ಪ್ರಶ್ನೆಗಳು
	 
	1.    ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ಬಂದ ವರ್ಷಯಾವುದು?
	2.    ಇತ್ತೀಚಿಗೆ ಭಾರತ ಸರ್ಕಾರದ ಸಾಂಸ್ಕøತಿಕ ಸಲಹಾ ಮಂಡಲಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡವರು ಯಾರು?
	3.    ಎರಡು ಬಾರಿ ರಾಷ್ಟ್ರಪತಿಗಳ ಭಾವೈಕ್ಯತಾ ಪ್ರಸಸ್ತಿ ಪಡೆದ ಕನ್ನಡ ಚಲನಚಿತ್ರ ನಿರ್ದೇಶಕ ಯಾರು?
	4.    ಅಗ್ನಿದೇವನ ಪತ್ನಿಯ ಹೆಸರೇನು?
	5.    ವಿಶ್ವಸಂಸ್ಥೆಯು 2003-2012 ದಶಕವನ್ನು ಯಾವ ದಶಾಬ್ದಿ ಎಂದು ಪ್ರಕಟಿಸಿದೆ?
	6.    ವಿಶ್ವದ ಅತ್ಯಂತ ಪುರಾತನ ವಿಶ್ವವಿದ್ಯಾನಿಲಯ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಪತಿ ಯಾರು?
	7.    ‘ಕ್ಯೂ’ ವಿಟಮಿನ್ ಕಂಡುಹಿಡಿದವರು ಯಾರು?
	8.    ಕನ್ನಡ ರಂಗಭೂಮಿಯ ಮೊದಲ ನಾಯಕಿ ನಟಿಯಾರು?
	9.    ಕದಂಬರ ಕುಲದೇವರು ಯಾರು?
	10.    ಕಲಿಯುಗದ ರಾಧೆ ಎಂದು ಪ್ರಸಿದ್ಧಳಾಗಿರುವ ಸಂತಳು ಯಾರು?
	11.    ಪಾರ್ಸಿಗಳ ಪ್ರಸಿದ್ಧ ಯಾತ್ರಾ ಸ್ಥಳ ಅಗ್ನಿದೇಗುಲ ಯಾವ ರಾಜ್ಯದಲ್ಲಿದೆ?
	12.    ಪ್ರಥ್ವಿರಾಜ್ ಚೌಹಾನ್ನ ರಾಜಧಾನಿ ಯಾವುದಾಗಿತ್ತು?
	13.    ಇತ್ತೀಚಿಗೆ ಸಿದ್ಧಗಂಗಾ ಶ್ರೀಗಳು ತಮ್ಮ ಎಷ್ಟನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು?
	14.    ಮೈಸೂರು ಅನಂತಸ್ವಾಮಿಯವರು ಹಾಡಿ ಜನಪ್ರಿಯಗೊಳಿಸಿದ ಎದೆ ತುಂಬಿ ಹಾಡಿದೆನು ಗೀತೆಯ ರಚನಾಕಾರರು ಯಾರು?
	15.    ಈಗಿನ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೇಸ್ನ ಅಧ್ಯಕ್ಷರು ಯಾರು?
	16.    ಭೂಮಿಯೊಳಗಿನ ಶಿಲಾದ್ರಾವಕವನ್ನು ಏನೆಂದು ಕರೆಯುತ್ತಾರೆ?
	17.    ಕಬುಕಿ ಇದು ಯಾವ ದೇಶದ ನೃತ್ಯ ಪ್ರಕಾರವಾಗಿದೆ?
	18.    ಚರಕಸಂಹಿತೆ ವೈಧ್ಯ ಗ್ರಂಥವನ್ನು ರಚಿಸಿದವರು ಯಾರು?
	19.    ತಂಬಾಕು ಉತ್ಪನ್ನವನ್ನು ಭಾರತಕ್ಕೆ ಪರಿಚಯಿಸಿದ ಮೊಘಲ್ ಚಕ್ರವರ್ತಿ ಯಾರು?
	20.    ಪ್ರವಾಸಿಗರ ರಾಜ ಎನಿಸಿಕೊಂಡ ಹೊಯನ್ತ್ಸಾಂಗ್ ಯಾವ ದೇಶದವನು?
	21.    ಎಮ್.ಟಿ.ಸಿ.ಆರ್ (ಒಖಿಅಖ) ನ ವಿಸ್ತøತÀ ರೂಪವೇನು?
	22.    ಮುಸಲ್ಮಾನ್ ಧರ್ಮದ ಗುರುಗಳನ್ನು ಏನೆಂದು ಕರೆಯುತ್ತಾರೆ?
	23.    ಗಂಗರ ರಾಜ್ಯ ಸ್ಥಾಪನೆಗೆ ಪ್ರೇರಣೆ ನೀಡಿದ ಜೈನಮುನಿ ಯಾರು?
	24.    ದೂರ ದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ ಯಾರು?
	25.    ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಇಂಧನ ಯಾವುದು?
	26.    ಉಪ್ಪಿನ ಸತ್ಯಾಗ್ರಹಕ್ಕೆ ಇರುವ ಮತ್ತೊಂದು ಹೆಸರು ಯಾವುದು?
	27.    ಸೂರ್ಯಕಾಂತಿ ಹೂವುಗಳು ಸೂರ್ಯನೆಡೆಗೆ ತಿರುಗುವುದಕ್ಕೆ ಯಾವ ಚಲನೆ ಕಾರಣ?
	28.    ಚಂದ್ರನ ಹುಟ್ಟು ಸ್ವಭಾವ ಮತ್ತು ಕದಲಿಕೆಯ ಬಗ್ಗೆ ತಿಳಿಸುವ ಶಾಸ್ತ್ರ ಯಾವುದು?
	29.    ಬಿಳಿಯ ಖಂಡ ಎಂದು ಯಾವುದಕ್ಕೆ ಕರೆಯುತ್ತಾರೆ?
	30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.
	ಈ ವಾರದ ಪ್ರಸಿದ್ಧ ದಿನಾಚರಣೆಗಳು
	ಅಕ್ಟೋಬರ್-01 – ವಿಶ್ವ ಹಿರಿಯರ ದಿನ ಮತ್ತು ಸ್ವಯಂ ಪ್ರೇರಿತ ರಕ್ತದಾನ ದಿನ
	ಅಕ್ಟೋಬರ್-02 –ಗಾಂಧೀ ಜಯಂತಿ
	ಅಕ್ಟೋಬರ್-03 – ವಿಶ್ವ ವಸತಿ ದಿನ
	ಅಕ್ಟೋಬರ್-04 – ವಿಶ್ವ ಪ್ರಾಣಿ ಕಲ್ಯಾಣ ದಿನ
	
	ಉತ್ತರಗಳು
	1.    2015
	2.    ಆರ್.ಕೆ.ಉಷಾ
	3.    ಟಿ.ಎಸ್. ನಾಗಾಭರಣ
	4.    ಸ್ವಾಹಾ
	5.    ಶಿಕ್ಷಣ ಪ್ರಗತಿಯ ದಶಾಬ್ಧಿ
	6.    ಪ್ರೋ|| ಲೂಸಿ ರಿಚರ್ಡ್ಸನ್
	7.    ಡಾ|| ಆರ್ಮಾಂಡ್
	8.    ಎಲ್ಲೂಬಾಯಿ ಗುಳೇದಗುಡ್ಡ
	9.    ಮಧುಕೇಶ್ವರ
	10.    ಮೀರಾಭಾಯಿ
	11.    ಉತ್ತರ ಪ್ರದೇಶ
	12.    ಅಜ್ಮೀರ್
	13.    108
	14.    ಜಿ.ಎಸ್.ಶಿವರುದ್ರಪ್ಪ
	15.    ಲಕ್ಷ್ಮಿ ಹೆಬ್ಬಾಳಕರ್
	16.    ಮ್ಯಾಗ್ಮಾ
	17.    ಜಪಾನ್
	18.    ಚರಕ
	19.    ಜಹಾಂಗೀರ್
	20.    ಚೀನಾ
	21.    ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೇಜೀಮ್ (ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ)
	22.    ಖಲೀಫರು
	23.    ಸಿಂಹನಂದಿ
	24.    ಪ್ರತಿಮಾ ಪುರಿ
	25.    ಥೋರಿಯಂ
	26.    ದಂಡಿಯಾತ್ರೆ
	27.    ಪಾಶ್ರ್ವ ಚಲನೆ
	28.    ಸೆಲಿನಾಲಜಿ
	29.    ಅಂಟಾರ್ಕ್ಟಿಕಾ
	30.    ಪಿ.ಕಾಳಿಂಗರಾವ್ (ಕನ್ನಡದ ಕೋಗಿಲೆ)
					
