ಪ್ರಶ್ನೆಗಳು:
	೧.    ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
	೨.    ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ ರೂಪವೇನು?
	೩.    ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ?
	೪.    ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು?
	೫.    ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು?
	೬.    ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?
	೭.    ಆರ್ಯುವೇದದ ಪಿತಾಮಹ ಯಾರು?
	೮.    ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು?
	೯.    ಪೋಪ್ ಅರಮನೆ ವಿಶ್ವದ ಯಾವ ನಗರದಲ್ಲಿದೆ?
	೧೦.    ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
	೧೧.    ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ?
	೧೨.    ಇತ್ತೀಚೆಗೆ  ಶ್ರವಣಬೆಳಗೋಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
	೧೩.    ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?
	೧೪.    ಮುಂಬೈ ಷೇರು ವಿನಿಮಯ ಸೂಚ್ಯಾಂಕದ ಹೆಸರೇನು?
	೧೫.    ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು ಕುರಿತು ಬರೆದ ಪುಸ್ತಕವಾಗಿದೆ?
	೧೬.    ರಾಸಾಯನಿಕವಾಗಿ ಶುದ್ಧ ಚಿನ್ನವು ಎಷ್ಟು ಕ್ಯಾರೆಟ್ದಾಗಿರುತ್ತದೆ?
	೧೭.    ಟಾಡಾ ಕಾಯಿದೆ ಯಾವುದಕ್ಕೆ ಸಂಬಂಧಿಸಿದೆ?
	೧೮.    ಕುಕ್ ಆಂದೋಲನವನ್ನು ಬ್ರಿಟೀಷರ ವಿರುದ್ಧ ಸಂಘಟಿಸಿದವರು ಯಾರು?
	೧೯.    ಚೆನ್ನರಾಯ ಇದು ಯಾರ ಅಂಕಿತನಾಮವಾಗಿದೆ?
	೨೦.    ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ ಚಾಲಿತ ಕಾರು ಯಾವುದು?
	೨೧.    ಬಡವರ ಊಟಿ ಎಂದು ಕರೆಯುವ ಕರ್ನಾಟಕದ ಜಿಲ್ಲೆ ಯಾವುದು?
	೨೨.    ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ ಯಾರು?
	೨೩.    ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಯಾರು?
	೨೪.    ಪ್ರಕೃತಿಯ ಯಾವ ಮೂಲದಿಂದ ವಿಟಮಿನ್ ’ಡಿ’ ದೊರೆಯುತ್ತದೆ?
	೨೫.    ವಾಯುಭಾರ ಮಾಪಕದಲ್ಲಿ ಬಳಸುವ ದ್ರವ ಯಾವುದು?
	೨೬.    ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ ಯಾರು?
	೨೭.    ಪರಮಾಣುವಿನ ಮೂಲಭೂತ ಕಣಗಳು ಯಾವುವು?
	೨೮.    ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ ಯಾವುದು?
	೨೯.    ಕೇರಳದ ನಿಶ್ಯಬ್ದ ಕಣಿವೆಯ ಮೂಲಕ ಹಾಯ್ದು ಹೋಗುವ ನದಿ ಯಾವುದು?
	೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
	ಈ ವಾರದ ಪ್ರಸಿದ್ಧ ದಿನಾಚರಣೆ 
	ಫೆಬ್ರವರಿ – ೧೪ – ಪ್ರೇಮಿಗಳ ದಿನ
	ಉತ್ತರಗಳು:
	೧.    ಡಾ||ವಿ.ಕೃ.ಗೋಕಾಕ್
	೨.    ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೋರೇಶನ್
	೩.    ಜಪಾನ್ 
	೪.    ಜೀತ ವಿಮುಕ್ತಿ ಶಾಸನ
	೫.    ಚಿಕ್ಕದೇವರಾಜ ಒಡೆಯರ್
	೬.    ಮಂಗಳೂರು 
	೭.    ಚರಕ
	೮.    ತಾಳಿಕೋಟೆ
	೯.    ವ್ಯಾಟಿಕನ್ ಸಿಟಿ
	೧೦.    ೩೪೦ ಕೊಠಡಿಗಳು
	೧೧.    ಬಿ.ಡಿ.ಸುಬ್ಬಯ್ಯ
	೧೨.    ಡಾ||ಸಿದ್ಧಲಿಂಗಯ್ಯ
	೧೩.    ೨೦೦೧
	೧೪.    ಸೆನ್ಸೆಕ್ಸ್
	೧೫.    ಪುಟ್ಟಪುರ್ತಿ ಸಾಯಿಬಾಬಾ
	೧೬.    ೨೪ ಕ್ಯಾರೆಟ್
	೧೭.    ಟೆರೆರಿಸಮ್
	೧೮.    ರಾಮ್ಸಿಂಗ್
	೧೯.    ಏಕಾಂತ ಮಾರಯ್ಯ
	೨೦.    ರೇವಾ
	೨೧.    ಹಾಸನ
	೨೨.    ಅನುರಾಧ ಪಾಲ್
	೨೩.    ಶ್ರೀಮತಿ ಸಯೀದಾ ಆಖ್ತರ್
	೨೪.    ಸೂರ್ಯನ ಬೆಳಕು
	೨೫.    ಪಾದರಸ 
	೨೬.    ಮಹಾವೀರಾಚಾರ್ಯ
	೨೭.    ನ್ಯೂಟ್ರಾನ್
	೨೮.    ದ್ರವರೂಪದ ಜಲಜನಕ
	೨೯.    ಕುಂತೀಪುಳ
	೩೦.    ಆರ್.ಕೆ.ಲಕ್ಷ್ಮಣ (ಪ್ರಸಿದ್ಧ ವ್ಯಂಗ್ಯ ಚಿತ್ರಗಾರ)
******
					

ವಂದನೆಗಳು ನೀಮ್ಮ ಮಾಹಿತಿಗೆ