ಫೇಸ್ ಬುಕ್ ಮತ್ತು ಗುಂಪುಗಾರಿಕೆ: ನಟರಾಜು ಎಸ್. ಎಂ.

ಫೇಸ್ ಬುಕ್ ಗೆ 2010ರ ಜನವರಿ ತಿಂಗಳಲ್ಲಿ ಸೇರಿದ್ದೆ. ಆ ವರುಷ ಪೂರ್ತಿ ಬೆರಳೆಣಿಕೆಯಷ್ಟು ಗೆಳೆಯರಷ್ಟೇ ನನ್ನ ಫೇಸ್ ಬುಕ್ ಫ್ರೆಂಡ್ ಗಳಾಗಿದ್ದರು. ಆ ಗೆಳೆಯರಲ್ಲಿ ಹೆಚ್ಚಿನ ಗೆಳೆಯರೆಲ್ಲರೂ ನಾನು ಓದಿದ ಕಾಲೇಜುಗಳಲ್ಲಿದ್ದ ಗೆಳೆಯರೇ ಆಗಿದ್ದರು. ಆಗಾಗ ನನ್ನ ವಾಲ್ ನಲ್ಲಿ ಯಾವುದಾದರೂ ಇಂಗ್ಲೀಷ್ ಶುಭಾಷಿತ ಹಾಕಿಕೊಳ್ಳುವುದನ್ನು ಬಿಟ್ಟರೆ 2010 ರ ಕೊನೆಗೆ ಕೈಗೆ ಸಿಕ್ಕ ಹೊಸ ಕ್ಯಾಮೆರಾದ ಫೋಟೋಗಳನ್ನು ಅಪ್ ಲೋಡ್ ಮಾಡುವುದನ್ನು ಕಲಿತ್ತಿದ್ದೆ. ಆ ಫೋಟೋಗಳಿಗೆ ಆಗ ಎಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆ ಎಂಬ ಖುಷಿಗಿಂತ ಅಲ್ಲಿ ಅಪ್ ಲೋಡ್ ಮಾಡಿಕೊಂಡ ಫೋಟೋಗಳನ್ನು ನೋಡಿ ಖುಷಿಯಾಗುತ್ತಿತ್ತು. ಹೀಗಿರುವಾಗ 2011 ರ ಸೆಪ್ಟೆಂಬರ್ ವೇಳೆಗೆ ಫೇಸ್ ಬುಕ್ ಎಂಬ ವಿಶಾಲವಾದ ತಾಣದಲ್ಲಿ ಕನ್ನಡದಲ್ಲಿ ಸ್ಟೇಟಸ್ ಹಾಕಿಕೊಂಡಿರುವ ಒಂದಷ್ಟು ಪ್ರೊಫೈಲ್ ಗಳು ಕಾಣಿಸಿಕೊಂಡಿದ್ದವು. ಅವರುಗಳ ಪ್ರೊಫೈಲ್ ನೋಡಿದಾಗ ಅವರ ಫ್ರೆಂಡ್ ಲಿಸ್ಟ್ ನಲ್ಲಿ ತುಂಬಾ ಜನ ಗೆಳೆಯರಿದ್ದರು. ಜೊತೆಗೆ ಅವರು ಬರೆದಿರುವ ಸ್ಟೇಟಸ್ ಗಳಿಗೆ ಸಿಕ್ಕಾಪಟ್ಟೆ ಲೈಕು ಮತ್ತು ಕಾಮೆಂಟ್ ಗಳಿರುತ್ತಿದ್ದವು. ಅಂತ ಪ್ರೊಫೈಲ್ ನೋಡಿದ ಕ್ಷಣ ಪ್ರಭಾವಿತನಾಗಿ ನ್ಯಾಚುರಲ್ ಆಗಿ ನಾನು ಆ ಪ್ರೊಫೈಲ್ ಉಳ್ಳ ವ್ಯಕ್ತಿಗಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದೆ. ಅಪರಿಚಿತರಾಗಿದ್ದ ಆ ವ್ಯಕ್ತಿಗಳು ತಮ್ಮ ಫೋಟೋದಿಂದ, ಬರಹದಿಂದ ಪರಿಚಿತರಾಗತೊಡಗಿದರು. ಹಾಗೆ ಪರಿಚಿತರಾದವರು ಫೇಸ್ ಬುಕ್ ನ ವಿಧ ವಿಧದ ಗುಂಪುಗಳಲ್ಲಿ ಅದೂ ಇದೂ ಪೋಸ್ಟ್ ಮಾಡುವುದೋ ಕಾಮೆಂಟ್ ಮಾಡುವುದೋ ಮಾಡುತ್ತಿದ್ದಾಗ ಅಚ್ಚರಿಯಿಂದ ಫೇಸ್ ಬುಕ್ ನಲ್ಲಿ ಗುಂಪುಗಳು ಸಹ ಇವೆಯಾ ಎಂದು ಅಂತಹ ಗುಂಪುಗಳನ್ನು ಇಣುಕಿ ನೋಡಿತ್ತಿದ್ದೆ. 

ಆ ರೀತಿ ಇಣುಕಿ ನೋಡಿದ ಮೇಲೆ ಕಣ್ಣು ಮುಚ್ಚಿಕೊಂಡು join group ಅನ್ನೋ ಬಟನ್ ಒತ್ತುತ್ತಿದ್ದೆ. ಯಾರೋ ಪುಣ್ಯಾತ್ಮ ನಿಮ್ಮನ್ನು ಈ ಗುಂಪಿಗೆ ಸೇರಿಸಿಕೊಂಡ ಎಂಬ ಸಂದೇಶ ಉಳ್ಳ ನೋಟಿಫಿಕೇಷನ್ ಬರುತ್ತಿತ್ತು. ಯಾರಪ್ಪಾ ನನ್ನನ್ನು ಈ ಗುಂಪಿಗೆ ಸೇರಿದ ಪುಣ್ಯಾತ್ಮ ಎಂದು ಆ ವ್ಯಕ್ತಿಯ ಪ್ರೊಫೈಲ್ ನೋಡಿ ಆತನಿಗೂ ಒಂದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದೆ. ಆತ ನನಗೆ ಫ್ರೆಂಡ್ ಆದ ಮೇಲೆ ಆ ಗುಂಪಿನಲ್ಲಿರುವ ಒಂದಷ್ಟು ಗೆಳೆಯರ ಬರವಣಿಗೆ ನೋಡಿಯೋ ತರ್ಲೆ ಬುದ್ದಿ ನೋಡಿಯೋ ಅವರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದೆ. ಒಂದು ಗುಂಪಿನಲ್ಲಿ ಬರೀ ತರ್ಲೆ ಮಾಡಿಕೊಂಡು ಕಾಮೆಂಟ್ ಮೇಲೆ ಕಾಮೆಂಟ್ ಹಾಕಿಕೊಂಡು ಕುಳಿತಿರುವ ಗೆಳೆಯರಿದ್ದರೆ ಮತ್ತೊಂದು ಗುಂಪಿನಲ್ಲಿ ಕಾವ್ಯ ಧಾರೆಯನ್ನೇ ಉಣಬಡಿಸುತ್ತಿರುವ ಗುಂಪಿತ್ತು. ಆ ಗುಂಪಿನಲ್ಲೂ ಸದಸ್ಯತ್ವ ಹೊಂದಿರುವ ಈ ಗುಂಪಿನಲ್ಲೂ ಸದಸ್ಯತ್ವ ಹೊಂದಿರುವ ಕೆಲವು ಗೆಳೆಯರೂ ಇದ್ದರು. ಯಾವುದಾದರು ಒಂದು ಗುಂಪಿನಲ್ಲಿ ಏನಾದರೂ ಕಾಮೆಂಟ್ ಹಾಕಿದ ಕ್ಷಣ ಕಾಮೆಂಟ್ ಹಾಕಿಸಿಕೊಂಡವರ ಕಡೆಯಿಂದಲೋ ಆ ಗುಂಪಿನ ಬೇರೆ ಸದಸ್ಯರಿಂದಲೋ ಫ್ರೆಂಡ್ ರಿಕ್ವೆಸ್ಟ್ ಬರುತ್ತಿತ್ತು. ಹಾಗೆ ಫ್ರೆಂಡ್ ಆದ ಕೆಲವರು ನನಗೆ ಗೊತ್ತಿಲ್ಲದೆ ಯಾವುದೋ ಗುಂಪಿಗೆ ನನ್ನನ್ನು add ಮಾಡಿಬಿಡುತ್ತಿದ್ದರು. ಬರೀ add ಮಾಡಿಬಿಡುವುದಲ್ಲದೇ ಆ ಗುಂಪಿನ ನಿರ್ವಹಣೆ ಮಾಡುವಂತೆ ನಿರ್ವಾಹಕನನ್ನಾಗಿ ಸಹ ಮಾಡಿಬಿಡುತ್ತಿದ್ದರು. ನನ್ನ ನೋಟಿಫಿಕೇಷನ್ ನಲ್ಲಿ ಇಲ್ಲ ಸಲ್ಲದ ನೋಟಿಫಿಕೇಷ್ ಗಳು ಬರತೊಡಗಿದಾಗ ಅಯ್ಯೋ ಒಳ್ಳೆ ತಲೆ ನೋವಾಯಿತಲ್ಲ ಎಂದುಕೊಂಡು ನನಗೆ ಸಂಬಂಧವಿಲ್ಲದ ಗುಂಪುಗಳ ನೋಟಿಫಿಕೇಷನ್ ಆಫ್ ಮಾಡಿಕೊಂಡು ಸುಮ್ಮನಿದ್ದುಬಿಡಬೇಕಾಗಿತ್ತು. ಹೀಗೆ ಮೊದಮೊದಲಿಗೆ ಎರಡು ಡಿಜಿಟ್ ನಲ್ಲಿದ್ದ ಗುಂಪುಗಳು ಕ್ರಮೇಣ ಮೂರು ಡಿಜಿಟ್ ಗಿಂತಲೂ ಹೆಚ್ಚಿವೆ ಎಂದು ತಿಳಿದಿದ್ದು ನೂರಾರು ಗುಂಪುಗಳಿಗೆ ಯಾರ್ಯಾರೋ ನಮ್ಮನ್ನು ಸದಸ್ಯರನ್ನಾಗಿ ಮಾಡಿದ ಮೇಲೆಯೇ. ಈ ರೀತಿಯ ಗುಂಪುಗಳು ಒಂದು ರೀತಿಯಲ್ಲಿ ಯಾರ ಮೇಲೂ ಅಷ್ಟು ಕೆಟ್ಟ ಪರಿಣಾಮ ಬೀರದಿದ್ದರೂ ಒಂದು ನಿಟ್ಟಿನಲ್ಲಿ ಗೆಳೆಯರ ಬಳಗವನ್ನು ವಿಸ್ತರಿಸಿಕೊಳ್ಳುವಲ್ಲಿ ಸಹಾಯ ಮಾಡಿತು ಎನ್ನಬಹುದು. 

ಹೀಗೆ ನನಗೆ ಫೇಸ್ ಬುಕ್ ನಲ್ಲಿ ಸಿಕ್ಕ ಹತ್ತಾರು ಗುಂಪುಗಳಲ್ಲಿ ನಾನು ಆ ದಿನಗಳಲ್ಲಿ  ಒಂದಷ್ಟು ಸಾಹಿತ್ಯದ ಗುಂಪುಗಳು, ಒಂದು ಸಿನಿಮಾ ಗುಂಪು ಮತ್ತು ಒಂದು ತರ್ಲೆ ಮಾಡುವ ಗುಂಪನ್ನು ಆಯ್ದಕೊಂಡಿದ್ದೆ. ಕೆಲವು ಗುಂಪುಗಳಲ್ಲಿ ಸದಸ್ಯನಲ್ಲದೇ ನಿರ್ವಾಹಕ ಸಹ ಆಗಿದ್ದೆ. ನಾನು ನಿರ್ವಾಹಕನಾಗಿದ್ದ ಗುಂಪೊಂದರಲ್ಲಿ ಕಾವ್ಯಧಾರೆಯನ್ನೇ ಕಟ್ಟುವ ನೂರಾರು ಗೆಳೆಯರಿದ್ದರು. ಆ ಗೆಳೆಯರಲ್ಲಿ ಅನೇಕ ಗೆಳೆಯರು ಬ್ಲಾಗ್ ಬರೆಯುತ್ತಿದ್ದರು. ಅಲ್ಲಿ ಕವನಗಳನ್ನು ಕಟ್ಟುವವರನ್ನು ನೋಡಿ ಕೆಲವರು ತಾವು ಸಹ ಕವನಗಳನ್ನು ಬರೆಯಲು ತೊಡಗಿದರು. ಕ್ರಮೇಣ ಹೊಸದಾಗಿ ಕವನ ಬರೆಯತೊಡಗಿದವರು ಬ್ಲಾಗ್ ಸಹ ಮಾಡಿಕೊಂಡು ಬ್ಲಾಗಿನ ಲಿಂಕ್ ಗಳನ್ನು ಸಾಹಿತ್ಯದ ಗುಂಪುಗಳಲ್ಲಿ ನೀಡತೊಡಗಿದರು. ಬರವಣಿಗೆಯನ್ನು 17ನೇ ವಯಸ್ಸಿನಿಂದ ರೂಢಿಸಿಕೊಂಡಿದ್ದರೂ ಫೇಸ್ ಬುಕ್ ನಲ್ಲಿ ಯಾಕೋ ಒಬ್ಬ ಸಾಮಾನ್ಯ ಓದುಗನಾಗಿರಬೇಕು ಎನಿಸುತ್ತಿತ್ತು. ವರುಷ 2012 ರಲ್ಲಿ ಶ್ರದ್ಧೆಯಿಂದ ಬ್ಲಾಗ್ ಗಳನ್ನು ಓದಿಕೊಂಡು ಫೇಸ್ ಬುಕ್ ನಲ್ಲಿ ಜನವರಿ 2012 ರಂದು ಎಲೆ ಮರೆ ಕಾಯಿ ಎಂಬ ಅಂಕಣ ಶುರು ಮಾಡಿದ್ದೆ. ನಾನು ಬರೆದ ಲೇಖನಗಳನ್ನು ನನ್ನ ವಾಲ್ ಮೇಲೂ ಸಹ ಹಾಕದೆ ಒಂದೇ ಒಂದು ಗುಂಪಿನಲ್ಲಿ ಮಾತ್ರ ಹಂಚಿಕೊಳ್ಳುತ್ತಿದ್ದೆ. ಯಾಕೆಂದರೆ ನಾನು ಆ ಗುಂಪಿನ ನಿರ್ವಾಹಕರಲ್ಲಿ ನಾನೂ ಸಹ ಒಬ್ಬನಾಗಿದ್ದೆ. ಆ ಗುಂಪುನಲ್ಲಿ ಬರೆಯುವವರ ಅಕ್ಷರಗಳು ಕನ್ನಡದಲ್ಲೇ ಇರಬೇಕು ಎಂಬ ರೂಲ್ಸ್ ಆ ಗುಂಪಿನದಾಗಿತ್ತು. ಹೆಚ್ಚು ಜನ ಅದನ್ನು ಪಾಲಿಸುತ್ತಿದ್ದರು. ಪಾಲಿಸಲಾಗದಿದ್ದವರು "ಇಲ್ಲಿ ಎಲ್ಲವೂ ಕನ್ನಡದಲ್ಲೇ ಇರಬೇಕು ಅಂತೀರ. ನಿಮ್ಮ ಗುಂಪಿನ ಹೆಸರಲ್ಲೇ ಬ್ಲಾಗ್ ಎಂಬ ಪದ ಇಂಗ್ಲೀಷ್ ನಲ್ಲಿದೆ. ನಿಮ್ಮ ಗುಂಪಿನ ಧ್ಯೇಯ ವಾಕ್ಯ "ಸಿರಿಗನ್ನಡಂ ಗಲ್ಲಿ ಗಲ್ಲಿಗೆ" ಎಂಬ ಪದದಲ್ಲಿ ಗಲ್ಲಿ ಎಂಬ ಪದ ಬೇರೆ ಭಾಷೆಯದು." ಎಂದು ಲೈಟಾಗಿ ಕಿರಿಕ್ ಮಾಡತೊಡಗಿದ್ದರು. ಆ ಲೈಟ್ ಆಗಿ ಶುರುವಾದ ಕಿರಿಕ್ ದೊಡ್ಡ ಜಗಳವಾಗಿ ಮಾರ್ಪಾಡಾಯಿತು. 

ಫೇಸ್ ಬುಕ್ ನ ಗುಂಪುಗಳ ವಿಶೇಷವೆಂದರೆ ಓಪನ್, ಕ್ಲೋಸಡ್ ಮತ್ತು ಸಿಕ್ರೇಟ್ ಎಂಬ ಮೂರು ಗುಂಪುಗಳನ್ನು ಫೇಸ್ ಬುಕ್ ನಲ್ಲಿ ಮಾಡಬಹುದು. ಓಪನ್ ಅಂದರೆ ಫೇಸ್ ಬುಕ್ಕಿನ ಯಾವ ಸದಸ್ಯನಾದರೂ ಆ ಗುಂಪನ್ನು ನೋಡಬಹುದು. ಕ್ಲೋಸಡ್ ಎಂದರೆ  ಆ ಗುಂಪಿನ ಸದಸ್ಯರಷ್ಟೇ ಆ ಗುಂಪಿನ ಕಂಟೆಂಟ್ ಅನ್ನು ನೋಡಬಹುದು. ಇನ್ನು ಸಿಕ್ರೇಟ್ ಎಂದರೆ ಆ ಗುಂಪಿನ ನಿರ್ವಾಹಕರಷ್ಟೇ ಆ ಗುಂಪಿನ ಎಲ್ಲವನ್ನೂ ನೋಡಬಹುದು. ನಾನಿದ್ದ ಆ ಗ್ರೂಪಿನಲ್ಲಿ ನಿರ್ವಾಹಕರ ಒಂದು ಸಿಕ್ರೇಟ್ ಗ್ರೂಪ್ ಸಹ ಇತ್ತು. ಈ ಸಿಕ್ರೇಟ್ ಗ್ರೂಪ್ ನಲ್ಲಿ ಗುಂಪಿನ ಅಭಿವೃದ್ದಿಗೆ ಏನೇನು ಕ್ರಮ ಕೈಗೊಳ್ಳಬಹುದು ಎಂಬುದರಿಂದ ಹಿಡಿದು ಗುಂಪಲ್ಲಿ ಯಾರಾದರೂ ಕಿರಿಕ್ ಮಾಡಿದವರ ವಿರುದ್ದ ಏನು ಕ್ರಮ ಕೈಗೊಳ್ಳಬಹುದು ಎನ್ನುವುದರ ಬಗ್ಗೆಯೆಲ್ಲಾ ಚರ್ಚೆಯಾಗುತ್ತಿತ್ತು. ಆ ಚರ್ಚೆಗಳಲ್ಲಿ ಒಮ್ಮತ ಮೂಡಿಲ್ಲ ಅಂದರೆ ಆ ಸಣ್ಣ ನಿರ್ವಾಹಕರ ಗುಂಪು ಸಹ ಎರಡು ಮೂರು ಗುಂಪುಗಳಾಗಿ ಮಾರ್ಪಾಡಾಗಿ ಒಳಗೊಳಗೆ ಶೀತಲ ಸಮರಗಳು ನಡೆಯುತ್ತಿದ್ದವು. ಅಂತಹ ಶೀತಲ ಸಮರಗಳನ್ನು ಒತ್ತಟ್ಟಿಗಿಟ್ಟರೆ ಗುಂಪಿನಲ್ಲಿ ಕಿರಿಕ್ ಮಾಡುವವರಿಗೆ ಬ್ಲಾಕ್ ಎಂಬ ಮೋಕ್ಷ ದೊರೆಯುತ್ತಿತ್ತು. ಫೇಸ್ ಬುಕ್ ಎಂಬ ಮುಕ್ತ ವೇದಿಕೆಯಲ್ಲಿ ಒಂದು ಗುಂಪಿನಿಂದ ಬ್ಲಾಕ್ ಗೊಳಗಾದ ವ್ಯಕ್ತಿ ಖಂಡಿತಾ ಆ ಗುಂಪಿನ ಮೇಲೆ ಸಮರವನ್ನೇ ಸಾರುತ್ತಿದ್ದ. ಆ ಸಮರ ಸಾರಲು ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬನಿಗೆ ಇರುವ ವೇದಿಕೆ ಎಂದರೆ ಆತನ ವಾಲ್. ಆ ರೀತಿ ಒಬ್ಬನ ವಾಲ್ ಮೇಲೆ ಒಂದು ಬರಹ ಕಾಣಿಸಿಕೊಂಡ ತಕ್ಷಣ ಆ ವ್ಯಕ್ತಿಯ ಅಭಿಪ್ರಾಯಕ್ಕೆ ಒಮ್ಮತ ಸೂಚಿಸುವ ಒಂದು ದಂಡು ಬಂದು ಕಾಮೆಂಟ್ ಹಾಕಿದರೆ ಅದನ್ನು ವಿರೋಧಿಸುವ ಗುಂಪು ಬಂದು ಇನ್ನೊಂದಷ್ಟು ಕಾಮೆಂಟ್ ಹಾಕತೊಡಗುತ್ತದೆ. ಕಾಮೆಂಟ್ ಗಳಲ್ಲಿನ ಭಾಷೆ ಕೆಟ್ಟದಾಗಿ ತಿರುಗುವ ಸೂಚನೆ ಕಾಣುತ್ತಿದ್ದಂತೆ ಫೇಕ್ ಪ್ರೊಫೈಲ್ ಗಳಿಂದ ಅತಿ ಕೆಟ್ಟ ಕೆಟ್ಟ ಕಾಮೆಂಟ್ ಗಳು ಬೀಳತೊಡಗುತ್ತವೆ. ಭಾವಜೀವಿಗಳು ಆ ತರಹದ ಕಾಮೆಂಟ್ ಗಳಿಂದ ನೊಂದುಕೊಂಡರೆ ಜಗಳ ಮಾಡಿ ಮಾಡಿ ಅಭ್ಯಾಸವಿರುವವರು ಕಾಮೆಂಟ್ ಮೇಲೆ ಕಾಮೆಂಟ್ ಹಾಕುತ್ತಲೇ ದಿನಕಳೆದುಬಿಟ್ಟಿರುತ್ತಾರೆ. ಆ ರೀತಿ ಫೇಸ್ ಬುಕ್ ಗುಂಪುಗಳೊಳಗೆ ಶುರುವಾದ ಜಗಳಗಳು ವಾಲ್ ಗಳ ಮೇಲೆ ಬಿದ್ದುದ್ದನ್ನು ನೋಡಿ ಕೆಲವೊಮ್ಮೆ ಮನುಷ್ಯರ ಸಣ್ಣತನಕ್ಕೆ ಅಸಹ್ಯಪಟ್ಟುಕೊಂಡಿದ್ದಿದೆ. ಆ ರೀತಿ ಫೇಸ್ ಬುಕ್ ನ ಜಗಳಗಳಿಗೆ ಅಸಹ್ಯಪಟ್ಟುಕೊಂಡು ನೇಪಥ್ಯಕ್ಕೆ ಸರಿದ ಭಾವಜೀವಿಗಳನ್ನು ಸಹ ಕಂಡಿದ್ದೇನೆ. 

ಹತ್ತಾರು ಜನ ಗುಂಪೊಂದರಲ್ಲಿ ಅದು ಇದು ಪೋಸ್ಟ್ ಮಾಡುವಾಗ ಅದರಲ್ಲೂ ಕವಿತೆಗಳನ್ನು ಪೋಸ್ಟ್ ಮಾಡುವಾಗ ಹೊಸದಾಗಿ ಪೋಸ್ಟ್ ಮಾಡಿದವರ ಬರಹಗಳಷ್ಟೇ ಓದುಗರ ಓದಿಗೆ ಸಿಕ್ಕಿ ಉಳಿದವು ಫೇಸ್ ಬುಕ್ ನ ಹೊಟ್ಟೆಯೊಳಗೆ ಮಾಯವಾಗತೊಡಗುತ್ತವೆ. ಆದ ಕಾರಣ 2012ರ ಮಧ್ಯಭಾಗದಿಂದ ಅನಿಸುತ್ತೆ ಫೇಸ್ ಬುಕ್ ನ ವಾಲ್ ಗಳ ಮೇಲೆ ಹೆಚ್ಚು ಕವಿತೆಗಳನ್ನು ಬರಹಗಳನ್ನು ಹಾಕಿಕೊಳ್ಳುವ  ಪರಿಪಾಟ ಬೆಳೆದು ಬಂದಿದ್ದು. ಹೀಗೆ ಗುಂಪುಗಳೊಳಗಿದ್ದ ಸಾಹಿತ್ಯ ವಾಲ್ ಗಳ ಮೇಲೆ ಬಂದ ಮೇಲೆ ಗುಂಪುಗಳ ಪ್ರಾಶಸ್ತ್ಯ ಕ್ರಮೇಣ ಕಡಿಮೆಯಾಗಿ ವಾಲ್ ಗಳ ಪ್ರಾಶಸ್ತ್ಯ ಜಾಸ್ತಿಯಾಗತೊಡಗಿದ್ದು ಈಗ ಇತಿಹಾಸ. ಹಾಗೆ ವಾಲ್ ಗಳ ಪ್ರಾಶಸ್ತ್ಯ ಜಾಸ್ತಿಯಾಗತೊಡಗಿದ ಮೇಲೆ ಇಂದು ಹೆಚ್ಚು ಕನ್ನಡಿಗರ ವಾಲ್ ಗಳ ಮೇಲೆ ಕನ್ನಡ ಅಕ್ಷರಗಳು ಕಾಣಸಿಗುತ್ತವೆ. ಆ ಅಕ್ಷರಗಳಲ್ಲಿ ಹೆಚ್ಚಿನವು ಕವಿತೆಗಳಾಗಿದ್ದರೆ ಉಳಿದವುಗಳು ಶುಭಾಷಿತಗಳು, ಚುಚ್ಚುಮಾತುಗಳು, ಜಗಳಗಳಾಗಿರುತ್ತವೆ. ಡಬ್ಬಿಂಗ್ ಪರ ವಿರೋಧ, ಸ್ತ್ರೀ ಸ್ವಾತಂತ್ರ್ಯ ಪರ ವಿರೋಧ, ಮೋದಿ ಪರ ವಿರೋಧ, ಕನ್ನಡ ಪರ ವಿರೋಧ ಎನ್ನುವಂತಹ  ಟಾಪಿಕ್ ಗಳ ಜಗಳದಿಂದ ಹಿಡಿದು ಜಾತಿ, ರಾಜಕೀಯ, ವ್ಯಕ್ತಿ ನಿಂದನೆಯಂತಹ ಬರಹಗಳೆಲ್ಲಾ ಇಂದು ನಮ್ಮ ಓದಿಗೆ ಬೇಡವೆಂದರೂ ದಕ್ಕುತ್ತಲಿವೆ. 2012 ರಲ್ಲಿ ಯಾವುದೋ ಒಂದು ಡಬ್ಬಾ ಫೋಟೋಗೋ, ಡಬ್ಬಾ ಕವಿತೆಗೋ ಸಿಕ್ಕಾಪಟ್ಟೆ ಟ್ಯಾಗ್ ಮಾಡಿ ಟಾರ್ಚರ್ ಕೊಡುತ್ತಿದ್ದ ಪೋಸ್ಟ್ ಗಳಿಗಿಂತ ಈಗಿನ ಜಗಳುಗಳು ಒಂತರಾ ಅಸಹ್ಯ ಹುಟ್ಟಿಸುತ್ತವೆ. ಫೇಸ್ ಬುಕ್ ನ ಗುಂಪುಗಳಿಂದ ಶುರುವಾದ ಸ್ನೇಹ ವಾಲ್ ಗಳ ಮೇಲೆ ಜಗಳಗಳ ರೂಪದಲ್ಲಿ ಬೆತ್ತಲೆಯಾಗುತ್ತಾ ಹೋಗುವಾಗ ಮಾನವಂತರು ಲಾಗಿನ್ ಆಗಿ ಜಗಳಗಳೇ ತುಂಬಿದ ಪೋಸ್ಟ್ ಗಳನ್ನು ನೋಡಿ "ಇವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲವಾ ಗುರು. ಥೂ ಏನ್ ಜನಾನೋ" ಎಂದು ಒಳಗೊಳಗೆ ಬಯ್ದುಕೊಂಡು ಲಾಗ್ ಔಟ್ ಮಾಡುತ್ತಿದ್ದಾರೆ. ಅವರು ಬಯ್ದದ್ದು ನಮಗಲ್ಲ ಅಂತ ಜನ ಜಗಳ ಆಡುತ್ತಲೇ ಇದ್ದಾರೆ. ಇತ್ತೀಚೆಗೆ ಜಗಳಗಳನ್ನು ಕೆಲವು ಫೇಸ್ ಬುಕ್ ಜನಗಳನ್ನು ಕಂಡಾಗ ಗೆಳೆಯ ಶಂಕರ್ ಕೆಂಚನೂರಿನವ ಬರೆದ "ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ತೋಡಿಕೊಂಡು ಅನುಕಂಪ ಗಿಟ್ಟಿಸುವವರನ್ನ ಕಂಡರೆ ಬಚ್ಚಲಿನಲ್ಲಿ ತೊಳೆಯಬೇಕಾದುದನ್ನು ರಸ್ತೆಯಲ್ಲಿ ತೊಳೆಯುವವರನ್ನು ಕಂಡಷ್ಟೇ ರೇಜಿಗೆ ಮತ್ತು ಅಸಹ್ಯ ಹುಟ್ಟಿಸುತ್ತದೆ" ಎಂಬ ಸಾಲು ಯಾಕೋ ಪದೇ ಪದೇ ನೆನಪಾಗುತ್ತದೆ. ಜೊತೆಗೆ ಫೇಸ್ ಬುಕ್ ನ ಕೆಟ್ಟ ಜಗಳಗಳನ್ನು ನೋಡಿದಾಗ ರೇಜಿಗೆ ಮತ್ತು ಅಸಹ್ಯ ಹುಟ್ಟುತ್ತಿದೆ.    

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

32 Comments
Oldest
Newest Most Voted
Inline Feedbacks
View all comments
sunitha.a
sunitha.a
10 years ago

:)))))))

G.V.Jayashree
10 years ago

🙂  nija… good 

PARTHASARATHY N
10 years ago

ಹಲವರ ಪರವಾಗಿ ಅವರ ಮನದಲ್ಲಿರುವ ಬ್ಲಾಗ್ ಬರಹ ಇದಾಗಿದೆ ! 
ಹಲವರ ಮನದ ಭಾವನೆಗೆ ಕೊಟ್ಟಿರುವ ಅಕ್ಷರರೂಪ ! 🙂

ಚಿನ್ಮಯ ಭಟ್ಟ
ಚಿನ್ಮಯ ಭಟ್ಟ
10 years ago

ನಮಸ್ತೆ :),

ಬಹುಷಃ ಈ ಥರಹದ ಬರಹಗಳನ್ನು ನಾವು ಬ್ಲಾಗ್/ಫೇಸ್ ಬುಕ್ ನ ಸ್ನೇಹಿತರಿಂದ,ಅಂತರ್ಜಾಲ ಮಾಧ್ಯಮಗಳಿಂದ ಮಾತ್ರ ಪಡೆಯಲು ಸಾಧ್ಯವೇನೋ ಅಲ್ವಾ???ಮುಂದಿನ ತಲೆಮಾರಿನ ಬರಹಗಳಿವು ಅನ್ನಿಸುತ್ತಿದೆ.. 

ನಿಜ,ಬಹುತೇಕ ಎಲ್ಲರ ಅನಿಸಿಕೆಗಳನ್ನು ಒಪ್ಪವಾಗಿ ನಿರೂಪಿಸಿದ್ದೀರಿ,ಅದರಲ್ಲೂ ಫೇಸ್ ಬುಕ್ಕಿನ ಆರಂಭದ ದಿನದ ಸಂಗತಿಗಳಂತೂ ಬಹಳ ನೈಜವಾಗಿ ಬಂದಿದೆ.. ಓದಿದವರೆಲ್ಲಿ ತುಂಬಾ ಜನ ಹೌದು ಹೌದು ನಾನೂ ಹಾಗೇ ಮಾಡಿದ್ದೆ ಅನ್ನಲೇಬೇಕೇನೋ…..

ಜಗಳದ ಬಗ್ಗೆ ನನಗೇನು ಜಾಸ್ತಿ ಹೇಳಲು ತಿಳಿಯಲೊಲ್ಲ…ಮಾವಿನ ಹಣ್ಣಿನಲ್ಲಿ ಸೋನೆಯೂ ಸಿಹಿಯೂ ಇರತ್ತಲ್ಲಾ..ಆದ್ರೆ ಸಿಹಿಹಣ್ಣನ್ನಷ್ಟೇ ಹುಡುಕಿ ತಿಂದು ಖುಷಿಪಡಬೇಕು ಅಷ್ಟೇ…

ವಂದನೆಗಳು

gaviswamy
10 years ago

Good one boss

ವನಸುಮ
10 years ago

ಜಾಗತಿಕ ಸತ್ಯ ನಟರಾಜಣ್ಣ. ಸುಂದರ ಬರಹ. (Y)

amardeep.p.s.
amardeep.p.s.
10 years ago

"ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ತೋಡಿಕೊಂಡು ಅನುಕಂಪ ಗಿಟ್ಟಿಸುವವರನ್ನ ಕಂಡರೆ ಬಚ್ಚಲಿನಲ್ಲಿ ತೊಳೆಯಬೇಕಾದುದನ್ನು ರಸ್ತೆಯಲ್ಲಿ ತೊಳೆಯುವವರನ್ನು ಕಂಡಷ್ಟೇ ರೇಜಿಗೆ ಮತ್ತು ಅಸಹ್ಯ ಹುಟ್ಟಿಸುತ್ತದೆ"———-you and shankar both are good at your stand……..like it naseema……..ji

vishwanath s k
vishwanath s k
10 years ago

ಯಾರೇ ಜಗಳ ಮಾಡ್ಕೊಂಡ್ರುವೇ ಅದು ಅವರ ವೈಯಕ್ತಿಕ. ಯಾವನೋ ಹೇಗೋ ಇದ್ರೆ ಏನಂತೆ ಅಕ್ಷರಗಳಲ್ಲಿನ ಶಕ್ತಿಯನ್ನ ನೋಡೋಣ. ಇಷ್ಟ ಆಯತೋ ಲೈಕ್ ಇಲ್ದಿದ್ರೆ ಮುಂದಿನ ಸಾಲಿಗೆ.

Akshatha N Gowda
Akshatha N Gowda
10 years ago

very nice…

Narayan Sankaran
Narayan Sankaran
10 years ago

ತುಂಬಾ ನಿಜ. ಒಂದು ಹಂತದ ಮೇಲೆ ಯಾವುದೇ ಭಿನ್ನಾಭಿಪ್ರಾಯವನ್ನ ಸಾರ್ವಜನಿಕವಾಗಿ ಚರ್ಚಿಸಿ ರಂಪ ಮಾಡಿಕೊಳ್ಳದೇ ಪ್ರೌಢಿಮೆಯಿಂದ ವರ್ತಿಸಿದರೆ ಮಾತ್ರ fb ಒಂದು ರಚನಾತ್ಮಕ ವೇದಿಕೆ ಆಗಿ ಉಳಿಯುತ್ತೆ. ಚೆನ್ನಾಗಿದೆ ಲೇಖನ. 

 

Vanitha
Vanitha
10 years ago

Agree 🙂

harish shetty
10 years ago

ವಾಸ್ತವತೆ, ಅನೇಕರ ಮನಸ್ಸಲ್ಲಿ ಉದ್ಭವಿಸುವ ಪ್ರಶ್ನೆಗಳನ್ನು ಒಳ್ಳೆ ರೀತಿಯಲ್ಲಿ ವ್ಯಕ್ತ ಮಾಡಿದ್ದೀರಿ.

Bopanna Bolliyangada Codava
Bopanna Bolliyangada Codava
10 years ago

ಉತ್ತಮ ಲೇಖನ…ನಿಜಕ್ಕು ಇದು ಯೋಚಿಸುವಂತಹ ವಿಷಯ….!!

Vasuki
10 years ago

Nice article! 🙂

 

 

mamatha keelar
mamatha keelar
10 years ago

ಚನ್ನಾಗಿ ಬರೆದಿದ್ದೀರಿ ..ಅಬ್ಬಾ ಎಲ್ಲರೂ ಒಂದು ಒಳ್ಳೆ ಸ್ನೇಹಿತರ ಪರಿಚಯ ಆಗುತ್ತೆ…ಒಳ್ಳೊಳ್ಳೆ ವಿಷಯ ತಿಳಿಯುತ್ತೆ ಅಂತ ಬಂದ್ರೆ ಇಲ್ಲಿ ಬರಿ ಜಾತಿ,ನೀತಿ ಅಂತ ಏನೇನೋ ದ್ವೇಷಗಳನ್ನೆಲ್ಲ ಕವಿತೆ,ಕಥೆಗಳ ರೂಪದಲ್ಲಿ ಬರೆದು ತೀರಿಸ್ಕೋತ ಇರೋದು ವಿಷಾದನೀಯ..ಇಲ್ಲಿ ಏನೆಲ್ಲ ಬರ್ಕೊತಾರೋ ಅದೆಲ್ಲ ಈ fb ಬಿಟ್ಟು ಹೊರೋಕ್ಕೊಗೋಲ್ಲ..ಅಂದ್ರೆ ಇವರೆಲ್ಲ ಸಮಾಜ,ಸುಧಾರಣೆ ಅಂತೆಲ್ಲ ಇಲ್ಲಷ್ಟೇ ಬಡ್ಕೊಳ್ಳೋದು…ಬಿಟ್ರೆ ಸಮಾಜದಲ್ಲಿ ಯಾವ ಸುಧಾರಣೆ ತರೋಕು ಆಗಲ್ಲ. ಹೀಗಿರುವಾಗ ಇವೆಲ್ಲ ಬೇಕಾ..ಒಂದು ಒಳ್ಳೆ ವಿಷಯ ಅಂದರೆ ಯಾರ ಮನಸ್ಸಿಗೂ ನೋವು ಕೊಡದಂತ ವಿಷಯ ಮಾತಾಡಿ ಒಳ್ಳೆ ಸ್ನೇಹದಿಂದ ಇರಬಾರದ ಅನಿಸುತ್ತೆ..

ಗಂಗಾಧರ ದಿವಟರ

ಮಿತ್ರ ನಟರಾಜ್

ಅತ್ಯಂತ ಸಕಾಲಿಕವಾಗಿ ಲೇಖನವನ್ನು ಬರೆದಿದ್ದೀರಿ, ಹಲವಾರು ಮನಸುಗಳನ್ನು ಬೆಸೆದು, ಕೆಲವು ಮೌಲಿಕ ಕ್ರಿಯೆಗಳಿಗೆ ಪ್ರಚೋದಿಸುವ ಫೇಸ್-ಬುಕ್ ಎಂಬ ಸಾಮಾಜಿಕ ತಾಣ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳಿಂದಾಗಿ ರೇಜಿಗೆ ತರುತ್ತಿದೆ. ನಮ್ಮಷ್ಟಕ್ಕೆ ನಾವು ಸಾಗಲೂ ಬಿಡದಂತೆ ಅವರಿವರನ್ನು ತಮ್ಮ ವೈಯಕ್ತಿಕ ತೀಟೆಗಳಿಗೆ ಎಳೆದು ತಂದು ಪರಿಸ್ಥಿತಿಯನ್ನು ಬಿಗಡಾಯಿಸುತ್ತಿದೆ. ಲೇಖನ ಇಂದಿನ ಪರಿಸ್ಥಿತಿಗೆ ಕೈಗನ್ನಡಿಯಂತಿದೆ.

ಹಾಂ…..

ನಿಮ್ಮ ನೆನಪಿನ ಬುತ್ತಿಯನ್ನು ಸವಿಯುವಾಗ, ನಾನೂ ಅರೆಕ್ಷಣ ಫ್ಲ್ಯಾಶ್-ಬ್ಯಾಕ್ ಹೋಗಿದ್ದೆ.

 

harsha
harsha
10 years ago

well said nattu bhai 🙂

manjunath
manjunath
10 years ago

ನಮ್ಮ ಅನುಭವಕ್ಕೆ ಸಹ ಬಂದಿರುವ ವಿಷಯಗಳೇ ಆದರೂ ಸವಾಸ್ತವಿಕ ವಚಾರಧಾರೆ….

Anitha Naresh Manchi
Anitha Naresh Manchi
10 years ago

ಏನಾದರೂ ಆಗು ಮೊದಲು ಫೇಸ್ ಬುಕ್ಕಿಗನಾಗು 🙂 

K.M.Vishwanath
10 years ago

ಸತ್ಯ 

Swarna
Swarna
10 years ago

sakaalika lekhana Nataraju avare…chennaagide

Utham Danihalli
10 years ago

Olleya lekana

prashasti
10 years ago

🙁 🙁 Yes.. Iduve vaastava

ಎ.ಜಿ.ಶೇಷಾದ್ರಿ
ಎ.ಜಿ.ಶೇಷಾದ್ರಿ
10 years ago

ಎಲ್ಲವೂ ಸತ್ಯ …ನಾನೂ ಕಂಡಿದ್ದೇನೆ ನನ್ನನ್ನೂ ಕಂಡು ಕೊಂಡಿದ್ದೇನೆ ಹಾಗೂ ಹಲವಾರು ಸಂಗತಿಗಳನ್ನು ಮತ್ತೆ ನೆನಪಿಸಿಕೊಂಡಿದ್ದೇನೆ 🙂 🙂 ಆದರೇ ..ಈ ಲೈಕು ಕಾಮೆಂಟು ಕಿರಿಕ್ಕುಗಳ ನಡುವೆಯೇ ಫೇಸ್ ಬುಕ್ ಬದುಕಿರುವುದು ಅನ್ನೋದಂತೂ ಒಪ್ಪಬೇಕಾದ ವಾಸ್ತವ 🙂 😉

Arpitha
Arpitha
10 years ago

Sakaalika lekana…. Good one…

 

Roopa Satish
10 years ago

Very Appropriate, Ishtavaaytu Natraj 🙂 

Santhosh
10 years ago

Nice 🙂

Guruprasad Kurtkoti
10 years ago

ಲೇಖನ ತುಂಬಾ ಚೆನ್ನಾಗಿದೆ ನಟ್ಟು ಭಾಯ್! ನಿಜಕ್ಕೂ ತಂಬಾ ಸರ್ತಿ ಫೇಸ್ ಬುಕ್ ಕಿರಿಕಿರಿಗಳು ಹೇಸಿಗೆ ಹುಟ್ಟಿಸುತ್ತವೆ.

arathi ghatikaar
10 years ago

ಸಕಾಲಿಕ ಬರಹ  ನಟರಾಜು  , ಮುಖಪುಸ್ತಕದ  ಗುಂಪುಗಳ , ಹಾಗು ಕೆಲವು ಜನರ ನಡವಳಿಕೆ  ಮನಸ್ಥಿತಿಗಳ ಬಗ್ಗೆ ನಿಮ್ಮ  ಅನುಭವದ ಬರಹ  ಸತ್ಯಕ್ಕೆ ಹತ್ತಿರವಾಗಿದೆ. ಫೆಸ್ಬೂಕ್ ಅನ್ನು ತುಂಬಾ ಹಚ್ಚಿಕೊಂಡರೂ   ಮನಶಾಂತಿ ಕೆಡುವುದು ಖಂಡಿತ .! .

chaithra.
chaithra.
10 years ago

same here. prastutha sthitige anivarya inta chintane mattu lekhana. 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

super,,,,,, 🙂 🙂 🙂

ಹೆಚ್‌ ಎನ್‌ ಮಂಜುರಾಜ್
ಹೆಚ್‌ ಎನ್‌ ಮಂಜುರಾಜ್
4 years ago

ಲೇಖನ ಚೆನ್ನಾಗಿದೆ. ಹಂಸಕ್ಷೀರನ್ಯಾಯ ಅಷ್ಟೇ. ಅವರವರ ಭಾವ……ಜಗತ್ತೇ ಹೀಗೆ ಬದಲಾಗಿದೆ. ನಮ್ಮದೇನು. ಕವಿನುಡಿ: ಇದ್ದಂತೆ ಜಗವಿಹುದು; ನೀನು ಬದಲಾಗು!

32
0
Would love your thoughts, please comment.x
()
x