ಆಗಷ್ಟೇ … ಸ್ನಾನ ಮುಗಿಸಿ, ತಿಂಡಿ ತಿಂದು 
	ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ…?
	ಆಯಾಸದ ಮೈಮನಸ್ಸಿಗೂ… ಕೊಂಚ ಆರಾಮ
	ಆನಂತರ ಆಸ್ಪತ್ರೆಗೆ ಹೋದರಾಯ್ತೆಂದು 
	ಹಾಸಿಗೆಯ ಮೇಲೆ ಹಾಗೆಯೇ….  ಮೈ ಚೆಲ್ಲಿ 
	ಇನ್ನೇನು ಮಲಗಿ ವಿಶ್ರಮಿಸಬೇಕು
	ಒಮ್ಮೆಲೇ… ಬಾಗಿಲ ದಬ ದಬ ಬಡಿವ ಸದ್ದು
	ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ 
	ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ
	ಅಭೀ… ಅಭೀ… ಹೋಗಿ ನೋಡ ಬಾರದೆ
	ಕರೆದರೂ… ಇವಳ ಸುಳಿವಿಲ್ಲ, ಉತ್ತರವಿಲ್ಲ
	ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ ಹೋದಳೋ…?
	ಕಂಗಾಲಾಗಿ ದಡಬಡಿಸಿ ಎದ್ದು ಜೋರು ದನಿಯಲ್ಲಿಯೇ… 
	ಯಾರು ಯಾರೆಂದು ಪ್ರಶ್ನಿಸಿ ಬಾಗಿಲ ತೆಗೆದಿದ್ದೆ ತಡ
	ಹಸಿದ ಹೆಬ್ಬುಲಿ ಕಾದಂತೆ ಹತ್ತಾರು ಕೈಗಳು
	ಒಮ್ಮಿಂದಲೊಮ್ಮೆ ಮುಖ ಮೂತಿ ನೋಡದೆ 
	ಹಿಗ್ಗಾ-ಮುಗ್ಗ ಎಲ್ಲಂದರಲ್ಲಿ ಹೊಡೆದಿದ್ದೇ ಹೊಡೆದಿದ್ದು
	ತುಟಿ ಒಡೆದು, ಮೂಗು ಬಾಯಲೆಲ್ಲಾ…. ರಕ್ತಸಿಕ್ತ
	ಸೂಳೆ ಮಗನಿಗೆ ಇನ್ನೆರಡು ತದಕ್ರಿ ಅಯ್ಯೋಗ್ಯನ ತಂದು
	ಪ್ರೀತಿ ಮಾಡೋಕೆ, ಸುತ್ತಾಡೋಕೆ ಒಬ್ಬಳು
	ಕಟ್ಕೊಂಡು ಸಂಸಾರ ಮಾಡೋಕೆ ಇನ್ನೊಬ್ಬಳು ಬೇಕು
	ಒಳ ಹೋಗಿ ಅವಳನ್ನ ಎಳ್ಕೊಂಡ್ ಬನ್ರೋ..
	ಬೇವರ್ಸಿ ನನ್ಮಕ್ಕಳಿಗೆ ತಲೆ ಬೋಳಿಸಿ, ಕತ್ತೆ ಮೇಲೆ ಕೂರಿಸಿ ಊರೆಲ್ಲಾ…. 
	ಮೆರವಣಿಗೆ ಮಾಡ್ಬೇಕು
	ಜನರ ಮಧ್ಯೆ ಅದೆಲ್ಲಿದ್ದಳೋ…. ಬಂದವಳೆ
	ಚಪ್ಪಲಿಯಿಂದ ರಪ ರಪ ಬಾರಿಸಿದ್ದೇ… ಬಾರಿಸಿದ್ದು
	ನಾಲ್ಕು ವರ್ಷಗಳಿಂದ ನಾ ಇವಳನ್ನೇನ… 
	ಇಷ್ಟಪಟ್ಟು, ಕಷ್ಟಪಟ್ಟು ಮನಸಾರೆ ಮೆಚ್ಚಿ, 
	ಪ್ರೀತಿಸಿ ಅಂತರಂಗದಲ್ಲಿರಿಸಿ ಆರಾಧಿಸಿದ್ದು
	ಗುರೂ… ಇವಳೆಂಥಾ ಫಿಗರ್ರೂ… ನೋಡ್ ಗುರೂ…
	ಕಳ್ಳಬಡ್ಡಿ ಮಗ ಇವಳಿಗೂ…ಬಸಿರು ಮಾಡವನೆ
	ಯೋಚಿಸಲಾಗದಷ್ಟು ನಿತ್ರಾಣಗೊಂಡ ಮನ
	ಅಯ್ಯೋ…. ಅಮ್ಮಾ…, ಅಣ್ಣಾ…ತಂಗಿಯ ಕೂಗಿಗೆ
	ಧರ ಧರನೆ ಎಳೆದು ಒದ್ದು ತರುವವರ ಕಂಡು
	ಅದೆಲ್ಲಿತ್ತೋ…. ಕೋಪ ಸಿಕ್ಕ ಸಿಕ್ಕವರಿಗೆ ಬಡಿದಿದ್ದೆ 
	ನಾಲ್ಕಾರು ಜನರ ಸಾವಿಗೂ… ನಾ ಕಾರಣನಾಗಿದ್ದೆ.
	-ಚೆನ್ನಬಸವರಾಜ್
	ಸಂಸಾರ ಬಂಡಿಯ
	ನೊಗನ್ನೊತ್ತು
	ಹಗಲಿರುಳೆನ್ನದೆ ಎಳೆದೆ..
	ಧನಿಕರ ಧರೆಯಲಿ ಉಸಿರತೆತ್ತು ಬೆವರ ಸುರಿಸಿ ದುಡಿದೆ..
	ತಿಂದುಳಿದ ತಂಗಳ ಪಕ್ಕೆಲಿತಂದು
	ಹಸಿದು ಸತ್ತ ನಮ್ಮೊಟ್ಟೆ
	ತುಂಬಿಸಿದೆ ನನ್ನಪ್ಪ..
	ಅಕ್ಕತಂಗಿಯರ ಹರೆಯ ಮುಚ್ಚಲು
	ಅವ್ವ ಹೊಲಿದ ನೂರೊಂದು ತ್ಯಾಪೆ
	ಮುರುಕು ಚಪ್ಪರದಿ ನಿದ್ರಿಸಲು
	ನಮ್ಮೆಲ್ಲರಿಗೊಂದೆ ಹರಕು ಚಾಪೆ
	ಕಡುಬಡತನದಿ ಬೆಂದು ಬಸವಳಿದು
	ನಮ್ಮೆಲ್ಲರ ಸಾಕಿ ಬೆಳಸಿದೆ
	ನೀ ನನ್ನಪ್ಪ..
	ಹಬ್ಬದ ಸಡಗರ ಊರೂರಿಗೆಲ್ಲಾ
	ಹೊಳಿಗಿ ತುಪ್ಪ ಮನೆಮನೆಲೆಲ್ಲಾ
	ಗಾಳಿಯಲಿ ತೇಲಿದ ವಾಸನೆ
	ಸವಿಯುತ್ತ ಹಳಸಿದ ಅನ್ನ
	ರಸಪಾಕ ನಮಗೆಲ್ಲಾ..
	ಸಾವಿರ ಸುಳ್ಳಿನ ಕಥೆಯನ್ನೆಳುತ
	ಬಡತನ ಮರಸಿ ಮಲಗಿಸಿದೆ ನನ್ನಪ್ಪ..
	ಅಕ್ಕಮೈನೆರದು ಕನ್ಯಯಾದಳು
	ಸಡಗರವಿರದೆ ಮೂಲೆಯಲ್ಲಿ
	ಕುಂತಿದ್ದಳು..
	ಸಡಗರವಿಲ್ಲದ ನೆರಳಾಟ ಕಂಡು
	ಬಿಕ್ಕಿಬಿಕ್ಕಿ ಕಂಬನಿ ಸುರಿಸಿದಳು..
	ಇಂದೆಲ್ಲಾ ನಾಳೆ ಒಳ್ಳೆಕಾಲ
	ಬರುವದೆಂದು ನಮ್ಮೆಲ್ಲರ ತಬ್ಬಿ
	ರಮಿಸಿದೆ ನನ್ನಪ್ಪ..
	ಅಂದು ದುಡಿದು ಮಡಿದೆ ಕೊನೆಗೆ
	ಇಂದು ನೆನಪಾಗುಳಿದೆ ನಮಗೆ
	ಕಷ್ಟಪಟ್ಟಂತಹ ಆ ದಿನಗಳು
	ಬಿಕ್ಕಳಿಸಿ ಅತ್ತ ಆ ದಿನಗಳು
	ಇಂದು ಸುಖದ ಬದುಕಿನಲಿ
	ಬರಿನೆನಪುಗಳು
	ಆ ನಿನ್ನ ತ್ಯಾಗ ಮರೆಯಲಾದಿತೆ
	ನನ್ನಪ್ಪ..
	-ಎಸ್ ಕಲಾಲ್
	
	01. ಗಣೇಶನ ಮದುವೆ
	ಗಣೇಶನ ಮದುವೆಗೆ
	ನೂರೆಂಟು ವಿಘ್ನ 
	ಅದಕ್ಕಾಗಿಯೇ ಸಿಟ್ಟಿಗೆ 
	ಅವನಾಗಿದ್ದಾನೆ ಎರಡೆರಡು ಲಗ್ನ..!
02. ಜಾತ್ರೆಯಲ್ಲಿ…
	ಜಾತ್ರೆಯಲ್ಲಿ…
	ಪೌಡರ್, ಬಳೆ ಹೆಂಗಸರಿಗೆ
	ಚಾಕ್ಲೆಟ್, ಕ್ಯಾಂಡಿ ಮಕ್ಕಳಿಗೆ
	ಇನ್ನು ಗಂಡಸರಿಗೆ..?
	ಹೊತ್ತು ಕೊಳ್ಳಬೇಕಲ್ಲವೇ ಅವರು
	ಪಾತ್ರೆ, ಚರಿಗೆ..!
03. ಅಳಿಯನಿಗೆ ಉಡುಗೊರೆ
	ಮಾವನ ಮನೆಯಲ್ಲಿ 
	ಅಳಿಯನಿಗೆ ಕೊಡ್ತಾರೆ 
	ಭಾರೀ ಉಡುಗೊರೆ
	ಏಕೆಂದ್ರೆ, 
	ಮನೆಗೆ ಹೋದ್ಮೇಲೆ
	ಅವ್ನೇ ತೊಳೆಯಬೇಕಲ್ಲವೇ
	ಹೆಂಡತಿಯ ಸೀರೆ..!
04. ನೀರು-ಬಿಯರು
	ಹೆಂಡತಿ ತವರಿಗೆ ಹೊರಟಾಗ
	ಗಂಡನ ಕಣ್ಣಲ್ಲಿ
	ಧಳ-ಧಳ ನೀರು
	ಆಮೇಲೆ ಇದ್ದೇ ಇದೆಯಲ್ಲವೇ 
	ಥರ-ಥರದ ಬಿಯರು..!
05. ಮೊಬೈಲ್ ವರ್ಲ್ಡ್
	ಈ ಮೊಬೈಲ್ ವರ್ಲ್ಡ್‌ನಲ್ಲಿ 
	ಒಳಬರುವ ಕರೆಗಳು 
	ಸಂಪೂರ್ಣ ಉಚಿತ
	ಅದಕ್ಕಾಗಿಯೇ ಅಲ್ಲವೇ 
	ಮದುವೆಯಾಗದೆಯೂ 
	ಮಕ್ಕಳು ಖಚಿತ..!
06. ನಾನು ಬಾರ್ಗೆ ಹೋದರೂ…
	ನಾನು ಪ್ರತಿದಿನ
	ಬಾರ್ಗೆ ಹೋದರೂ
	ನನ್ನಾಕೆ ಬೈಯ್ಯುವುದಿಲ್ಲ
	ಯಾಕೆಂದ್ರೆ, ಆ ಬಾರು
	ಅವಳ ತಂದೆಯದ್ದೇ ಆಗಿದ್ಯಲ್ಲ
07. ಕುಡಿಯುವುದು…
	ಕುಡಿಯುವುದು 
	ಒಮ್ಮೊಮ್ಮೆ ಒಳ್ಳೆಯದು
	ಒಮ್ಮೊಮ್ಮೆ ಕೆಟ್ಟದ್ದು
	ಏಕೆಂದರೆ, 
	ಮೊದಮೊದಲು ಹೆಂಡತಿ 
	ಹೆದರಿ ಸುಮ್ಮನಿರುತ್ತಾಳೆ
	ಆಮೇಲಾಮೇಲೆ ಅವಳೆ
	ಎಗರಿ ಹೊಡೆಯುತ್ತಾಳೆ
08. ಮೂಷಿಕನ ದರ್ಪ
	ಗಣೇಶನ ಹೊಟ್ಟೆಗೆ 
	ಗಟ್ಟಿಯಾಗಿ ಸುತ್ತಿಕೊಂಡಿದೆ 
	ಮಾರುದ್ದದ ಸರ್ಪ
	ಅದಕ್ಕಾಗಿಯೇ 
	ಸದ್ದಿಲ್ಲದೇ ಅಡಗಿದೆ 
	ಮೂಷಿಕನ ದರ್ಪ
09. ಹಾರ್ಟ್ಅಟ್ಯಾಕ್
	ಹಾರ್ಟ್ ಅಟ್ಯಾಕ್ ಆದಾಗ
	ಅವನು ತುಂಬಾ ಹೆದರಿಹೋದ
	ನರ್ಸಿಂಗ್ ಹೋಂ ಬಿಲ್ ನೋಡಿದಾಗ
	ಪಾಪ… ಸತ್ತೇ ಹೋದ..!
10. ಗಂಡ-ಹೆಂಡತಿ ಜಗಳ
	ಗಂಡ-ಹೆಂಡತಿ ಜಗಳ
	ಉಂಡು ಮಲಗುವ ತನಕ
	ಅದಕ್ಕಾಗಿಯೇ 
	ಉಣ್ಣದೇ ಇರುತ್ತಾರೆ 
	ಜಗಳ ಮುಗಿಯುವ ತನಕ..!
-ಅಣ್ಣಪ್ಪ ಆಚಾರ್ಯ, ಹೊನ್ನಾವರ.
	ಮುತ್ತುಗದ ಹೂವುಗಳು
	ಮುತ್ತುಗದ ಹೂವುಗಳು
	ದೂರದಿಂದಲೇ ಕೆಂದಳಿಸಿ ಪಕಳೆಗಳ
	ದಳದಳಿಸಿ ನಗುತಿರಲು
	ಹಸಿರ ತೇರ ಮೇಲೆ ಮಿನುಗಿ ಕೂಗುವವೋ.. 
	ಕಡು ಹಸಿರಿನ ದೊಡ್ಡ ಎಲೆಗಳ ಮೇಲೆ
	ನಿಂತ ನೀರ ಹನಿ  ಹೊಳೆದು,
	ಮುತ್ತುಗದ ಹೂಗಳನ್ನು ತೋಯ್ಸಿ
	ರೇಷ್ಮೆ ಹೊಳಪ ಬಳಿದವೋ.. 
	ಕೋಗಿಲೆ, ಕಾಜಾಣ
	ನಿನ್ನ ಪ್ರೀತಿಗೆ ಕೊಂಬೆಯರಸಿ
	ಕೂತು ಕಂಠವರಳಿಸಿ
	ಹಾಡಿ ಹೊಗಳಿದವೋ.. 
	ಹುಡುಕಿದೆಡೆಯೆಲ್ಲಾ
	ಮಿಡುಕುವುದು
	ಹೂವ ಪರಿಮಳದೊಡನೆ
	ಮರದಿ ನಿಂತ ಹನಿಯ ಮಳೆಯೋ.. 
	ಹೊತ್ತಿಲ್ಲದ ಹೊತ್ತಿನಲಿ
	ಎತ್ತೆತ್ತಲೋ ಚಾಚಿ ಬೆಳೆದ ಮರದ
	ಚೆಲುವೇನು ಚಿತ್ತಾರವೇನು,
	ದೂರದಿ ಕೈಬೀಸಿ ಕರೆವ ಆ
	ಕೇಸರಿ ಹೂಗಳ ವಯ್ಯಾರವೋ.. 
	ಮುತ್ತುಗದ ಎಲೆಗಳು
	ಮುತ್ತಿಡಲು ಹೂಗಳಿಗೆ,
	ನಾಚಿದ ಹಕ್ಕಿ, ಚುಕ್ಕಿ
	ಕೂಗಿ ಕೂಗಿ ಕಲರವವೋ..
	-ನಳಿನ ಡಿ.
	
	ಕಣ್ಣು ಹಾಯಿಸಿದಾಗೆಲ್ಲಾ
	ನೀ ನೋಡುವ ಪರಿಯ, ನಾನರಿತೆನೆ
	ನೀ ಗುನುಗುವ ಹಾಡನಾ, ನಾ ಆಲಿಸಿದೆನೆ
	ನಿನ್ನ ಸನಿಹಕ್ಕಾಗಿ ಕಾದಿರುವೆನು
	ನಿನ್ನ ಸ್ಪರ್ಶದಿಂದಾಗಿ ಮೈಮರೆತಿರುವೆನು
	ಜೋರಾಗಿದೆ ಈ ತಲ್ಲಣ, ಹಾಯಾಗಿದೆ ಈ ಸ್ಪರ್ಶ ಕಂಪನ
	 
	ಶುರುವಾಯಿತು ಅರೆಮರೆಯಲೆ
	ನಿನ್ನ ನೋಡುವ ಚಂಚಲೆ
	ನನ್ನ ಕಣ್ಣು ಪಿಳುಕಿಸದಲೆ
	ಬಂದಾಯಿತು ಕಣ್ಣೀರ ಅಲೆ
	ಇದು ಕನಸಾ,, ಇದು ನನಸಾ
	ನಾ ನೋಡುವ ಅಪ್ಸರೆ
	ಬರಿಗನಸಾ,, ಹಗಲುಗನಸಾ
	ನಾ ಮುಟ್ಟುವ ಅಪ್ಸರೆ
	ಕೊನೆಗೂನು ನಿನ್ನ ಹೆಸರಲೇ
	ಹೃದಯದಂಗಡಿ ತೆರೆದಿದೆ
	ಆಮಂತ್ರಣ ನಿನ್ನ ಕೈಯಲೇ
	ಆಗಮನ ಹೂಮಳೆಯಲೆ
	ಬರಿಗನಸಾ,, ಹೊಂಗನಸಾ
	ನಾ ನೋಡುವ ನೈದಿಲೆ
	ಅರೆ ಹುಚ್ಚನಾಗಿ,, ಕದ್ದು ನಿನ್ನಾ
	ನಾನಾದೆ ಖೈದಿಯೇ…. 
-ಮಂಜು ಸೋನು
					




All are nice
Akileshchipli,Amardeep.p.s ನಿಮ್ಮಗಳ ಮೆಚ್ಚುಗೆಯ, ಪ್ರೋತ್ಸಾಹದ ನುಡಿ ಮಾತುಗಳೇ…. ಮತ್ತಷ್ಟು ಬರೆಯಲು ಪ್ರೇರಣೆ ಧನ್ಯವಾದಗಳು.
good poems
ಬಡತನದ ಬೇಗುದಿಯಲ್ಲಿ ಬೆಂದು ಬದುಕ ಕಟ್ಟಿಕೊಂಡವರ ತೊಳಲಾಟಗಳ, ನೋವುಗಳ ನಿಜಕ್ಕೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ ಎಸ್. ಕಲಾಲ್
ಬರೆದ ಹತ್ತೂ… ಹನಿಗವನಗಳು ಒಂದಕ್ಕಿಂತ ಒಂದು ವಿಭಿನ್ನತೆಯಿಂದ ಕೂಡಿದಅರ್ಥಗರ್ಭಿತ ಸಾಲುಗಳಿಂದ ಮನಸೆಳೆಯುತ್ತವೆ. ಅಣ್ಣಪ್ಪ ಆಚಾರ್ಯ, ಹೊನ್ನಾವರ
ಮುತ್ತುಗದ ಹೂ ಬಗ್ಗೆ ನಿಮ್ಮ ಕಲ್ಪನೆಯ ಕುಸುರಿ ಕೆಲಸದಿ ಜೀವಂತಿಕೆಯ ತುಂಬಿಸಿದ್ದೀರಿ. ನಳಿನ ಡಿ.
ಮಂಜು ಸೋನು ನಿಮ್ಮ ಕಣ್ಣು ಹಾಯಿಸಿದಾಗೆಲ್ಲಾ ಅವಳ ನೆನಪುಗಳ ತಂಗಾಳಿಗೆ ಮೈಯೊಡ್ಡಿ ಕನಸ ಕಾಣುತ ಹುಚ್ಚನಂತೆ ಅಲೆವ ಪರಿಯ ತುಂಬಾ ಚೆನ್ನಾಗಿ ವರ್ಣಿಸಿರುವಿರಿ.
ಧನ್ಯವಾದಗಳು Chennabasavaraj ಸರ್…
thanku u sir
ಸಾಬಯ್ಯ ನಿಮ್ಮ ಕವನ ಚೆನ್ನಾಗಿದೆ