editor
ಹೆತ್ತ ಕರುಳು-ತಾಯ್ತನ-ಮಮತೆ: ಕೃಷ್ಣವೇಣಿ ಕಿದೂರು
ಸುಬ್ಬಕ್ಕ ಮಿಲಿಟರಿಯಲ್ಲಿದ್ದ ಮಗನಿಗೆ ಮದುವೆ ಮಾಡಿದರೂ ಸೊಸೆಯನ್ನು ಮಗನೊಂದಿಗೆ ಕಳಿಸಲೇ ಇಲ್ಲ. ವರ್ಷಕ್ಕೊಮ್ಮೆ ಎರಡು ತಿಂಗಳ ರಜಾದಲ್ಲಿ ಆತ ಬಂದಾಗ ಅವಳಿಗೆ ಗಂಡನ ದರ್ಶನ. ಅವನಿಗೂ ಅಮ್ಮ ಹೇಳುವುದರಲ್ಲಿ ತಪ್ಪೇನಿಲ್ಲವೆನಿಸುತ್ತಿತ್ತು. ಮುದುಕರು, ಇಬ್ಬರೇ ಇದ್ದಾರೆ; ಕೂಗಿ ಕರೆದರೆ ಓಗೊಡಲು ಸೊಸೆ ಇರಲಿ ಎಂದರೆ ತಪ್ಪೇನು? ರಜಾದಲ್ಲಿ ಮಗ ಬಂದರೂ ಸುಬ್ಬಕ್ಕನ ಒಂದು ಕಿವಿ ಇವರತ್ತಲೇ ಇರುತ್ತಿತ್ತು. ಸೊಸೆ ಮಗನ ಕಿವಿ ಊದಿ ಕರೆದುಕೊಂಡು ಹೋಗಲು ಹಟ ಹಿಡಿದರೆ ಎಂಬ ಭೀತಿ, ಅವರಿಬ್ಬರನ್ನು ಹತ್ತಿರವಾಗಲು ಬಿಡದಂತೆ ಕಾಯುವಂತೆ ಮಾಡಿತ್ತು. … Read more
ಬದುಕಿನೊಳಗೊಂದಾಗಿ ಬೆರೆತ ಮಂಕುತಿಮ್ಮನ ಕಗ್ಗದ ಸೊಬಗು: ಸುರೇಶ್ ಮಡಿಕೇರಿ
ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ಕೊರತೆಯೊಂದನು ನೀನು ನೆನೆನೆನೆದು ಕೆರಳಿ ಧರೆ ಎಲ್ಲವನು ಶಪಿಸಿ ಮನದಿ ನರಕವ ನಿಲಿಸಿ ನರಳುವುದು ಬದುಕೇನೋ? ಮಂಕುತಿಮ್ಮ ಇದೇನೋ ಸೂರಿ ಏನೋ ಬಡಬಡಿಸ್ತಾ ಇದ್ದೀಯಾ? ಯಾರೀ ಮಂಕುತಿಮ್ಮ? ಎಂದು ಪ್ರಶ್ನಿಸಿದ ಸ್ನೇಹಿತನ ಮೇಲೆ ಕೋಪ ಬಂದರೂ ತೋರ್ಪಡಿಸಿಕೊಳ್ಳದೆ ಏನೂ ಇಲ್ಲ ಕಣೋ ಅದು ಡಿ.ವಿ.ಜಿ ಅವರ ಕಗ್ಗ ಎಂದೆ. ಹೌದಾ, ಏನಿದರ ಅರ್ಥ ಎಂದ ಅವನಿಗೆ ನನಗೆ ತಿಳಿದ ಮಟ್ಟಿಗೆ ವಿವರಿಸಿದೆ. ಮಂಗ ತನ್ನ ಮೈಮೇಲೆ ಸ್ವಲ್ಪ ಗಾಯವಾದರೂ ಅದನ್ನು ಕೆರೆದು … Read more
ಮಾಲಿನ್ಯದ ವಿರುದ್ಧ ಧ್ವನಿ ಏರಿಸಿ…ಪರಿಸರ ಉಳಿಸಿ!!: ನಾರಾಯಣ ಬಾಬಾನಗರ, ವಿಜಾಪುರ
1972ನೇ ವರ್ಷ. ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ಸಂರಕ್ಷಣೆ, ನೈರ್ಮಲ್ಯ, ಪರಿಸರ ಮಹತ್ವವನ್ನು ಸಾರುವ ದಿನವನ್ನು ಆಚರಿಸುವ ಅಗತ್ಯವಿದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಹೀಗಾಗಿ ಪ್ರತಿ ವರ್ಷ ಜೂನ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸುವ ನಿರ್ಧಾರಕ್ಕೆ ಬರಲಾಯಿತು. ಪ್ರಪ್ರಥಮ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದು 1973 ರಲ್ಲಿ. ಪ್ರಸ್ತುತ ದಿನಗಳಲ್ಲಿಯೂ ಅದರ ಪ್ರಸಕ್ತತೆಯಿದೆ. ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯನ್ನು ಒಂದು ಕೇಂದ್ರ ವಿಷಯ ಹಾಗೂ ಒಂದು ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತದೆ. 2014 ರ ಕೇಂದ್ರ … Read more
ಏನು ಸೊಗಸಿದೀ ಮಧುರ ಸಂಬಂಧ: ಪೂರ್ಣಿಮಾ ಸುಧಾಕರ ಶೆಟ್ಟಿ
’ಸಂಬಂಧ’ ಈ ಪದವೇ ನನಗೆ ವಿಚಿತ್ರವಾಗಿ ಕಾಣುತ್ತದೆ. ಈ ಸಂಬಂಧ ಅನ್ನುವುದು ಪರಸ್ಪರರನ್ನು ಬೆಸೆಯುವ ಕೊಂಡಿಯಾಗಿ ಮಾನವನ ಜೀವನದಲ್ಲಿ ಮಹತ್ತರವಾದ ಪ್ರಭಾವ ಬೀರುತ್ತದೆ. ಜೀವನದಲ್ಲಿ ಭಾವ ಬಂಧಗಳ ಅನ್ಯೋನ್ಯತೆಯ ಗೂಡು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ಹೀಗಿರುವಾಗ ನನ್ನನ್ನು ಅನೇಕ ಸಲ ಕಾಡಿದ, ಕಾಡುತ್ತಿರುವ ಪ್ರಶ್ನೆ ಅಂದರೆ ಸಂಬಂಧ ಅಂದರೇನು? ಸಂಬಂಧಿಕರು ಯಾರು? ಇತ್ಯಾದಿ. ನಾವು ಇವರು ನಮ್ಮ ಸಂಬಂಧಿಕರೆಂದು ಕರೆಯುವುದು ನಮ್ಮ ರಕ್ತ ಸಂಬಂಧಿಗಳನ್ನು. ಹಾಗಿದ್ದರೆ ನಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ಪ್ರಾಮುಖ್ಯತೆ ಪಡೆಯುವ ಇತರರು ನಮ್ಮ ಸಂಬಂಧಿಕರಲ್ಲವೇ?. … Read more
ಒಂದು ಬಸ್ಸಿನ ಕಥೆ: ಅನಿತಾ ನರೇಶ್ ಮಂಚಿ ಅಂಕಣ
ಆಗಷ್ಟೇ ಕಣ್ಣಿಗೆ ನಿದ್ದೆ ಹಿಡಿಯುತ್ತಿತ್ತು. ಹತ್ತಿರದ ಮಂಚದಲ್ಲಿ ಮಲಗಿದ್ದ ಗೆಳತಿ ’ಗಂಟೆ ಎಷ್ಟಾಯಿತೇ’ ಎಂದಳು. ಪಕ್ಕದಲ್ಲಿದ್ದ ಟಾರ್ಚನ್ನು ಹೊತ್ತಿಸಿ ’ಹತ್ತೂವರೆ’ ಎಂದೆ. ’ನಾಳೆ ಬೇಗ ಎದ್ದು ಬಸ್ಸಿಗೆ ಹೋಗ್ಬೇಕಲ್ಲ .. ಬೇಗ ಮಲಗು’ ಎಂದಳು. ಸಿಟ್ಟು ಒದ್ದುಕೊಂಡು ಬಂತು. ಮಲಗಿದ್ದವಳನ್ನೇ ಏಳಿಸಿ ಬೇಗ ಮಲಗು ಅನ್ನುತ್ತಾಳಲ್ಲಾ ಇವಳು ಅಂತ. ಮಾತಿಗೆ ಮಾತು ಬೆಳೆಸಿದರೆ ಇನ್ನೂ ಬರಬೇಕಿದ್ದ ನಿದ್ದೆಯೂ ಹಾರಿ ಹೋದರೆ ಎಂದು ಹೆದರಿ ಮತ್ತೆ ಕಣ್ಣಿಗೆ ಕಣ್ಣು ಕೂಡಿಸಿದೆ. ಬೇಕಾದ ಕೂಡಲೇ ಓಡಿ ಬಂದು ಆಲಂಗಿಸಲು ಅದೇನು … Read more
ಮೂರು ಕವಿತೆಗಳು: ಕುಮಲೇಶ ಗೌಡ, ಈಸೋಪ, ರಮೇಶ್ ನೆಲ್ಲಿಸರ
ಸಾವು ಕಣ್ರೆಪ್ಪೆಗಳನ್ನ ತೆರೆದು ನೋಡಿದರೆ ಬೆಳಕನ್ನ ನೋಡಲಾಗದೆ ಮುಚ್ಚಿಕೊಂಡವು ಪ್ರಯಾಸದಿಂದ ತೆರೆದ ಕಣ್ಣನ್ನ ಅವನನ್ನ ಬಿಗಿದು ಕಟ್ಟಲಾಗಿತ್ತು ಊರಾಚೆಗಿನ ಬಟಾಬಯಲಿನ ಮಧ್ಯೆ ಮರವೊಂದಕ್ಕೆ ನಿರ್ಜನ ಪ್ರದೇಶದಲ್ಲಿ ಸುತ್ತಲೂ ಬಿದ್ದಿದ್ದ ಹಿಡಿಗಾತ್ರದ ಕಲ್ಲುಗಳು ಅವನ ಮೈಗೆ ತಾಕಿ ಕೆಳಬಿದ್ದವಾಗಿದ್ದವು ರಕ್ತ ಹೊರಬಂದು ಹೆಪ್ಪುಗಟ್ಟಿತ್ತು ಗಾಯಗಳಿಂದ ತುಟಿಗಳೊಣಗಿತ್ತು ಮುಖದಲ್ಲಿ ಜೀವವಿದೆಯಾ ಇನ್ನೂ ಅನ್ನುವಂತ ನಿರ್ಜೀವವಾದ ಭಾವ ಸುತ್ತಲೂ ನೋಡಿ ಒಮ್ಮೆ ಯಾರೂ ಕಾಣದಾದಾಗ ನೆನಪು ಮಾಡಿಕೊಳ್ಳಲು ಶುರುಮಾಡಿದ ತನ್ನೀ ಪರಿಸ್ಥಿತಿಗೆ!! ಕಾರಣ! ಇನ್ನೂ …….ಅದೆ..! ಐ….ಕ..!! –ಕಮಲೇಶ ಗೌಡ … Read more
ಭರ್ಜರಿ ಸಿನಿಮಾ ಬಹದ್ದೂರ್: ಪ್ರಶಸ್ತಿ
ಮಂಗಳವಾರನೇ ಫ್ರೆಂಡ್ ಹೇಳಾಗಿತ್ತು. ಈ ಶನಿವಾರ ಅಥ್ವಾ ಭಾನುವಾರ ಒಂದು ಮೂವಿಗೆ ಹೋಗ್ಬೇಕಂದಿದ್ದ. ಅದ್ರಲ್ಲೇನಿದೆ ದೊಡ್ ವಿಷ್ಯ. ಪ್ರತೀವಾರ ಒಂದೊಂದು ಹೊಸ ಸಿನಿಮಾ ಬರುತ್ತಿರುತ್ತೆ. ಅದ್ರಲ್ಲೂ ಇದು ಬೆಂಗ್ಳೂರು. ಇಲ್ಲಿ ತೆಲುಗು, ತಮಿಳು, ಹಿಂದಿ, ಇಂಗ್ಲೀಷು, ಮಲೆಯಾಳಿ ಅಥ್ವಾ ಅವುಗಳದ್ದೇ ರಿಮೇಕಾದ ಯಾವ್ದ್ರಾದ್ರೂ ಚಿತ್ರ ಯಾವಾಗ್ಲೂ ಓಡ್ತಿರತ್ತೆ ! ಅದ್ರಲ್ಲೊಂದಕ್ಕೆ ಹೋಗೋದ್ರಲ್ಲೇನಿದೆ ವಿಶೇಷ ಅಂದ್ರಾ ? ಅಲ್ಲೇ ಇದ್ದಿದ್ದು ಫ್ರೆಂಡ್ ಹೇಳ್ತಾ ಇದ್ದಿದ್ದು ಈ ವಾರಕ್ಕೆ ಎರಡನೇ ವಾರ ಮುಗಿಸಿದ ಕನ್ನಡದ ಸ್ವಮೇಕ್ ಸಿನಿಮಾ ಬಹಾದ್ದೂರ್ ಬಗ್ಗೆ 🙂 … Read more
ಗಡುವು ದಾಟಿದ ಪ್ರೀತಿ ಗಡಿ ದಾಟದ ಬದುಕು: ಅಮರ್ ದೀಪ್ ಪಿ.ಎಸ್.
ಇಂದಿಗೆ ಸರಿಯಾಗಿ ಎದೆಯಲ್ಲಿ ಒಂದು ಬಾಗಿಲು ಶಾಶ್ವತವಾಗಿ ಮುಚ್ಚಿ ಬರೋಬ್ಬರಿ ಹತ್ತೊಂಬತ್ತು ವರ್ಷ. ಅದರೊಂದಿಗೆ ಒಂದು ಸುಂದರವಾದ ನೆನಪಿನ ಬಿಳಿ ಗೋಡೆ ಮತ್ತು ಅದೊರೊಳಗಿನ ಖಾಲಿ ಖಾಲಿ ಭಾವನೆ. ನನಗೊಬ್ಬನಿಗೆ ಕಾಣಿಸುವಂತೆ ಭಾಸ. ಅದಕ್ಕೆ ಪ್ರತಿ ನಿತ್ಯ ನೀರು, ಗೊಬ್ಬರ ಹಾಕಬೇಕಿಲ್ಲ. ಬರಿಯ ಪ್ರೀತಿಯ ಮೆಚ್ಚುಗೆಯ ಪದವೊಂದನ್ನು ಎದೆಯೊಳಗೆ ಇಳಿ ಬಿಟ್ಟರೆ ಸಾಕು; ಅಲ್ಲೊಂದು ಬುಗ್ಗೆಯಂಥ ಮೊಗ್ಗು ಬೆಳೆಯುತ್ತದೆ. ದಿನವೂ ಬಂದು ಬಾಗಿಲಿಂದ, ಕಿಟಕಿಯೊಳಗಿಂದ ಇಣುಕಿ, ಕರೆದು ತಮ್ಮನ್ನು ಬಿತ್ತರಿಸಿಕೊಳ್ಳುವ ನಕ್ಷತ್ರಗಳಿಗೆ ಇಂದಿನ ರಾತ್ರಿಯ ಸಾಲು ಹಬ್ಬ. … Read more
ಗೆಲುವೋ? ಸೋಲೋ?: ಅಖಿಲೇಶ್ ಚಿಪ್ಪಳಿ
ಬಹುಶ: ನನಗಾಗ ನಾಲ್ಕೈದು ವರ್ಷಗಳಿರಬಹುದು. ಅಮ್ಮನ ಜೊತೆ ಅಜ್ಜನ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ. ಆ ಊರಿನಲ್ಲಿ ಆಗ ಮಾರಿಜಾತ್ರೆಯ ಸಂದರ್ಭ. ಮಾರಿಜಾತ್ರೆಯೆಂದರೆ, ಬೆಳಗಿನ ಜಾವವೇ ಶುರುವಾಗುತ್ತದೆ. ಅದೇಕೋ ಗೊತ್ತಿಲ್ಲ ಗಾಢ ನಿದ್ದೆಯಲ್ಲಿದ್ದ ನನ್ನನ್ನೂ ಎಬ್ಬಿಸಿಕೊಂಡು ಮಾರಿಜಾತ್ರೆಗೆ ಕರೆದುಕೊಂಡು ಹೋದರು. ಅಜ್ಜನ ಮನೆಯ ಎದುರುಭಾಗದಲ್ಲಿರುವ ಆಚೆಕೇರಿಯಲ್ಲಿ ಮಾರಿಹಬ್ಬದ ಆಚರಣೆ. ಕತ್ತಲಲ್ಲಿ ತೋಟವಿಳಿದು ಆಚೆಕಡೆ ಹೋಗಬೇಕು. ಟಾರ್ಚ್ ಹಿಡಿದ ಯಾರೋ ಮುಂದೆ ಹೋಗುತ್ತಿದ್ದರು. ನನ್ನನ್ನು ಯಾರೋ ಎತ್ತಿಕೊಂಡಿದ್ದರು. ಆ ವಿವರಗಳು ನೆನಪಿನಲ್ಲಿ ಇಲ್ಲ. ಮಾರಿಜಾತ್ರೆ ನಡೆಯುವ ಸ್ಥಳ ತಲುಪಿದೆವು. ಆಗ … Read more
ಸಾಮಾನ್ಯ ಜ್ಞಾನ (ವಾರ 49): ಮಹಾಂತೇಶ್ ಯರಗಟ್ಟಿ
ಪ್ರಶ್ನೆಗಳು: ೧. ಇತ್ತೀಚಿಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೨. ಇತ್ತೀಚಿಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು? ೩. ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ? ೪. ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ? ೫. ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು? ೬. ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು? ೭. ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ … Read more
ಒಂದು ಹಲ್ಲಿಯ ಕತೆ: ಪ್ರಸನ್ನ ಆಡುವಳ್ಳಿ
ಇತಿಹಾಸದ ಈ ದಂತಕತೆ ನಿಮಗೆ ಗೊತ್ತಿರಲಿಕ್ಕೂ ಸಾಕು: ಮರಾಠರ ಇತಿಹಾಸದಲ್ಲಿ ಶಿವಾಜಿಯಷ್ಟೇ ಹಿರಿಮೆ ಆತನ ಸೇನಾಪತಿ ತಾನಾಜಿಗೂ ಇದೆ. ಈತ ಶಿವಾಜಿಯ ಬಲಗೈ ಬಂಟ, ಅಪ್ರತಿಮ ಸಾಹಸಿ. ಪುರಂದರಗಢ, ಪ್ರತಾಪಗಢ, ಕೊಂಡಾಣಾ ಕೋಟೆಗಳನ್ನು ಶಿವಾಜಿಯ ವಶಕ್ಕೊಪ್ಪಿಸುವಲ್ಲಿ ಈತನ ಪಾತ್ರ ಮಹತ್ವದ್ದು. ಇದು ತಾನಾಜಿಯ ಕೊನೆಯ ಹೋರಾಟದ ಕತೆ. ಅದು ಕ್ರಿ.ಶ. ೧೬೭೦ರ ಚಳಿಗಾಲದ ಒಂದು ದಿನ. ಪುಣೆಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿರುವ ಕೊಂಡಾಣಾ ಕೋಟೆ ಆಗ ಮೊಘಲರ ಒಡೆತನದಲ್ಲಿತ್ತು. ಸಹ್ಯಾದ್ರಿ ಬೆಟ್ಟಗಳ ತುದಿಯಲ್ಲಿದ್ದ ದುರ್ಗಮ ಕೋಟೆಗೆ … Read more
ಸುಳಿವ ಗಾಳಿಯ ಶಬ್ದ ಹಿಡಿದು: ನಾಗರಾಜ್ ಹರಪನಹಳ್ಳಿ
‘ನಮಸ್ತೆ’ ಅವಳು ‘ಎಫ್ ಬಿ’ ಯಲ್ಲಿ ಕಳಿಸಿದ ಮೊದಲ ಶಬ್ದ ಸಂದೇಶವಿದು. ನಾನು ಕುತೂಹಲದಿಂದಲೇ ಪ್ರತಿಕ್ರಿಯಿಸಿದೆ ಕೊಂಚ ಉತ್ಸುಕನಾಗಿ. ‘ಹಾಯ್ ’ ‘ಥ್ಯಾಂಕ್ಸ ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ’ ‘ ನನ್ನ ಫ್ರೆಂಡ್ ಪೋಟೋ ಒಂದಕ್ಕೆ ನಾನು ಕಮೆಂಟ್ ಹಾಕಿದ್ದು ನಿಮಗೆ ಇಷ್ಟವಾಗಿ, ನೀವು ಲೈಕ್ ಒತ್ತಿದ್ದಿರಿ. ನಾನು ಕುತೂಹಲದಿಂದ ನಿಮ್ಮನ್ನ ಪರಿಚಯ ಮಾಡಿಕೊಳ್ಳಕ್ಕೆ ಮುಂದಾದೆ ನೋಡಿ. ಹಾಗಾಗಿ ಈ ಗೆಳೆತನ ಅಂದೆ. ‘ಅವರು ನಿಮಗೆ ಗೊತ್ತಾ’ ಅಂತ ಅವಳು ಕೇಳಿದ್ಲು. ‘ತೀರಾ ಪರಿಚಿತರೇನಲ್ಲ. ಎಫ್ … Read more
ಮೊದಲ ಚು೦ಬನ ದ೦ತ ಭಗ್ನ: ಆದರ್ಶ ಸದಾನ೦ದ ಅರ್ಕಸಾಲಿ
"ಪಕ್ಷಿವೀಕ್ಷಣೆ ಭಾಗ ೨ " ಇಲ್ಲಿಯವರೆಗೆ ಅಲ್ಲಿ೦ದ ಒ೦ದಿಷ್ಟು, ಇಲ್ಲಿ೦ದ ಒ೦ದಿಷ್ಟು ಅ೦ದ್ರೆ ಮಾಹಿತಿ ಜಾಲದಿ೦ದ ಒ೦ದಿಷ್ಟು ಮತ್ತು ಪುಸ್ತಕಗಳಿ೦ದ ಒ೦ದಿಷ್ಟು 'ಪಕ್ಷಿ ವೀಕ್ಷಣೆಗೆ' ಸ೦ಭ೦ದಿಸಿದ ಮಾಹಿತಿ ಕಲೆ ಹಾಕಿ ಆಯಿತು. ಹಳೇ ದುರ್ಬಿನ್ನು ಮತ್ತು ಕ್ಯಾಮೆರಾ ಹೊರತೆಗೆದಿಟ್ಟಾಯ್ತು, ಇನ್ನು ಬೆಳಿಗ್ಗೆ ಬೇಗನೇ ಎದ್ದು ಮನೆಯಿ೦ದ ಹೊರಬೀಳಬೇಕು. ಯಾವ ಪಕ್ಷಿ ಅ೦ತಲ್ಲ, 'ಪಸ್ಟ್ ಕಮ್ ಪಸ್ಟ್ ಸೆರ್ವೆಡ್' ಥರಾ, ಯಾವ್ದು ನನ್ನ ಕಣ್ಣಿಗೆ ಮೊದಲು ಬೀಳೋ ಪುಣ್ಯ ಮಾಡಿತ್ತೋ, ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವಾ ಅ೦ಥ ತೀರ್ಮಾನಿಸಿದೆ. … Read more
ಒಬ್ಬ ನಟನ ಸುತ್ತ: ಹೃದಯಶಿವ
ಟಾಮ್ ಹಾಂಕ್ಸ್ ಕ್ಯಾಲಿಫೋರ್ನಿಯಾದ ಪ್ರತಿಭಾವಂತ. ಈತ ಜನಿಸಿದ್ದು 1956ರಲ್ಲಿ. ಆವರೆಗೆ ಹಾಲಿವುಡ್ ಕಂಡರಿಯದ ವಿಶಿಷ್ಟ ನಟ ಎನಿಸಿಕೊಂಡ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಆತನ ಬದುಕು ನಿಜಕ್ಕೂ ರೋಮಾಂಚಕ. ಟಾಮ್ ಹಾಂಕ್ಸ್ ಅಡುಗೆಭಟ್ಟನೊಬ್ಬನ ಮಗ; ಜೊತೆಗೆ ರೆಸ್ಟೋರೆಂಟ್ ಮ್ಯಾನೇಜರಾಗಿಯೂ ಕೆಲಸ ಮಾಡುತ್ತಿದ್ದಾತ. ಬರಹಗಾರನಾಗಬಯಸಿದ್ದ ಟಾಮ್ ತಂದೆ ಅಡುಗೆಭಟ್ಟನಾಗಿ ಬದುಕು ಸವೆಸಿದರೂ ಸಾಯುವ ಮುನ್ನ ತನ್ನ ಅಪ್ರಕಟಿತ ಆತ್ಮಚರಿತ್ರೆ ಬರೆದಿದ್ದ. ಟಾಮ್ ನ ತಾಯಿ ಆಸ್ಪತ್ರೆಯೊಂದಲ್ಲಿ ಕೆಲಸಕ್ಕಿದ್ದವಳು. ಹೀಗಿರಲು ಟಾಮ್ ಹಾಂಕ್ಸ್ ಗೆ ಅಚ್ಚರಿ ಕಾದಿತ್ತು. ಬೆಸೆದ ಹಸ್ತಗಳಂತಿದ್ದ … Read more
ಗೂಡು ಕಟ್ಟುವ ಸಂಭ್ರಮದಲ್ಲಿ: ಶ್ರೀದೇವಿ ಕೆರೆಮನೆ
ಮನೆಯ ಮುಂದಿನ ಬಟ್ಟೆ ಒಣ ಹಾಕುವ ತಂತಿಗೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಹಳದಿ ಕಪ್ಪು ಬಣ್ಣ ಮಿಶ್ರಿತ ಪುಟ್ಟ ಹಕ್ಕಿಯೊಂದು ಗೂಡು ಕಟ್ಟಲು ಬರುತ್ತಿತ್ತು. ಅದರ ಪುಟ್ಟ ಚುಂಚಿನಲ್ಲಿ ಇಷ್ಟಿಷ್ಟೆ ಕಸ ಕಡ್ಡಿ, ಮರದ ತೊಗಟೆ, ಒಣಗಿದ ಎಲೆ ಎಲ್ಲವನ್ನೂ ಕಚ್ಚಿಕೊಂಡು ಬಂದು ಆ ಗೂಡಿಗೆ ಅಂಟಿಸುತ್ತಿತ್ತು. ಅದರ ಪುಟ್ಟ ಬಾಯಿಗೆ ನಿಲುಕುತ್ತಿದ್ದುದೆಷ್ಟೋ… ಕಚ್ಚಿಕೊಂಡು ಹಾರಿ ಬರುವಾಗ ಅದರ ಬಾಯಲ್ಲಿ ಇರುತ್ತಿದ್ದುದು ಎಷ್ಟೋ… ಗೂಡಿಗೆ ಅಂಟಿಸುವಾಗ ಕೆಳಗೆ ಬೀಳದೇ ಅಂಟಿಕೊಳ್ಳುತ್ತಿದ್ದುದು ಎಷ್ಟೋ… ಒಟ್ಟನಲ್ಲಿ ನಿಮಿಷಕ್ಕೆ … Read more
ಮಾರ್ನೆಮಿ: ಭರತೇಶ ಅಲಸಂಡೆಮಜಲು.
ಪಿಲಿ, ಕೊರಗೆ, ಕರಡಿ, ಸಿಂಹ ನಲಿತೋಂತಲ್ಲಗೆ, ಪುರಿ ಬಾಲೆ, ಜೆತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್‍ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ ಬತ್ತಂಡ್ ಮಾರ್ನೆಮಿ ನಡತ್ತೊಂದು, ನಲಿತೊಂದು….. ತುಳುನಾಡಿನಲ್ಲಿ ನವರಾತ್ರಿ, ದಸರಾಕ್ಕಿಂತ ಚಿರಪರಿಚಿತವಾಗಿ ಮಾರ್ನೆಮಿಯೆಂಬ ಹೆಸರಿನಿಂದ ದುರ್ಗೆಯರನ್ನು ಪೂಜಿಸಲಾಗುತ್ತದೆ. ಮಾರ್ನೆಮಿ ಅಂದ ಕೂಡಲೇ ಈ ಭಾಗದ ಅಬಾಲರಿಂದ ವೃದ್ಧ ಜನರ ಮೈ ಪುಳಕಗೊಳ್ಳುತ್ತದೆ ಮನ ಆರಳುತ್ತದೆ. ೯ದಿನಗಳ ಕಾಲ ಭರಪೂರ ಮನರಂಜನೆ. ದೇವರು, ಪ್ರಾಣಿ, ಜನಾಂಗಗಳಿಗೆ ವೇಷದ ಮೂಲಕ ಅರ್ವಿಭಾವಗೊಳಿಸಿ ಆ ತೆರದಲ್ಲಿ … Read more
ಸುಸಂಸ್ಕೃತ ಪರಂಪರೆ ನೆನಪಿಸಿದ ’ಹೇಮರೆಡ್ಡಿ ಮಲ್ಲಮ್ಮ’ : ಹಿಪ್ಪರಗಿ ಸಿದ್ಧರಾಮ
ಇತ್ತೀಚೆಗೆ (೧೭-೦೯-೨೦೧೪) ಧಾರವಾಡದಲ್ಲಿ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳ ನಾಲ್ಕನೇಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ನಲವಡಿ ಶ್ರೀಕಂಠಶಾಸ್ತ್ರಿಗಳ ’ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನು ಪ್ರದರ್ಶನ ನಡೆಯಿತು. ಕಳೆದ ಶತಮಾನದಲ್ಲಿ (೧೯೩೭) ಆರಂಭಗೊಂಡ ಪುರುಷ ಕಲಾವಿದರು (ಮಹಿಳಾ ಕಲಾವಿದರಿಲ್ಲದ) ಮಾತ್ರ ಇರುವ ವಿಶ್ವದ ಏಕೈಕ ವೃತ್ತಿ ನಾಟಕ ಕಂಪನಿಯೆಂದು ಹೆಸರಾಗಿರುವ ಗದುಗಿನ ಶ್ರೀಕುಮಾರೇಶ್ವರ ಕೃಪಾಪೋಷಿತ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ಗತಕಾಲದ ರಂಗವೈಭವ ನೆನಪಿಸುವಂತೆ ಅಭಿನಯಿಸಿದರು. ಆಧುನಿಕ ಕಾಲದ ಹಲವಾರು ಮಾಧ್ಯಮಗಳ ಎದುರು ನಾಟಕ ಕಂಪೆನಿಗಳು ನೇಪಥ್ಯಕ್ಕೆ ಸರಿದು … Read more