ಅನಿಶ್ಚಿತತೆಯ ಬಿರುಗಾಳಿಗೆ ಸಿಕ್ಕು ಬೆಳಗಲು ಸೆಣಸಾಡುತ್ತಿರುವ ದೀಪಗಳು: ಕಮಲ ಬೆಲಗೂರ್

ಬಾಲ್ಯಾವಸ್ತೆ ಮಾನವ ಬದುಕಿನ ಅತ್ಯಮೂಲ್ಯಕ್ಷಣಗಳು ಆದರೆ ಅದೇ ಕ್ಷಣವೇ ಅಂಗವಿಕಲ ಮಗುವಿಗೆ ತ್ರಾಸದಾಯಕವಾಗಿರುತ್ತದೆ. ತನ್ನ ಹೆತ್ತವರ ನೋಟದಲ್ಲಿ ಪ್ರೀತಿಯ ಬದಲು ಕನಿಕರ ನೋವು ವ್ಯಥೆ ಕಂಡಾಗ ಆ ಮುಗ್ಧ ಮನಸ್ಸು ಕುಗ್ಗುತ್ತದೆ. 'ನಾನು ಅಂಗ ವಿಕಲನಾಗಿ ಬದುಕುವುದಕ್ಕಿಂತ ಸಾವನ್ನು ಬಯಸುತ್ತೇನೆ '. ಇಂತಹ ಪ್ರತಿಕ್ರಿಯೆ ವಿಚಿತ್ರವೆನ್ನಿಸಿದರೂ ಸತ್ಯ. ಪ್ರತಿನಿತ್ಯ ಇಂಚಿಂಚು ನೋವನ್ನುಂಡು ಸೋಲೆದುರಿಸುತ್ತಾ ಪರಾವಲಂಬಿಗಳಾಗಿ ಅಸಹನೀಯ ಬದುಕನ್ನು ಬದುಕುವವರ ಬಗ್ಗೆ ಸಾಮಾನ್ಯರಿಗೆ ಸಹಾನುಭೂತಿಯಾಗುವುದು. ಆದರೆ ವಾಸ್ತವದಲ್ಲಿ ಸಾಮಾನ್ಯ ಜನರು ಜೀವನ ನಡೆಸುವ ರೀತಿಗಿಂತ ಭಿನ್ನವಾಗಿ ಹೆಚ್ಚು ದಕ್ಷತೆಯಿಂದ … Read more

ಮೃದುಲ: ಪಾರ್ಥಸಾರಥಿ ಎನ್.

 ಚಳಿಯಿಂದಾಗಿ ಏಳಲು ಮನಸೇ ಇಲ್ಲ. ಹಾಗೆ ಮುದುರಿಕೊಂಡಳು ಮೃದುಲಾ. ಬೇಸಿಗೆಯಲ್ಲಾದರೆ ಬೆಳಗಿನ ಸೂರ್ಯನ ಬೆಳಕು ರೂಮಿನಲ್ಲಿ ಪಸರಿಸಿ, ಬೇಗ ಏಳುವಂತೆ ಪ್ರೇರೆಪಿಸುತ್ತವೆ, ಚಳಿಗಾಲವೆಂದರೆ ಸೂರ್ಯನಿಗೂ ಸಹ ಸೋಮಾರಿತನವೆ !. ಎಂತಹುದೋ ಮಾಯಕದ ನೆನಪಿನಲ್ಲಿ ನಕ್ಕಳು ಮೃದುಲ. ಕಾಲೇಜಿಗೆ ಹೋಗುವ ಬಸ್ಸು ಎಂಟಕ್ಕೆ  ಮುಖ್ಯರಸ್ತೆಗೆ ಬಂದುಬಿಡುತ್ತದೆ ಅಷ್ಟರೊಳಗೆ ಸಿದ್ದವಾಗಿ ಹೋಗದಿದ್ದರೆ ಬಸ್ಸು ತಪ್ಪಿಸಿಕೊಂಡಂತೆ ಮತ್ತೆ ಸಿಟಿ ಬಸ್ ಹಿಡಿದು ಹೋಗುವದೆಂದರೆ ರೇಜಿಗೆ ಎನ್ನುವ ಭಾವ ತುಂಬಿದಂತೆ ಪೂರ್ಣ ಎಚ್ಚರಗೊಂಡು ಎದ್ದು ಕುಳಿತಳು.  ಅಮ್ಮ ಗೀಸರ್ ಆನ್ ಮಾಡಿರುವಳೋ ಇಲ್ಲವೋ … Read more

ಪಂಜುವಿಗೆ ಅಭಿನಂದನೆಗಳು: ಮಂಜು ಹಿಚ್ಕಡ

ಅದು ೨೦೧೩ನೇ ಇಸವಿ, ಆಗಷ್ಟ್- ಸೆಪ್ಟೆಂಬರ್ ತಿಂಗಳು. ಗೂಗಲನಲ್ಲಿ ಏನನ್ನೋ ಹುಡುಕುತಿದ್ದಾಗ ಪಂಜು ಎನ್ನುವ ಆನ್ ಲೈನ್ ಪತ್ರಿಕೆ ಕಣ್ಣಿಗೆ ಬಿತ್ತು. ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕು ಎನ್ನುವಂತಹ ಲೇಖನಗಳು, ಕತೆಗಳು, ಕವಿತೆಗಳು ಆ ಪತ್ರಿಕೆಯ ತುಂಬೆಲ್ಲಾ ತುಂಬಿದ್ದವು. ನನಗೆ ಪತ್ರಿಕೆಯನ್ನು ಓದುತ್ತಾ ಹೋದ ಹಾಗೆ ಆ ಪತ್ರಿಕೆಯಲ್ಲಿ ಆಸಕ್ತಿ ಬೆಳೆಯತೊಡಗಿತು. ನಾನು ಹೆಸರಿಗೆ ಕವಿ-ಲೇಖಕ-ಕತೆಗಾರ ಎಂದು ನನ್ನಷ್ಟಕ್ಕೆ ಹೇಳಿಕೊಂಡರೂ ಅದುವರೆಗೆ ನನ್ನ ಯಾವುದೇ ಲೇಖನಗಳಾಗಲಿ ಕತೆಗಳಾಗಲಿ, ಕವನಗಳಾಗಲಿ ನನ್ನ ಬ್ಲಾಗನ್ನು ಬಿಟ್ಟರೆ ಬೇರೆಲ್ಲು ಪ್ರಕಟವಾಗಿರಲಿಲ್ಲ. ಹಾಗಂತ … Read more

ಅಡೆತಡೆಗಳನ್ನು ದಾಟಿ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ: ಪ್ರಭಾಕರ ತಾಮ್ರಗೌರಿ

  ಇಂದು ದೇಶದಲ್ಲಿ ಎಷ್ಟೊಂದು ವಿಕಲಾಂಗ ಚೇತನರಿದ್ದಾರೆ. ಕಣ್ಣಿಲ್ಲ, ಮೂಗಿಲ್ಲ, ಮಾತನಾಡಬೇಕೆಂದರೆ ಬಾಯಿಇಲ್ಲ.ಎದ್ದು ನಡೆದಾಡಬೇಕೆಂದರೆ ಕಾಲು ಇಲ್ಲ. ಏನಾದರೂ ಕೆಲಸ ಮಾಡಬೇಕೆಂದರೆ ಕೈ ಇಲ್ಲ. ಇಂಥವರನ್ನ ನೋಡಿದರೆ ಪಾಪ ಅಯ್ಯೋ ಅನ್ನಿಸುತ್ತೆ. ಇವರನ್ನ ನೋಡಿದರೆ ಅಂತಃಕರಣ ಜುಂ ಎನ್ನುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಂಗ ವೈಫಲ್ಯದಿಂದ ಬಳಲುತ್ತಿರುವ ಈ ಮಕ್ಕಳು ಆದಾರೋಪಕ್ಕೆ ಬಲಿಯಾದವೋ ಗೊತ್ತಿಲ್ಲ…? ಎಲ್ಲ ಮಕ್ಕಳಂತೆ  ಇವರು ಬಾಲ್ಯದ ಸುಮಧುರ ಜೀವನ ಕಳೆಯಬೇಕಾಗಿದ್ದ ಈ ಮಕ್ಕಳು ಎಲ್ಲವುಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದು … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ: ಅಖಿಲೇಶ್ ಚಿಪ್ಪಳಿ

ಇತ್ತೀಚಿನ ದಿನಗಳಲ್ಲಿ ಪತ್ರಿಕೋಧ್ಯಮದಲ್ಲಿ ಹೊಸ ತಲೆಮಾರು ಸೃಷ್ಟಿಯಾಗುತ್ತಿದೆ. ಆದರೆ ಸಾರವುಳ್ಳ ಮಾಹಿತಿಗಳು ಲಭ್ಯವಾಗುತ್ತಿಲ್ಲ. ನವಂಬರ್ ಮತ್ತು ಡಿಸೆಂಬರ್ ೨೦೧೪ರ ತಿಂಗಳಲ್ಲಿ ಸಾಗರಕ್ಕೆ ಪತ್ರಿಕೋಧ್ಯಮದ ಹಿರಿಯ ದಿಗ್ಗಜರಿಬ್ಬರು ಆಗಮಿಸಿದ್ದರು. ನವಂಬರ್ ೩೦ರಂದು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ ಶ್ರೀ ದಿನೇಶ್ ಅಮಿನ್‌ಮಟ್ಟು ಹಾಗೂ ಡಿಸೆಂಬರ್ ೧೧ರಂದು ಶ್ರೀ ನಾಗೇಶ ಹೆಗಡೆ. ಪ್ರಸ್ತುತ ಪತ್ರಿಕೋಧ್ಯಮದ ವಿಷಯದಲ್ಲಿ ಈರ್ವರ ಅಭಿಪ್ರಾಯವು ಹೆಚ್ಚು-ಕಡಿಮೆ ಹೋಲುತ್ತಿದ್ದವು. ದಿನೇಶ್ ಅಮಿನ್‌ಮಟ್ಟು ಹೇಳಿದ್ದು, ನಮ್ಮ ಕಾಲದಲ್ಲಿ ಪತ್ರಿಕೋಧ್ಯಮಕ್ಕೆ ಬೇಕಾದ ತಯಾರಿ ಇರುತ್ತಿತ್ತು ಆದರೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಈಗಿನ ಪತ್ರಿಕೋಧ್ಯಮದಲ್ಲಿ … Read more

ಸಾಮಾನ್ಯ ಜ್ಞಾನ (ವಾರ 58): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬಿಎಮ್‌ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು? ೨.    ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು? ೩.    ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು? ೪.    ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್‌ನ್ನು ಉಡಾವಣೆ ಮಾಡಲಾಯಿತು? ೫.    ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ? ೬.    ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್‌ನ ಯಾವ ಮ್ಯೂಸಿಯಂನಲ್ಲಿದೆ? … Read more

ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.

ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ … Read more

ವಿಮಾನಾಲಯ ಅಂದ್ರ ಏನ್ ಮೀನಿಂಗು?: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ…) ವೆಂಕಣ್ಣನನ್ನು ಅವನ ಕಂಪನಿಯವರು ಅಮೆರಿಕಾಕ್ಕೆ ಕಳಿಸುವ ನಿರ್ಧಾರ ಮಾಡುತ್ತಾರೆ. ಹೆಂಡತಿ, ಮಗಳನ್ನೂ ಜೊತೆಗೆ ಕರೆದೊಯ್ಯುವ ನಿರ್ಧಾರ ಮಾಡಿ ಅವರಿಗೆ ವೀಸಾ ಮಾಡಿಸಲು ಚೆನ್ನೈಗೆ ಹೋಗುತ್ತಾನೆ. ವಿಸಾ ಕೊಡುವದಕ್ಕೆ ಅಮೇರಿಕದವರು ಕಾಡಿಸುವ ರೀತಿಗೆ ಬೇಸತ್ತು,  ಆ ದೇಶಕ್ಕೆ ಹೋಗುವುದೇ ಬೇಡ ಅನ್ನುವ ನಿರ್ಧಾರ ಮಾಡುತ್ತಾನಾದರೂ ಹೆಂಡತಿ ಮಗಳಿಗೋಸ್ಕರ ನಿರ್ಧಾರ ಬದಲಿಸುತ್ತಾನೆ.  ಮುಂದೆ ಓದಿ… ) ಮೊದಲೆಲ್ಲಾ ವಿದೇಶ ಪ್ರಯಾಣ ಮಾಡುವವರ ದೊಡ್ಡದೊಂದು ಫೋಟೊ ಪೇಪರಿನಲ್ಲಿ ಹಾಕಿಸಿ, ಅವರಿಗೆ ಬಂಧು ಮಿತ್ರರು ಶುಭ ಕೋರುತ್ತಿದ್ದರು. ಅದು ಯಾಕೆ ಹಾಗೆ … Read more

ಅರ್ಥವಿಲ್ಲ ತತ್ವವಿಲ್ಲ ಅಸಂಗತವೆ ಸತ್ವವೆಲ್ಲ: ಸಚೇತನ

ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ  ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ  ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ.  ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ  ನಮ್ಮ ಕಲ್ಪನೆಗೆ ನಿಲುಕಿರದ  ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ.  ಅಸಂಗತತೆ ತನ್ನನ್ನು ತಾನು  ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ  ಒಪ್ಪಿಸಿಕೊಂಡಿರುತ್ತದೆ.  ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ … Read more

ಸಚಿನ್ ನಾಯ್ಕ ಅಂಕೋಲ: ಸಚಿನ್ ನಾಯ್ಕ ಅಂಕೋಲ

ನನ್ನ ಕನಸುಗಳೆಲ್ಲವ ತನ್ನದೇ ಎಂಬಂತೆ ಸಲಹುತ್ತಿರುವ ನಿನಗಾಗಿ….                                                                     ನಿನ್ನವನಿಂದ…. ಕಿಟಕಿಯಿಂದ ತೂರಿ ಬರುವ ತಂಗಾಳಿ ಕಿವಿಯಲ್ಲಿ ನೀನು ಪಿಸುಗುಟ್ಟಿದಂತಿದೆ….!! ಆಗಾಗ ಸಿಗುವ  ಹಗಲಲ್ಲೂ ಕತ್ತಲ ನೆನಪ ತರುವ ಅಷ್ಟೇ … Read more

ಬಂಟ ಮಲೆಯೆಂಬ ಬದುಕ ತಾಣ. . .: ಸ್ಮಿತಾ ಅಮೃತರಾಜ್

ಜನ ನಿಬಿಡ ಪ್ರದೇಶದಲ್ಲಿ, ಉಸಿರುಕಟ್ಟಿಸುವ ಪ್ಲಾಟ್ ಗಳಲ್ಲಿ ವೇಗದ ಬದುಕಿಗಂಟಿದ ಜನ ಅಷ್ಟೇ ಏದುಸಿರು ಬಿಟ್ಟುಕೊಂಡು ಓಡುತ್ತಿದ್ದಾರೆ. ಎಲ್ಲರೂ ಅವರವರ ಬದುಕಿಗಷ್ಟೇ ಸೀಮಿತವಾಗುತ್ತಿರುವ ಈ ಸಂಕುಚಿತ ಕಾಲಗಟ್ಟದಲ್ಲಿ ಎಲ್ಲರೂ ತಳಕು ಬಳುಕಿನ ಮೋಹಕ್ಕೊಳಗಾಗಿ ನಗರವಾಸಿಗಳಾಗುತ್ತಿದ್ದಾರೆ. ನಗರದ ಸೆಳೆತವೇ ಅಂತದ್ದು. ನಮ್ಮ ನರನಾಡಿಗಳಲ್ಲಿ ಅದಮ್ಯ ತೀರದ ಹುಚ್ಚು ಹತ್ತಿಸಿ, ಗಕ್ಕನೆ ಮಾಯಾವಿಯಂತೆ ನಮ್ಮನ್ನು ಅದರ ಕದಂಬ ಬಾಹುಗಳಲ್ಲಿ ಬಂಧಿಸಿಕೊಂಡು, ಬದುಕಿರುವವರೆಗೂ ವಿಲವಿಲನೇ ಒದ್ದಾಡಿಸಿ ಬಿಡುತ್ತದೆ. ಇಂತಹ ಹೊತ್ತಲ್ಲಿ ಹಳ್ಳಿಗಳೂ ನಗರಗಳಾಗುವ ಕನಸು ಹೊತ್ತು ಸಾಗುತ್ತಿವೆ. ಹಳ್ಳಿಯೆಂಬ ಕಲ್ಪಿತ ಚಿತ್ರಣವೇ … Read more

ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು

ನನ್ನ ಇಂಜಿನಿಯರಿಂಗ್ ಕಲಿಕೆಯ ದಿನಗಳವು; ಅಸೈನ್ಮೆಂಟ್ ಬರೆಯದ್ದರಿಂದ, ಕ್ಲಾಸಿಗೆ ತಡವಾಗಿ ಹಾಜರಾಗುತ್ತಿದ್ದ ಕಾರಣ, ಲ್ಯಾಬ್ ರೆಕಾರ್ಡ್ ಸಮಯಕ್ಕೆ ಸರಿಯಾಗಿ ಕೊಡದ್ದರಿಂದ ಲೆಕ್ಚರರ ಕೈಯಲ್ಲಿ ನಾನು ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆನು. ನನ್ನೀ ಉದಾಸೀನತೆ ಅತಿರೇಕ ತಲುಪಿ ಲೆಕ್ಚರುಗಳು ಕ್ಲಾಸಿನಿಂದ ಉಚ್ಚಾಟನೆ ಮಾಡಿದ ಪ್ರಸಂಗವೂ ಬೇಜಾನ್ ಇದೆ. ಕಾಲೇಜಿನಲ್ಲಿ ಚೆಂದಮಾಡಿ ಬೈಗುಳ ಉಂಡು ಸಂಜೆ ಹೊತ್ತು ರೂಂಗೆ ಹಿಂತಿರುಗಿದಾಗ ಆ ದಿನದ ನಿರ್ವಹಣೆಯ ಬಗೆಗೆ ನನ್ನ ಮೇಲೆ ನನಗೇ ಬೇಸರ ಮೂಡುತ್ತಿತ್ತು. ಮನಸಿಗೆ ಮೂಡಿದ ಬೇಸರವ ಕಳೆಯಲು ಮಿತ್ರ -ಶಿವಕುಮಾರನ ಜೊತೆ … Read more

ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ

’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು. ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ. ’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು. ’ಪ್ರಯತ್ನ ಮಾಡುತ್ತೇನೆ … Read more

ಮೂವರ ಕವಿತೆಗಳು: ಶೋಭಾಶಂಕರ್, ವಿನಾಯಕ ಭಟ್, ಶ್ರೀಕಾಂತ ಧಾರವಾಡ.

ಜಿ ಎಸ್ ಎಸ್ ಎದೆ ತುಂಬಿ ಹಾಡಿದ ಕವಿ ನವೋದಯದ ಸಮನ್ವಯ ಋಷಿ ಕನ್ನಡಿಗರ ಮನಸ ಗೆದ್ದ ಭಾವಜೀವಿ     ಇರುವಷ್ಟು ಕಾಲದಿ ಎದೆ ತುಂಬಿ ಮನತುಂಬಿ ತನು ತುಂಬಿ ಹಾಡಿದಾ ಕವಿ ಇಲ್ಲದ ದೇವರ ಹುಡುಕದೆ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ-ಸ್ನೇಹಗಳ ಹೊಸೆದು  ದೇವರ ದರ್ಶನ ತೋರಿದ ದಾರ್ಶನಿಕ ಕವಿ ಹಾಡು ಹಳೆಯದಾದರೇನು ಭಾವ ನವನವೀನ ಎನಿಸಿ ಎಂದೆಂದಿಗೂ ಮರೆಯದ ಕಾವ್ಯ ಸೃಷ್ಟಿಸಿ ತುಂಬಿದರು ಬತ್ತದ ಅನಂತ ಜೀವನೋತ್ಸಾಹ!! ಹೂವು ಅರಳೀತು ಹೇಗೆ ಪ್ರೀತಿ … Read more

ನಾಝ್ಕಾ ಗೆರೆಯ ವಿರೂಪ: ಅಖಿಲೇಶ್ ಚಿಪ್ಪಳಿ

ದಿನಾಂಕ:೧೧/೧೨/೨೦೧೪ರ ಗುರುವಾರ ಸಂಜೆ ಸಾಗರದಲ್ಲಿ ಒಟ್ಟು ಮೂರು ಪುಸ್ತಕಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಂಡವು. ಶ್ರೀ ನಾಗೇಶ ಹೆಗಡೆಯವರ ನರಮಂಡಲ ಬ್ರಹ್ಮಾಂಡ, ಶ್ರೀ ಆನಂದ ತೀರ್ಥ ಪ್ಯಾಟಿಯವರ ಅಹಾ ಇಸ್ರೇಲಿ ಕೃಷಿ ಹಾಗೂ ನನ್ನದೇ ಆದ ಜೋಗದ ಸಿರಿ ಕತ್ತಲಲ್ಲಿ. ಇದೇ ಹೊತ್ತಿನಲ್ಲಿ ಪೆರು ದೇಶದ ಲಿಮಾದಲ್ಲಿ ೧೯೦ ದೇಶಗಳ ಧುರೀಣರು ಒಟ್ಟು ಸೇರಿ ಭೂಬಿಸಿಯನ್ನು ನಿಯಂತ್ರಿಸುವ ಕುರಿತು ೧೧ನೇ ದಿನದ ಗಂಭೀರ ಚರ್ಚೆ ನಡೆಸುತ್ತಿದ್ದರು, ಒಟ್ಟು ಹನ್ನೆರೆಡು ದಿನ ನಡೆದ ಈ ಜಾಗತಿಕ ಸಮಾವೇಶದಲ್ಲಿ ಭೂಬಿಸಿಗೆ ಕಾರಣವಾಗುವ … Read more

ಒಂದು ಕಾಗದದ ಕತೆ: ಪ್ರಶಸ್ತಿ

ನಮಸ್ಕಾರ. ನಾನ್ಯಾರು ಅಂದ್ರಾ ? ಚಿಗುರಾಗಿ, ಮರವಾಗಿ , ಬೊಡ್ಡೆಯಾಗಿ, ಕಾರ್ಖಾನೆಯ ಅಸಂಖ್ಯ ರಾಸಾಯನಿಕಗಳ ಸಾಗರದಿ ಈಜಾಡಿ ಕೊನೆಗೂ ಪೇಪರ್ರೆಂಬ ಹೆಸರು ಪಡೆದ ಜೀವ ನಾನು. ಹೊರಜಗತ್ತ ಕಾಣೋ ನನ್ನ ಕನಸ ದಿನ ಕೊನೆಗೂ ನನಸಾಗಲಿದೆ. ನನ್ನಂತೇ ಇರೋ ಅದೆಷ್ಟೋ ಜನರನ್ನು ಒಂದು ಕಟ್ಟು ಹಾಕಿ ಚೆಂದದ ಹೊದಿಕೆ ಹೊದಿಸಿ ಇಟ್ಟಿದ್ದಾರೆ. ಹೊರಜಗತ್ತಿನ ಕತೆ ಕೇಳುತ್ತಲೇ ಬದುಕ ಹಲಹಂತ ದಾಟಿದ ನಮ್ಮ ಮುಂದಿನ  ಗಮ್ಯವೆಲ್ಲಿಗೋ ಗೊತ್ತಿಲ್ಲ. ಕಾಗದವೆಂದ್ರೆ ಸರಸ್ವತಿಯ ರೂಪವೆಂದು ಪೂಜಿಸುತ್ತಿದ್ದ ದಿನಗಳಿದ್ದವಂತೆ. ಬರಹವೆಂದರೆ ಪಾಠಿ-ಬಳಪ, ಕಾಗದವೆಂದರೆ … Read more

ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್

ನಿನ್ನ ಬಗ್ಗೆ ಏನಾದರೂ ಬರೀಲೇಬೇಕು.. ಬರೀತಾನೇ ಇರ್ತೀನಿ. ತುಂಬಾತುಂಬಾ ಯೋಚಿಸ್ತೀನಿ.. ಸ್ನೇಹಿತೆಯರ ಗುಂಪಿನಲ್ಲಿ ಕನಸನ್ನು ಹಂಚಿಕೊಂಡು ಒಮ್ಮೆಲೇ ತಲೆಯನ್ನು ಕೆಳಗೆ ಮಾಡಿ ಮುಖ ಕೆಂಪಗೆ ಮಾಡಿಕೊಳ್ಳುತ್ತೀನಿ.. ಪ್ರೀತಿ ಪ್ರೇಮಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆದಾಗ ಎಷ್ಟೋ ಜನರು ಕೇಳಿದ್ದುಂಟು..ನಿಂಗೆ ಲವರ್ ಇಲ್ವಾ? ಅಂತ. .ಇಲ್ಲಾ ಎಂದು ನಿಜವನ್ನೇ ಹೇಳಿದ್ದೇನೆ.. ನೀನು ಯಾರೆಂದೇ ಗೊತ್ತಿಲ್ಲ ನೋಡು ನಂಗೆ..ಎಲ್ಲಿದ್ದೀಯೋ, ಹೇಗಿದ್ದೀಯೋ ಏನ್ ಮಾಡಾ ಇದ್ದೀಯೋ..ಒಂದೂ ಗೊತ್ತಿಲ್ಲ ನಿ॒ನ್ನ ಬಗ್ಗೆ ಸಾಸಿವೆಯಷ್ಟೂ ಗೊತ್ತಿಲ್ಲ ಮುಂದೆ ನೀನೆಂದೋ  ಬರುವೆಯಲ್ಲ..ನಿನ್ನ ಜೊತೆಗೆ ಬದುಕನ್ನು … Read more

ಸಾಮಾನ್ಯ ಜ್ಞಾನ (ವಾರ 57): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು? ೨.    ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು? ೩.    ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ? ೪.    ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ? ೫.    ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು? ೬.    ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ  ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೭.    ಗೇಟ್ (gate) ನ ವಿಸ್ತೃತ ರೂಪವೇನು? ೮.   … Read more