“ದೀಪಗಳಿರದ ದಾರಿಯಲ್ಲಿ ಅದೆಷ್ಟೂ ದೂರ ನಡೆಯಲಾದೀತು”: ಸಿದ್ದುಯಾದವ್ ಚಿರಿಬಿ

  ಪ್ರೀತಿಯ ಒಲವಿನ ಪ್ರಿಯಲತೆಯೇ..,   “ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೆ” ಹಾಡು ಅದರಿಷ್ಟದಂತೆ ಮೊಬೈಲ್ ನಲ್ಲಿ ಹಾಡುತ್ತಿತ್ತು. ಕತ್ತಲು ದಾರಿಯಲಿ ನಮ್ಮಿಬ್ಬರ ಮೊದಲ ಪಯಣ. ಸಿ. ಅಶ್ವತ್ ರವರ ಕಂಚಿನ ಕಂಠ ಸಿರಿಯಲ್ಲಿ ಹೊಮ್ಮಿದ ಆ ಹಾಡು ಅದೇಷ್ಟು ಬಾರಿ ಕೇಳಿದರು ಸಾಕೆನ್ನಿಸದು. ಕನ್ನಡ ಸಾಹಿತ್ಯಕ್ಕಿರುವ ತಾಕತ್ತು ಅಂತದ್ದಿರಬೇಕು. ಸುಮ್ಮನೆ ಮೌನದಲಿ ಸಾಗುವ ಪಯಣದಲ್ಲಿ ಏನೂ ಕೌತುಕದ ಕದನ. ಅರಿಯದೆ ಅರಳಿದ ನಮ್ಮಿಬ್ಬರ ಒಲವಿನ ಪ್ರೀತಿಯ ಗುಲಾಬಿಗೆ ಭಾವನೆಗಳ ಪನ್ನೀರಿನಲ್ಲಿ ಅಭಿಷೇಕ ಗೈಯ್ಯಲೆಂದು ಹೊರಟಂತಿತ್ತು ನಮ್ಮಿಬ್ಬರ … Read more

ಡಾ.ಬಸವಲಿಂಗ ಪಟ್ಟದೇವರ ಸಾಹಿತ್ಯಿಕ ಕೊಡುಗೆ: ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ

ಕರ್ನಾಟಕದಲ್ಲಿ ಬಸವತತ್ವ ಚಿಂತನೆ ಧರ್ಮ ಪ್ರಚಾರದ ಜೊತೆಗೆ ಅನೇಕ ಮಠಾಧೀಶರು ಸಾಹಿತ್ಯದ ಬರವಣಿಗೆಯಲ್ಲಿ ಸಹ ತೊಡಗಿದ್ದಾರೆ. ಅವರಲ್ಲಿ ಡಾ.ಜಚನಿ, ಡಾ.ಮೂಜಗಂ, ಡಾ.ಅನ್ನದಾನೀಶ್ವರ ಸ್ವಾಮಿಗಳು, ಡಾ.ಮುರುಘ ಶರಣರು ಅವರಂತೆ ಡಾ. ಬಸವಲಿಂಗ ಪಟ್ಟದೇವರು ಕೂಡಾ ಒಬ್ಬರು. ಬಸವಲಿಂಗ ಪಟ್ಟದೇವರು ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಚಿಂತನೆಯ ಪ್ರಗತಿಪರ ಚಿಂತಕರು ಹೌದು. ಅವರು ಬಸವ ತತ್ವ ಚಿಂತನೆ ಸಾಹಿತ್ಯವನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಜೊತೆಗೆ ಸಾಹಿತ್ಯದ ರಚನೆಗೂ ತೊಡಗಿದ್ದಾರೆ. ಬಸವಲಿಂಗ ಪಟ್ಟದೇವರು ಮೂಲತಃ ಕವಿಗಳು ಅವರು ವಿದ್ಯಾರ್ಥಿ … Read more

ಜಿಯಾವುಲ್ಲಾಖಾನ್ ಅವರ ಬಳಿ ಎಲ್ಲಾ ದೇಶದ ನೋಟು ಮತ್ತು ನಾಣ್ಯಗಳು: ಪ್ರವೀಣ್ ಕುಮಾರ ಸಲಗನಹಳ್ಳಿ

ಇದು ಡೀಮೋನಿಟೈಜೆಷನ್ ಸಮಯ. ಇಲ್ಲಿ ಹಳೆಯ ನೋಟುಗಳಿಗೆ ಕಾವಡೆ ಕಾಸಿನ ಕಿಮ್ಮತ್ತು ಇಲ್ಲ. ಒಂದು ಕಾಲದಲ್ಲಿ ತಮ್ಮದೇ ಆದ ಮೌಲ್ಯವನ್ನು ಹೊಂದಿದ್ದ ನೋಟುಗಳು, ಇಂದು ಮೌಲ್ಯಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೂಲೆ ಸೇರಿಕೊಳ್ಳುತ್ತಿವೆ. ಆದರೆ, ಆ ರೀತಿ ಮೌಲ್ಯ ಕಳೆದುಕೊಂಡ ನೋಟುಗಳು ಮುಂದೂಂದು ದಿನ ನಮ್ಮನ್ನು ಕಣ್ಣರಳಿಸಿಕೊಂಡು ನೋಡುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಅಂತಹ ಕಣ್ಣರಳಿಸಿಕೊಂಡು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ನೋಡಬೇಕು ಎಂದರೆ ಶಿವಮೊಗ್ಗ ನಗರದಲ್ಲಿರುವ ತಂಪು ಪಾನಿಯಗಳ ವ್ಯಾಪಾರಿ ಜಿಯಾವುಲ್ಲಾಖಾನ್ ಅವರ ಅಂಗಡಿಗೆ ನೀವು ದಾಂಗುಡಿ … Read more

ಪ್ರಾಮಾಣಿ – ಕತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಇಂದು ಬೇರೆಯವರನ್ನು , ಭ್ರಷ್ಟರನ್ನು  ಸರಿಮಾಡುವುದೆಂದರೆ ನಾವು ಕೆಟ್ಟುಹೋಗುವುದು ಅಂಥ ಅರ್ಥ! ಅಥವಾ ಅತಿ ದುಷ್ಟರಾಗುವುದು ಅಂಥ!  ಏಕೆಂದರೆ ಅವರಿಗೆ ನಾವು ಸರಿಯಿಲ್ಲ ಅನ್ನಿಸುವುದರಿಂದ ನಮ್ಮನ್ನು ಅವರು ಅವರಂತೆ ಆಗಿಸಿಬಿಡುತ್ತಾರೆ! ಪುರಾಣಗಳಲ್ಲಿ ದುಷ್ಟರ ದೌಷ್ಟ್ಯ ಹೆಚ್ಚಾದಾಗ ಭಗವಂತ ಬಂದು ದುಷ್ಟರ ಸಂಹರಿಸುವುದನ್ನು ಓದಿರುತ್ತೇವೆ. ಅಂದರೆ ಸಾಮಾನ್ಯರು ಇವರನ್ನು  ಮಟ್ಟ ಹಾಕಲು ಅಸಮರ್ಥರು ಎಂಬ ಸತ್ಯ ಅಲ್ಲಿ ಅಡಗಿದೆ! ದುಷ್ಟರ ನಾಶ ಮಾಡುವುದಕ್ಕೆ ಭಗವಂತನೇ ಅವತರಿಸಬೇಕಾಗುತ್ತದೆ. ಅವನೆ ಸಮರ್ಥ! ಭ್ರಷ್ಟತೆಯನ್ನು ನಿರ್ನಾಮ ಮಾಡುವವರೆ ಮಹಾಭ್ರಷ್ಟರಾಗಿರುವುದರಿಂದ ಎಲ್ಲಾ … Read more

ಫೇಸ್ ಬುಕ್ ಗೆಳೆಯರಿಗೊಂದು ಪತ್ರ: ನಟರಾಜು ಎಸ್. ಎಂ.

ಹಾಯ್ ಫ್ರೆಂಡ್ಸ್, ಹೇಗಿದ್ದೀರ? ಎಷ್ಟೊಂದು ದಿನಗಳೇ ಆಗಿಹೋಯಿತು ನಿಮ್ಮೊಡನೆ ಸರಿಯಾಗಿ ಮಾತನಾಡಿ. ಒಂದಷ್ಟು ವರುಷಗಳ ಹಿಂದೆ ಹೀಗೆ ಸುಮ್ಮನೆ ಕಣ್ಣಿಗೆ ಬಿದ್ದ ಫೇಸ್ಬುಕ್ ನಲ್ಲಿ ಅಪರಿಚಿತರಾಗಿದ್ದ ನಾವು ಪರಿಚಿತರಾಗುತ್ತ ಹೋದ್ವಿ. ಈ ಪರಿಚಯಗಳಿಗೆ ಈಗ ವರುಷಗಳ ಸಂಭ್ರಮ. ಮೊನ್ನೆ ಮೊನ್ನೆ ಫೇಸ್ ಬುಕ್ ನಮ್ಮ ಗೆಳೆತನಗಳನ್ನು ಪುಟ್ಟ ವಿಡಿಯೋ ರೂಪದಲ್ಲಿ ಸಮ್ಮರಿ ಮಾಡಿ ನಮ್ಮ ಮುಂದಿಟ್ಟಿದೆ. ಈ ತರಹದ ವಿಡಿಯೋವನ್ನು ಫೇಸ್ಬುಕ್ ನೀಡುತ್ತಿರುವುದು ಇದು ಮೊದಲಲ್ಲ. ಆದರೂ ಯಾಕೋ ಈ ವಿಡಿಯೋಗಳು ವಿಶೇಷ ಅನಿಸುತ್ತಿದೆ. ಯಾಕೆಂದರೆ ಈ … Read more

ಪಂಜು ಕಾವ್ಯಧಾರೆ

 ತಂಪ ಸೂಸುವ ತುಂಟ‌ ಚಂದ್ರಮ, ಚದುರಿ ಹೋದನು ಚಹರೆ ಮರೆತು.. ಚಿಲುಮೆ ಒಲುಮೆಯ ಗಾಳಿ ಬೀಸಿ, ಚಂದ್ರ ವಾಚುತ ನಕ್ಕನು..! ಅಬಲೆ ಮಣಿ ನಿನ್ನ ನೋಟಕೆ , ರಸಿಕನಾದೆನು ಭಯವ ಮರೆತು.. ಕನಸ‌ಕಂಡೆನು ಇಂದು ನಾನು, ಹೊಸಲೋಕಕೆ ಪಯಣ ಕಲಿತು..! ಅರಿಯಲಾಗದ ಅರಿವಿನನುಭವ, ಅರಿತೆ ನಾನು ಒಲವಿನಿಂದ.. ಅಮಲು ನೀಡುವ ದಿವ್ಯ‌ಔಷಧಿ.. ಪ್ರೀತಿ ಎನ್ನುವುದ..! ಹರಿದು ಹೋಗದ ಜಾಲವಿದು, ಕರಗಿ ಹೋಗದ ಅರಗಿದು.. ಹರಿದು ಕರಗಿ ಹೋಯಿತೆಂದರೆ, ಹ್ರದಯ ಉರಿಯದೆ ಇರುವುದೇ?!! **** ಪ್ರತಿಫಲಿಸುವ ಹ್ರದಯದ, ಮಿಡಿತವ … Read more

ಕೋಸಿನ ಪಲ್ಯ: ಸಹನಾ ಪ್ರಸಾದ್

ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ. ತನ್ನ ಮದುವೆಯ ದಿನ, … Read more

ನಿಯತ್ತು…: ದುರ್ಗಾ ಪ್ರಸಾದ್

ಮೂರು ದಿನವಾದರೂ ಒತ್ತರಿಸಿ ಬರುತ್ತಿದ್ದ ಸೊಸೆ ಮಾಡಿದ ಅವಮಾನದ ದೃಶ್ಯಗಳನ್ನು ರಂಗಪ್ಪನಿಗೆ ಸಹಿಸಲಾಗುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ಊರಿನಿಂದ ಬಂದ ಮಗಳನ್ನು ನಿಂದಿಸಿರುತ್ತಿರುವ ಸೊಸೆಯನ್ನು ಕಂಡು ರಂಗಪ್ಪನಿಗೆ ಸುಮ್ಮನಿರಲಾಗಲಿಲ್ಲ. ಯಾಕಮ್ಮ ಹಾಗೆಲ್ಲ ಮಾತಾಡುತ್ತಿಯಾ ಎಂದು ಕೇಳಿದಾಕ್ಷಣ ಮಾವನ ಕೊರಳಪಟ್ಟಿ ಹಿಡಿದು ಮತ್ತೊಂದು ಕೈಯಲ್ಲಿ ಚಪ್ಪಲಿ ಹಿಡಿದು ನಿಂತ ಸೊಸೆಯನ್ನು ಹಿಗ್ಗಾ ಮುಗ್ಗಾ ತಳಿಸಿಬಿಡಬೇಕು ಎಂದೆನಿಸಿದರೂ ಉಸಿರು ಗಟ್ಟಿ ಮಾಡಿಕೊಂಡು ಸುಮ್ಮನಾಗಿದ್ದರು. ತಂದೆಯನ್ನು ಕೊರಳಪಟ್ಟಿ ಹಿಡಿದರೂ ಏನೊಂದು ಮಾತಾಡದೆ ಒಳನಡೆದ ಮಗನನ್ನು ಕಂಡು ರೇಜಿಗೆ ಹುಟ್ಟಿತು. ಊರಮಂದಿಯೆಲ್ಲಾ ಮನೆಯ ಮುಂದೆ ನೋಡುತ್ತಾ … Read more

ಅಪ್ಪ: ರಾಜುಗೌಡ ನಾಗಮಂಗಲ

ಅಪ್ಪಂದಿರ ದಿನ ಮುಗಿದೇ ಹೋಯ್ತು. ಇನ್ನೂ ಮುಂದಿನ ವರ್ಷವೇ ಅಪ್ಪನನ್ನ ಹಗಲಿಂದ ಇರುಳಿಬ್ಬಾಗವಾಗುವವರೆಗೂ ತಮ್ತಮ್ಮ ಹೆಗಲಿಗೆ ಕಟ್ಟಿಕೊಂಡು ಹೊಗಳುವುದು, ಹಾಡುವುದು ಕವಿತೆ ಬರೆಯುವುದು ಅಲ್ಲೋ ಇಲ್ಲೋ ಓದಿದ ಆದರ್ಶ ಅಪ್ಪಂದಿರ ಬಗ್ಗೆ ಬರೆಯುವುದು ಎಲ್ಲವೂ ಒಂದಷ್ಟು ಈ ವರ್ಷ ಮುಗಿಯಿತು. ಬರೆಯುವುದೇನು ತಪ್ಪಿಲ್ಲ ಓದಿದವ ತನ್ನ ನೆನಪುಗಳನ್ನು ಮೆಲುಕು ಹಾಕುತ್ತಾನೆ, ಅಷ್ಟಕ್ಕೂ ಅಪ್ಪನೆಂದರೆ ದ್ವೇಷವೇನು ಇಲ್ಲಾ. ಜಗತ್ತಿಗೆ ನನ್ನಪ್ಪನನ್ನ ತೋರಿಸುವ ಉಮೇದುವಾರಿಕೇನು ಇಲ್ಲಾ, ನನಗಂತೂ ಅಪ್ಪನೆಂದರೆ ಚಿಪ್ಪೊಡೆಯದ ಮುತ್ತು, ನಾನಾಗ ಚಿಗುರುಗಣ್ಣಿನ ಹುಡುಗ. ಎಸ್. ಎಸ್. ಎಲ್ಸಿ … Read more

ಬೋನ್ಸಾಯಿ ಗಿಡದಂತೆ ಅರಳುವ ನರಳುವ ಸ್ತ್ರೀ ಬದುಕು: ನಾಗರೇಖಾ ಗಾಂವಕರ

ತೆಲಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾದೇವಿಯ ಒಂದು ಸಣ್ಣಕಥೆ “ಬೊನ್ಸಾಯಿ ಬ್ರತುಕು” ಅಂದರೆ ಬೋನ್ಸಾಯಿ ಬದುಕು. ಬೊನ್ಸಾಯಿ ಕಲೆಯನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀ ಬದುಕಿನ ಸುತ್ತ ಅದರ ಸೂಕ್ಷ್ಮ ಎಳೆಗಳ ಇತಿಮಿತಿಗಳ ಜಾಲಾಡಿದ ಸುಂದರ ಕಥಾನಕ. ಬೋನ್ಸಾಯಿ ಒಂದು ಜಪಾನೀ ಕಲೆ. ಅಗಾಧ ಬೆಳೆಯುವ ಮರಗಳನ್ನು ಕುಂಡಗಳಲ್ಲಿ ಮನೆಯೊಳಗಡೆ ಕೂಡ ಬೆಳೆಸುವಂತಹ ವಿಶಿಷ್ಟ ವಿಧಾನ. ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುವ, ಅದರ ವಿಸ್ತಾರಕ್ಕೆ ವೈಶಾಲ್ಯಕ್ಕೆ ಇತಿಮಿತಿಗಳ ಹೇರಿ, ಸಂಕುಚಿತಗೊಳಿಸುವ ಸುಂದರ ಕುತಂತ್ರದ ಕಲಾತ್ಮಕ ವಿಧಾನ. ಮರದ ಅಪಾರ ಸಾಮಥ್ರ್ಯ, ವಿಶಾಲತೆಗಳೆಲ್ಲ ಮೊಟಕುಗೊಂಡು … Read more

ಮಂಗಳನ ಅಂಗಳದಲ್ಲಿ! (ಕೊನೆಯ ಭಾಗ): ಎಸ್.ಜಿ.ಶಿವಶಂಕರ್

  ಇಲ್ಲಿಯವರೆಗೆ "ರುಚಿಕಾ, ಮಗಳೆ ಮದುವೆಯ ನಂತರ ಗಂಡನ ಮನೆಗೆ ಹೋಗುವಾಗ ಹೇಳಬೇಕಾದ ವಿದಾಯವನ್ನು ಈಗಲೇ ಹೇಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನನ್ನ ಕಣ್ಣಾಲಿಗಳು ತುಂಬಿವೆ. ಮಾತು ಹೊರಡದಾಗಿದೆ. ಆದರೂ ಮತ್ತೆ ನಿನ್ನೊಂದಿಗೆ ಮಾತಾಡುವ ಸಂದರ್ಭ ಬರಲಾರದು. ಅದಕ್ಕೇ ತಾಯಿಯಾಗಿ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನೀನು ಕೊನೆಗೆ ತಲುಪಲಿರುವ ಜಾಗ ಹೇಗಿದೆಯೋ? ಅಲ್ಲಿ ನಮ್ಮಂತ ಜೀವಿಗಳಿರುವರೋ ಗೊತ್ತಿಲ್ಲ. ನಿನ್ನ ಜೊತೆಯಲ್ಲಿ ಬರುತ್ತಿರುವ ಸೃಜನ್ ನನ್ನ ಗೆಳತಿಯ ಮಗ. ನಿನಗೆ ಅನುರೂಪನಾದ ವರನಾಗಬಲ್ಲ. ಅವನನ್ನು ಒಪ್ಪುವುದು, ಬಿಡುವುದೂ … Read more

ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

ಇಲ್ಲಿಯವರೆಗೆ ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ … Read more

ಕುರುಂಜಿಮಲೆ ಹೋಂಸ್ಟೇ: ಜಾನ್ ಸುಂಟಿಕೊಪ್ಪ.

ಬಿದ್ದಪ್ಪ ಗೈಡ್ ಆದದ್ದೇನೂ ದೊಡ್ಡ ವಿಷಯವಾಗಿರಲಿಲ್ಲ. ಕುರುಂಜಿಮಲೆ ಹೋಂಸ್ಟೇ ಮಾಲಿಕ ಗಣಪತಿಯೂ ಅವನ ಹೆಂಡತಿ ದೇವಕ್ಕಿಯೂ, ಮತ್ತೆ ಆ ಬಡಕಲು ಲೈನ್‍ಮನೆಯಲ್ಲಿದ್ದ ನಾಲ್ಕು ಸಂಸಾರಗಳು ಅವರಷ್ಟಕ್ಕೇ ದಿನ ದೂಡುವುದು ಇದ್ದೇಇತ್ತು. ಕ್ಯಾಟರ್ ಬಿಲ್ಲೋ, ಸಾಹುಕಾರನ      ಕೋವಿಯೋ ಹಿಡಿದು ಆ ತಡಿಯಂಡಮೋಳು, ಮಾಪಿಳೆಕುಂದು, ಕರಡಿಮಲೆ ಎಂದೆಲ್ಲಾ ಇರೋಬರೋ ಬೆಟ್ಟ-ಕಾಡೊಳಗೆ ನುಗ್ಗಿ ಮೊಲವೋ, ಕಬ್ಬೆಕ್ಕೋ, ಕಾಡುಹಂದಿಯೋ, ಕೋಳಿಯೋ ಏನಾದರೂ ಹೊಡೆದು ತರುತ್ತಿದ್ದ ಬಿದ್ದಪ್ಪ ಆ ಗಣಪತಿ ಸಾಹುಕಾರನ ಮನೆ ಜಗಲಿಯಲ್ಲಿ ಬೇಟೆ ಹಾಕಿ ಕಾಲಿಗೆ ಹತ್ತಿದ ಜಿಗಣೆಗಳನ್ನು ಒಂದೊಂದಾಗಿ ಕಿತ್ತು … Read more

ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ- ತಹಶೀಲ್ದಾರ: ದಾವಲಸಾಬ ತಾಳಿಕೋಟಿ

(ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಂಭ್ರಮ ಈ ನಿಮಿತ್ತ ಲೇಖನ)  ಶಿಕ್ಷಕ ವೃತ್ತಿಯಂದರೇ ಎಲ್ಲಕ್ಕಿಂತಲೂ ಸರ್ವಶ್ರೇಷ್ಟವಾದ ಕಾಯಕವಾಗಿದೆ. ಶಿಕ್ಷಕ ತನ್ನಲ್ಲೇ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯರೇದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾದದ್ದು. ಇಂತಹ ಶ್ರೇಷ್ಠ ವೃತ್ತಿಗೆ ಬರಬೇಕಾದರೇ ಪೂರ್ವಿಕರ ಆರ್ಶಿವಾದ ಇರಬೇಕು ಎನ್ನುತ್ತಾರೆ. ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ಗುರುವಿಲ್ಲದೇ ಎನ್ನುವಂತೆ  ಇಲ್ಲೋಬ್ಬ ಶಿಕ್ಷಕ ತನ್ನ ಕಾಯಕ ನಿಷ್ಠೆಯಿಂದಲೇ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕನಾಗಿ, ಜಿಲ್ಲಾ ಉತ್ತಮ ಶಿಕ್ಷಕನಾಗಿ, ಸಹ ಶಿಕ್ಷಕರಾಗಿದ್ದುಕೊಂಡೆ ಶಾಲೆಯ … Read more

ನೆನಪಿನ ಪಯಣ – ಭಾಗ 5: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ಜ್ಯೋತಿಯ ದ್ವನಿ ಮೊದಲಿನಂತೆ ಇರದೇ ಸ್ವಲ್ಪ ಬದಲಾವಣೆಗೊಂಡಿದೆ,    ಮಾತು ಮುಂದುವರೆಯಿತು.. .. ಯಾವುದೋ ಚಿಕ್ಕ ದೇವಾಲಯದಂತಿದೆ, ನೋಡಿದರೆ ದೇವಿಯ ವಿಗ್ರಹ ಮಣ್ಣಿನಲ್ಲಿ ಮಾಡಿರುವುದು. ಮುಂಬಾಗದಲ್ಲಿ ಕಳಶವೂ ಇದೆ. ಪೂಜೆ ನಡೆಯುತ್ತಿದೆ. ಊರಜನರೆಲ್ಲ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಇದೇನು ಈ ವಿಗ್ರಹ ಯಾವುದು, ಇಲ್ಲಿರುವ ಕಳಶವಾದರು ಯಾವುದು.  ಊರದೇವಿ ಮಹಿಷಾಸುರಮರ್ಧಿನಿ ದೇವಿಯ ಪ್ರತಿಷ್ಠಾಪನೆಯಂತೆ. ದೇವಿಗೆ ಆರತಿ ಮೈಸೂರಿನಿಂದ ಬಂದಿದೆಯಂತೆ. ಏನೆಲ್ಲ ಮಾತುಗಳು. ಇನ್ನೂ ಹಿಂದೆ ಹೋಗಬೇಕೇನೊ ದೇವಾಲಯದ ರಹಸ್ಯ ತಿಳಿಯಲು….. ಯಾರೋ ತಲೆಯ ಮೇಲೆ ಒಂದು ಕುಕ್ಕೆಯನ್ನು … Read more

ನಮಸ್ಕಾರ-ಚಮತ್ಕಾರ: ವೈ. ಬಿ. ಕಡಕೋಳ

“ನಮಸ್ಕಾರ” ಸರ್ ಹೇಗಿದ್ದೀರಿ?” ಎಂಬ ಧ್ವನಿ ನಿಮ್ಮೆದುರಿಗೆ ಬಂದರೆ ತಕ್ಷಣ ನಿಮ್ಮ ಭಾವನೆ ಹೇಗಿರುತ್ತದೆ? ಎಲ್ಲಿಯೋ ಈ ಧ್ವನಿ ಕೇಳಿದೆನೆಲ್ಲ ಎಂದೊಮ್ಮೆ ಮನಸ್ಸಿನಲ್ಲಿ ಅಂದುಕೊಳ್ಳಬಹುದು.  ಅಥವ ಗುರುತಿಸಿದ ವ್ಯಕ್ತಿಯ ಧ್ವನಿಯ ಪರಿಚಯವಿದ್ದರೆ ತಕ್ಷಣ ನಮಸ್ಕಾರ ಹೇಗಿದೀರಿ? ಎಂಬ ಉಭಯಕುಶಲೋಪಚರಿಯತ್ತ ಮನಸ್ಸು ಹೊರಳಬಹುದು. ಅಂತಹ ಶಕ್ತಿ ಇರುವುದು ಈ ನಮಸ್ಕಾರ ಪದಕ್ಕೆ ಅಲ್ಲವೇ?  ಈ ನಮಸ್ಕಾರ ಇಂದು ನಿನ್ನೆಯದಲ್ಲ. ವೇದಗಳ ಕಾಲದಿಂದಲೂ ಭಾರತದ ಸನಾತನ ಧರ್ಮದಲ್ಲಿ ಇದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಗೌರವ ಸೂಚಕ ಮೌಲ್ಯತೆಯಿದೆ. , … Read more

ಸಾಮಾನ್ಯ ತುಲಾಯಂತ್ರವು, ಅಸಾಮಾನ್ಯ ದ್ರವ್ಯರಾಶಿಯು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

    ಜಗತ್ತಿನಲ್ಲಿ ಕೈಗೆಟುಕುವ ಎಲ್ಲಾ ವಸ್ತುಗಳನ್ನು ಅಳೆದು ಬೆಲೆ ಕಟ್ಟುತ್ತಿದ್ದೇವೆ. ಪ್ರತಿಯೊಂದು ವಸ್ತುವನ್ನು  ಅಳೆಯಲು ಆ ವಸ್ತುವಿನ ದ್ರವ್ಯರಾಶಿಯ ಸ್ವರೂಪದ ಆಧಾರದ ಮೇಲೆ ಅಳೆಯುವ ಸಾಧನಗಳನ್ನು ರೂಪಿಸಿದ್ದೇವೆ. ಇನ್ನೂ ಕೆಲವು ಸಾಧನಗಳನ್ನು ರೂಪಿಸುತ್ತಿದ್ದೇವೆ. ಎಲ್ಲಾ ತುಲಾ ಯಂತ್ರಗಳು ಅದರದೇ ಆದ ದ್ರವ್ಯರಾಶಿಯನ್ನು ಅಳತೆ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. ಅದರ ಸಾಮರ್ಥ್ಯಕ್ಕಿಂಥಾ ಹೆಚ್ಚು ದೊಡ್ಡದಾದ ವಸ್ತುವನ್ನು ಅವು ಅಳೆಯಲಾರವು. ಇದರಿಂದ ತಿಳಿಯುವುದೇನೆಂದರೆ ಎಲ್ಲಾ ತುಲಾ ಯಂತ್ರಗಳು ಎಲ್ಲಾ ಗಾತ್ರ, ತೂಕದ ದ್ರವ್ಯರಾಶಿಯನ್ನು ಅಳೆಯುವ ಸಾಮರ್ಥ್ಯ ಹೊಂದಿರುವುದಿಲ್ಲಾ, ಅವಕ್ಕೂ … Read more

2017ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2017' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗ ದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು.  ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ.  ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ … Read more

“ಎಲ್ಲರಂಥವನಲ್ಲ ನನ್ನಪ್ಪ” ಪುಸ್ತಕ ಬಿಡುಗಡೆ

ಆತ್ಮೀಯರೇ, ಪಂಜುವಿನ ಲೇಖಕರು ಮತ್ತು ಅಂಕಣಕಾರರಾದ ಗುರುಪ್ರಸಾದ ಕುರ್ತಕೋಟಿಯವರ ಸಂಪಾದಕತ್ವದಲ್ಲಿ ಮೈತ್ರಿ ಪ್ರಕಾಶನ "ಎಲ್ಲರಂಥವನಲ್ಲ ನನ್ನಪ್ಪ" ಎಂಬ ಪುಸ್ತಕ ಹೊರತರುತ್ತಿದೆ.  ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಕೆಳಗಿನ ಚಿತ್ರದಲ್ಲಿದೆ.  ಆಸಕ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿನಂತಿ.. ಹಾಗೆಯೇ ಈ ಪುಸ್ತಕದ ಪ್ರತಿಯನ್ನು ಈ ಕೆಳಗಿನ ಲಿಂಕ್ ಒತ್ತಿ ಫಾರಂ ಅನ್ನು ಭರ್ತಿ ಮಾಡಿ ರಿಯಾಯಿತಿ ದರದಲ್ಲಿ ಮುಂಗಡವಾಗಿ ಕಾದಿರಿಸಬಹುದಾಗಿದೆ. https://goo.gl/forms/r7kCj5KlGV86XoBi2 ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪಂಜು ಬಳಗದ ಪರವಾಗಿ ಶುಭಾಶಯಗಳು ಹಾಗು ಗುರುಪ್ರಸಾದ್ ಕುರ್ತಕೋಟಿ ಮತ್ತು ಪುಸ್ತಕದ … Read more

ಪಂಜು ಕಾವ್ಯಧಾರೆ

ದಯಾಮಯಿ ಎಂದು ಬರೆಯಲೆ,  ಸುಂದರಿ ಎಂದು ಬರೆಯಲೆ, ಪ್ರಿಯತಮೆ ಎಂದು ಬರೆಯಲೆ, ನಾನು ಕಂಗೆಟ್ಟಿ ಬಿಟ್ಟಿದ್ದೇನೆ  ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು; ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ; ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ ,  ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ; ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ,  ಆದರೆ ಇದರಲ್ಲಿ ಕಪ್ಪು ಛಾಯೆ … Read more

ಅನುವಾದಕ್ಕೊಂದು ತಂತ್ರಜ್ಞಾನ:  ಉದಯ ಶಂಕರ ಪುರಾಣಿಕ

ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ಪ್ರವಾಸ ಮಾಡುವಾಗ, ಸಾಮಾನ್ಯವಾಗಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನಮಗೆ ಗೊತ್ತಿರುವ ಭಾಷೆಯಲ್ಲಿ ಮತ್ತೊಬ್ಬರ ಜೊತೆ ಸಂಭಾಷಣೆ ನೆಡೆಸುವುದು ವಿಫಲವಾದಾಗ, ಕೈ, ಬಾಯಿ ಸನ್ನೆಗಳು ಮತ್ತು ನಮ್ಮ ಹಾವ ಭಾವಗಳ ಮೂಲಕ ಸಂಭಾಷಣೆ ನೆಡೆಸುವ ಪ್ರಯತ್ನ ಮಾಡುತ್ತೇವೆ. ಕೆಲವೊಮ್ಮೆ ಇದೂ ವಿಫಲವಾಗುವುದುಂಟು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ, ಆದರೆ ಭಾಷೆಯ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆ ಆಗ ನಮಗೆ ಎದುರಾಗುವುದುಂಟು. ಜಪಾನಿನ ಲಾಗ್‍ಬಾರ್ ಹೆಸರಿನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ … Read more

ಮಂಗಳನ ಅಂಗಳದಲ್ಲಿ! (ಭಾಗ 1): ಎಸ್.ಜಿ.ಶಿವಶಂಕರ್

ಇಡೀ ಮನೆ ಅಲುಗಾಡಿದಂತ ಅನುಭವವಾಯಿತು ಸೃಜನನಿಗೆ. ಇದೊಂದು ಹೊಸ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ! ಭೂಕಂಪನವಾಗುತ್ತಿದೆ ಎನಿಸುವಂತ ಅನುಭವ! ಕೆಲವು ನಿಮಿಷಗಳ ನಂತರ ಆ ಕಂಪನ ನಿಂತಿಂತೆ ಅನಿಸಿತು. ಎಲ್ಲ ಸ್ಥಬ್ದವಾಯಿತು; ನೆಮ್ಮದಿ! ಸ್ವಲ್ಪ ಎಚ್ಚರವಾಗಿತ್ತು-ಅಲುಗಾಟಕ್ಕೆ. ಸ್ಥಬ್ದವಾದನಂತರ ಮತ್ತೆ ಜೋಂಪು. ಮತ್ತೆ ಅಲುಗಾಟ, ಕುಲುಕಾಟ! ಮನೆಯೇ ಅತ್ತಿತ್ತ ವಾಲಿದಂತೆ, ಮತ್ತೆ ಅದೇ ಸಾವರಿಸಿಕೊಂಡು ನೆಟ್ಟಗೆ ನಿಂತಂತೆ! ಛೆ..ಇದೆಂತಾದ್ದು..? ನಿಜಕ್ಕೂ ಏನಾಗುತ್ತಿದೆ..? ಈ ಸಾರಿ ಬಹಳ ಹೊತ್ತು ಸ್ಥಬ್ದತೆ ಇದ್ದಂತೆ ಭಾವನೆ. ಈ ಕಂಪನ, ಸ್ಥಬ್ದತೆಗಳ ನಡುವೆ ಎಂತದೋ ಕಿರಿಕಿರಿ! … Read more

ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ: ನಾಗರೇಖಾ ಗಾಂವಕರ

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ  ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ  ವಿಸ್ತøತವಾಗುತ್ತಲೋ ಇಲ್ಲ ಸಂಕೀರ್ಣವಾಗುತ್ತಲೋ ಇವೆ. ಈ ಕೌಟಂಬಿಕ ನೆಲೆಗಟ್ಟಿನಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಂಡಿವೆ. ಗಂಡ-ಹೆಂಡತಿ,ತಂದೆ-ತಾಯಿ,ಮಗ -ಸೊಸೆ,ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಆಲದ ಮರದ ಬೀಳಲುಗಳಂತೆ ಭಾರತೀಯ ಸಂಬಂಧಗಳು ಹಲವಾರು. ಅದರಲ್ಲಿ ಅತ್ತೆ-ಸೊಸೆ ಸಂಬಂಧ  ಸಮಾಜದ ಮೂಲ ಘಟಕವಾದ ಕುಟುಂಬದ ಬಲಬೇರು.                          ಅತ್ತೆ … Read more

“ಮಾಡರ್ನ್ ಲೋಕದ ಮಿನಿಕಥೆಗಳು”: ಪ್ರಸಾದ್ ಕೆ.

  ಅವಳಿಗೆ ಮುಂಜಾನೆಯ ಏಳಕ್ಕೆ ಸರಿಯಾಗಿ ಎಚ್ಚರವಾಯಿತು. ಕಣ್ಣುಜ್ಜಿ ಅತ್ತಿತ್ತ ನೋಡಿದರೆ ಅವನಿನ್ನೂ ವಿವಸ್ತ್ರನಾಗಿಯೇ ಬಿದ್ದುಕೊಂಡಿದ್ದ. ಲಗುಬಗೆಯಲ್ಲೇ ಕಾಲನ್ನು ನೀಲಿ ಜೀನ್ಸ್ ಪ್ಯಾಂಟಿನೊಳಗೆ ತೂರಿಸಿ, ಟೀಶರ್ಟೊಂದನ್ನು ಧರಿಸಿ ತನ್ನ ಪುಟ್ಟ ಬ್ಯಾಗಿನೊಂದಿಗೆ ಅವಳು ಹೊರಟುಹೋದಳು. ಹತ್ತರ ಸುಮಾರಿಗೆ ಅವನಿಗೆ ಎಚ್ಚರವಾಯಿತು. ಹೋಟೇಲ್ ರೂಮಿನಲ್ಲಿ ಅವಳ ಪತ್ತೆಯಿರಲಿಲ್ಲ. ಅವಳ ಮೈಬೆವರಿನ, ಉನ್ಮಾದಗಳ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದ. ಛೇ, ನಿನ್ನೆ ರಾತ್ರಿ ಅವಳ ನಂಬರನ್ನಾದರೂ ಕೇಳಬಹುದಿತ್ತು ಎಂದು ಪರಿತಪಿಸಿದ ಆತ. ಹಾಸಿಗೆಯಿಂದೆದ್ದು ಒಳಉಡುಪನ್ನು ಧರಿಸಿ ನೀರಿನ ಬಾಟಲಿಗೆಂದು ಫ್ರಿಡ್ಜ್ ಕಡೆಗೆ … Read more

ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್

ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. … Read more

ನೆನಪಿನ ಪಯಣ – ಭಾಗ 4: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು. ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು  ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, … Read more

ಲೇಡಿ ವಿತ್ ದ ಲ್ಯಾಂಪ್: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

  ಮೇ ೧೨ ಪ್ಲಾರೆನ್ಸ್ ನೈಟಿಂಗೆಲ್ ಜನ್ಮದಿನ. ಅವಳ ಜನ್ಮದಿನದ ನೆನಪಿಗಾಗಿ ಮೇ ೬ ರಿಂದ ೧೨ ರ ವರೆಗ ನರ್ಸ್ ಗಳ ಅಂತರಾಷ್ಟ್ರೀಯ ದಿನ ಆಚರಿಸುತ್ತಾರೆ. ಇಂತಹ ಗೌರವಕ್ಕೆ ಅವಳು ಭಾಜನವಾಗಬೇಕೆಂದರೆ ಅವಳು ಯಾರು ? ಅವಳು ಮಾಡಿದ ಸಾಧನೆಯಾದರೂ, ಮಹತ್ಕಾರ್ಯವಾದರೂ ಏನೆಂದು ತಿಳಿಯುವುದು ಸೂಕ್ತ. ಸೇವೆಗೆ ಮತ್ತೊಂದು ಹೆಸರೇ ಪ್ಲಾರೆನ್ಸ್ ನೈಟಿಂಗೇಲ್! ' ಲೇಡಿ ವಿತ್ ದ ಲ್ಯಾಂಪ್ ' ಎಂದು ಪ್ರಸಿದ್ಧರಾದವರು. ಇವಳು ಶ್ರೀಮಂತ ಕುಟುಂಬದ ಹಿನ್ನೆಲೆಯವಳು. ೧೮೨೦ ಮೇ ೧೨ ರಂದು … Read more

” ಸೂಫಿ, ಪ್ರೇಮ ಮತ್ತು ಗಜಲ್ “: ಕೃಷ್ಣ ಶ್ರೀಕಾಂತ ದೇವಾಂಗಮಠ

    ಉರ್ದು, ಅರೇಬಿಕ್ ಹಾಗೂ ಪರ್ಷಿಯನ್  ಗಜಲ್ ಕಾವ್ಯ ಮತ್ತು ಹಲವು ಪ್ರಕಾರದ ಸೂಫಿ ಕಾವ್ಯಗಳು ಮೂಲದಲ್ಲಿ ಪ್ರೇಮ ಕಾವ್ಯಗಳೇ. ಅನೇಕ ಸೂಫಿಗಳು ಬರೆದಿರುವುದು ಗಜಲ್ ಪ್ರಕಾರದಲ್ಲೇ. ಕೆಲವು ಸೂಫಿಗಳು ' ಮಸನವಿ ' ಅಂದರೆ ದ್ವಿಪದಿಯಂಥ ರಚನೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಸೂಫಿಯನ್ನು ಪ್ರೇಮ ಕಾವ್ಯ ಎಂದು ಅರ್ಥೈಸುವಲ್ಲಿ ಅವರ ಪ್ರೇಮದ ತೀವ್ರ ಒಡನಾಟವಿರುವುದು ಬೇರಾರ ಮೇಲು ಅಲ್ಲಾ ಅದು ಸ್ವತಃ ಅವರ ಆರಾಧ್ಯ ದೈವ ಅಲ್ಲಾಹನ ಮೇಲೆಯೇ . ಹೀಗೆ ಸೂಫಿಯಲ್ಲಿ ಅಲ್ಲಾಹನ … Read more

“ಮಲ್ಲಿಗೆ ಮುಡಿದು ಸುಖದಿಂದುರು ಗೆಳತಿ”: ಸಿದ್ದುಯಾದವ್ ಚಿರಿಬಿ

ನಿನ್ನೊಲವಿನ ಹಸಿ ಮಳೆಗೆ, ನೆನಪುಗಳ ಅಭ್ಯುಂಜನಕೆ ಈಗ ಕೇದಿಗೆಯ ಘಮ ನಲ್ಲೆ. ಮುಂಗಾರಿನ ಮೊದಲ ಮಳೆಯ ಹನಿ ಸಿಂಚನದಿ ಇಳೆಯು ಮೆದುವಾದಂತೆ ಈ ಹೃದಯ ನಿನ್ನ ಒಲವಿ ಝಡಿ ಮಳೆಗೆ ಮೆದುವಾಗಿ ಘಮ್ಮೆನ್ನುತಿದೆ. ಪ್ರೀತಿಯ ಸಿಂಚನದ ಮಂಪರಿನಲಿ ಮನಸು ತೂಗುಯ್ಯಾಲೆಯಾಡುತಿದೆ. ಈ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಉದ್ಬವಿಸಿಬಿಡುತ್ತದೋ ತಿಳಿಯದು. ನಯನಗಳ ಮಹಲಿನಲಿ ಹೊಕ್ಕು ಗೆಜ್ಜೆಕಟ್ಟಿ ಭರತ ನಾಟ್ಯವಾಡಿಬಿಡುತ್ತದೆ. ಅದೇಷ್ಟೋ ಮೋಹಕ ನಿನ್ನಾ ನಗೆ ಮೊಗ, ಗಲ್ಲದ ಮೇಲಿನ ಆ ಹೂ ದಳ, ಪದಗಳೆ ಇಲ್ಲದೆ ಪಾದಗಳು … Read more