ಗೋಪಾಲಾ …. ಗೋಪಾಲಾ…: ಅಮರ್ ದೀಪ್ ಪಿ.ಎಸ್.

ಬಳ್ಳಾರಿಯ ಕಾಳಮ್ಮ ಬೀದಿಯಿಂದ ಪಶ್ಚಿಮಕ್ಕೆ ಬಂದರೆ, ರಾಜರಾಜೇಶ್ವರಿ ಸಿನೆಮಾ ಥೀಯೇಟರ್.   ಮುಂದೆ ಮೋತಿ ವೃತ್ತ. ಥೀಯೇಟರ್ ಎದುರಿಗೆ ಬಹುಮಹಡಿ ಹೋಟಲ್ಲೊಂದರ ಕಾಮಗಾರಿ ನಡೆಯುತ್ತಿದೆ.  ಸಂಜೆ ಸಿನೆಮಾ ನೋಡಿ ಹೊರ ಬಂದವರು, ಸೆಕೆಂಡ್ ಷೋಗೆ ಹೋಗುವವರ ಜಂಗುಳಿ.  ಕತ್ತಲಲ್ಲಿ ಎದ್ದು ಕಾಣುವಂಥ ಮಲ್ಲಿಗೆಯ ಸರ ತಲೆಯಿಂದ ಎಳೆದು ಎದೆ ಮೇಲೆ ಬಿಟ್ಟುಕೊಂಡು ಒಂದೊಂದೇ ಪಕ್ಕಳೆಯನ್ನು ಕಿತ್ತುತ್ತಾ, ಮುಸುತ್ತಾ ಆಕರ್ಷಿಸುವ ಒಂದಿಷ್ಟು ನಿತ್ಯ ಮುತ್ತೈದೆಯರು.   ಅಲ್ಲಲ್ಲಿ ಕಣ್ಣಾಡಿಸುತ್ತಲೇ ತಿರುಗುವ ವಿಟರು. ಗದ್ದಲದಲ್ಲೇ ಕೈ ಚಳಕ ತೋರಿಸಿ ಜೇಬು … Read more

ಅಡುಗೆಯ ಅವಾಂತರಗಳು: ಸ್ಮಿತಾ ಅಮೃತರಾಜ್

ಅಡುಗೆ ಮಾಡುವುದರಲ್ಲಿ ನಮ್ಮ ಗೃಹಿಣಿಯರು ಎಷ್ಟೇ ಪಳಗಿದರೂ, ಪರಿಣಿತಿಯನ್ನು ಪಡೆದುಕೊಂಡರೂ ಕೆಲವೊಮ್ಮೆ ಗಡಿಬಿಡಿಯಲ್ಲಿ ಅಡುಗೆ ತಯಾರು ಮಾಡುವಾಗ ಎಡವಟ್ಟಾಗಿ ಪಾಕವೇ ಬದಲಾಗಿ ಹೊಸ ರುಚಿಯೇ ಉದ್ಭವಗೊಳ್ಳುವಂತಹ ಪರಿಸ್ಥಿತಿಗಳು ಬಂದೊದಗಿ ಬಿಡುತ್ತದೆ. ಬಹುಷ; ಇದಕ್ಕೆ ಯಾವ ಮನೆಯಾಕೆಯೂ ಹೊರತಾಗಿಲ್ಲ ಅನ್ನಿಸುತ್ತೆ.  ಮೊದ ಮೊದಲೆಲ್ಲಾ ತೀರಾ ಸಾಂಪ್ರದಾಯಿಕ ಅಡುಗೆಗಳು. ಹಾಗಾಗಿ ಇಂತಿಂತ ಖಾದ್ಯಕ್ಕೆ ಇಂತಿಂತದೇ ರುಚಿ ದಕ್ಕುತ್ತದೆ ಅಂತ ಕರಾರುವಕ್ಕಾಗಿ ಹೇಳಿ ಬಿಡಬಹುದಾಗಿತ್ತು. ಅಡುಗೆ ಮಾಡುವಾಗ ಸಾಕಷ್ಟು ಏಕಾಗ್ರತೆಯನ್ನು ಮೈಗೂಡಿಸಿ ಕೊಳ್ಳಬೇಕಾಗಿತ್ತು. ಮನಸ್ಸು ಕೊಂಚ ವಿಚಲಿತವಾಗಿ ಹಾಕುವ ಸಾಮಾಗ್ರಿ ತುಸು … Read more

ಪ್ರೀತಿ, ಪ್ರೇಮ, ಪ್ರಣಯ: ಗಣೇಶ್ ಖರೆ

೧. ನನಗಾಗ ಹದಿನೆಂಟು, ಅವಳಿಗೋ ಹದಿನೈದಿರಬಹುದು. ನೋಡಲು ಸುರಸುಂದರಿ. ಇನ್ನೇನು ಬೇಕು ಪ್ರೇಮಾಂಕುರವಾಗಲು? ನಮ್ಮ ಪ್ರೇಮಕ್ಕೆ ಕೆಲ ವರುಷಗಳೇ ಕಳೆದವು, ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು, ನನ್ನ ನೋಡಿದಾಗೆಲ್ಲ ಅವಳು ಬೀರುವ ಮುಗುಳ್ನಗೆಯೇ ಅದಕ್ಕೆ ಸಾಕ್ಷಿ. ಒಬ್ಬರಿಗೊಬ್ಬರು ಎಂದೂ ಪ್ರೇಮದ ಪ್ರಸ್ತಾಪವನ್ನು ಮಾಡಲಿಲ್ಲ. ಕೊನೆಗೆ ನಾನೇ ಮಡಿದೆ, ಅವಳಿಗೆ ಗುಲಾಬಿ ಕೊಟ್ಟಾಗ ನನಗೆ ವಯಸ್ಸು ಇಪ್ಪತ್ತೈದು. ಗುಲಾಬಿ ಪಡೆದು ನಾಚಿ ನಡೆದಿದ್ದಳು, ಅವಳ ಸಮ್ಮತಿ ಕಣ್ಣಲ್ಲೇ ವ್ಯಕ್ತಪಡಿಸಿದ್ದಳು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಅವಳಿಗೆ ಗುಲಾಬಿ ಅರ್ಪಿಸುತ್ತಿದ್ದೇನೆ. … Read more

ಮೂವರ ಕವಿತೆಗಳು

 ನನ್ನ ಅಪ್ಪ ಅಪ್ಪ ಶಬ್ದ ಕೇಳಿದಾಗ ನೆನಪಾಗುವ, ಮೊದಲ ಪ್ರಿಯ ದೇವರು ನೀವು, ನನ್ನ ಬಾಳ ಬಲಹೀನ ಕ್ಷಣಗಳ ಮಳೆಗೆ, ಬಲಿಷ್ಟವಾದ ಆಸರೆಯ ಕೊಡೆ ನೀವು, ನನ್ನ ಎದೆಯ ವೈಭವ ಗೋಪುರದ, ಹೆಮ್ಮೆಯ ಸುವರ್ಣ ಕಳಸವು ನೀವು, ನನ್ನ ಜೀವನದ ಹುಡುಕಾಟದ ಗುರಿ, ನಿಮ್ಮ ಮೊಗದ ಚಿರು ನಗುವಿನಲ್ಲಿ ಅಡಗಿರುವುದು, ನಿಮ್ಮ ಕರುಣೆಯ ಆಳವನು ಹೇಗೆ ಅರಿಯಲಿ, ಅದು ನನಗೆ ಚಿದಂಬರ ರಹಸ್ಯವಾಗಿದೆ. –ಬಿ.ಸಿ.ಪ್ರಮೋದ. ಎಮ್.ಟೆಕ್. ಎನ್.ಐ.ಟಿ.ಕೆ. ಸುರತ್ಕಲ.           ಅವಳು….??? … Read more

ತಿರಸ್ಕಾರ (ಭಾಗ 1): ಜೆ.ವಿ.ಕಾರ್ಲೊ, ಹಾಸನ

ಮೂಲ: ಡಬ್ಲ್ಯು. ಸಾಮರ್ಸೆಟ್ ಮ್ಹಾಮ್. ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ (ಬ್ರಿಟಿಶ್ ಲೇಖಕ ಡಬ್ಲ್ಯು. ಸಾಮರ್ಸೆಟ್ ಮ್ಹಾಮ್ (೧೮೭೪-೧೯೬೫) ಹುಟ್ಟಿದ್ದು ಪ್ಯಾರಿಸಿನಲ್ಲಿ. ತನ್ನ ಕುಟುಂಬದ ಸಂಪ್ರದಾಯದಂತೆ ಅವನು ವೃತ್ತಿಯಲ್ಲಿ ವಕೀಲನಾಗಬೇಕಿತ್ತು. ಹುಟ್ಟಿನಿಂದಲೇ ತೊದಲುವಿಕೆಯ ಕಾರಣಗಳಿಂದ ಅವನು ವಕೀಲನಾಗಲಿಲ್ಲ. ಹತ್ತು ವರ್ಷಗಳಲ್ಲೇ ಅನಾಥನಾದ್ದರಿಂದ ಅವನನ್ನು ಅವನ ಚಿಕ್ಕಪ್ಪ ಇಂಗ್ಲೆಂಡಿನಲ್ಲಿ ಸಾಕಿದರು. ಅವನು ಕಲಿತದ್ದು ವೈಧ್ಯ ಶಿಕ್ಷಣವಾದರೂ ಅವನ ಆಸಕ್ತಿ ಸಾಹಿತ್ಯದಲ್ಲಿತ್ತು. ಲೇಖಕನಾಗಿ ಹೆಸರು, ಹಣ ಗಳಿಸಲು ಅವನಿಗೆ ಬಹಳಷ್ಟು ವರ್ಷಗಳೇ ಹಿಡಿದವು. ಕಾದಂಬರಿಕಾರನಾಗಿ, ಸಣ್ಣ ಕತೆಗಾರನಾಗಿ ಹೆಸರುಗಳಿಸುವ ಮೊದಲು ಅವನು … Read more

ಹೋಳಿ ಹುಣ್ಣಿಮೆಯ ಬಣ್ಣ,ಬಣ್ಣ ನೆನಪುಗಳು…!: ನಾರಾಯಣ ಬಾಬಾನಗರ

ಇಲ್ಲಿಯವರೆಗೆ ‘’ಹೋಗಿ ಹೋಗಿ ಈಗ್ಯಾಕ ಹೋಳಿ ಹುಣ್ಣಿವಿ ನೆಪ್ಪ ತಗದಾನ ಈ ಆಸಾಮಿ..’’ಅಂತ ಮನಸಿನ್ಯಾಗ ಗೊಣಗಬ್ಯಾಡ್ರಿ…ನನಗೂ ಗೊತ್ತೈತಿ ಹೋಳಿ ಹುಣ್ಣಿವಿ ಬರೂದು ಇನ್ನಾ ಭಾಳ ಮುಂದ ಐತೆನ್ನೂದು.ಹುಸೇನಿ ನೆನಪಾದ ಕೂಡಲೆ ಅಂವಾ ಭಾಗವಹಿಸಿದ ಹೋಳಿ ಹುಣ್ಣಿವಿ ನೆನಪಾಗತೈತಿ…ಅದರ ಹಿಂದ್ಹಿಂದ್ಹ ಹೋಳಿ ಹುಣ್ಣಿವಿಯ ನೆನಪುಗಳು ಕುಣಕೋತ ಮನದಾಗ ತೇಲಿ ಹೋಗತಾವ… ಹೋಳಿ ಹುಣ್ಣಿವಿ ಹಿಂದಿನ ಅಮಾಸಿ(ಆ ಅಮಾಸಿಗಿ ಏನಂತ ಹೆಸರೈತೋ…ನೆನಪಾಗೊಲ್ಲತು…ಅದನ್ನ ಕಾಮಣ್ಣನಿಗೆ ಬಿಟ್ಟು ಬಿಡೂಣಂತ)ಕಳದು ಚಂದ್ರಾಮನೆಂಬೋ ಚಂದ್ರಾಮ ಯಾವಾಗ ಮುಗಿಲಿನಾಗ ಹಣಿಕಿ ಹಾಕಿದನೋ,ಹಲಿಗಿಗಳು ಹೊರ ಬಂದು ಸಪ್ಪಳಾ ಮಾಡಾಕ … Read more

ನಶೆಯ ನಿಶೆಯಲ್ಲಿ: ಪ್ರಶಸ್ತಿ.ಪಿ,

ಕಿಟಕಿಯ ಕಂಬಿಗಳಿಗೆ ಒಣಗಿಸಿದ ಕರ್ಚೀಪು, ಟವೆಲುಗಳ ಸಂದಿಯಿಂದಲೇ ಇಣುಕಿದ್ದ ಸೂರ್ಯ, ಬಂಡೆಗಳ ಬಿರುಕಲ್ಲೇ ಅರಳೋ ನ್ಯಗ್ರೋಧದಂತೆ. ಅಲಾರಮ್ಮನ್ನೇ ಮೂರು ಬಾರಿ ಮಲಗಿಸುತ್ತಿದ್ದ ಆ ಮಲಗುವೀರನ ಕಷ್ಟಪಟ್ಟು ಎಬ್ಬಿಸುತ್ತಿದ್ದ ನಿತ್ಯದ ಆ ಸೂರ್ಯರಶ್ಮಿಗಳಿಗೂ ಅಂದ್ಯಾಕೋ ಆತ ಮಲಗಿದ್ದ ಪರಿ ಕಂಡು ಅಯ್ಯೋ ಪಾಪ ಅನಿಸಿತ್ತು. ರಾತ್ರಿಯ ಚಳಿಗೋ, ಬಿದ್ದ ಕೆಟ್ಟ ಕನಸಿಗೋ ನಡುಗಿ, ಕಾಲುಗಳ ನಡುವೆ ಕೈಯಿಟ್ಟು ಮುದುರಿ ಮಲಗಿರೋ ಮಗುವ ಕಂಡು ಕರಗಿದ ತಾಯಿಯ ಅಂತಃಕರಣದಂತಾಗಿತ್ತು ರವಿಯ ಕಿರಣಗಳ ಕತೆಯಿಂದು. ಈತನ ರೂಮ ಹೊಕ್ಕ ಅವು ನಿತ್ಯದಂತೆ … Read more

ಎಲ್ಕ್ ಎಂಬ ಸಾರಂಗದ ದುರಂತ ಕತೆ: ಅಖಿಲೇಶ್ ಚಿಪ್ಪಳಿ

ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬಾಟ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಯಿ-ಭಾಯಿ ಎಂದು ಪರಸ್ಪರ ಹೊಗಳಿಕೊಳ್ಳುತ್ತಾ ಉಭಯದೇಶಗಳ ಸಂಬಂಧವೃದ್ಧಿಗೆ ಅಡಿಪಾಯ ಹಾಕುತ್ತಿರುವ, ಪರಮಾಣು ಒಪ್ಪಂದಕ್ಕೆ ಕೈಜೋಡಿಸುತ್ತಾ, ಯುರೇನಿಯಂ ಆಮದಿಗೆ ಸಹಿ ಹಾಕುತ್ತಿರುವ ಮೂರು ದಿನ ಮೊದಲು ಅಮೆರಿಕಾದ ನಾರ್ತ್ ಕ್ಯಾರೋಲಿನ ರಾಜ್ಯದ ಗ್ರೇಟ್ ಸ್ಮೋಕಿ ಮೌಂಟೇನ್ ರಾಷ್ಟ್ರೀಯ ಅಭಯಾರಣ್ಯದ ಸಾರಂಗವೊಂದನ್ನು ಅಲ್ಲಿನ ಅಧಿಕಾರಿಗಳೇ ಗುಂಡಿಟ್ಟು ಕೊಂದರು. ಆ ಗುಂಡಿನ ಸದ್ದು ಸುದ್ದಿಯಾಗಲಿಲ್ಲ. ಅಕ್ಟೋಬರ್ ೨೦ ೨೦೧೪ರ ದಿನದಂದು ಹವ್ಯಾಸಿ ಛಾಯಾಚಿತ್ರಗ್ರಾಹಕನಾದ ಜೇಮ್ಸ್ ಯಾರ್ಕ್ ಎಂಬಾತ ಇದೇ … Read more

ಡೆಸರ್ಟ್ ಫ್ಲವರ್’ ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ

ಸಹಮತ ಫಿಲಮ್ ಸೊಸಯಟಿ ಮಂಗಳೂರು ಮತ್ತು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನವಂಬರ್ 30ರ ಭಾನುವಾರ ಮಧ್ಯಾಹ್ನ 2.00 ಗಂಟೆಯಿಂದ 6.00 ಗಂಟೆ ತನಕ ಮಂಗಳೂರು ಉರ್ವಸ್ಟೋರ್ ನಲ್ಲಿರುವ ಸಾಹಿತ್ಯ ಸದನದಲ್ಲಿ ಸೋಮಾಲಿಯನ್ ರೂಪದರ್ಶಿ ವಾರೀಸ್ ಡೇರಿಯ ಆತ್ಮಕತೆಯಾಧಾರಿತ .' ಡೆಸರ್ಟ್ ಫ್ಲವರ್' ಇಂಗ್ಲಿಷ್ ಚಲನಚಿತ್ರ ಪ್ರದರ್ಶನ ಮತ್ತು ಉಪನ್ಯಾಸ ಏರ್ಪಡಿಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಕವಿ ಡಾ. ಅನುಪಮ ಎಚ್ ಎಸ್ .ಮತ್ತು ಮಂಗಳೂರಿನ ಚಿಂತಕ ಡಾ.ಬಿ.ಎಸ್ ಕಕ್ಕಿಲ್ಲಾಯ ಚಲನಚಿತ್ರದ … Read more

ಸಾಮಾನ್ಯ ಜ್ಞಾನ (ವಾರ 54): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು? ೨.    ವನಮಹೋತ್ಸವವನ್ನು ಆರಂಭಿಸಿದವರು ಯಾರು? ೩.    ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು? ೪.    ಗೊರುಚ ಇದು ಯಾರ ಕಾವ್ಯನಾಮವಾಗಿದೆ? ೫.    ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್‌ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ? ೬.    ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ? ೭.    ಪ್ರಪಂಚದ ಚಿಕ್ಕ … Read more

ಭಯದ ಆ ರಾತ್ರಿ: ನಾಗರಾಜ್ ಹರಪನಹಳ್ಳಿ.

ಹಳವಂಡ ಕನಸು. ಅದ್ಹೇನೋ ಸಮಾರಂಭ. ಹೋದಲೆಲ್ಲಾ ಚಿವುಟಿದಂತೆ; ದೇಹದ ಎದೆ ಹಾಗೂ ಕಿಬ್ಬೊಟ್ಟೆ ಭಾಗಕ್ಕೆ ಯಾರೋ ತಿವಿದಂತೆ. ತಿವಿಯುವ ಕೈ ಮತ್ತು ಮುಖ ಮಾತ್ರ ಅಸ್ಪಷ್ಟ. ಕಿರುಕುಳ ಮುಂದುವರಿದಂತೆ, ಅದರಿಂದ ತಪ್ಪಿಸಿಕೊಂಡ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಂತೆ ಅದೆಂಥದೋ ಭಾರ ಎನಿಸುವ ಕನಸು. ಯಾರೋ ವೆಹಿಕಲ್  ಪಾರ್ಕಿಂಗ್ ಗೇಟ್ ತೆರದಂತೆ ಸದ್ದು. ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಎದೆಯ ಮೇಲೆ ಕೈಯಿಟ್ಟು ಮಲಗಿದ್ದಕ್ಕೋ ಏನೋ…ಇರಬೇಕು. ಕೆಟ್ಟ ಕನಸು. ಬೆಡ್ ರೂಂ ಲೈಟ್ ಹಾಕಿದ. ಕೋಣೆಯಲ್ಲಿ ಆತನ ಜೊತೆ ಇರುವುದು … Read more

ಪ್ರೇಮದುತ್ಕಟತೆಯ ಅನಂತ ಹುಡುಕಾಟ: ಸಚೇತನ

ಉತ್ಕಟ ಪ್ರೇಮದ ಪ್ರಾತಿನಿಧಕವಾಗಿ ಹಲವಾರು ಸಿನಿಮಾಗಳು ಬಂದು ಹೋಗಿವೆ. ದುರಂತ ಪ್ರೇಮಕ್ಕೆ ಸಿನಿಮಾದ ರೂಪದಲ್ಲಿ  ಪರಂಪರಾಗತ ಸಾಕ್ಷಿ ಎನ್ನುವಂತೆ ನಾವು ಟೈಟಾನಿಕ್ ಸಿನಿಮಾವನ್ನು ನೋಡಿದ್ದೇವೆ, ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಥರದ ಭಾರತೀಯ ಶೈಲಿಯ ಪ್ರೇಮದ ಹಂಬಲ ಮತ್ತು ತ್ಯಾಗವನ್ನು  ಕಂಡಿದ್ದೇವೆ.  ಆದರೆ ಸಿನಿಮಾವೊಂದರಲ್ಲಿನ ಪ್ರೇಮದ ಉತ್ಕಟತೆ ತೆರೆಯಾಚೆಗೆ ಸಾಗಿ ಪ್ರೇಕ್ಷನಲ್ಲಿ ಆಳಕ್ಕಿಳಿದು ನೆನಪಿನಲ್ಲಿ ಉಳಿಯುವದು,  ಪ್ರೀತಿಸಿದ ಪಾತ್ರಗಳೆರಡರ  ನಡುವಿನಲ್ಲಿ ಅತೀ ಆರ್ದವಾದ ಸಂಬಂಧವೊಂದು ಸಾಧ್ಯವಾದಾಗ ಹಾಗೂ ಅದಕ್ಕೆ ಪೂರಕವಾಗಿ  ಕ್ಯಾಮರಾ ಕಣ್ಣಿನಲ್ಲಿ  ಸೆರೆಯಾದಾಗಲೇ.   … Read more

‘ಸಲೀ೦’ರಿಗೊ೦ದು ಸಲಾಮ್: ಆದರ್ಶ ಸದಾನ೦ದ ಅರ್ಕಸಾಲಿ

'ಚುಕ್' ಏರ್-ಗನ್ ನಿ೦ದ ಹೊಡೆದ ಹೆಸರುಕಾಳಿನಷ್ಟಿನ ಕಬ್ಬಿಣದ ಗು೦ಡು ಗುಬ್ಬಚ್ಚಿಗಾತ್ರದ ಪಕ್ಷಿಗೆ ತಾಗಲು ಹಿ೦ಜರಿಯಲಿಲ್ಲ. ಎರ್-ಗನ್ ಗಳಿ೦ದ ಹೊಡೆದ ಬುಲ್ಲೆಟ್ಟುಗಳು 'ದುಡ್೦' ಅ೦ತ ಸದ್ದು ಮಾಡುವುದಿಲ್ಲ. ಅದಕ್ಕಾಗಿಯೇ ಇವನ್ನು ಹಕ್ಕಿ ಹೊಡೆಯಲಿಕ್ಕೆ ಉಪಯೋಗಿಸುತ್ತಾರೆ. ಹತ್ತು ವರ್ಷದ ಬಾಲಕ ಏರ್-ಗನ್ನಿ೦ದ ಗುರಿಯಿಟ್ಟು ಹೊಡೆದಾಗ, ಗುರಿ ತಪ್ಪದೇ, ಕಬ್ಬಿಣದ ಚಿಕ್ಕ ಗು೦ಡು ತಾಕಿ ಪಕ್ಷಿ ಕೆಳಗೆ ಬಿತ್ತು. ಪಕ್ಷಿಯನ್ನು ಕೈಗೆತ್ತಿಕೊ೦ಡು ಮಾಮೂಲಿಯ೦ತೆ ಮನೆಯ ಬಾಣಸಿಗ 'ನನ್ನೂ' ನಿಗೆ ಕೊಡುವ ಮು೦ಚೆ, ಗಮನವಿಟ್ಟು ನೋಡಿದಾಗ, ಇದು ಸಾಧಾರಣವಾದ ಗುಬ್ಬಚ್ಚಿಯಲ್ಲ, ಕತ್ತಿನ ಕೆಳ … Read more

ರೋಮಾಂಚನಗೊಳಿಸಿದ ’ರಕ್ತರಾತ್ರಿ’ ಪ್ರಯೋಗ ಲೇಖನ : ಹಿಪ್ಪರಗಿ ಸಿದ್ಧರಾಮ

  ಯುದ್ಧ ವಿರೋಧಿ ಮತ್ತು ಕ್ರೌರ್ಯತೆಯ ಪರಮಾವಧಿಯನ್ನು ಮನಕಲಕುವಂತೆ ಬಿಂಬಿಸುವ ಕಂದಗಲ್ಲ ಹಣಮಂತರಾಯರ ಸರಿ ಸುಮಾರು ಇಪ್ಪತ್ತು ನಾಟಕಗಳಲ್ಲಿಯೇ ಹೆಚ್ಚು ಜನಪ್ರಿಯ ಕೃತಿ ’ರಕ್ತರಾತ್ರಿ’ ನಾಟಕ ಪ್ರದರ್ಶನವನ್ನು ಇತ್ತೀಚೆಗೆ ಗದಗಯ್ಯ ಹಿರೇಮಠ ನಿರ್ದೇಶನದಲ್ಲಿ ಕಲಾವಿದ ಸಿ.ಎಸ್.ಪಾಟೀಲಕುಲಕರ್ಣಿಯವರ ೬೦ನೇ ವರ್ಷದ ಷಷ್ಟ್ಯಬ್ದಿ ಆಚರಣೆಯ ಸಂದರ್ಭದಲ್ಲಿ ಹವ್ಯಾಸಿ, ವೃತ್ತಿ ರಂಗಭೂಮಿಯ ಕಲಾವಿದರು ಧಾರವಾಡದಲ್ಲಿ ಅಭಿನಯಿಸಿದರು. ಹೊರಗೆ ಅಕಾಲಿಕ ಮಳೆಯ ತುಂತುರು ಹನಿಯ ವಿಪರೀತ ತಣ್ಣನೆಯ ವಾತಾವರಣವಿದ್ದರೂ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ’ಎಲೆ ಉತ್ತರೆ, ದಿನ ಮೂರು ಕಳೆಯುವುದರೊಳಗಾಗಿ … Read more

ಪ್ರೀತಿಸಿ ಬಿದ್ದ ಯುವಜನರೇ ಭೇಷ್!: ಅಕ್ಷಯ ಕಾಂತಬೈಲು

                  ಪ್ರೀತ್ಸೇ… ಪ್ರೀತ್ಸೇ… ಕಣ್ಣುಮುಚ್ಚಿ ನನ್ನೆ ಪ್ರೀತ್ಸೆ ಎಂಬ ಹಾಡಿನಂದದಿ ಪ್ರೀತಿಸಿ ಬಿದ್ದ ಯುವಜನರೇ ನಿಜಕ್ಕೂ ನೀವೇ ಭೇಷ್! ಯಾಕೆ ಗೊತ್ತುಂಟಾ; ಕೆಲವರಿಗೆ ಆ ಸುಖ ಮತ್ತು ಯಾತನೆ ಲಭಿಸಿಲ್ಲ. ಪ್ರೇಮ ಜೀವನವ ಸಾಂಗವಾಗಿ ನಡೆಸುತ್ತಿರುವಾಗ ಹಠಾತ್ತನೆ ಯಾವುದೋ ಒಂದು ಕಾರಣಕ್ಕೆ ನೀವು -ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟರೆಂದು ದೇವದಾಸನ ಥರ ಆಗಿ, ಆಕಾಶವೇ ಹರಿದುಬಿತ್ತು ಅಂದುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಅರ್ಧಕ್ಕೆ … Read more

ಕಾಡುಪೇಟೆಯ ಕತೆ: ಪ್ರಶಸ್ತಿ

ಬರೆಯಹತ್ತಿದ್ರೆ ಒಂದು ಕಾದಂಬರಿಯಾಗೋವಷ್ಟು ವಿಷಯ ದಕ್ತಿತ್ತೇನೋ ಅವರ ಪ್ರೇಮಕತೆಯಲ್ಲಿ. ಅದು ಸ್ನೇಹವಾ ಪ್ರೇಮವಾ ಅನ್ನೋ ಸಂದಿಗ್ದತೆಯಲ್ಲಿ ಅವನಿದ್ದರೆ ಅದಕ್ಕೊಂದು ಹೆಸರಿಡಲೇಬೇಕಾದ ಅನಿವಾರ್ಯತೆಯಲ್ಲೋ, ಅರ್ಜೆಂಟಿನಲ್ಲೋ ಅವಳಿರಲಿಲ್ಲ. ಸ್ನೇಹವೆಂದರೆ ಖುಷಿಪಟ್ಟು, ಪ್ರೇಮವೆಂದರೆ ಬೇಸರಪಡುವಳೂ ಅಲ್ಲ  ಅವಳು. ಸಮಾಜದ ಕಟ್ಟುಪಾಡುಗಳಿಗೆ ಗೌರವವಿದ್ದರೂ ಯಾರನ್ನೋ ತೃಪ್ತಿಪಡಿಸಲು ಮನ ಮನಗಳ ಭಾವಕ್ಕೊಂದು ಚೌಕಟ್ಟು ಹಾಕೋಕೆ ವೈಯುಕ್ತಿಕ ವಿರೋಧವಿದ್ದರೂ ತನ್ನ ಅವನ ನಡುವಿನ ಮಾತುಕತೆಗಳಿಗೆ ಯಾರೋ ಒಂದು ಸಂಬಂಧದ ಹೆಸರಿಟ್ಟರೆ ಯಾವ ಅಭ್ಯಂತರವೂ ಇರಲಿಲ್ಲ ಅವಳಿಗೆ. ಯಾರನ್ನಾದರೂ ತೀರ ಹಚ್ಚಿಕೊಂಡು ಅವರು ದೂರವಾಗೋ ಕಾಲನ ಆಘಾತಗಳು … Read more

ಅವನ ಮೌನದಲಿ ನಾನು ಧ್ವನಿಸಬೇಕಿದೆ: ಪದ್ಮಾ ಭಟ್, ಇಡಗುಂದಿ.

ಕನಸುಗಳನೊಮ್ಮೆ ಹರವಿ ಕುಳಿತೆ.. ಸಾಲಾಗಿ ಕಂಡುಕೊಂಡೆ ಅವನ ಬಗೆಗಿನ ಕನಸುಗಳನ್ನು.. ಇಷ್ಟರ ವರೆಗೆ ಎಷ್ಟೋ ಜನರು ಕೇಳಿದಾರೆ.. ನಿಂಗೆ ಬಾಯ್ ಫ್ರೆಂಡ್ ಇಲ್ವಾ? ಅಂತ..ಇಲ್ಲಾ ಅಂತ ನಾ ಹೇಳಿದ್ದಕ್ಕೆ , ನೀನು  ವೇಸ್ಟ್ ಅಂತ ಅವಳ್ಯಾರೋ ಹೇಳಿದಾಗ ನನಗೇನು ಬೇಸರವಾಗಲಿಲ್ಲ.. ಏಕೆಂದರೆ ಅಪ್ಪ ಅಮ್ಮನ ಮುದ್ದು ಮಗಳು ನಾನು.. ಅವರು ಹೇಳಿದಂತೆ ಕೇಳುವುದು ಇಷ್ಟ.. ಬಹುಶಃ ನನ್ನ ಹುಡುಗನನ್ನು ದೇವರು ತುಂಬಾ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿರಬಹುದೇನೋ..ಅದಕ್ಕೇ ಅವನು ಇನ್ನೂ ಕನಸಾಗಿಯೇ ಉಳಿದದ್ದು.. ಊಹೂಂ ಅದೇ ಹಳೇ ಕಾಲದಂತೆ … Read more

ರಸ್ತೆ ರಾಗ: ಅಖಿಲೇಶ್ ಚಿಪ್ಪಳಿ

ಯಾವುದೋ ಕೆಲಸದ ಮೇಲೆ ಸೊರಬ ತಾಲ್ಲೂಕಿನ ಒಂದು ಊರಿಗೆ ಹೋಗುವುದಿತ್ತು. ಆ ರಸ್ತೆಯಲ್ಲಿ ಹೋಗದೆ ಮೂರ್‍ನಾಲ್ಕು ತಿಂಗಳು ಕಳೆದಿತ್ತು. ವಾಪಾಸು ಬರುವಾಗ ರಸ್ತಯ ಬದಿಯಲ್ಲಿ ಏನೋ ಬದಲಾವಣೆಯಾದಂತೆ ಕಂಡು ಬಂತು. ಗಮನಿಸಿದಾಗ ಲೋಕೋಪಯೋಗಿ ಇಲಾಖೆಯ ಕರಾಮತ್ತು ಬೆಳಕಿಗೆ ಬಂತು. ರಸ್ತೆಗಳಿಗೆ ದೇಶದ ನರನಾಡಿಗಳು ಎಂದು ಕರೆಯುತ್ತಾರೆ. ಒಂದು ದೇಶದ ಅಭಿವೃದ್ದಿಯನ್ನು ಮನಗಾಣಬೇಕಾದರೆ ಆ ದೇಶದ ರಸ್ತೆಗಳ ಗುಣಮಟ್ಟವನ್ನು ನೋಡಬೇಕು ಎನ್ನುವ ಜನಜನಿತ ಅಭಿಪ್ರಾಯವಿದೆ. ರಸ್ತೆಗಳಲ್ಲೂ ಸುಮಾರು ವಿಧಗಳಿವೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಜಿಲ್ಲಾ … Read more

ಮೂವರ ಕವಿತೆಗಳು: ಬಸವರಾಜ ಕದಮ್, ರಮೇಶ್ ನೆಲ್ಲಿಸರ, ತ.ನಂ.ಜ್ಞಾನೇಶ್ವರ

ಪ್ರೀತಿಯ ಹೆಜ್ಜೆಗಳು : ಪ್ರೀತಿಯ  ನಿನ್ನ  ಹೆಜ್ಜೆಗಳು ನನ್ನ  ಹೃದಯದ ಒಳಗೆ ಗೆಜ್ಜೆ  ಕಟ್ಟಿಕೊಂಡು  ಕುಣಿಯುತ್ತಿದೆ ಪ್ರೇಮದ ತಾಳದ  ಸದ್ದು ಮನಸ್ಸಿಗೆ  ಮುದಕೊಡುತ್ತದೆ. ಪ್ರೀತಿಯ ಅನುಭವ : ನಿನ್ನ  ಕಾಲಿಗೆ  ಚುಚ್ಚಿದ ಮುಳ್ಳನ್ನು  ಪ್ರೀತಿಯಿಂದಲೇ  ಮುಳ್ಳಿಗೂ  ನನಗೂ  ನೋವಾಗದೆ ತೆಗೆಯುವಾಗ  ಅಲ್ಲೊಂದು  ಪ್ರೀತಿಯ  ಅನುಭವವೇ ಬೇರೆ ….!!! ಹೊಸತನ : ನೀ ಬರೆದ ರಂಗೋಲೆ ಅಂಗಳದ  ಅಲಂಕಾರವೇ  ಬದಲಾಗಿ ಹೊಸತನ  ತಂದಿದೆ  ಒಂದೊಂದು  ಚುಕ್ಕೆಗಳ ಸಾಲುಗಳು  ನನ್ನ  ಹೃದಯದಲ್ಲಿ  ಚಿತ್ತಾರ ಮೂಡಿಸಿದೆ.. ನಗು : ಗೆಳತಿ, ನಿನ್ನ … Read more