ಗಣೇಶ ಚತುರ್ಥಿ ಮತ್ತು ಪಟಾಕಿ ಕಲಿಸಿದ ಪಾಠ: ಅನಿರುದ್ಧ ಕುಲಕರ್ಣಿ

ಪಟಾಕೀಯ ನೆನೆಪು ಅ೦ದು ಶನಿವಾರ, ನಾನು ಅಕ್ಕ ಶಾಲೆಗೆ ಹೊರಡಲು ಸಿದ್ದರಾಗುತ್ತಿದ್ದೆವು, ಅಷ್ಟರಲ್ಲೆ ಅಜ್ಜ ನನಗೆ ಹಾಗೂ ಅಕ್ಕನಿಗೆ ಕರೆದು ಇವತ್ತು ನಾನು ಊರಿಗೆ ಹೋಗಿ ಬರುತ್ತೇನೆ ಎ೦ದು ತಿಳಿಸಿ, ಅಕ್ಕನಿಗೆ ನನಗೆ ತಲಾ ೫೦ರೂ ಕೊಟ್ಟರು, ನ೦ತರ ನಾವಿಬ್ಬರು ಅಜ್ಜನಿಗೆ ನಮಸ್ಕರಿಸಿದೆವು, ನಾನು ಅಜ್ಜನಿಗೆ ಕೆಳಿದೆ ನೀನು ಈಗ್ಯಾಕ ಊರಿಗೆ ಹೊ೦ಟಿ, ಇನ್ನ ನಾಲ್ಕೇ ದಿನದಾಗ ಗಣೇಶ ಚತುರ್ಥಿ ಅದ, ಅದಕ್ಕೆ ಅಜ್ಜ ಅ೦ದ್ರು ನೋಡು ಹಬ್ಬಕ್ಕ ನಿನಗ, ಅಕ್ಕಗ ಹೊಸ ಡ್ರೆಸ್ ಬೇಕ ಹೌದಿಲ್ಲೋ, … Read more

ದಾರಿ ತೋರುವ ದುರಂತನಾಯಕ: ಚೈತ್ರಾ ಎಸ್.ಪಿ.

ಅವನೆಂದರೆ ಥಟ್ಟನೆ ನೆನಪಾಗುವುದು ಹೆಸರು ದುರಂತನಾಯಕ. ಮಹಾಕಾವ್ಯದ ದುರಂತನಾಯಕ. ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡಿದ ನತದೃಷ್ಟ.ಅವಮಾನಗಳಲ್ಲಿ ಬೆಂದು ಮಿಂದೆದ್ದವ. ತಿರಸ್ಕಾರಗಳನ್ನೆ ಕಂಡವ. ಹುಟ್ಟಿದಾಗ ತಾಯಿಗೆ ಬೇಡವಾದ. ಗುರುಕುಲದಲ್ಲಿ ಗುರುಗಳಿಗೆ ಬೇಡವಾದ.ಸ್ವಯಂವರದಲ್ಲಿ ಮೆಚ್ಚಿದ ಹುಡುಗಿಗೆ ಬೇಡವಾದ. ಹೇಗೆ ಬದುಕಿರಬಹುದು ತನ್ನ ಬಾಳನ್ನು ? ಬೇಸರದಲ್ಲೇ ? ಖಿನ್ನತೆಯಲ್ಲೇ ? ಕಂಡಿರದ ತಂದೆ-ತಾಯಿಗಾಗಿ ಹಂಬಲಿಸಿದನೇ ? ಮಾಡಿದ ತಪ್ಪಿಗಾಗಿ ಪರಿತಪಿಸಿದನೇ ? ಬೆರಳು ತೋರಿಸಿದರೆಂದು ಮರುಗಿದನೇ ? ಜನ್ಮದತ್ತವಾಗಿ ಐಶ್ವರ್ಯ, ಕ್ಷಾತ್ರಪಂಥದ ಹೆಗ್ಗುರುತಾದ ಎದೆಗವಚಗಳನ್ನು ಹೊತ್ತು ಬಂದರೂ ಸೂತಪುತ್ರನೆಂಬ ಹಣೆಪಟ್ಟಿಯಿಂದ ಕಂಗೆಟ್ಟನೆ … Read more

ಉಪವಾಸ ನಿರತ ಕಾಲ ರಂಜಾನ್: ಬಂದೇಸಾಬ. ಮೇಗೇರಿ ರಾಮಾಪುರ

ರಂಜಾನ್ ಮುಸ್ಲಿಮರ ಪಾಲಿನ ವಸಂತ ಮಾಸವಾಗಿದೆ. ರಂಜಾನ್ ಮಾಸವು ಪುಣ್ಯಗಳನ್ನು ಬಾಚಿಕೊಳ್ಳುವ ತಿಂಗಳಾಗಿದೆ. ಜಗತ್ತಿನ ಎಲ್ಲ ಮುಸ್ಲಿಮರು ಭಯ, ಭಕ್ತಿಯಿಂದ ಆಚರಿಸುವ ಹಬ್ಬ ಇದಾಗಿದೆ. ಈ ತಿಂಗಳಲ್ಲಿ ಮುಸ್ಲಿಮ್ ಬಾಂಧವರೆಲ್ಲ ಪುಳಕಿತಗೊಳ್ಳುತ್ತಾರೆ. ಏಕೆಂದರೆ ಇದು ಪವಿತ್ರ ಕುರ್‍ಆನ್ ಅವತರಿಸಿದ ಮಾಸ. ಒಳ್ಳೆಯ ಕೆಲಸಗಳನ್ನು ಮಾಡುತ್ತ ನಮಾಜ್, ದಾನ-ಧರ್ಮ(ಜಕಾತ್) ದಂತಹ ಪುಣ್ಯ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಮಹಮ್ಮದ್(ಸ) ಪೈಗಂಬರರು ಈ ಮಾಸದಲ್ಲಿ ಬಲು ಉದಾರಿಗಳಾಗಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಹಗಲು ರಾತ್ರಿಯೆಲ್ಲಾ ಸೃಷ್ಠಿಕರ್ತನ ಆರಾಧನೆಯಲ್ಲಿ … Read more

ಕಂಕಣ ನಾಡು ನುಡಿಗಾಗಿ: ಯದುನಂದನ್ ಗೌಡ ಎ.ಟಿ.

     ಹೆಸರೇ ಸೂಚಿಸುವಂತೆ "ಕಂಕಣ" ಎನ್ನುವುದು ಕನ್ನಡಿಗರಿಂದ, ಕನ್ನಡಕ್ಕಾಗಿ ಜನ್ಮ ತಾಳಿರುವ ಒಂದು ಕನ್ನಡಪರ ಬಳಗ. ಖ್ಯಾತ ಚಲನಚಿತ್ರ ಸಾಹಿತಿ “ಕವಿರಾಜ್” ಈ ತಂಡದ ಸಾರಥಿಯಾಗಿದ್ದು ಸುಮಾರು 150 ಸ್ವಯಂ ಪ್ರೇರಿತ ಕನ್ನಡಿಗ ಸದ್ಯಸರು ಈ ಬಳಗದಲ್ಲಿದ್ದಾರೆ.  ಇತ್ತೀಚೆಗೆ ಕರ್ನಾಟಕದಲ್ಲಿ, ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಶಾಪಿಂಗ್ ಮಾಲ್ ಗಳು, ಅಂಗಡಿಗಳು, ಹೋಟೆಲ್ ಗಳು, ಬ್ಯಾಂಕ್ ಗಳು, ಬಸ್ ನಿಲ್ದಾಣಗಳು ಮುಂತಾದ ಸ್ಥಳಗಳಲ್ಲಿ ಕನ್ಮಡಿಗರೇ … Read more

ಮಾಸದ ಸೋಣೆ – ಶ್ರಾವಣದ ಸೋಣೆ ಆರತಿ: ಬೆಳ್ಳಾಲ ಗೋಪಿನಾಥ ರಾವ್

ಆಶಾಢ ಕಳೆದರೆ ಬರುವುದೇ ಶ್ರಾವಣ ಮಾಸ. ಆಗಾಗ್ಗೆ ಹನಿ ಹನಿದು ಒಮ್ಮೊಮ್ಮೆ ಬೀಡು ಭಿರುಸಾಗಿ ಬೀಳೋ ಮಳೆ ಕೂಡಾ ವಾತಾವರಣವನ್ನು ಆಮೋದ ಕಣವನ್ನಾಗಿ ಮಾಡಿ ಇಡೀ ಭೂರಮೆಯೇ ಹಸಿರುಟ್ಟು ಕಂಗೊಳಿಸೊ ಕಾಲವನ್ನಾಗಿ ಪರಿವರ್ತಿಸಿ ಬಿಡುತ್ತೆ, ಅದರ ಜತೆ ಸಂಘ ಜೀವಿ ಮಾನವನಿಗೂ ತನ್ನ ಸಹೃದಯತೆಯ ಸಂಚಲನೆಯ ಪಾಠ ಹೇಳೊಕೊಡೊದರಲ್ಲಿರುವ ವಸುಂಧರೆ…ಪ್ರಕೃತಿಯ ಮರ ಗಿಡ ಬಳ್ಳಿಗಳು ನಲಿ ನಲಿದು ಪ್ರತಿ ಕ್ಷಣವನ್ನು ಸವಿಯುತ್ತಾ ನಮ್ಮೆಲ್ಲರನ್ನೂ ಇವರೆಲ್ಲರ ಋಣಿಯನ್ನಾಗಿಸಿ ಬಿಡುತ್ತವೆ. ನೋಡಿದಷ್ಟೂ ಉದ್ದಕ್ಕೆ ಕಣ್ಮನ ತಣಿಸುವ ಹಸಿರು ಉಲ್ಲಾಸ ನೀಡುತ್ತದೆ. … Read more

ಕಾಖಂಡಕಿಯ ವಿಶಿಷ್ಟ ಕಾರಹುಣ್ಣಿಮೆ: ನಾರಾಯಣ ಬಾಬಾನಗರ

ದಿನಾಂಕ 8-6-2015 ಸೋಮವಾರದಂದು ಕಾಖಂಡಕಿಯಲ್ಲಿ ಕಾರಹುಣ್ಣಿಮೆಯ ಸಂಭ್ರಮ. ತನ್ನಿಮಿತ್ಯ ಈ ಲೇಖನ. ಕರಿ ಆಡಿಸು…ಶೌರ್ಯ ಪ್ರದರ್ಶಿಸು…!! ಹೂಂಕರಿಸುವ ಎತ್ತು, ಮುಂಗಾಲುಗಳಿಂದ ಮಣ್ಣನ್ನು ಹಿಂದಕ್ಕೆ ಚಿಮ್ಮುತ್ತಾ ಎದುರಿಗೆ ನಿಂತವನನ್ನು ಕೆಂಗಣ್ಣಿನಿಂದ ನೋಡುತ್ತ ನಿಂತಿದೆ. ಎತ್ತಿನ ಮುಂದೆ ನಿಂತವನು ‘ಬಾ ಇರಿ. . ! ನೋಡೋಣ’ ಎನ್ನುವಂತೆ ಸವಾಲೆಸೆದು ಕಾದಿದ್ದಾನೆ. ಸುತ್ತಲೂ ಸಾವಿರಾರು ಜನ ನೋಡುತ್ತ ಸಾಕ್ಷಿಯಾಗಿದ್ದಾರೆ.  ಇದು  ಕಾಖಂಡಕಿಯ ಗ್ರಾಮದಲ್ಲಿ ನಡೆಯುವ ವಿಶಿಷ್ಟ ಕಾರಹುಣ್ಣಿಮೆಯ ದೃಷ್ಯ. ರಾಜ್ಯಾದ್ಯಂತ ಕಾರಹುಣ್ಣಿಮೆಯ ಸಂಭ್ರಮ ನಡೆದರೆ, ಅವತ್ತು ಈ ಊರಲ್ಲಿ ಕಾರಹುಣ್ಣಿಮೆಯ ಆಚರಣೆ … Read more

ಬಿಡುಗಡೆಗೆ ಹಂಬಲಿಸುವ ಮಹಿಳಾ ಧ್ವನಿಯ ’ದ್ಯೂತಭಾರತ’: ಹಿಪ್ಪರಗಿ ಸಿದ್ಧರಾಮ

ಮಹಾಭಾರತ ಕಥನ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವಂಥದ್ದೇ. ಆಯಾ ಕಾಲಘಟ್ಟದಲ್ಲಿ ಸೃಜನಶೀಲತೆಯ ವಿವಿಧ ಆಯಾಮಗಳೊಂದಿಗೆ ವಿವಿಧ ಪ್ರಕಾರಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ಈ ಮಹಾಭಾರತದಲ್ಲಿ ಹೆಚ್ಚಾಗಿ ಮೋಸ, ಕುತಂತ್ರ, ಶೋಷಣೆ, ಅಪಮಾನ, ಹಾದರ, ಬಹುಪತಿತ್ವ, ಬಹುಪುತ್ರತ್ವ, ಮಂತ್ರ ಜಪಿಸಿದ ಕ್ಷಣ ಮಾತ್ರದಲ್ಲಿ ಜನಿಸುವ ವೀರರು, ಹೀನ ರಾಜಕಾರಣ, ಸೇಡು, ಕಿಡಗೇಡಿತನ, ಹೊಣೆಗೇಡಿತನ, ರಸಿಕತನ, ಹುಂಬತನ, ಸ್ನೇಹ ಹೀಗೆ ಹಲವಾರು ಸಂಗತಿಗಳು ವಿಜೃಂಭಿಸಿರುವುದು ಸುಳ್ಳೇನಲ್ಲ. ಇಂತಹ ಮಹಾಭಾರತದಲ್ಲಿ ಶಕುನಿ ಮಾಮಾನ ಕುತಂತ್ರದಿಂದ ಪಗಡೆಯಾಟದ ಜೂಜಿನಲ್ಲಿ ಸೋಲುಂಡ ಪಾಂಡವರು ಕರಾರಿನಂತೆ ವನವಾಸ-ಅಜ್ಞಾತವಾಸ ಅನುಭವಿಸುತ್ತಾರೆ. … Read more

ಗುರುರಾಯರು ತಪವ ಗೈದ ಪಂಚಮುಖಿ ಸುಕ್ಷೇತ್ರ: ಹೊರಾ. ಪರಮೇಶ್ ಹೊಡೇನೂರು

ಪವಿತ್ರ ಗಂಗೆ ತುಂಗಭದ್ರಾ ನದಿ   ತೀರದಲ್ಲಿ ಶ್ರೀ ಗುರು ಸಾರ್ವಭೌಮರು ಮಂತ್ರಾಲಯದಲ್ಲಿ ಐಕ್ಯಗೊಂಡ ನಂತರ ಆ ಪುಣ್ಯ ಬೃಂದಾವನ ನಾಡಿನಾದ್ಯಂತ ದೈವಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿ ಬೆಳೆದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಗೆ ಒಳಪಡುವ ಗಾಣಧಾಳ ಗ್ರಾಮದ ಹೊರ ಭಾಗದಲ್ಲಿ ಅದೇ ಗುರುರಾಯರು 16ನೇ ಶತಮಾನದಲ್ಲಿ ಸುಮಾರು 12 ವರ್ಷಗಳ ಸುದೀರ್ಘ ತಪಸ್ಸು ಮಾಡಿ ಪಂಚಮುಖಿ ಆಂಜನೇಯ ಸ್ವಾಮಿಗಳ ದರ್ಶನ ಭಾಗ್ಯ ಪಡೆದ ಪವಿತ್ರ ಭೂಮಿಯು ಇಂದು 'ಪಂಚಮುಖಿ ಪ್ರಾಣದೇವರ ಗುಡಿ' ಎಂದೇ ಖ್ಯಾತಿ … Read more

ನಾಟಿಯ ಪದಗಳು: ಹನಿಯೂರು ಚಂದ್ರೇಗೌಡ

ಜನಪದರ ಕಾಯಕಶಕ್ತಿಯೇ ಜಾನಪದ ಸಾಹಿತ್ಯಸೃಷ್ಟಿಗೆ ಮೂಲಕಾರಣವಾದುದು. ಕಾಯಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕಾರಣದಿಂದಲೇ ಜಾನಪದ ಸಾಹಿತ್ಯ ಹೆಚ್ಚೆಚ್ಚು ಬೆಳೆಯುತ್ತಾ ಬಂದು, ಅದೀಗ ಸಂಪೂರ್ಣವಾಗಿ ಏಕಕಾಲದಲ್ಲಿ ಯಾರೊಬ್ಬನು ಮುಟ್ಟಲಾಗದ ಬೃಹದ್ ರಾಶಿಯಾಗಿದೆ. ಇಂತಹ ಜಾನಪದ ರಾಶಿಯಲ್ಲಿ ಕೃಷಿಹಾಡು, ಹಸೆಹಾಡು, ಸೋಬಾನೆಹಾಡು, ದೇವರಮೇಲಿನಹಾಡು, ಮಳೆಹಾಡು, ಕಳೆಕೀಳುವಾಗಿನಹಾಡು, ಮಗುಹುಟ್ಟಿದಹಾಡು, ಯಾರೋ ಸತ್ತರೆಹಾಡು, ಹಬ್ಬಕ್ಕೊಂದುಹಾಡು, ಹರುಷಕ್ಕೊಂದುಹಾಡು, ದುಃಖಕ್ಕೊಂದುಹಾಡು, ಸರಸಕ್ಕೊಂದುಹಾಡು, ವಿರಸಕ್ಕೊಂದುಹಾಡು, ಕೀಟಲೆಗೊಂದುಹಾಡು, ಕಿಚಾಯಿಸಲೊಂದುಹಾಡು, ಚುಡಾಯಿಸಲೊಂದುಹಾಡು, ರೇಗಿಸಲೊಂದುಹಾಡು, ಪ್ರಸ್ತಕ್ಕೊಂದುಹಾಡು, ಹೆಣ್ಣು,ಗಂಡನ ಮನೆಗೆ ಹೋಗುವಾಗೊಂದುಹಾಡು, ತವರುಮನೆಗೆ ಬರುವಾಗೊಂದುಹಾಡು, ಮಡಿಲುತುಂಬುವಾಗೊಂದುಹಾಡು, ಬಾಣಂತಿಗೊಂದುಹಾಡು, ಗರ್ಭಿಣಿಗೊಂದುಹಾಡು, ಮದುವಣಗಿತ್ತಿಯನ್ನು ಕರೆದೊಯ್ಯುವಾಗೊಂದುಹಾಡು, ಮನೆತುಂಬಿಸಿಕೊಳ್ಳವಾಗೊಂದುಹಾಡು, … Read more

ಕರುನಾಡಿನ ದಾಸಶ್ರೇಷ್ಟ ಕನಕಕದಾಸರು: ಹಿಪ್ಪರಗಿ ಸಿದ್ಧರಾಮ

ಕರುನಾಡಿನ ದಾಸ ಪರಂಪರೆಯಲ್ಲಿ ಭಕ್ತ ಕನಕದಾಸರು (1508-1606) ವಿಶಿಷ್ಟ ವ್ಯಕ್ತಿತ್ವದ ಸಮಾಜ ಸುಧಾರಕರು. ದಾಸ ಸಾಹಿತ್ಯದ ದಿಗ್ಗಜ ದಾಸಶ್ರೇಷ್ಟ ಕನಕದಾಸರ ಕರ್ಮಭೂಮಿ ಕಾಗಿನೆಲೆಯಾಗಿದ್ದರೂ ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಇಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ಇತ್ತೀಚಿನ ಉತ್ಖನನ ಮತ್ತು ದಾಖಲೆಗಳು ಖಚಿತಪಡಿಸಿವೆ. ತಂದೆ ಬೀರಪ್ಪ ಡಣ್ಣಾಯಕರ ಅಕಾಲ ಮರಣದಿಂದ ಕಿರಿಯ ವಯಸ್ಸಿನಲ್ಲಿಯೇ ವಿಜಯನಗರ ಆಡಳಿತಕ್ಕೊಳಪಟ್ಟ ಶಿಗ್ಗಾಂವ-ಬಂಕಾಪುರ ಪ್ರದೇಶಕ್ಕೆ ಡಣ್ಣಾಯಕರಾಗಿ, ತಾಯಿ ಬಚ್ಚಮ್ಮನ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಯಾವುದೋ … Read more

ರೋಮಾಂಚನಗೊಳಿಸಿದ ’ರಕ್ತರಾತ್ರಿ’ ಪ್ರಯೋಗ ಲೇಖನ : ಹಿಪ್ಪರಗಿ ಸಿದ್ಧರಾಮ

  ಯುದ್ಧ ವಿರೋಧಿ ಮತ್ತು ಕ್ರೌರ್ಯತೆಯ ಪರಮಾವಧಿಯನ್ನು ಮನಕಲಕುವಂತೆ ಬಿಂಬಿಸುವ ಕಂದಗಲ್ಲ ಹಣಮಂತರಾಯರ ಸರಿ ಸುಮಾರು ಇಪ್ಪತ್ತು ನಾಟಕಗಳಲ್ಲಿಯೇ ಹೆಚ್ಚು ಜನಪ್ರಿಯ ಕೃತಿ ’ರಕ್ತರಾತ್ರಿ’ ನಾಟಕ ಪ್ರದರ್ಶನವನ್ನು ಇತ್ತೀಚೆಗೆ ಗದಗಯ್ಯ ಹಿರೇಮಠ ನಿರ್ದೇಶನದಲ್ಲಿ ಕಲಾವಿದ ಸಿ.ಎಸ್.ಪಾಟೀಲಕುಲಕರ್ಣಿಯವರ ೬೦ನೇ ವರ್ಷದ ಷಷ್ಟ್ಯಬ್ದಿ ಆಚರಣೆಯ ಸಂದರ್ಭದಲ್ಲಿ ಹವ್ಯಾಸಿ, ವೃತ್ತಿ ರಂಗಭೂಮಿಯ ಕಲಾವಿದರು ಧಾರವಾಡದಲ್ಲಿ ಅಭಿನಯಿಸಿದರು. ಹೊರಗೆ ಅಕಾಲಿಕ ಮಳೆಯ ತುಂತುರು ಹನಿಯ ವಿಪರೀತ ತಣ್ಣನೆಯ ವಾತಾವರಣವಿದ್ದರೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ’ಎಲೆ ಉತ್ತರೆ, ದಿನ ಮೂರು ಕಳೆಯುವುದರೊಳಗಾಗಿ … Read more

ನಾಟ್ಯೋತ್ಪತ್ತಿ: ಕೆ.ಪಿ.ಎಂ.ಗಣೇಶಯ್ಯ

ಭವದ್ಭಿಃ ಶುಚಿಭಿರ್ಭೂತ್ವಾ ತಥಾವಹಿತಮಾನಸೈಃ|  ಶ್ರೂಯತಾಂ ನಾಟ್ಯವೇದಸ್ಯ ಸಂಭವೋ ಬ್ರಹ್ಮನಿರ್ಮಿತಃ| -ನಾಟ್ಯಶಾಸ್ತ್ರ  ನಾಟ್ಯದ ಉತ್ಪತ್ತಿ ಎಂಬುದು ಹೇಗಾಯ್ತು? ನಾಟ್ಯ ವಿಶಾರದ ಭರತಮುನಿಯನ್ನು ಆತ್ರೇಯ ಮೊದಲಾದ ಋಷಿಗಳು ಪ್ರಶ್ನಿಸಿದರು. ಪೂರ್ವದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಕೃತಯುಗ ಮುಗಿದು ವೈವಸ್ವತ ಮನ್ವಂತರದ ತ್ರೇತಾಯುಗ ಆರಂಭವಾಗುವ ಮಧ್ಯಂತರದಲ್ಲಿ ಜನರು ಕಾಮಲೋಭಗಳಲ್ಲಿ ಅಸಭ್ಯರಾಗಿ ವರ್ತಿಸುತ್ತಿದ್ದರು. ಇಂದ್ರನನ್ನು ಮುಂದೆ ಮಾಡಿಕೊಂಡ ದೇವತೆಗಳು ಬ್ರಹ್ಮನಲ್ಲಿಗೆ ಬಂದು ವೇದಗಳು ಶೂದ್ರಜಾತಿಗಳಿಗೆ ನಿಷಿದ್ಧವಾದುದರಿಂದ ಎಲ್ಲ ಜಾತಿ (ವರ್ಣ)ಗಳಿಗೆ ಲಭ್ಯವಾಗುವಂತಹ ಐದನೆಯ ವೇದವನ್ನು ರಚಿಸುವಂತೆ ಭಿನ್ನವಿಸಿದರು. ಅದರಂತೆ ಬ್ರಹ್ಮನು ಋಗ್ವೇದದಿಂದ ಸಂಭಾಷಣೆಗಳಿಂದ ಕೂಡಿದ … Read more

ಮತ್ತೆ ರಂಗದಲ್ಲಿ ಅಬ್ಬರಿಸಿದ ’ವೀರ ಸಿಂಧೂರ ಲಕ್ಷ್ಮಣ’: ಹಿಪ್ಪರಗಿ ಸಿದ್ಧರಾಮ್,

ಗಾಂಧಿಯವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟ ಫಲವಾಗಿ ಹಲವರು ಸ್ಥಳೀಯ ಮಟ್ಟದಲ್ಲಿ ಕರನಿರಾಕರಣೆ, ಸರಕಾರಿ ಖಜಾನೆಗಳ ಲೂಟಿ, ಶ್ರೀಮಂತರ ಸ್ವತ್ತನ್ನು ದೋಚಿಕೊಂಡು ಬಡವರಿಗೆ ಹಂಚುವುದು ಮುಂತಾದವುಗಳನ್ನು ಮಾಡುತ್ತಾ ಆಗಿನ ಸರಕಾರಗಳಿಗೆ ಸವಾಲಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೇಶದ ಸ್ವಾತಂತ್ರ್ಯ ಸಮರದ ಇತಿಹಾಸವನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೆಡೆಯಾದರೆ ಜಾಗೃತ ಯುವಮನಸ್ಸುಗಳು, ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವ್ವಾತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ತಾಯ್ನೆಲದ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು … Read more

ಮಾರ್ನೆಮಿ: ಭರತೇಶ ಅಲಸಂಡೆಮಜಲು.

         ಪಿಲಿ, ಕೊರಗೆ, ಕರಡಿ, ಸಿಂಹ ನಲಿತೋಂತಲ್ಲಗೆ,  ಪುರಿ ಬಾಲೆ, ಜೆತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್‍ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು….. ತುಳುನಾಡಿನಲ್ಲಿ ನವರಾತ್ರಿ, ದಸರಾಕ್ಕಿಂತ ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ. ೯ದಿನಗಳ ಕಾಲ ಭರಪೂರ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷದ ಮೂಲಕ ಅರ್ವಿಭಾವಗೊಳಿಸಿ ಆ ತೆರದಲ್ಲಿ … Read more

ಸುಸಂಸ್ಕೃತ ಪರಂಪರೆ ನೆನಪಿಸಿದ ’ಹೇಮರೆಡ್ಡಿ ಮಲ್ಲಮ್ಮ’ : ಹಿಪ್ಪರಗಿ ಸಿದ್ಧರಾಮ

ಇತ್ತೀಚೆಗೆ (೧೭-೦೯-೨೦೧೪) ಧಾರವಾಡದಲ್ಲಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ನಾಲ್ಕನೇಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳ ’ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನು ಪ್ರದರ್ಶನ ನಡೆಯಿತು. ಕಳೆದ ಶತಮಾನದಲ್ಲಿ (೧೯೩೭) ಆರಂಭಗೊಂಡ ಪುರುಷ ಕಲಾವಿದರು (ಮಹಿಳಾ ಕಲಾವಿದರಿಲ್ಲದ) ಮಾತ್ರ ಇರುವ ವಿಶ್ವದ ಏಕೈಕ ವೃತ್ತಿ ನಾಟಕ ಕಂಪನಿಯೆಂದು ಹೆಸರಾಗಿರುವ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ಗತಕಾಲದ ರಂಗವೈಭವ ನೆನಪಿಸುವಂತೆ ಅಭಿನಯಿಸಿದರು. ಆಧುನಿಕ ಕಾಲದ ಹಲವಾರು ಮಾಧ್ಯಮಗಳ ಎದುರು ನಾಟಕ ಕಂಪೆನಿಗಳು ನೇಪಥ್ಯಕ್ಕೆ ಸರಿದು … Read more

ಮನಕ್ಕೆ ಮುದ ನೀಡಿದ ’ಚಮ್ಮಾರನ ಹೆಂಡತಿ’: ಹಿಪ್ಪರಗಿ ಸಿದ್ಧರಾಮ

ಸೃಜನಶೀಲ ಸಮಾನ ಮನಸ್ಸುಗಳು ಒಂದೇಡೆ ಸೇರಿಕೊಂಡು ರಂಗಭೂಮಿಯಲ್ಲಿ ನೆಲೆ ನಿಲ್ಲಬೇಕೆಂಬ ತೀವ್ರ ಹಂಬಲದೊಂದಿಗೆ ಭವಿಷ್ಯದ ಜಾಗೃತಿಯ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಲು ಉದಯೋನ್ಮುಖ ಪ್ರತಿಭೆಗಳ ಸಂಗಮವಾಗಿ ’ಥಿಯೇಟರ್ ಸಮುರಾಯ್’ ಉದಯವಾಗಿ ನಾಲ್ಕು ವರ್ಷಗಳು ಸರಿದು ಸರಿಯಾಗಿ ಐದನೇ ವರ್ಷಕ್ಕೆ ಮುಂದಡಿಯಿಡುತ್ತಿದೆ. ಈ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಹಲವಾರು ಪಲ್ಲಟಗಳು, ಸ್ಥಿತ್ಯಂತರಗಳು ಘಟಿಸಿವೆ. ಇಂತಹ ನಿರಂತರ ಬದಲಾವಣೆಯ ಪ್ರಸ್ತುತ ಪ್ರಸಂಗದಲ್ಲಿ ತಮ್ಮ ಹಲವಾರು ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿರುವ ’ಥಿಯೇಟರ್ ಸಮುರಾಯ್’ ತಂಡವು ಈ ಸಲ ಸ್ಪೇನ್ ರಂಗಕರ್ಮಿ ಫೆಡರಿಯೋ … Read more

ಸಂಬಂಧಗಳ ಸುಳಿಯಲ್ಲಿ ’ಬೇರಿಲ್ಲದವರು’: ಹಿಪ್ಪರಗಿ ಸಿದ್ಧರಾಮ

ನಗರದಲ್ಲೊಂದು ಚಿಕ್ಕ ಮತ್ತು ಚೊಕ್ಕದಾದ ಕುಟುಂಬ. ಆಧುನಿಕ ಕಾಲದ ಸಕಲೆಂಟು-ಸೌಕರ್ಯಗಳು ಇರುವ ಆ ಕುಟುಂಬದ ಯಜಮಾನ ಸರಕಾರದ ಇಲಾಖೆಯೊಂದರಲ್ಲಿ ಇಂಜನೀಯರ್ ಮತ್ತು ಆತನ ಪತ್ನಿಯೂ ಸಹ ಆಧುನಿಕ ಕಾಲದ ಸುಶಿಕ್ಷಿತೆ ಮತ್ತು ಸರಕಾರಿ ಶಾಲೆಯ ಶಿಕ್ಷಕಿಯಾಗಿ ನೌಕರಿ ಮಾಡುತ್ತಿದ್ದಾಳೆ. ಇಂತಿಪ್ಪ ಕೈತುಂಬ ಸಂಬಳದ ಉದ್ಯೋಗಸ್ಥ ದಂಪತಿಗಳಿಗೆ ಹದಿಹರೆಯದ ಮಗ ಮತ್ತು ಮಗಳು ಇದ್ದಾರೆ. ಮನೆಯಲ್ಲಿಯೂ ಎಲ್ಲವೂ ಇದೆ ಆದರೆ ಶಾಂತಿ-ಸಮಾಧಾನ-ಹೊಂದಾಣಿಕೆ-ಅರ್ಥ ಮಾಡಿಕೊಳ್ಳುವಂತಹ ಸಾಮಾಜಿಕ ಅಂಶಗಳು ಅವಶ್ಯವಾಗಿ ಇರಬೇಕಾದುದೇ ಇಲ್ಲ. ಇರುವ ನಾಲ್ವರಿಗೂ ತಮ್ಮದೇ ಆದ ಅವಸರ, ಉದ್ವೇಗ, … Read more

ನಾನು ನೋಡಿದ ನಾಟಕ- ಸೋರೆಬುರುಡೆ (ನೃತ್ಯನಾಟಕ): ಹನಿಯೂರು ಚಂದ್ರೇಗೌಡ

"ಮಾನವನ ಸ್ವಾರ್ಥಪರ ನಡವಳಿಕೆ-ಆಲೋಚನೆ ತೆರೆದಿಡುವ ಜಾನಪದೀಯ ಕಥಾನಕ" ಪ್ರಪಂಚದ ಮರುಹುಟ್ಟು ಕುರಿತ ಇರುಳಿಗರ ಸೃಷ್ಟಿಪುರಾಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ "ಸೋರೆಬುರುಡೆ" ಜಾನಪದೀಯ ನೃತ್ಯನಾಟಕವು ಬೆಂಗಳೂರು ವಿವಿ ಆವರಣದಲ್ಲಿರುವ ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಕಿಕ್ಕಿರಿದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರಿನ ಕೆ.ಎಸ್.ಎಂ.ಟ್ರಸ್ಟ್ ಕಲಾವಿದರು ಪ್ರಸ್ತುತಪಡಿಸಿದ ಈ ನಾಟಕವು, ಮನುಷ್ಯ ತನ್ನ ಅಸ್ತಿತ್ವದ ಉಳಿವಿಗಾಗಿ ಏನೂ ಬೇಕಾದರೂ ಮಾಡಲು ಹಿಂಜರಿಯಲಾರ ಎಂಬ ಸಂದೇಶವನ್ನು ನೀಡಿತು. ಅಲ್ಲದೆ, ಮಾನವನದು ಸದಾ ಸ್ವಾರ್ಥಪರ-ಅನುಕೂಲಸಿಂಧುವೂ ಆದ ವರ್ತನೆ ಮತ್ತು ನಡವಳಿಕೆಯಾಗಿದೆ ಎನ್ನುವುದನ್ನು ನಾಟಕದಲ್ಲಿ ಮನೋಜ್ಞವಾಗಿ … Read more