಪದ್ಮಾ ಭಟ್, ಇಡಗುಂದಿ

                       ಅವನು ಅವಳಿಗಾಗಿ ಕಾಯುತ್ತ ಕುಳಿತಿದ್ದನು.. ಜೋರಾಗಿ ಮಳೆ ಬರಲು ಶುರುವಾದಾಗಲೇ ಅವನ ಕನಸುಗಳೂ ಮಳೆಯಲ್ಲಿ ತೋಯುತ್ತಿದ್ದವು.. ಇನ್ನೂ ಆ ಹುಡುಗಿ ಬಂದಿಲ್ವಲ್ಲಾ.. ಎನ್ನುತ್ತ ದಾರಿ ನೋಡುತ್ತಿದ್ದವನಿಗೆ ದೂರದಿಂದಲೇ ಅವಳ ಬರುವಿಕೆ ಕಾಣಲು ಪ್ರಾರಂಭವಾಯಿತು.. ಯಾಕೆ ಇಷ್ಟು ಹೊತ್ತು ಕಾದೆ ಅವಳಿಗೆ ಎನ್ನುವುದಕ್ಕಿಂತ, ಅವಳ ಬರುವಿಕೆಯಲ್ಲಿನ ಕಾಯುವಿಕೆಯಲ್ಲಿಯೂ ಅವನು ಖುಷಿಪಡುತ್ತಿದ್ದ.. ಜೀವನವೆಂದರೆ ನಮ್ಮ ಸಂತೋಷಕ್ಕಾಗಿ ಮಾತ್ರ ಬದುಕುವುದಲ್ಲ.. ನಮ್ಮಿಂದ ಸಂತೋಷವಾಗುವವರಿಗಾಗಿ ಬದುಕುವುದು.. ಎಂದು … Read more

ಅಮ್ಮನೆಂಬ ಅನುಬಂಧದ ಸುತ್ತ: ಪದ್ಮಾ ಭಟ್

          ಮೊನ್ನೆ ಮೊಬೈಲ್ ಗೆ ಬಂದ ಮೆಸೇಜು ಒಂದುಕ್ಷಣ ಮೂಕಳನ್ನಾಗಿ ಮಾಡಿಸಿತ್ತು ಅದೇನೆಂದರೆ ೫ ನೇ ಕ್ಲಾಸಿನ ಪರೀಕ್ಷೆಯಲ್ಲಿ ಅಮ್ಮನ ಬಗ್ಗೆ ಬರೆಯಿರಿ ಎಂಬ ಒಂದು ಪ್ರಬಂಧವಿತ್ತಂತೆ.. ಆ ಪುಟ್ಟ ಹುಡುಗನೊಬ್ಬ ಬರೆದಿದ್ದೇನೆಂದರೆ ನನ್ನ ಅಮ್ಮನ ಬಗ್ಗೆ ಬರೆಯಲು ಇಂಗ್ಲೀಷಿನಲ್ಲಿರುವ ಯಾವ ಅಕ್ಷರವೂ ಸಮನಾಗಲಾರದು..ಯಾವುದೇ ಭಾಷೆಯ ಅಕ್ಷರಗಳೂ ಸಾಕಾಗದು ..ಸಮಯದ ಮಿತಿಯೂ ಇಲ್ಲ ಎಂಬುದು.. ಹೌದಲ್ವಾ? ಅಮ್ಮನೆಂದರೆ ಸಾವಿರ ಜನರ ನಡುವೆಯಿದ್ದರೂ ಆತ್ಮೀಯವಾಗಿ ಕಾಣುವ ಜೀವಿ. ಹುಟ್ಟುವ ಮೊದಲೇ ನಮ್ಮ ಬಗ್ಗೆ … Read more

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಪದ್ಮಾ ಭಟ್, ಇಡಗುಂದಿ

                    ನಾನು ಬಡವಿ ಆತ ಬಡವ  ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು.. ದ.ರಾ ಬೇಂದ್ರೆಯವರ ಈ ಹಾಡಿನ ಸಾಲು ಪದೇ ಪದೇ ನೆನಪಾಗತೊಡಗಿತ್ತು.. ಗೆಳೆಯಾ ಬಹುಶಃ ಪ್ರೀತಿ ಎಂಬ ಪದಕ್ಕೆ ಎಷ್ಟು ಆಪ್ತವಾದ ಸಾಲುಗಳು ಇವು ಅಲ್ವಾ? ಬದುಕಿನಲ್ಲಿ ಎಲ್ಲವೂ ಇದ್ದು ಪ್ರೀತಿಯೇ ಇಲ್ಲದಿದ್ದರೆ ಏನು ಚಂದ ಹೇಳು, ಆದರೆ ಬಡತನದಲ್ಲಿಯೂ ಪ್ರೀತಿಯಿದ್ದರೆ, ಅದನ್ನೇ ಎಲ್ಲಾದಕ್ಕೂ ಬಳಸಿಕೊಳ್ಳಬಹುದು..ಪ್ರೀತಿಯಿಂದ ಹೊಟ್ಟೆ … Read more

ನೆನಪುಗಳೆಂಬ ಬುತ್ತಿಗಳು: ಪದ್ಮಾ ಭಟ್, ಇಡಗುಂದಿ.

                          ಮನಸಿನ ಪುಟವ ತಿರುವಿ ಹಾಕಿದಾಗ ಒಂದಷ್ಟು ನೆನಪಿನ ಬುತ್ತಿಗಳು.. ದುಃಖವಾದಾಗ ಅಂದು ಸಂತಸ ಪಡುತ್ತಿದ್ದ ನೆನಪುಗಳು..ಎಲ್ಲವನ್ನೂ ಮರೆಯುತ್ತೇನೆ ಕಹಿದಿನಗಳನ್ನು ಎಂದುಕೊಳ್ಳುತ್ತಲೇ, ಮನಸ್ಸಿನ ಇನ್ಯಾವುದೋ ಮೂಲೆಯಲ್ಲಿ  ಅದರ ತುಣುಕು ಇರದೇ ಇರುವುದಿಲ್ಲ..ನೆನಪುಗಳೇ ಹಾಗೆ.. ಒಮ್ಮೆಮ್ಮೆ ಬದುಕನ್ನು ಅರಳಿಸುತ್ತೆ. ಮತ್ತೊಮ್ಮೆ ದುಃಖದ ಘಟನೆ ನೆನಪಾಗಿ ಕಣ್ಣಂಚಿನಲ್ಲಿ ನೀರು ಬರುತ್ತದೆ.. ಮನೆಯ ಪಕ್ಕದ ರೋಡಿನಲ್ಲಿ ಜೋಳ ಮಾರುವ ಅಜ್ಜನಿಂದ ಹಿಡಿದು, ಬದುಕನ್ನು ಸಿಹಿಯಾಗಿಸಿದ … Read more

ಐ.ಲವ್ ಯೂ ಅಪ್ಪ: ಪದ್ಮಾ ಭಟ್, ಇಡಗುಂದಿ.

ನೀನ್ಯಾಕೆ ನನ್ನನ್ನು ಇಷ್ಟು ಪ್ರೀತಿಸ್ತೀಯಾ.. ನೀ ನನಗಾಗಿ ಮಾಡೋ ಒಂದೊಂದು ಪ್ರೀತಿಗೂ, ತ್ಯಾಗಕ್ಕೂ, ನಿಸ್ವಾರ್ಥದ ಮನಸಿಗೊಮ್ಮೆ ಹೀಗೆ ಕೇಳಿ ಬಿಡೋಣವೆಂದೆನಿಸುತ್ತದೆ.. ನನ್ನಗೊಂದಲ ಮನಸ್ಸಿಗೆ ನೀನು ಸಂತೈಸಿದ ದಿನಗಳು ಅದೆಷ್ಟೋ.. ನನ್ನ ಖುಷಿಯಲ್ಲಿಯೇ ನಿನ್ನ ಖುಷಿಯನ್ನು ಕಂಡ ಸಮಯಕ್ಕಂತೂ ಬಹುಶಃ ಲೆಕ್ಕವೇ ಇರಲಿಕ್ಕಿಲ್ಲ..ನಾ ಸೋತಾಗ ನನ್ನ ಕಣ್ಣೀರಲ್ಲಿಯೇ, ಹೊಸ ಭರವಸೆಯನ್ನು ಹುಟ್ಟಿಸಿದವನು ನೀನು..ಯಾವುದೇ ಒಳ್ಳೆಯ ಕೆಲಸ ಮಾಡಲಿ ಅದಕ್ಕೆಲ್ಲ ಗಟ್ಟಿಯಾದ ಸಪೋರ್ಟ್‌ ಕೊಡುತ್ತಾ ಬಂದಿದ್ದೀಯ..ಮಗಳೇ ಚನ್ನಾಗಿ ಓದು ಎಂಬ ಮಾತನ್ನು ನನ್ನ ಕಿವಿಯಲ್ಲಿ ಎಂದೂ ಗುನುಗುನಿಸುತ್ತಿರುವಷ್ಟು ಬಾರಿ ನೀ … Read more

ಶರಧಿಯ ದಡದಲ್ಲಿ ಪ್ರೀತಿಯ ಕನಸು:ಪದ್ಮಾ ಭಟ್ ಇಡಗುಂದಿ

ಮುಸ್ಸಂಜೆಯ ಸೂರ್ಯನ ಅಂತಿಮ ಹೊತ್ತು, ಕೆಂಪು ಕಿರಣ ಮೊಗದಲ್ಲಿ ಬೀಳುತ್ತಿರಲು, ಬೇಡವೆಂದರೂ ಕಂಗಳು ಮುಚ್ಚಿದವು. ಅದೇ ತಾಮುಂದು ತಾಮುಂದೆ ಎಂದು ಓಡಿ ಬರುತ್ತಿರುವ ಅಲೆಗಳು. ಸಮುದ್ರದಂಡೆಯ ಮೇಲೊಂದು ಪುಟ್ಟ ಸ್ವರ್ಗಲೋಕ.. ಹಕ್ಕಿಗಳ ಇಂಚರಕ್ಕೆ ಧ್ವನಿಯಾಗುವ ಹೃದಯಗೀತೆ. ಕನಸುಗಳನೆಲ್ಲ ಬಿಚ್ಚಿ ಹರವಿ ಹಾಕಿಕೊಂಡ ಕಂಗಳಿಗೆ ನಕ್ಷತ್ರದಂತಹ ಹೊಳಪು. ಯೌವನದ ಬೆಚ್ಚಗಿನ ಕನಸುಗಳು. ತಂಪು ತಂಗಾಳಿ ಮಿಶ್ರಿತ ಆ ಇಳಿಸಂಜೆಯಲ್ಲಿ ತುಸು ಬೆಳಕು ಕಂಡಂತೆ ಮತ್ತಷ್ಟು ಸೊಗಸು. ಸಿಹಿತನದಲ್ಲಿ ಬೊಂಬಾಯಿ ಮಿಠಾಯಿ ಮಾರುವವನ ಗಾಡಿಯ ಗಂಟೆಯ ಸದ್ದು… ಇತ್ತ ಇನ್ನೊಂದು … Read more

ನಂಗೊಂದಿಷ್ಟು ಸಮಯ ಬೇಕೇ ಬೇಕು: ಪದ್ಮಾ ಭಟ್

          ಪ್ರೀತಿಯ ದಡ್ಡ  ಒಂದೊಂದು ಬಾರಿ ನಿನ್ನ ಬಗ್ಗೆ ಯೋಚಿಸುತ್ತಿರುವಾಗ ನಾನ್ಯಾರೆಂಬುದನ್ನೇ ಮರೆತುಬಿಡುತ್ತೇನೆ..ನನ್ನ ಹೃದಯದ ಗೂಡಿನಲಿ ಆವರಿಸಿರುವ ಪ್ರೀತಿಯು ನೀನು..ನನ್ನ ಬಗೆಗೆ ಯೋಚಿಸುವುದನ್ನೇ ಮರೆತು ಬಿಟ್ಟಿರುವ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿರಬಹುದು ಎಂದು ನಿನಗೂ ಗೊತ್ತಲ್ವಾ?ಅದೆಷ್ಟೋ ಸಾವಿರ ಕನಸು ನಂಗೆ. ನಿನ್ನ ಬಗೆಗೆ.. ಪ್ರತೀ ಬಾರಿಯೂ ನಿನ್ನ ಜೊತೆ ಮಾತನಾಡುವಾಗಲೂ ಇನ್ನೂ ಏನೋ ಹೇಳಬೇಕು. ಕೇಳಬೇಕು. ಭಾವನೆಯ ಹಂಚಿಕೊಳ್ಳಬೇಕೆನ್ನಿಸುವುದುಂಟು. ಹಠಮಾರಿ ಹುಡುಗಿ ನಾನು.. ನನ್ನೀ ಜೀವನದ ಪ್ರತೀ ಕ್ಷಣವೂ ನಿನ್ನನ್ನೇ ಪ್ರೀತಿಸುತ್ತಾ, … Read more

ಬಲಿಯಾಗದಿರಲಿ ಯುವಜನತೆಯ ಮನಸು..ಕನಸು: ಪದ್ಮಾ ಭಟ್

ಅವನು ತುಂಬಾ ಬುದ್ದಿವಂತನಾಗಿದ್ದರೂ ಕೆಟ್ಟ ಚಟಗಳ ಸಹವಾಸದಿಂದ ಬದುಕನ್ನೇ ಸ್ಮಶಾನದತ್ತ ಒಯ್ದುಬಿಟ್ಟ..ಊರಿನಲ್ಲಿರುವ ಅಪ್ಪಅಮ್ಮ ತನ್ನ ಮಗ ಚನ್ನಾಗಿ ಓದುತ್ತಿದ್ದಾನೆಂದು ಹಾಸ್ಟೇಲಿನಲ್ಲಿಟ್ಟರೆ ಡ್ರಗ್ಸ್‌ ಜಾಲಕ್ಕೆ ಬದುಕನ್ನು ಬಲಿಯಾಗಿಸಿಕೊಂಡ..ಇದು ಉದಾಹರಣೆಯಷ್ಟೇ.. ಇಂತಹ ಹಲವಾರು ವಿಚಾರಗಳು ದೈನಂದಿನ ಬದುಕಿನಲ್ಲಿ ನಡೆಯುತ್ತಲೇ ಇರುತ್ತದೆ..ಎಷ್ಟು ಬುದ್ದಿವಂತನಾದರೇನು? ಗುಣವಿದ್ದರೇನು..? ಬದುಕು ಯಾರಿಗೂ ಯಾವತ್ತೂ ಪದೇ ಪದೇ ಅವಕಾಶಗಳನ್ನು ಕೊಡುವುದಿಲ್ಲ..ಯಾರ ಜೊತೆಗೂ ಅವರಿಗೆ ಬೇಕಾದ ಹಾಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೂ ಇಲ್ಲವಲ್ಲ. ಇಂದಿನ ಯುವಜನತೆಯು ಹಲವಾರು ಕ್ಷೇತ್ರಗಳಲ್ಲಿ ಬುದ್ದಿವಂತರೇ ಆಗಿದ್ದರೂ ಇಂತಹ ಕೆಟ್ಟ ಚಟಗಳು, ಇನ್ನೊಂದು ಕಡೆಯಿಂದ ಅವನತಿಯ … Read more

ಬಾಲ್ಯದ ನೆನಪುಗಳನ್ನು ನಿನ್ನ ಮುಂದೆ ಹರವಬೇಕು: ಪದ್ಮಾ ಭಟ್

ಒಂದನೇ ಕ್ಲಾಸಿನಲ್ಲಿ ಮೊದಲ ಬೆಂಚಿನಲ್ಲಿ ಕುಳಿತು ನನ್ನ ಬಳಪವೇ ಉದ್ದವಿದೆ ಎಂದು ಹೇಳುತ್ತಿದ್ದವಳು ನೀನು. ಅಮ್ಮ ಅಪ್ಪನಿಗೆ ಗೊತ್ತಿಲ್ಲದಂತೆಯೇ ಹುಣಸೆ ಹಣ್ಣು ಕದ್ದು, ಕಿಸಿೆಯ ತುಂಬೆಲ್ಲಾ ಹರಡಿಕೊಂಡು ಬರುತ್ತಿದ್ದವಳು ನೀನು. ನಿನಗೆ ಆ ದಿನಗಳು ನೆನಪಿದೆಯೋ ಇಲ್ಲವೋ ನಾಕಾಣೆ. ಆದರೆ ನನ್ನ ಮನದಲ್ಲಿ ಆ ನೆನಪುಗಳು ಇನ್ನೂ ಬೆಚ್ಚಗೆ ಕುಳಿತಿವೆ.  ಮಳೆಗಾಲದಲ್ಲಿ ಜೋರು ಮಳೆ ಬಂದು ಶಾಲೆಯೇ ಬಿದ್ದು ಹೋಗಲಿ ಎಂದು ಕ್ಲಾಸಿನಲ್ಲೆಲ್ಲಾ ಶಾಪ ಹಾಕುತ್ತಿದ್ದ ಕ್ಷಣಗಳನ್ನು ನೆನದರೆ ನಗು ಉಕ್ಕುಕ್ಕಿ ಬರುತ್ತದೆ. ನನ್ನ ಅಕ್ಷರ ದುಂಡಗಿದೆ, … Read more